Tag: singer

  • ಹಾಲಿವುಡ್ ಖ್ಯಾತ ಗಾಯಕಿಯನ್ನು ಭೇಟಿ ಮಾಡಿದ ‘ನಾಟು ನಾಟು’ ಗಾಯಕ

    ಹಾಲಿವುಡ್ ಖ್ಯಾತ ಗಾಯಕಿಯನ್ನು ಭೇಟಿ ಮಾಡಿದ ‘ನಾಟು ನಾಟು’ ಗಾಯಕ

    ಖ್ಯಾತ ಪಾಪ್ ಗಾಯಕಿ ರಿಹನ್ನಾ (Rihanna) ಭೇಟಿ ಮಾಡಿ, ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ ನಾಟು ನಾಟು ಗೀತೆಯ ಗಾಯಕ ಕಾಲಭೈರವ. ಆ ಕ್ಷಣವನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಆಸ್ಕರ್ (Oscar) ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ‘ನಾಟು ನಾಟು’ (Natu Natu) ಗೀತೆಯನ್ನು ಹಾಡಲು ಅಮೆರಿಕಾಗೆ ಹೋಗಿದ್ದರು ಕಾಲಭೈರವ (Kalabhairava). ಈ ಕಾರ್ಯಕ್ರಮದಲ್ಲಿ ರಿಹನ್ನಾ ಕೂಡ ಭಾಗಿಯಾಗಿದ್ದರು.

    ರಿಹನ್ನಾ ಇದೀಗ ತುಂಬು ಗರ್ಭಿಣಿ. ಆದರೂ, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಭಾಗಿಯಾಗಿದ್ದಾರೆ. ಈಗಾಗಲೇ ಗಾಯನಕ್ಕಾಗಿ ಅವರು ಆಸ್ಕರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇಂತಹ ಗಾಯಕಿಯ ಜೊತೆ ನಾನು ಫೋಟೋ ತೆಗೆಸಿಕೊಂಡಿದ್ದು ಎಂದೂ ಮರೆಯದ ಸನ್ನಿವೇಶ ಎಂದು ಕಾಲಭೈರವ ಬರೆದುಕೊಂಡಿದ್ದಾರೆ ಮತ್ತು ಅವರ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಡಾಲಿ ನಟನೆಯ `ಹೊಯ್ಸಳ’ ಚಿತ್ರದ ಟೈಟಲ್ ಬದಲಾಗಿದ್ದೇಕೆ?

    ರಿಹನ್ನಾ ಹಾಲಿವುಡ್ ಕಂಡ ಅತ್ಯಂತ ಪ್ರತಿಭಾನ್ವಿತ ಗಾಯಕಿ. ಸ್ಟೇ ಸೇರಿದಂತೆ ಸಾವಿರಾರು ಹಾಡುಗಳನ್ನು ಅವರು ಹಾಡಿದ್ದಾರೆ. ಜಗತ್ತಿನ ಹೆಸರಾಂತ ಗಾಯಕಿಯರ ಪಟ್ಟಿಯಲ್ಲಿ ಅವರ ಹೆಸರು ಕೂಡ ಇದೆ. ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಆ ಅಭಿಮಾನಿಗಳಲ್ಲಿ ಕಾಲಭೈರವ ಕೂಡ ಒಬ್ಬರಂತೆ. ಅವರ ಅನೇಕ ಹಾಡುಗಳನ್ನು ಕಾಲಭೈರವ ಕೇಳಿದ್ದಾರಂತೆ.

  • ಗಾಯಕಿ ಮಂಗ್ಲಿಗೆ ನಾಯಕಿಯಾಗುವ ಕನಸು ಭಗ್ನ: ಅದಕ್ಕೆ ಕಾರಣ ಯಾರು?

    ಗಾಯಕಿ ಮಂಗ್ಲಿಗೆ ನಾಯಕಿಯಾಗುವ ಕನಸು ಭಗ್ನ: ಅದಕ್ಕೆ ಕಾರಣ ಯಾರು?

    ತೆಲುಗು ಚಿತ್ರರಂಗದ ಹೆಸರಾಂತ ಗಾಯಕಿ, ಕನ್ನಡದಲ್ಲೂ ಹಲವಾರು ಗೀತೆಗಳನ್ನು ಹಾಡಿರುವ ಮಂಗ್ಲಿ (Mangli), ‘ಪಾದರಾಯ’ (Padaraya) ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಬೇಕಿತ್ತು. ನಟ, ನಿರ್ದೇಶಕ ನಾಗಶೇಖರ್ (Nagasekhar) ನಾಯಕನಾಗಿ ನಟಿಸಲಿರುವ ಪಾದರಾಯ ಚಿತ್ರಕ್ಕೆ ಮಂಗ್ಲಿ ನಾಯಕಿಯಾಗಿ ಆಯ್ಕೆ ಕೂಡ ಆಗಿದ್ದರು. ಈ ಮಾಹಿತಿಯನ್ನು ಚಿತ್ರತಂಡ ಮತ್ತು ಸ್ವತಃ ಮಂಗ್ಲಿ ಕೂಡ ಹೇಳಿಕೊಂಡಿದ್ದರು. ಚಿತ್ರತಂಡದಲ್ಲಿ ಹಲವು ಬೆಳವಣಿಗೆಗೆಳು ನಡೆದಿವೆ. ಹಾಗಾಗಿ ಮಂಗ್ಲಿ ನಟನೆಯ ಮೊದಲ ಸಿನಿಮಾ ನಿಂತಿದೆ.

    ನಾಗಶೇಖರ್ ಮೇಲೆ ಹಲವು ಆರೋಪಗಳನ್ನು ಮಾಡಿರುವ ನಿರ್ದೇಶಕ ಡಿ.ಜೆ ಚಕ್ರವರ್ತಿ, ನಾಗಶೇಖರ್ ಜೊತೆ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಪಾದರಾಯ ಸಿನಿಮಾವನ್ನು ಬೇರೆಯವರ ಜೊತೆ ಮಾಡುವ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ‘ಪಾದರಾಯ ಸಿನಿಮಾವನ್ನು ನಾಗಶೇಖರ್ ಜೊತೆ ಮಾಡುವುದಿಲ್ಲ. ಹಾಗಾಗಿ ಮಂಗ್ಲಿ ಕುರಿತು ಸದ್ಯಕ್ಕೆ ಯಾವುದೇ ನಿರ್ಧಾರ ತಗೆದುಕೊಂಡಿಲ್ಲ. ನಿರ್ಮಾಪಕರು ಕೂಡ ಬದಲಾಗಲಿದ್ದಾರೆ. ನಾಯಕ ಯಾರು ಅನ್ನುವುದರ ಮೇಲೆ ನಾಯಕಿಯ ನಿರ್ಧಾರ ಆಗಲಿದೆ’ ಎಂದಿದ್ದಾರೆ ಚಕ್ರವರ್ತಿ. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

    ಪಾದರಾಯ ಚಿತ್ರಕ್ಕೆ ನಾಯಕ ಯಾರು ಎನ್ನುವುದರ ಮೇಲೆ ನಾಯಕಿಯ ತೀರ್ಮಾನ ಆಗುವುದಾಗಿ ಸ್ವತಃ ನಿರ್ದೇಶಕರೇ ಹೇಳಿರುವುದರಿಂದ ಮಂಗ್ಲಿ ಮುಂದಿನ ದಿನಗಳಲ್ಲಿ ಈ ಚಿತ್ರದಲ್ಲಿ ಇರುತ್ತಾರಾ ಎನ್ನುವುದು ಯಕ್ಷಪ್ರಶ್ನೆ. ಹಾಗಾಗಿ ಮಂಗ್ಲಿಗೆ ಪಾದರಾಯ ಮೊದಲ ಚಿತ್ರ ಆಗುವುದು ಬಹುತೇಕ ಅನುಮಾನ. ಕನ್ನಡದಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಅವರು, ಕನ್ನಡ ಚಿತ್ರೋದ್ಯಮದ ಮೂಲಕ ನಾಯಕಿಯೂ ಆಗಲಿದ್ದರು. ಸಹಜವಾಗಿಯೇ ಅದು ಅವರಿಗೆ ಖುಷಿ ತಂದಿತ್ತು.

    ನಾಗಶೇಖರ್ ಮತ್ತು ಚಕ್ರವರ್ತಿ ನಡುವೆ ಹಲವು ಬೆಳವಣಿಗೆಗಳು ನಡೆದಿವೆ. ಸ್ವತಃ ಚಕ್ರವರ್ತಿ ಚಂದ್ರಚೂಡ ಅವರೇ ಎರಡ್ಮೂರು ದಿನಗಳ ಹಿಂದೆ ಇದೇ ಸಿನಿಮಾದ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಪತ್ರವೊಂದನ್ನು ಬರೆದಿದ್ದರು. ಅದರಲ್ಲೂ ಕೂಡ ನಾಗಶೇಖರ್ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಆ ಎಲ್ಲ ಆರೋಪಗಳಿಗೂ ನಾನು ಈಗಲೂ ಬದ್ಧನಾಗಿದ್ದೇನೆ ಎನ್ನುವುದು ಅವರ ಮಾತು. ಹಾಗಂತ ಈ ಸಿನಿಮಾ ನಿಲ್ಲುವುದಿಲ್ಲ, ಬೇರೆ ನಿರ್ಮಾಪಕರೊಟ್ಟಿಗೆ ಸಿನಿಮಾ ಮಾಡುತ್ತೇನೆ ಎನ್ನುವುದು ಅವರ ಸ್ಪಷ್ಟನೆ. ಈ ಸಿನಿಮಾದಲ್ಲಿ ಮಂಗ್ಲಿ ಇರುತ್ತಾರಾ ಎನ್ನುವ ಕುತೂಹಲವೂ ಇದೆ.

  • ಖ್ಯಾತ ಗಾಯಕಿ ವಾಣಿ ಜಯರಾಂ ನಿಧನ

    ಖ್ಯಾತ ಗಾಯಕಿ ವಾಣಿ ಜಯರಾಂ ನಿಧನ

    ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ವಾಣಿ ಜಯರಾಂ (78) ನಿಧನರಾಗಿದ್ದಾರೆ. ಚೆನ್ನೈನ ನುಂಗಂಬಾಕ್ಕಂನ ಹಡ್ಡೋಸ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಅವರ ಹಣೆಗೆ ಗಾಯವಾಗಿದ್ದು, ಇದೊಂದು ನಿಗೂಢ ಸಾವು ಎಂದು ಬಣ್ಣಿಸಲಾಗುತ್ತಿದೆ.

    ಕನ್ನಡವೂ ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಿಗೆ ಹಾಡಿದ ಹೆಗ್ಗಳಿಕೆ ಇವರದ್ದು. 1974ರಲ್ಲಿ ಪೋಷ್ಸುಮಂಗಲಿ ಚಿತ್ರದ ಮೂಲಕ ಗಾಯಕಿಯಾಗಿ ಸಿನಿಮಾ ರಂಗ ಪ್ರವೇಶಿಸಿದ್ದ ಅವರು ಹತ್ತು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಈ ಗೀತೆಗಳಿಗಾಗಿಯೇ ಅವರಿಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ. ಮೊನ್ನೆಯಷ್ಟೇ ಕೇಂದ್ರ ಸರಕಾರ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮ ಭೂಷಣವನ್ನೂ ಘೋಷಿಸಿದೆ. ಇದನ್ನೂ ಓದಿ:ಬಾಲಿವುಡ್‌ನ `ಸಿಟಾಡೆಲ್’ ಸೀರಿಸ್ ಒಪ್ಪಿಕೊಂಡಿದ್ಯಾಕೆ? ಕಾರಣ ಬಿಚ್ಚಿಟ್ಟ ಸಮಂತಾ

    ಹುಟ್ಟಿದ್ದು ತಮಿಳುನಾಡಿನ ವೆಲ್ಲೋರ್ ನಲ್ಲಿ. ಬಾಲ್ಯದಿಂದಲೇ ಸಂಗೀತ ಅಭ್ಯಾಸ ಮಾಡಿದ್ದ ಅವರು, ನಂತರ ಮದ್ರಾಸ್ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದವರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲೂ ಕೆಲಸ ಮಾಡಿದರು. ಮದುವೆಯ ನಂತರ ಮತ್ತು ಮುಂಬೈನಲ್ಲಿ ಅವರು ನೆಲೆಯೂರಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದರು.

    ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಓಡಿಯಾ, ಗುಜರಾತಿ, ಬಂಗಾಳಿ ಸೇರಿದಂತೆ ಭಾರತೀಯ ನಾನಾ ಭಾಷೆಗಳ ಸಿನಿಮಾಗಳಿಗೆ ಹಾಡಿದ ಹೆಗ್ಗಳಿಕೆ ಇವರದ್ದು.   ಕನ್ನಡದಲ್ಲಿ ಅನುಭವ, ರಣರಂಗ, ಶಿವ ಮೆಚ್ಚಿದ ಕಣ್ಣಪ್ಪ, ಒಲವಿನ ಉಡುಗೊರೆ, ಮಲಯ ಮಾರುತ ಸೇರಿದಂತೆ ಐವತ್ತಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಅನಂತ್ ನಾಗ್ ಸೇರಿದಂತೆ ಹೆಸರಾಂತ ಕಲಾವಿದರ ಚಿತ್ರಕ್ಕೆ ಹಾಡಿದ ಹೆಗ್ಗಳಿಕೆ ಇವರದ್ದು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೈಕಲ್ ಜಾಕ್ಸನ್ ಮಾಜಿ ಪತ್ನಿ ಗಾಯಕಿ ಲೀಸಾ ನಿಧನ

    ಮೈಕಲ್ ಜಾಕ್ಸನ್ ಮಾಜಿ ಪತ್ನಿ ಗಾಯಕಿ ಲೀಸಾ ನಿಧನ

    ಸಂಗೀತ ಲೋಕದ ಖ್ಯಾತ ಗಾಯಕಿ ಎಲ್ವಿಸ್ ಪ್ರೆಸ್ಲಿ ಪುತ್ರಿ ಲೀಸಾ (Lisa Marie Presley) ಜನವರಿ 12ರಂದು ನಿಧನರಾಗಿದ್ದಾರೆ. ಮೈಕಲ್‌ ಜಾಕ್ಸನ್‌ ಮಾಜಿ ಪತ್ನಿ ಗಾಯಕಿ ಲೀಸಾ ಮೇರಿ ಪ್ರೆಸ್ಲಿ ಹೃದಯಾಘಾತದಿಂದ (Death) ಮೃತಪಟ್ಟಿದ್ದಾರೆ. 54ನೇ ವಯಸ್ಸಿಗೆ ಲೀಸಾ ಇಹಲೋಕ ತ್ಯಜಿಸಿದ್ದಾರೆ.

    ಮೈಕಲ್‌ ಜಾಕ್ಸನ್‌ ಮಾಜಿ ಪತ್ನಿ ಲೀಸಾ ಅವರು ಲಾಸ್ ಏಂಜಲೀಸ್‌ನ ಮನೆಯಲ್ಲಿದ್ದರು. ಈ ವೇಳೆ ಅವರಿಗೆ ಹೃದಯಾಘಾತ (Heart Attack) ಆಗಿದೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಲೀಸಾ ಅವರ ಮರಣ, ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

    1968ರಲ್ಲಿ ಲೀಸಾ ಅವರು ಜನಿಸಿದರು. ಅವರು ಜನಿಸಿದ ಕೆಲವೇ ವರ್ಷಗಳಲ್ಲಿ ತಂದೆ ಎಲ್ವಿಸ್ ನಿಧನರಾದರು. 2023ರಲ್ಲಿ ಲೀಸಾ ಸಂಗೀತ ಲೋಕಕ್ಕೆ ಕಾಲಿಟ್ಟರು. ಲೀಸಾ ಅವರು ಹಾಡಿರುವ ಸಾಕಷ್ಟು ಆಲ್ಬಂ ಸೂಪರ್ ಹಿಟ್ ಆಗಿದೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಇನ್ನೂ ಲೀಸಾ ನಾಲ್ಕು ಬಾರಿ ಮದುವೆ ಆಗಿದ್ದರು. 1988ರಲ್ಲಿ ಡ್ಯಾನಿಯನ್ನು ಮದುವೆ ಆದರು. 1994ರಲ್ಲಿ ಇವರ ವಿಚ್ಛೇದನ ಆಯಿತು. ಅದಾದ ಕೇವಲ 20 ದಿನಕ್ಕೆ ಮೈಕಲ್ ಜಾಕ್ಸನ್ ಅವರನ್ನು ಲೀಸಾ ಮದುವೆ ಆದರು ಇವರು ಎರಡು ವರ್ಷ ಸಂಸಾರ ನಡೆಸಿದರು. ನಿಕೋಲಸ್ ಕೇಜ್ (2002-2004), ಮೈಕಲ್ ಲಾಕ್‌ವುಡ್ (2006-2021) ಜೊತೆ ಲೀಸಾ ಸಂಸಾರ ನಡೆಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಗಾಯಕಿ ಮಂಗ್ಲಿ

    ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಗಾಯಕಿ ಮಂಗ್ಲಿ

    ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹೇಳಿರುವ ಮಂಗ್ಲಿ, ಇದೀಗ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಗಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಈ ಗಾಯಕಿ, ಮೊದಲ ಬಾರಿಗೆ ನಾಯಕಿಯಾಗಿ ಪ್ರವೇಶ ಮಾಡುತ್ತಿದ್ದಾರೆ. ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ನಿರ್ದೇಶನದಲ್ಲಿ ಮೂಡಿ ಬರಲಿರುವ ಪಾದರಾಯ ಚಿತ್ರಕ್ಕೆ ಇವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಸದ್ಯ ವೇದ ಸಿನಿಮಾದ ‘ಗಿಲ್ಲಕ್ಕೋ’ ಹಾಡಿನ ಮೂಲಕ ಮನೆಮಾತಾಗಿರುವ ಮಂಗ್ಲಿ, ತ್ರಿಬಲ್ ರೈಡಿಂಗ್, ವಿಕ್ರಾಂತ್ ರೋಣ, ದಿಪ್ ಪಸಂದ್, ರಾಬರ್ಟ್ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳ ಹಾಡಿಗೆ ದನಿಯಾಗಿದ್ದಾರೆ. ಅಷ್ಟೂ ಹಾಡುಗಳು ಸೂಪರ್ ಹಿಟ್ ಎನ್ನುವುದು ವಿಶೇಷ. ಇದೇ ಮೊದಲ ಬಾರಿಗೆ ಅವರು ನಾಯಕಿಯಾಗಿ ನಟಿಸುತ್ತಿದ್ದು, ನಾಗಶೇಖರ್ ಈ ಸಿನಿಮಾದ ನಾಯಕ. ಇದನ್ನೂ ಓದಿ: ಸಂಕ್ರಾಂತಿ ಹಾಡಿಗೆ ಸುಂದರಿಯರ ಜೊತೆ ಕುಣಿದ ರಮೇಶ್ ಅರವಿಂದ್

    ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದು, 2013-14ರಲ್ಲಿ ನಡೆದ ಘಟನೆಯನ್ನು ಚಿತ್ರವಾಗಿಸುತ್ತಿದ್ದಾರೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ. ಈ ಘಟನೆಯು ಆರು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದ್ದು, ಅದನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿರುವ ಅವರು, ಈ ಚಿತ್ರಕ್ಕೆ ಪಾದರಾಯ ಎಂದು ಹೆಸರಿಡುವುದಕ್ಕೂ ಕಾರಣವಿದೆಯಂತೆ. ಅದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುತ್ತಾರೆ.

    ಈಗಾಗಲೇ ಪಾತ್ರಕ್ಕಾಗಿ ನಾಗಶೇಖರ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಯಾರಿಗಾಗಿಯೇ ಅವರು ಹಲವು ದಿನಗಳಿಂದ ಅಂಜನಾದ್ರಿ ಬೆಟ್ಟದಲ್ಲಿ ಬೀಡುಬಿಟ್ಟಿದ್ದಾರಂತೆ. ಈ ಬೆಟ್ಟದಲ್ಲಿ ನಡೆಯುವ ಪೂಜ ಪುನಸ್ಕಾರಗಳಲ್ಲೂ ಅವರು ಭಾಗಿಯಾಗಿದ್ದಾರೆ. ಅಲ್ಲದೇ, ಹನುಮನ ಮಾಲೆಯನ್ನೂ ಧರಿಸಿ, ಅಲ್ಲಿನ ಆಚಾರ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಜಬ್‌ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ

    ಹಿಜಬ್‌ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ

    ಟೆಹರಾನ್‌: ಇರಾನಿನಾದ್ಯಂತ ಮಹಿಳೆಯರು ಹಿಜಬ್‌ (Hijab) ಧರಿಸದೇ ತಮ್ಮ ತಲೆ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಟರ್ಕಿಯ (Turkey) ಪ್ರಸಿದ್ಧ ಗಾಯಕಿ (Singer) ವೇದಿಕೆಯಲ್ಲಿ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

    ಟರ್ಕಿಶ್‌ನ ಪ್ರಸಿದ್ಧ ಗಾಯಕಿ ಮಾಲೆಕ್‌ ಮೊಸ್ಸೋ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಪ್ರದರ್ಶನದ ಸಮಯದಲ್ಲಿ ಪ್ರೇಕ್ಷಕರು ಗಾಯಕಿಯನ್ನು ಶ್ಲಾಘಿಸಿದಾಗ ಮೆಲೆಕ್ ಮೊಸ್ಸೊ ತಮ್ಮ ಕೂದಲನ್ನು ಕತ್ತರಿಸಿಕೊಂಡು ಇರಾನ್‌ ಮಹಿಳೆಯರ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

    ಮೊಸ್ಸೊ ಅವರು ಮಹಿಳಾ ಹಕ್ಕುಗಳ ಬೆಂಬಲಕ್ಕಾಗಿ ಈಗಾಗಲೇ ಅನೇಕ ಬಾರಿ ಹೋರಾಡಿದ್ದಾರೆ. 2020ರಲ್ಲಿ ಟರ್ಕಿಯಲ್ಲಿ ಅತ್ಯಾಚಾರಿ ಪೊಲೀಸ್ ಅಧಿಕಾರಿಯ ಬಿಡುಗಡೆ ಕುರಿತು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಗಾಯಕಿಯನ್ನು ವೇದಿಕೆಯಿಂದ ಕೆಳಗಿಳಿಸಲಾಗಿತ್ತು. ಈ ಬಗ್ಗೆ ಮಾತನಾಡಿ, ಈ ಅತ್ಯಾಚಾರ ಮತ್ತು ಕೊಲೆಗಳ ವಿರುದ್ಧ ಮಾತನಾಡಿದ್ದಕ್ಕಾಗಿ ನನ್ನನ್ನು ವೇದಿಕೆಯಿಂದ ಕೆಳಗಿಳಿಸಲಾಗಿದೆ. ಇದು ಯಾವ ರೀತಿಯ ವ್ಯವಸ್ಥೆ ಎಂದು ಕಿಡಿಕಾರಿದ್ದರು.

    ಹಿಜಬ್‌ ಧರಿಸಿಲ್ಲ ಎಂಬ ಕಾರಣಕ್ಕೆ 22 ವಯಸ್ಸಿನ ಯುವತಿ (Iranian Women) ಮಹ್ಸಾ ಆಮಿನಿ (Mahsa Amini), ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿದ್ದಳು. ಆಕೆಯನ್ನು ಹಿಜಬ್‌ಧಾರಿ ಮಹಿಳೆಯರೇ ಥಳಿಸಿದ್ದರು. ನಂತರ ಬಲವಂತವಾಗಿ ಪೊಲೀಸರು ಕಾರಿಗೆ ನೂಕಿ ದೌರ್ಜನ್ಯ ನಡೆಸಿದ್ದರು. ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಸಾವನ್ನಪ್ಪಿದ್ದಳು. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ – 60 ಮಹಿಳೆಯರು ಸೇರಿ 700ಕ್ಕೂ ಹೆಚ್ಚು ಮಂದಿ ಅರೆಸ್ಟ್

    ಇದನ್ನು ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಬುಧವಾರ ಹನ್ನೆರಡನೇ ದಿನಕ್ಕೆ ಕಾಲಿಟ್ಟಿದೆ. ಈ ಹಿಂಸಾತ್ಮಕ ಪ್ರತಿಭಟನೆಯಲ್ಲಿ (Protest), 700ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಇದನ್ನೂ ಓದಿ: ಪತ್ರಕರ್ತೆ ಹಿಜಬ್ ಧರಿಸದ್ದಕ್ಕೆ ಸಂದರ್ಶನವನ್ನೇ ರದ್ದುಗೊಳಿಸಿದ ಇರಾನ್ ಅಧ್ಯಕ್ಷ

    Live Tv
    [brid partner=56869869 player=32851 video=960834 autoplay=true]

  • ‘ಸರಿಗಮಪ’ ಹನುಮಂತುಗೆ ಪ್ರಪೋಸ್ ಮಾಡಿದ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು

    ‘ಸರಿಗಮಪ’ ಹನುಮಂತುಗೆ ಪ್ರಪೋಸ್ ಮಾಡಿದ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು

    ರಿಗಮಪ (Sarigamapa) ಖ್ಯಾತಿಯ ಹನುಮಂತುಗೆ (Hanumantu) ಮದುವೆ ಯಾವಾಗ ಎನ್ನುವ ಪ್ರಶ್ನೆ ಅನೇಕ ಸಲ ಕೇಳಿ ಬಂದಿದೆ. ಹಲವು ಬಾರಿ ಗಾಸಿಪ್ ಮೂಲಕ ಈ ದೇಸಿ ಗಾಯಕನ ಮದುವೆಯನ್ನು ಕೂಡ ಮಾಡಿದ್ದಾರೆ. ಇಂಥದ್ದೊಂದು ಸುದ್ದಿ ಆದಾಗ ನಾಚೂತ್ತಲೇ ಹನುಮಂತು ನಿರಾಕರಿಸಿದ್ದಾರೆ. ಈ ಹುಡುಗನ ಮದುವೆ ಆಗುವ ಹುಡುಗಿ ಹೇಗಿರಬಹುದು? ಯಾರೆಲ್ಲ ಪ್ರಪೋಸ್ ಮಾಡಬಹುದು ಎನ್ನುವ ಕುತೂಹಲವಂತೂ ಇದ್ದೇ ಇದೆ. ಜೀ ಕನ್ನಡದ ವೇದಿಕೆಯ ಮೇಲೆ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು ಪ್ರಪೋಸ್ ಮಾಡಿದ್ದಾರೆ.

    ರಿಯಾಲಿಟಿ ಶೋ ನಲ್ಲಿ ನಿಶ್ವಿಕಾ ನಾಯ್ಡು (Nishvika Naidu) ಅತಿಥಿಯಾಗಿ ಬಂದಿದ್ದರು. ಅದೇ ವೇದಿಕೆಯಲ್ಲಿ ಹನುಮಂತು ಕೂಡ ರಾಕಿಭಾಯ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆಯಲ್ಲಿ ನಿರೂಪಕಿ ಶ್ವೇತಾ ಚಂಗಪ್ಪ ಗೆಸ್ಟ್ ಚೇರ್ ಮೇಲೆ ಕೂತಿದ್ದ ನಿಶ್ವಿಕಾನ ತೋರಿಸುತ್ತಾ, ಇಂತಹ ಸುಂದರ  ಹುಡುಗಿ ಕಂಡರೆ ಏನನಿಸುತ್ತದೆ ಎಂದು ಕೇಳಿದರು. ಆಗ ನಿಶ್ವಿಕಾ ಹಾರ್ಟ್ ಸಿಂಬಲ್ ತೋರಿಸುತ್ತಾ, ಪ್ರಪೋಸ್ (Propose) ಮಾಡಿದರು. ಅಲ್ಲದೇ, ನನಗಾಗಿ ಒಂದು ರೋಮ್ಯಾಂಟಿಕ್ ಸಾಂಗ್ ಹಾಡು ಎಂದು ನಿವೇದನೆ ಮಾಡಿದರು. ಅದಕ್ಕೆ ಹನುಮಂತು ನಾಚುತ್ತಲೇ ರಿಯ್ಯಾಕ್ಟ್ ಮಾಡಿದರು.

    ನಿಶ್ವಿಕಾ ನಾಯ್ಡು ರೋಮ್ಯಾಂಟಿಕ್ ಗೀತೆ (Singer) ಹೇಳಲು ಹೇಳಿದರೆ, ಭಜನಿ ಪದ ಹಾಡುತ್ತೇನೆ ಎಂದು ಉತ್ತರಿಸಿದರು ಹನುಮಂತು. ರೋಮ್ಯಾಂಟಿಕ್ ಆಗಿ ಮಾತನಾಡುವುದು ಹೇಗೆ ಗೊತ್ತಾ? ಎಂದು ನಿಶ್ವಿಕಾ ನಾಯ್ಡು ಕೇಳಿದರು. ಹನುಮಂತು ಇಲ್ಲವೆಂದರು. ಹಾಗಾದರೆ, ನಾನು ಹೇಳಿ ಕೊಡಲಾ? ಎಂದು ಮತ್ತೆ ಪ್ರಶ್ನೆ ಮಾಡಿದರು ನಿಶ್ವಿಕಾ. ಹೇಳಿಕೊಡು ‘ಅಕ್ಕಾ’ ಎನ್ನುತ್ತಾ ನಿಶ್ವಿಕಾ ಅವರ ರೋಮ್ಯಾಂಟಿಕ್ ಮೂಡ್ ಅನ್ನೇ ಹಾಳು ಮಾಡಿದರು.

    ಆದರೂ, ನಿಶ್ವಿಕಾಗಾಗಿ ಹನುಮಂತು ಹಾಡುತ್ತಾ, ‘ಸಂಸಾರ’ ಅಷ್ಟೊಂದು ಸಲೀಸಲ್ಲ. ಕೇಳು ಅಕ್ಕ ಎನ್ನುವ ಅರ್ಥದಲ್ಲಿ ಭಜನೆ ಪದವೊಂದನ್ನು ಹೇಳಿದರು. ಈ ಹಾಡು ಕೇಳುತ್ತಲೇ ಕೂತಲ್ಲಿಯೇ ನಿದ್ದೆಗೆ ಜಾರಿದರು ನಿಶ್ವಿಕಾ. ಇದೊಂದು ರೀತಿಯಲ್ಲಿ ಫನ್ನಿ ಫನ್ನಿಯಾಗಿಯೇ ವೇದಿಕೆಯ ಮೇಲೆ ನಡೆಯಿತು. ಆದರೆ, ಅದೇ ಮುಗ್ಧತೆಯಲ್ಲೇ ಹನುಮಂತು ವೇದಿಕೆಯ ಮೇಲಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಿರ್ಜನ ಪ್ರದೇಶದಲ್ಲಿ ಅವರದ್ದೇ ಕಾರಿನಲ್ಲಿ ಸಿಕ್ಕಿದೆ ಜನಪ್ರಿಯ ಗಾಯಕಿ ವೈಶಾಲಿ ಮೃತದೇಹ

    ನಿರ್ಜನ ಪ್ರದೇಶದಲ್ಲಿ ಅವರದ್ದೇ ಕಾರಿನಲ್ಲಿ ಸಿಕ್ಕಿದೆ ಜನಪ್ರಿಯ ಗಾಯಕಿ ವೈಶಾಲಿ ಮೃತದೇಹ

    ಗುಜರಾತ್ ನ ಜನಪ್ರಿಯ ಗಾಯಕಿ, ನಟಿಯೂ ಆಗಿದ್ದ ವೈಶಾಲಿ ಬುಲ್ಸಾರ್ ಕಾಣೆಯಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ನನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ವೈಶಾಲಿ ಪತಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವೈಶಾಲಿಗಾಗಿ ಹುಡುಕಾಟ ನಡೆಸಿದ್ದರು. ಕೊನೆಗೂ ವೈಶಾಲಿ ಹೆಣವಾಗಿ ದೊರೆತಿದ್ದಾರೆ. ಗುರಜಾರ್ ನ ಪರ್ಡಿ ತಾಲ್ಲೂಕಿನ ನಿರ್ಜನ ಪ್ರದೇಶವೊಂದರಲ್ಲಿ ನಿಂತಿದ್ದ ಅವರದ್ದೇ ಕಾರಿನಲ್ಲಿ ಅವರ ಮೃತದೇಹ ಸಿಕ್ಕಿದೆ.

    ವೈಶಾಲಿಯ ಕಾರು ವಲ್ಸಾಡ್ ಜಿಲ್ಲೆಯ ಪರ್ಡಿ ತಾಲ್ಲೂಕಿನ ಪಾರ್ ನದಿ ತೀರದಲ್ಲಿನ ನಿರ್ಜನ ಪ್ರದೇಶದಲ್ಲಿ ಕಂಡಿದ್ದು, ಕಾರು ನೋಡಿದ್ದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಕಾರಿನ ಹಿಂಬದಿಯ ಸೀಟಿನಲ್ಲಿ ವೈಶಾಲಿಯ ಮೃತದೇಹ ದೊರೆತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆರ್ಯವರ್ಧನ್ ಗುರೂಜಿಯವರಲ್ಲಿ ಅಪ್ಪನ ಪ್ರೀತಿ ಕಂಡೆ: ರೂಪೇಶ್ ಭಾವುಕ

    ಪೊಲೀಸರ ಮಾಹಿತಿ ಪ್ರಕಾರ, ಗಾಯಕಿಯನ್ನು ಉಸಿರುಗಟ್ಟಿಸಿ ಕೊಂದಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಆಕೆಯ ಮೈಮೇಲೆ ಯಾವುದೇ ಗಾಯಗಳಿಲ್ಲ ಎಂದಿದ್ದಾರೆ. ಅಲ್ಲದೇ, ಸಾಯುವ ಸಂದರ್ಭದಲ್ಲಿ ಯಾವುದೇ ಪ್ರತಿರೋಧ ತೋರಿಸಿದ ಕುರುಹುಗಳೂ ಕಾಣುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪತಿಯ ಹೇಳಿಕೆ ಪ್ರಕಾರ ವಲ್ಸಾಡ್ ನ ತಮ್ಮ ಮನೆಯಿಂದ ಹೊರಡುವಾಗ ಸ್ಥಳಿಯ ಅಯ್ಯಪ್ಪ ದೇವಸ್ಥಾನದ ಬಳಿ ಗೆಳೆಯರನ್ನು ಕಾಣಲು ಹೋಗುತ್ತಿರುವುದಾಗಿ ತಿಳಿಸಿದ್ದರಂತೆ ವೈಶಾಲಿ. ಆನಂತರ ಮನೆಗೆ ಬಾರದ ಹಿನ್ನೆಲೆಯಲ್ಲಿ ಪತಿ ದೂರು ದಾಖಲಿಸಿದ್ದರು. ಗಾಯಕಿಯಷ್ಟೇ ಅಲ್ಲ, ಸಂಗೀತ ಶಾಲೆಯನ್ನೂ ವೈಶಾಲಿ ನಡೆಸುತ್ತಿದ್ದು, ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದರು.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಸ್ಪರ್ಧಿ ಸಪ್ನಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ: ಬಂಧಿಸಲು ಕಾಯುತ್ತಿರುವ ಪೊಲೀಸರು

    ‘ಬಿಗ್ ಬಾಸ್’ ಸ್ಪರ್ಧಿ ಸಪ್ನಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ: ಬಂಧಿಸಲು ಕಾಯುತ್ತಿರುವ ಪೊಲೀಸರು

    ಖ್ಯಾತ ಗಾಯಕಿ, ಡಾನ್ಸರ್ ಆಗಿರುವ ಹರ್ಯಾಣದ ಸಪ್ನಾ ಚೌಧರಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಅವರನ್ನು ಬಂಧಿಸಲು ಲಕ್ನೋ ಪೊಲೀಸರು ಹರ್ಯಾಣಗೆ ಪ್ರಯಾಣ ಬೆಳೆಸಿದ್ದಾರೆ. ನ್ಯಾಯಾಲಯಕ್ಕೆ ಗೈರಾಗಿದ್ದರಿಂದ ಬಂಧಿಸುವಂತೆ ನ್ಯಾಯಾಲಯವು ವಾರೆಂಟ್ ಹೊರಡಿಸಲಾಗಿದೆ. ಯುಪಿ ಪೊಲೀಸ್ ತಂಡ ಇಂದು ಅಥವಾ ನಾಳೆ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ನೃತ್ಯ ಕಾರ್ಯಕ್ರಮವೊಂದನ್ನು ಒಪ್ಪಿಕೊಂಡು, ಮುಗಂಡ ಹಣ ಪಡೆದು ಕಾರ್ಯಕ್ರವನ್ನು ನೀಡದೆ ವಂಚಿಸಿದ್ದಾರೆ ಎಂದು ಅವರ ಮೇಲೆ ದೂರು ದಾಖಲಾಗಿತ್ತು. ಈ ದೂರಿಗೆ ಸಂಬಂಧಿಸಿದಂತೆ ಸಪ್ನಾ ಚೌಧರಿ ವಿರುದ್ಧ ಎಸಿಜೆಎಂ ನ್ಯಾಯಾಲಯವು ಸೋಮವಾರ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ನ್ಯಾಯಾಲಯಕ್ಕೆ ಹಾಜರಾಗದೇ, ತಮ್ಮ ಪರವಾಗಿಯೂ ಯಾರೂ ಅರ್ಜಿ ಸಲ್ಲಿಸದೇ ಇರುವ ಕಾರಣಕ್ಕಾಗಿ ನ್ಯಾಯಾಲಯವು ಈ ನಿಲುವು ತೆಳೆದಿದೆ. ಅಲ್ಲದೇ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ಶಾಂತನು  ತ್ಯಾಗಿ ಅವರು ಮುಂದಿನ ವಿಚಾರಣೆಯನ್ನು ಸೆ.30ಕ್ಕೆ ನಿಗದಿಪಡಿಸಿದ್ದಾರೆ. ಈ ಕೇಸಿಗೆ ಸಂಬಂಧಿಸಿದಂತೆ ನವೆಂಬರ್ 2021ರಲ್ಲೂ ಇದೇ ನ್ಯಾಯಾಲಯವು ಬಂಧನ ವಾರೆಂಟ್ ಜಾರಿ ಮಾಡಿತ್ತು. ಆಗ ಸಪ್ನಾ ಜಾಮೀನು ಪಡೆದುಕೊಂಡಿದ್ದರು. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

    ಸಂಸ್ಥೆಯೊಂದಕ್ಕೆ ಕಾರ್ಯಕ್ರಮ ಕೊಡಲು ಒಪ್ಪಿಕೊಂಡಿದ್ದ ಸಪ್ನಾ ಚೌಧರಿ ಆ ಒಪ್ಪಂದನ್ನು ಮುರಿದಿದ್ದಾರಂತೆ. ಅಲ್ಲದೇ, ಪಡೆದ ಹಣವನ್ನೂ ವಾಪಸ್ಸು ನೀಡಿಲ್ಲ. ಒಪ್ಪಂದ ಪ್ರಕಾರ ಅವರು ಗ್ರಾಹಕರ ಜೊತೆ ನೇರ ಸಂಪರ್ಕ ಇಟ್ಟುಕೊಳ್ಳಬಾರದು ಮತ್ತು ಒಪ್ಪಂದಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು ಎನ್ನುವ ನಿಯಮವಿತ್ತು ಎಂದು ಹೇಳಲಾಗಿತ್ತು. ಅದನ್ನು ಅವರು ಮುರಿದಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಈ ಸಪ್ನ ಹಿಂದಿಯ ಬಿಗ್ ಬಾಸ್ ಸೀಸನ್ 11ರಲ್ಲೂ ಭಾಗಿಯಾಗಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ಖ್ಯಾತ ಗಾಯಕನ ಮೇಲೆ ಮತ್ತೆ ರೇಪ್ ಆರೋಪ: ಎಫ್.ಐ.ಆರ್ ದಾಖಲು

    ಬಾಲಿವುಡ್ ಖ್ಯಾತ ಗಾಯಕನ ಮೇಲೆ ಮತ್ತೆ ರೇಪ್ ಆರೋಪ: ಎಫ್.ಐ.ಆರ್ ದಾಖಲು

    ರಿಯಾಲಿಟಿ ಶೋ ಮೂಲಕ ಗಾಯನ ಪ್ರಪಂಚಕ್ಕೆ ಪರಿಚಯವಾದ, ಇದೀಗ ಬಾಲಿವುಡ್ ನಲ್ಲಿ ಸಖತ್ ಫೇಮಸ್ಸೂ ಆಗಿರುವ ಸಿಂಗರ್ ರಾಹುಲ್ ಜೈನ್ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಕೆಲಸದ ನೆಪದಲ್ಲಿ ರಾಹುಲ್ ಜೈನ್, ಮಹಿಳೆಯೊಬ್ಬರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಅತ್ಯಾಚಾರ ಎಸೆಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ರಾಹುಲ್ ಮೇಲೆ ಅವರು ದೂರನ್ನೂ ದಾಖಲಿಸಿದ್ದಾರೆ.

    ನಾನು ಅನೇಕ ಸೆಲೆಬ್ರಿಟಿಗಳಿಗೆ ಕಾಸ್ಟ್ಯೂಮ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತೇನೆ. ಇದೇ ಆಗಸ್ಟ್ 11 ರಂದು ರಾಹುಲ್ ಜೈನ್, ತಮಗೂ ಪರ್ಸನಲ್ ಆಗಿ ಕಾಸ್ಟ್ಯೂಮ್ ಡಿಸೈನ್ ಮಾಡಬೇಕು ಎಂದು ಕೆಲಸದ ನೆಪದಲ್ಲಿ ನನ್ನನ್ನು ತಮ್ಮ ಫ್ಲ್ಯಾಟ್ ಗೆ ಕರೆದರು. ಅವರ ಮಾತನ್ನು ನಿಜವೆಂದು ನಂಬಿಕೊಂಡು ನಾನೂ ಹೋದೆ. ಅವರು ನನ್ನನ್ನು ತಮ್ಮ ಬೆಡ್ ರೂಮ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾರೆ ಎಂದು ಮುಂಬೈನಲ್ಲಿ ಮಹಿಳೆ ದೂರು ನೀಡಿದ್ದಾರೆ. ಈ ಕುರಿತಂತೆ ಈಗಾಗಲೇ ಮುಂಬೈ ಪೊಲೀಸ್ ತನಿಖೆಗೆ ಇಳಿದಿದ್ದಾರೆ. ಇದನ್ನೂ ಓದಿ:Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

    ಈ ಕುರಿತು ರಾಹುಲ್ ಜೈನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಮಹಿಳೆಯರು ನನ್ನ ಮೇಲೆ ಈ ರೀತಿಯ ದೂರು ನೀಡುವುದು ಹೊಸದಲ್ಲ. ಈ ಹಿಂದೆಯೂ ಒಬ್ಬರು ದೂರು ಕೊಟ್ಟಿದ್ದರು. ಆದರೆ, ನಾನು ಅದರಲ್ಲಿ ಗೆದ್ದೆ. ನನ್ನಿಂದ ತಪ್ಪಾಗಿಲ್ಲ ಅಂತ ನನಗೆ ನ್ಯಾಯ ಸಿಕ್ಕಿತು. ಈಗ ಆರೋಪ ಮಾಡಿರುವ ಹುಡುಗಿ ಯಾರೆಂದು ನನಗೆ ಗೊತ್ತಿಲ್ಲ. ಈ ಹಿಂದೆ ದೂರು ಕೊಟ್ಟಿರುವ ಹುಡುಗಿಗೂ ಈಕೆಗೂ ಏನಾದರೂ ಸಂಬಂಧ ಇದೆಯಾ ತನಿಖೆ ಮಾಡಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]