ಕನ್ನಡದಲ್ಲಿ ಸಾಕಷ್ಟು ಹಿಟ್ ಗೀತೆಗಳಿಗೆ ಧ್ವನಿಯಾಗಿರುವ, ತೆಲುಗಿನ ಖ್ಯಾತ ಗಾಯಕಿ (Singer) ಮಂಗ್ಲಿ (Mangli) ಅವರು ಪ್ರಯಾಣಿಸುತ್ತಿದ್ದ ಕಾರಿಗೆ (Car) ಅಪಘಾತವಾಗಿದೆ (Accident). ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದ್ದು, ಮಂಗ್ಲಿ ಸೇರಿದಂತೆ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೈದರಾಬಾದ್ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಮಂಗ್ಲಿ ಪ್ರಯಾಣಿಸುತ್ತಿದ್ದ ಕಾರಿಗೆ, ಹಿಂಬದಿಯಿಂದ ಬಂದಿದ್ದ ಲಾರಿ ಡಿಕ್ಕಿ ಹೊಡೆದಿದೆ. ಕಾರಿನ ಹಿಬ್ಬಂದಿ ನುಜ್ಜುಗುಜ್ಜಾಗಿದೆ. ಶಂಶಾಬಾದ್ ನಿಂದ ಮಂಗ್ಲಿ ತೆರಳುತ್ತಿರುವ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಘಟನೆಯ ಕುರಿತಂತೆ ಯಾರೂ ಆತಂಕ ಪಡಬೇಕಿಲ್ಲ ಎಂದು ಮಂಗ್ಲಿ ಹೇಳಿಕೆ ನೀಡಿದ್ದಾರೆ. ಎಲ್ಲರೂ ಸುರಕ್ಷಿತರಾಗಿ ಇದ್ದೇವೆ ಎಂದೂ ಅವರು ಮಾತನಾಡಿದ್ದಾರೆ. ಮಂಗ್ಲಿ ಮೂಲತಃ ತೆಲುಗು ಗಾಯಕಿಯಾಗಿದ್ದರೂ, ಅತೀ ಹೆಚ್ಚು ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದಾರೆ ಎನ್ನುವುದು ವಿಶೇಷ. ಅದರಲ್ಲೂ ಅವರು ರಾಬರ್ಟ್ ಚಿತ್ರಕ್ಕಾಗಿ ಹಾಡಿದ ಹಾಡು ಸಾಕಷ್ಟು ಫೇಮಸ್ ಆಗಿತ್ತು.
ಬಾಲಿವುಡ್ (Bollywood) ಚಿತ್ರರಂಗ ಹೆಸರಾಂತ ಗಾಯಕ, ಜಝಲ್ ಮಾಂತ್ರಿಕ ಪಂಕಜ್ ಉದಾಸ್ (Pankaj Udhas) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ (Passes away) ತ್ಯಜಿಸಿದ್ದಾರೆ.
ಬಾಲಿವುಡ್ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಕನ್ನಡದಲ್ಲೂ ಅವರು ಹಾಡಿದ್ದಾರೆ. ಸುದೀಪ್ ನಟನೆಯ ಸ್ಪರ್ಶ ಸಿನಿಮಾದ ‘ಚೆಂದಕ್ಕಿಂತ ಚೆಂದ ನೀನೇ ಸುಂದರ’ ಗೀತೆಯು ಇವರ ಕಂಠದಲ್ಲೇ ಮೂಡಿ ಬಂದಿದ್ದು. ಇಟಗಿ ಈರಣ್ಣ ಅವರ ಸಾಹಿತ್ಯವನ್ನು ಈ ಹಾಡಿನ ಮೂಲಕ ನಾಡಿಗೆ ತಲುಪಿಸಿ ಕೀರ್ತಿ ಪಂಕಜ್ ಅವರದ್ದು.
ಪಂಕಜ್ ಉದಾಸ್ ನಿಧನಕ್ಕೆ ಬಾಲಿವುಡ್, ಗಝಲ್ ಪ್ರೇಮಿಗಳ ಕಂಬನಿ ಮಿಡಿದಿದ್ದಾರೆ. ಅವರು ಹಾಡಿದ ಗೀತೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಖ್ಯಾತ ಗಾಯಕ, ಸಂಗೀತ ಸಂಯೋಜಕ ಶಂಕರ್ ಮಹಾದೇವನ್ (Shankar Mahadevan) ಅವರು ಅಯೋಧ್ಯೆ (Ayodhya) ರಾಮಮಂದಿರದ ಉದ್ಘಾಟನೆಯ ಕುರಿತು ಮಾತನಾಡಿದ್ದಾರೆ. ಅದಷ್ಟೇ ಅಲ್ಲ, ಈ ಸಂಭ್ರಮದಲ್ಲಿ ಶಂಕರ್ ಮಹಾದೇವನ್ ಕೂಡ ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಹಾಡಿನ ಮೂಲಕ ಶ್ರೀರಾಮನನ್ನು ಸ್ಮರಿಸಿದ ಜಗ್ಗೇಶ್
ಈಗಾಗಲೇ ಅಯೋಧ್ಯೆ ತಲುಪಿರುವ ಶಂಕರ್ ಮಹಾದೇವನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಡೀ ದೇಶ ಮಾತ್ರವಲ್ಲದೇ ಇಡೀ ಜಗತ್ತು ಈ ಕ್ಷಣಕ್ಕಾಗಿ ಕಾಯುತ್ತಿದೆ. ರಾಮಮಂದಿರ ಪ್ರಾಣ ಪ್ರತಿಷ್ಠೆ ನೋಡಲು ನಾವು ತುಂಬಾ ಸಂತೋಷ ಮತ್ತು ಉತ್ಸುಕರಾಗಿದ್ದೇವೆ. ನಾವು ಕೂಡ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿರೋದ್ದಕ್ಕೆ ಖುಷಿಯಿದೆ ಎಂದು ಹೇಳಿದ್ದಾರೆ.
#WATCH | Lucknow, Uttar Pradesh | On Ayodhya Ram Mandir pranpratishtha, singer-composer Shankar Mahadevan says, “Not only the whole country but the whole world is waiting for this moment. We are so happy & excited and we feel blessed that we are state guests to be part of this. I… pic.twitter.com/1kkUtOkyV3
ಬಳಿಕ ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯು ಭಾರತದಲ್ಲಿ ನಡೆಯಲಿರುವ ದೊಡ್ಡ ಸಂಭ್ರಮ ಎಂದು ನಾನು ಭಾವಿಸುತ್ತೇನೆ ಎಂದು ಶಂಕರ್ ಮಹಾದೇವನ್ ಮಾತನಾಡಿದ್ದಾರೆ.
ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಸಕಲ ತಯಾರಿ ನಡೆಯುತ್ತಿದೆ. ಕನ್ನಡದ ನಟ ರಿಷಬ್ ಶೆಟ್ಟಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಬಹುಭಾಷಾ ಕಲಾವಿದರಿಗೂ ಆಹ್ವಾನ ನೀಡಿದ್ದಾರೆ.
ಅಯೋಧ್ಯಾ ಶ್ರೀರಾಮ ಮಂದಿರ (Shreerama Mandir) ಉದ್ಘಾಟನೆಯನ್ನು ನೋಡಲು ಇಡೀ ದೇಶವೇ ಎದುರು ನೋಡುತ್ತಿದೆ. ಈ ವೇಳೆ, ಜ.22ರಂದು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಮ ನಾಮ ಭಜನೆ ಮಾಡಿ ಎಂದು ವಿಡಿಯೋ ಸಂದೇಶ ನೀಡಿದ್ದ ಖ್ಯಾತ ಹಿನ್ನೆಲೆ ಗಾಯಕಿ, ರಾಷ್ಟ್ರ ಪ್ರಶಸ್ತಿ ವಿಜೇತರು ಕೆ.ಎಸ್. ಚಿತ್ರಾ (K.s Chithra) ಅವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಪರ ಮತ್ತು ವಿರೋಧದ ಚರ್ಚೆ ಶುರುವಾಗಿದೆ.
ಗಾಯಕಿ ಚಿತ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪುಟ್ಟದೊಂದು ವಿಡಿಯೋ ಅಪ್‌ಡೇಟ್ ಮಾಡಿದ್ದರು. ಈ ವಿಡಿಯೋದಲ್ಲಿ ಚಿತ್ರಾ ಅವರು ಜನವರಿ 22ರಂದು ಮಧ್ಯಾಹ್ನ 12:20ಕ್ಕೆ ಎಲ್ಲರೂ ಶ್ರೀರಾಮ, ಜಯ ರಾಮ, ಜಯ ಜಯ ರಾಮ ಎಂಬ ಮಂತ್ರವನ್ನು ಭಜನೆ ಮಾಡುವಂತೆ ಮನವಿ ಮಾಡಿದ್ದರು. ಇದನ್ನೂ ಓದಿ:‘ಮಾಫಿಯಾ’ ಚಿತ್ರತಂಡದಿಂದ ಮತ್ತೊಂದು ಪೋಸ್ಟರ್
ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗುವ ಹೊತ್ತಲ್ಲಿ ಎಲ್ಲರೂ ರಾಮ ನಾಮ ಭಜಿಸಿ ಧ್ಯಾನ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವಂತೆ ಕೋರಿದ್ದರು. ಜೊತೆಗೆ 5 ದೀಪಗಳನ್ನು ಹಚ್ಚಿಡಬೇಕು ಎಂದು ಗಾಯಕಿ ಚಿತ್ರಾ ಅವರು ಕರೆ ನೀಡಿದ್ದರು. ಈ ವಿಡಿಯೋ ಇದೀಗ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ.
ಈ ವಿಡಿಯೋ ಅಪ್‌ಲೋಡ್ ಆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಗಾಯಕಿ ಚಿತ್ರಾ ವಿರುದ್ಧ ಕೆಲವರು ಟೀಕೆ ಮಾಡಿದ್ದಾರೆ. ನೀವು ರಾಜಕೀಯವಾಗಿ ಯಾರ ಪರ ಎಂದೆಲ್ಲಾ ಗಾಯಕಿ ಚಿತ್ರಾಗೆ ಕ್ಲಾಸ್ ತೆಗೆದುಕೊಂಡಿದ್ರೆ, ಅವರಿಗೆ ತಮ್ಮ ನಿಲುವನ್ನು ಮಂಡಿಸುವ ಹಕ್ಕಿದೆ ಎಂದು ಹಲವರು ಚಿತ್ರಾ ಪರ ಬ್ಯಾಟ್ ಬೀಸಿದ್ದಾರೆ.
ಅತೀ ಸಣ್ಣ ವಯಸ್ಸಿನಲ್ಲೇ ಸಂಗೀತ ಕ್ಷೇತ್ರಕ್ಕೆ ಧುಮುಕಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದ ಖ್ಯಾತ ಗಾಯಕ ಡಾರ್ಲಿನ್ ಮೊರೈಸ್ (Darlene Morais), ಜೇಡ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ. ಬ್ರೆಜಿಲಿಯನ್ (Brazilian) ನ ಈ ಗಾಯಕನಿಗೆ (Singer) ಕೇವಲ 28 ವರ್ಷ ವಯಸ್ಸಾಗಿತ್ತು. ಅತೀ ಕಡಿಮೆ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ.
ಜೇಡ ಕಚ್ಚಿದ ದಿನವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಕೂಡ ಪಡೆದಿದ್ದರು. ಮನೆಗೆ ಬಂದ ಬಳಿಕ ತೀವ್ರ ಆಯಾಸದಿಂದ ಬಳಲುತ್ತಿದ್ದರು. ದಿನದಿಂದ ದಿನಕ್ಕೆ ಅವರ ದೇಹದ ಬಣ್ಣ ಕೂಡ ಬದಲಾಗುತ್ತಿದ್ದು, ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ.
ಅತೀ ಚಿಕ್ಕ ವಯಸ್ಸಿನಲ್ಲೇ ಅಪಾರ ಸಂಗೀತ ಜ್ಞಾನವನ್ನು ಹೊಂದಿದ್ದರು ಡಾರ್ಲಿನ್. ಜಬುಂಬಾ ಸೇರಿದಂತೆ ಹಲವು ವಾದ್ಯಗಳನ್ನು ಅವರು ನುಡಿಸುತ್ತಿದ್ದರು. ವಾದ್ಯ ಮತ್ತು ಹಾಡಿನ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಅಗಲಿದ ನೆಚ್ಚಿನ ಗಾಯಕನಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಬಾಲಿವುಡ್ ಖ್ಯಾತ ಗಾಯಕ (Singer) ಹನಿ ಸಿಂಗ್ ತಮ್ಮ ಹದಿಮೂರು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ. ಪತ್ನಿ ಶಾಲಿನಿ ತಲ್ವಾರ್ ಮತ್ತು ಹನಿ ಸಿಂಗ್ (Honey Singh) ಅಧಿಕೃತವಾಗಿ ಬೇರೆಯಾಗಿದ್ದಾರೆ. ನಿನ್ನೆ ದೆಹಲಿ ಫ್ಯಾಮಿಲಿ ಕೋರ್ಟ್ ಈ ಜೋಡಿಗೆ ವಿಚ್ಛೇದನ ನೀಡಿದೆ. ಹನಿ ಸಿಂಗ್ ಮತ್ತು ಶಾಲಿನಿ 2011ರ ಜನವರಿಯಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು.
ಪಂಜಾಬಿ (Punjabi)ಖ್ಯಾತ ಗಾಯಕ, ಬಾಲಿವುಡ್ ನಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಹನಿ ಸಿಂಗ್ (Honey Singh) ಕೊನೆಗೂ ತಮ್ಮ ಪತ್ನಿ ಶಾಲಿನಿ ತಲ್ವಾರ್ ಅವರಿಗೆ ವಿಚ್ಛೇದನ ನೀಡಿದ್ದಾರೆ. ಕಳೆದ ವರ್ಷವಷ್ಟೇ ಹನಿ ಸಿಂಗ್ ಮೇಲೆ ಅವರ ಪತ್ನಿ ದೈಹಿಕ ಹಿಂಸಾಚಾರದ ಆರೋಪ ಮಾಡಿದ್ದರು. ಪತಿಯಿಂದ ತಮಗೆ ತುಂಬಾ ಹಿಂಸೆ ಆಗುತ್ತಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೆ ಹನಿ ಸಿಂಗ್ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.
ದೆಹಲಿ (Delhi) ಕೋರ್ಟ್ ನಲ್ಲಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದ ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ (Shalini)ಯು ನ್ಯಾಯಾಧೀಶರ ಎದುರು ಸೆಟಲ್ ಮೆಂಟ್ ಮಾಡಿಕೊಂಡು, ಪತ್ನಿಗೆ ಜೀವನಾಂಶವಾಗಿ ಒಂದು ಕೋಟಿ ರೂಪಾಯಿ ನೀಡಿದ್ದಾರೆ. ಅದು ಚೆಕ್ ಮೂಲಕ ನೀಡಿದ್ದಾರೆ. 2001ರಲ್ಲಿ ಈ ಜೋಡಿ ವಿವಾಹವಾಗಿದ್ದು, ಆ ನಂತರ ಮನಸ್ತಾಪಗಳು ಬಂದಿದ್ದವು. ಕಳೆದ ವರ್ಷವಂತೂ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಿದ್ದರು.
ತಮ್ಮ ಮೇಲೆ ಪತಿ ದೈಹಿಕವಾಗಿ ಹಿಂಸೆ ಮಾಡಿದ್ದಾನೆ ಎಂದು ಶಾಲಿನಿ ಬಹಿರಂಗವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಪತ್ರವನ್ನು ಬರೆದಿದ್ದರು. ಹನಿ ಸಿಂಗ್ ಕುಟುಂಬದ ಬಗ್ಗೆಯೂ ಆರೋಪಗಳನ್ನು ಮಾಡಿದ್ದರು. ಆನಂತರ ಹನಿ ಸಿಂಗ್ ಕೂಡ ಮಾಧ್ಯಮಗಳ ಮುಂದೆ ಬಂದು ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು. ಅಲ್ಲದೇ, ಶಾಲಿನಿಯಿಂದ ದೂರ ಹೋಗುವುದಾಗಿಯೂ ಹೇಳಿಕೊಂಡಿದ್ದರು. ಈ ಮೂಲಕ ಅವರು ಡಿವೋರ್ಸ್ ಗೆ (Divorce) ಅರ್ಜಿ ಸಲ್ಲಿಸಿದ್ದರು.
ಅಪರೂಪದ ಕಂಠದ ಮೂಲಕ ಫೇಮಸ್ ಆಗಿರುವ ಗಾಯಕಿ (Singer) ಮಂಗ್ಲಿ (Mangli) ಅತೀ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಮಾತು ಜೋರಾಗಿಯೇ ಕೇಳಿ ಬಂದಿತ್ತು. ಅದು ತನ್ನ ಮಾವನ ಮಗನ (Father-in-law’s son) ಜೊತೆಯೇ ಹೊಸ ಜೀವನಕ್ಕೆ (Marriage) ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿಯ ಕುರಿತಂತೆ ಮಂಗ್ಲಿ ಗರಂ ಆಗಿದ್ದಾರೆ. ಇಂತಹ ಸುಳ್ಳು ಸುದ್ದಿಯನ್ನು ಹರಡಿಸಿರುವುದಕ್ಕೆ ಬೇಸರವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ತಾವು ಮದುವೆ ಆಗುತ್ತಿರುವ ವಿಚಾರ ಸುಳ್ಳು ಎಂದಿದ್ದಾರೆ.
ಯಾರಿದು ಮಂಗ್ಲಿ?
ಈ ಹಿಂದೆ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ `ಕಣ್ಣು ಹೊಡಿಯಾಕ’ ಹಾಡಿನ ತೆಲುಗು ವರ್ಷನ್ `ಕಣ್ಣೇ ಅದಿರಿಂದಿ’ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೈದ್ರಾಬಾದ್‍ನಲ್ಲಿ ರಾಬರ್ಟ್ ಪ್ರೀ ರಿಲೀಸ್ ಇವೆಂಟ್‍ನಲ್ಲಿ ಅಕ್ಷರಶಃ ಮ್ಯಾಜಿಕ್ ಕ್ರಿಯೇಟ್ ಮಾಡಿದ ಧ್ವನಿ ಈಗ ದೇಶವ್ಯಾಪಿ ಕ್ರಶ್ ಆಗಿತ್ತು. ಆ ಧ್ವನಿಯ ಗಾಯಕಿ ಮಂಗ್ಲಿ ಅವರದ್ದು, ರಾತ್ರೋರಾತ್ರಿ ಕರ್ನಾಟಕದ ಕ್ರಶ್ ಆಗಿದ್ದರು. `ಕಣ್ಣೇ ಅದಿರಿಂದಿ’ ಗಾಯಕಿ, ಕಪ್ಪು ಸುಂದರಿ ಮಂಗ್ಲಿಗೆ ಕ್ಲೀನ್‍ಬೋಲ್ಡ್ ಆಗಿತ್ತು ಕರುನಾಡು.
ಇದೇ ಧ್ವನಿ ಈಗ ಕೋಟಿ ಕೋಟಿ ಮೊಬೈಲ್‍ಗಳ ಖಾಯಂ ಸ್ಟೇಟಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಶೇರ್ ಆಗುತ್ತಲೇ ಇದೆ. ಈಗಾಗಲೇ ಮಂಗ್ಲಿ ಯಾರು ಎಂದು ತಿಳದುಕೊಳ್ಳಲು ನೆಟ್ಟಿಗರು ಹುಡುಕಾಟ ನಡೆಸಿದ್ದರು.
ಈ ಹಾಡು ಹಾಡಿದ ಗಾಯಕಿ ಹಾಡು, ನಟನೆ, ನೃತ್ಯ ನಿರೂಪಣೆಯಲ್ಲಿ ಮಂಗ್ಲಿ ಆಂಧ್ರದದಲ್ಲಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲೂ ಅನೇಕ ಕಾರ್ಯಕ್ರಮಗಳನ್ನ ಮಾಡಿದ್ದಾರೆ. ಬಂಜಾರಾ ಸಮುದಾಯದ ಮಂಗ್ಲಿ ಶಾಲಾ ದಿನಗಳಲ್ಲೇ ಹಾಡನ್ನು ಹಾಡಿ ಸೈ ಎನಿಸಿಕೊಂಡಿದ್ದರು. ಆರಂಭದಲ್ಲಿ ಆಲ್ಬಂಗಳಲ್ಲಿ ಹಾಡೋಕೆ ಶುರು ಮಾಡಿ ಮುಂದೆ ಲೈವ್ ಪರ್ಫಾಮನ್ಸ್, ಆಂಕರಿಂಗ್, ಡಾನ್ಸ್ ಮಾಡುತ್ತಾ ಫೇಮಸ್ ಆಗಿದ್ದಾರೆ.
ಕೃಷ್ಣವರ್ಣದ ಈ ಸುಂದರಿ ಮುಖದ ಮೇಲೆ ಹೊಳೆಯುವ ಬೊಟ್ಟು, ಎಲ್ಲಾ ಸೇರಿ ಮಂಗ್ಲಿಗೆ ನೆಟ್ಟಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಪ್ರತೀ ಸೀಸನ್‍ಲ್ಲಿ ಒಂದೊಂದು ಕ್ರಶ್ ಹುಟ್ಟುಕೊಳ್ಳುತ್ತೆ ಅಂತಾರಲ್ಲ, ಹಾಗೆ ಸದ್ಯಕ್ಕೆ ಭಾರತದ ಕ್ರಶ್ ಆಗಿದ್ದಾರೆ ಗಾಯಕಿ ಮಂಗ್ಲಿ.
ಸ್ಯಾಂಡಲ್‌ವುಡ್‌ನ (Sandalwood) ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ (Sanjith Hegde) ಅವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಬೇರೇ ಚಿತ್ರರಂಗದಲ್ಲೂ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಹೀಗಿರುವಾಗ ಇತ್ತೀಚಿಗೆ ‘ಗೀಜಗ ಹಕ್ಕಿ’ (Gijaga Hakki Song) ಹಾಡು ಹಿಟ್ ಆಗಿರೋ ಬೆನ್ನಲ್ಲೇ ಸಂಜಿತ್ ಹೆಗ್ಡೆ ಸ್ಟೈಲ್ ಸ್ಟೇಟ್‌ಮೆಂಟ್ ಕೂಡ ಸದ್ದು ಮಾಡುತ್ತಿದೆ. ಜೆಂಡರ್ ರೂಲ್ಸ್ ಬ್ರೇಕ್ ಮಾಡಿ, ಅವರು ಧರಿಸಿರುವ ನೆಕ್ಲೇಸ್ ಲುಕ್ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ.
ಸಂಜಿತ್ ಹೆಗ್ಡೆ ಅವರು ಹಾಡಿರುವ ‘ಗೀಜಗ ಹಕ್ಕಿ’ ಆಲ್ಬಂ ಟ್ರೆಂಡ್‌ನಲ್ಲಿದೆ. ಅದಷ್ಟೇ ಅಲ್ಲ, ಸಂಜಿತ್ ಧರಿಸಿದ್ದ ಔಟ್ ಫಿಟ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಗೋಲ್ಡನ್ ಪ್ಯಾಚ್ ವರ್ಕ್ ಪ್ಯಾಂಟ್, ಕೋಟ್ ಸ್ಟೈಲ್ ಶರ್ಟ್ ಧರಿಸಿ ಸಂಜಿತ್ ಮಿಂಚಿದ್ದಾರೆ. ವೀಂಜೇಜ್ ಕ್ರಿಸ್ಟಲ್ ಫಿಂಝ್ ನೆಕ್ಲೇಸ್ ಧರಿಸಿ ನ್ಯೂ ಲುಕ್‌ನಲ್ಲಿ ಸಂಜಿತ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು
ಸದ್ಯ ಸಂಜಿತ್ ಹೆಗ್ಡೆ ಅವರು ಜೆಂಡರ್ ರೂಲ್ಸ್ ಬ್ರೇಕ್ ಮಾಡಿ ನೆಕ್ಲೇಸ್ ಧರಿಸಿರೋದು ಯುವಕ- ಯುವತಿಯರ ಗಮನ ಸೆಳೆಯುತ್ತಿದೆ. ಸಂಜಿತ್ ನಯಾ ಲುಕ್‌ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ.
ಜೀ ವಾಹಿನಿಯ ಸರಿಗಮಪ ಶೋನಲ್ಲಿ ಮೊದಲ ಸ್ಪರ್ಧಿಯಾಗಿದ್ರು. ಬಳಿಕ ಸಂಜಿತ್ ಅದ್ಭುತ ವಾಯ್ಸ್ಗೆ ಸಿನಿಮಾಗಳಿಂದ ಆಫರ್‌ಗಳು ಬಂತು. ಅದನ್ನ ಸದುಪಯೋಗಪಡಿಸಿಕೊಂಡು ಸಂಜಿತ್ ಪಂಚ ಭಾಷಾ ಗಾಯಕನಾಗಿ ಗುರುತಿಸಿಕೊಳ್ತಿದ್ದಾರೆ. ಅದಷ್ಟೇ ಅಲ್ಲ, ಖ್ಯಾತ ನಟಿ ಶ್ರುತಿ ಹಾಸನ್ ಜೊತೆ ತೆಲುಗು ಸಿನಿಮಾವೊಂದರಲ್ಲಿ ನಟಿಸಿ ಸೈ ಎನಿಸಿಕೊಂಡರು.
ಮಾಜಿ ಬಿಗ್ ಬಾಸ್ ಸ್ಪರ್ಧಿ(Bigg Boss Hindi) ಅಬ್ದು ರೋಜಿಕ್ (Abdu Rozik) ಅವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಬ್ದು ರೋಜಿಕ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ಡೆಯಡಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತೀಚಿಗೆ ಹೋಟೆಲ್ ಒಂದರಲ್ಲಿ ಅಬ್ದು ಲೋಡ್ ಆಗಿರುವ ಬಂದೂಕೊಂದನ್ನು ಹಿಡಿದುಕೊಂಡು ಪೋಸ್ ನೀಡುತ್ತಾ ಆಟವಾಡುತ್ತಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ಮುಂಬೈ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಅಬ್ದು ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅಬ್ದು ಅನ್ನು ವಶಕ್ಕೆ ಪಡೆದು ವಿಚಾರಣೆ ಸಹ ನಡೆಸಿದ್ದರು.
ಅಬ್ದು ಕೈಗೆ ಲೋಡೆಡ್ ಬಂದೂಕು (Loaded Gun) ಸಿಗಲು ಗೋಲ್ಡನ್ ಬ್ರದರ್ಸ್ ಎಂದೇ ಖ್ಯಾತಿಯಾಗಿರುವ ಸನ್ನಿ- ಸಂಜಯ್ ಕಾರಣ. ಸನ್ನಿ-ಸಂಜಯ್ ಅವರುಗಳ ಬಾಡಿಗಾರ್ಡ್‌ಗಳ ಬಂದೂಕು ಹಿಡಿದುಕೊಂಡು ಅಬ್ದು ಪೋಸ್ ನೀಡಿದ್ದರು. ಇದನ್ನ ವಿಡಿಯೋ ಮಾಡಿಕೊಂಡಿದ್ದರು. ಅದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ
ಶಸ್ತ್ರಾಸ್ತ್ರ ಕಾಯ್ದೆಯನ್ವಯ ಯಾವ ವ್ಯಕ್ತಿಯ ಬಳಿ ಬಂದೂಕಿನ ಪರವಾನಗಿ ಇರುತ್ತದೆಯೋ ಆ ವ್ಯಕ್ತಿಯ ಹೊರತಾಗಿ ಇನ್ಯಾರೂ ಬಂದೂಕು ಮುಟ್ಟುವಂತಿಲ್ಲ. ಹಾಗಾಗಿ ಈಗ ಅಬ್ದು ಹಾಗೂ ಬಂದೂಕಿನ ಪರವಾನಗಿ ಹೊಂದಿದ್ದ ಗೋಲ್ಡನ್ ಬ್ರದರ್ಸ್ರ ಬಾಡಿಗಾರ್ಡ್ ವಿರುದ್ಧ ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅಬ್ದುಗೆ ಸಂಬಂಧಿಸಿದವರು ಮಾಧ್ಯಮಗಳಿಗೆ ಹೇಳಿರುವಂತೆ, ಅಬ್ದು ಕೇವಲ ಕೆಲವೇ ಸೆಕೆಂಡ್‌ಗಳಿಗಾಗಿ ಬಂದೂಕನ್ನು ಎತ್ತಿಕೊಂಡು ಹಾಗೆಯೇ ವಾಪಸ್ ಇಟ್ಟುಬಿಟ್ಟಿದ್ದರು ಎಂದಿದ್ದಾರೆ.
ಅಬ್ದು ರೋಜಿಕ್ ತಜಿಕಿಸ್ತಾನದ ಸಿಂಗರ್, ಹಿಂದಿ ಬಿಗ್‌ಬಾಸ್ 16ನಲ್ಲಿ ಪಾಲ್ಗೊಳ್ಳುವ ಮೂಲಕ ಮೋಡಿ ಮಾಡಿದ್ದರು. ಸಲ್ಮಾನ್ ಖಾನ್‌ರ (Salman Khan) ಇತ್ತೀಚೆಗಿನ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕೀ ಜಾನ್’ (Kisi Ka Bhai Ki Jaan) ಸಿನಿಮಾದಲ್ಲಿಯೂ ಇವರು ನಟಿಸಿದ್ದಾರೆ. ಇದೀಗ ಗಾಯನದ ಜೊತೆಗೆ ಯೂಟ್ಯೂಬರ್ ಸಹ ಆಗಿರುವ ಅಬ್ದು, ಮುಂಬೈನಲ್ಲಿ ರೆಸ್ಟೊರೆಂಟ್ ಒಂದನ್ನು ಸಹ ತೆರೆದಿದ್ದಾರೆ.