Tag: Sindoor

  • ʻಆಪರೇಷನ್ ಸಿಂಧೂರ’ ಸಂಭ್ರಮ: 17 ಶಿಶುಗಳಿಗೆ ‘ಸಿಂಧೂರ’ ನಾಮಕರಣ

    ʻಆಪರೇಷನ್ ಸಿಂಧೂರ’ ಸಂಭ್ರಮ: 17 ಶಿಶುಗಳಿಗೆ ‘ಸಿಂಧೂರ’ ನಾಮಕರಣ

    -ಉತ್ತರಪ್ರದೇಶದ ಕುಷಿನಗರದಲ್ಲಿ ‘ಸಿಂಧೂರ’ ಖುಷಿ

    ಲಕ್ನೋ: ಭಾರತೀಯ ಸೇನೆ ನಡೆಸಿದ `ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯ ಯಶಸ್ಸಿನ ಹೆಮ್ಮೆಯಿಂದಾಗಿ ಉತ್ತರ ಪ್ರದೇಶದ (Uttara Pradesh) ಕುಷಿನಗರದಲ್ಲಿ 17 ನವಜಾತ ಶಿಶುಗಳಿಗೆ `ಸಿಂಧೂರ’ (Sindoor) ಎಂದು ನಾಮಕರಣ ಮಾಡಿದ್ದಾರೆ.

    ಏ.22 ರಂದು ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಮೇ 7ರಂದು ಭಾರತೀಯ ಸೇನೆ `ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಅಡಿಯಲ್ಲಿ ಪಾಕ್‌ನ 9 ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತು.ಇದನ್ನೂ ಓದಿ: ನೀವು ನಮ್ಮ ಭಾರತದ ಹೆಮ್ಮೆಯ ಸಂಕೇತ – ಸೈನಿಕರನ್ನು ಭೇಟಿಯಾದ ಮೋದಿ

    ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆದ ಎರಡು ದಿನಗಳ ಬಳಿಕ ಮೇ 9 ಮತ್ತು 10ರಂದು ಜನಿಸಿದ 17 ಮಕ್ಕಳಿಗೆ `ಸಿಂಧೂರ’ ಎಂದು ಹೆಸರಿಟ್ಟಿದ್ದು, ಆಪರೇಷನ್ ಸಿಂಧೂರದ ಯಶಸ್ಸು ಭಾರತೀಯರ ಹೆಮ್ಮೆ ಎಂದು ತಿಳಿಸಿದ್ದಾರೆ.

    ಈ ಕುರಿತು ನವಜಾತ ಶಿಶುವಿನ ತಾಯಿ ನೇಹಾ ಗುಪ್ತಾ ಮಾತನಾಡಿ, ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಈ ರೀತಿ ಹೆಸರಿಡುವುದು ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಇಲ್ಲಿ ನವಜಾತ ಶಿಶುಗಳಿಗೆ ತಂದೆಯ ಚಿಕ್ಕಮ್ಮ ಹೆಸರಿಡುತ್ತಾರೆ. ಆದರೆ ಹೆಣ್ಣುಮಕ್ಕಳ ಸಂಕೇತ ಈ `ಸಿಂಧೂರ’ ಈಗ ಒಗ್ಗಟಿನ ಸಂಕೇತವಾಗಿದೆ. ನಮ್ಮ ಸೈನಿಕರು ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಎರಡು ದಿನಗಳ ನಂತರ, ಮೇ 9 ರಂದು ನನ್ನ ಮಗು ಜನಿಸಿತು. ಮೃತ ಕುಟುಂಬಸ್ಥರ ನೋವಿನ ಬಗ್ಗೆ ನನಗೆ ಕಾಳಜಿಯಿದೆ. ಆದರೆ ಇದಕ್ಕೆ ಸೇಡು ತೀರಿಸಿಕೊಂಡ ನಮ್ಮ ಗಡಿ ಕಾಯುವ ಸೈನಿಕರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಹೀಗಾಗಿ ಅವರನ್ನು ಗೌರವಿಸುವ ಉದ್ದೇಶದಿಂದ ನನ್ನ ಮಗಳಿಗೆ `ಸಿಂಧೂರ’ ಎಂದು ಹೆಸರಿಟ್ಟಿದ್ದೇನೆ ಎಂದು ತಿಳಿಸಿದರು.

    ಕುಷಿನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಕೆ.ಶಾಹಿ ಮಾತನಾಡಿ, ಆಸ್ಪತ್ರೆಯಲ್ಲಿ ಜನಿಸಿದ 17 ಶಿಶುಗಳಿಗೆ `ಸಿಂಧೂರ’ ಎಂದು ನಾಮಕರಣ ಮಾಡಿದ್ದಾರೆ. ಇದು ಜನರು ರಾಷ್ಟ್ರದ ಮೇಲಿನ ಪ್ರೀತಿಯನ್ನು ಯಾವ ರೀತಿ ತೋರಿಸುತ್ತಾರೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ತ್ಯಾಗ ಮತ್ತು ರಾಷ್ಟ್ರೀಯ ಏಕತೆಯ ಸಂಕೇತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಸಾಮಾಜಿಕ ಕಾರ್ಯಕರ್ತ ರಾಜೇಶ್ ಮಣಿ ಮಾತನಾಡಿ, ಕುಶಿನಗರ ಮತ್ತು ಉತ್ತರ ಪ್ರದೇಶದ ಕೆಲವು ಜಿಲ್ಲೆಗಳ ಅನೇಕ ಕುಟುಂಬಗಳಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದವರಿದ್ದಾರೆ. ನನ್ನ ಮಗುವಿನ ಜನನಕ್ಕೂ ಮುಂಚೆಯೇ `ಸಿಂಧೂರ’ ಎಂಬುದು ಹೆಸರಾಗಿರಬೇಕು ಎಂದು ನಿರ್ಧರಿಸಿದ್ದೆ, ಇದು ಧೈರ್ಯವನ್ನು ಸೂಚಿಸುತ್ತದೆ ಎಂದು ಹೇಳಿದರು.ಇದನ್ನೂ ಓದಿ: ಪಾಕ್ ಶೆಲ್ ದಾಳಿ, ಯುದ್ಧದ ತೀವ್ರತೆಯ ಅನುಭವ ಬಿಚ್ಚಿಟ್ಟ ಕಾಶ್ಮೀರದಿಂದ ಮರಳಿದ ಕನ್ನಡಿಗ ವಿದ್ಯಾರ್ಥಿಗಳು

  • ದೇವರನ್ನು ಮೆಚ್ಚಿಸಲು ಮಗಳಿಗೆ ಅರಿಶಿಣ- ಕುಂಕುಮ ತಿನ್ನಿಸಿದ ತಂದೆ

    ದೇವರನ್ನು ಮೆಚ್ಚಿಸಲು ಮಗಳಿಗೆ ಅರಿಶಿಣ- ಕುಂಕುಮ ತಿನ್ನಿಸಿದ ತಂದೆ

    ಅಮರಾವತಿ: ದೇವರನ್ನು ಮೆಚ್ಚಿಸಲು ತಂದೆಯೊಬ್ಬ ತನ್ನ ನಾಲ್ಕು ವರ್ಷದ ಮಗಳಿಗೆ ಕುಂಕುಮ ಹಾಗೂ ಅರಿಶಿಣವನ್ನು ತಿನ್ನಿಸಲು ಯತ್ನಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಆಂಧ್ರಪ್ರದೇಶದ ಆತ್ಮಕೂರು ಪುರಸಭಾ ವ್ಯಾಪ್ತಿಯ ಪೆರಾರೆಡ್ಡಿಪಲ್ಲಿ ಗ್ರಾಮದಲ್ಲಿ ಮೌಢ್ಯ ಆಚರಿಸಲಾಗಿದೆ. ಕಂಡ್ರಾ ವೇಣುಗೋಪಾಲ್ ಬಂಧಿತ ಆರೋಪಿ. ವೇಣುಗೋಪಾಲ್ ದೇವರನ್ನು ಮೆಚ್ಚಿಸಲು ಕುಂಕುಮ ಹಾಗೂ ಅರಿಶಿಣವನ್ನು ತೆಗೆದುಕೊಂಡು ಮನೆಯ ತುಂಬೆಲ್ಲಾ ಹಾಕಿದ್ದಾನೆ. ನಂತರ ಅಲ್ಲಿಯೇ ಇದ್ದ ತನ್ನ ನಾಲ್ಕು ವರ್ಷದ ಮಗಳಿಗೆ ಕುಂಕುಮಾ ಹಾಗೂ ಅರಿಶಿಣವನ್ನು ತಿನ್ನಲು ಹೇಳಿದ್ದಾನೆ. ಅವಳು ನಿರಾಕರಿಸಿದಾಗ ಬಲವಂತವಾಗಿ ಅರಿಶಿಣ ಹಾಗೂ ಕುಂಕುಮವನ್ನು ಅವಳ ಬಾಯಿಗೆ ಹಾಕಿದ್ದಾನೆ. ಇದರಿಂದಾಗಿ ಆಕೆ ಕಿರುಚುತ್ತಾ ಅಲ್ಲೇ ಕುಸಿದು ಬಿದ್ದಿದ್ದಾಳೆ.

    ಇದನ್ನು ಕೇಳಿದ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿ, ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ವೇಣುಗೋಪಾಲ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪ್ರವಾದಿ ಕುರಿತ ಬಿಜೆಪಿ ನಾಯಕರ ಹೇಳಿಕೆ ಖಂಡಿಸಿದ ಅಮೆರಿಕ

    ಘಟನೆ ಸಂಬಂಧ ಕಳೆದ ಮೂರು ದಿನಗಳಿಂದ ವೇಣುಗೋಪಾಲ್ ತಮ್ಮ ನಿವಾಸದಲ್ಲಿ ವಿಚಿತ್ರ ಆಚರಣೆಗಳಲ್ಲಿ ತೊಡಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಆತ್ಮಕೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಎಸಿಬಿ ಶಾಕ್- ಬೆಂಗಳೂರು ಸೇರಿ 21 ಕಡೆ ದಾಳಿ

    Live Tv

  • ಮದುವೆಯಲ್ಲಿ ವರನಿಗೆ ಸಿಂಧೂರ ಇಟ್ಟ ವಧು – ವೀಡಿಯೋ ವೈರಲ್

    ಮದುವೆಯಲ್ಲಿ ವರನಿಗೆ ಸಿಂಧೂರ ಇಟ್ಟ ವಧು – ವೀಡಿಯೋ ವೈರಲ್

    ಕೋಲ್ಕತ್ತಾ :  ವಧು ಒಬ್ಬರು ಮದುವೆಯ ವೇಳೆ ವರನಿಗೆ ಸಿಂಧೂರ ಇಟ್ಟಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವಧು ಶಾಲಿನಿ, ವರ ಅಂಕನ್ ಮಜುಂದಾರ್ ಹಳೆಯ ಮೇಲೆ ಸಿಂಧೂರ ಇಟ್ಟಿದ್ದಾರೆ. ಡಿಸೆಂಬರ್ 2ರಂದು ಶಾಲಿನಿ ಹಾಗೂ ಅಂಕನ್ ಮಜುಂದಾರ್ ಸಪ್ತಪದಿ ತುಳಿದರು. ಮದುವೆ ಸಮಾರಂಭದ ಫೋಟೋ ಹಾಗೂ ವೀಡಿಯೋವನ್ನು ವಧುವಿನ ಸಹೋದರಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.

    ಈ ವೀಡಿಯೋದಲ್ಲಿ ಶಾಲಿನಿ ನಗುತ್ತಾ ವರ ಅಂಕನ್ ಮಂಜುಂದಾರ್ ಹಣೆಯ ಮೇಲೆ ಸಿಂಧೂರ ಇಡುತ್ತಾರೆ. ಈ ವೇಳೆ ಮದುವೆ ಬಂದಿದ್ದ ಅಥಿತಿಗಳು ದಂಪತಿಗೆ ಪ್ರೋತ್ಸಹ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ನಡುರಾತ್ರಿ ಕಾರು ಹಿಂಬಾಲಿಸಿ ಅಪರಿಚಿತನ ಕಿರಿಕ್ – ಪುಂಡನ ಪುಂಡಾಟಕ್ಕೆ ಇಡೀ ಕುಟುಂಬ ಹೈರಾಣು

    ವಿಶೇಷವೆಂದರೆ ಈ ಮದುವೆಯನ್ನು ಮೂವರು ಪುರೋಹಿತರು ಸೇರಿ ನೆರವೇರಿಸಿದರು. ಮದುವೆಯ ಮಂತ್ರಗಳನ್ನು ಸಂಸ್ಕøತದಲ್ಲಿ ಮಾತ್ರವಲ್ಲದೇ ಬೆಂಗಾಲಿಯನ್ನು ಕೂಡ ಪಠಿಸಿದರು. ವೈರಲ್ ಆಗುತ್ತಿರುವ ವಿಭಿನ್ನವಾದ ಈ ಮದುವೆಯ ವೀಡಿಯೋಗೆ ಇಲ್ಲಿಯವರೆಗೂ ಸುಮಾರು 3 ಲಕ್ಷಕ್ಕೂ ಅಧಿಕ ವೀವ್ಸ್, 4 ಸಾವಿರಕ್ಕೂ ಅಧಿಕ ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಇದನ್ನೂ ಓದಿ: ಪತಿಗೆ ಡೈವೋರ್ಸ್ ಕೊಡು, ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸ್ತೀನಿ – ನೂರ್ ಜಹಾನ್ ಅರೆಸ್ಟ್

     

    View this post on Instagram

     

    A post shared by RajKummar Rao (@rajkummar_rao)

    ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಮದುವೆ ಸಮಾರಂಭದ ವೇಳೆ ಪತ್ರಲೇಖ ಕೂಡ ಪತಿಗೆ ಸಿಂಧೂರ ಇಟ್ಟಿದ್ದ ವೀಡಿಯೋ ವೈರಲ್ ಆಗಿತ್ತು.

  • ವರ ವಧುವಿಗೆ ಹಾರ ಹಾಕ್ತಿದ್ದಂತೆ, ಓಡೋಡಿ ಬಂದು ಸಿಂಧೂರವಿಟ್ಟ ಪ್ರಿಯತಮ

    ವರ ವಧುವಿಗೆ ಹಾರ ಹಾಕ್ತಿದ್ದಂತೆ, ಓಡೋಡಿ ಬಂದು ಸಿಂಧೂರವಿಟ್ಟ ಪ್ರಿಯತಮ

    ಪಾಟ್ನಾ: ಮದುವೆಯಲ್ಲಿ ವಧುವಿಗೆ ವರ ಹಾರ ಹಾಕಿದ ಬೆನ್ನೆಲ್ಲೆ ಪ್ರಿಯಕರ ಸಿಂಧೂರ ಹಚ್ಚಿದ (ಬೈತಲೆಗೆ ಕುಂಕುಮ) ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ವೇದಿಕೆ ಮೇಲೆ ವಧು ಹಾಗೂ ವರ ಹಾರ ಬದಲಾಯಿಸಿಕೊಳ್ಳಲು ನಿಂತಿದ್ದರು. ಆಗ ತಕ್ಷಣ ವಧುವಿನ ಪ್ರಿಯಕರ ತನ್ನ ನಾಲ್ಕೈದು ಸ್ನೇಹಿತರ ಜೊತೆ ವೇದಿಕೆ ಹತ್ತಿ ಸಿಂಧೂರ ಹಾಕಿದ್ದಾನೆ. ಇದನ್ನು ನೋಡಿದ ಅಲ್ಲಿದ್ದ ಜನರು ಒಂದು ಕ್ಷಣ ದಂಗಾದರು.

    ಪ್ರಿಯಕರ ವಧುವಿನ ಹಣೆಗೆ ಸಿಂಧೂರ ಹಾಕಿದ ನಂತರ ಮದುವೆ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿತ್ತು. ನಂತರ ಗ್ರಾಮದ ಹಿರಿಯರು ಬಂದು ವಿಚಾರಿಸಿದಾಗ ಇಬ್ಬರೂ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ನಂತರ ವಧುವನ್ನು ತನ್ನ ಪ್ರಿಯಕರನ ಜೊತೆ ಗ್ರಾಮಸ್ಥರು ಕಳುಹಿಸಿಕೊಟ್ಟಿದ್ದಾರೆ ಅಂತಾ ವರದಿಯಾಗಿದೆ.

    ವಧುವಿನ ಕುಟುಂಬದವರು ಮದುವೆಯನ್ನು ಬೇರೆ ಕಡೆ ನಿಶ್ಚಯ ಮಾಡಿದ್ದು, ಮದುವೆಯ ಶಾಸ್ತ್ರ ಸಂಪ್ರದಾಯಗಳೆಲ್ಲ ನೆರವೇರಿತ್ತು. ವರ ಮೆರವಣಿಗೆಯಿಂದ ನೇರವಾಗಿ ಹಾರ ಬದಲಾಯಿಸಿಕೊಳ್ಳಲು ವೇದಿಕೆ ಮೇಲೆ ಬಂದರು. ವರ ವಧುವಿಗೆ ಹಾರ ಹಾಕುವ ಸಮಯದಲ್ಲೇ ಆಕೆಯ ಪ್ರಿಯಕರ ವೇದಿಕೆ ಮೇಲೆ ಹತ್ತಿ ಯುವತಿಗೆ ಸಿಂಧೂರ ಹಚ್ಚಿದ್ದಾನೆ.

    ಈ ಘಟನೆ ನಡೆದ ನಂತರ ಮದುವೆ ಮನೆ ಗಲಾಟೆಗಳು ಆರಂಭವಾಗಿದೆ. ವಧುವಿನ ಕುಟುಂಬಸ್ಥರು ಎಲ್ಲರೂ ಸೇರಿ ಪ್ರಿಯಕರ ಹಾಗೂ ಆತನ ಸ್ನೇಹಿತರಿಗೆ ಥಳಿಸಿದ್ದಾರೆ. ಘಟನೆಯಲ್ಲಿ ಪ್ರಿಯಕರ ಹಾಗೂ ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡರು. ಇದನ್ನು ನೋಡಿದ ವಧು ತನ್ನ ಪ್ರಿಯಕರನನ್ನು ಬಿಟ್ಟುಬಿಡಿ ಎಂದು ಜೋರಾಗಿ ಕಿರುಚಲು ಶುರು ಮಾಡಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.

    ವಧು ಹಾಗೂ ಆಕೆಯ ಪ್ರಿಯಕರನ ಬಗ್ಗೆ ವಿಚಾರಿಸಿದ್ದಾಗ ನಾವು ಮೂರು ವರ್ಷದಿಂದ ಪ್ರೀತಿಸುತ್ತಿದ್ದೇವೆ. ಈ ವಿಚಾರ ನನ್ನ ತಂದೆ- ತಾಯಿಗೂ ಗೊತ್ತಿತ್ತು. ಆದರೆ ಅವರು ಬಲವಂತವಾಗಿ ನನ್ನ ಮದುವೆಯನ್ನು ಮಾಡಲು ನಿರ್ಧರಿಸಿದ್ದರು. ನಂತರ ನನಗೆ ಹೆದರಿಸಿ ನನ್ನ ಮದುವೆಯನ್ನು ಬೇರೊಬ್ಬ ಜೊತೆ ನಿಶ್ಚಯಿಸಿದ್ದರು ಎಂದು ವಧು ಗ್ರಾಮಸ್ಥರ ಮುಂದೆ ಹೇಳಿಕೆ ನೀಡಿದ್ದಾಳೆ.

    ವಧು ಹಾಗೂ ಆಕೆಯ ಪ್ರಿಯಕರ ಫೋಟೋವನ್ನು ನೋಡಿದ ವರ ಮತ್ತೊಮ್ಮೆ ವಧುವಿನ ನಿರ್ಧಾರವನ್ನು ಕೇಳಿದ್ದನು. ಆಗ ವಧು ತನ್ನ ಪ್ರಿಯಕರನ ಜೊತೆ ಹೋಗುವುದಾಗಿ ಹಠ ಮಾಡುತ್ತಿದ್ದಳು. ಆಗ ವರ ಮೆರವಣಿಗೆ ಮೂಲಕ ಹಿಂದಿರುಗಲು ನಿರ್ಧರಿಸಿದ್ದರು. ನಂತರ ಗ್ರಾಮಸ್ಥರು ಹಾಗೂ ಪೋಷಕರು ವಧುವನ್ನು ತನ್ನ ಪ್ರಿಯಕರನ ಜೊತೆ ಮದುವೆ ಮಾಡಿ ಕಳುಹಿಸಿಕೊಟ್ಟರು ಎಂದು ವರದಿಯಾಗಿದೆ.