Tag: Sini Shetty

  • Miss World 2024: ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಎಡವಿದ ಕರ್ನಾಟಕ ಮೂಲದ ಸಿನಿ ಶೆಟ್ಟಿ

    Miss World 2024: ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಎಡವಿದ ಕರ್ನಾಟಕ ಮೂಲದ ಸಿನಿ ಶೆಟ್ಟಿ

    ವಿಶ್ವ ಸುಂದರಿ ಸ್ಪರ್ಧೆಯು (Miss World 2024) ಇಂದು (ಮಾ.9) ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿದೆ. ಭಾರತದಲ್ಲಿ 28 ವರ್ಷಗಳ ಬಳಿಕ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಕ್ರಿಸ್ಟಿನಾ ಪಿಸ್ಕೋವಾ (Krystyna Pyszkova) ಗೆದ್ದು ಬೀಗಿದ್ದಾರೆ. ಆದರೆ ಕರ್ನಾಟಕ ಮೂಲದ ಹುಡುಗಿ ಸಿನಿ ಶೆಟ್ಟಿ (Sini Shetty) ವಿಶ್ವ ಸುಂದರಿ ಕಿರೀಟ ಜಸ್ಟ್ ಮಿಸ್ ಆಗಿದೆ.

    ಭಾರತದಲ್ಲಿ 28 ವರ್ಷಗಳ ಬಳಿಕ ನಡೆಯುತ್ತಿರುವ ಮಿಸ್ ವರ್ಲ್ಡ್ ಸ್ಪರ್ಧೆ ಇದಾಗಿದ್ದು, 112 ಸ್ಪರ್ಧಿಗಳು ಭಾಗಿಯಾಗಿದ್ದರು. ಇದೀಗ ಮುಂಬೈ ನೆಲೆಸಿರುವ ಮೂಲತಃ ಕರ್ನಾಟಕದವರೇ ಸಿನಿ ಸದಾನಂದ ಶೆಟ್ಟಿ ಅವರು ಕೂಡ ಭಾಗಿಯಾಗಿದ್ದಾರೆ.

    2017ರಲ್ಲಿ ಹರಿಯಾಣದ ಬೆಡಗಿ ಮಾನುಷಿ ಚಿಲ್ಲರ್ ಮಿಸ್ ವರ್ಲ್ಡ್ ಕಿರೀಟ ಗೆದ್ದಿದ್ದರು. ಈ ಬಾರಿ ಸಿನಿ ಶೆಟ್ಟಿ ಸ್ಪರ್ಧಿಸಿದ್ದರು. ಟಾಪ್ 4ಗೆ ಬರಲು ಸಿನಿ ವಿಫಲರಾಗಿದ್ದಾರೆ. ಈ ಹಿಂದೆ ಫೆಮಿನಾ ಮಿಸ್ ಇಂಡಿಯಾ ಕರ್ನಾಟಕ 2022 ಪ್ರಶಸ್ತಿ ಗೆದ್ದಿದ್ದರು.

    ವಿಶ್ವ ಸುಂದರಿ ಕಿರೀಟ ಧರಿಸಿದ್ದ ಭಾರತೀಯ ನಾರಿಯರು

    ರೀಟಾ ಫರಿಯಾ (1966), ಐಶ್ವರ್ಯ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ ಜೋನಾಸ್ (2000), ಮತ್ತು ಮಾನುಷಿ ಚಿಲ್ಲರ್ (2017).

  • ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿಗೆ ಸೀರೆ ಉಡೋದು ಕಷ್ಟವಂತೆ

    ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿಗೆ ಸೀರೆ ಉಡೋದು ಕಷ್ಟವಂತೆ

    ಮಂಗಳೂರು ಮೂಲದ ಮಿಸ್ಟ್ ಇಂಡಿಯಾ ವರ್ಲ್ಡ್ ಮೊನ್ನೆಯಷ್ಟೇ ತಮಗೆ ವಿಜಯ್ ದೇವರಕೊಂಡ ಅಂದರೆ ಇಷ್ಟವೆಂದು ಹೇಳಿಕೊಂಡಿದ್ದರು. ಅವರು ಒಪ್ಪುವದಾದರೆ, ಅವರೊಂದಿಗೆ ಸಿನಿಮಾದಲ್ಲಿ ನಟಿಸಲು ತಾವು ಸಿದ್ಧವೆಂದೂ ತಿಳಿಸಿದ್ದರು. ಜೊತೆಗೆ ಖಾಸಗಿಯ ಹಲವು ಸಂಗತಿಗಳನ್ನು ಕೂಡ ಹಂಚಿಕೊಂಡಿದ್ದರು. ಈ ಬಾರಿ ಅವರು ಸೀರೆಯ ಕುರಿತು ಹಲವು ಅಚ್ಚರಿಯ ವಿಷಯಗಳನ್ನು ಹೇಳಿದ್ದಾರೆ.

    ಸಿನಿ ಶೆಟ್ಟಿಗೆ ಸೀರೆ ಅಂದರೆ ಇಷ್ಟವಂತೆ. ಆದರೆ, ಅದನ್ನು ಉಡೋದೆ ಕಷ್ಟ ಅಂತಾರೆ. ನನ್ನ ಬಳಿ ಬಗೆ ಬಗೆಯ ಸೀರೆಗಳು ಇವೆ. ಆಕರ್ಷಕ ಬಣ್ಣದ ಸೀರೆಗಳನ್ನು ನಾನು ಹೊಂದಿದ್ದೇನೆ. ಎಲ್ಲ ಸೀರೆಗಳನ್ನು ಇಷ್ಟಪಟ್ಟೇ ನಾನು ತಗೆದುಕೊಳ್ಳುವೆ. ಆದರೆ, ಸೀರೆ ಉಡುವಾಗ ಅದರ ಕಷ್ಟ ಗೊತ್ತಾಗುತ್ತದೆ. ಹೀಗಾಗಿಯೇ ಕಾಸ್ಟ್ಯೂಮ್ ವಿಚಾರವಾಗಿ ತಮಗೆ ಸೀರೆ ಉಡೋದು ಕಷ್ಟ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ರು ಶ್ವೇತಾ ಶ್ರೀವಾಸ್ತವ್

    ಸದ್ಯ ಮಿಸ್ ವರ್ಲ್ಡ್ ಸ್ಪರ್ಧೆಗೂ ಅವರು ತಾಲೀಮು ನಡೆಸಿದ್ದು, ಆ ಕಿರೀಟವನ್ನೂ ಧರಿಸುವವರೆಗೂ ಮಿಶ್ರಮಿಸುವುದಿಲ್ಲ ಎಂದಿದ್ದಾರೆ ಸಿನಿ ಶೆಟ್ಟಿ. ಜೊತೆಗೆ ಬಾಲಿವುಡ್ ಸಿನಿಮಾ ರಂಗದಿಂದಲೇ ಬಣ್ಣದ ಪ್ರಪಂಚಕ್ಕೆ ಕಾಲಿಡುವ ವಿಚಾರವನ್ನೂ ಅವರು ಹಂಚಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬರುವುದು ತತಕ್ಷಣಕ್ಕೆ ಆಗದೇ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಕಂಡಿತಾ ಬೆಳ್ಳಿ ಪರದೆಯ ಮೇಲೆ ತನ್ನನ್ನು ನೋಡಬಹುದು ಎಂದೂ ಅವರು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ಹಿಂದೆಬಿದ್ದ ಮಿಸ್ ಇಂಡಿಯಾ ಸಿನಿ ಶೆಟ್ಟಿ

    ವಿಜಯ್ ದೇವರಕೊಂಡ ಹಿಂದೆಬಿದ್ದ ಮಿಸ್ ಇಂಡಿಯಾ ಸಿನಿ ಶೆಟ್ಟಿ

    ತೆಲುಗು ನಟ ವಿಜಯ್ ದೇವರಕೊಂಡ ಒಪ್ಪಿದರೆ ಅವರ ಜೊತೆ ಡೇಟಿಂಗ್ ಮಾಡುವುದಾಗಿ ಮೊನ್ನೆಯಷ್ಟೇ ಸಾರಾ ಅಲಿಖಾನ್ ಬೋಲ್ಡ್ ಆಗಿ ಉತ್ತರಿಸಿದ್ದರು. ಅಲ್ಲದೇ, ವಿಜಯ್ ದೇವರಕೊಂಡ ಅವರನ್ನು ಇಷ್ಟ ಪಡದೇ ಇರುವ ನಟಿಯರೇ ಇಲ್ಲ ಎನ್ನುವಷ್ಟು ಬಹಿರಂಗವಾಗಿಯೇ ನಟಿಯರು ತಮ್ಮ ಮನದಾಳದ ಆಸೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದೀ ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿ ಸರದಿ. ಅವರು ಕೂಡ ತಮ್ಮಿಷ್ಟದ ನಟನ ಬಗ್ಗೆ ಮಾತನಾಡಿದ್ದಾರೆ.

    ತಾವು ಸಿನಿಮಾ ರಂಗಕ್ಕೆ ಬರುವುದಾದರೆ, ಬಾಲಿವುಡ್ ಮೂಲಕ ಎಂದು ಕಳೆದೆರಡು ದಿನಗಳ ಹಿಂದೆಯಷ್ಟೇ ಮಂಗಳೂರಿನಲ್ಲಿ ಹೇಳಿದ್ದರು ಸಿನಿ ಶೆಟ್ಟಿ. ಈಗ ಯಾರ ಸಿನಿಮಾ ಮೂಲಕ ಬರಬಹುದು ಎನ್ನುವ ಸಣ್ಣ ಸುಳಿವೊಂದನ್ನು ನೀಡಿದ್ದಾರೆ.  ತಾವು ಇಷ್ಟಪಡುವ ನಟರಲ್ಲಿ ವಿಜಯ್ ದೇವರಕೊಂಡ ಮೊದಲಿಗರು ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ತಾವು ವಿಜಯ್ ದೇವರಕೊಂಡ ಅವರನ್ನು ನೆಚ್ಚಿನ ನಟನನ್ನಾಗಿ ಆಯ್ಕೆ ಮಾಡಿಕೊಂಡಿದ್ದರ ಕುರಿತು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲಾ ಎಂದ ತಲೈವಾ: ಮಗಳ ಡಿವೋರ್ಸ್‌ ವಿಚಾರದಲ್ಲಿ ಕುಗ್ಗಿದ್ರಾ ರಜನಿಕಾಂತ್

    ನನ್ನಿಷ್ಟದ ನಟ ವಿಜಯ್ ದೇವರಕೊಂಡ. ಅವರೊಂದಿಗೆ ಸಿನಿಮಾ ಮಾಡುವ ಕನಸು ಕೂಡ ಕಂಡಿದ್ದೇನೆ. ಅವಕಾಶ ಸಿಕ್ಕರೆ, ಅವರ ಸಿನಿಮಾ ಮೂಲಕವೇ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುವೆ ಎಂದು ಸಿನಿ ಶೆಟ್ಟಿ  ಹೇಳಿದ್ದಾರೆ. ಸದ್ಯ ಅವರು ಮಿಸ್ ವರ್ಲ್ಡ್ ಸ್ಪರ್ಧೆಗಾಗಿ ತಯಾರಿ ಕೂಡ ನಡೆಸಿದ್ದು, ಅದರ ಜೊತೆ ಸಿನಿಮಾ ರಂಗಕ್ಕೆ ಬರಲು ಸಿದ್ಧತೆ ಕೂಡ ನಡೆಸಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಕರ್ನಾಟಕವೇ ಮುಂದು – ರಾಜ್ಯಪಾಲರ ಮೆಚ್ಚುಗೆ

    ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಕರ್ನಾಟಕವೇ ಮುಂದು – ರಾಜ್ಯಪಾಲರ ಮೆಚ್ಚುಗೆ

    ಬೆಂಗಳೂರು: ಕರ್ನಾಟಕ ರಾಜ್ಯವು ಗುಣಮಟ್ಟದ ತಾಂತ್ರಿಕ ಹಾಗೂ ಉದ್ಯೋಗ ಆಧಾರಿತ ಶಿಕ್ಷಣ ಒದಗಿಸುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿದೆ ಹಾಗೂ ಬೆಂಗಳೂರು ಪ್ರಸ್ತುತ ಶಿಕ್ಷಣದ ಕೇಂದ್ರವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನ ತಾವರೆಕೆರೆ ಯೆಲ್ಲಾಚಗುಪ್ಪೆ ಗ್ರಾಮದಲ್ಲಿ ಬಂಟ್ಸ್ ಸಂಘ ಬೆಂಗಳೂರು ವತಿಯಿಂದ ಹೊಸದಾಗಿ ನಿರ್ಮಿಸಲಾದ ಆರ್‌ಎನ್‌ಎಸ್ ವಿದ್ಯಾನಿಕೇತನ ಕ್ಯಾಂಪಸ್-2 2ನೇ ಲಾಂಛನ ಹಾಗೂ ಫಲಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜ ಕೊಳ್ಳುವಂತೆ ಸ್ಥಳೀಯ ಆಡಳಿತದಿಂದಲೇ ಜನರಿಗೆ ಒತ್ತಾಯ

    ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಆರ್‌ಎನ್‌ಎಸ್ ಶಿಕ್ಷಣ ಸಂಸ್ಥೆ, ಸುಮಾರು 9 ಎಕರೆ ಪ್ರದೇಶದಲ್ಲಿ, ಮಾಲಿನ್ಯ ಮುಕ್ತ ಪರಿಸರದಲ್ಲಿ ಅತ್ಯಾಧುನಿಕತೆಯಿಂದ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿದುಬಂದಿದೆ. ಇದರೊಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ, ಕ್ರೀಡೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುತ್ತೀರಿ. ನೀವು ದೇಶದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದೀರಿ ಎಂದು ಶ್ಲಾಘಿಸಿದ್ದಾರೆ.

    ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ಅಪ್ ಮತ್ತು ಸ್ಟ್ಯಾಂಡ್ ಅಪ್, ವೆಂಚರ್ ಕ್ಯಾಪಿಟಲ್ ಫಂಡ್ ಯೋಜನೆಗಳನ್ನು ಬಳಸಿಕೊಂಡು ನೀವು ಶ್ರೇಷ್ಠ ಭಾರತ, ನವ ಭಾರತ- ನವ ಕರ್ನಾಟಕ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಬಹುದು. ಈ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ವಯಸ್ಸಿನ ಮಿತಿಯಿಂದಾಗಿ 33 ಲಕ್ಷ ಪ್ಯಾಕೇಜ್‌ನ ಅಮೆರಿಕದ ಉದ್ಯೋಗ ಕಳೆದುಕೊಂಡ 15ರ ಬಾಲಕ

    ಪ್ರಸ್ತುತ ದಿನಗಳಲ್ಲಿ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ ಮತ್ತು ಗಾಳಿಯ ಗುಣಮಟ್ಟದಲ್ಲಿನ ಅಸಮತೋಲನದಿಂದಾಗಿ ನಾವಿಂದು ಪರಿಸರ ಸಂಬಂಧಿತ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯು ಪರಿಸರ ಸಂರಕ್ಷಣೆಯ ಬಗ್ಗೆ ಯೋಚಿಸುವಂತೆ ಒತ್ತಾಯಿಸಿದೆ. ಹಾಗಾಗಿ ಪ್ರಕೃತಿಯ ಬಗ್ಗೆ ಪ್ರೀತಿ ಗೌರವ, ಸರಳ ಜೀವನ ವಿಧಾನ ಹಾಗೂ ಅರಣ್ಯದ ಬಗ್ಗೆ ಹೊಸ ಪ್ರಜ್ಞೆಯನ್ನು ಜಾಗೃತಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

    ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುವ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ. ಇದು ಜಗತ್ತಿಗೆ ಹೊಸ ದಿಕ್ಕನ್ನು ನೀಡುವುದಲ್ಲದೇ ಇಡೀ ಮಾನವಕುಲಕ್ಕೆ ಪ್ರಯೋಜನ ನೀಡುತ್ತದೆ. ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆ ಮತ್ತು ಕ್ರೀಡೆಗೆ ಆದ್ಯತೆ ನೀಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಸಕ್ರಿಯ ಪ್ರಯತ್ನಗಳನ್ನು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತೆ: ರಾಜನಾಥ್ ಸಿಂಗ್

    ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸುಭುದೇಂದ್ರ ಸ್ವಾಮೀಜಿ, ಸಚಿವರಾದ ಸಿ.ಟಿ.ರವಿ, ಜಿತೇಂದ್ರ ಗೆಹ್ಲೋಟ್, ಬಂಟರ ಸಂಘ ಹಾಗೂ ಆರ್‌ಎನ್‌ಎಸ್ ವಿದ್ಯಾನಿಕೇತನ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ಕರ್ನಾಟಕದ ಮಾಜಿ ಲೋಕಾಯುಕ್ತ, ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ, ಮಿಸೆಸ್ ಇಂಡಿಯಾ-2022 ಸಿನಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ಮೂಲಕ ಸಿನಿಮಾ ರಂಗ ಪ್ರವೇಶ ಮಾಡ್ತಾರಂತೆ ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿ

    ಬಾಲಿವುಡ್ ಮೂಲಕ ಸಿನಿಮಾ ರಂಗ ಪ್ರವೇಶ ಮಾಡ್ತಾರಂತೆ ಮಿಸ್ ಇಂಡಿಯಾ ವರ್ಲ್ಡ್ ಸಿನಿ ಶೆಟ್ಟಿ

    ಮಂಗಳೂರು ಮೂಲದ ಸಿನಿ ಶೆಟ್ಟಿ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡ ನಂತರ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಡಿಮಾಂಡ್ ಕ್ರಿಯೇಟ್ ಆಗಿದೆ. ಈಗಾಗಲೇ ಹಲವು ಸಿನಿಮಾ ರಂಗಗಳಿಂದ ಆಫರ್ ಕೂಡ ಬರುತ್ತಿವೆ. ಆದರೆ, ಅವರಿಗೆ ಮಾತ್ರ ಬಾಲಿವುಡ್ ಸಿನಿಮಾ ರಂಗದಿಂದಲೇ ಬಣ್ಣದ ಪ್ರಪಂಚಕ್ಕೆ ಕಾಲಿಡುವ ಆಸೆಯಿದೆಯಂತೆ. ಹಾಗಾಗಿ ನಾನು ಸಿನಿಮಾ ರಂಗಕ್ಕೆ ಬಂದರೆ, ಬಾಲಿವುಡ್ ನಿಂದಲೇ ಪ್ರವೇಶ ಪಡೆಯುತ್ತೇನೆ ಅಂದಿದ್ದಾರೆ.

    ಮಿಸ್ ಇಂಡಿಯಾ ವರ್ಲ್ಡ್ ಕಿರೀಟ ಗೆದ್ದ ನಂತರ ಮಂಗಳೂರಿಗೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿನಿಮಾ ರಂಗಕ್ಕೆ ಬರುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಒಂದೊಳ್ಳೆ ಪಾತ್ರಗಳು ಸಿಕ್ಕರೆ ಒಪ್ಪಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಆಫರ್ ಬಂದಿರುವ ಕುರಿತೂ ಮಾತನಾಡಿರುವ ಅವರು, ಬಾಲಿವುಡ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ರಂಗದಿಂದ ಕರೆಗಳು ಬರುತ್ತಿರುವುದನ್ನೂ ಅವರು ಖಚಿತ ಪಡಿಸಿದ್ದಾರೆ. ಇದನ್ನೂ ಓದಿ:ಗುಮ್ಮನ ಜೊತೆ ಬಂದ `ವಿಕ್ರಾಂತ್ ರೋಣ’ ಟೀಮ್: ಹೊಸ ಸಾಂಗ್‌ ರಿಲೀಸ್

    ಸತತ ಎರಡು ದಿನಗಳಿಂದ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನ, ಅವರ ಪೂರ್ವಿಕರ ವಾಸಸ್ಥಳ ಮತ್ತು ತವರೂರಿಗೂ ಭೇಟಿ ನೀಡಿರುವ ಸಿನಿ ಶೆಟ್ಟಿ, ಮಂಗಳೂರಿನ ಜನರೊಂದಿಗೆ ಬೆರೆತಿದ್ದಾರೆ. ತಮಗೆ ದೊರೆತ ಅದ್ಭುತ ಸ್ವಾಗತವನ್ನು ಮತ್ತು ಸನ್ಮಾನಗಳನ್ನು ಅವರು ಎಂಜಾಯ್ ಮಾಡುತ್ತಿದ್ದಾರೆ. ಹಲವರು ಊರುಗಳಿಗೆ ಭೇಟಿ ನೀಡಿ, ತಮ್ಮ ನೆನಪುಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ದಿನಗಳ ಕಾಲ ಇಲ್ಲೇ ಉಳಿಯುವುದಾಗಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತವರೂರಿಗೆ ಬಂದಿಳಿದ ‘ಮಿಸ್ ಇಂಡಿಯಾ ವರ್ಲ್ಡ್’ ಸಿನಿ ಶೆಟ್ಟಿ: ತುಳುವಿನಲ್ಲಿ ಧನ್ಯವಾದ ಹೇಳಿದ ಸುಂದರಿ

    ತವರೂರಿಗೆ ಬಂದಿಳಿದ ‘ಮಿಸ್ ಇಂಡಿಯಾ ವರ್ಲ್ಡ್’ ಸಿನಿ ಶೆಟ್ಟಿ: ತುಳುವಿನಲ್ಲಿ ಧನ್ಯವಾದ ಹೇಳಿದ ಸುಂದರಿ

    ಮಂಗಳೂರು ಮೂಲದ ಮಿಸ್ ಇಂಡಿಯಾ ವರ್ಲ್ಡ್‍ 2022 ಕಿರೀಟ ಮುಡಿಗೇರಿಸಿಕೊಂಡಿರುವ ಸಿನಿ ಶೆಟ್ಟಿ ಇಂದು ಮಂಗಳೂರಿಗೆ ಆಗಮಿಸಿದ್ದರು. ತವರು ನೆಲಕ್ಕೆ ಸಿನಿ ಶೆಟ್ಟಿ ಕಾಲಿಡುತ್ತಿದ್ದಂತೆಯೇ ಅದ್ಧೂರಿ ಸ್ವಾಗತ ದೊರೆಯಿತು. ಮಂಗಳೂರು ಜನತೆ ಪ್ರೀತಿಯಿಂದಲೇ ಸಿನಿ ಶೆಟ್ಟಿ ಅವರನ್ನು ಬರಮಾಡಿಕೊಂಡು ತನ್ನೂರಿನ ಹುಡುಗಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

    ಸಿನಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಇನ್ನಂಜೆ ಅವರು. ಮಿಸ್ ಇಂಡಿಯಾ ಆದ ಬಳಿಕ ಇದೇ ಮೊದಲ ಬಾರಿಗೆ ಅವರು ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರಿನ ಜನತೆ ಮನೆ ಮಗಳಿಗೆ ಆರತಿ ಎತ್ತಿ, ಹೂ ಮಾಲೆ ಹಾಕಿ ಸಡಗರದಿಂದಲೇ ಬರಮಾಡಿಕೊಂಡರು. ಕಿರೀಟ ಸಮೇತ ಸಿನಿ ಶೆಟ್ಟಿ ಮಂಗಳೂರಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಮಿಸ್‍ ಇಂಡಿಯಾ ವರ್ಲ್ದ್ ಕಿರೀಟ ಕಂಡು ಹಲವರು ಸಂಭ್ರಮಿಸಿದರು. ಇದನ್ನೂ ಓದಿ:ಪೊನ್ನಿಯನ್ ಸೆಲ್ವನ್ ವಿವಾದ : ಮಣಿರತ್ನಂ ಮತ್ತು ವಿಕ್ರಮ್ ಗೆ ನೋಟಿಸ್

    ನಂತರ ಮಾಧ್ಯಮಗಳ ಜೊತೆ ಮಾತನಾಡಿರದ ಸಿನಿ ಶೆಟ್ಟಿ  ತುಳುವಿನಲ್ಲೇ ಕನ್ನಡಿಗರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಒಳ್ಳೆಯ ಪಾತ್ರಗಳು ಮತ್ತು ಕಥೆಗಳು ಸಿಕ್ಕರೆ ಸಿನಿಮಾದಲ್ಲಿ ನಟಿಸುವುದಾಗಿತೂ ಅವರು ತಿಳಿಸಿದರು. ಆನಂತರ ಅವರು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

    Live Tv
    [brid partner=56869869 player=32851 video=960834 autoplay=true]

  • ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಸುಂದರಿ ಸಿನಿ ಶೆಟ್ಟಿಯ ಸಂಪೂರ್ಣ ಪರಿಚಯ : ನಮ್ಮೂರು, ನಮ್ಮೂರು ಹುಡುಗಿ

    ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಸುಂದರಿ ಸಿನಿ ಶೆಟ್ಟಿಯ ಸಂಪೂರ್ಣ ಪರಿಚಯ : ನಮ್ಮೂರು, ನಮ್ಮೂರು ಹುಡುಗಿ

    ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ಟೈಟಲ್ ಗೆದ್ದು ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಉಡುಪಿ ಮೂಲದ ಸಿನಿ ಶೆಟ್ಟಿ ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ. ಈ ಸುಂದರಿ ಕರ್ನಾಟಕ ಮೂಲದವರು ಎಂದು ಗೊತ್ತಾಗುತ್ತಿದ್ದಂತೆಯೇ ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದಾರೆ. ಅವರು ಹುಟ್ಟಿದ್ದು, ಬೆಳೆದದ್ದು, ಎಜ್ಯುಕೇಷನ್, ಉದ್ಯೋಗಿ, ಅಪ್ಪ ಅಮ್ಮ ಹೀಗೆ ಅವರ ವಿವರವನ್ನು ಅಭಿಮಾನಿಗಳು ಕೆದುಕುತ್ತಿದ್ದಾರೆ. ಆ ಎಲ್ಲ ವಿವರ ಇಲ್ಲಿವೆ.

    ಹೌದು, ಸಿನಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಇನ್ನಂಜೆಯವರು. ಹುಟ್ಟಿದ್ದು ಮುಂಬೈನಲ್ಲಿ. ಮುಂಬೈನ ಸೇಂಟ್ ಡೊಮಿನಿಕ್ ಸವಿಯೋ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಮುಗಿಸಿ, ನಂತರ ಅಕೌಂಟಿಂಗ್ ಅಂಡ್ ಫೈನಾನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸದ್ಯ ಚಾರ್ಟರ್ಡ್ ಫೈನಾನ್ಸಿಯಲ್ ಅನಾಲಿಸ್ಟ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾರೆ. ಸಿನಿ ಕೇವಲ ಸೌಂದರ್ಯದ ಕಣಿ ಮಾತ್ರವಲ್ಲ, ಅತ್ಯುತ್ತಮ ನೃತ್ಯಪಟು ಕೂಡ. ತಮ್ಮ 4ನೇ ವಯಸ್ಸಿನಲ್ಲೇ ನೃತ್ಯ ಕಲಿಯಲು ಆರಂಭಿಸಿರುವ ಅವರು 14ನೇ ವಯಸ್ಸಿನಲ್ಲಿ ಅರಂಗ್ರೇಟಂ ಮಾಡಿದ್ದರು. ಇದನ್ನೂ ಓದಿ:ಥೇಟ್ ನಯನತಾರಾ ರೀತಿಯೇ ಕಂಗೊಳಿಸಿದ ‘ಸತ್ಯ’ ಧಾರಾವಾಹಿಯ ಗೌತಮಿ

    ಉಡುಪಿಯ ಇನ್ನಂಜೆಯಲ್ಲಿ ಸುದೀಪ್ ಶೆಟ್ಟಿ ತಂದೆಯ ಸಂಬಂಧಿಕರು ಉಡುಪಿ ಶಂಕರಪುರ ಕಾಪು ಭಾಗದಲ್ಲಿ ನೆಲೆಸಿದ್ದಾರೆ. ಸಿನಿ ಶೆಟ್ಟಿ ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದಿದ್ದು ಕುಟುಂಬದ ಕಾರ್ಯಕ್ರಮಗಳು ಇದ್ದಾಗ ಉಡುಪಿಗೆ ಬರುತ್ತಾರೆ. ಸಿನಿ ಮುಂಬೈನಲ್ಲಿ ಹುಟ್ಟಿ ಬೆಳೆದರೂ ಕೂಡಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.  ಭಾನುವಾರ ಜುಲೈ 04 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಫಿನಾಲೆಯಲ್ಲಿ ಸಿನಿ ಶೆಟ್ಟಿ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಕೊಂಡಿದ್ದಾರೆ.

    ರಾಜಸ್ಥಾನದ ರೂಬಲ್ ಶೇಕಾವತ್ ಫಸ್ಟ್ ರನ್ನರಪ್, ಉತ್ತರ ಪ್ರದೇಶದ ಶಿಂತಾನಾ ಚೌಹಾಣ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ಈ ಪ್ರಶಸ್ತಿ ಗೆಲ್ಲುವ ಮೂಲಕ 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಉಡುಪಿಯ ಕುಟುಂಬಿಕರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದಿದ್ದರೂ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕ ಮೂಲದ ಬೆಡಗಿಗೆ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ – ಯಾರು ಈ ಸಿನಿ ಶೆಟ್ಟಿ?

    ಕರ್ನಾಟಕ ಮೂಲದ ಬೆಡಗಿಗೆ ಮಿಸ್ ಇಂಡಿಯಾ ವರ್ಲ್ಡ್ ಕಿರೀಟ – ಯಾರು ಈ ಸಿನಿ ಶೆಟ್ಟಿ?

    ಮುಂಬೈ: ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

     

    View this post on Instagram

     

    A post shared by Femina Miss India (@missindiaorg)

    ಜುಲೈ 3 ರಂದು(ಭಾನುವಾರ) ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾದ ಗ್ರ್ಯಾಂಡ್ ಫಿನಾಲೆಯಲ್ಲಿ ಸಿನಿ ಶೆಟ್ಟಿ ಅವರು ಫೆಮಿನಾ ಮಿಸ್ ಇಂಡಿಯಾ 2022 ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಾಜಸ್ಥಾನದ ರೂಬಲ್ ಶೆಖಾವತ್ ಮಿಸ್ ಇಂಡಿಯಾ 2022ರ ಮೊದಲ ರನ್ನರ್ ಅಪ್ ಆದರೆ, ಉತ್ತರ ಪ್ರದೇಶದ ಶಿನಾತಾ ಚೌಹಾನ್ ಅವರು ಮಿಸ್ ಇಂಡಿಯಾ 2022 ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಮಹಾ ಬಿಕ್ಕಟ್ಟಿಗೆ ಇಂದು ಕ್ಲೈಮ್ಯಾಕ್ಸ್‌ – ಶಿಂಧೆಗೆ ಇಂದು ವಿಶ್ವಾಸ ಪರೀಕ್ಷೆ

     

    View this post on Instagram

     

    A post shared by Femina Miss India (@missindiaorg)

    ಫೆಮಿನಾ ಮಿಸ್ ಇಂಡಿಯಾ 2021ರ ಮಾನಸ ವಾರಣಾಸಿ ಮಿಸ್ ಇಂಡಿಯಾ 2022 ಸಿನಿ ಶೆಟ್ಟಿಗೆ ಕಿರೀಟವನ್ನು ಮುಡಿಗೇರಿದ್ದಾರೆ. ಸಿನಿ ಶೆಟ್ಟಿ, ರುಬಲ್ ಶೇಖಾವತ್, ಶಿನತಾ ಚೌಹಾಣ್, ಪ್ರಜ್ಞಾ ಅಯ್ಯಗಾರಿ ಮತ್ತು ಗಾರ್ಗೀ ನಂದಿ ಮೊದಲ ಐದು ಸ್ಥಾನದಲ್ಲಿದ್ದಾರೆ. ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಈ ಐವರು ಕೂಡ ಬಹಳ ಅದ್ಭುತವಾಗಿ ಕಾಣುತ್ತಿದ್ದರು. ಇದನ್ನೂ ಓದಿ: ದ್ವೀಪರಾಷ್ಟ್ರದಲ್ಲಿ ಇಂಧನ ಬಿಕ್ಕಟ್ಟು- ಶಾಲೆಗಳಿಗೆ ರಜೆ ಘೋಷಣೆ

     

    View this post on Instagram

     

    A post shared by Femina Miss India (@missindiaorg)

    ಬಾಲಿವುಡ್ ಕಲಾವಿದರಾದ ನೇಹಾ ಧೂಪಿಯಾ, ಡಿನೋ ಮೋರಿಯಾ ಮತ್ತು ಮಲೈಕಾ ಅರೋರಾ, ಕ್ರಿಕೆಟಿಗ ಮಿಥಾಲಿ ರಾಜ್ ರಾಹುಲ್ ಖನ್ನಾ, ರೋಹಿತ್ ಗಾಂಧಿ ಮತ್ತು ಶಿಯಾಮಕ್ ದಾವರ್ ಕಾರ್ಯಕ್ರಮದ ತೀರ್ಪುಗಾರರಾಗಿ ಭಾಗವಹಿಸಿದ್ದರು. ಕೃತಿ ಸನೋನ್, ಲಾರೆನ್ ಗಾಟ್ಲೀಬ್, ಮನೀಶ್ ಪಾಲ್, ರಾಜ್‍ಕುಮಾರ್ ರಾವ್ ಸೇರಿದಂತೆ ಹಲವಾರು ನಟ, ನಟಿಯರು ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದರು.

     

    ಸಿನಿ ಶೆಟ್ಟಿ ಯಾರು?
    ಕರ್ನಾಟಕದ ಮೂಲದ ಸಿನಿ ಶೆಟ್ಟಿ ಸಿನಿ ಶೆಟ್ಟಿ ಅವರು ಮುಂಬೈನಲ್ಲಿ ಜನಿಸಿದ್ದಾರೆ. ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (ಸಿಎಫ್‍ಐ) ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ. ನಾಲ್ಕನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದ ಸಿನಿ ಶೆಟ್ಟಿ ಅವರು, ಹದಿನಾಲ್ಕನೇ ವಯಸ್ಸಿನಲ್ಲಿ ಭರತನಾಟ್ಯ ರಂಗ ಪ್ರವೇಶವನ್ನು ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]