Tag: singham

  • ‘ಸಿಂಗಂ’ ರೀತಿಯ ಸಿನಿಮಾಗಳು ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತವೆ: ಹೈಕೋರ್ಟ್‌ ನ್ಯಾಯಮೂರ್ತಿ

    ‘ಸಿಂಗಂ’ ರೀತಿಯ ಸಿನಿಮಾಗಳು ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತವೆ: ಹೈಕೋರ್ಟ್‌ ನ್ಯಾಯಮೂರ್ತಿ

    ಮುಂಬೈ: ಸಿಂಗಂ ತರಹದ ಸಿನಿಮಾಗಳು ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತವೆ ಎಂದು ಬಾಂಬೆ ಹೈಕೋರ್ಟ್‌ (Bombay High Court) ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದೆ.

    “ಸಿಂಗಂ” ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ತೋರಿಸಿರುವಂತೆ ಕಾನೂನಿನ ಪ್ರಕ್ರಿಯೆಯ ಬಗ್ಗೆ ತಲೆ ತ್ವರಿತ ಹೀರೋ ಪೊಲೀಸ್‌ ಪಾತ್ರದಲ್ಲಿ ನ್ಯಾಯವನ್ನು ನೀಡುವ ಸಿನಿಮೀಯ ಚಿತ್ರವು ತುಂಬಾ ಹಾನಿಕಾರಕ ಸಂದೇಶವನ್ನು ರವಾನಿಸುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಗೌತಮ್ ಪಟೇಲ್ ತಿಳಿಸಿದ್ದಾರೆ. ಇದನ್ನೂ ಓದಿ: ಟರ್ಪಾಲ್ ಶೆಡ್‍ನಲ್ಲಿ ವಾಸಿಸುವ ಒಂಟಿ ಮಹಿಳೆಗೆ ನೋಟಿಸ್

    ಇಂಡಿಯನ್ ಪೊಲೀಸ್ ಫೌಂಡೇಶನ್ ತನ್ನ ವಾರ್ಷಿಕ ದಿನ ಮತ್ತು ಪೊಲೀಸ್ ಸುಧಾರಣಾ ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ. ಪೊಲೀಸ್ ಸುಧಾರಣೆಗಳ ಕುರಿತು ಮಾತನಾಡಿದ ಅವರು, ನಮ್ಮನ್ನು ನಾವು ಸುಧಾರಿಸಿಕೊಳ್ಳದ ಹೊರತು ಕಾನೂನು ಜಾರಿ ಯಂತ್ರವನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಪೋಲೀಸರು ಬೆದರಿಸುವವರು, ಭ್ರಷ್ಟರು ಮತ್ತು ಹೊಣೆಗಾರಿಕೆ ಇಲ್ಲದವರು ಎಂಬ ಭಾವನೆ ಜನರಲ್ಲಿ ಮೂಡಿದೆ. ಸಾರ್ವಜನಿಕ ಜೀವನದಲ್ಲಿರುವ ನ್ಯಾಯಾಧೀಶರು, ರಾಜಕಾರಣಿಗಳು ಮತ್ತು ಪತ್ರಕರ್ತರ ಬಗ್ಗೆಯೂ ಇದೇ ಅಭಿಪ್ರಾಯ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ

    ಚಲನಚಿತ್ರಗಳಲ್ಲಿ ಪೊಲೀಸರು ದಪ್ಪ ಕನ್ನಡಕ ಹಾಕುತ್ತಾರೆ. ನ್ಯಾಯಾಧೀಶರ ವಿರುದ್ಧವೇ ಪೊಲೀಸರು ಕಾಣಿಸಿಕೊಳ್ಳುತ್ತಾರೆ. ತಪ್ಪಿತಸ್ಥರನ್ನು ಹೋಗಲು ಬಿಡುತ್ತಾರೆ ಅಂತ ನ್ಯಾಯಾಲಯಗಳನ್ನು ಪೊಲೀಸರು ದೂಷಿಸುತ್ತಾರೆ. ಕೊನೆಗೆ ನಾಯಕನ ಪಾತ್ರ ಮಾಡುವ ಪೊಲೀಸ್‌ ಏಕಾಂಗಿಯಾಗಿ ನ್ಯಾಯ ಒದಗಿಸುತ್ತಾನೆ ಎನ್ನುವ ಸಾರಾಂಶ ಇರುತ್ತದೆ ಎಂದು ಸಿನಿಮಾಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಿಂಗಂ’ ಖ್ಯಾತಿಯ ನಟ ಜಯಂತ್ ಸಾವರ್ಕರ್ ವಿಧಿವಶ

    ‘ಸಿಂಗಂ’ ಖ್ಯಾತಿಯ ನಟ ಜಯಂತ್ ಸಾವರ್ಕರ್ ವಿಧಿವಶ

    ರಾಠಿ ಚಿತ್ರರಂಗದ ಹಿರಿಯ ನಟ ಜಯಂತ್ ಸಾವರ್ಕರ್ (Jayant Savarkar) ಅವರು 87ನೇ ವಯಸ್ಸಿಗೆ ನಿಧನರಾಗಿದ್ದಾರೆ. ತಂದೆ ಜಯಂತ್ ನಿಧನದ ಕುರಿತು ಕೌಸ್ತುಭ್ ಸಾವರ್ಕರ್ ಖಚಿತಪಡಿಸಿದ್ದಾರೆ. ಮರಾಠಿ- ಹಿಂದಿ ಸಿನಿಮಾರಂಗದಲ್ಲಿ ಕಳೆದ ಆರು ದಶಕಗಳಿಂದ ಜಯಂತ್ ನಟನೆಯ ಮೂಲಕ ರಂಜಿಸಿದ್ದರು.

    ತಂದೆಯವರಿಗೆ 15 ದಿನಗಳ ಹಿಂದೆ ಕಡಿಮೆ ರಕ್ತದೊತ್ತಡ ಉಂಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದೆವು. ಆದರೆ, ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿತ್ತು. ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗಿಲ್ಲ ಎಂದು ಪುತ್ರ ಕೌಸ್ತುಭ್ ಅವರು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಟ ಜಯಂತ್ ಅವರಿಗೆ ಪತ್ನಿ, ಓರ್ವ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇಂದು (ಜುಲೈ 25) ಅವರ ಅಂತ್ಯಸಂಸ್ಕಾರ ನಡೆಯಲಿದೆ. ಹಿರಿಯ ನಟನ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಉಪ್ಪಿ ಅಭಿಮಾನಿಗಳಿಗೆ ಗುಡ್ ನ್ಯೂಸ್- ‌’ಬುದ್ಧಿವಂತ 2′ ಬಿಗ್ ಅಪ್‌ಡೇಟ್

    ಜಯಂತ್ ಸಾವರ್ಕರ್ ಅವರು ಮರಾಠಿ, ಹಿಂದಿ, ರಂಗಭೂಮಿ ಹಾಗೂ ದೂರದರ್ಶನದಲ್ಲಿ ನಟಿಸಿದ್ದಾರೆ. ಅವರು ಆರು ದಶಕಗಳು ನಟನೆಯಲ್ಲಿ ತೊಡಗಿಕೊಂಡಿದ್ದರು.

    ಹಿಂದಿಯಲ್ಲಿ 2011ರಲ್ಲಿ ರಿಲೀಸ್ ಆದ ಅಜಯ್‌ ದೇವಗನ್‌ ನಟನೆಯ ‘ಸಿಂಗಂ’ (Singham) ಸಿನಿಮಾದಲ್ಲಿ ಕಮಲಾಕಾಂತ್ ಭೋಸ್ಲೆ ಪಾತ್ರ ಮಾಡಿದ್ದರು. ನಾಯಕಿ ಕಾಜಲ್ ಅಗರ್‌ವಾಲ್(Kajal Aggarwal) ಅವರ ಅಜ್ಜನ ಪಾತ್ರ ಇದಾಗಿತ್ತು. ರಾಕಿ ಹ್ಯಾಂಡ್ಸಮ್, ವಾಸ್ತವ್, ದಿ ರಿಯಾಲಿಟಿ ಮೊದಲಾದ ಚಿತ್ರಗಳಲ್ಲಿ ಜಯಂತ್ ಬಣ್ಣ ಹಚ್ಚಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂಬೈನ ಕಾಪ್ ರಾಕೇಶ್ ಮಾರಿಯಾ ಹಿಂದೆ ಬಿದ್ದ `ಚೆನ್ನೈ ಎಕ್ಸ್‌ಪ್ರೆಸ್’ ನಿರ್ಮಾಪಕ

    ಮುಂಬೈನ ಕಾಪ್ ರಾಕೇಶ್ ಮಾರಿಯಾ ಹಿಂದೆ ಬಿದ್ದ `ಚೆನ್ನೈ ಎಕ್ಸ್‌ಪ್ರೆಸ್’ ನಿರ್ಮಾಪಕ

    `ಸಿಂಗಂ’ ಮತ್ತು `ಚೆನ್ನೈ ಎಕ್ಸ್‌ಪ್ರೆಸ್’ ಚಿತ್ರಗಳನ್ನು ನಿರ್ದೇಶನ ಮಾಡುವುದರ ಮೂಲಕ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರೋ ನಿರ್ದೇಶಕ ಕಮ್ ನಿರ್ಮಾಪಕ ರೋಹಿತ್ ಶೆಟ್ಟಿ ಮುಂಬೈ ಪೊಲೀಸ್ ಕಮಿಷನರ್ ರಾಕೇಶ್ ಮಾರಿಯಾ ಅವರ ಬಯೋಪಿಕ್ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ.

    ಬಿಟೌನ್‌ನಲ್ಲಿ ಸಾಕಷ್ಟು ಚಿತ್ರಗಳನ್ನ ನಿರ್ದೇಶನ ಮತ್ತು ನಿರ್ಮಾಣ ಮಾಡುವುದರ ಮೂಲಕ ಗಮನ ಸೆಳೆದಿರೋ ರೋಹಿತ್ ಶೆಟ್ಟಿ ಈ ಬಾರಿ ಖಡಕ್ ಪೊಲೀಸ್ ಆಫೀಸರ್ ಕಥೆಯನ್ನ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ಮುಂಬೈನ ಮಾಜಿ ಕಾಪ್ ರಾಕೇಶ್ ಮಾರಿಯಾ ಜೀವನ ಚರಿತ್ರೆಯನ್ನ ರಿಲಯನ್ಸ್ ಎಂಟರ್‌ಟೈನ್ಮೆಂಟ್‌ನೊಂದಿಗೆ ಈ ಚಿತ್ರ ನಿರ್ಮಾಣ ಮಾಡಲು ಸಾಥ್ ನೀಡಿದ್ದಾರೆ.

    ರಾಕೇಶ್ ಮಾರಿಯಾ ಮುಂಬೈನ ಖಡಕ್ ಪೊಲೀಸ್ ಆಧಿಕಾರಿಯಾಗಿದ್ರು. 36 ವರ್ಷಗಳ ಕಾಲ ಭಯೋತ್ಪಾದನೆಯ ಮುಖವನ್ನು ಹತ್ತಿರದಿಂದ ನೋಡಿದರು. ಮುಂಬೈನಲ್ಲಿ ಸಾಕಷ್ಟು ಮೇಜರ್ ಸನ್ನಿವೇಷಗಳ ಕುರಿತು ಸಿನಿಮಾ ಮಾಡಲಾಗುತ್ತಿದೆ. 2020ರ ರಾಕೇಶ್ ಮಾರಿಯಾ ಅವರ ಜೀವನ ಚರಿತ್ರೆಯನ್ನ `ಲೆಟ್ ಮಿ ಸೇ ಇಟ್ ನೌ’ ಪುಸ್ತಕದ ಮೂಲಕ ಅನಾವರಣ ಮಾಡಲಾಗಿತ್ತು. ಇದೀಗ ಇದೇ ಬಯೋಗ್ರಫಿ ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಇದನ್ನೂ ಓದಿ: ಸಾನಿಯಾ ಮಿರ್ಜಾ ಮಗನ ರೇಟು ರೂ.500 ಎಂದ ನಿರ್ದೇಶಕಿ ಫರಾ ಖಾನ್

    ಇತ್ತೀಚೆಗಷ್ಟೆ ನಿರ್ಮಾಪಕ ರಾಕೇಶ್ ಮಾರಿಯಾ ಅವರನ್ನ ಭೇಟಿಯಾಗಿ ಅವರ ಬಯೋಪಿಕ್ ಕುರಿತು ಮಾತಾನಾಡಿದ್ದಾರೆ. ಈ ಸುದ್ದಿ ಕೇಳಿ ಮಾಜಿ ಪೊಲೀಸ್ ಅಧಿಕಾರಿ ರಾಕೇಶ್ ಕೂಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಖಡಕ್ ಪೊಲೀಸ್ ಅಧಿಕಾರಿಯಾಗಿ ಅದ್ಯಾವ ಬಿಟೌನ್ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ ಅಂತಾ ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಕೆರಳಿಸಿದೆ.