Tag: Singapore

  • 1 ಕೆಜಿ ಗಾಂಜಾ ಕಳ್ಳಸಾಗಣೆ ಆರೋಪ – ಭಾರತ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ

    1 ಕೆಜಿ ಗಾಂಜಾ ಕಳ್ಳಸಾಗಣೆ ಆರೋಪ – ಭಾರತ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ

    ಸಿಂಗಾಪುರ: ಸುಮಾರು 1 ಕೆಜಿ ತೂಕದಷ್ಟು ಗಾಂಜಾವನ್ನು ಕಳ್ಳಸಾಗಣೆ (Cannabis Smuggling) ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಭಾರತ ಮೂಲದ ವ್ಯಕ್ತಿಯನ್ನು (Indian) ಸಿಂಗಾಪುರ (Singapore) ಗಲ್ಲಿಗೇರಿಸಿದೆ.

    ಅಂತಾರಾಷ್ಟ್ರೀಯ ಮಟ್ಟದ ವಿರೋಧದ ನಡುವೆಯೂ ಭಾರತ ಮೂಲದ ವ್ಯಕ್ತಿ ತಂಗರಾಜು ಸುಪ್ಪಯ್ಯನನ್ನು (46) ಸಿಂಗಾಪುರದ ಚಾಂಗಿ ಜೈಲು ಸಂಕೀರ್ಣದಲ್ಲಿ ಬುಧವಾರ ಗಲ್ಲಿಗೇರಿಸಲಾಗಿದೆ (Hanging) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2017 ರಲ್ಲಿ ತಂಗರಾಜು 1,017.9 ಗ್ರಾಂ. ಗಾಂಜಾವನ್ನು ಕಳ್ಳಸಾಗಣೆ ಮಾಡುವ ಸಂಚಿನಲ್ಲಿ ತೊಡಗಿದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ. ಸಿಂಗಾಪುರದ ಕಾನೂನಿನ ಪ್ರಕಾರ ಗಲ್ಲುಶಿಕ್ಷೆಗೆ ಗುರಿಪಡಿಸಲು ಇರುವ ಪ್ರಮಾಣದ 2 ಪಟ್ಟು ಮಾದಕ ವಸ್ತು ಆತನ ಬಳಿ ಸಿಕ್ಕಿತ್ತು. 2018ರಲ್ಲಿ ಆತನಿಗೆ ಮರಣದಂಡನೆ ವಿಧಿಸಲಾಗಿತ್ತು. ಇದನ್ನು ಮೇಲ್ಮನವಿ ನ್ಯಾಯಾಲಯ ಕೂಡಾ ಬಳಿಕ ಎತ್ತಿ ಹಿಡಿದಿತ್ತು.

    ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳು ತಂಗರಾಜುವಿನ ಗಲ್ಲುಶಿಕ್ಷೆಯನ್ನು ಮರುಪರಿಶೀಲನೆ ನಡೆಸುವಂತೆ ಸಿಂಗಾಪುರ ಸರ್ಕಾರವನ್ನು ಒತ್ತಾಯಿಸಿವೆ. ಆದರೆ ಇವಾವುದಕ್ಕೂ ಕಿವಿಗೊಡದ ಅಲ್ಲಿನ ಸರ್ಕಾರ ತಂಗರಾಜುನನ್ನು ಗಲ್ಲಿಗೇರಿಸಿದೆ. ಇದನ್ನೂ ಓದಿ: 40 ಮಹಿಳೆಯರಿಗೆ ಒಬ್ನೇ ಪತಿ

    ತಂಗರಾಜುನನ್ನು ಬಂಧಿಸಲಾದ ಸಂದರ್ಭ ಆತನ ಬಳಿ ಎಲ್ಲಿಯೂ ಡ್ರಗ್ಸ್ ಪತ್ತೆಯಾಗಿರಲಿಲ್ಲ. ಅಮಾಯಕ ವ್ಯಕ್ತಿಯನ್ನು ವಿನಾಕಾರಣ ಕೊಲ್ಲಲಾಗುತ್ತಿದೆ ಎಂದು ಜಿನೀವಾ ಮೂಲದ ಮಾದಕ ವಸ್ತು ನೀತಿಗಳ ಜಾಗತಿಕ ಆಯೋಗದ ಸದಸ್ಯ ರಿಚರ್ಡ್ ಬ್ರಾನ್ಸರ್ ಅವರು ತಮ್ಮ ಬ್ಲಾಗ್‌ನಲ್ಲಿ ಸೋಮವಾರ ಬರೆದಿದ್ದರು. ಆದರೆ ತಂಗರಾಜುವಿನ ತಪ್ಪನ್ನು ಸಮಂಜಸವಾದ ಅನುಮಾನದಾಚೆಗೂ ಸಾಬೀತುಪಡಿಸಲಾಗಿದೆ ಎಂದು ಸಿಂಗಾಪುರದ ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.

    ಜಗತ್ತಿನ ಅತ್ಯಂತ ಕಠಿಣ ಮಾದಕವಸ್ತು ವಿರೋಧಿ ಕಾನೂನುಗಳಿರುವ ದೇಶಗಳಲ್ಲಿ ಸಿಂಗಾಪುರ ಒಂದಾಗಿದೆ. ಅಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಯನ್ನು ತಡೆಯಲು ಮರಣ ದಂಡನೆ ಶಿಕ್ಷೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಆದರೆ ಸಿಂಗಾಪುರದ ವಾದವನ್ನು ವಿಶ್ವಸಂಸ್ಥೆಗಳ ಮಾನವ ಹಕ್ಕುಗಳ ಹೈ ಕಮಿಷನ್ ಖಂಡಿಸಿದೆ.

    ಕಳೆದ 6 ತಿಂಗಳಲ್ಲಿ ಸಿಂಗಾಪುರದಲ್ಲಿ ಜಾರಿಗೊಳಿಸಲಾದ ಮೊದಲ ಮರಣದಂಡನೆ ತಂಗರಾಜುವಿನದ್ದಾಗಿದೆ. 2 ವರ್ಷಗಳ ಅಂತರದ ಬಳಿಕ 2022ರ ಮಾರ್ಚ್‌ನಲ್ಲಿ ಸಿಂಗಾಪುರ ಮರಣದಂಡನೆ ಶಿಕ್ಷೆಯನ್ನು ಮತ್ತೆ ಆರಂಭಿಸಿತು. ಅದರಲ್ಲಿ ಇದು 12ನೇ ಶಿಕ್ಷೆಯಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಅಂದ್ರೆ ಗೂಂಡಾ ರಾಜ್ಯ ಅನ್ನೋ ವಾತಾವರಣವಿತ್ತು – ಸುಮಲತಾ

  • 1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

    1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

    ಕೊಚ್ಚಿ: ಚಿನ್ನ (Gold) ಕಳ್ಳ ಸಾಗಾಣಿಕೆ (Smuggling) ಮಾಡುತ್ತಿದ್ದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯನ್ನು (Cabin crew) ಕೊಚ್ಚಿ (Kochi) ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್ (Customs Preventive Commissionerate) ತಿಳಿಸಿದೆ.

    ಆರೋಪಿಯನ್ನು ವಯನಾಡು ಮೂಲದ ಶಫಿ ಎಂದು ಗುರುತಿಸಲಾಗಿದ್ದು, ಬಂಧಿತನಿಂದ 1487 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ರಾಯಚೂರು ಜಿಲ್ಲಾಡಳಿತ ಸಿದ್ಧತೆ- ಇವಿಎಂ ಪ್ರಾತ್ಯಕ್ಷಿಕೆ ಕೇಂದ್ರಗಳ ಆರಂಭ

    ಬಹ್ರೇನ್ (Bahrain), ಕೋಯಿಕ್ಕೋಡ್ (Kozhikode) ಹಾಗೂ ಕೊಚ್ಚಿ ನಡುವಿನ ಏರ್ ಇಂಡಿಯಾ (Air India) ವಿಮಾನದ ಕ್ಯಾಬಿನ್ ಸಿಬ್ಬಂದಿ ಚಿನ್ನ ಸಾಗಾಣಿಕೆ ಮಾಡುತ್ತಿರುವ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಕೈಗಳಿಗೆ ಚಿನ್ನವನ್ನು ಸುತ್ತಿಕೊಂಡು, ಅಂಗಿಯ ತೋಳುಗಳಿಂದ ಮುಚ್ಚಿ ಗ್ರೀನ್ ಚಾನೆಲ್ ಮೂಲಕ ಆರೋಪಿ ಹಾದುಹೋಗುವ ಪ್ಲಾನ್ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ಸಿಂಗಾಪುರದಿಂದ (Singapore) ಚೆನೈಗೆ (Chennai) ಆಗಮಿಸಿದ್ದ ಇಬ್ಬರು ಪ್ರಯಾಣಿಕರಿಂದ 3.32 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಾರಿವಾಳದ ಕಾಲಿನಲ್ಲಿ ಕ್ಯಾಮೆರಾ – ಬೇಹುಗಾರಿಕೆ ಶಂಕೆ

  • ಸಿಂಗಾಪುರದಲ್ಲಿ ಮಹಿಳೆಯರಿಗೆ ಕಿರುಕುಳ ಆರೋಪ- ಭಾರತ ಮೂಲದ ಯೋಗಾ ಶಿಕ್ಷಕನ ವಿಚಾರಣೆ

    ಸಿಂಗಾಪುರದಲ್ಲಿ ಮಹಿಳೆಯರಿಗೆ ಕಿರುಕುಳ ಆರೋಪ- ಭಾರತ ಮೂಲದ ಯೋಗಾ ಶಿಕ್ಷಕನ ವಿಚಾರಣೆ

    ಸಿಂಗಾಪುರ: ಭಾರತ (India) ಮೂಲದ ಯೋಗ ಶಿಕ್ಷಕನೊಬ್ಬನನ್ನು ಮಹಿಳೆಯರಿಗೆ ಕಿರುಕುಳ (Molestation) ನೀಡಿದ ಆರೋಪದ ಮೇಲೆ ಸಿಂಗಾಪುರದಲ್ಲಿ (Singapore) ವಿಚಾರಣೆಗೆ ಗುರಿಪಡಿಸಲಾಗಿದೆ.

    2020ರ ಜು.11ರಂದು ಯೋಗ (Yoga) ಶಿಕ್ಷಕ ರಾಜ್‍ಪಾಲ್ ಸಿಂಗ್ ಕಿರುಕುಳ ನೀಡಿದ್ದಾಗಿ 24 ವರ್ಷದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ತಾನು ಸಿಂಗ್‍ನಿಂದ ಅನುಭವಿಸಿದ ಕಿರುಕುಳದ ಬಗ್ಗೆ ಮಹಿಳೆ ತನ್ನ ಸ್ನೇಹಿತನೊಂದಿಗೆ ವಾಟ್ಸಪ್ (WhatsApp) ಮೆಸೇಜ್‍ನಲ್ಲಿ ತಿಳಿಸಿದ್ದಳು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸೆಲೀನ್ ಯಾಪ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಜೋರಾಗಿ ಸಂಗೀತವನ್ನು ಹಾಕದಂತೆ ಕೇಳಿದ್ದಕ್ಕೆ ಕೆನಡಾ ನಿವಾಸಿಯ ಕೊಲೆ

    2020ರ ಜು.31ರಂದು ಮಹಿಳೆಯೊಬ್ಬರು ಟ್ವಿಟ್ಟರ್‌ನಲ್ಲಿ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಅದನ್ನು ನೋಡಿದ 28 ಹಾಗೂ 37 ವರ್ಷದ ಮಹಿಳೆಯರಿಬ್ಬರು ಅವರನ್ನು ಸಂಪರ್ಕಿಸಿದ್ದಾರೆ. ನಂತರ 28 ವರ್ಷದ ಮಹಿಳೆ ತಮ್ಮ ಮೇಲಾದ ದೌರ್ಜನ್ಯವನ್ನು ಫೇಸ್‍ಬುಕ್‍ನಲ್ಲಿ (Facebook) ಬರೆದುಕೊಂಡಿದ್ದಾರೆ.

    ಈ ಬಗ್ಗೆ ಸಂತ್ರಸ್ತೆಯೊಬ್ಬರು ಕ್ಯಾಮೆರಾವನ್ನು ಸಾಕ್ಷಿಯಾಗಿ ನೀಡಿದ್ದು ಮಾಧ್ಯಮಗಳಿಗ ಅದು ಲಭ್ಯವಾಗಿಲ್ಲ. ರಾಜ್‍ಪಾಲ್ ಸಿಂಗ್ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು ಪ್ರಕರಣ ವಿಚಾರಣೆ ಹಂತದಲ್ಲಿದೆ. 5ನೇ ಮಹಿಳೆ ನೀಡಿದ ದೂರನ್ನು ಮುಂದಿನ ದಿನಗಳಲ್ಲಿ ವಿಚಾರಣೆನಡೆಸುವುದಾಗಿ ಕೋರ್ಟ್ ತಿಳಿಸಿದೆ.

    ಸಿಂಗ್ 2019ರ ಏಪ್ರಿಲ್‍ನಲ್ಲಿ ಟೆಲೋಕ್ ಆಯರ್ ರಸ್ತೆಯ ಯೋಗ ಕೇಂದ್ರದ ಶಿಕ್ಷಕರಾಗಿ ನೇಮಕಗೊಂಡಿದ್ದರು. ಇದನ್ನೂ ಓದಿ: ವಿಧಾನಸೌಧದಲ್ಲಿನ ಎಣ್ಣೆ ಬಾಟ್ಲಿ ಹಿಂದಿನ ಕಥೆ ರಿವೀಲ್

  • 35 ಪ್ರಯಾಣಿಕರನ್ನು ಬಿಟ್ಟು ನಿಗದಿತ ಸಮಯಕ್ಕೂ ಮೊದಲೇ ಹಾರಿತು ವಿಮಾನ

    35 ಪ್ರಯಾಣಿಕರನ್ನು ಬಿಟ್ಟು ನಿಗದಿತ ಸಮಯಕ್ಕೂ ಮೊದಲೇ ಹಾರಿತು ವಿಮಾನ

    ಚಂಡೀಗಢ: ಕೆಲ ದಿನಗಳ ಹಿಂದೆ ಗೋ ಫಸ್ಟ್ (Go First) ವಿಮಾನವೊಂದು (Flight) 55 ಪ್ರಯಾಣಿಕರನ್ನು (Passengers) ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ದೆಹಲಿಗೆ ಹಾರಿತ್ತು. ಈ ಘಟನೆ ಭಾರೀ ವಿವಾದ ಸೃಷ್ಟಿಸಿತ್ತು. ಇದೀಗ ಅಮೃತಸರದಲ್ಲೂ (Amritsar) ಅಂತಹುದೇ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಅಮೃತಸ ವಿಮಾನ ನಿಲ್ದಾಣದಿಂದ ಬುಧವಾರ ಸಂಜೆ 7:55ಕ್ಕೆ ಸಿಂಗಾಪುರ (Singapore) ಹೊರಡಬೇಕಿದ್ದ ಸ್ಕೂಟ್ ಏರ್‌ಲೈನ್ಸ್ (Scoot Airline) ವಿಮಾನ ನಿಗದಿತ ಸಮಯಕ್ಕೂ ಮೊದಲೇ ಮಧ್ಯಾಹ್ನ 3 ಗಂಟೆ ವೇಳೆಗೆ ಟೇಕ್ ಆಫ್ ಆಗಿದೆ. ವಿಮಾನ 35 ಪ್ರಯಾಣಿಕರನ್ನು ಬಿಟ್ಟು ಹಾರಾಟ ಪ್ರಾರಂಭಿಸಿದೆ ಎಂದು ವರದಿಯಾಗಿದೆ.

    ವಿಮಾನ ನಿಗದಿತ ಸಮಯಕ್ಕೂ ಮೊದಲೇ ಟೇಕ್ ಆಫ್ ಆಗಿರುವುದಕ್ಕೆ ಪ್ರಯಾಣಿಕರು ಸಿಡಿದೆದ್ದಿದ್ದಾರೆ. ವಿಮಾನಯಾನ ಸಂಸ್ಥೆಯ ನಿರ್ಲಕ್ಷ್ಯ ಕಂಡು ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ದೂರನ್ನೂ ನೀಡಿದ್ದಾರೆ. ಇದನ್ನೂ ಓದಿ: ಕಪ್ಪು ಬಟ್ಟೆ ಧರಿಸಿ ಬಂದವ್ರಿಗೆ ನಮೋ ಕಾರ್ಯಕ್ರಮಕ್ಕೆ ನೋ ಎಂಟ್ರಿ- ಯುವತಿಯರಿಗೆ ಅಸಮಾಧಾನ

    ಘಟನೆಯ ಬಳಿಕ ಈ ಬಗ್ಗೆ ತನಿಖೆ ನಡೆಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಆದೇಶ ನೀಡಿದೆ. ಇದರಂತೆ ವಾಯುಯಾನ ನಿಯಂತ್ರಣ ಪ್ರಾಧಿಕಾರ ತನಿಖೆಯನ್ನು ಆರಂಭಿಸಿದೆ.

    ಬಳಿಕ ವಿಮಾನ ನಿಲ್ದಾಣ ಅಧಿಕಾರಿಗಳು ವಿಮಾನಯಾನ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಪ್ರಯಾಣಿಕರಿಗೆ ಮೊದಲೇ ಇ-ಮೇಲ್ ಮೂಲಕ ಹಾರಾಟದ ಸಮಯವನ್ನು ಬದಲಾವಣೆ ಮಾಡಿದ್ದರ ಬಗ್ಗೆ ತಿಳಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಅಮೃತಸರದಿಂದ ಸುಮಾರು 280 ಪ್ರಯಾಣಿಕರು ಸಿಂಗಾಪುರಕ್ಕೆ ಪ್ರಯಾಣಿಸಬೇಕಿತ್ತು. ಆದರೆ 30ಕ್ಕೂ ಹೆಚ್ಚು ಪ್ರಯಾಣಿಕರು ಈ ಬಗ್ಗೆ ತಿಳಿಯದೇ ಉಳಿದುಹೋಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವೈದ್ಯೆಯ ಸೋಗಿನಲ್ಲಿ ರೋಗಿಗಳ ಬಳಿ ಚಿನ್ನಾಭರಣ ಕಳವು ಮಾಡ್ತಿದ್ದವಳು ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಡಿಗೆ ಪಾವತಿಸದ ಮಸ್ಕ್‌ – ಸಿಂಗಾಪುರ ಟ್ವಿಟ್ಟರ್‌ ಕಚೇರಿಯಿಂದ ಉದ್ಯೋಗಿಗಳು ಹೊರಕ್ಕೆ

    ಬಾಡಿಗೆ ಪಾವತಿಸದ ಮಸ್ಕ್‌ – ಸಿಂಗಾಪುರ ಟ್ವಿಟ್ಟರ್‌ ಕಚೇರಿಯಿಂದ ಉದ್ಯೋಗಿಗಳು ಹೊರಕ್ಕೆ

    ಸಿಂಗಾಪುರ: ಟ್ವಿಟ್ಟರ್‌ನ್ನು (Twitter) ಎಲೋನ್‌ ಮಸ್ಕ್‌ (Elon Musk) ತನ್ನ ಒಡೆತನಕ್ಕೆ ತೆಗೆದುಕೊಂಡ ನಂತರ ಸಂಸ್ಥೆಯ ಉದ್ಯೋಗಿಗಳು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಇರುವ ಸಂಸ್ಥೆಯ ಶಾಖೆಗಳಲ್ಲಿ ನಿರ್ವಹಣೆ ತೊಂದರೆ ಉಂಟಾಗಿದೆ. ದುರ್ವಾಸನೆ ಬೀರುವ ಶೌಚಾಲಯ, ಟಾಯ್ಲೆಟ್‌ ಪೇಪರ್‌ಗಳ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳ ಸರಮಾಲೆಯಿಂದ ಉದ್ಯೋಗಿಗಳು ನರಳುತ್ತಿದ್ದಾರೆ. ಇದರ ಬೆನ್ನಲ್ಲೇ ಸಿಂಗಾಪುರದಲ್ಲಿ ಕಚೇರಿ ಬಾಡಿಗೆಯನ್ನು ಮಸ್ಕ್‌ ಪಾವತಿಸದ ಕಾರಣ ಟ್ವಿಟ್ಟರ್‌ ಉದ್ಯೋಗಿಗಳು ಕಚೇರಿಯಿಂದ ಹೊರನಡೆದಿದ್ದಾರೆ.

    ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಮಾಲೀಕರು ಕಟ್ಟಡದಿಂದ ಹೊರನಡೆಯುವಂತೆ ಒತ್ತಾಯಿಸಿದ್ದಾರೆ. “ಟ್ವಿಟ್ಟರ್ ಉದ್ಯೋಗಿಗಳು ಬಾಡಿಗೆ ಪಾವತಿಸದ ಕಾರಣ ಸಿಂಗಾಪುರದ ಕಚೇರಿಯಿಂದ ಉದ್ಯೋಗಿಗಳು ಹೊರನಡೆದಿದ್ದಾರೆ” ಎಂದು ಟಾಪ್ ಟೆಕ್ ವಿಶ್ಲೇಷಕ ಕೇಸಿ ನ್ಯೂಟನ್ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯ ವಿರೂಪ – ಗೋಡೆ ಮೇಲೆ ಭಾರತ ವಿರೋಧಿ ಬರಹ

    ಟ್ವಿಟ್ಟರ್‌ ಪ್ಲಾಟ್‌ಫಾರ್ಮರ್‌ನ ವ್ಯವಸ್ಥಾಪಕ ಸಂಪಾದಕ ಜೊಯ್ ಶಿಫ್ಲರ್, ಟ್ವಿಟರ್ ಉದ್ಯೋಗಿಗಳ ಸೌಲಭ್ಯಗಳನ್ನು ಕಡಿತಗೊಳಿಸುತ್ತದೆ. ಕುಟುಂಬ ಯೋಜನೆ ಮತ್ತು ಊಟ ಭತ್ಯೆಗಳು ಎಲ್ಲವನ್ನೂ ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದರು. ಉದ್ಯೋಗಿಗಳಿಗೆ ಉಚಿತವಾಗಿ ನೀಡಲಾಗಿದ್ದ ಊಟಕ್ಕೆ ಟ್ವಿಟ್ಟರ್ ಈಗ ಶುಲ್ಕ ವಿಧಿಸಲು ಯೋಜಿಸುತ್ತಿದೆ.

    ಮಸ್ಕ್‌, ಟ್ವಿಟ್ಟರ್‌ ಕಚೇರಿಯ ಶಾಖೆಗಳಲ್ಲಿನ ಕ್ಲೀನರ್‌ಗಳನ್ನು ಕೆಲಸದಿಂದ ತೆಗೆದುಹಾಕಿದ ನಂತರ ಟಾಯ್ಲೆಟ್‌ ಪೇಪರ್‌ ಅನ್ನು ಬದಲಾಯಿಸಿ ಹೊಸದನ್ನು ಇಡಲು ಯಾರೂ ಇಲ್ಲದಂತಾಯಿತು. ಇದರಿಂದ ಉದ್ಯೋಗಿಗಳು ಸ್ವತಃ ತಾವೇ ಟಾಯ್ಲೆಟ್‌ ಪೇಪರ್‌ ಕೊಂಡೊಯ್ಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನೂ ಓದಿ: ಉಜ್ಬೇಕಿಸ್ತಾನದಲ್ಲಿ ಭಾರತದ ಕೆಮ್ಮಿನ ಸಿರಪ್‌ ಬಳಸಬೇಡಿ: WHO

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲಾಲು ಪ್ರಸಾದ್ ಯಾದವ್‌ಗೆ ಮಗಳ ಕಿಡ್ನಿ ಕಸಿ – ಶಸ್ತ್ರಚಿಕಿತ್ಸೆ ಯಶಸ್ವಿ

    ಲಾಲು ಪ್ರಸಾದ್ ಯಾದವ್‌ಗೆ ಮಗಳ ಕಿಡ್ನಿ ಕಸಿ – ಶಸ್ತ್ರಚಿಕಿತ್ಸೆ ಯಶಸ್ವಿ

    ಪಾಟ್ನಾ: ರಾಷ್ಟ್ರೀಯ ಜನತಾ ದಳದ (RJD) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಸಿಂಗಾಪುರದಲ್ಲಿ (Singapore) ಯಶಸ್ವಿ ಮೂತ್ರಪಿಂಡ ಕಸಿ (Kidney Transplant) ಶಸ್ತ್ರಚಿಕಿತ್ಸೆ (Surgery) ಒಳಗಾಗಿದ್ದಾರೆ. ಸಿಂಗಾಪುರದಲ್ಲಿ ನೆಲೆಸಿರುವ ತಮ್ಮ ಪುತ್ರಿಯೇ (Daughter) ಲಾಲು ಅವರಿಗೆ ಕಿಡ್ನಿ ದಾನ ಮಾಡಿ ತಂದೆಗೆ ಹೊಸ ಬದುಕು ನೀಡಿದ್ದಾರೆ.

    ಈ ಬಗ್ಗೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೋಮವಾರ ಟ್ವೀಟ್ ಮಾಡಿ, ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಸಿಂಗಾಪುರದಲ್ಲಿ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಹಾಗೂ ಅವರನ್ನು ಇದೀಗ ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಲಾಲು ಯಾದವ್ ಅವರು ಕಳೆದ ಹಲವು ತಿಂಗಳುಗಳಿಂದಲೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರಿಗೆ ವೈದ್ಯರು ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಬಳಿಕ ಲಾಲು ಅವರ ಪುತ್ರಿ ಸಿಂಗಾಪುರ ಮೂಲದ ರೋಹಿಣಿ ಆಚಾರ್ಯ ತಂದೆಗೆ ಕಿಡ್ನಿ ದಾನ ಮಾಡಲು ಮುಂದಾದರು. ಇದನ್ನೂ ಓದಿ: ಮದುವೆಯಲ್ಲಿ ಮೇಳೈಸಿದ ಡಿಜಿಟಲ್ ಇಂಡಿಯಾ

    ಲಾಲು ಅವರು ಮೇವು ಪ್ರಕರಣದಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದರು. ಬಳಿಕ ಜಾಮೀನಿನ ಮೇಲೆ ಹೊರಗಿದ್ದು, ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆಗಾಗಿ ದೆಹಲಿ ಹಾಗೂ ರಾಂಚಿಯಲ್ಲಿ ಹಲವು ಬಾರಿ ಆಸ್ಪತ್ರೆ ಸೇರಿದ್ದರು. ಅವರು ಮಧುಮೇಹ, ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ ಸೇರಿದಂತೆ ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

    ಕೆಲ ದಿನಗಳ ಹಿಂದೆ ರೋಹಿಣಿ ಅವರು ತಮ್ಮ ತಂದೆಗೆ ಕಿಡ್ನಿ ದಾನ ಮಾಡುವ ನಿರ್ಧಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತಿಳಿಸಿದ್ದರು. ನಾನು ನನ್ನ ತಂದೆಗೆ ನನ್ನ ದೇಹದ ಒಂದು ಸಣ್ಣ ಮಾಂಸವನ್ನು ನೀಡುತ್ತಿದ್ದೇನೆ. ನಾನು ಅಪ್ಪನಿಗಾಗಿ ಏನು ಬೇಕಾದರೂ ಮಾಡಬಲ್ಲೆ. ಎಲ್ಲವೂ ಚೆನ್ನಾಗಿ ನಡೆಯಲಿ ಎಂದು ಪ್ರಾರ್ಥಿಸುತ್ತೇನೆ ಹಾಗೂ ಅಪ್ಪ ಮತ್ತೊಮ್ಮೆ ಆರೊಗ್ಯವಾಗಿ ಧ್ವನಿ ಎತ್ತುತ್ತಾರೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಭಾರತ ಜಾತ್ಯತೀತ ರಾಷ್ಟ್ರ ಎಂದ ಸುಪ್ರೀಂ – ಠಾಕೂರ್‌ ಚಂದ್ರರನ್ನು ʼಪರಮಾತ್ಮʼ ಎಂದು ಘೋಷಿಸಲು ಕೋರಿದ್ದ PIL ವಜಾ

    Live Tv
    [brid partner=56869869 player=32851 video=960834 autoplay=true]

  • ಲಾಲುಗೆ ಕಿಡ್ನಿ ನೀಡಲು ಮುಂದಾದ ಪುತ್ರಿ – ನವೆಂಬರ್ ಅಂತ್ಯದಲ್ಲಿ ವಿದೇಶಕ್ಕೆ RJD ಮುಖ್ಯಸ್ಥ

    ಲಾಲುಗೆ ಕಿಡ್ನಿ ನೀಡಲು ಮುಂದಾದ ಪುತ್ರಿ – ನವೆಂಬರ್ ಅಂತ್ಯದಲ್ಲಿ ವಿದೇಶಕ್ಕೆ RJD ಮುಖ್ಯಸ್ಥ

    ಪಾಟ್ನಾ: ಕಳೆದ ಹಲವಾರು ವರ್ಷಗಳಿಂದ ಮೂತ್ರಪಿಂಡ ಕಾಯಿಲೆ (kidney) ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿದ್ದ ಆರ್‌ಜೆಡಿ (ರಜದ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರಿಗೆ ಪುತ್ರಿ ರೋಹಿಣಿ ಆಚಾರ್ಯ (Rohini Aacharya) ತಮ್ಮ ಕಿಡ್ನಿಯಲ್ಲಿ ಒಂದನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ಲಾಲು ಪ್ರಸಾದ್ ಯಾದವ್ ಹೊಸ ಜೀವನವನ್ನು ಪಡೆದುಕೊಳ್ಳಲಿದ್ದಾರೆ.

    ಅಕ್ಟೋಬರ್‌ನಲ್ಲಿ ಸಿಂಗಾಪುರಕ್ಕೆ (Singapore) ಭೇಟಿ ಕೊಟ್ಟ ಲಾಲು ಪ್ರಸಾದ್ ಯಾದವ್ ಅವರಿಗೆ, ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಈ ಬಳಿಕ ರೋಹಿಣಿ ಅವರು ಮೂತ್ರಪಿಂಡವನ್ನು ತನ್ನ ತಂದೆಗೆ ದಾನ ಮಾಡಲು ಮುಂದಾಗಿದ್ದಾರೆ. 

    ತಮ್ಮ ಜೀವವನ್ನು ಉಳಿಸಿಕೊಳ್ಳಲು ಮೊದಲಿಗೆ ರೋಹಿಣಿ ಕಿಡ್ನಿಯನ್ನು ಪಡೆಯಲು ಲಾಲು ಪ್ರಸಾದ್ ಒಪ್ಪಿಕೊಳ್ಳಲಿಲ್ಲ. ಆದರೆ ಆಕೆಯ ಮತ್ತು ಕುಟುಂಬಸ್ಥರ ಒತ್ತಡದ ಮೇರೆಗೆ ಕೊನೆಗೆ ಕಿಡ್ನಿ ಪಡೆಯಲು ಒಪ್ಪಿಕೊಂಡಿದ್ದಾರೆ. ನವೆಂಬರ್ 20 ರಿಂದ 24ರ ಒಳಗೆ ಲಾಲು ಅವರು ಮತ್ತೆ ಸಿಂಗಾಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಈ ಸಮಯದಲ್ಲಿ ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮುರುಘಾ ಮಠದಲ್ಲಿ ಫೋಟೋ ಕಳವು ಪ್ರಕರಣ – ಮಾಜಿ ಶಾಸಕ ಬಸವರಾಜನ್ ವಶಕ್ಕೆ

    ಲಾಲು ಪ್ರಸಾದ್ ಅವರ ಎರಡನೇ ಪುತ್ರಿಯಾಗಿರುವ ರೋಹಿಣಿ ಅವರು ಸಿಂಗಾಪುರದಲ್ಲಿ ನೆಲೆಸಿದ್ದು, ತಮ್ಮ ತಂದೆಗೆ ಮೂತ್ರಪಿಂಡ ಕಾಯಿಲೆ ಸಮಸ್ಯೆ ಇರುವ ಬಗ್ಗೆ ಬಹಳ ಆತಂಕಕ್ಕೊಳಗಾಗಿದ್ದರು. ನಂತರ ಮೂತ್ರಪಿಂಡ ಕಸಿ ಸಲಹೆ ನೀಡಿದ ವೈದ್ಯರ ತಂಡವನ್ನು ಸಂಪರ್ಕಿಸಲು ಲಾಲು ಪ್ರಸಾದ್ ಅವರು ಸಿಂಗಾಪುರಕ್ಕೆ ಭೇಟಿ ನೀಡಿದ್ದರು.

    ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಗೆ ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಪ್ರಸಾದ್‍ಗೆ ಎಐಐಎಂಎಸ್‍ನ ವೈದ್ಯರು ಕಿಡ್ನಿ ಕಸಿ ಮಾಡಿಸಿಕೊಳ್ಳಲು ಸಲಹೆ ನೀಡಿರಲಿಲ್ಲ. ಆದರೆ ಸಿಂಗಾಪುರಕ್ಕೆ ಭೇಟಿ ನೀಡಿದ ಲಾಲು ಅವರಿಗೆ ಅಲ್ಲಿನ ವೈದ್ಯರು ಕಿಡ್ನಿ ಕಸಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕೊಯಮತ್ತೂರು ಕಾರು ಸ್ಫೋಟ ಪ್ರಕರಣ – 45ಕ್ಕೂ ಹೆಚ್ಚು ಕಡೆ NIA ದಾಳಿ

    Live Tv
    [brid partner=56869869 player=32851 video=960834 autoplay=true]

  • ಸಿಂಗಾಪುರ ಭೇಟಿ ರದ್ದು – ನಾನು ಯಾರನ್ನೂ ದೂಷಿಸಲ್ಲ: ಕೇಜ್ರಿವಾಲ್

    ಸಿಂಗಾಪುರ ಭೇಟಿ ರದ್ದು – ನಾನು ಯಾರನ್ನೂ ದೂಷಿಸಲ್ಲ: ಕೇಜ್ರಿವಾಲ್

    ನವದೆಹಲಿ: ಸಿಂಗಾಪುರದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡದೇ ಇರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಈ ವಿಚಾರವಾಗಿ ಯಾರನ್ನೂ ದೂಷಿಸುವುದಿಲ್ಲ ಎಂದು ಹೇಳಿದ್ದಾರೆ.

    ನನ್ನ ಪ್ರಯಾಣದ ಪ್ರಸ್ತಾಪವನ್ನು ರಾಷ್ಟ್ರ ರಾಜಧಾನಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ತಿರಸ್ಕರಿಸಿದ್ದಾರೆ. ಸಿಂಗಾಪುರದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸಿ, ನನ್ನ ಅಭಿಪ್ರಾಯ ಹಾಗೂ ಭಾರತದಲ್ಲಿ ನಡೆಯುತ್ತಿರುವ ಕೆಲಸಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಅನುಮತಿ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು. ಆದರೂ ನಾನು ಈ ವಿಚಾರವಾಗಿ ಯಾರನ್ನೂ ದೂಷಿಸುವುದಿಲ್ಲ ಎಂದಿದ್ದಾರೆ.

    ನಿನ್ನೆಯಷ್ಟೇ ದೆಹಲಿ ಸರ್ಕಾರ ಸಿಂಗಾಪುರ ಭೇಟಿಗೆ ಅನುಮತಿ ನೀಡದ್ದಕ್ಕೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದು ದೇಶಕ್ಕೆ ಅವಮಾನ ತಂದಿದೆ. ಪ್ರಯಾಣದ ವಿಧಿ ವಿಧಾನಗಳನ್ನು ಪೂರ್ಣಗೊಳಿಸಲು ಜುಲೈ 20 ಕೊನೆಯ ದಿನಾಂಕವಾಗಿದ್ದು, ಅದೀಗ ಮೀರಿ ಹೋಗಿದೆ. ಈಗಾಗಲೇ ಅನುಮತಿಗೆ ಅತ್ಯಂತ ವಿಳಂಬವಾಗಿದೆ ಎಂದು ದೆಹಲಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಭಾರೀ ಬೆಂಕಿಗೆ ಹೊತ್ತಿ ಉರಿದ ಮುಂಬೈ ಶಾಪ್ – ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

    ಕೇಜ್ರಿವಾಲ್ ಅವರು ಸಿಂಗಾಪುರಕ್ಕೆ ಭೇಟಿ ನೀಡಿದರೆ, ಮುಂದೆ ದೇಶ ಅವಮಾನ ಎದುರಿಸಬೇಕಾಗುತ್ತದೆ ಎಂಬ ಭಯದಲ್ಲಿ ಕೇಂದ್ರ ಅವರ ಪ್ರಯಾಣಕ್ಕೆ ತಡೆಯೊಡ್ಡಿದೆ ಎಂದು ಕೇಜ್ರಿವಾಲ್ ನೇತೃತ್ವದ ಸರ್ಕಾರ ತಿಳಿಸಿದೆ. ಆದರೂ ಇದೀಗ ಕೇಜ್ರಿವಾಲ್ ತಾವೇ ಈ ವಿಚಾರವಾಗಿ ಯಾರನ್ನೂ ದೂಷಿಸಲ್ಲ ಎಂದಿದ್ದಾರೆ. ಇದನ್ನೂ ಓದಿ: ಗಿಫ್ಟ್‌ ಸಿಟಿಯಲ್ಲಿ ಭಾರತದ ಮೊದಲ ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ವಿನಿಮಯ ಕೇಂದ್ರಕ್ಕೆ ಚಾಲನೆ – ವಿಶೇಷತೆ ಏನು?

    Live Tv
    [brid partner=56869869 player=32851 video=960834 autoplay=true]

  • ಸಿಂಗಾಪುರ ಭೇಟಿಗೆ ಕೇಜ್ರಿವಾಲ್‌ಗೆ ಅನುಮತಿ ನಿರಾಕರಿಸಿದ ಲೆಫ್ಟಿನೆಂಟ್ ಗವರ್ನರ್

    ಸಿಂಗಾಪುರ ಭೇಟಿಗೆ ಕೇಜ್ರಿವಾಲ್‌ಗೆ ಅನುಮತಿ ನಿರಾಕರಿಸಿದ ಲೆಫ್ಟಿನೆಂಟ್ ಗವರ್ನರ್

    ನವದೆಹಲಿ: ಆಗಸ್ಟ್ 1 ರಂದು ಸಿಂಗಾಪುರದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೋರಿದ ಅನುಮತಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್(ಎಲ್‌ಜಿ) ವಿ.ಕೆ ಸಕ್ಸೇನಾ ಗುರುವಾರ ತಿರಸ್ಕರಿಸಿದ್ದಾರೆ.

    ಸಿಂಗಾಪುರದಲ್ಲಿ ನಡೆಯಲಿರುವ ಶೃಂಗಸಭೆ ಮೇಯರ್‌ಗಳಿಗೆ ಮೀಸಲಾಗಿದ್ದು, ಆ ಕಾರ್ಯಕ್ರಮದಲ್ಲಿ ಸಿಎಂ ಹಾಜರಾಗುವುದು ಸರಿಯಲ್ಲ ಎಂದು ಸಕ್ಸೇನಾ ಹೇಳಿದ್ದಾರೆ.

    ಲೆಫ್ಟಿನೆಂಟ್ ಗವರ್ನರ್ ಶೃಂಗಸಭೆಯ ಭೇಟಿಗೆ ಅನುಮತಿ ನೀಡದಿದ್ದರೂ ಕೇಜ್ರಿವಾಲ್ ಸಿಂಗಾಪುರಕ್ಕೆ ಭೇಟಿ ನೀಡುವುದಾಗಿ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಕೈ ಕೊಟ್ಟ ಮೋದಿ ಪ್ಲಾನ್ – ಕಾಡುಗಳ್ಳರ ಪತ್ತೆ ಹಚ್ಚಲು ವಿಫಲವಾಯ್ತು ಮುಧೋಳ ತಳಿಯ ಶ್ವಾನ

    ಅನುಮತಿ ನಿರಾಕರಣೆಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ನಮ್ಮ ದೇಶದ ಪ್ರತಿಯೊಂದು ಸಾಂವಿಧಾನಿಕ ಪ್ರಾಧಿಕಾರದ ಭೇಟಿಯನ್ನು ಆ ಪ್ರಾಧಿಕಾರದ ವ್ಯಾಪ್ತಿಯೊಳಗೆ ಬರುವ ವಿಷಯಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ನಿಮ್ಮ ಮಾತಿನಂತೆ ನಡೆಯುವುದಾದರೆ, ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ವಿದೇಶಿ ಭೇಟಿಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಹೆಚ್ಚಿನ ಭೇಟಿಗಳಲ್ಲಿ ರಾಜ್ಯದ ಪಟ್ಟಿಯಲ್ಲಿ ಹಾಗೂ ಅಧಿಕಾರದ ವ್ಯಾಪ್ತಿಯಲ್ಲಿ ಬಾರದ ವಿಷಯಗಳನ್ನೇ ಚರ್ಚಿಸುತ್ತಾರೆ ಎಂದಿದ್ದಾರೆ.

    ಕೇಜ್ರಿವಾಲ್ ಅವರನ್ನು ಜೂನ್‌ನಲ್ಲಿ ಸಿಂಗಾಪುರದ ಹೈ ಕಮಿಷನರ್ ಸೈಮನ್ ವಾಂಗ್ ಅವರು ಶೃಂಗಸಭೆಗೆ ಆಹ್ವಾನಿಸಿದ್ದರು. ಈ ಬಗ್ಗೆ ಕಳೆದ ವಾರ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಸಿಂಗಾಪುರ ಭೇಟಿಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ

    ಕೇಂದ್ರ ತನಗೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡದೇ ಹೋದಾಗ ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿ, ನಾನು ಅಪರಾಧಿಯಲ್ಲ, ದೆಹಲಿಯ ಚುನಾಯಿತ ಮುಖ್ಯಮಂತ್ರಿ. ಸಿಂಗಾಪುರದಲ್ಲಿ ನಡೆಯುತ್ತಿರುವ ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸುವುದು ಹೆಮ್ಮೆಯ ವಿಚಾರ. ಆದರೆ ಕೇಂದ್ರ ನನಗೆ ಭೇಟಿಗೆ ಅನುಮತಿ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

    Live Tv
    [brid partner=56869869 player=32851 video=960834 autoplay=true]

  • ಗೊಟಬಯ ರಾಜಪಕ್ಸೆಗೆ ಶಾಕ್ ಕೊಟ್ಟ ಸಿಂಗಾಪುರ – ದೇಶ ಬಿಟ್ಟು ಹೊರಡಿ ಎಂದು ಖಡಕ್ ಸೂಚನೆ

    ಗೊಟಬಯ ರಾಜಪಕ್ಸೆಗೆ ಶಾಕ್ ಕೊಟ್ಟ ಸಿಂಗಾಪುರ – ದೇಶ ಬಿಟ್ಟು ಹೊರಡಿ ಎಂದು ಖಡಕ್ ಸೂಚನೆ

    ಸಿಂಗಾಪುರ: ಶ್ರೀಲಂಕಾವನ್ನು ಆರ್ಥಿಕವಾಗಿ ಮುಳುಗಿಸಿ ಜನರ ಆಕ್ರೋಶಕ್ಕೆ ಹೆದರಿ ದೇಶ ಬಿಟ್ಟು ಸಿಂಗಾಪುರಕ್ಕೆ ಓಡಿ ಹೋದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆಗೆ ಸಿಂಗಾಪುರ ಆಡಳಿತ ಬಿಗ್ ಶಾಕ್ ನೀಡಿದೆ.

    ಸಿಂಗಾಪುರ ಬಿಟ್ಟು ತೆರಳುವಂತೆ ಗೊಟಬಯಗೆ ಸೂಚಿಸಿದೆ. `ನೀವು ಪ್ರವಾಸಿ ವೀಸಾ ಮೇಲೆ ಬಂದಿದ್ದೀರಿ. ಅದನ್ನು ವಿಸ್ತರಿಸಲು ನಾವು ಸಿದ್ಧರಿಲ್ಲ. ನೀವಿನ್ನು ನಮ್ಮ ದೇಶದಿಂದ ಹೊರಡಬಹುದು’ ಎಂದು ಗೊಟಬಯಗೆ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಉಕ್ರೇನ್ ಉನ್ನತ ಅಧಿಕಾರಿಗಳನ್ನ ಅಮಾನತು ಮಾಡಿದ ಝೆಲೆನ್ಸ್ಕಿ

    ಈ ಮಧ್ಯೆ ಶ್ರೀಲಂಕಾದಲ್ಲಿ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತೊಮ್ಮೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಶಾಂತಿ-ಭದ್ರತೆಯ ಕಾರಣ ನೀಡಿ ವಿಕ್ರಮಸಿಂಘೆ ತುರ್ತು ಪರಿಸ್ಥಿತಿ ಹೇರಿದ್ದಾರೆ.

    ಅಂದಹಾಗೆ ರನಿಲ್ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಆಡಳಿತಾರೂಢ ಪಕ್ಷ ಪೊಡುಜನ ಪೆರಮುನ ಚಿಂತನೆ ನಡೆಸಿದೆ. ಇದು ರಾಜಪಕ್ಸೆ ಕುಟುಂಬಕ್ಕೆ ಸೇರಿದ ಪಕ್ಷ. ಹೀಗಾಗಿ ರನಿಲ್ ಗೆಲುವು ಖಚಿತ ಎನ್ನಲಾಗುತ್ತಿದೆ. ಇದನ್ನೂ ಓದಿ: ನೀವು ಬರಬೇಡಿ.. ನಿಮ್ಮ ಮನೆಯ ಪುರುಷರನ್ನು ಕೆಲಸಕ್ಕೆ ಕಳಿಸಿ: ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್‌ ಸೂಚನೆ

    ಇದೇ ನಡೆದಲ್ಲಿ ಶ್ರೀಲಂಕಾದಲ್ಲಿ ಮತ್ತೆ ಬರೋದು ರಾಜಪಕ್ಸೆ ಸರ್ಕಾರವೇ ಆಗಿರಲಿದೆ. ನಮಗೆ ನ್ಯಾಯ ಸಿಗಲ್ಲ. ದೇಶವೂ ಉದ್ಧಾರ ಆಗಲ್ಲ ಎಂದು ಹೋರಾಟಗಾರರು ನೋವು ವ್ಯಕ್ತಪಡಿಸ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]