Tag: Single Use Plastic

  • ಏಕ ಬಳಕೆಯ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ಒಂದು ವರ್ಷ ಅವಕಾಶ ಕೊಡಿ: ವರ್ತಕರ ಸಂಘ ಮನವಿ

    ನವದೆಹಲಿ: ದೇಶದಲ್ಲಿ ಜುಲೈ 1 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಈ ಕುರಿತಾಗಿ ಸಂಪೂರ್ಣ ನಿಷೇಧಕ್ಕೂ ಮೊದಲು ನಮಗೆ ಒಂದು ವರ್ಷಗಳ ಕಾಲ ಅವಕಾಶ ಕೊಡಿ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್‍ಗೆ ಮನವಿ ಸಲ್ಲಿಸಿದ್ದಾರೆ.

    ಇಂದು ಭೂಪೇಂದರ್ ಯಾದವ್ ಅವರಿಗೆ ಮನವಿ ಸಲ್ಲಿಸಿದ ವರ್ತಕರ ಸಂಘ ಜುಲೈ 1 ರಿಂದ ಜಾರಿಗೆ ಬಂದ ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಅನುಸರಿಸಲು ಒಂದು ವರ್ಷದ ಅವಧಿಯನ್ನು ಕೇಳಿದೆ. ಉದ್ಯಮದಾರರನ್ನು ಮತ್ತು ಉದ್ಯೋಗಿಗಳಿಗೆ ಪೂರಕವಾಗಿ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ – ಮಾರಾಟ ಮಾಡಿದ್ರೆ ದುಬಾರಿ ದಂಡ

    ವರ್ತಕರ ಸಂಘದ ಪ್ರಕಾರ ಈಗಾಗಲೇ ಕೆಲ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಉದ್ಯಮವಾಗಿಸಿಕೊಂಡು ಹಲವಾರು ಕಂಪನಿಗಳು ಇವೆ. ಹಲವು ಕಂಪನಿಗಳು ಈಗಾಗಲೇ ಸ್ಟಾಕ್ ಇಟ್ಟಿರುವ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಬಳಕೆಗೆ ಅವಕಾಶ ಮಾಡಿಕೊಡಬೇಕು. ಹಲವು ಕಂಪನಿಗಳು ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ಉದ್ಯಮಗಳನ್ನು ಆರಂಭಿಸಿದೆ. ಇದೀಗ ಏಕಾಏಕಿ ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದರೆ ಹೊಡೆತ ಬೀಳುತ್ತದೆ. ಸಾವಿರಾರೂ ಉದ್ಯೋಗಿಗಳು ಬೀದಿ ಪಾಲಾಗುತ್ತಾರೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ವರ್ಷಕ್ಕೆ 60,000 ಕೋಟಿ ರೂ.ಗಳ ವ್ಯವಹಾರ ಪ್ಲಾಸ್ಟಿಕ್ ಮೂಲಕ ನಡೆಯುತ್ತದೆ. ಹಾಗಾಗಿ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮುಂದಿನ ಕ್ರಮ ವಹಿಸಬೇಕಾಗಿ ಮನವಿ ಮಾಡಿಕೊಂಡಿದೆ.

    PLASTIC

    ಜುಲೈ 1 ರಿಂದ ಪ್ಲಾಸ್ಟಿಕ್ ಕಡ್ಡಿ ಹೊಂದಿರುವ ಇಯರ್ ಬಡ್ಸ್, ಬಲೂನ್‍ನ ಪ್ಲಾಸ್ಟಿಕ್ ಕಡ್ಡಿ, ಐಸ್‍ಕ್ರೀಂ-ಕ್ಯಾಂಡಿ ಸ್ಟಿಕ್, ಪ್ಲಾಸ್ಟಿಕ್ ಪ್ಲೇಟ್ಸ್, ಕಪ್ಸ್, ಗ್ಲಾಸ್, ಸ್ಪೂನ್, ಪ್ಲಾಸ್ಟಿಕ್ ಚಾಕು ಸೇರಿದಂತೆ ಇನ್ನಿತರ ಕೆಲ ಏಕಬಳಕೆಯ ಪ್ಲಾಸ್ಟಿಕ್‍ಗಳನ್ನು ಬ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ದೇಶಕ್ಕೆ ಮಾತಾಡುವ ರಾಷ್ಟ್ರಪತಿ ಬೇಕು; ನಾನು ಗೆದ್ದರೆ ದೇಶದ್ರೋಹ ಕಾನೂನು ರದ್ದು ಮಾಡ್ತೀನಿ – ಯಶವಂತ್‌ ಸಿನ್ಹಾ

    2016ರ ನಂತರ ನಿಷೇಧ ಜಾರಿಯಾದ ಬಳಿಕ ಹಲವು ಉತ್ಪಾದನಾ ಘಟಕಗಳ ಮೇಲೆ ದಾಳಿ ನಡೆಸಿ ಮುಚ್ಚಲಾಗಿದೆ. ಅದಾಗ್ಯೂ ಪ್ಲಾಸ್ಟಿಕ್ ಬಳಕೆಯಾಗುತ್ತಲೇ ಇದ್ದು, ಇದು ಮಾರಾಟಗಾರರು, ತಿನಿಸುಗಳು, ಹಣ್ಣು ಮತ್ತು ತರಕಾರಿ ಮಾರಾಟಗಾರರು ಮತ್ತು ಅಂಗಡಿಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ಹಂತಹಂತವಾಗಿ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

    Live Tv

  • ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ – ಮಾರಾಟ ಮಾಡಿದ್ರೆ ದುಬಾರಿ ದಂಡ

    ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ – ಮಾರಾಟ ಮಾಡಿದ್ರೆ ದುಬಾರಿ ದಂಡ

    ಬೆಂಗಳೂರು: ದೇಶದಲ್ಲಿ ನಾಳೆಯಿಂದ ಹೊಸ ಶಕೆ ಆರಂಭವಾಗಲಿದೆ. ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ ಆಗಲಿವೆ.

    ಕೇಂದ್ರ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ)  ಅಧ್ಯಕ್ಷ ತಿಮ್ಮಯ್ಯ ಸುದ್ದಿಗೋಷ್ಠಿ ನಡೆಸಿ, ಏಕ ಬಳಕೆ ಪ್ಲಾಸ್ಟಿಕ್ ಬ್ಯಾನ್ ಆಗ್ತಿರುವ ಬಗ್ಗೆ ಮಾಹಿತಿ ನೀಡಿದರು. ನಾಳೆಯಿಂದ ಪ್ಲಾಸ್ಟಿಕ್ ಕಡ್ಡಿ ಹೊಂದಿರುವ ಇಯರ್ ಬಡ್ಸ್, ಬಲೂನ್‍ನ ಪ್ಲಾಸ್ಟಿಕ್ ಕಡ್ಡಿ, ಐಸ್‍ಕ್ರೀಂ-ಕ್ಯಾಂಡಿ ಸ್ಟಿಕ್, ಪ್ಲಾಸ್ಟಿಕ್ ಪ್ಲೇಟ್ಸ್, ಕಪ್ಸ್, ಗ್ಲಾಸ್, ಸ್ಪೂನ್, ಪ್ಲಾಸ್ಟಿಕ್ ಚಾಕು ಎಲ್ಲಾ ಬ್ಯಾನ್ ಆಗಲಿವೆ. ಇದನ್ನೂ ಓದಿ: ಬಿಜೆಪಿ `ಮಹಾ’ ಮಾಸ್ಟರ್ ಪ್ಲಾನ್ – ಅಂದು ಅಟೋ ಡ್ರೈವರ್‌ ಇಂದು ಚೀಫ್‌ ಮಿನಿಸ್ಟರ್‌

    ಈ ನಿಷೇಧಿತ ಪ್ಲಾಸ್ಟಿಕ್ ಬಳಸಿದ್ರೆ, ಮಾರಾಟ ಮಾಡಿದ್ರೆ ದಂಡ ವಿಧಿಸಲಾಗುತ್ತದೆ. ಉತ್ಪಾದಕರಿಗೆ 5 ರಿಂದ 20 ಸಾವಿರ ರೂಪಾಯಿವರೆಗೂ ದಂಡ, ಮಾರಾಟಗಾರರಿಗೆ 200 ರೂಪಾಯಿಯಿಂದ 1 ಸಾವಿರ ರೂಪಾಯಿವರೆಗೂ ದಂಡ ಬೀಳಲಿದೆ. ಜೊತೆಗೆ ಎಲ್ಲಾ ವಸ್ತುಗಳು ಸೀಜ್ ಆಗಲಿವೆ. ಕೆಎಸ್‍ಪಿಸಿಬಿ ಜುಲೈ 1 ರಿಂದ ನಿಷೇಧಿತ ವಸ್ತುಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿದ್ದು, ಅವರು ಪ್ಲಾಸ್ಟಿಕ್‍ಗೆ ಪರ್ಯಾಯಗಳನ್ನು ಒದಗಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಮಿಶ್ರಗೊಬ್ಬರ ಚೀಲಗಳು ಮತ್ತು ಬಟ್ಟೆ ಚೀಲಗಳ ಪೂರೈಕೆಗೆ ಮಂಡಳಿಯು ಈಗಾಗಲೇ ಅನುಮೋದನೆ ನೀಡಿದೆ. ನಿಷೇಧ ಆದೇಶವು ಕಟ್ಟುನಿಟ್ಟಾಗಿ ಜಾರಿಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಅಧಿಕಾರವನ್ನು ನೀಡಿದೆ. ಕಟ್ಟುನಿಟ್ಟಿನ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ಮಂಗಳವಾರ ಮಾರ್ಷಲ್‍ಗಳೊಂದಿಗೆ ಸಭೆ ನಡೆಸಲಾಯಿತು. ಮಾರ್ಷಲ್‍ಗಳಿಗೆ ತರಬೇತಿ ನೀಡಿ ಯಾವ ಕ್ರಮ ಕೈಗೊಳ್ಳಬೇಕು, ಯಾವ ಕಾಯ್ದೆ ಮತ್ತು ಷರತ್ತಿನ ಅನ್ವಯ ದಂಡವನ್ನು ವಿಧಿಸಬೇಕು ಮತ್ತು ಯಾವ ಕಾಯ್ದೆಯ ಅಡಿಯಲ್ಲಿ ಉತ್ಪಾದನೆ ಮತ್ತು ಚಿಲ್ಲರೆ ಘಟಕಗಳನ್ನು ಮುಚ್ಚಬೇಕು ಎಂದು ತಿಳಿಸಲಾಯಿತು ಎಂದರು. ಇದನ್ನೂ ಓದಿ: ಬ್ಯಾಕ್ಟೀರಿಯಾ ಪತ್ತೆ- ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಸ್ಥಗಿತ

    ಮಹಾರಾಷ್ಟ್ರ ಮತ್ತು ಅಹಮದಾಬಾದ್‍ನ ಎರಡು ಏಜೆನ್ಸಿಗಳಿಗೆ ಮಿಶ್ರಗೊಬ್ಬರ ಪ್ಲಾಸ್ಟಿಕ್ ಪೂರೈಕೆಗೆ ಅನುಮೋದನೆ ನೀಡಲಾಗಿದೆ. ಅಂತೆಯೇ ಈ ಏಜೆನ್ಸಿಗಳು ಸಿಪಿಸಿಬಿ ಮತ್ತು ಪ್ಲಾಸ್ಟಿಕ್ ಯುನಿಟ್ ಆಫ್ ಇಂಡಿಯಾದಿಂದ ಅನುಮತಿಯನ್ನು ಪಡೆದಿವೆ. ಈ ವಿಶೇಷ ಬ್ಯಾಗ್‍ಗಳು ಬಾರ್ ಕೋಡ್‍ಗಳೊಂದಿಗೆ ಬರಲಿದ್ದು, ಸ್ಕ್ಯಾನ್ ಮಾಡಿದಾಗ ಉತ್ಪಾದನಾ ಘಟಕ ಮತ್ತು ಪೂರೈಕೆದಾರರ ಸಂಪೂರ್ಣ ವಿವರಗಳನ್ನು ನೀಡುತ್ತದೆ. ಈ ಏಜೆನ್ಸಿಗಳನ್ನು ಕರ್ನಾಟಕದಲ್ಲಿಯೂ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

    2016ರ ನಂತರ ನಿಷೇಧ ಜಾರಿಯಾದ ಬಳಿಕ ಹಲವು ಉತ್ಪಾದನಾ ಘಟಕಗಳ ಮೇಲೆ ದಾಳಿ ನಡೆಸಿ ಮುಚ್ಚಲಾಗಿದೆ. ಅದಾಗ್ಯೂ ಪ್ಲಾಸ್ಟಿಕ್ ಬಳಕೆಯಾಗುತ್ತಲೇ ಇದ್ದು, ಇದು ಮಾರಾಟಗಾರರು, ತಿನಿಸುಗಳು, ಹಣ್ಣು ಮತ್ತು ತರಕಾರಿ ಮಾರಾಟಗಾರರು ಮತ್ತು ಅಂಗಡಿಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ಹಂತಹಂತವಾಗಿ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಬೇಕಾಗಿದೆ. ಸದ್ಯಕ್ಕೆ ನಂದಿನಿ ಹಾಲಿನ ಕವರ್‌ಗೆ ನಿಷೇಧ ವಿಧಿಸಿಲ್ಲ. ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಹಲವು ರೀತಿಯಲ್ಲಿ ಜಾಗೃತಿ ಮೂಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಪ್ಲಾನ್ ಮಾಡಿದೆ ಎಂದು ಸ್ಪಷ್ಟಪಡಿಸಿದರು.

    Live Tv

  • ಮಹಿಳೆಯರೊಂದಿಗೆ ಕಸದಿಂದ ಪ್ಲಾಸ್ಟಿಕ್ ಹೆಕ್ಕಿದ ಪ್ರಧಾನಿ

    ಮಹಿಳೆಯರೊಂದಿಗೆ ಕಸದಿಂದ ಪ್ಲಾಸ್ಟಿಕ್ ಹೆಕ್ಕಿದ ಪ್ರಧಾನಿ

    ಮಥುರಾ: ಪ್ಲಾಸ್ಟಿಕ್ ಬಳಕೆಯ ವಿರುದ್ಧ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ಲಾಸ್ಟಿಕ್ ಬೇರ್ಪಡಿಸುವ ಮಹಿಳೆಯರೊಂದಿಗೆ ಕುಳಿತು ಕಸದಿಂದ ಪ್ಲಾಸ್ಟಿಕ್ ವಸ್ತುಗಳನ್ನು ಬೇರ್ಪಡಿಸಿದರು.

    ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಇಂದು ಪ್ರಧಾನಿಗಳು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಥುರಾದಲ್ಲಿ ಕಸದಿಂದ ಪ್ಲಾಸ್ಟಿಕ್ ಬೇರ್ಪಡಿಸುವ ಮಹಿಳೆಯರನ್ನು ಕಂಡು ಅವರಿಗೆ ಸಹಾಯವನ್ನು ಮಾಡಿದ್ದಾರೆ. ಆ ಮೂಲಕ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ (ಸಿಂಗಲ್ ಯೂಸ್ ಪ್ಲಾಸ್ಟಿಕ್) ಬಳಕೆಯನ್ನು ನಿಲ್ಲಿಸಲು ಸಂದೇಶ ನೀಡಿದ್ದಾರೆ.

    ಮಹಿಳೆಯರೊಂದಿಗೆ ನೆಲದ ಮೇಲೆ ಕುಳಿತು ಪ್ರಧಾನಿ ನರೇಂದ್ರ ಮೋದಿ ಅವರು ಪ್ಲಾಸ್ಟಿಕ್ ವಸ್ತುಗಳನ್ನು ಕಸದಿಂದ ಬೇರ್ಪಡಿಸುತ್ತಿರುವ ಫೋಟೋ ಕಾಣಬಹುದಾಗಿದೆ. ಸುಮಾರು 25ಕ್ಕೂ ಹೆಚ್ಚು ಮಹಿಳೆಯರು ಈ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಮೋದಿ ಅವರು ತಮ್ಮನ್ನು ಭೇಟಿ ಮಾಡಿದ್ದ ಮಹಿಳೆಯರಿಂದ ಅವರು ಎದುರಿಸುವಂತಹ ಸಮಸ್ಯೆಗಳು ಸೇರಿದಂತೆ ಇತರೇ ಅಂಶಗಳ ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆದಿದ್ದಾರೆ. ಆ ಬಳಿಕ 25 ಮಹಿಳೆಯರಿಗೆ ಪುರಸ್ಕಾರ ನೀಡಿದ್ದಾರೆ.

    ಸೋಮವಾರವಷ್ಟೇ ದೇಶದಲ್ಲಿ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳನ್ನು ಬ್ಯಾನ್ ಮಾಡುವ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದ್ದರು. ಅಲ್ಲದೇ ಪ್ಲಾಸ್ಟಿಕ್ ಬದಲಾಗಿ ಪರಿಸರ ಸ್ನೇಹಿ ಬದಲಿ ಉತ್ಪನ್ನಗಳ ಅಭಿವೃದ್ಧಿಗೆ ಪರಿಣಾಮ ಕ್ರಮಕೈಗೊಳ್ಳು ಬದ್ಧರಾಗಿದ್ದೇವೆ ಎಂದು ಹೇಳಿದ್ದರು.

    73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ಲಾಸ್ಟಿಕ್ ವಿರುದ್ಧ ಸಮರಕ್ಕೆ ಕರೆ ನೀಡಿದ್ರು. ಪ್ಲಾಸ್ಟಿಕ್ ಬದಲು ಬಟ್ಟೆಯಿಂದ ತಯಾರಿಸಿದ ಬ್ಯಾಗ್ ಬಳಕೆ ಮಾಡುವ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದರು. ಇದೀಗ ಈ ಆಶಯದ ಭಾಗವಾಗಿ ಅಕ್ಟೋಬರ್ 2 ರಿಂದ 6 ಬಗೆಯ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧ ಮಾಡಿದ್ದಾರೆ. ಈಗಾಗಲೇ ವಿಶ್ವದ 127 ರಾಷ್ಟ್ರಗಳು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಿವೆ.