Tag: singer

  • ಅಮೆರಿಕದ ಸಿಂಗರ್ ಜೊತೆ ಪ್ರಿಯಾಂಕಾ ಚೋಪ್ರಾ ಡೇಟಿಂಗ್!

    ಅಮೆರಿಕದ ಸಿಂಗರ್ ಜೊತೆ ಪ್ರಿಯಾಂಕಾ ಚೋಪ್ರಾ ಡೇಟಿಂಗ್!

    ಮುಂಬೈ: ಬಾಲಿವುಡ್‍ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅಮೆರಿಕದ ಗಾಯಕ ನಿಕ್ ಜೋನಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಈಗ ಕೆಲವು ದಿನಗಳಿಂದ ಒಬ್ಬರಿಗೊಬ್ಬರು ತಮ್ಮ ಇನ್‍ಸ್ಟಾಗ್ರಾಂ ಪೋಸ್ಟ್ ಲೈಕ್ ಮಾಡುವುದರ ಮೂಲಕ ತಮ್ಮ ರಿಲೇಷನ್‍ಶಿಪ್ ಬಗ್ಗೆ ಕನ್ಫರ್ಮ್ ಮಾಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಕೆಲವು ದಿನಗಳಿಂದ ಅಮೆರಿಕದಲ್ಲೇ ವಾಸಿಸುತ್ತಿದ್ದು, ಈಗ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಜೋಡಿ ಒಬ್ಬರನೊಬ್ಬರ ಪೋಸ್ಟ್ ಲೈಕ್ ಹಾಗೂ ಕಮೆಂಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

    ಸದ್ಯ ಈ ಇಬ್ಬರು ತಮ್ಮ ರಿಲೇಷನ್ ಶಿಪ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಅಮೆರಿಕದಲ್ಲಿ ಇವರಿಬ್ಬರು ಜೊತೆಯಲ್ಲಿ ಸುತ್ತಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

    ಪ್ರಿಯಾಂಕಾ ತನ್ನ ಗೆಳೆಯ ನಿಕ್ ಜೀನಸ್ ಜೊತೆ ಪಾರ್ಟಿ, ರೆಸ್ಟೋರೆಂಟ್‍ಗಳಿಗೆ ಒಟ್ಟಿಗೆ ತಿರುಗಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲದೇ ಜೊತೆಯಲ್ಲಿ ಒಬ್ಬರಿಗೊಬ್ಬರು ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ.

    ಪ್ರಿಯಾಂಕಾ ಚೋಪ್ರಾಗೆ 35 ವರ್ಷಗಳಾಗಿದ್ದು, ಜೋನಸ್ 25 ವರ್ಷದ ಗಾಯಕ. ತಮಗಿಂತ 10 ವರ್ಷ ಚಿಕ್ಕ ವಯಸ್ಸಿನ ಯುವಕನ ಜೊತೆ ಪ್ರಿಯಾಂಕಾ ಓಡಾಡುತ್ತಿರುವುದು ಹಾಗೂ ಡೇಟಿಂಗ್ ನಡೆಸುತ್ತಿರುವುದರ ಬಗ್ಗೆ ಹಲವಾರು ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

  • ವಿಶೇಷ ಹಾಡಿನ ಮೂಲಕ ಮೋದಿಯನ್ನು ಸ್ವಾಗತಿಸಿದ ಇಂಡೋನೇಷ್ಯಾ ಗಾಯಕಿ-ವಿಡಿಯೋ ನೋಡಿ

    ವಿಶೇಷ ಹಾಡಿನ ಮೂಲಕ ಮೋದಿಯನ್ನು ಸ್ವಾಗತಿಸಿದ ಇಂಡೋನೇಷ್ಯಾ ಗಾಯಕಿ-ವಿಡಿಯೋ ನೋಡಿ

    ಜಕಾರ್ತ: ಪ್ರಧಾನ ಮಂತ್ರಿ ಬುಧವಾರ ಇಂಡೋನೇಷ್ಯಾಗೆ ಭೇಟಿ ನೀಡಿದ್ರು. ಈ ವೇಳೆ ಇಂಡೋನೇಷ್ಯಾದ ಗಾಯಕಿ ಪ್ರಸಿದ್ಧ ಹಿಂದಿ ಹಾಡು “ಸಾಬರಮತಿ ಕೆ ಸಂತ್ ತುನೆ ಕರ್ ದಿಯಾ ಕಮಾಲ್” ಹಾಡುವ ಮೂಲಕ ಸ್ವಾಗತಿಸಿದ್ದಾರೆ.

    ಇಂಡೋನೇಷ್ಯಾ ಪ್ರಧಾನಿ ಜೋಕೋ ವಿಡೋಡೋ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಗಾಯಕಿ ಫ್ರೈಡಾ ಲೂಸಿಯಾನಾ ಹಿಂದಿ ಹಾಡನ್ನು ತಮ್ಮದೇ ಶೈಲಿಯಲ್ಲಿ ಹಾಡುವ ಮೂಲಕ ಗಮನ ಸೆಳೆದ್ರು.

    ಪ್ರಧಾನ ಮಂತ್ರಿಗಳ ಕಚೇರಿಯ ಅಧಿಕೃತ ಟ್ವಟ್ಟರ್ ಖಾತೆಯಲ್ಲಿ ಹಾಡಿನ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡಿದೆ. ಇಂಡೋನೇಷ್ಯಾ ಮೂಲದ ಗಾಯಕಿ ಫ್ರೈಡಾ ಲೂಸಿಯಾನಾ “ಸಾಬರಮತಿ ಕೆ ಸಂತ್ ತುನೆ ಕರ್ ದಿಯಾ ಕಮಾಲ್” ಹಾಡನ್ನು ಪ್ರಧಾನಿ ಮೋದಿಯವರಿಗಾಗಿ ಅರ್ಪಿಸುವ ಮೂಲಕ ಸ್ವಾಗತಿಸಿಕೊಂಡರು ಅಂತಾ ಟ್ಟಟ್ಟರ್ ನಲ್ಲಿ ಬರೆಯಲಾಗಿದೆ.

    ಪ್ರದೀಪ್ ಲೇಖನಿಯಲ್ಲಿ ಹಾಡು ರಚಿತವಾಗಿದೆ. ಒರಿಜಿನಲ್ ಹಾಡಿಗೆ ಆಶಾ ಬೋಸ್ಲೆ ಧ್ವನಿ ನೀಡಿದ್ದಾರೆ. ಸಭೆಯ ಬಳಿಕ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳೊಂದಿಗೆ ಮತ್ತು ಇಂಡೋನೇಷ್ಯಾ ಪ್ರಧಾನಿ ಜೋಕೋ ವಿಡೋಡೋ ನೇತೃತ್ವದ ಸಭೆಯಲ್ಲಿ ಮೋದಿ ಭಾಗಿಯಾದ್ರು.

    https://www.youtube.com/watch?v=PIKLTEtntI8

  • ಸ್ನೇಹಿತರ ಭೇಟಿಗೆಂದು ತೆರಳಿದಾತ ಹಿಂದಿರುಗಲೇ ಇಲ್ಲ- ದುಷ್ಕರ್ಮಿಗಳ ಗುಂಡಿಗೆ ಖ್ಯಾತ ಹಾಡುಗಾರ ಬಲಿ

    ಸ್ನೇಹಿತರ ಭೇಟಿಗೆಂದು ತೆರಳಿದಾತ ಹಿಂದಿರುಗಲೇ ಇಲ್ಲ- ದುಷ್ಕರ್ಮಿಗಳ ಗುಂಡಿಗೆ ಖ್ಯಾತ ಹಾಡುಗಾರ ಬಲಿ

    ಚಂಡೀಗಢ: ಪಂಜಾಬಿ ಗಾಯಕರೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಪಂಜಾಬ್‍ನ ದೇರಾ ಬಸ್ಸಿಯಲ್ಲಿ ನಡೆದಿದೆ.

    ನವಜೋತ್ ಸಿಂಗ್(22) ಕೊಲೆಯಾದ ಸಿಂಗರ್. ನವಜೋತ್ ಬೆಹರಾ ಗ್ರಾಮದಲ್ಲಿರುವ ತನ್ನ ಮನೆಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಕಾರ್ ಪಾರ್ಕ್ ಮಾಡಿದ 50 ಮೀ ದೂರದಲ್ಲಿ ನವಜೋತ್ ಮೃತದೇಹ ದೊರೆತಿದೆ.

    ನವಜೋತ್ ಭಾನುವಾರ ಸಂಜೆ ಸುಮಾರು 4 ಗಂಟೆಗೆ ತನ್ನ ಸ್ನೇಹಿತರನ್ನು ಭೇಟಿಯಾಗಲು ಪಂಚಕುಲಕ್ಕೆ ತೆರಳಿ ಬೇಗ ಹಿಂತಿರುಗುವುದ್ದಾಗಿ ಹೇಳಿ ಹೋಗಿದ್ದರು. ನಂತರ ರಾತ್ರಿ 11.15ಕ್ಕೆ ನವಜೋತ್ ತನ್ನ ತಾಯಿಗೆ ಕರೆ ಮಾಡಿ ಊಟದ ಬಗ್ಗೆ ವಿಚಾರಿಸಿ 5 ನಿಮಿಷದಲ್ಲಿ ಮನೆಗೆ ಬರುತ್ತೇನೆ ಎಂದು ತಿಳಿಸಿದ್ದರು. ನವಜೋತ್ ಹಿಂದಿರುಗದಿದ್ದಾಗ ಆತನಿಗೆ ನಾವು ಪದೇ ಪದೇ ಕರೆ ಮಾಡುತ್ತಿದ್ದವು. ಅಲ್ಲದೇ ಆತನ ಬರುವಿಕೆಗಾಗಿ ಕಾಯುತ್ತಿದ್ದೇವು. ಆದರೆ ಫ್ಯಾಕ್ಟರಿ ಬಳಿಕ ಕಾರಿನ ಡೋರ್ ಓಪನ್ ಆಗಿತ್ತು. ಕಾರಿನ ಹತ್ತಿರದಲ್ಲೇ ಆತನ ಮೃತದೇಹ ಪತ್ತೆಯಾಗಿದೆ ಎಂದು ನವಜೋತ್ ತಂದೆ ಸುಖ್‍ದೇವ್ ಸಿಂಗ್ ತಿಳಿಸಿದ್ದಾರೆ.

    ನವಜೋತ್ ಮೃತದೇಹ ಸಿಕ್ಕಾಗ ಆತನ ಚಿನ್ನದ ಸರ, ಚಿನ್ನದ ಖಡ್ಗ ಹಾಗೂ ಆತನ ಪರ್ಸ್ ಹಣವೆಲ್ಲಾ ಆತನ ಜೊತೆ ಇತ್ತು. ಯಾರೂ ಕೂಡ ಅದನ್ನು ಮುಟ್ಟಿರಲಿಲ್ಲ ಎಂದು ಪೊಲೀಸರು ತನಿಖೆ ನಡೆಸಿದ ನಂತರ ಹೇಳಿದ್ದಾರೆ.

    ನವಜೋತ್ ಯುವತಿಯ ಜೊತೆ ಅಂಬಾಲಾ ರೋಡಿನಲ್ಲಿರುವ ಮೆಕ್ಡೊನಾಲ್ಡ್ಸ್ ಹೋಗುತ್ತಿದ್ದನು ಆತನ ಸಹೋದರ ಸಂಬಂಧಿ ನೋಡಿರುವುದರ ಬಗ್ಗೆ ಪೊಲೀಸರ ಹತ್ತಿರ ತಿಳಿಸಿದ್ದಾರೆ. ಸದ್ಯ ಈ ಕೇಸನ್ನು ಎಲ್ಲಾ ಆಯಾಮಗಳಿಂದಲೂ ವಿಚಾರಣೆ ನಡೆಸುತ್ತಿದ್ದೇವೆ. ಆ ಯುವತಿಯ ಬಗ್ಗೆಯೂ ವಿಚಾರಿಸಲಾಗುತ್ತದೆ ಎಂದು ದೇರಾ ಬಸ್ಸಿಯ ಎಎಸ್‍ಪಿ ಹರ್ಮನ್ ದೀಪ್ ಹಾನ್ಸ್ ಹೇಳಿದ್ದಾರೆ.

    ದೇರಾ ಬಸ್ಸಿ ಆಸ್ಪತ್ರೆಯ ಮೂವರು ವೈದ್ಯರು ನವಜೋತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ನವಜೋತ್ ಎದೆಗೆ 5 ಗುಂಡು ಹಾರಿಸಿದ್ದು, 5 ಗುಂಡುಗಳು ಎದೆಗೆ ಹೊಕ್ಕಿತ್ತು. ಸದ್ಯ ಪೊಲೀಸರು ಮೂರು 9 ಎಂಎಂ ಮದ್ದುಗುಂಡುಗಳನ್ನು ವಶ ಪಡೆದುಕೊಂಡಿದ್ದಾರೆ.

    ಈ ಕೊಲೆ ಕೇಸನ್ನು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಎಸ್‍ಎಚ್‍ಒ ಮೋಹಿಂದರ್ ಸಿಂಗ್ ತಿಳಿಸಿದ್ದಾರೆ.

  • ಗಾಯಕನ ಮೇಲೆ ಬರೋಬ್ಬರಿ 50 ಲಕ್ಷ ಎಸೆದ ಜನರು – ವಿಡಿಯೋ ವೈರಲ್

    ಗಾಯಕನ ಮೇಲೆ ಬರೋಬ್ಬರಿ 50 ಲಕ್ಷ ಎಸೆದ ಜನರು – ವಿಡಿಯೋ ವೈರಲ್

    ಗಾಂಧಿನಗರ: ಜನರು ತಮಗೆ ಇಷ್ಟವಾದ ನೃತ್ಯ ಮಾಡಿದರೆ ಅಥವಾ ಸಂಗೀತ ಹಾಡಿದರೆ ಅವರ ಮೇಲೆ ಹಣ ಎಸೆಯುತ್ತಾರೆ. ಆದರೆ ಇಲ್ಲೊಬ್ಬ ಗಾಯಕರ ಹಾಡಿನ್ನು ಕೇಳಿ ಮೋಡಿಗೆ ಒಳಗಾದ ಜನ ಬರೋಬ್ಬರಿ 50 ಲಕ್ಷ ರೂ.ಗಳನ್ನು ಎಸೆದು ಪ್ರೀತಿ ತೋರಿಸಿದ್ದಾರೆ.

    ಗುಜರಾತ್ ನ ವಲ್ಸಾದ್ ಪ್ರದೇಶದಲ್ಲಿ ಶನಿವಾರ ಧಾರ್ಮಿಕ ಸಮಾರಂಭದಲ್ಲಿ ಗುಜರಾತಿ ಜಾನಪದ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಜಾನಪದ ಹಾಡನ್ನು ಹಾಡಿದ ಗಾಯಕನ ಮೇಲೆ ಜನರು ಹಣ ಎಸೆದಿದ್ದು, ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಧಾರ್ಮಿಕ ಸಮಾರಂಭದಲ್ಲಿ ಗಾಯಕರೊಬ್ಬರು ಜಾನಪದ ಹಾಡನ್ನು ಹಾಡುತ್ತಿದ್ದರು. ಈ ವೇಳೆ ಅಲ್ಲಿ ನೆರೆದಿದ್ದ ಸಂಗೀತ ಪ್ರೇಮಿಗಳು 100 ಮತ್ತು 500 ಮುಖಬೆಲೆಯ ನೋಟುಗಳನ್ನು ಅವರ ಮೇಲೆ ಸುರಿದಿದ್ದಾರೆ. ಗಾಯಕನ ಮೇಲೆ ಬರೋಬ್ಬರಿ 50 ಲಕ್ಷ ಹಣವನ್ನು ಸುರಿದು ಅಭಿಮಾನ ಮೆರೆದಿದ್ದಾರೆ. ಜನರು ಗಾಯಕನ ಸುತ್ತಲೂ ನಿಂತು ನೋಟಿನ ಮಳೆಗರೆಯುತ್ತಿದ್ದರೆ ಗಾಯಕ ತಮ್ಮದೇ ಆದ ರಾಗದಲ್ಲಿ ಹಾಡನ್ನು ಮುಂದುವರೆಸಿದ್ದಾರೆ. ಈ ಎಲ್ಲ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ವಲ್ಸಾದ್ ನ ಕಾಲ್ವಾಡಾ ಗ್ರಾಮದ ಆಶಿಶ್ ಪಟೇಲ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಜಲರಾಮ್ ಮಾನವ ಸೇವಾ ಟ್ರಸ್ಟ್ ನೀಡಲಾಗಿದೆ. ಸದ್ಯಕ್ಕೆ ಜಾನಪದ ಗಾಯಕನ ಮೇಲೆ ಹೊಸ ನೋಟಿನ್ನು ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಸಂಜಿತ್ ಹೆಗಡೆಗೂ ಬಿಟ್ಟಿಲ್ಲ ‘ಹ್ಯಾಂಗೋವರ್’!

    ಸಂಜಿತ್ ಹೆಗಡೆಗೂ ಬಿಟ್ಟಿಲ್ಲ ‘ಹ್ಯಾಂಗೋವರ್’!

    ಬೆಂಗಳೂರು: ಸ್ಯಾಂಡಲ್‍ವುಡ್ ನ ಯುವ ಪ್ರತಿಭೆ ಗಾಯಕ ಸಂಜಿತ್ ಹೆಗಡೆ ಸದ್ಯ ‘ಹ್ಯಾಂಗೋವರ್’ನಲ್ಲಿದ್ದಾರೆ. ಖಾಸಗಿ ಚಾನೆಲ್‍ನ ರಿಯಾಲಿಟಿ ಶೋ ಮೂಲಕ ಎಲ್ಲರ ಮನಗೆದ್ದಿರುವ ಮೈಕ್ ಟೈಸನ್, ಸಂಜಿತ್ ಕನ್ನಡದ ಹ್ಯಾಂಗೋವರ್ ಸಿನಿಮಾಕ್ಕೆ ಹಾಡೊಂದನ್ನು ಹಾಡಿದ್ದಾರೆ.

    ಕಾಲೇಜ್ ಕುಮಾರ್, ಚಮಕ್ ಚಿತ್ರಗಳಲ್ಲಿ ಹಾಡುವ ಮೂಲಕ ಕೇಳುಗರನ್ನು ಮೋಡಿ ಮಾಡಿರುವ ಸಂಜಿತ್ ಅವಕಾಶಗಳ ಸುರಿಮಳೆ ಪ್ರಾರಂಭವಾಗಿವೆ. ಹ್ಯಾಂಗೋವರ್ ಚಿತ್ರದಲ್ಲಿರುವ ರಾಕಿಂಗ್ ಸ್ಟೈಲಿನಲ್ಲಿರುವ ಈ ಹಾಡು ವೀರ್ ಸಮರ್ಥ್ ಸಂಯೋಜನೆಯಲ್ಲಿ ಮೂಡಿಬಂದಿದ್ದು, ಚೇತನ್ ಬಹದ್ದೂರ್ ಬರೆದಿದ್ದಾರೆ.

    “ದಿನವೂ ಒಂದು ರೋಚಕ.. ಹುಡುಕೋ ಒಳ್ಳೆ ಕೌತುಕ.. ಸ್ನೇಹ ಅತಿ ಭಾವುಕ.. ಪ್ರೀತಿ ಮನ ಮೋಹಕ..” ಎನ್ನುತ್ತಾ ಚಿತ್ರದಲ್ಲಿ ಮೂವರು ನಾಯಕರು ಮತ್ತು ಮೂವರು ನಾಯಕಿಯರು ಜರ್ನಿ ಮಾಡುತ್ತಾ ಹಾಡುವ ಫ್ರೆಂಡ್ ಶಿಪ್ ಹಾಡನ್ನು ಸಂಜಿತ್ ಹಾಡಿದ್ದಾರೆ. ಸಂಜಿತ್ ಜೊತೆ ರಾಕ್ ಸಿಂಗರ್ ಧೀರೇಂದ್ರ ಅವರು ಕೂಡ ಸಾಥ್ ನೀಡಿದ್ದು “ಮೋಜು ಮಸ್ತಿಯ ಹುಚ್ಚು.. ಮರುಕಳಿಸಲಿ ಅತೀ ಹೆಚ್ಚು.. ಎಣಿಸುತಿದೆ ಈ ವಾಚು” ಹಾಡನ್ನು ಹಾಡಿದ್ದಾರೆ.

    ಸದ್ಯದಲ್ಲೇ ಹಾಡುಗಳು ಸಿ ಮ್ಯೂಜಿಕ್ ಸಂಸ್ಥೆಯ ಮೂಲಕ ಸಂಗೀತ ಪ್ರೇಮಿಗಳ ಮನಮುಟ್ಟಿಲಿವೆ. ರಮನೀ ರೀಲ್ಸ್ ಸಂಸ್ಥೆಯ ಮೂಲಕ ರಾಕೇಶ್ ಡಿ ರವರು ನಿರ್ಮಿಸಿ, ವಿಠಲ್ ಭಟ್ ನಿರ್ದೇಶಿಸಿದ ಹ್ಯಾಂಗೋವರ್ ಮುಂದಿನ ತಿಂಗಳು ಬಿಡುಗಡೆ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸುತ್ತಿದೆ.

  • ಸ್ಯಾಂಡಲ್‌ವುಡ್‌ನಲ್ಲಿ ಸುಹಾನ ಸೈಯದ್ ಪ್ರಯಾಣ ಆರಂಭ!

    ಸ್ಯಾಂಡಲ್‌ವುಡ್‌ನಲ್ಲಿ ಸುಹಾನ ಸೈಯದ್ ಪ್ರಯಾಣ ಆರಂಭ!

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿದ ಎಷ್ಟೋ ಸ್ಪರ್ಧಿಗಳು ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಆದರೆ ಈಗ ಸುಹಾನ ಸೈಯದ್ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಗಾಯಕಿಯಾಗಿ ಮಿಂಚಲು ತಯಾರಿದ್ದಾರೆ.

    ಸುಹಾನ ಸೈಯದ್ ಗೆ ‘ಸ್ಟೇಟ್‍ಮೆಂಟ್ 8\11’ ಚಿತ್ರದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಇದೊಂದು ದೇಶಭಕ್ತಿ ಹಾಡಗಿದ್ದು, ‘ನರನಾಡಿ ನುಡಿಯುತ್ತೆ ಹಿಂದುಸ್ತಾನ್’ ಎಂಬ ಹಾಡಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

    ಸ್ಟೇಟ್‍ಮೆಂಟ್ 8\11 ಹೊಸಬರ ಸಿನಿಮಾವಾಗಿದ್ದು, ಹೇಮಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಪ್ಪಿ ಪ್ರಸಾದ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಈ ಹಾಡು ಒಂದು ಪ್ರಮುಖ ಅಂಶವಾಗಿದ್ದು, ಕಾರ್ಯಕ್ರಮದಲ್ಲಿ ಸುಹಾನ ಅವರ ಹಾಡು ಇಷ್ಟಪಟ್ಟು ಚಿತ್ರತಂಡ ಅವರಿಗೆ ಹಾಡಲು ಅವಕಾಶ ನೀಡಿದ್ದಾರೆ.

    ಈ ಹಿಂದೆ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿದ್ದ ಮೆಹಬೂಬ್ ಸಾಬ್, ಸಂಚಿತ್ ಹೆಗ್ಡೆ, ಅಂಕಿತಾ ಕುಂಡು ಹೀಗೆ ಹಲವಾರು ಸ್ಪರ್ಧಿಗಳು ದೊಡ್ಡ ದೊಡ್ಡ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಈಗ ಸುಹಾನ ಸೈಯದ್ ಕೂಡ ಇವರ ಗುಂಪಿಗೆ ಸೇರಿಕೊಂಡಿದ್ದಾರೆ.

  • ಖ್ಯಾತ ಪಂಜಾಬಿ ಗಾಯಕ ಪರ್ಮಿಶ್ ಮೇಲೆ ಗುಂಡಿನ ದಾಳಿ – ತಾನೇ ಗುಂಡು ಹಾರಿಸಿದ್ದಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ ಗ್ಯಾಂಗ್‍ಸ್ಟರ್

    ಖ್ಯಾತ ಪಂಜಾಬಿ ಗಾಯಕ ಪರ್ಮಿಶ್ ಮೇಲೆ ಗುಂಡಿನ ದಾಳಿ – ತಾನೇ ಗುಂಡು ಹಾರಿಸಿದ್ದಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ ಗ್ಯಾಂಗ್‍ಸ್ಟರ್

    ಚಂಡಿಗಢ :  ಖ್ಯಾತ ಪಂಜಾಬಿ ಗಾಯಕ ಪರ್ಮಿಶ್ ವರ್ಮಾ ಹಾಗೂ ಅವರ ಸ್ನೇಹಿತನ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ.

    ಮೊಹಾಲಿಯ ಸೆಕ್ಟರ್ 74 ರಲ್ಲಿ ಶುಕ್ರವಾರ ತಡ ರಾತ್ರಿ ದಾಳಿ ನಡೆಸಿ ಪರಾರಿಯಾಗಿದ್ದರು. ಈ ದಾಳಿಯಲ್ಲಿ ಗಾಯಗೊಂಡಿರುವ ಪರ್ಮಿಶ್ ಹಾಗೂ ಆತನ ಸ್ನೇಹಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಗುಂಡಿನ ದಾಳಿಯಲ್ಲಿ ಪರ್ಮಿಶ್ ಅವರ ಕಾಲಿಗೆ ಗುಂಡೇಟು ತಗುಲಿದೆ. ರಾತ್ರಿ ವೇಳೆ ಕಾರ್ಯಕ್ರಮವೊಂದರ ಪ್ರಚಾರ ಕಾರ್ಯ ನಡೆಸಿ ಹಿಂದಿರುಗುತ್ತಿದ್ದ ವೇಳೆ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕುಲ್ ದೀಪ್ ಚಹಲ್ ಮಾಹಿತಿ ನೀಡಿದ್ದಾರೆ.

    ಪರ್ಮಿಶ್ ವರ್ಮಾ ಪಂಜಾಬಿಯ ಖ್ಯಾತ ಗಾಯಕರಾಗಿದ್ದು, ಇವರ ಸೂಪರ್ ಹಿಟ್ ‘ಗಾಲ್ ನಿ ಕದ್ನಿ’ ಹಾಡನ್ನು ಸುಮಾರು 11 ಕೋಟಿ ಬಾರಿ ವಿಕ್ಷಣೆ ಮಾಡಲಾಗಿದೆ. ಇವರ ಇತ್ತೀಚಿನ ಮತ್ತೊಂದು ಹಾಡು ಸಹ ಹಿಟ್ ಲಿಸ್ಟ್ ನಲ್ಲಿ ಸೇರಿತ್ತು. ಪಮಿರ್ಶ್ ಜನಪ್ರಿಯತೆ ಹೆಚ್ಚಾಗುತ್ತಿದಂತೆ ಗ್ಯಾಂಗ್‍ಸ್ಟರ್ ಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

    ಗ್ಯಾಂಗ್ ಸ್ಟರ್ ಕೈವಾಡ?
    ಘಟನೆ ಬಳಿಕ ಪರ್ಮಿಶ್ ಮೇಲೆ ತಾವೇ ಗುಂಡಿನ ದಾಳಿಯನ್ನು ತಾವೇ ನಡೆಸಿದ್ದಾಗಿ ಗ್ಯಾಂಗ್‍ಸ್ಟರ್ ದಿಲ್ ಪ್ರೀತ್ ಸಿಂಗ್ ದಹನ್ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. ಪೋಸ್ಟ್ ನಲ್ಲಿ ಗ್ಯಾಂಗ್ ನ ವ್ಯಕ್ತಿ ಪಿಸ್ತೂಲ್ ನೊಂದಿಗೆ ಪರ್ಮಿಶ್ ಫೋಟೋವನ್ನು ಹಾಕಿ ದಾಳಿಯ ಕುರಿತು ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮೊಹಾಲಿ ಪೊಲೀಸರು ತನಿಖೆ ನಡೆಸಿದ್ದಾರೆ.

  • ನಿಂತು ಹಾಡಿಲ್ಲ ಎಂದು ಗರ್ಭಿಣಿ ಗಾಯಕಿಗೆ ಗುಂಡು ಹಾರಿಸಿದ್ರು -ವಿಡಿಯೋ

    ನಿಂತು ಹಾಡಿಲ್ಲ ಎಂದು ಗರ್ಭಿಣಿ ಗಾಯಕಿಗೆ ಗುಂಡು ಹಾರಿಸಿದ್ರು -ವಿಡಿಯೋ

    ಇಸ್ಲಾಮಬಾದ್: ಕಾರ್ಯಕ್ರಮದಲ್ಲಿ ಹಾಡು ಹೇಳುತ್ತಿದ್ದ ಗಾಯಕಿ ನಿಂತು ಕೊಂಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಆಕೆಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಖಾನಾ ಜಿಲ್ಲೆಯಲ್ಲಿ ನಡೆದಿದೆ.

    ಕಂಗ ಗ್ರಾಮದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಈ ಕೃತ್ಯ ನಡೆದಿದ್ದು, 24 ವರ್ಷದ ಗಾಯಕಿ ಸಮೀನಾ ಸಿಂಧು ಮೃತ ದುರ್ದೈವಿ. ಆರೋಪಿ ತಾರೀಕ್ ಅಹ್ಮದ್ ಕುಳಿತುಕೊಂಡೇ ಹಾಡು ಹೇಳುತ್ತಿದ್ದಕ್ಕೆ ಶೂಟ್ ಮಾಡಿ ಹತ್ಯೆ ಮಾಡಿದ್ದಾನೆ.

    ಸಮೀನಾ ಸಿಂಧು ಗಾಯನ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆ ವೇಳೆ ಎದ್ದು ನಿಂತು ಹಾಡುವಂತೆ ಪ್ರೇಕ್ಷಕನೊಬ್ಬ ಕೇಳಿಕೊಂಡಿದ್ದಾನೆ. ಆದರೆ ತಾನು ಗರ್ಭವತಿಯಾಗಿದ್ದ ಕಾರಣ ನಿಂತು ಹಾಡಲು ಸಾಧ್ಯವಿಲ್ಲ ಎಂದು ಆಕೆ ನಿರಾಕರಿಸಿದ್ದಾರೆ.

    ಇದರಿಂದ ಆಕ್ರೋಶಗೊಂಡ ಆತ ಗಾಯಕಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಾದ ತಕ್ಷಣ ತೀವ್ರವಾಗಿ ಗಾಯಗೊಂಡ ಸಮೀನಾಳನ್ನು ಕೂಡಲೇ ಸಮೀಪದ ಚಂದ್ಕಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲೇ ಸಮೀನಾ ಮೃತಪಟ್ಟಿದ್ದಾರೆ.

    ತನ್ನ ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದು, ಜೊತೆ ಹುಟ್ಟಲಿರುವ ಮಗುವೂ ಸಾವನ್ನಪ್ಪಿರುವುದರಿಂದ ಆರೋಪಿ ವಿರುದ್ಧ ಎರಡು ಹತ್ಯೆ ಪ್ರಕರಣಗಳನ್ನು ದಾಖಲಿಸಬೇಕೆಂದು ಸಮೀನಾ ಪತಿ ಆಗ್ರಹಿಸಿದ್ದಾರೆ.

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಖ್ಯ ಆರೋಪಿ ತಾರಿಕ್ ನನ್ನು ಬಂಧಿಸಿದ್ದಾರೆ.

  • ಕದ್ರಿ ಮಂಜುನಾಥೇಶ್ವರನ ದರ್ಶನ ಪಡೆದ ಗಾಯಕ ಸೋನು ನಿಗಮ್

    ಕದ್ರಿ ಮಂಜುನಾಥೇಶ್ವರನ ದರ್ಶನ ಪಡೆದ ಗಾಯಕ ಸೋನು ನಿಗಮ್

    ಮಂಗಳೂರು: ಖ್ಯಾತ ಬಾಲಿವುಡ್ ಗಾಯಕ ಸೋನಿ ನಿಗಮ್ ಇಂದು ಜಿಲ್ಲೆಯ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

    ಮೂಡಬಿದ್ರೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸೋನು ನಿಗಮ್ ಬಳಿಕ ದೇವಾಲಕ್ಕೆ ಭೇಟಿ ನೀಡಿದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಾಪಸ್ ತೆರಳಿದರು. ಈ ವೇಳೆ ಸೋನು ನಿಗಮ್ ಜೊತೆಗೆ ಅವರ ತಂಡದ ಸದಸ್ಯರು ಕೂಡ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

  • 10 ಅಡಿ ಆಳದ ಮ್ಯಾನ್ ಹೋಲ್ ಗೆ ಬಿದ್ದ ಗಾಯಕಿಯ ರಕ್ಷಣೆ

    10 ಅಡಿ ಆಳದ ಮ್ಯಾನ್ ಹೋಲ್ ಗೆ ಬಿದ್ದ ಗಾಯಕಿಯ ರಕ್ಷಣೆ

    ಮುಂಬೈ: ದೇವಸ್ಥಾನದಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಗಾಯಕಿಯೊಬ್ಬರು ಆಯತಪ್ಪಿ ಮ್ಯಾನ್ ಹೋಲ್ ಗೆ ಬಿದ್ದ ಘಟನೆ ನಡೆದಿದೆ.

    ಈ ಘಟನೆ ಮಂಗಳವಾರ ಬೆಳಗ್ಗೆ ಮುಲುಂದ್ ನ ಭಕ್ತಿ ಮಾರ್ಗ್ ಎಂಬಲ್ಲಿ ಸುಮಾರು 6.15ಕ್ಕೆ ನಡೆದಿದೆ. ಕೂಡಲೇ ಈ ಘಟನೆ ಗಮನಿಸಿದ ಅಲ್ಲೇ ಇದ್ದ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ರವಾನಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.

    ಗಾಯಕಿಯನ್ನು ನೀಲಿಮ ಪುರಾಣಿಕ್ ಎಂದು ಗುರುತಿಸಲಾಗಿದೆ. ಇವರು ಪ್ರತೀ ನಿತ್ಯದಂತೆ ನಿನ್ನೆಯೂ ಗಣೇಶನ ದೇವಸ್ಥಾನಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದ ವೇಳೆ ಆಯತಪ್ಪಿ ತೆರೆದ ಮ್ಯಾನ್ ಹೋಲ್ ಗೆ ಬಿದ್ದಿದ್ದಾರೆ ಅಂತ ಅದೇ ದೇವಸ್ಥಾನಕ್ಕೆ ಪ್ರತಿನಿತ್ಯ ಬರುವ ರಿಯಲ್ ಎಸ್ಟೇ ಏಜೆಂಟ್ ಗೋಪಾಲ್ ಮರಾಡಿಯರ್ ಹೇಳಿದ್ದಾರೆ.

    ನೀಲಿಮ ಅವರು ಪ್ರತೀ ದಿನ 6 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಬರುತ್ತಾರೆ. ಬಳಿಕ ದೇವಸ್ಥಾನದಲ್ಲಿ 10 ರಿಂದ 15 ನಿಮಿಷ ಇದ್ದು ಹೊರಡುತ್ತಾರೆ. ನಿನ್ನೆ ನಾನು ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತೆರೆದ ಮ್ಯಾನ್ ಹೋಲ್ ಇರುವುದನ್ನು ಗಮನಿಸಿದ್ದೆ. ಅಲ್ಲದೇ ಅದರ ಮೇಲಿರುವ ಮುಚ್ಚಳವು ನಾಪತ್ತೆಯಾಗಿತ್ತು. 6.15ರ ಸುಮಾರಿಗೆ ಯಾರೋ ಒಬ್ಬರು ಮ್ಯಾನ್ ಯಾರೋ ಒಬ್ಬರು ಮ್ಯಾನ್ ಹೋಲ್ ಗೆ ಬಿದ್ದಿದ್ದಾರೆ ಎಂಬ ಸುದ್ದಿಯನ್ನು ಕೇಳಿದೆ. ಕೂಡಲೇ ನಾನು ಅಲ್ಲಿಗೆ ತೆರಳಿ ನೋಡಿದಾಗ ಅದು ನೀಲಿಮ ಎಂದು ತಿಳಿಯಿತು ಅಂತ ಅವರು ವಿವರಿಸಿದ್ದಾರೆ.

    ತಕ್ಷಣವೇ ನಾನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ. 20 ನಿಷದ ಬಳಿಕ ಅಧಿಕಾರಿಗಳು ರ್ಸಥಳಕ್ಕೆ ದೌಡಾಯಿಸಿ ನಿಲೀಮ ಅವರನ್ನು ಮ್ಯಾನ್ ಹೋಲ್ ನಿಂದ ಹೊರತೆಗೆದಿದ್ದಾರೆ. ಘಟನೆಯಿಂದ ದೇಹದ ಮೇಲೆ ಸ್ವಲ್ಪ ಗಾಯಾಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಅಂದ್ರು.

    ನಿಲೀಮಾ ಅವರು 10 ಅಡಿ ಆಳಕ್ಕೆ ಬಿದಿದ್ದಾರೆ ಅಂತ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದಿಂದ ಮಹಿಳೆಯನ್ನು ರಕ್ಷಿಸಲಾಗಿದೆ. ಸದ್ಯ ಅವರು ವೀರ್ ಸಾಚರ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ಹಿರಿಯ ಪೊಲೀಸ್ ಅಧಿಕಾರಿ ಶ್ರೀಪದ್ ಕಾಲೆ ತಿಳಿಸಿದ್ದಾರೆ.

    ಬಿಎಂಸಿ ಹಾಗೂ ಸ್ಥಳೀಯರಿಂದ ಇಂತಹ ಹಲವು ಘಟನೆಗಳ ಬಗ್ಗೆ ದೂರು ಸ್ವೀಕರಿಸಿದ್ದೇವೆ. ಸದ್ಯ ಪ್ರಕರಣಗಳ ತನಿಖೆ ನಡೆಸುವಂತೆ ಕೆಲವು ತಂಡಗಳನ್ನು ನಿಯೋಜಿಸಿದ್ದೇವೆ ಅಂತ ಅವರು ಹೇಳಿದ್ರು. ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಅಂತ ಘಟನೆಗೆ ಸಂಬಂಧಿಸಿದಂತೆ ನಿಲೀಮ ಅವರ ಪುತ್ರ ನಿಖಿಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.