Tag: Singing

  • ಪುನೀತ ಪರ್ವ ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಿಗೆ ಕೇಸರಿ ಬಾತ್, ಉಪ್ಪಿಟ್ಟು

    ಪುನೀತ ಪರ್ವ ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಿಗೆ ಕೇಸರಿ ಬಾತ್, ಉಪ್ಪಿಟ್ಟು

    ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಪುನೀತ ಪರ್ವ (Puneeth Parva) ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಿಗಾಗಿ ತಿಂಡಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, ದೂರದ ಊರಿನಿಂದ ಅಭಿಮಾನಿಗಳು ಬೆಳಗ್ಗೆಯೇ ಬಂದಿರುವುದರಿಂದ ಅವರಿಗಾಗಿ ಕೇಸರಿ ಬಾತ್ ಮತ್ತು ಉಪ್ಪಿಟ್ಟು ತಯಾರಿಸಲಾಗಿದೆ. ಪೊಲೀಸ್ ಸಿಬ್ಬಂದಿ ಮತ್ತು ಕಾರ್ಯಕ್ರಮದ ಸಿಬ್ಬಂದಿಗೆ ಮೊಸರನ್ನ, ಬಿಸಿಬೇಳೆ ಬಾತ್ ಮತ್ತು ಬೊಂಡಾ ನೀಡಲಾಗುತ್ತಿದೆ.

    ತಮ್ಮ ನೆಚ್ಚಿನ ನಟನ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ರಾಜ್ಯಾದ ನಾನಾ ಜಿಲ್ಲೆಗಳಿಂದ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದು, ತಡರಾತ್ರಿವರೆಗೂ ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ. ಹಾಗಾಗಿಯೇ ಅವರಿಗೆ ನೀರು, ತಿಂಡಿ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಮಾಡಿದೆ ದೊಡ್ಮನೆ. ವಾರದಿಂದಲೇ ಈ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ಮಾಡಲಾಗಿದ್ದು, ಗಣ್ಯರಿಗೆ ಮತ್ತು ಅಭಿಮಾನಿಗಳಿಗೆ ಕೂರಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಇದನ್ನೂ ಓದಿ:BREAKING:`ಕಾಂತಾರ’ ಪಾರ್ಟ್ 2 ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ನಟ ಪ್ರಮೋದ್ ಶೆಟ್ಟಿ

    ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ರಮ್ಯಾ, ಪ್ರಭುದೇವ ಸೇರಿದಂತೆ ಅನೇಕ ತಾರೆಯರು ನೃತ್ಯ ಮಾಡಲಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆಯ ಸಿನಿಮಾಗಳ ಗೀತೆಗಳಿಗೆ ತಾರೆಯರು ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ಅರಮನೆ ಮೈದಾನ ಸಿದ್ಧಗೊಂಡಿದ್ದು, ಕನ್ನಡ ಸಿನಿಮಾ ರಂಗದ ಬಹುತೇಕ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ.

    ಖ್ಯಾತಗಾಯಕರಾದ ವಿಜಯ್ ಪ್ರಕಾಶ್, ಗುರುಕಿರಣ್ ಸೇರಿದಂತೆ ಅನೇಕ ಗಾಯಕರು ಈ ಕಾರ್ಯಕ್ರಮದಲ್ಲಿ ಪುನೀತ್ ನಟನೆಯ ಹಾಡುಗಳನ್ನು ಹೇಳಲಿದ್ದಾರೆ. ಐದುನೂರಕ್ಕೂ ಹೆಚ್ಚು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ಪುನೀತ್ ರಾಜ್ ಕುಮಾರ್ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಬಹೃತ್ ಸಮಾರಂಭ ಇದಾಗಿದೆ.

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ‘ಪುನೀತ್ ಪರ್ವ’ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಪುನೀತ್ ನಟನೆಯ ಕಟ್ಟಕಡೆಯ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕೂಡ ಇದಾಗಿದ್ದು, ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಂಡ್ಯದಲ್ಲೊಬ್ಬ ಉಲ್ಟಾ ಸಿಂಗರ್ – ಕುರಿಗಾಹಿಯ ಪ್ರತಿಭೆಗೆ ಜನರ ಮೆಚ್ಚುಗೆ

    ಮಂಡ್ಯದಲ್ಲೊಬ್ಬ ಉಲ್ಟಾ ಸಿಂಗರ್ – ಕುರಿಗಾಹಿಯ ಪ್ರತಿಭೆಗೆ ಜನರ ಮೆಚ್ಚುಗೆ

    ಮಂಡ್ಯ: ಉಲ್ಟಾ ಹಾಡನ್ನು ಹಾಡುವ ಕುರಿಗಾಹಿ ಯುವಕನೊರ್ವ ಈಗ ಎಲ್ಲೆಡೆ ಜನಪ್ರಿಯಗೊಂಡಿದ್ದಾನೆ.

    ಹೌದು, ಹಾಡುಗಾರಿಕೆ ಅಂದರೆ ಎಲ್ಲರಿಗೂ ಇಷ್ಟ. ಹಾಡುವುದು, ಹಾಡು ಕೇಳುವುದು ಅದೆಷ್ಟೋ ಮಂದಿಗೆ ಹವ್ಯಾಸ. ಕೆಲವರಂತು ವಿಭಿನ್ನವಾದ ಹಾಡುಗಾರಿಕೆ ಮೂಲಕ ರಂಜಿಸುತ್ತಾರೆ. ಆದರೆ ಮಂಡ್ಯದ ಒಬ್ಬ ಕುರಿಗಾಹಿಯ ಉಲ್ಟಾ ಹಾಡುಗಾರಿಕೆ ಕೇಳುಗರನ್ನು ನಿಬ್ಬೆರಗಾಗಿಸುತ್ತಿದೆ.

    ಪಾಂಡವಪುರ ತಾಲೂಕಿನ ಬೇಬಿನಕುಪ್ಪೆ ಗ್ರಾಮದ ಪ್ರಕಾಶ್ ಎಂಬ ಕುರಿಗಾಹಿ ಹಾಡುವುದನ್ನು ಕೇಳಿದರೆ ಅಯ್ಯೋ ಇದ್ಯಾವ ಭಾಷೆ, ಈತ ಹಾಡುತ್ತಿರುವುದು ಕನ್ನಡ ಹಾಡುಗಳಾ? ಇಲ್ಲಾ ಬೇರೆಯಾವುದಾದರು ಭಾಷೆನಾ? ಎಂದು ಜನರಿಗೆ ಪ್ರಶ್ನೆಗಳು ಮೂಡುತ್ತದೆ. ಆದರೆ ಪ್ರಕಾಶ್ ಹಾಡುತ್ತಿರುವುದು ಅಪ್ಪಟ ಕನ್ನಡ ಹಾಡಗಳು. ಕನ್ನಡ ಹಾಡುಗಳ ಸಾಹಿತ್ಯವನ್ನ ಉಲ್ಟಾ ಹಾಡುವ ಈತ ಉಲ್ಟಾ ಸಿಂಗರ್ ಎನಿಸಿಕೊಂಡಿದ್ದಾರೆ.

    ಪಿಯುಸಿವರೆಗೂ ಓದಿಕೊಂಡಿರುವ ಪ್ರಕಾಶ್ ಕುರಿಗಳನ್ನು ಮೇಯಿಸುತ್ತ ಜೀವನ ಸಾಗಿಸುತ್ತಿದ್ದಾರೆ. ಕುರಿ ಮೇಯಿಸುವ ವೇಳೆ ಸಿಗುವ ಬಿಡುವಿನ ಸಮಯದಲ್ಲಿ ಏನಾದರೂ ವಿಭಿನ್ನ ಸಾಧನೆ ಮಾಡಬೇಕೆಂದು ಆಲೋಚಿಸಿದ ಇವರು 25 ಕನ್ನಡ ಹಾಡುಗಳ ಸಾಹಿತ್ಯವನ್ನು ಉಲ್ಟಾ ಕಲಿತು ನಿರರ್ಗಳವಾಗಿ ಹಾಡುತ್ತಾರೆ.

    ಅಲ್ಲದೆ ನೇರವಾಗಿ ಹಾಡುವವರನ್ನೇ ಟೀಕಿಸುವ ಜನ ಪ್ರಕಾಶ್ ಉಲ್ಟಾ ಹಾಡಿದಾಗಲು ಹಾಸ್ಯ ಮಾಡಿದ್ದರು. ಆದರೆ ಟೀಕೆಗಳ ನಡುವೆಯೂ ಪ್ರಯತ್ನ ಮುಂದುವರಿಸಿದ ಈ ಕುರಿಗಾಹಿ ಇಂದು ಹಾಡುಗಳನ್ನು ಉಲ್ಟಾ ಹಾಡುತ್ತಾ ಮಂಡ್ಯದ ಉಲ್ಟಾ ಸಿಂಗರ್ ಎಂದು ಮೆಚ್ಚುಗೆ ಗಳಿಸಿದ್ದಾರೆ. ಪ್ರಕಾಶ್ ಸಾಹಿತ್ಯದ ಬಗೆಗೂ ಆಸಕ್ತಿ ಹೊಂದಿದ್ದು ಬಿಡುವಿನ ವೇಳೆ ತಾವೇ ಬರೆದ 3 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

    ಪ್ರಕಾಶ್‍ರ ವಿಭಿನ್ನ ಹಾಡುಗಾರಿಕೆ ಜನರ ಮೆಚ್ಚುಗೆ ಗಳಿಸಿದ್ದು, ಎಲ್ಲ ಇದ್ದೂ ಏನು ಮಾಡದವರ ನಡುವೆ ಈ ಕುರಿಗಾಹಿ ವಿಶೇಷ ಎನಿಸುತ್ತಾರೆ.