Tag: singer

  • ಕೆಕೆ ಕೊಂದಿದ್ದು ಕೋಲ್ಕತ್ತಾ, ಸಾವು ಮುಚ್ಚಿಹಾಕಲು ಸರ್ಕಾರಿ ಗೌರವ : ನಂದಿತಾ ಪುರಿ ಆಕ್ರೋಶ

    ಕೆಕೆ ಕೊಂದಿದ್ದು ಕೋಲ್ಕತ್ತಾ, ಸಾವು ಮುಚ್ಚಿಹಾಕಲು ಸರ್ಕಾರಿ ಗೌರವ : ನಂದಿತಾ ಪುರಿ ಆಕ್ರೋಶ

    ಮಂಗಳವಾರ ರಾತ್ರಿ ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖ್ಯಾತ ಗಾಯಕ ಕೆಕೆ, ಕಾರ್ಯಕ್ರಮದಲ್ಲೇ ಅಸ್ವಸ್ಥಗೊಂಡು ನಂತರ ನಿಧನ ಹೊಂದಿದ್ದಾರೆ. ಈ ಸಾವಿನ ಹೊಣೆಯನ್ನು ಪಶ್ಚಿಮ ಬಂಗಾಳ ಹೊರಬೇಕು ಮತ್ತು ಒಳ್ಳೆಯ ಗಾಯಕನನ್ನು ಬಲಿಕೊಟ್ಟ ಪಶ್ಚಿಮ ಬಂಗಾಳಕ್ಕೆ ನಾಚಿಕೆ ಆಗಬೇಕು ಎಂದು ದಿವಂಗತ ನಟ ಓಂ ಪುರಿ ಅವರ ಪತ್ನಿ ನಂದಿತಾ ಪುರಿ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ : 400 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದ ಕೆಜಿಎಫ್ 2 : ಆದರೂ, ಯಶ್ ಅಭಿಮಾನಿಗಳಿಗೆ ನಿರಾಸೆ

    ಕೆಕೆ ಸಾವನ್ನು ನಂದಿತಾ ಪುರಿ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದ್ದು, ಕೆಕೆ ಕಾರ್ಯಕ್ರಮ ನೀಡಿದ್ದು ನಜ್ರುಲ್ ಮಂಚ್ ಎಂಬ ಆಡಿಟೋರಿಯಂನಲ್ಲಿ. ಎರಡುವರೆ ಸಾವಿರದಷ್ಟು ಜನರು ಮಾತ್ರ ಸೇರಬೇಕಾದ ಜಾಗದಲ್ಲಿ ಏಳು ಸಾವಿರ ಜನರು ಸೇರುವಂತೆ ಅವಕಾಶ ಕಲ್ಪಿಸಲಾಗಿದೆ. ಸಾಮರ್ಥ್ಯಕ್ಕಿಂತ ಅಧಿಕ ಜನರು ಸೇರಿರಾದ ಉಸಿರಾಟದ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೇ, ಆಡಿಟೋರಿಯಂನಲ್ಲಿ ಎಸಿ ಕೂಡ ಕೆಲಸ ಮಾಡುತ್ತಿರಲಿಲ್ಲವಂತೆ. ಈ ಕುರಿತು ಕೆಕೆ ದೂರಿದ್ದರು ಎಂದು ನಂದಿತಾ ಪುರಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ನಾಳೆ ಉಪೇಂದ್ರ ಹೊಸ ಸಿನಿಮಾಗೆ ಮುಹೂರ್ತ : ಅತಿಥಿಗಳಾದ ನಾಲ್ವರು ಸ್ಟಾರ್ ನಟರು

    ಪಶ್ಚಿಮ ಬಂಗಾಳದ ಸರಕಾರದ ವಿರುದ್ಧವೂ ಗರಂ ಆಗಿರುವ ನಂದಿತಾ ಪುರಿ, ‘ಕೆಕೆ ಸಾವಿನ ಹೊಣೆಯನ್ನು ಸರಕಾರವೇ ಹೊರಬೇಕು. ಆಡಿಟೋರಿಯಂ ಲೋಪದೋಷಗಳನ್ನು ಮುಚ್ಚಿ ಹಾಕಲು ಅಲ್ಲಿನ ಸರಕಾರ ಸಕಲ ಸರ್ಕಾರಿ ಗೌರವ ನೀಡಿದೆ’ ಎಂದಿದ್ದಾರೆ.  ಇಂತಹ ಕಾರ್ಯಕ್ರಮಗಳಲ್ಲಿ ಜನರು ಸೇರಿದಾಗ ಪ್ಯಾರಾಮೆಡಿಕ್ಸ್, ಪ್ರಥಮ ಚಿಕಿತ್ಸೆಯ ಸೌಲಭ್ಯ ಕಲ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.

  • ಖ್ಯಾತ ಗಾಯಕ ಕೆಕೆ ಅಂತ್ಯ ಸಂಸ್ಕಾರ ಮುಂಬೈನಲ್ಲಿ : ಅಂತಿಮ ನಮನ ಸಲ್ಲಿಸಿದ ಬಿಟೌನ್

    ಖ್ಯಾತ ಗಾಯಕ ಕೆಕೆ ಅಂತ್ಯ ಸಂಸ್ಕಾರ ಮುಂಬೈನಲ್ಲಿ : ಅಂತಿಮ ನಮನ ಸಲ್ಲಿಸಿದ ಬಿಟೌನ್

    ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (ಕೆಕೆ) ಅವರ ಅಂತ್ಯ ಸಂಸ್ಕಾರ ಮುಂಬೈನಲ್ಲಿ ಇಂದು ನಡೆಯಲಿದೆ. ಇಂದು ಮಧ್ಯಾಹ್ನ 1 ಗಂಟೆಗೆ ವಿಧಿವಿಧಾನಗಳ ಮೂಲಕ ಕೆಕೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈಗಾಗಲೇ ಕೆಕೆ ಅವರ ಪ್ರಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಬಾಲಿವುಡ್ ನಟ ನಟಿಯರು, ಕೆಕೆ ಅಭಿಮಾನಿಗಳು ಕೆಕೆ ಮನೆಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ :  ಪಠ್ಯಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ 2 ಸಾಲು, ಮೊಘಲರ ಬಗ್ಗೆ ಜಾಸ್ತಿ ಉಲ್ಲೇಖ: ಅಕ್ಷಯ್ ಕುಮಾರ್

    ಕೆಕೆ ನಿಧನಕ್ಕೆ ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್, ಗಾಯಕರಾದ ವಿಜಯ ಪ್ರಕಾಶ್, ಶ್ರೇಯಾ ಘೋಷಾಲ್ ಸೇರಿದಂತೆ ಸಾಕಷ್ಟು ತಾರೆಯರು ಸಂತಾಪ ಸೂಚಿಸಿದ್ದರು.  ಅವರೊಂದಿಗಿನ  ಒಡನಾಟವನ್ನು ಹಂಚಿಕೊಂಡಿದ್ದರು. ಕೋಲ್ಕತ್ತಾ ಸರಕಾರ ಸರಕಾರಿ ಗೌರವ ಕೂಡ ನೀಡಿದೆ. ಇದನ್ನೂ ಓದಿ : ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ

    ಮಂಗಳವಾರ ರಾತ್ರಿ ಕೆಕೆ ಅವರು ಕೋಲ್ಕತ್ತಾ ಠಾಕೂರ್ಪುಕೂರ್ ವಿವೇಕಾನಂದ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಲು ಹೋಗಿದ್ದರು. ಒಂದು ಗಂಟೆ ಕಾರ್ಯಕ್ರಮ ನೀಡಿದ ನಂತರ, ಮಧ್ಯದಲ್ಲೇ ಅವರು ಅಸ್ವಸ್ಥರಾಗಿದ್ದರು. ವಿಶ್ರಾಂತಿ ಪಡೆಯಲೆಂದೇ ಅವರು ಹೋಟೆಲ್ ಗೆ ತೆರೆಳಿದರು. ಅಲ್ಲಿ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕೂಡಲದೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಯಾವುದೇ ಪ್ರಯೋಜನವಾಗಲಿಲ್ಲ.

  • ವೇದಿಕೆ ಮೇಲೆಯೇ ಕುಸಿದು ಬಿದ್ದ ಕೆಕೆ – ಬಹುಭಾಷಾ ಖ್ಯಾತ ಗಾಯಕ ಹಠಾತ್ ನಿಧನ

    ವೇದಿಕೆ ಮೇಲೆಯೇ ಕುಸಿದು ಬಿದ್ದ ಕೆಕೆ – ಬಹುಭಾಷಾ ಖ್ಯಾತ ಗಾಯಕ ಹಠಾತ್ ನಿಧನ

    ನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಹಾಡಿ ಜನರನ್ನು ರಂಜಿಸಿದ ಖ್ಯಾತ ಗಾಯಕ ಕೆಕೆ ಎಂದೇ ಪ್ರಸಿದ್ಧಿ ಹೊಂದಿದ ಕೃಷ್ಣಕುಮಾರ್ ಕುನ್ನತ್(53) ವಿಧಿವಶರಾಗಿದ್ದಾರೆ.

    ಕೃಷ್ಣಕುಮಾರ್ ಕುನ್ನತ್ ಹೆಸರಾಗಿದ್ದರೂ `ಕೆಕೆ’ ಅಂತಲೇ ಖ್ಯಾತರಾಗಿದ್ದವರು. ಮಂಗಳವಾರ ಕೊಲ್ಕತ್ತಾದ ನಜ್ರುಲಾ ಮಂಚ್ ಆಡಿಟೋರಿಯಂನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿದ್ದ ವೇಳೆ ಕುಸಿದು ಬಿದ್ದ ಕೆಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಅಷ್ಟರಲ್ಲಿ ಕೆಕೆ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದನ್ನೂ ಓದಿ: ಕನ್ನಡ ಸಿನಿಮಾಗಾಗಿ ಬಣ್ಣ ಹಚ್ಚಲಿದ್ದಾರೆ `ಮಹಾನಟಿ’ ಕೀರ್ತಿ ಸುರೇಶ್

    ಪ್ರಾಥಮಿಕ ಮಾಹಿತಿಯಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ಇನ್ನು ಗಾಯಕ ಕೆಕೆ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಬಾಲಿವುಡ್ ಗಣ್ಯರು, ಗಾಯಕರು ಸಂತಾಪ ಸೂಚಿಸಿದ್ದಾರೆ.

    ನರೇಂದ್ರ ಮೋದಿ ಅವರು, ಕೆಕೆ ಎಂದೇ ಖ್ಯಾತರಾಗಿರುವ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಹಾಡುಗಳು ಎಲ್ಲ ವಯೋಮಾನದ ಜನರೊಂದಿಗೆ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಅವರ ಹಾಡುಗಳ ಮೂಲಕ ನಾವು ಅವರನ್ನು ಸದಾ ಸ್ಮರಿಸುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖ ತಡೆದುಕೊಳ್ಳಲು ಶಕ್ತಿಕೊಡಲಿ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.

    ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಬೆಂಗಾಲಿ ಭಾಷೆಗಳಲ್ಲಿ 3 ದಶಕಗಳ ಕಾಲ ಕೆಕೆ ಹಾಡಿದ್ದರು. ಕನ್ನಡದ ರೌಡಿ ಅಳಿಯ, ಮನಸಾರೆ, ಮಳೆ ಬರಲಿ.. ಮಂಜು ಇರಲಿ ಚಿತ್ರಗಳಲ್ಲಿ ಹಾಡಿಗೆ ದನಿ ಆಗಿದ್ದಾರೆ. ಇದನ್ನೂ ಓದಿ: ಮತ್ತೆ ಬೇಬಿ ಬಂಪ್ ಫೋಟೋ ಹಂಚಿಕೊಂಡ ಪ್ರಣಿತಾ ಸುಭಾಷ್

  • ಬೆಂಗಳೂರು ರಸ್ತೆಯ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಖ್ಯಾತ ಗಾಯಕ ಅಜಯ್ ವಾರಿಯರ್

    ಬೆಂಗಳೂರು ರಸ್ತೆಯ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಖ್ಯಾತ ಗಾಯಕ ಅಜಯ್ ವಾರಿಯರ್

    ಬೆಂಗಳೂರು ರಸ್ತೆಗಳು ಗುಂಡಿಗಳಿಂದಲೇ ತುಂಬಿ ಹೋಗಿವೆ. ಹೀಗಾಗಿ ನಿತ್ಯವೂ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಲೇ ಇವೆ. ಎರಡು ದಿನಗಳ ಹಿಂದೆಯಷ್ಟೇ ಕಿರುತೆರೆ ನಟಿ ಸುನೇತ್ರ ಪಂಡಿತ್, ಅವೈಜ್ಞಾನಿಕ ಹಂಪಿನಿಂದಾಗಿ ಬಿದ್ದು ಆಸ್ಪತ್ರೆ ಸೇರಿಕೊಂಡಿದ್ದರು. ಇದೀಗ ಗುಂಡಿಗೆ ಬಿದ್ದು ಕನ್ನಡದ ಖ್ಯಾತ ಗಾಯಕ ಅಜಯ್ ವಾರಿಯರ್ ಕಾಲು ಮುರಿದುಕೊಂಡಿದ್ದಾರೆ. ಸರಿಯಾಗಿ ರಸ್ತೆ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ಕಳೆದ ಎರಡ್ಮೂರು ವಾರದಿಂದ ಬೆಂಗಳೂರಿನಲ್ಲಿ ವಿಪರೀತ ಮಳೆ ಆಗುತ್ತಿದೆ. ಹೀಗಾಗಿ ರಸ್ತೆ ತುಂಬಾ ಗುಂಡಿಗಳೇ ತುಂಬಿಕೊಂಡಿವೆ. ಅದರ ಜತೆ ಫುಟ್ ಪಾತ್ ನಲ್ಲಿರುವ ಡ್ರೈನ್ ಹೋಲ್ ಗಳನ್ನು ಮುಚ್ಚದೇ ಹಾಗೆಯೇ ಬಿಟ್ಟಿದ್ದರಿಂದ ಅಲ್ಲಿಯೂ ಅಪಘಾತ ಸಂಭವಿಸುತ್ತಿವೆ. ಒಟ್ಟಿನಲ್ಲಿ ಬೆಂಗಳೂರು ರಸ್ತೆಗಳು ಎಂದರೆ, ಅವುಗಳು ಅಪಘಾತಕ್ಕೆ ಆಹ್ವಾನ ನೀಡುವ ಅತಿಥಿಗಳಂತಾಗಿವೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಅಜಯ್ ವಾರಿಯರ್ ಕೇರಳಕ್ಕೆ ಹೋಗಲು ರೈಲು ನಿಲ್ದಾಣಕ್ಕೆ ಹೊರಟಿದ್ದರು. ವಿಪರೀತ ಮಳೆ ಬಂದಿತ್ತು. ಹೀಗಾಗಿ ಓಲಾ ಹಿಡಿಯಲು ಮುಖ್ಯರಸ್ತೆ ಕಡೆಗೆ ನಡೆಯ ತೊಡಗಿದರು. ಮೆಟ್ರೊ ನಿಲ್ದಾಣದ ಮುಖ್ಯರಸ್ತೆಯಲ್ಲಿ ವಿಪರೀತ ಮಳೆ ನೀರು ತುಂಬಿಕೊಂಡಿದ್ದರಿಂದ ಫುಟ್ ಪಾತ್ ಏರಿದರು. ಒಂದೆರಡು ಹೆಜ್ಜೆ ಮುಂದಿಡುತ್ತಿದ್ದಂತೆಯೇ ಅವರು ಗುಂಡಿಗೆ ಬಿದ್ದು, ಆಯಾತಪ್ಪಿ ಕೆಳಗೂ ಬಿದ್ದಿದ್ದಾರೆ. ಆಗ ಕಾಲು ಮುರಿದಿದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಗುಂಡಿಗೆ ಅಜಯ್ ಬಿದ್ದಾಗ ಎದೆಯೊರೆಗೂ ನೀರು ಬಂತಂತೆ. ಕೈಯಲ್ಲಿ ಸೂಟ್ ಕೇಸ್ ಇದ್ದ ಕಾರಣ, ಅವರು ಭಾರೀ ಅಪಘಾತದಿಂದ ತಪ್ಪಿಸಿಕೊಂಡಿದ್ದಾರಂತೆ. ಸೂಟ್ ಕೇಸ್ ಇಲ್ಲದೇ ಹೋದರೆ, ಗುಂಡಿಯಲ್ಲಿ ಮುಳುಗುವ ಅಪಾಯವಿತ್ತು ಎಂದು ಅವರು ಬರೆದುಕೊಂಡಿದ್ದಾರೆ. ಅಪಘಾತವಾದ ತಕ್ಷಣವೇ ಅವರು ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದು, ಕಾಲಿಗೆ ಹಲವಾರು ಹೊಲಿಗೆಗಳನ್ನು ಹಾಕಲಾಗಿದೆಯಂತೆ.

  • ಭಾಷಾ ವಿಚಾರದಲ್ಲಿ ದೇಶ ಒಡೆಯಲಾಗುತ್ತಿದೆ : ಗಾಯಕ ಸೋನು ನಿಗಂ ಕಿಡಿಕಿಡಿ

    ಭಾಷಾ ವಿಚಾರದಲ್ಲಿ ದೇಶ ಒಡೆಯಲಾಗುತ್ತಿದೆ : ಗಾಯಕ ಸೋನು ನಿಗಂ ಕಿಡಿಕಿಡಿ

    ರಾಷ್ಟ್ರ ಭಾಷೆಯ ವಿಚಾರವಾಗಿ ಒಂದಿಲ್ಲೊಂದು ಹೇಳಿಕೆ ನಿತ್ಯವೂ ಬರುತ್ತಿದೆ. ಕಿಚ್ಚ ಸುದೀಪ್ ‘ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಹೇಳುತ್ತಿದ್ದಂತೆಯೇ ಅತ್ತ ಬಾಲಿವುಡ್ ನಟ ಅಜಯ್ ದೇವಗನ್ ‘ಹಿಂದಿ ರಾಷ್ಟ್ರ ಭಾಷೆ ಅಂತ ಒಪ್ಪದೇ ಇದ್ದರೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಏಕೆ ರಿಲೀಸ್ ಮಾಡುತ್ತೀರಿ? ಎಂದು ಕೇಳಿದರು. ಇಲ್ಲಿಗೆ ರಾಷ್ಟ್ರ ಭಾಷೆ ಮತ್ತು ಇತರ ಭಾಷೆಗಳ ಮಧ್ಯೆ ದೊಡ್ಡ ಚರ್ಚೆಯೇ ಶುರುವಾಗಿದೆ. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

    ರಾಷ್ಟ್ರ ಭಾಷೆ ಹಿಂದಿ ಎಂದು ಅಜಯ್ ದೇವಗನ್ ಹೇಳಿದರೆ, ಅದನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ನಮ್ಮ ಭಾಷೆಯೇ ನಮಗೆ ರಾಷ್ಟ್ರ ಭಾಷೆ ಎನ್ನುವಂತೆ ಕನ್ನಡ ಪರ ಬ್ಯಾಟಿಂಗ್ ಬೀಸಿದರು ಸುದೀಪ್. ಇತ್ತ ಕಂಗನಾ ರಣಾವತ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸಂಸ್ಕೃತವನ್ನು ರಾಷ್ಟ್ರ ಭಾಷೆ ಮಾಡಿ ಎಂದು ಕರೆಕೊಟ್ಟರು. ಇದೀಗ ಖ್ಯಾತ ಗಾಯಕ ಸೋನು ನಿಗಂ ಕೂಡ ಈ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸೋನಂ, ‘ಭಾಷಾ ವಿಚಾರದಲ್ಲಿ ದೇಶವನ್ನು ಒಡೆಯುವಂತೆ ಕೆಲಸ ಮಾಡುತ್ತಿದ್ದಾರೆ. ಹಿಂದಿಗಿಂತಲೂ ಹೆಚ್ಚು ಪುರಾತನ ಭಾಷೆ ತಮಿಳು. ಹಾಗಾದರೆ, ತಮಿಳು ರಾಷ್ಟ್ರ ಭಾಷೆ ಎನ್ನುವುದಕ್ಕೆ ಆಗತ್ತಾ? ನಾವು ಎಲ್ಲಿಯೇ ಹೋದರೂ ಇಂಗ್ಲಿಷ್ ಬಳಕೆ ಆಗುತ್ತಿದೆ. ಕೋರ್ಟ್ ನಲ್ಲೂ ಇಂಗ್ಲಿಷ್ ಅನ್ನೇ ಬಳುಸುತ್ತಾರೆ. ಹಾಗಾಗಿ ಹಾಗಾಗಿ ಇಲ್ಲಿ ರಾಷ್ಟ್ರ ಭಾಷೆ ಎನ್ನುವುದೇ ಉದ್ಭವಿಸಲ್ಲ ಎಂದಿದ್ದಾರೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ದೇಶದಲ್ಲಿ ಬಹಳಷ್ಟು ಸಮಸ್ಯೆಗಳು ಇವೆ. ಆ ಸಮಸ್ಯೆಗಳ ಬಗ್ಗೆ ಮಾತನಾಡದೇ ಭಾಷಾ ವಿಚಾರವನ್ನು ಮುನ್ನೆಲೆಗೆ ತಂದು ಸುಖಾಸುಮ್ಮನೆ ದಿಕ್ಕು ತಪ್ಪಿಸುವಂತಹ ಕೆಲಸ ನಡೆಯುತ್ತಿದೆ. ಅದರ ಬದಲು ಸಮಸ್ಯೆಗಳನ್ನು ಇಟ್ಟುಕೊಂಡು ಚರ್ಚೆ ಮಾಡಿ ಎಂದು ಅವರು ಸಲಹೆಯನ್ನೂ ನೀಡಿದ್ದಾರೆ.

  • ಗಾಯಕ ಪ್ರಫುಲ್ಲ ಕರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

    ಗಾಯಕ ಪ್ರಫುಲ್ಲ ಕರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

    ಡಿಯಾದ ಖ್ಯಾತ ಸಂಗೀತಗಾರ ಮತ್ತು ಗಾಯಕ ಪ್ರಫುಲ್ಲ ಕರ್ ಇಂದು ನಿಧನರಾಗಿದ್ದಾರೆ. ಪ್ರಫುಲ್ಲ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಕುಟುಂಬಕ್ಕೆ ನೋವು ಭರಿಸುವಂತಹ ಶಕ್ತಿಯು ದೇವರು ಕೊಡಲೆಂದು ಪ್ರಾರ್ಥಿಸಿದ್ದಾರೆ.

    ಒಡಿಯಾ ಸಂಸ್ಕೃತಿ ಮತ್ತು ಸಂಗೀತಕ್ಕೆ ಅವರು ಸಲ್ಲಿಸಿದ ಕೊಡುಗೆಗಾಗಿ ಕರ್ ಅವರನ್ನು ಸ್ಮರಿಸಲಾಗುವುದು ಎಂದು ಮೋದಿ ಹೇಳಿದ್ದಾರೆ. ‘ಶ್ರೀ ಪ್ರಫುಲ್ಲ ಕರ್ ಅವರ ನಿಧನದಿಂದ ನನಗೆ ಅಪಾರ ದುಃಖವಾಗಿದೆ. ಒಡಿಯಾ ಸಂಸ್ಕೃತಿ ಮತ್ತು ಸಂಗೀತಕ್ಕೆ ಅವರ ಕೊಡುಗೆ ಅಪಾರ. ಅವರು ಬಹುಮುಖಿ ವ್ಯಕ್ತಿತ್ವದಿಂದ ಆಶೀರ್ವದಿಸಲ್ಪಟ್ಟಿದ್ದಾರೆ ಮತ್ತು ಅವರ ಸೃಜನಶೀಲತೆಯು ಅವರ ಕೃತಿಗಳಲ್ಲಿ ಪ್ರತಿಫಲಿಸುತ್ತದೆ’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳನ್ನು ಸೂಚಿಸುತ್ತೇನೆ ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

    ಖ್ಯಾತ ಒಡಿಯಾ ಸಂಗೀತಗಾರ ಮತ್ತು ಗಾಯಕ ಕರ್ ಅವರು ರಾಜ್ಯ ರಾಜಧಾನಿ ಭುವನೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. 83 ವರ್ಷ ವಯಸ್ಸಿನ ಅವರು ಕೆಲವು ತಿಂಗಳಿನಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರ ಅಂತಿಮ ಸಂಸ್ಕಾರವನ್ನು ಪೂರ್ಣ ಗೌರವದಿಂದ ಪುರಿಯಲ್ಲಿ ಇಂದು ನೆರವೇರಿಸಲಾಗಿದೆ.

  • ಆಶಾ ಭೋಸ್ಲೆ ಕುಟುಂಬಕ್ಕೆ ಮತ್ತೊಂದು ಆಘಾತ

    ಆಶಾ ಭೋಸ್ಲೆ ಕುಟುಂಬಕ್ಕೆ ಮತ್ತೊಂದು ಆಘಾತ

    ತಾ ಮಂಗೆಶ್ಕರ್ ಅವರ ನಿಧನದಿಂದ ಇನ್ನೂ ಆಚೆ ಬಾರದ ಸಹೋದರಿ ಆಶಾ ಭೋಸ್ಲೆಗೆ ಮತ್ತೊಂದು ಆಘಾತ ಉಂಟಾಗಿದೆ. ದಂತಕಥೆ ಗಾಯಕಿಯ ಆಶಾ ಅವರ ಪುತ್ರ ಆನಂದ್ ಭೋಸ್ಲೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

    ಮನೆಯಲ್ಲಿದ್ದ ಆನಂದ್ ಏಕಾಏಕಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ. ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು ಕೂಡಲೇ ಅವರನ್ನು ದುಬೈನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನುರಿತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಏಕಾಏಕಿ ನೆಲದ ಮೇಲೆ ಬಿದ್ದ ಪರಿಣಾಮದಿಂದಾಗಿ ಅವರಿಗೆ ಕೆಲವು ಗಾಯಗಳಾಗಿವೆ. ಈ ವಿಷಯ ತಿಳಿಯುತ್ತಿದಂತೆ ಕುಟುಂಬಸ್ಥರು ಮತ್ತು ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ.

    ಕೆಲವು ದಿನಗಳ ಹಿಂದೆಯಷ್ಟೇ ಈ ಘಟನೆ ನಡೆದಿದ್ದು, ಆನಂದ್ ಭೋಸ್ಲೆ ಅವರನ್ನು ಮೊದಲು ಐಸಿಯುಗೆ ದಾಖಲಿಸಲಾಗಿತ್ತು. ಈಗವರು ಚೇತರಿಸಿಕೊಂಡಿದ್ದು, ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈಗಾಗಲೇ ಲತಾ ಅವರನ್ನು ಕಳೆದುಕೊಂಡು ದುಃಖಿಸುತ್ತಿರುವ ಕುಟುಂಬಕ್ಕೆ ಈ ಘಟನೆಯು ತೀವ್ರ ಆತಂಕ ಸೃಷ್ಟಿ ಮಾಡಿತ್ತು. ಇನ್ನೂ ಆಸ್ಪತ್ರೆಯಲ್ಲಿ ಆನಂದ್ ಚಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯ ಸ್ಥಿತಿ ವಿಚಾರಿಸಲು ಪ್ರತಿದಿನವೂ ಆಶಾ ಭೋಸ್ಲೆಗೆ ಕರೆ ಮಾಡುತ್ತಿದ್ದಾರೆ.

    ಆಶಾ ಭೋಂಸ್ಲೆ ಅವರು ತಮ್ಮ ಮಗ ಕೆಳಗೆ ಬಿದ್ದು ಆಸ್ಪತ್ರೆಗೆ ಸೇರಿದಾಗ ದುಬೈನಲ್ಲಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಅವರು ಶೀಘ್ರದಲ್ಲೇ ಮುಂಬೈಗೆ ಹಿಂತಿರುಗುವುದಿಲ್ಲವಂತೆ. ಆನಂದ್ ಚೇತರಿಸಿಕೊಳ್ಳುತ್ತಿದ್ದು, ಮನೆಗೆ ಯಾವತ್ತು ತೆರಳಲಿದ್ದಾರೆ ಎನ್ನುವ ಮಾಹಿತಿ ಸದ್ಯಕ್ಕಿಲ್ಲ.

    ಈ ವರ್ಷದ ಆರಂಭದಲ್ಲಿ ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಅವರ ಹಠಾತ್ ನಿಧನದಿಂದಾಗಿ ಇಡೀ ರಾಷ್ಟ್ರಕ್ಕೆ ಮತ್ತು ಮಂಗೇಶ್ಕರ್ ಕುಟುಂಬಕ್ಕೆ ದೊಡ್ಡ ಆಘಾತವಾಗಿತ್ತು.

  • ಅದೃಷ್ಟದ ಗಾಯಕ: 150ಕ್ಕೂ ಹೆಚ್ಚು ಹುಡುಗಿರ ಪ್ರಪೋಸಲ್ ರಿಜೆಕ್ಟ್ ಮಾಡಿದ ಖ್ಯಾತ ಗಾಯಕ

    ಅದೃಷ್ಟದ ಗಾಯಕ: 150ಕ್ಕೂ ಹೆಚ್ಚು ಹುಡುಗಿರ ಪ್ರಪೋಸಲ್ ರಿಜೆಕ್ಟ್ ಮಾಡಿದ ಖ್ಯಾತ ಗಾಯಕ

    ಹಿಂದಿ ಫೇಮಸ್ ಸಿಂಗರ್ ಮಿಕಾ ಸಿಂಗ್ ಟಾಪ್ ಸೆಲೆಬ್ರಿಟಿಗಳಿಂದ ಸಾಮಾನ್ಯರ ಮದುವೆ ಇವೆಂಟ್‌ಗಳಿಗೆ ಇವರು ಇದ್ದೆ ಇರುತ್ತಾರೆ. ಆದರೆ ಇವರಿಗೆ ಇನ್ನು ಕಂಕಣಭಾಗ್ಯ ಕೂಡಿಬಂದಿಲ್ಲ. ಸಿಂಗ್ ಅವರಿಗೆ ಇಲ್ಲಿವರೆಗೂ ಮದುವೆಗಾಗಿ 150 ಹುಡುಗಿಯರ ಪ್ರಪೋಸಲ್ ಬಂದಿದ್ದರೂ, ಅವುಗಳಲ್ಲಿ ಯಾವುದನ್ನೂ ಒಪ್ಪಿಕೊಳ್ಳದೇ ರಿಜೆಕ್ಟ್ ಮಾಡಿದ್ದಾರೆ. ಈಗ ಸ್ವಯಂವರ ಶೋ ಮೂಲಕ ವಧು ಹುಡುಕಲು ಸಿದ್ಧವಾಗಿದ್ದಾರೆ.

    ಸಿಂಗ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಸಂಭ್ರಮದಲ್ಲಿ ಹಾಡುವ ನಿಮಗೆ ಮದುವೆ ಆಗಬೇಕು ಎಂಬ ಆಸೆಯಿಲ್ವ ಎಂದು ಕೇಳುತ್ತಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳ ಮಾತುಗಳಿಗೆ ಸ್ಪಂದಿಸಿದ ಸಿಂಗ್, ನನಗೂ ಹುಡುಗಿಯನ್ನು ಆಯ್ಕೆ ಮಾಡಬೇಕು ಎಂದು ಹಲವರಿಗೆ ಆಸೆ ಇದೆ. ಇದಕ್ಕಾಗಿ ನಾನು ಹಲವು ವರ್ಷ ಹುಡುಕಿದ್ದೇನೆ. ಈಗಲೂ ನನಗೆ ಆಫರ್ ಸಿಗುತ್ತಿರುವುದಕ್ಕೆ ಖುಷಿ ಇದೆ. ನಾನು 20 ವರ್ಷದಲ್ಲಿ ಸುಮಾರು 150 ಮದುವೆ ಪ್ರಪೋಷಲ್ ರಿಜೆಕ್ಟ್ ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ನೆಗೆಟಿವ್ ಗಾಸಿಪ್ ಹಬ್ಬಿತ್ತು
    ಆಗ ನನಗೆ ನನ್ನ ಕೆಲಸ ತುಂಬಾನೇ ಮುಖ್ಯವಾಗಿತ್ತು. ನನಗೆ ಪಾರ್ಟಿ ಮಾಡುವುದಕ್ಕೆ ಹುಡುಗಿಯ ಜೊತೆ ಸುತ್ತಾಡುವುದಕ್ಕೆ ಇಷ್ಟ. ಈ ಕಾರಣಕ್ಕೆ ನಾನು ಮದುವೆ ಆಗುತ್ತಿಲ್ಲ ಎಂಬ ಗಾಸಿಪ್ ಎಲ್ಲ ಕಡೆ ಹಬ್ಬಿತ್ತು. ಆದರೆ ಸತ್ಯ ಬೇರೆ ಇದೆ. ಮದುವೆ ಅಗುವುದಕ್ಕೆ ನನಗೆ ಧೈರ್ಯ ಇರಲಿಲ್ಲ. ಮನೆ ಹಿರಿಯರ ಬಗ್ಗೆ ಒಂದು ಬಗೆಯ ಗೌರವ ಹಾಗೂ ಭಯವಿದೆ. ಆದರೆ ಈಗ ನಾನು ಸ್ವಯಂವರದ ಹಿಂದಿ ಶೋ ಹೋಗಲು ನಮ್ಮ ಮನೆಯಲ್ಲಿಯೂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

    ನಾನು ಮದುವೆ ಆಗಲು ನಿರ್ಧಾರ ಮಾಡಿದಕ್ಕೆ ನನ್ನ ಕುಟುಂಬ ಖುಷಿ ಪಡುತ್ತಿದೆ. ಜನರನ್ನು ಭೇಟಿ ಮಾಡುವುದಕ್ಕೆ ನನಗೆ ಏನೂ ಸಮಸ್ಯೆ ಇಲ್ಲ. ನಾನು ಒಳ್ಳೆಯ ಮನಸ್ಸಿರುವ ಕೆಟ್ಟ ಹುಡುಗ. ಹೀಗಾಗಿ ಹೆಚ್ಚಿಗೆ ಫ್ಯಾನ್ಸ್ ಇದ್ದಾರೆ. ಕಲಾವಿದರು ತಮ್ಮ ಕಾರ್ಯಕ್ರಮಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ನಾನು ಯಾವುದನ್ನು ಪೋಸ್ಟ್ ಮಾಡಿಲ್ಲ. ಆದರೂ ಜನರು ನನ್ನ ಮೇಲೆ ಅಭಿಮಾನ ಇಟ್ಟಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.

    ಲವ್ ಮಾಡಿದ್ದೆ
    2001ರಲ್ಲಿ ನನಗೆ ಗರ್ಲ್ ಫ್ರೆಂಡ್ ಇದ್ದಳು. ಅವಳು ದೆಹಲಿ ಹುಡುಗಿಯಾಗಿದ್ದಳು. ನಾನು ಬಾಲಿವುಡ್ನಲ್ಲಿ ಇರುವುದಕ್ಕೆ ಆಕೆಯ ಪೋಷಕರು ನನ್ನನ್ನು ಇಷ್ಟಪಡಲಿಲ್ಲ. ಅದಕ್ಕೆ ರಿಜೆಕ್ಟ್ ಆಯ್ತು. ನನ್ನ ಕಷ್ಟದ ದಿನಗಳಲ್ಲಿ ಜೊತೆಗಿದ್ದ ಗರ್ಲ್ಫ್ರೆಂಡ್ ಬಾಲಿವುಡ್ ಹಾಗೆ ಹೀಗೆ ಎಂದು ಬಿಟ್ಟಳು. ನನ್ನ 2 ಮಾಜಿ ಗರ್ಲ್ಫ್ರೆಂಡ್‌ಗೆ ಮದುವೆ ಆಗಿದೆ. ನನ್ನ ಕೆಲಸ ಮತ್ತು ನನ್ನ ಪೋಷಕರನ್ನು ದೂರ ಮಾಡುವಂತ ಹುಡುಗಿ ನನಗೆ ಬೇಡ ಎಂದು ಮಾತನಾಡಿದರು. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಈಗ ನನಗೆ 44 ವರ್ಷ. ಒಳ್ಳೆ ಹುಡುಗಿ ಸಿಕ್ಕರೆ ಮದುವೆ ಆಗುವೆ ಇಲ್ಲದಿದ್ದರೆ ಒಂಟಿಯಾಗಿರುತ್ತೀನಿ. ನನಗೆ ಸಿಗುವ ಹುಡುಗಿ ಬಗ್ಗೆ ಹೆಚ್ಚಿಗೆ ಕನಸಿಲ್ಲ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಂತವರಾಗಿರಬೇಕು. ನಾವು ಅರ್ಥ ಮಾಡಿಸುವ ಅಗತ್ಯವಿಲ್ಲ ಹಾಗೆ ಅರ್ಥ ಮಾಡಿಕೊಳ್ಳುವಂತ ಹುಡುಗಿ ಬೇಕು ಎಂದ ಸಿಂಗ್.

  • ಹೌಸ್ ಪಾರ್ಟಿಯಲ್ಲಿ ರಾಪರ್ ಜತೆ  ಅದ್ವಿಕಾ

    ಹೌಸ್ ಪಾರ್ಟಿಯಲ್ಲಿ ರಾಪರ್ ಜತೆ ಅದ್ವಿಕಾ

    ರ‍್ಯಾಪರ್, ಸಿಂಗರ್​, ಕಂಪೋಸರ್​ ALL OK  ಅಲಿಯಾಸ್​ ಅಲೋಕ್​. ಇದೀಗ ಸದ್ದಿಲ್ಲದೆ ಮತ್ತೊಂದು ವಿಡಿಯೋ ಹಾಡನ್ನು ಹೊರತಂದಿದ್ದಾರೆ. ಅದರ ಹೆಸರು “ಹೌಸ್​ ಪಾರ್ಟಿ’. ಹಾಡಿನ ಬಗ್ಗೆ, ಶೂಟಿಂಗ್​ ಅನುಭವದ ಬಗ್ಗೆ ಸಂಗೀತ ನೀಡಿ, ಸಾಹಿತ್ಯ, ಪರಿಕಲ್ಪನೆ, ನಿರ್ದೇಶನ, ನಿರ್ಮಾಣವನ್ನೂ ಮಾಡಿರುವ ಅಲೋಕ್​ ಮಾತನಾಡುತ್ತಾ, ‘ಕೋವಿಡ್​ ಸಮಯದಲ್ಲಿನ ಕಾನ್ಸೆಪ್ಟ್​ವೊಂದರಿಂದ ಪ್ರೇರಣೆ ಪಡೆದು ಹೌಸ್​ ಪಾರ್ಟಿ ಹಾಡನ್ನು ಹೊರತಂದಿದ್ದೇನೆ.  ಮನೆಯಲ್ಲಿಯೇ ಇರಿ, ಅಲ್ಲಿಯೇ ಪಾರ್ಟಿ ಮಾಡಿ ಎಂಬುದನ್ನು ಕಲರ್ ಫುಲ್ ಆಗಿ ತೋರಿಸಿದ್ದೇವೆ. ಗೋಕರ್ಣದ ಕಹಾನಿ ಪ್ಯಾರಡೈಸ್​ ರೆಸಾರ್ಟ್​ನಲ್ಲಿ ಇಡೀ ಹಾಡಿನ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ . ಇದನ್ನೂ ಓದಿ : ದಪ್ಪಗಿರೋರಿಗೆ ‘ಸೂ’ ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ : ಹಿಗ್ಗಾಮುಗ್ಗ ಝಾಡಿಸಿದ ಗಾಳಿಪಟ ನೀತು

    ‘ಬೇರೆ ಭಾಷೆಗಳ ಆಲ್ಬಂಗಳಿಗೆ ಸಿಗುವ ರೆಸ್ಪಾನ್ಸ್​ ಕನ್ನಡದ ಆಲ್ಬಂ ಹಾಡುಗಳಿಗೆ ಸಿಗುತ್ತಿಲ್ಲ. ಆದರೆ, ನಮ್ಮ ಹಾಡುಗಳು ಬೇರಾವ ಭಾಷೆಗಿಂತಲೂ ಕಡಿಮೆಯಿಲ್ಲ. ಅದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ’ ಎಂದು ಅಲೋಕ್​ ಕಳವಳ ವ್ಯಕ್ತಪಡಿಸುತ್ತಾರೆ. ಇದನ್ನೂ ಓದಿ : ಶ್ರುತಿ ಹಾಸನ್ ಜತೆ ನನ್ನ ಮದುವೆ ಆಗಿದೆ: ಸ್ಫೋಟಕ ಮಾಹಿತಿ ಹಂಚಿಕೊಂಡ ಬಾಯ್ ಫ್ರೆಂಡ್

    ಈಗಾಗಲೇ ಕಿರಿಕ್​ ಶಂಕರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅದ್ವಿಕಾ  ಈ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. “ಇದು ನನ್ನ ಮೊದಲ ಆಲ್ಬಂ. ತುಂಬ ಖುಷಿ ಎನಿಸುತ್ತದೆ. ಆರಂಭದಲ್ಲಿಯೇ ಈ ರೀತಿಯ ಅವಕಾಶಗಳು ಸಿಗುತ್ತಿವೆ. ಎಲ್ಲಿಯೂ ನಮಗೆ ಶೂಟಿಂಗ್​ ಅನಿಸಲೇ ಇಲ್ಲ. ಪಾರ್ಟಿ ಮಾಡಿದ ಖುಷಿ ಆಯಿತು’ ಎನ್ನುತ್ತಾರೆ ಅದ್ವಿಕಾ.  ಈ ಆಲ್ಬಂ ಗೆ ಆಕಾಶ್​ ಜೋಷಿ ಛಾಯಾಗ್ರಹಣದ ಜತೆಗೆ ಸಂಕಲನವನ್ನೂ ಮಾಡಿದ್ದಾರೆ.

  • ಹೊಟ್ಟೆ ಪಾಡಿಗೆ ಫುಡ್ ಸ್ಟಾಲ್ ತೆರೆದ ಖ್ಯಾತ ಗಾಯಕಿ

    ಹೊಟ್ಟೆ ಪಾಡಿಗೆ ಫುಡ್ ಸ್ಟಾಲ್ ತೆರೆದ ಖ್ಯಾತ ಗಾಯಕಿ

    ಕೊರೊನಾ ಸೋಂಕಿನಿಂದ ಕೆಲವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಲವರು ತಾವು ಮಾಡುತ್ತಿದ್ದ ವೃತ್ತಿಯನ್ನು ಬಿಟ್ಟು ಹೊಟ್ಟೆಪಾಡಿಗೆ ಏನೇನೋ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ಗಾಯಕಿಯೊಬ್ಬಳು ಕೊರೊನಾ ಬಳಿಕ ಕೆಲಸವಿಲ್ಲದೆ ಫುಡ್ ಸ್ಟಾಲ್ ತೆರೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಗುಜರಾತ್‍ನ ಜಾಮ್‍ನಗರದಲ್ಲಿರುವ ಗಾಯಕಿ ಫುಡ್ ಸ್ಟಾಲ್ ತೆರೆದಿದ್ದಾರೆ. ಕೆಲಸವಿಲ್ಲದೆ ಕೆಲವು ಮಹಿಳೆಯರಿಗೆ ಕೆಲಸ ಕೊಟ್ಟು ಒಂದು ಫುಡ್ ಸ್ಟಾಲ್ ಶುರು ಮಾಡಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಹಾಡಲು ಎಲ್ಲೂ ಅವಕಾಶವಿಲ್ಲದೆ ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಫುಡ್ ಸ್ಟಾಲ್ ಶುರು ಮಾಡಿದೆ. ಅಂದಿನಿಂದ ಇಲ್ಲಿಯವರೆಗೂ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿದೆ. ನಾನು ಈಗ ಮೊದಲಿಗಿಂತಲೂ ಖುಷಿಯಾಗಿದ್ದೇನೆ. ಕೆಲಸವಿಲ್ಲದೆ ಕೆಲವು ಮಹಿಳೆಯರಿಗೆ ಕೆಲಸ ಕೊಟ್ಟು ಒಂದು ಫುಡ್ ಸ್ಟಾಲ್ ಶುರು ಮಾಡಿದ್ದೇನೆ ಎಂದು ಗಾಯಕಿ ಹೇಳಿದ್ದಾರೆ.  ಇದನ್ನೂ ಓದಿ: ಉಡ್ತಾ ಪಂಜಾಬ್‌ ಅಲ್ಲ, ಪ್ರಗತಿಪರ ಪಂಜಾಬ್‌: ಭಗವಂತ್‌ ಮಾನ್‌

    ತಮ್ಮ ನೋವನ್ನು ಶಕ್ತಿಯಾಗಿ ಪರಿವರ್ತಿಸುವ ಎಲ್ಲಾ ಮಹಿಳೆಯರಿಗೆ ಅಭಿನಂದನೆಗಳು ಎಂದು ನೆಟ್ಟಿಗರೊಬ್ಬರು ಇನ್‍ಸ್ಟಾಗ್ರಾಮ್‍ನಲ್ಲಿ ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಆಕೆಯ ಧ್ವನಿ ಅದ್ಭುತವಾಗಿದೆ. ಆಕೆಗೆ ಹಾಡಲು ಅವಕಾಶಗಳು ಸಿಗಬೇಕು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಗಾಯಕಿಯ ಈ ಕೆಲಸಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.