Tag: Singapore

  • ಸೆಕ್ಸ್‌ ವರ್ಕರ್ಸ್‌ ಮೇಲೆ ಹಲ್ಲೆ ನಡೆಸಿ ದರೋಡೆ: ಸಿಂಗಾಪುರದಲ್ಲಿ ಇಬ್ಬರು ಭಾರತೀಯರಿಗೆ ಜೈಲು ಶಿಕ್ಷೆ

    ಸೆಕ್ಸ್‌ ವರ್ಕರ್ಸ್‌ ಮೇಲೆ ಹಲ್ಲೆ ನಡೆಸಿ ದರೋಡೆ: ಸಿಂಗಾಪುರದಲ್ಲಿ ಇಬ್ಬರು ಭಾರತೀಯರಿಗೆ ಜೈಲು ಶಿಕ್ಷೆ

    – 5 ವರ್ಷ ಜೈಲು, 12 ಬೆತ್ತದ ಏಟಿನ ಶಿಕ್ಷೆ ವಿಧಿಸಿದ ಕೋರ್ಟ್‌

    ಸಿಂಗಾಪುರ: ರಜೆ ಮೂಡ್‌ನಲ್ಲಿದ್ದ ಇಬ್ಬರು ಭಾರತೀಯರು, ಸೆಕ್ಸ್‌ ವರ್ಕರ್ಸ್‌ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

    ಇಬ್ಬರು ಲೈಂಗಿಕ ಕಾರ್ಯಕರ್ತೆಯರನ್ನು ಹೋಟೆಲ್‌ಗೆ ಕರೆಸಿ ದರೋಡೆ ಮಾಡಲಾಗಿದೆ. ಅವರ ಮೇಲೆ ಇಬ್ಬರು ಭಾರತೀಯ ಪುರುಷರು ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ಈ ಆರೋಪದಲ್ಲಿ ಭಾರತೀಯರಿಗೆ ತಲಾ 5 ವರ್ಷ, 1 ತಿಂಗಳು ಜೈಲು ಹಾಗೂ 12 ಬೆತ್ತದ ಏಟುಗಳ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ; ಭಾರತದ ಉದ್ಯಮಿ, ಪತ್ನಿ ಸ್ಥಳದಲ್ಲೇ ಸಾವು

    ಅರೋಕ್ಕಿಯಸಾಮಿ ಡೈಸನ್ (23) ಮತ್ತು ರಾಜೇಂದ್ರನ್ ಮಾಯಿಲರಸನ್ (27) ಬಂಧಿತ ಆರೋಪಿಗಳು. ಇವರಿಬ್ಬರೂ ರಜೆ ದಿನ ಕಳೆಯಲು ಭಾರತದಿಂದ ಸಿಂಗಾಪುರಕ್ಕೆ ಬಂದಿದ್ದರು. ಲಿಟಲ್ ಇಂಡಿಯಾ ಪ್ರದೇಶದಲ್ಲಿ ಇಬ್ಬರೂ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು, ಲೈಂಗಿಕ ಸೇವೆಗಳಿಗಾಗಿ ವೇಶ್ಯೆಯರನ್ನು ನೇಮಿಸಿಕೊಳ್ಳಲು ಆಸಕ್ತಿ ಇದೆಯೇ ಎಂದು ಕೇಳುತ್ತಾರೆ. ಬಳಿಕ ಇಬ್ಬರು ಸೆಕ್ಸ್‌ ವರ್ಕರ್ಸ್‌ ನಂಬರ್‌ ಕೊಟ್ಟು ಹೋಗುತ್ತಾರೆ.

    ಆರೋಕ್ಕಿಯಾ ತನಗೆ ಹಣದ ಅವಶ್ಯಕತೆ ಇದೆ ಅಂತ ರಾಜೇಂದ್ರನ್ ಬಳಿ ಹೇಳಿಕೊಳ್ಳುತ್ತಾನೆ. ಈ ಮಹಿಳೆಯರನ್ನು ಸಂಪರ್ಕಿಸಿ ಹೋಟೆಲ್ ಕೋಣೆಯಲ್ಲಿ ದರೋಡೆ ಮಾಡಲು ಇಬ್ಬರು ಪ್ಲ್ಯಾನ್‌ ಮಾಡುತ್ತಾರೆ. ಆ ದಿನ ಸಂಜೆ 6 ಗಂಟೆ ಸುಮಾರಿಗೆ ಹೋಟೆಲ್ ಕೋಣೆಯಲ್ಲಿ ಒಬ್ಬ ಮಹಿಳೆಯನ್ನು ಭೇಟಿಯಾಗಲು ಇಬ್ಬರೂ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇದನ್ನೂ ಓದಿ: ಅಮೆರಿಕ ಧ್ವಜ ಸುಟ್ಟರೆ ತಕ್ಷಣ ಬಂಧನ, 1 ವರ್ಷ ಜೈಲು ಶಿಕ್ಷೆ: ಡೊನಾಲ್ಡ್‌ ಟ್ರಂಪ್‌ ಆದೇಶ

    ಸೆಕ್ಸ್‌ ವರ್ಕರ್‌ ರೂಮಿನೊಳಗೆ ಬರುತ್ತಿದ್ದಂತೆ ಆಕೆಯ ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿ ಆಭರಣ, 2,000 ಸಿಂಗಾಪುರ ಡಾಲರ್‌ ನಗದು, ಪಾಸ್‌ಪೋರ್ಟ್‌ ಮತ್ತು ಬ್ಯಾಂಕ್‌ ಕಾರ್ಡ್‌ಗಳನ್ನು ದೋಚುತ್ತಾರೆ. ಮತ್ತೆ 2ನೇ ಸೆಕ್ಸ್‌ ವರ್ಕರ್‌ ಸಂಪರ್ಕಿಸಿ ಹೋಟೆಲ್‌ಗೆ ಕರೆಸಿಕೊಳ್ಳುತ್ತಾರೆ. ಆಕೆ ಮೇಲೂ ಹಲ್ಲೆ ನಡೆಸಿ ಹಣ, ಮೊಬೈಲ್‌ ದರೋಡೆ ಮಾಡುತ್ತಾರೆ. ಕೊನೆಗೆ ಇಬ್ಬರನ್ನೂ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರಿಗೆ ಶಿಕ್ಷೆ ವಿಧಿಸಿದೆ.

  • ಗಾಯಕ ಜುಬೀನ್ ಗಾರ್ಗ್ ಸಾವು | ಕಾರ್ಯಕ್ರಮ ಆಯೋಜಕರ ವಿರುದ್ಧ FIR – ತನಿಖೆಗೆ ಮುಂದಾದ ಅಸ್ಸಾಂ ಸರ್ಕಾರ

    ಗಾಯಕ ಜುಬೀನ್ ಗಾರ್ಗ್ ಸಾವು | ಕಾರ್ಯಕ್ರಮ ಆಯೋಜಕರ ವಿರುದ್ಧ FIR – ತನಿಖೆಗೆ ಮುಂದಾದ ಅಸ್ಸಾಂ ಸರ್ಕಾರ

    • ಸ್ಕೂಬಾ ಡೈವಿಂಗ್ ವೇಳೆ ಸಾವನ್ನಪ್ಪಿದ್ದ ಪ್ರಸಿದ್ಧ ಗಾಯಕ

    ದಿಸ್ಪುರ: ಸ್ಕೂಬಾ ಡೈವಿಂಗ್ ವೇಳೆ ಸಾವನ್ನಪ್ಪಿದ್ದ ಪ್ರಸಿದ್ಧ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಅವರ (Zubeen Garg) ಮರಣೋತ್ತರ ಪರೀಕ್ಷೆ ಸಿಂಗಾಪುರದಲ್ಲಿ ನಡೆಯುತ್ತಿದ್ದು, ಇದೀಗ ಅಸ್ಸಾಂ ಸರ್ಕಾರ (Assam Govt) ಸಾವಿನ ತನಿಖೆ ನಡೆಸಲು ಮುಂದಾಗಿದೆ.

    ಈ ಕುರಿತು ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಜುಬೀನ್ ಗಾರ್ಗ್ ಸಾವನ್ನಪ್ಪುವ ಮುನ್ನ ಕಾರ್ಯಕ್ರಮ ಆಯೋಜಕರಾದ ಶ್ಯಾಮ್ ಕನು ಮಹಾಂತ ಹಾಗೂ ಸಿದ್ಧಾರ್ಥ ಶರ್ಮಾ ಅವರ ಜೊತೆಗಿದ್ದರು. ಹೀಗಾಗಿ ಈ ಕುರಿತು ಅಸ್ಸಾಂ ಸರ್ಕಾರ ತನಿಖೆ ನಡೆಸಲಿದ್ದು, ಕಾರ್ಯಕ್ರಮ ಆಯೋಜಕರ ವಿರುದ್ಧ ಮೋರಿಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಸ್ಕೂಬಾ ಡೈವಿಂಗ್‌ ವೇಳೆ ಬಾಲಿವುಡ್‌ನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು

    ಆಯೋಜಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಸಿಐಡಿಗೆ ವರ್ಗಾಯಿಸಿ, ವಿಚಾರಣೆ ನಡೆಸಿ ಎಂದು ಅಸ್ಸಾಂ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ. ಸಿಂಗಾಪುರ ಕಮಿಷನರ್ ಅವರೊಂದಿಗೆ ಮಾತನಾಡಿ ವಿವರವಾಗಿ ತನಿಖೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದಿದ್ದಾರೆ.

    ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಜುಬೀನ್ ಗಾರ್ಗ್ ಅವರು ಸಿಂಗಾಪುರಕ್ಕೆ ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅವಘಡಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಗ್ ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

    ಜುಬೀನ್ ಗರ್ಗ್ ಅಸ್ಸಾಮಿ ಮತ್ತು ಹಿಂದಿ ಮಾತ್ರವಲ್ಲದೆ, ಬಂಗಾಳಿ, ಮರಾಠಿ, ತಮಿಳು, ತೆಲುಗು ಮತ್ತು ನೇಪಾಳಿ ಸೇರಿದಂತೆ ಹಲವು ಭಾಷೆಗಳಿಗೆ ಹಾಡಿದ್ದಾರೆ. ತಮ್ಮ ಮೂರನೇ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಅವರ ಮೊದಲ ಆಲ್ಬಂ ‘ಅನಾಮಿಕಾ’ 1992 ರಲ್ಲಿ ಬಿಡುಗಡೆಯಾಯಿತು. ‘ಮಾಯಾ’, ‘ಜುಬೀನೋರ್ ಗಾನ್’, ‘ಕ್ಸಾಬ್ಡಾ’, ‘ಪಾಖಿ’, ‘ಶಿಶು’, ‘ಜಂತ್ರ’ ಅವರ ಅತ್ಯಂತ ಪ್ರೀತಿಯ ಅಸ್ಸಾಮೀಸ್ ಆಲ್ಬಂಗಳಲ್ಲಿ ಕೆಲವು. ಅವರು ‘ದಿಲ್ ಸೆ’, ‘ವಾಸ್ತವ್’, ‘ಫಿಜಾ’, ‘ಅಶೋಕ’, ‘ಕಾಂಟೆ’, ‘ಗ್ಯಾಂಗ್‌ಸ್ಟರ್’, ‘ಕ್ರಿಶ್ 3’ ಮತ್ತು ಇನ್ನೂ ಹೆಚ್ಚಿನ ಹಿಂದಿ ಚಿತ್ರಗಳಿಗೂ ಹಾಡಿದ್ದಾರೆ. ಆದಾಗ್ಯೂ, ಗ್ಯಾಂಗ್‌ಸ್ಟರ್‌ಗಾಗಿ ಅವರು ಹಾಡಿದ್ದ ‘ಯಾ ಅಲಿ’ ಹಾಡು ಅವರಿಗೆ ಅಸ್ಸಾಂನ ಹೊರಗೂ ಜನಪ್ರಿಯತೆ ತಂದುಕೊಟ್ಟಿತು.ಇದನ್ನೂ ಓದಿ: ಮಾರಿಗಲ್ಲು ವೆಬ್ ಸರಣಿ : ಅಪ್ಪು ಕನಸು ನನಸು

  • ಹಾಂಕಾಂಗ್‌, ಸಿಂಗಾಪುರದಲ್ಲಿ ಮತ್ತೆ ಕೋವಿಡ್‌ ಸ್ಫೋಟ- ಭಾರತಕ್ಕೂ ಕಾಲಿಟ್ಟ ಮಹಾಮಾರಿ

    ಹಾಂಕಾಂಗ್‌, ಸಿಂಗಾಪುರದಲ್ಲಿ ಮತ್ತೆ ಕೋವಿಡ್‌ ಸ್ಫೋಟ- ಭಾರತಕ್ಕೂ ಕಾಲಿಟ್ಟ ಮಹಾಮಾರಿ

    2019ರಲ್ಲಿ ಸಮುದ್ರದ ಅಲೆಯಂತೆ ಜಗತ್ತಿಗೆ ಅಪ್ಪಳಿಸಿದ ಕೋವಿಡ್‌ ಮಹಾಮಾರಿ ಅದೆಷ್ಟೋ ಜೀವಗಳನ್ನು ಬಲಿತೆಗೆದುಕೊಂಡಿತ್ತು. 3 ವರ್ಷಗಳ ಕಾಲ ಜಗತ್ತನ್ನು ಕಾಡಿದ್ದ ಕೋವಿಡ್ -19 ಮತ್ತೊಮ್ಮೆ ಏಷ್ಯಾದ ಕೆಲವು ಭಾಗಗಳಲ್ಲಿ ವೇಗವಾಗಿ ಹರಡುತ್ತಿದೆ. ಪ್ರಕರಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ವಿಶೇಷವಾಗಿ ಹಾಂಕಾಂಗ್‌ ಮತ್ತು ಸಿಂಗಾಪುರದಂತಹ ಹಣಕಾಸು ಪ್ರಮುಖ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಎಚ್ಚೆತ್ತ ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಇದು ಹೊಸ ಅಲೆ ಎಂದು ದೃಢಪಡಿಸಿದ್ದಾರೆ. ಇದೀಗ ಈ ಮಹಾಮಾರಿ ಭಾರತಕ್ಕೂ ಕಾಲಿಟ್ಟಿದೆ. ಹಾಗಿದ್ರೆ ಏನಿದು ಕೋವಿಡ್‌ ಹೊಸ ರೂಪ? ಭಾರತದಲ್ಲಿ ಇಲ್ಲಿವರೆಗೆ ದಾಖಲಾದ ಪ್ರಕರಣಗಳೆಷ್ಟು? ಈ ಬಗ್ಗೆ ತಜ್ಞರು ಹೇಳೋದೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ. 

    ಹಾಂಕಾಂಗ್, ಥಾಯ್ಲೆಂಡ್, ಸಿಂಗಾಪುರ, ಚೀನಾ ಸೇರಿದಂತೆ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ಸ್ಫೋಟಗೊಂಡಿದೆ. ಪ್ರತಿ ದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಆತಂಕದ ಬೆನ್ನಲ್ಲೇ ಕ್ರಿಕೆಟರ್‌ ಟ್ರಾವಿಸ್‌ ಹೆಡ್‌ ಹಾಗೂ 18ನೇ ಆವೃತ್ತಿ ಬಿಗ್ ಬಾಸ್ ಖ್ಯಾತಿಯ ಶಿಲ್ಪಾ ಶಿರೋಡ್ಕರ್‌ ಒಳಗೊಂಡಂತೆ ಅನೇಕರಲ್ಲಿ ಕೋವಿಡ್ ವೈರಸ್ ಕಾಣಿಸಿಕೊಂಡಿದೆ. ಪ್ರಸ್ತುತ ಭಾರತದಲ್ಲಿ 257 ಕೋವಿಡ್‌ ಪ್ರಕರಣಗಳು ದಾಖಲಾಗಿದೆ. 

    ಕಳೆದ ಕೆಲವು ವಾರಗಳಲ್ಲಿ ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದ ನಂತರ ಭಾರತವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಭಾರತದಲ್ಲಿರುವ ಬಹುತೇಕ ಪ್ರಕರಣಗಳು ಸೌಮ್ಯವಾಗಿವೆ, ತೀವ್ರವಾಗುವ ಯಾವ ಲಕ್ಷಣಗಳೂ ಗೋಚರಿಸುವುದಿಲ್ಲ. ದೇಶದ ದೊಡ್ಡ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಆಲೋಚಿಸಿದರೆ ಭಾರತದಲ್ಲಿ ಪ್ರಸ್ತುತ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ. ಈ ಎಲ್ಲಾ ಪ್ರಕರಣಗಳು ಸೌಮ್ಯವಾಗಿದ್ದು, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. 

    ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಪ್ರಕರಣಗಳ ಪ್ರಮಾಣ ಹೆಚ್ಚಿದೆ. ಕಳೆದ ವಾರದಲ್ಲಿ ಕೇರಳದಲ್ಲಿ 69 ಹೊಸ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 44 ಮತ್ತು ತಮಿಳುನಾಡು 34 ಹೊಸ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿಯೂ ಎರಡು ಸಾವುಗಳು ವರದಿಯಾಗಿವೆ. ವೈದ್ಯರ ಪ್ರಕಾರ, ಇವು ಕೋವಿಡ್ -19 ಸಾವುಗಳಲ್ಲ, ಆದರೆ ಇಬ್ಬರೂ ರೋಗಿಗಳಿಗೂ ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದಿದೆ.

    ಸನ್‌ರೈಸರ್ಸ್ ಹೈದರಾಬಾದ್‌ನ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕು ದೃಢವಾಗಿದ್ದರಿಂದ ಅವರು ಸೋಮವಾರ ಲಕ್ನೋದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ.

    ಅಲ್ಲದೇ ನಟಿ ಶಿಲ್ಪಾ ಶಿರೋಧ್ಕರ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ತಮಗೆ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ, ‘ನಮಸ್ಕಾರ ಜನರೇ! ನನಗೆ ಕೋವಿಡ್ ಪಾಸಿಟಿವ್ ಬಂದಿದೆ.  ನೀವು ಮಾಸ್ಕ್ ಧರಿಸಿ ಸುರಕ್ಷಿತರಾಗಿರಿ ಎಂದು ಬರೆದುಕೊಂಡಿದ್ದಾರೆ.

    ಒಟ್ಟಾರೆ, ಕೋವಿಡ್ ಆತಂಕ ಹೆಚ್ಚಾಗುತ್ತಿದ್ದು, ಈಗಾಗಲೇ ಸಿಂಗಾಪುರ ಮತ್ತು ಹಾಂಕಾಂಗ್‌ನಲ್ಲಿ ಅಲರ್ಟ್ ಘೋಷಿಸಲಾಗಿದೆ. ಸಿಂಗಾಪುರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮೇ 03ರಿಂದ ಇಲ್ಲಿಯವರೆಗೂ 14,200 ಕೇಸ್ ದಾಖಲಾಗಿದ್ದು, ಅದರ ಹಿಂದಿನ ವಾರಕ್ಕಿಂತ ಶೇ.28ರಷ್ಟು ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಸುಮಾರು ಶೇ.30ರಷ್ಟು ಹೆಚ್ಚಾಗಿದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ತಿಳಿಸಿದೆ. ಉಲ್ಬಣವಾಗುತ್ತಿರುವ ಈ ಮಹಾಮಾರಿಯನ್ನು ಒಮಿಕ್ರಾನ್‌ ಉಪತಳಿಯಾದ JN.1 ವೈರಸ್ ಎಂದು ಗುರುತಿಸಲಾಗಿದೆ.

    ಏನಿದು JN.1 ವೈರಸ್?
    JN.1 ಕೋವಿಡ್ ವೈರಸ್  2023ರ ಆಗಸ್ಟ್ ತಿಂಗಳಲ್ಲಿ ಸದ್ದು ಮಾಡಿದ ಕೋವಿಡ್ ಒಮಿಕ್ರಾನ್ ವೇರಿಯೆಂಟ್‌ನ BA.2.86 ರೂಪಾಂತರ ತಳಿಯಾಗಿದೆ. ಈ ಒಮಿಕ್ರಾನ್ ವೈರಸ್ ಬರೋಬ್ಬರಿ 30 ರೂಪಾಂತರಗೊಳ್ಳುವ ಸಾಮರ್ಥ್ಯ ಹೊಂದಿದೆ. ಈ 30 ರೂಪಾಂತರಗಳಲ್ಲಿ ಇದೀಗ ಕಾಣಿಸಿಕೊಂಡ JN.1 ತಳಿ ಒಂದಾಗಿದೆ. 

    ತಜ್ಞರು ಹೇಳೋದೇನು?
    ಮೆರಿಲ್ಯಾಂಡ್‌ನ ಜಾನ್ ಹಾಪ್‌ಕಿನ್ಸ ವಿಶ್ವವಿದ್ಯಾಲಯದ ಪ್ರಕಾರ, JN.1 ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ವೇಗ ಹೆಚ್ಚು. ಇದು ಮತ್ತೊಂದು ರೂಪಾಂತರಗೊಳ್ಳುವ ಸಾಧ್ಯತೆಯೂ ಇದೆ. ಸದ್ಯ ಹರಡತ್ತಿರುವ JN.1 ವೈರಸ್ ಹೆಚ್ಚು ಪರಿಣಾಮಕಾರಿಯಾಗಿದೆ. ಅತೀ ಬೇಗದಲ್ಲಿ ಮನುಷ್ಯನ ಪ್ರತಿರೋಧ ಶಕ್ತಿಯನ್ನು ಕುಗ್ಗಿಸಿ ಆರೋಗ್ಯವಂತರನ್ನು ಅನಾರೋಗ್ಯಪೀಡಿತರನ್ನಾಗಿ ಮಾಡಲಿದೆ. ಹೀಗಾಗಿ ಮುಂಜಾಗ್ರತೆ ಅತೀ ಅವಶ್ಯಕ ಎಂದು  ಅಧ್ಯಯನ ವರದಿ ಹೇಳುತ್ತದೆ.

    ರೋಗ ಲಕ್ಷಣಗಳೇನು?
    JN.1 ವೈರಸ್ ತಳಿಯ ರೋಗ ಲಕ್ಷಣದಲ್ಲಿ ಹೊಸತನವಿಲ್ಲ. ಕೋವಿಡ್ 19 ರೋಗ ಲಕ್ಷಣಗಳೇ ಇಲ್ಲೂ ಪ್ರಧಾನ.
    – ಗಂಟಲು ನೋವು
    – ವಿಪರೀತ ಶೀತ, ಕೆಮ್ಮು,
    – ಜ್ವರ, ತಲೆನೋವು, ಮೈಕೈ ನೋವು
    -ಸುಸ್ತು, ಉಸಿರಾಟದ ಸಮಸ್ಯೆ, ಆಹಾರ ವಸ್ತುಗಳ ರುಚಿ, ವಾಸನೆ ತಿಳಿಯದಿರುವುದು
    -ನಿರ್ಜಲೀಕರಣ ಸಮಸ್ಯೆ
    ಮೈಲ್ಡ್ ಪ್ರಕರಣಗಳಿಗೆ ಮನೆಯಲ್ಲಿ ಕ್ವಾರಂಟೈನ್ ಆಗುವುದು ಉತ್ತಮ. ಆದರೆ ಉಸಿರಾಟ, ತೀವ್ರ ಸುಸ್ತು ಕಾಣಿಸಿಕೊಂಡರೆ ಆಸ್ಪತ್ರೆ ದಾಖಲಾಗುವುದ ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.

    ಯಾರಿಗೆ ಬೇಗ ಹರಡುತ್ತದೆ?
    ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ಯಾರಿಗೆ ಬೇಕಾದರೂ ಈ ಸೋಂಕು ಕಾಣಿಸಿಕೊಳ್ಳಬಹುದು. ಮೊದಲೇ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಕೂಡ ಬರಬಹುದಾಗಿದೆ. ವೈದ್ಯರು ಹೇಳುವ ಹಾಗೆ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಈ ಋತುವಿನಲ್ಲಿ ಹರಡಬಹುದಾಗಿದೆ. ಹೀಗಾಗಿ ಸಿಂಗಪುರದಲ್ಲಿ ಜನರಿಗೆ ಬೂಸ್ಟರ್ ಡೋಸ್ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ.

    ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವು ರೂಪಾಂತರ ಕೋವಿಡ್ ವೈರಸ್ ಕಾಣಿಸಿಕೊಂಡಿದೆ. ಆದರೆ ಇದ್ಯಾವುದು ಭಾರತದಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ. ಆದರೆ ಈ ಬಾರಿ ಕಾಣಿಸಿಕೊಂಡಿರುವ JN.1 ವೈರಸ್ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಆತಂಕ ಹೆಚ್ಚಿಸಿದೆ. ಇದು ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. 

  • ಮತ್ತೆ ಶುರುವಾದ ಕೋವಿಡ್ ಭೀತಿ – ಹೊಸ ಅಲೆಗೆ ಸಿಂಗಾಪುರ, ಹಾಂಕಾಂಗ್ ತತ್ತರ

    ಮತ್ತೆ ಶುರುವಾದ ಕೋವಿಡ್ ಭೀತಿ – ಹೊಸ ಅಲೆಗೆ ಸಿಂಗಾಪುರ, ಹಾಂಕಾಂಗ್ ತತ್ತರ

    ವಿಕ್ಟೋರಿಯಾ: ಏಷ್ಯಾದ (Asia) ರಾಷ್ಟ್ರಗಳಲ್ಲಿ ಕೋವಿಡ್-19ರ (Covid-19) ಹೊಸ ಅಲೆ ಶುರುವಾಗಿದ್ದು, ಸಿಂಗಾಪುರ, ಹಾಂಕಾಂಗ್ ತತ್ತರಿಸಿಹೋಗಿವೆ.ಇದನ್ನೂ ಓದಿ: ಭಾರತದ ದಾಳಿಗೆ ಬೆದರಿ ರಾವಲ್ಪಿಂಡಿಯಿಂದ ಪಾಕ್‌ ಸೇನಾ ಪ್ರಧಾನ ಕಚೇರಿ ಇಸ್ಲಾಮಾಬಾದ್‌ಗೆ ಶಿಫ್ಟ್‌!

    ಕೋವಿಡ್ ಆತಂಕ ಹೆಚ್ಚಾಗುತ್ತಿದ್ದು, ಈಗಾಗಲೇ ಸಿಂಗಾಪುರ (Singapore) ಮತ್ತು ಹಾಂಕಾಂಗ್‌ನಲ್ಲಿ (Hong Kong) ಅಲರ್ಟ್ ಘೋಷಿಸಲಾಗಿದೆ. ಸಿಂಗಾಪುರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮೇ 03ರಿಂದ ಇಲ್ಲಿಯವರೆಗೂ 14,200 ಕೇಸ್ ದಾಖಲಾಗಿದ್ದು, ಅದರ ಹಿಂದಿನ ವಾರಕ್ಕಿಂತ ಶೇ.28ರಷ್ಟು ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಸುಮಾರು ಶೇ.30ರಷ್ಟು ಹೆಚ್ಚಾಗಿದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಹಾಂಕಾಂಗ್ ಆರೋಗ್ಯ ಸಚಿವಾಲಯದ ಸಾಂಕ್ರಾಮಿಕ ರೋಗ ಶಾಖೆಯ ಮುಖ್ಯಸ್ಥ ಆಲ್ಬರ್ಟ್ ಆಯು ಮಾಧ್ಯಮದವರೊಂದಿಗೆ ಮಾತನಾಡಿ, ಈ ಒಂದು ವರ್ಷದಲ್ಲಿ ಕೋವಿಡ್ ಪಾಸಿಟಿವ್ ಪರೀಕ್ಷೆಗಾಗಿ ಆಸ್ಪತ್ರೆಗೆ ಬರುವ ಉಸಿರಾಟದ ಮಾದರಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ ವೈರಸ್ ಇರಲಿಲ್ಲ. ಈಗ ಮತ್ತೆ ಪ್ರಕರಣಗಳು ದಾಖಲಾಗುತ್ತಿವೆ. ಈ ವರ್ಷದ ಆರಂಭದಿಂದ ಮೇ 3ರವರೆಗೆ ಗಂಭೀರ ಪ್ರಕರಣಗಳು ಹಾಗೂ ಸಾವನ್ನಪ್ಪಿದವರು ಸೇರಿದಂತೆ 31 ಪ್ರಕರಣಗಳು ದಾಖಲಾಗಿವೆ ಎಂದರು.ಇದನ್ನೂ ಓದಿ: ಪಾಕ್‌ ವಿರುದ್ಧ ಅಗತ್ಯ ಇದ್ರೆ ಯುದ್ಧ ಮಾಡಿ ಅಂದಿದ್ದೆ, ಕಟ್ ಮಾಡಿ ತೋರಿಸಿ ಬಿಟ್ಟಿದ್ದಾರೆ: ಸಿದ್ದರಾಮಯ್ಯ

  • ಸಿಂಗಾಪುರ ಶಾಲೆಯಲ್ಲಿ ಬೆಂಕಿ ಅವಘಡ – ಪವನ್ ಕಲ್ಯಾಣ್ ಕಿರಿಯ ಪುತ್ರನಿಗೆ ಗಂಭೀರ ಗಾಯ

    ಸಿಂಗಾಪುರ ಶಾಲೆಯಲ್ಲಿ ಬೆಂಕಿ ಅವಘಡ – ಪವನ್ ಕಲ್ಯಾಣ್ ಕಿರಿಯ ಪುತ್ರನಿಗೆ ಗಂಭೀರ ಗಾಯ

    -ದಟ್ಟ ಹೊಗೆಯಿಂದ ಉಸಿರಾಟದ ತೊಂದರೆ

    ಸಿಂಗಾಪುರ: ಆಂಧ್ರಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ (Pawan Kalyan) ಕಿರಿಯ ಮಗ ಓದುತ್ತಿದ್ದ ಸಿಂಗಾಪುರ (Singapore) ಶಾಲೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಪುತ್ರ ಮಾರ್ಕ್ ಶಂಕರ್ ಗಂಭೀರ ಗಾಯಗೊಂಡಿದ್ದಾರೆ.

    ಬೆಂಕಿ ಅವಘಡದಲ್ಲಿ ಶಂಕರ್ ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಶ್ವಾಸಕೋಶಕ್ಕೆ ಹೊಗೆ ನುಗ್ಗಿ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಪವನ್ ಕಲ್ಯಾಣ್ ಪುತ್ರನನ್ನು ಸಿಂಗಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕೃಷಿಹೊಂಡದಲ್ಲಿ ಮುಳುಗಿ ಅಕ್ಕ, ತಂಗಿಯ ದಾರುಣ ಸಾವು

    ಪವನ್ ಕಲ್ಯಾಣ್ ಹಾಗೂ ಅನ್ನಾ ದಂಪತಿಗೆ 2017ರಲ್ಲಿ ಮಾರ್ಕ್ ಶಂಕರ್ ಜನಿಸಿದರು. ಸದ್ಯ ಪವನ್ ಕಲ್ಯಾಣ್ ಮೂರನೇ ಹೆಂಡತಿ ಅನ್ನಾ ಸಿಂಗಪುರದಲ್ಲೇ ಇದ್ದಾರೆ. ಮಾರ್ಕ್ ಶಂಕರ್ ಕೂಡ ಸಿಂಗಾಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿಚಾರಣೆಗೆ ದರ್ಶನ್‌ ಗೈರು – ಬೆಂಗಳೂರು ಕೋರ್ಟ್‌ ಅಸಮಾಧಾನ

  • ಗಲ್ಫ್, ಸಿಂಗಾಪುರಕ್ಕೆ ಹೋಲಿಸಿದರೆ ಭಾರತದಲ್ಲಿ ಚಿನ್ನ ಅಗ್ಗವಾಗಿರಲು ಕಾರಣವೇನು?

    ಗಲ್ಫ್, ಸಿಂಗಾಪುರಕ್ಕೆ ಹೋಲಿಸಿದರೆ ಭಾರತದಲ್ಲಿ ಚಿನ್ನ ಅಗ್ಗವಾಗಿರಲು ಕಾರಣವೇನು?

    ಸಾಮಾನ್ಯವಾಗಿ ಚಿನ್ನ ಎಂದರೆ ಎಲ್ಲರಿಗೂ ಇಷ್ಟವಾಗುವಂತೆ ವಸ್ತುವೇ. ಆದರೆ ದೇಶದಿಂದ ದೇಶಕ್ಕೆ ತುಲನೆ ಮಾಡಿದಾಗ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದು. ಇನ್ನೂ ಗಲ್ಫ್ ರಾಷ್ಟ್ರಗಳಾದ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್), ಕತಾರ್, ಓಮನ್ ಹಾಗೂ ಸಿಂಗಾಪುರದಲ್ಲಿ ಭಾರತಕ್ಕಿಂತ ದುಬಾರಿಯಾಗಿದೆ.

    ಭಾರತದಲ್ಲಿ ಚಿನ್ನವನ್ನು ಕೇವಲ ಒಂದು ಬೆಲೆಬಾಳುವ ವಸ್ತುವನ್ನಾಗಿ ನೋಡದೆ ಅದೃಷ್ಟದ ಭಾಗವನ್ನಾಗಿ ಕೂಡ ನೋಡಲಾಗುತ್ತದೆ. ಈ ಕಾರಣದಿಂದಾಗಿ ಭಾರತದಲ್ಲಿ ಚಿನ್ನದ ಬಳಕೆ ಹಾಗೂ ಸಂಗ್ರಹಣೆ ಹೆಚ್ಚಾಗಿದೆ. ವಿಶ್ವದ ಎಲ್ಲಾ ದೇಶಗಳ ನಾಗರಿಕರ ಚಿನ್ನವನ್ನು ಒಟ್ಟುಗೂಡಿಸಿದರೆ ಭಾರತದ ಪ್ರಜೆಗಳಲ್ಲಿರುವ ಚಿನ್ನಕ್ಕಿಂತ ಕಡಿಮೆಯೇ ಆಗಿರುತ್ತದೆ.

    ಭಾರತದಲ್ಲಿ ನ.16 ರ ಹೊತ್ತಿಗೆ ಚಿನ್ನದ ಬೆಲೆ 10 ಗ್ರಾಂಗೆ 75,650 ರೂ ಆಗಿತ್ತು. ಹಬ್ಬದ ಸಂದರ್ಭ, ಮದುವೆ ಅಥವಾ ಶಾಪಿಂಗ್ ಮಾಡುವ ಯೋಚನೆಯಿಂದ ಒಂದಲ್ಲ ಒಂದು ರೀತಿಯಲ್ಲಿ ಚಿನ್ನವನ್ನು ಕೊಳ್ಳುತ್ತಲೇ ಇರುತ್ತಾರೆ. ಮುಖ್ಯವಾಗಿ ಚಿನ್ನವನ್ನು ಸುರಕ್ಷಿತ ಲೋಹವಾಗಿ ಪರಿಗಣಿಸುತ್ತಾರೆ. ಹೀಗಾಗಿ ಭಾರತದಲ್ಲಿ ಚಿನ್ನದ ಬೆಲೆ ಇದೀಗ ಗಲ್ಫ್, ಸಿಂಗಾಪುರಕ್ಕಿಂತ ಅಗ್ಗವಾಗಿದೆ.

    ಭಾರತದಲ್ಲಿ ಕುಸಿಯುತ್ತಿರುವ ಚಿನ್ನದ ಬೆಲೆ ಹಾಗೂ ಗಲ್ಫ್ ರಾಷ್ಟ್ರಗಳು ಮತ್ತು ಸಿಂಗಾಪುರದಲ್ಲಿ ಏರುತ್ತಿರುವ ದರಗಳ ನಡುವಿನ ಹಲವಾರು ವ್ಯತ್ಯಾಸಗಳ ಪ್ರಭಾವವಿದೆ.

    ಭಾರತದಲ್ಲಿ ಚಿನ್ನದ ಬೆಲೆ ಏಕೆ ಕುಸಿಯುತ್ತಿದೆ?
    ಜಾಗತಿಕ ಚಿನ್ನದ ಪ್ರವೃತ್ತಿಗಳು:
    ಜಾಗತಿಕವಾಗಿ, ಚಿನ್ನವು ಮೂರು ವರ್ಷಗಳಲ್ಲಿ ಅದರ ತೀಕ್ಷ್ಣವಾದ ಕುಸಿತವನ್ನು ಕಂಡಿದೆ. ಸಾಮಾನ್ಯವಾಗಿ ಡಾಲರ್ ಬೆಲೆಯಲ್ಲಿ ಕುಸಿತ ಕಂಡಾಗ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಹಾಗೆಯೇ ಡಾಲರ್ ಬೆಲೆಯಲ್ಲಿ ಏರಿಕೆ ಕಂಡಾಗ ಚಿನ್ನದ ಬೆಲೆ ಇಳಿಕೆಯಾಗುತ್ತದೆ.

    ಭಾರತದಲ್ಲಿ ಬೇಡಿಕೆ
    ಭಾರತದಲ್ಲಿ ಚಿನ್ನದ ಬೇಡಿಕೆಯು ಹೆಚ್ಚುತ್ತಿದೆ ಇದರಿಂದಾಗಿ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತದೆ. ಸದ್ಯ ಮದುವೆಯ ಸೀಸನ್ ಮತ್ತು ಹಬ್ಬ ಇರುವುದರಿಂದ ಖರೀದಿಸುವವರ ಸಂಖ್ಯೆ ಜಾಸ್ತಿಯಾಗಿದ್ದು, ಬೆಲೆ ಕಡಿಮೆಯಾಗಿದೆ.

    ಜಾಗತಿಕ ಆರ್ಥಿಕ ಸೂಚಕಗಳು:
    ಫೆಡರಲ್ ರಿಸ‌ರ್ವ್‌ನಿಂದ ಬಡ್ಡಿದರ ಕಡಿಗೊಂಡಾಗ ಬೆಲೆ ಏರಿಕೆಯಾಗುತ್ತದೆ. ಇನ್ನೂ ಬಡ್ಡಿದರ ಜಾಸ್ತಿಯಾದಾಗ ಬೆಲೆ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಬಡ್ಡಿದರ ಕಡಿಮೆಯಾದಾಗ ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತದೆ. ಬಡ್ಡಿದರ ಜಾಸ್ತಿಯಾದಾಗ ಹೂಡಿಕೆ ಮಾಡುವವರ ಜಾಸ್ತಿಯಾಗುತ್ತದೆ. ಆಗ ಚಿನ್ನಕ್ಕೆ ಬೇಡಿಕೆ ಜಾಸ್ತಿಯಾಗುತ್ತದೆ. ಇದರಿಂದಾಗಿ ಸಿನ್ನದ ಬೆಲೆ ಇಳಿಕೆಯಾಗುತ್ತದೆ. ಸದ್ಯ ಬಡ್ಡಿದರ ಹೆಚ್ಚಾಗಿದ್ದು, ಚಿನ್ನದ ಬೆಲೆ ಕಡಿಮೆಯಾಗಿದೆ. ಇದರಿಂದ ಈ ಅಂಶ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತದೆ.

    ಕರೆನ್ಸಿ ಮತ್ತು ಆಮದು ವೆಚ್ಚಗಳು:
    ವಿನಿಮಯ ದರ ವ್ಯತ್ಯಾಸವಾದಾಗ ಆ ಪ್ರದೇಶದ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಾಣುತ್ತದೆ. ಸ್ಥಳೀಯ ಮಾರುಕಟ್ಟೆಯ ಪರಿಸ್ಥಿತಿ, ತೆರಿಗೆ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಬಹುದು

  • ಪ್ರಧಾನಿ ಮೋದಿ ಸಿಂಗಾಪುರ ಭೇಟಿ – ಮಹತ್ವದ 4 ಒಪ್ಪಂದಗಳಿಗೆ ಸಹಿ

    ಪ್ರಧಾನಿ ಮೋದಿ ಸಿಂಗಾಪುರ ಭೇಟಿ – ಮಹತ್ವದ 4 ಒಪ್ಪಂದಗಳಿಗೆ ಸಹಿ

    ನವದೆಹಲಿ: ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಸಹವರ್ತಿ ಲಾರೆನ್ಸ್ ವಾಂಗ್ (Lawrence Wong) ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಡಿಜಿಟಲ್ ತಂತ್ರಜ್ಞಾನ, ಆರೋಗ್ಯ ಸಹಕಾರ, ಕೌಶಲ್ಯ ಸೇರಿ ಪ್ರಮುಖ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

    ಡಿಜಿಟಲ್ ತಂತ್ರಜ್ಞಾನಗಳಲ್ಲಿ (Digital Tech) ಸಹಕರಿಸಲು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಸಿಂಗಾಪುರದ ಡಿಜಿಟಲ್ ಅಭಿವೃದ್ಧಿ ಮತ್ತು ಮಾಹಿತಿ ಸಚಿವಾಲಯದ ನಡುವೆ ಮೊದಲ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದನ್ನೂ ಓದಿ: Bigg Boss Tamil 8: ದೊಡ್ಮನೆ ಆಟಕ್ಕೆ ವಿಜಯ್ ಸೇತುಪತಿ ಹೋಸ್ಟ್- ಪ್ರೋಮೋ ಔಟ್

    ಈ ಒಪ್ಪಂದವು ಡಿಜಿಟಲ್ ತಂತ್ರಜ್ಞಾನಗಳಾದ ಡಿಪಿಐ, ಸೈಬರ್-ಸೆಕ್ಯುರಿಟಿ, ಸೂಪರ್-ಕಂಪ್ಯೂಟಿಂಗ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಇದು ಉಭಯ ದೇಶಗಳ ನಡುವೆ ನಿಕಟ ಸಹಕಾರವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಕೊಲೆಗೂ ಮುನ್ನ ದರ್ಶನ್‌ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ಸ್ಥಳ ಮಹಜರು; ಫೋಟೊ ರಿವೀಲ್‌

    ಭಾರತ-ಸಿಂಗಪುರ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಪಾಲುದಾರಿಕೆಯ ಕುರಿತಾದ ತಿಳುವಳಿಕಾ ಒಪ್ಪಂದಕ್ಕೆ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಸಿಂಗಾಪುರದ ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ ಸಹಿ ಮಾಡಿದೆ. ಈ ಒಪ್ಪಂದದ ಅಡಿಯಲ್ಲಿ, ಭಾರತ ಮತ್ತು ಸಿಂಗಾಪುರಗಳು ಸೆಮಿಕಂಡಕ್ಟರ್ (Semiconductor) ಕ್ಲಸ್ಟರ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಪ್ರತಿಭೆಯನ್ನು ಬೆಳೆಸುವಲ್ಲಿ ಸಹಕರಿಸುತ್ತವೆ.

    ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಸಿಂಗಾಪುರದ ಆರೋಗ್ಯ ಸಚಿವಾಲಯವು ಮತ್ತೊಂದು ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದವು ಪರಸ್ಪರ ಆರೋಗ್ಯ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳ ಜಂಟಿ ಪ್ರಯತ್ನಗಳನ್ನು ಸುಗಮಗೊಳಿಸುತ್ತದೆ. ಆರೋಗ್ಯ ಮತ್ತು ಔಷಧೀಯ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನಿಕಟ ಸಹಕಾರವನ್ನು ಉತ್ತೇಜಿಸುತ್ತದೆ. ಈ ಒಪ್ಪಂದವು ಸಿಂಗಾಪುರದಲ್ಲಿ ಭಾರತೀಯ ಆರೋಗ್ಯ ವೃತ್ತಿಪರರನ್ನು ಉತ್ತೇಜಿಸುವ ಪ್ರಯತ್ನಗಳಿಗೆ ಪೂರಕವಾಗಲಿದೆ.

    ಶೈಕ್ಷಣಿಕ ಸಹಕಾರ ಮತ್ತು ಕೌಶಲ್ಯ ಅಭಿವೃದ್ಧಿಯ ಅಂತಿಮ ಒಪ್ಪಂದಕ್ಕೆ ಭಾರತದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಸಿಂಗಾಪುರದ ಶಿಕ್ಷಣ ಸಚಿವಾಲಯ ಸಹಿ ಮಾಡಿದೆ. ಈ ಒಪ್ಪಂದವು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿಯ ಕ್ಷೇತ್ರಗಳಲ್ಲಿ ನಿಕಟ ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ನಡೆಯುತ್ತಿರುವ ಸಕ್ರಿಯ ಸಹಯೋಗಕ್ಕೆ ಪೂರಕವಾಗಿರುತ್ತದೆ. ಇದನ್ನೂ ಓದಿ: ಅಗ್ನಿಪಥ್‌ನಲ್ಲಿ ಬದಲಾವಣೆ? – ಯೋಜನೆ ಪರಿಷ್ಕರಣೆಗೆ ರಕ್ಷಣಾ ಇಲಾಖೆ ಶಿಫಾರಸು

  • ಸಿಂಗಾಪೂರ್ ವಿಶ್ವ ಕನ್ನಡ ಹಬ್ಬದಲ್ಲಿ ನಟ ಶಿವರಾಜ್ ಕುಮಾರ್

    ಸಿಂಗಾಪೂರ್ ವಿಶ್ವ ಕನ್ನಡ ಹಬ್ಬದಲ್ಲಿ ನಟ ಶಿವರಾಜ್ ಕುಮಾರ್

    ರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ ಸಂಸ್ಥೆಯು ಕನ್ನಡವನ್ನು ವಿದೇಶದಲ್ಲೂ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಕಳೆದ ವರ್ಷ ದುಬೈನಲ್ಲಿ ವಿಶ್ವ ಕನ್ನಡ ಹಬ್ಬವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಪ್ರೇರೀತರಾಗಿರುವ ಕೌನ್ಸಿಲ್, ಸೆಪ್ಟೆಂಬರ್‍ 28ರಂದು ಎರಡನೇ ವಿಶ್ವ ಕನ್ನಡ ಹಬ್ಬವನ್ನು ಸಿಂಗಾಪೂರ್‍ನಲ್ಲಿ ಆಯೋಜಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡುವುದಕ್ಕಾಗಿ ಇತ್ತೀಚೆಗೆ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ನ ಅಧ್ಯಕ್ಷ ಡಾ. ಶಿವಕುಮಾರ್‍ ನಾಗರ ನವಿಲೆ, ಮಹರ್ಷಿ ಡಾ. ಆನಂದ್ ಗುರೂಜಿ, ಉತ್ಸವದ ರಾಯಭಾರಿ ವಸಿಷ್ಠ ಸಿಂಹ, 2ನೇ ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷರಾದ ಡಾ.ಸಿ. ಸೋಮಶೇಖರ್‍, ಸಾಂಸ್ಕೃತಿಕ ಅಧ್ಯಕ್ಷರಾದ ನಟಿ ರೂಪಿಕಾ ಮುಂತಾದವರು ಈ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

    ಹೊರನಾಡ ಕನ್ನಡಿಗರನ್ನು ಬೆಸೆಯುವ ಸಲುವಾಗಿ ಪ್ರತೀ ವರ್ಷ ಒಂದೊಂದು ದೇಶದಲ್ಲಿ ಈ ಹಬ್ಬವನ್ನು ಆಯೋಜಿಸಲಾಗುತ್ತಿದೆ. ಈ ವರ್ಷ ಸಿಂಗಾಪೂರ್‍ನಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ನಗರದ ಕಲಾವಿದರಲ್ಲದೆ ರಾಜ್ಯದ ಮೂಲೆಮೂಲೆಯಲ್ಲಿರುವ ಜಾನಪದ ಕಲಾವಿದರನ್ನು ಹೆಕ್ಕಿ ಅಲ್ಲಿಗೆ ಕರೆದೊಯ್ಯಲಾಗುತ್ತಿದೆ. ಹಾಗೆಯೇ, ಈ ಬಾರಿಯೂ ಸಾಧನೆ ಮಾಡಿದ ಇಬ್ಬರಿಗೆ ವಿಶ್ವಮಾನವ ಮತ್ತು ಒಂಬತ್ತು ಸಾಧಕರಿಗೆ ವಿಶ್ವಮಾನ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಹಬ್ಬದಲ್ಲಿ ರಾಜ್ಯ, ದೇಶ ಮತ್ತು ವಿದೇಶಗಳಲ್ಲಿ ನೆಲೆಸಿರುವ ನೂರಾರು ಕನ್ನಡಿಗರು ಭಾಗವಹಿಸುವುದರ ಜೊತೆಗೆ ಮುಖ್ಯ ಅತಿಥಿಯಾಗಿ ‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಮತ್ತ ಗೀತಾ ಶಿವರಾಜಕುಮಾರ್‍ ‍ಭಾಗವಹಿಸಲಿದ್ದಾರೆ.

    ಇಸ್ರೋ ವಿಜ್ಞಾನಿ ಎಸ್‍. ಕಿರಣ್‍ ಕುಮಾರ್‍ ಮತ್ತು ರಾಜ್ಯಸಭಾ ಸದಸ್ಯರಾದ ಸುಧಾ ಮೂರ್ತಿ (ಇನ್ಫೋಸಿಸ್‍ ಫೌಂಡೇಶನ್‍) ಅವರಿಗೆ 2024ನೇ ಸಾಲಿನ ವಿಶ್ವ ಮಾನವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಜೊತೆಗೆ ಪ್ರಸಾದ್‍ ಗುರುಜಿ, ನಟ ದೊಡ್ಡಣ್ಣ, ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕಿ ಮಂಗ್ಲಿ, ಜಾನಪದ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಮಿಕ್ಕಂಗತೆ ಬೇರೆ ವಿಭಾಗಗಳಲ್ಲಿ ಆಶಾ, ಪದ್ಮಾ ನಾಗರಾಜ್‍, ಹರೀಶ್ ಕುಮಾರ್‍ ಮತ್ತು ಉಮೇಶ್‍ ಕುಮಾರ್‍ ಅವರಿಗೆ ‘ವಿಶ್ವ ಮಾನ್ಯ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

     

    ಈ ಕುರಿತು ಮಾತನಾಡಿದ ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ನ ಅಧ್ಯಕ್ಷ ಡಾ. ಶಿವಕುಮಾರ್‍ ನಾಗರ ನವಿಲೆ, ‘ಈ ಬಾರಿ ಸಿಂಗಾಪುರದಲ್ಲಿ ವಿಶ್ವ ಕನ್ನಡ ಹಬ್ಬವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಕನ್ನಡವನ್ನು ವಿದೇಶದಲ್ಲೂ ಬೆಳೆಸಬೇಕು ಎಂಬುದು ಈ ಹಬ್ಬದ ಉದ್ದೇಶವಾಗಿದೆ. ವಿದೇಶಗಳಲ್ಲಿ ಕನ್ನಡ ಉಳಿಸಿ, ಬೆಳೆಸುವ ಕನ್ನಡಿಗರಿಗೆ ಗೌರವ ಸಲ್ಲಿಸುವುದರ ಜೊತೆಗೆ, ಕನ್ನಡಿಗರಿಗೆ ವಿದೇಶದಲ್ಲಿ ಕೆಲಸ ಮತ್ತು ವಿದ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲಿ ಸಂಸ್ಥೆಯು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಸಂಸ್ಥೆಯಲ್ಲಿ ಹಲವು ಘಟಕಗಳಿದ್ದು, ಪರಿಸರ ಸಂರಕ್ಷಣೆ, ರಕ್ತದಾನ, ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು. ಸಮಾರಂಭದಲ್ಲಿ ಹಾಜರಿದ್ದ ಹಲವು ಗಣ್ಯರು 2ನೇ ವಿಶ್ವ ಕನ್ನಡ ಹಬ್ಬದ ಕುರಿತು ಮಾತನಾಡಿದರು.

  • ಮಿಡತೆ, ರೇಷ್ಮೆ ಹುಳು ಸೇರಿ 16 ಬಗೆಯ ಕೀಟ ಸೇವನೆಗೆ ಸಿಂಗಾಪುರ ಸರ್ಕಾರ ಅನುಮತಿ

    ಮಿಡತೆ, ರೇಷ್ಮೆ ಹುಳು ಸೇರಿ 16 ಬಗೆಯ ಕೀಟ ಸೇವನೆಗೆ ಸಿಂಗಾಪುರ ಸರ್ಕಾರ ಅನುಮತಿ

    ಸಿಂಗಾಪುರ: ಮಿಡತೆ, ಜೀರುಂಡೆ ಹಾಗೂ ರೇಷ್ಮೆ ಹುಳುಗಳು ಸೇರಿದಂತೆ 16 ಜಾತಿಯ ಕೀಟಗಳನ್ನು ಆಹಾರವಾಗಿ ಸೇವಿಸಲು ಅನುಮೋದಿಸಲಾಗಿದೆ ಎಂದು ಸಿಂಗಾಪುರ್ ಆಹಾರ ಸಂಸ್ಥೆ (ಎಸ್‌ಎಫ್‌ಎ) ತಿಳಿಸಿದೆ.

    ಎಸ್‌ಎಫ್‌ಎ ಕಡಿಮೆ ನಿಯಂತ್ರಕ ಕಾಳಜಿ ಎಂದು ನಿರ್ಣಯಿಸಲಾದ ಜಾತಿಗಳಿಗೆ ಸೇರಿದ ಕೀಟಗಳು ಮತ್ತು ಕೀಟ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಅನುಮತಿಸುತ್ತದೆ ಎಂದು ಸಂಸ್ಕರಿತ ಆಹಾರ ಮತ್ತು ಪಶು ಆಹಾರ ವ್ಯಾಪಾರಿಗಳಿಗೆ ತಿಳಿಸಲಾದ ಸುತ್ತೋಲೆಯಲ್ಲಿ ಸಂಸ್ಥೆ ತಿಳಿಸಿದೆ.

    ಈ ಕೀಟಗಳು ಮತ್ತು ಕೀಟ ಉತ್ಪನ್ನಗಳನ್ನು ಮಾನವ ಬಳಕೆಗಾಗಿ ಅಥವಾ ಆಹಾರ-ಉತ್ಪಾದಿಸುವ ಪ್ರಾಣಿಗಳಿಗೆ ಪಶು ಆಹಾರವಾಗಿ ಬಳಸಬಹುದು ಎನ್ನಲಾಗಿದೆ. SFA ಮೊದಲು 2022 ರ ಅಂತ್ಯದಲ್ಲಿ ಕೀಟಗಳು ಮತ್ತು ಕೀಟ ಉತ್ಪನ್ನಗಳ ನಿಯಂತ್ರಣದ ಕುರಿತು ಸಾರ್ವಜನಿಕ ಸಮಾಲೋಚನೆಯನ್ನು ನಡೆಸಿತು.

    ಜೂನ್ ಅಂತ್ಯದಲ್ಲಿ ರೆಸ್ಟೋರೆಂಟ್‌ಗಳು ಮತ್ತು ಸಂಭಾವ್ಯ ಫಾರ್ಮ್‌ಗಳಂತಹ ಮೂಲಗಳು ಅನುಮೋದನೆಯು ಸನ್ನಿಹಿತವಾಗಿದೆ ಎಂದು ತಿಳಿಸಲಾಗಿತ್ತು. ಕೀಟ ಉದ್ಯಮವು ಹುಟ್ಟಿಕೊಂಡಿದೆ. ಕೀಟಗಳು ಇಲ್ಲಿ ಹೊಸ ಆಹಾರ ಪದಾರ್ಥವಾಗಿದೆ ಎಂದು ಅಭಿಪ್ರಾಯಪಡಲಾಗಿತ್ತು.

    ಈ ಮಾರ್ಗಸೂಚಿಗಳು ಆಹಾರ ಅಥವಾ ಪಶು ಆಹಾರವಾಗಿ ಕೀಟಗಳನ್ನು ಆಮದು ಮಾಡಿಕೊಳ್ಳಲು, ಕೃಷಿ ಮಾಡಲು ಉದ್ದೇಶಿಸಿರುವ ವ್ಯಾಪಾರಗಳಿಗೆ ಅನ್ವಯಿಸುತ್ತವೆ. 16 ಅನುಮೋದಿತ ಜಾತಿಗಳ ಹೊರಗಿನ ಕೀಟಗಳು ಸೇವಿಸಲು ಸುರಕ್ಷಿತವೆಂದು ಖಚಿತಪಡಿಸಿಕೊಳ್ಳಲು ಮೌಲ್ಯಮಾಪನಕ್ಕೆ ಒಳಗಾಗಬೇಕಾಗುತ್ತದೆ ಎಂದು SFA ತಿಳಿಸಿದೆ.

  • ಒಂದೇ ವಾರದಲ್ಲಿ 25,900 ಕೊರೊನಾ ಪ್ರಕರಣಗಳು ಪತ್ತೆ- ಸಿಂಗಾಪುರದಲ್ಲಿ ಮಾಸ್ಕ್‌ ಕಡ್ಡಾಯ

    ಒಂದೇ ವಾರದಲ್ಲಿ 25,900 ಕೊರೊನಾ ಪ್ರಕರಣಗಳು ಪತ್ತೆ- ಸಿಂಗಾಪುರದಲ್ಲಿ ಮಾಸ್ಕ್‌ ಕಡ್ಡಾಯ

    ಸಿಂಗಾಪುರ: ಇಲ್ಲಿ ಮತ್ತೊಂದು ತೀವ್ರ ಕೋವಿಡ್-19 (COVID-19) ಅಲೆಯಿದ್ದು, ಮೇ 5 ಮತ್ತು 11 ರ ನಡುವೆ ಅಂದರೆ ಒಂದೇ ವಾರದಲ್ಲಿ ಪ್ರಕರಣಗಳ ಸಂಖ್ಯೆ 25,900 ಕ್ಕೆ ಏರಿದೆ. ಈ ಪೈಕಿ 13,700 ಪ್ರಕರಣಗಳು ಮೊದಲ ವಾರದಲ್ಲಿ ದೃಢಪಟ್ಟಿವೆ. ವೈರಸ್ ಹರಡುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ (Mask) ಧರಿಸುವಂತೆ ಸಿಂಗಾಪುರದ ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಒತ್ತಾಯಿಸಿದ್ದಾರೆ.

    ನಾವು ಕೊರೋನಾ ಅಲೆಯ ಆರಂಭಿಕ ಭಾಗದಲ್ಲಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದ್ದರಿಂದ ಮುಂದಿನ 2 ಅಥವಾ 4 ವಾರಗಳಲ್ಲಿ ಅಲೆಯು ಜಾಸ್ತಿಯಾಗುವ ಸಾಧ್ಯತೆಗಳಿವೆ. ಅಂದರೆ ಜೂನ್ ಮಧ್ಯ ಮತ್ತು ಅಂತ್ಯದ ನಡುವೆ ಕೊರೊನಾ ಪ್ರಕರಂಗಳು ಮತ್ತಷ್ಟು ಏರುವ ಸಂಭವಗಳಿವೆ ಎಂದು ಅವರು ತಿಳಿಸಿದರು.

    ಸಿಂಗಾಪುರದಲ್ಲಿ (Singapore) COVID-19 ಅನ್ನು ಸ್ಥಳೀಯ ರೋಗವೆಂದು ಪರಿಗಣಿಸಲಾಗಿರುವುದರಿಂದ ಹಾಗೂ ಕಡ್ಡಾಯ ನಿಯಮಗಳನ್ನು ಜಾರಿಗೆ ತರುವುದು ಕೊನೆಯ ಉಪಾಯವಾಗಿದೆ. ಇದುವರೆಗೆ ಯಾವುದೇ ನಿರ್ಬಂಧಗಳನ್ನು ಹೇರುವ ಬಗ್ಗೆ ನಿರ್ಧರಿಸಿಲ್ಲ ಎಂದು ಆರೋಗ್ಯ ಸಚಿವರು ಹೇಳಿದರು.

    ಕೋವಿಡ್‌ನೊಂದಿಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಈ ವಾರದಲ್ಲಿ ಕೋವಿಡ್‌ನಿಂದಾಗಿ ಸುಮಾರು 250 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರ 181 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಕರಣಗಳು ದ್ವಿಗುಣಗೊಂಡರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತದೆ. ಇದು ದೇಶದ ಆರೋಗ್ಯ ಕ್ಷೇತ್ರಕ್ಕೆ ಹೊರೆಯಾಗಬಹುದು ಎಂದು ನುಡಿದರು.

    60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಜಾಗರೂಕರಾಗಿರಬೇಕು. ಕಳೆದ 12 ತಿಂಗಳುಗಳಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳದಿರುವವರು ಸುರಕ್ಷತಾ ಕ್ರಮದ ಮೊರೆ ಹೋಗುವಂತೆ ಸಚಿವರು ಸೂಚನೆ ನೀಡಿದ್ದಾರೆ.