Tag: Sindhura

  • ತ್ರಿಕೋನ ಪ್ರೇಮಕಥೆಯ ಸಿಂಧೂರ

    ತ್ರಿಕೋನ ಪ್ರೇಮಕಥೆಯ ಸಿಂಧೂರ

    ಸಿಂಧೂರ’ ಹಾಡುಗಳ ಬಿಡುಗಡೆ ಕಾರ್ಯಕ್ರಮವು ತಡವಾದರೂ ಅರ್ಥಪೂರ್ಣವಾಗಿ ನಡೆಯಿತು. ಕಾಳಿಮಠದ ಋಷಿಕುಮಾರ ಸ್ವಾಮೀಜಿ, ಸ್ವಸ್ತಿಕ್‌ಶಂಕರ್, ಉಮೇಶ್‌ಬಣಕಾರ್ ಮುಂತಾದವರು ಆಡಿಯೋವನ್ನು ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಚಿತ್ರವು ತ್ರಿಕೋನ ಪ್ರೇಮಕಥೆಯಾಗಿರುತ್ತದೆ. ನಾಯಕ, ನಿರ್ಮಾಪಕ ಮತ್ತು ನಿರ್ದೇಶಕ ಸಚ್ಚಿನಪುರೋಹಿತ್ ತಂದೆ ದಿವಂಗತ ರಾಮ್‌ಪುರೋಹಿತ್ ಎಂಟು ವರ್ಷಗಳ ಹಿಂದೆ ಬರೆದ ಕಥೆಯು ಈಗ ಚಿತ್ರ ರೂಪದಲ್ಲಿ ಸಿದ್ದಗೊಂಡಿದೆ. ಇದನ್ನೂ ಓದಿ : ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

     

    ಕ್ರಿಶ್ಚಿಯನ್ ಶಾಸಕನ ಮಗಳು, ಮದ್ಯಮ ವರ್ಗದ ಪ್ರಾದ್ಯಪಕನ ಮಗನ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಎಲ್ಲಾ ಕಡೆಯಲ್ಲೂ ಸಮಾನತೆಯನ್ನು ಕಾಣುವ ಶಾಸಕ, ಮಗಳ ವಿಷಯ ಬಂದಾಗ ತಿರುಗಿ ಬೀಳುತ್ತಾನೆ. ಮುಂದೆ ಜೀವನದಲ್ಲಿ ಮೇಲೆ ಬರುತ್ತೇನೆಂದು ಛಾಲೆಂಜ್ ತೆಗೆದುಕೊಂಡು ಪಟ್ಟಣಕ್ಕೆ ಬರುತ್ತಾನೆ. ಆ ಸಮಯದಲ್ಲಿ ಮತ್ತೋಂದು ಹುಡುಗಿಯ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಅಲ್ಲೋಂದು ಉಪಕಥೆ ಹುಟ್ಟಿಕೊಳ್ಳುತ್ತದೆ. ಅಂತಿಮವಾಗಿ ಆತ ಯಾರಿಗೆ ಒಲಿಯುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ಶಾಸಕನ ಮಗಳಾಗಿ ನಿವೀಕ್ಷಾ ನಾಯ್ಡು, ಕಂಪೆನಿ ಕಾರ್ಯದರ್ಶಿಯಾಗಿ ಸುರಕ್ಷಿತ ಶೆಟ್ಟಿ ನಾಯಕಿಯರು. ತಾರಗಣದಲ್ಲಿ ಬ್ಯಾಂಕ್‌ಜನಾರ್ಧನ್, ರೇಖಾದಾಸ್, ರಾಂಪುರೋಹಿತ್, ಅರುಣ್‌ದೇವಸ್ಯ, ಜ್ಯೋತಿಮುರೂರು, ದಯಾನಂದ್‌ನೀನಾಸಂ, ಶ್ರೀವಿಷ್ಣು, ಉಮಾಶಂಕರ್ ಮುಂತಾದವರು ನಟಿಸಿದ್ದಾರೆ, ಗೋವಾ, ಮಡಕೇರಿ, ಸಕಲೇಶಪುರ, ಬಾಗಲಕೋಟೆ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಐದು ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತವನ್ನು ಒದಗಿಸಿರುವುದು ಕಾರ್ತಿಕ್‌ವೆಂಕಟೇಶ್. ಗಣೇಶ್‌ರಾಜನ್ ಛಾಯಾಗ್ರಹಣ, ಅರವಿಂದ್.ಜೆ.ಪಿ ಸಂಕಲನ, ಅಶೋಕ್ ಸಾಹಸ, ಸೂರಿ-ಜೆ.ಪಿ.ಆರಾಧ್ಯ ನೃತ್ಯ ನಿರ್ವಹಿಸಿದ್ದಾರೆ.

  • ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಸಿಂಧೂರ ರಾಜಕಾರಣ – ಸಂಸ್ಕೃತಿ ತಂಟೆಗೆ ಬರ್ಬೇಡಿ ಎಂದು ಸರ್ಕಾರದ ಎಚ್ಚರಿಕೆ

    ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಸಿಂಧೂರ ರಾಜಕಾರಣ – ಸಂಸ್ಕೃತಿ ತಂಟೆಗೆ ಬರ್ಬೇಡಿ ಎಂದು ಸರ್ಕಾರದ ಎಚ್ಚರಿಕೆ

    ಬೆಂಗಳೂರು: ರಾಜ್ಯದಲ್ಲಿ ಸಮವಸ್ತ್ರದ ನೆಪದಲ್ಲಿ ಸಂಸ್ಕೃತಿ ಸಂಘರ್ಷ ಮುಗಿಲುಮುಟ್ಟಿದೆ. ಕೆಲವರು ಸಿಂಧೂರ ಸಂಪ್ರದಾಯನ್ನು ಪ್ರಶ್ನಿಸತೊಡಗಿದ್ದಾರೆ. ಇದನ್ನು ಬಿಜೆಪಿ ಖಂಡಾತುಂಡವಾಗಿ ವಿರೋಧ ಮಾಡ್ತಿದೆ.

    ಸಿಂಧೂರ, ಬಳೆಯಂತಹ ವಿಚಾರಗಳನ್ನು ಪ್ರಸ್ತಾಪಿಸಿ ಸಮಾಜದ ಸಾಮರಸ್ಯ ಹಾಳುಮಾಡಬೇಡಿ ಎಂದು ಸಚಿವ ಬಿ.ಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ. ಆದರೆ ಸಿಂಧೂರ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ಸಚಿವ ಕಾರಜೋಳ ನಿರಾಕರಿಸಿದ್ದಾರೆ. ಇತ್ತ ಕಾಂಗ್ರೆಸ್ ಮಾತ್ರ ಎರಡೂ ಇರಲಿ, ತಪ್ಪೇನು ಎಂದು ಕೇಳುತ್ತಿದೆ. ಹಿಜಬ್ ಪರವಾಗಿ ಬ್ಯಾಟಿಂಗ್ ಮಾಡ್ತಿರುವ ವಿಪಕ್ಷ ಕಾಂಗ್ರೆಸ್ ಪಕ್ಷ ಇದೀಗ ಸಿಂಧೂರ ಸಂಸ್ಕೃತಿಯನ್ನು ಬೆಂಬಲಿಸಿದೆ.

    ಹಿಜಬ್‍ನಂತೆ ಸಿಂಧೂರದಿಂದ್ಲೂ ಯಾರಿಗೂ ಏನು ತೊಂದ್ರೆ ಆಗಲ್ಲ. ಆಯಾಯ ಸಂಸ್ಕೃತಿ, ಸಂಪ್ರದಾಯ ಪಾಲನೆ ಮಾಡುವವರಿಗೆ ತೊಂದರೆ ಕೊಡಬಾರದು. ಮೊದಲಿನಿಂದಲೂ ಇರುವ ಸಂಪ್ರದಾಯಗಳಿಗೆ ಯಾರೂ ಅಡ್ಡಿಪಡಿಸುವುದು ಬೇಡ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!

    Siddaramaiah

    ಇದೇ ವೇಳೆ ಹಿಜಬ್ ವಿವಾದದ ಹಿಂದೆ ಬಿಜೆಪಿಯ ಹುನ್ನಾರ ಇದೆ ಎಂಬ ಆರೋಪವನ್ನು ಮಾಡಿದ್ದಾರೆ. ಸಿಂಧೂರ, ಬಳೆ ತಂಟೆಗೆ ಬಂದ್ರೆ ನಾಲಗೆ ಸೀಳ್ತೀವಿ ಎಂದು ಎಚ್ಚರಿಸಿದ್ದ ಪ್ರಮೋದ್ ಮುತಾಲಿಕ್ ವಿರುದ್ಧ ಕ್ರಮಕ್ಕೆ ಯುಟಿ ಖಾದರ್ ಒತ್ತಾಯಿಸಿದ್ದಾರೆ. ಈಗ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಕೋಮುಭಾವನೆ ಕೆರಳಿಸುವವರಿಗೆ ಭಯ ಇಲ್ಲವಾಗುತ್ತದೆ ಎಂಬ ಆತಂಕ ಹೊರಹಾಕಿದ್ದಾರೆ. ಈ ಮಧ್ಯೆ ಸಿಂಧೂರ, ಬಳೆ ಬಗ್ಗೆ ಮುಸ್ಲಿಮ್ ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದನ್ನು ಖಂಡಿಸಿ ಕಲಬುರಗಿಯ ಹಿಂದೂಪರ ಮುಖಂಡರು ಸಿಂಧೂರ ಚಳವಳಿ ಶುರು ಮಾಡಿದ್ದಾರೆ.

  • ಸಿಂಧೂರ,ಕುಂಕುಮಕ್ಕೆ ನಿರಾಕರಣೆ: ಸ್ಪಷ್ಟನೆ ನೀಡಿದ ಇಂಡಿ ಕಾಲೇಜು ಪ್ರಿನ್ಸಿಪಾಲ್‌

    ಸಿಂಧೂರ,ಕುಂಕುಮಕ್ಕೆ ನಿರಾಕರಣೆ: ಸ್ಪಷ್ಟನೆ ನೀಡಿದ ಇಂಡಿ ಕಾಲೇಜು ಪ್ರಿನ್ಸಿಪಾಲ್‌

    ವಿಜಯಪುರ: ನಮ್ಮ ಕಾಲೇಜಿನಲ್ಲಿ ಯಾವುದೇ ಸಮಸ್ಯೆ ಇಲ್ಲ  ಎಂದು ಇಂಡಿ ಡಿಗ್ರಿ ಕಾಲೇಜು ಪ್ರಿನ್ಸಿಪಾಲ್‌  ಬಿ ಎಸ್ ಪಟ್ಟೇದ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ಕಾಲೇಜು ವಿದ್ಯಾರ್ಥಿಗಳಿಗೆ ಸಿಂಧೂರ, ಕುಂಕುಮಕ್ಕೆ ನಿರಾಕರಣೆ ವಿಚಾರ ಸತ್ಯಕ್ಕೆ ದೂರವಾದ ವಿಚಾರ. ನಮ್ಮಲ್ಲಿ ಎಲ್ಲರೂ ಸೌಹಾರ್ದಯುತವಾಗಿ ಇದ್ದೇವೆ ಎಂದು ತಿಳಿಸಿದರು.

    ಕೆಲ ವಿದ್ಯಾರ್ಥಿಗಳು ನಮ್ಮ ಹೇಳಿಕೆಯನ್ನ ತಪ್ಪಾಗಿ ಗ್ರಹಿಸಿದ್ದರಿಂದ ಇಂದು ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಮ್ಮ ಜೊತೆ ಮಾತಿನ ಜಟಾಪಟಿ ನಡೆಸಿದ್ದಾರೆ. ಆ ವಿದ್ಯಾರ್ಥಿಗಳಿಗೂ ತಿಳಿ ಹೇಳಿದ್ದು ಆತನು ಕಾಲೇಜಿಗೆ ಹಾಜರಾಗಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇವರನ್ನು ಅರೆಸ್ಟ್ ಮಾಡ್ರಿ – ವಿದ್ಯಾರ್ಥಿನಿಯರ ವಿರುದ್ಧ ಮಡಿಕೇರಿ ಪ್ರಿನ್ಸಿ ಕೆಂಡಾಮಂಡಲ

    ಏನಿದು ವಿವಾದ?
    ಎಂದಿನಂತೆ ಕಾಲೇಜಿಗೆ ಬಂದ ವಿದ್ಯಾರ್ಥಿ ಗಂಗಾಧರ ಬಡಿಗೇರ್ ಹಣೆಗೆ ಸಿಂಧೂರ ಧರಿಸಿದ್ದ ಇದನ್ನು ಗಮನಿಸಿದ ಕಾಲೇಜಿನ ದೈಹಿಕ ಉಪನ್ಯಾಸಕ ಸಂಗಮೇಶ ಗೌಡ ತರಗತಿ ಪ್ರವೇಶಕ್ಕೆ ಅವಕಾಶ ಕೊಟ್ಟಿಲ್ಲ. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.

    ನಾನು ಹಿಜಬ್ ಅಥವಾ ಕೇಸರಿ ಶಾಲು ಧರಿಸಿ ಬಂದಿಲ್ಲ. ಕುಂಕುಮ ಹಾಕಲು ಯಾಕೆ ಅನುಮತಿ ಇಲ್ಲ ಎಂದು ಗಂಗಾಧರ ಬಡಿಗೇರ್ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಇತರ ಉಪನ್ಯಾಸಕರು ವಿದ್ಯಾರ್ಥಿಯನ್ನು ಮನವೊಲಿಸಲು ಪ್ರಯತ್ನ ಪಟ್ಟಿದ್ದರು. ಇದನ್ನೂ ಓದಿ: 290 ಗ್ರಾಂ ತೂಕದ ಸ್ಟ್ರಾಬೆರಿ ಬೆಳೆದು ವಿಶ್ವ ದಾಖಲೆ

  • ಹಿಜಬ್ ಬಳಿಕ ಸಿಂಧೂರ ವಿವಾದ – ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ

    ಹಿಜಬ್ ಬಳಿಕ ಸಿಂಧೂರ ವಿವಾದ – ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ

    ವಿಜಯಪುರ: ಹಿಜಬ್ ಬಳಿಕ ಇದೀಗ ಸಿಂಧೂರ ವಿವಾದ ಕಾಣಿಸಿಕೊಂಡಿದೆ. ವಿಜಯಪುರದ ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಯೋರ್ವನಿಗೆ ತರಗತಿ ಪ್ರವೇಶಕ್ಕೆ ನಿರಾಕರಿಸಲಾಗಿದೆ.

    ಎಂದಿನಂತೆ ಕಾಲೇಜಿಗೆ ಬಂದ ವಿದ್ಯಾರ್ಥಿ ಗಂಗಾಧರ ಬಡಿಗೇರ್ ಹಣೆಗೆ ಸಿಂಧೂರ ಧರಿಸಿದ್ದ ಇದನ್ನು ಗಮನಿಸಿದ ಕಾಲೇಜಿನ ದೈಹಿಕ ಉಪನ್ಯಾಸಕ ಸಂಗಮೇಶ ಗೌಡ ತರಗತಿ ಪ್ರವೇಶಕ್ಕೆ ಅವಕಾಶ ಕೊಟ್ಟಿಲ್ಲ. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಇದನ್ನೂ ಓದಿ: ಇವ್ರರನ್ನು ಅರೆಸ್ಟ್ ಮಾಡ್ರಿ – ವಿದ್ಯಾರ್ಥಿನಿಯರ ವಿರುದ್ಧ ಮಡಿಕೇರಿ ಪ್ರಿನ್ಸಿ ಕೆಂಡಾಮಂಡಲ

    ನಾವು ಕಾಲೇಜ್‍ಗೆ ಹಿಜಬ್ ಅಥವಾ ಕೇಸರಿ ಶಾಲು ಧರಿಸಿ ಬಂದಿಲ್ಲ. ಕುಂಕುಮ ಹಾಕಲು ಯಾಕೆ ಅನುಮತಿ ಇಲ್ಲ ಎಂದು ಗಂಗಾಧರ ಬಡಿಗೇರ್ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಇತರ ಉಪನ್ಯಾಸಕರು ವಿದ್ಯಾರ್ಥಿಯನ್ನು ಮನವೊಲಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಉಪನ್ಯಾಸಕರ ವಾದಕ್ಕೆ ಒಪ್ಪದ ಗಂಗಾಧರ ಬಡಿಗೇರ್‌ನನ್ನು ಮನೆಗೆ ಕಳುಹಿಸಿದ್ದಾರೆ.

    ಬಳಿಕ ಗಂಗಾಧರ ಬಡಿಗೇರ್ ಅಡ್ಡವಾಗಿ ಕುಂಕುಮ ಹಚ್ಚಿಕೊಂಡು ಬಂದಿದ್ದಾನೆ ಇದಕ್ಕೆ ಯಾಕೆ ಅವಕಾಶ ಕೊಟ್ಟಿಲ್ಲ ಎಂದು ಇತರ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಗೊಂದಲದ ವಾತಾವರಣವನ್ನು ತಿಳಿಗೊಳಿಸಿದರು. ಇದನ್ನೂ ಓದಿ: ಹಿಜಬ್ ಪ್ರತಿಭಟನೆ – ಕಾಲೇಜು ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್ ದಾಖಲು