Tag: sindhu loknath

  • ಆಕ್ಟಿಂಗ್ ಬರಲ್ಲ, ಆದ್ರೂ ಅವಾರ್ಡ್ ತಗೋತೀನಿ: ನಟಿ ಸಿಂಧು ಲೋಕನಾಥ್ ಕಹಿಕಾವ್ಯ

    ಆಕ್ಟಿಂಗ್ ಬರಲ್ಲ, ಆದ್ರೂ ಅವಾರ್ಡ್ ತಗೋತೀನಿ: ನಟಿ ಸಿಂಧು ಲೋಕನಾಥ್ ಕಹಿಕಾವ್ಯ

    ವಿಕ್ಕಿ ಪೀಡಿಯಾ ಅವರ ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ (Naanu Nandini) ಹಾಡು ವೈರಲ್ ಆಗುತ್ತಿದ್ದಂತೆಯೇ ಅನೇಕರು ನಾನಾ ವಿಧದಲ್ಲಿ ಈ ಹಾಡನ್ನು ಬಳಸಿಕೊಳ್ಳುತ್ತಿದ್ದಾರೆ. ಸಾಹಿತ್ಯವನ್ನು ಬದಲಾಯಿಸಿ ತಮ್ಮದೇ ಆದ ರೀತಿಯಲ್ಲಿ ಸಾಂಗ್ ಮಾಡುತ್ತಿದ್ದಾರೆ. ಆದರೆ ನಟಿ ಸಿಂಧು ಲೋಕನಾಥ್ (Sindhu Loknath) ಸಾಹಿತ್ಯವನ್ನೇ ಬದಲಾಯಿಸಿ ಒಂದಷ್ಟು ನಟಿಯರನ್ನು ಕಾಲೆಳೆದಿದ್ದಾರೆ. ಜೊತೆಗೆ ಸಿನಿಮಾ ರಂಗದ ಕಹಿ ಸತ್ಯವನ್ನೂ ಅವರು ಹೊರಗೆ ಹಾಕಿದ್ದಾರೆ.

    ಸಿಂಧು ಲೋಕನಾಥ್ ಸಾಹಿತ್ಯದಲ್ಲಿ ಬಂದ ನಂದಿನಿ ಹಾಡು ತಮಾಷೆ ಅಂತೆ ಅನಿಸಿದರೂ, ವಾಸ್ತವವನ್ನು ತೆರೆದಿಟ್ಟಿದೆ. ಪ್ರತಿಭೆ ಇಲ್ಲದೇ ಇದ್ದರೂ, ಅವಾರ್ಡ್ ಪಡೆಯುವವರ ವಿರುದ್ಧ ಈ ಹಾಡನ್ನು ತಿರುಗಿಸಿದ್ದಾರೆ. ಗ್ಲಾಮರ್ ಇದೆ ಅಂದ ಮಾತ್ರಕ್ಕೆ ಅವಕಾಶ ಪಡೆಯುತ್ತೇನೆ ಎನ್ನುವವರ ಬಗ್ಗೆಯೂ ಅವರು ತಿವಿದಿದ್ದಾರೆ.

    ಸಿಂಧು ಬರೆದ ಹಾಡು

     

    ನಾನು ನಂದಿನಿ ಬೆಂಗಳೂರಿಗೆ ಬಂದೀನಿ

    ಸಿನಿಮಾ ಮಾಡ್ತೀನಿ, ಹೀರೋಯಿನ್ ಆಗ್ತೀನಿ

    ಆಕ್ಟಿಂಗ್ ಬರಲ್ಲ, ಆದ್ರೂ ಅವಾರ್ಡ್ ತಗೋತೀನಿ

    ಬಂದಿದ್ದ್ ದುಡ್ಡೆಲ್ಲ ಮಜಾ ಉಡಾಯಿಸ್ತೀನಿ

    ಬಾರೇ ನಂದಿನಿ ಬೆಂಗಳೂರು ತೋರಸ್ತೀನಿ

    ಬೇ ಬೇ ಬೇಡಾ

    ಬಾರೇ ನಂದಿನಿ ಡ್ರೈವ್ ಕರ್ಕೊಂಡು ಹೋಗ್ತೀನಿ

    ಓಹ್‍ ಬೇಡ ಓಹ್ ಬೇಡ.

    ಬಾರೇ ನಂದಿನಿ ಟಾಲಿವುಡ್ ತೋರಸ್ತೀನಿ

    ಬೇ ಬೇ ಬೇಡ

    ಬಾರೇ ನಂದಿನಿ ಕಾಲಿವುಡ್ ತೋರಸ್ತೀನಿ

    ಬೇ ಬೇ ಬೇಡ..

    ನೋಡಮ್ಮ ಇಲ್ಲಿ ನೀನು ಆಕ್ಟಿಂಗ್ ಕಲಿಬೇಕು

    ಇಲ್ಲದಿದ್ರೆ ನಿಂಗಿಲ್ಲ ಕಷ್ಟ ಆಗುತ್ತದೆ

    ಸರ್ ನಾನು ಗ್ಲಾಮರಸ್ ಬಟ್ಟೆ ಹಾಕೊತೀನಿ

    ಯಾಕಂದ್ರೆ ನಾನ್ ಆಕ್ಟಿಂಗ್ ಅಷ್ಟಕ್ ಅಷ್ಟೆ, ಐ ಕ್ಯಾನ್ ಟ್ರೈ, ಐ ಕ್ಯಾನ್ ಆಕ್ಟ್, ಇಫ್ ನಾಟ್ ಐ ವಿಲ್ ಫ್ಲೈ ಟು ಬಾಲಿವುಡ್

    ನಾನು ನಂದಿನಿ ಬೆಂಗಳೂರಿಗೆ ಬಂದೀನಿ

    ಸಿನಿಮಾ ಮಾಡ್ತೀನಿ, ಹೀರೋಯಿನ್ ಆಗ್ತೀನಿ

    ಆಕ್ಟಿಂಗ್ ಬರಲ್ಲ, ಆದ್ರೂ ಅವಾರ್ಡ್ ತಗೋತೀನಿ

    ಹೀಗೆ ಸಾಹಿತ್ಯವೊಂದನ್ನು ಬರೆದು ವಿಕ್ಕಿ ಪೀಡಿಯಾ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಅನೇಕರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಅವರು ಹೆಸರನ್ನೂ ಹಾಕಬಹುದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ವಿಶ್ವನಾಥ್

    ‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ವಿಶ್ವನಾಥ್

    ಸಾಕಷ್ಟು ಹೊಸ ಪ್ರಯೋಗಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಿದೆ. ಅಂತಹ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ ‘ದೇವರ ಆಟ ಬಲ್ಲವರಾರು’ (Devara Aata Ballavaraaru) ಚಿತ್ರತಂಡ. ಈ ಹಿಂದೆ ಸಂಚಾರಿ ವಿಜಯ್ ಅವರ ‘ಫಿರಂಗಿ ಪುರ ಚಿತ್ರವನ್ನು ಕೈಗೆತ್ತಿಕೊಂಡಿದ್ದ ಜನಾರ್ದನ್ ಪಿ ಜಾನಿ (Janardhan P Jani) ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮೂವತ್ತು ದಿನಗಳಲ್ಲಿ ಚಿತ್ರದ ಎಲ್ಲಾ ಪ್ರಕ್ರಿಯೆ ಮುಗಿಸಿ ಬಿಡುಗಡೆ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಲು ಹೊರಟಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

    ನಾನು ಈ ಹಿಂದೆ ಫಿರಂಗಿ ಪುರ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ಭೇಟಿ ಮಾಡಿದ್ದೆ. ಈಗ ದೇವರ ಆಟ ಬಲ್ಲವರಾರು ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಇದು 1975 ರ ಕಾಲಘಟ್ಟದಲ್ಲಿ ನಡೆಯುವ ಕಥೆ.  ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಎಲ್ಲಾ ಕೆಲಸಗಳನ್ನು ಒಂದು ತಿಂಗಳೊಳಗೆ ಮುಗಿಸಿ, ಸರಿಯಾಗಿ ಒಂದು ತಿಂಗಳಿಗೆ ಚಿತ್ರವನ್ನು ತೆರೆಗೆ ತರಬೇಕು. ನಮ್ಮ ಚಿತ್ರ ಗಿನ್ನಿಸ್ ರೆಕಾರ್ಡ್ ಆಗಬೇಕು ಎಂಬುದು ನನ್ನ ಆಸೆ. ಈ ಕುರಿತು ನಾನು, ನನ್ನ ತಂಡ ಸುಮಾರು ಆರು ತಿಂಗಳಿನಿಂದ ಶ್ರಮ ಪಡುತ್ತಿದ್ದೇವೆ. ಇಡೀ ಚಿತ್ರದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯಲಿದೆ. ಅಲ್ಲಿನ ವಿಶಾಲವಾದ ಜಾಗದಲ್ಲಿ ಸೆಟ್ ಗಳನ್ನು ನಿರ್ಮಿಸಿ ಅದೇ ಸ್ಥಳದಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ದಿನ ಸುಮಾರು 160 ಕ್ಕೂ ಹೆಚ್ಚು ಜನ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

    ಜೂನ್ 16 ರಿಂದ ಐದು ದಿನಗಳ ಕಾಲ ಚಿತ್ರೀಕರಣ ನಡೆಯುವ ಸ್ಥಳದಲ್ಲಿಯೇ ತಾಲೀಮು ನಡೆಸಲಿದ್ದೇವೆ.‌ ಆನಂತರ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ಹದಿನಾರು ದಿನದೊಳಗೆ ಚಿತ್ರೀಕರಣ ಮುಕ್ತಾಯವಾಗಲಿದೆ. ಚಿತ್ರೀಕರಣವಾದ ನಂತರ ಎಲ್ಲಾ ಕಾರ್ಯಗಳನ್ನು ಪೂರೈಸಿ ಜುಲೈ 20ರಂದು ಚಿತ್ರವನ್ನು ತೆರೆಗೆ ತರುತ್ತಿದ್ದೇವೆ‌. ನಮ್ಮ ಕಾರ್ಯವೈಖರಿ ವೀಕ್ಷಿಸಲು ಆರು ಜನ ತೀರ್ಪುಗಾರರು‌ ಆ ಸ್ಥಳದಲ್ಲೇ ಇರುತ್ತಾರೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಅರ್ಜುನ್ ರಮೇಶ್, ಸಿಂಧೂ ಲೋಕನಾಥ್, ವರ್ಷ ವಿಶ್ವನಾಥ್, ಸಂಪತ್ ರಾಮ್, ಅರ್ಜುನ್, ಮೇದಿನಿ ಕೇಳಮನೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ನಿರ್ದೇಶಕ ಜನಾರ್ದನ್ ಪಿ ಜಾನಿ ತಿಳಿಸಿದರು.

    ನಾನು ಈ ಹಿಂದೆ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಈ ಚಿತ್ರದ ನಿರ್ದೇಶಕರ ಕಾರ್ಯವೈಖರಿ ಕಂಡು ಆಶ್ಚರ್ಯವಾಯಿತು‌. ಈ ಚಿತ್ರಕ್ಕಾಗಿ ಎರಡು ತಿಂಗಳಲ್ಲಿ ಹದಿನಾಲ್ಕು ಕೆಜಿ ತೂಕ ಇಳಿಸಿದ್ದೇನೆ. ನೋಡಿದವರು ಕಂಡು ಹಿಡಿಯದಷ್ಟು ಸಣ್ಣ ಆಗಿದ್ದೇನೆ. ನಿರ್ದೇಶಕರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಸೂರಿ ನನ್ನ ಪಾತ್ರದ ಹೆಸರು ಎಂದರು ನಾಯಕ ಶನಿ ಧಾರಾವಾಹಿ ಖ್ಯಾತಿಯ (Arjun Ramesh) ಅರ್ಜುನ್ ರಮೇಶ್. ಇದನ್ನೂ ಓದಿ:ಯಶ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ಬೀಡು ಬಿಟ್ಟ ಡೈರೆಕ್ಟರ್- ಇಲ್ಲಿದೆ ಗುಡ್ ನ್ಯೂಸ್

    ಮೂರು ವರ್ಷಗಳ ನಂತರ ನಾನು ನಟಿಸುತ್ತಿರುವ ಚಿತ್ರವಿದು. ರಚನ ನನ್ನ ಪಾತ್ರದ ಹೆಸರು‌‌. ನಾನು ಈವರೆಗೂ ಮಾಡಿರದ ಪಾತ್ರ ಈ ಚಿತ್ರದಲ್ಲಿ ಮಾಡುತ್ತಿದ್ದೇನೆ ಎಂದರು ನಾಯಕಿ ಸಿಂಧೂ ಲೋಕನಾಥ್ (Sindhu Loknath). ಇಂತಹ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಖುಷಿ ನಮಗಿದೆ ಎಂದರು ನಿರ್ಮಾಪಕರಾದ ಹನುಮಂತರಾಜು, ಲತಾ ರಾಗ ಹಾಗೂ ಸಹ ನಿರ್ಮಾಪಕ ಅನಿಲ್ ಜೈನ್‌.

    ಚಿತ್ರದಲ್ಲಿ ನಟಿಸುತ್ತಿರುವ ವರ್ಷ ವಿಶ್ವನಾಥ್,  ಅರ್ಜುನ್, ಸಂಪತ್ ರಾಮ್,  ಸಂಗೀತ ನಿರ್ದೇಶಕ ಶ್ಯಾನ್ ಎಲ್ ರಾಜ್, ಸಾಹಸ ನಿರ್ದೇಶಕ ಕುಂಗ್ಫು ಚಂದ್ರು ಹಾಗೂ ಕಾರ್ಯಕಾರಿ ನಿರ್ಮಾಪಕ ಶ್ರೀಪಾದ್ ಹೆಗಡೆ ಚಿತ್ರದ ಕುರಿತು ಮಾತನಾಡಿದರು. ದೇವರ ಆಟ ಬಲವರಾರು ಚಿತ್ರಕ್ಕೆ ಪ್ರತಿಯೊಬ್ಬ ಮನುಷ್ಯನ ಒಳಗೆ ಒಂದು ಕ್ರೂರ ಮೃಗ ಇದ್ದೆ ಇರುತ್ತದೆ ಎಂಬ ಅಡಿಬರಹವಿದೆ.

  • ಸಿಕ್ಕಿಂ ಪ್ರವಾಸದಲ್ಲಿ ನಟಿ ಸಿಂಧು ಲೋಕನಾಥ್

    ಸಿಕ್ಕಿಂ ಪ್ರವಾಸದಲ್ಲಿ ನಟಿ ಸಿಂಧು ಲೋಕನಾಥ್

    ಸ್ಯಾಂಡಲ್‌ವುಡ್ ಬ್ಯೂಟಿ ಸಿಂಧು ಲೋಕನಾಥ್ ಪರಿಚಯ, ಡ್ರಾಮಾ, `ಲವ್ ಇನ್ ಮಂಡ್ಯ’ ಚಿತ್ರದ ಮೂಲಕ ಗಮನ ಸೆಳೆದ ನಟಿ ಈಗ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಬೈಕ್‌ನಲ್ಲಿ ಒಬ್ಬರೇ ಟ್ರಾವೆಲ್ ಮಾಡುತ್ತಾ ಹೊಸ ಜಾಗಗಳಿಗೆ ಭೇಟಿ ಕೊಡ್ತಿದ್ದಾರೆ. ಈ ಫೋಟೋಗಳು ಸದ್ಯ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Sindhu Loknath (@sindhuloknath)

    ಚಂದನವನದ `ಡ್ರಾಮಾ’ ಚೆಲುವೆ ಸಿಂಧು ಲೋಕನಾಥ್ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಶೂಟಿಂಗ್ ಮಧ್ಯೆ ಹೊಸ ಜಾಗಗಳಿಗೆ ಆಗಾಗ ಭೇಟಿ ಕೊಡ್ತಿರತ್ತಾರೆ. ಟ್ರಾವೆಲಿಂಗ್‌ನ ಅತೀ ಹೆಚ್ಚು ಇಷ್ಟ ಪಡುವ ನಟಿ ಸಿಂಧು ಇದೀಗ ಸಿಕ್ಕಿಂಗೆ ಭೇಟಿ ಕೊಟ್ಟಿದ್ದಾರೆ. ಬೆಂಗಳೂರಿಂದ ಸಿಕ್ಕಂಗೆ ಒಬ್ಬರೇ ಜರ್ನಿ ಮಾಡಿ ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಿಂಧು ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4 : ನಿರ್ದೇಶಕ ಮಂಸೋರೆ ಮನದಾಳ

     

    View this post on Instagram

     

    A post shared by Sindhu Loknath (@sindhuloknath)

    ಇನ್ನು ಸಿಂಧು ಲೋಕನಾಥ್ ಕಡೆಯದಾಗಿ ಕಾಣಿಸಿಕೊಂಡ ಸಿನಿಮಾ, ಕಾಣದಂತೆ ಮಾಯವಾದನು, ಕೃಷ್ಣ ಟಾಕೀಸ್ ಚಿತ್ರದಲ್ಲಿ ನಟಿಸಿದ್ದರು. ಇದೀಗ `60 ಡೇಸ್’ ಎಂಬ ಸಿನಿಮಾಗೆ ಬಣ್ಣ ಹಚ್ಚಿದ್ದು, ಸದ್ಯದಲ್ಲೇ ಈ ಕುರಿತು ಅಪ್‌ಡೇಟ್ ಸಿಗಲಿದೆ.

  • ನಾಯಕ ನಟನಾದ ಜಯಮ್ಮನ ಮಗ ನಿರ್ದೇಶಕ!

    ನಾಯಕ ನಟನಾದ ಜಯಮ್ಮನ ಮಗ ನಿರ್ದೇಶಕ!

    ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿರುವ ಚಿತ್ರ ‘ಕಾಣದಂತೆ ಮಾಯವಾದನು’. ವಿಕಾಸ್, ಸಿಂಧು ಲೋಕ್‍ನಾಥ್ ಅಭಿಯಿಸಿರುವ ಈ ಚಿತ್ರ ಇದೇ ತಿಂಗಳ 31ಕ್ಕೆ ಬಿಡುಗಡೆಯಾಗುತ್ತಿದೆ. ವಿಭಿನ್ನ ಕಥಾಹಂದರ, ಸ್ಟೋರಿ ಲೈನ್ ಇರುವ ಈ ಚಿತ್ರವನ್ನು ರಾಜ್ ಪಾತಿಪಾಟಿ ನಿರ್ದೇಶನ ಮಾಡಿದ್ದಾರೆ. ಜಯಮ್ಮನ ಮಗ ಚಿತ್ರದಲ್ಲಿ ದುನಿಯಾ ವಿಜಿಗೆ ಆ್ಯಕ್ಷನ್ ಕಟ್ ಹೇಳಿದ್ದ ವಿಕಾಸ್ ಈ ಚಿತ್ರದ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದೇ ತಿಂಗಳ 31ಕ್ಕೆ ಈ ಚಿತ್ರ ಚಿತ್ರಮಂದಿರದ ಅಂಗಳಕ್ಕೆ ಬರುತ್ತಿದೆ.

    ರಾಜ್ ಪಾತಿಪಾಟಿ ಮೊದಲ ಬಾರಿ ಆಕ್ಷನ್ ಕಟ್ ಹೇಳಿರೋ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಪಡೆದುಕೊಂಡಿರೋದು ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರತಂಡಕ್ಕೆ ಖುಷಿ ನೀಡಿದೆ. ಮುಗ್ಧ ಪ್ರೇಮಕಥೆ ಚಿತ್ರದಲ್ಲಿದ್ದು, ಸಾವನಪ್ಪುವ ಪ್ರಿಯಕರ ದೆವ್ವವಾಗಿ ಬಂದು ಹೇಗೆ ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವ ಇಂಟ್ರಸ್ಟಿಂಗ್ ಕಥಾಹಂದರ ಚಿತ್ರದಲ್ಲಿದೆ. ಲವ್, ಆಕ್ಷನ್, ಹಾರಾರ್, ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿದ್ದು ಪ್ರೇಕ್ಷಕನಿಗೆ ಒಂದು ಪವರ್ ಪ್ಯಾಕ್ಡ್ ಎಂಟಟೈನ್ಮೆಂಟ್ ಸಿಗೋದ್ರಲ್ಲಿ ಡೌಟೇ ಇಲ್ಲ ಅಂತಿದೆ ಚಿತ್ರತಂಡ.

    ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದು ಪಾಸ್ ಆಗಿರೋ ಕಾಣದಂತೆ ಮಾಯವಾದನು ಸಿನಿಮಾ ಇದೇ ಶುಕ್ರವಾರ ಸಿನಿ ಪ್ರೇಕ್ಷಕರ ಎದುರಿಗೆ ಬರಲಿದ್ದಾನೆ. ಗುಮ್ಮಿನೇನಿ ವಿಜಯ್ ಮ್ಯೂಸಿಕ್, ಸುಜ್ಞಾನ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಚಿತ್ರದಲ್ಲಿ ದೊಡ್ಡ ತಾರಾಬಳಗದವಿದ್ದು ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ರಾಘವ್ ಉದಯ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

  • ಕಾಣದಂತೆ ಮಾಯವಾದನು: ಎಲ್ಲರನ್ನೂ ಸೆಳೆಯೋ ಮಾಯೆಯಂಥಾ ಟ್ರೈಲರ್!

    ಕಾಣದಂತೆ ಮಾಯವಾದನು: ಎಲ್ಲರನ್ನೂ ಸೆಳೆಯೋ ಮಾಯೆಯಂಥಾ ಟ್ರೈಲರ್!

    ಬೆಂಗಳೂರು: ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಒಂದಷ್ಟು ಕಾಲ ಯಾವ ಸುದ್ದಿಯೂ ಇಲ್ಲದಂತಿದ್ದ ಈ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದ ಕ್ಯಾರೆಕ್ಟರ್ ಪ್ರೋಮೋ ಮೂಲಕ ಮತ್ತೆ ಚರ್ಚೆಗೆ ಕಾರಣವಾಗಿತ್ತು. ಈ ಮೂಲಕವೇ ತನ್ನ ತಾರಾಗಣವನ್ನು ಪರಿಚಯಿಸಿದ್ದ ಚಿತ್ರತಂಡವೀಗ ಟ್ರೈಲರ್ ಮೂಲಕ ಇಡೀ ಸಿನಿಮಾದ ಆಂತರ್ಯವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ.

    ಕಾಣದಂತೆ ಮಾಯವಾದನು ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ವರ್ಷಾಂತರದಿಂದಲೂ ಸುದ್ದಿಯಾಗುತ್ತಾ ಸಾಗುತ್ತಿದ್ದ ಈ ಚಿತ್ರ ಯಾವ ಜಾನರಿನದ್ದು, ಇದರ ಕಥೆಯೇನು ಅಂತೆಲ್ಲ ಜನರಲ್ಲಿ ನಾನಾ ಪ್ರಶ್ನೆಗಳಿದ್ದವು. ಅದಕ್ಕೆ ಉತ್ತರಿಸುತ್ತಲೇ ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಈ ಟ್ರೈಲರ್ ಮೂಡಿ ಬಂದಿದೆ.

    ಹಾರರ್ ಕಥೆಗಳೆಂದರೆ ದೆವ್ವ, ಪ್ರೇತಗಳ ಮೂಲಕ ಭೀತಗೊಳಿಸೋದು ಎಂಬಂಥಾ ಕಲ್ಪನೆಯಿದೆ. ಆದರೆ ಅದಕ್ಕೆ ತದ್ವಿರುದ್ಧ ರೀತಿಯಲ್ಲಿ, ಹೊಸತನದೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋದಕ್ಕೂ ಟ್ರೈಲರ್ ಸಾಕ್ಷಿಯಂತಿದೆ. ಈ ಹಿಂದೆ ಜಯಮ್ಮನ ಮಗ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಕಾಸ್ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರಿಲ್ಲಿ ಪಕ್ಕಾ ಆಕ್ಷನ್ ಹೀರೋ ಆಗಿ ವಿಜೃಭಿಸಿರೋ ಸ್ಪಷ್ಟ ಸೂಚನೆಯನ್ನೂ ಈ ಟ್ರೈಲರ್ ನೀಡಿದೆ.

    ಹಾರರ್ ಕಂಟೆಂಟಿದೆಯಾದರೂ ಇದು ಮಾಮೂಲಿ ಶೈಲಿಯ ಚಿತ್ರವಲ್ಲ. ಇಲ್ಲಿರೋ ಆತ್ಮ ಬದುಕಿರೋ ಘಳಿಗೆಯಲ್ಲಿ ಜೀವದಂತಿದ್ದ ಪ್ರೀತಿಯ ಕಾವಲಿಗೆ ನಿಲ್ಲುತ್ತಲೇ ಸೇಡು ತೀರಿಸಿಕೊಳ್ಳೋ ಕಥೆಯ ಹೊಳಹೂ ಕೂಡಾ ಈ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಇದರ ಆಚೀಚೆಗೆ ಥ್ರಿಲ್ಲರ್ ಸ್ಟೋರಿ ಇರುವ ಲಕ್ಷಣಗಳೊಂದಿಗೇ ಮೇಕಿಂಗ್‍ನಲ್ಲಿಯೂ ಈ ಟ್ರೈಲರ್ ಗಮನ ಸೆಳೆಯುವಂತಿದೆ.

    ಆಗಾಗ ಸದ್ದು ಮಾಡುತ್ತಾ ಸೈಲೆಂಟಾಗುತ್ತಿದ್ದ ಈ ಚಿತ್ರ ಕೊಂಚ ತಡವಾಗಿದೆ ಎಂಬ ಕಂಪ್ಲೇಂಟು ಪ್ರೇಕ್ಷಕರಲ್ಲಿತ್ತು. ಆದರೆ ಈಗ ಬಿಡುಗಡೆಯಾಗಿರೋ ಟ್ರೈಲರ್ ಆ ಮುನಿಸನ್ನು ಮರೆಯಾಗಿಸಿ ಚಿತ್ರ ಬಿಡುಗಡೆಯಾಗೋದನ್ನ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡುವಲ್ಲಿಯೂ ಶಕ್ತವಾಗಿದೆ. ಈ ಮೂಲಕ ನಿರ್ದೇಶಕ ರಾಜ್ ಪತ್ತಿಪಾಟಿ ಭರವಸೆ ಹುಟ್ಟಿಸಿದ್ದಾರೆ. ಬಹುಶಃ ಮಾಸ್ತಿಗುಡಿ ದುರಂತದಲ್ಲಿ ಸಾವಿಗೀಡಾಗಿದ್ದ ಅನಿಲ್ ನಟಿಸಿರೋ ಕಡೆಯ ಚಿತ್ರವಿದು. ಈ ಮೂಲಕ ಉದಯ್ ಅವರನ್ನು ಅಬ್ಬರದ ಪಾತ್ರವೊಂದರ ಮೂಲಕ ಕಣ್ತುಂಬಿಕೊಳ್ಳೋ ಸದಾವಕಾಶವೂ ಪ್ರೇಕ್ಷಕರಿಗೆ ಸಿಕ್ಕಿದೆ.

    ಒಟ್ಟಾರೆಯಾಗಿ ಈ ಟ್ರೈಲರ್ ಮೂಲಕವೇ ಕಾಣದಂತೆ ಮಾಯವಾದನು ಚಿತ್ರ ಮತ್ತೆ ಜನಮಾನಸ ತಲುಪಿಕೊಂಡಿದೆ. ಬಿಡುಗಡೆಯಾದ ಕ್ಷಣದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದೆ. ಇದನ್ನು ಕಂಡು ಪ್ರೇಕ್ಷಕರು ಅದೆಷ್ಟು ಖುಷಿಗೊಂಡಿದ್ದಾರೆಂಬುದಕ್ಕೆ ಯೂ ಟ್ಯೂಬ್‍ನಲ್ಲಿ ಹರಿದು ಬರುತ್ತಿರೋ ಕಮೆಂಟುಗಳಿಗಿಂತಲೂ ಬೇರೆ ಪುರಾವೆ ಬೇಕಿಲ್ಲ.

    https://youtu.be/GNaimyGV1m4

  • ಮಹಿಳಾ ದಿನಾಚರಣೆ ವೇಳೆಯಲ್ಲೇ ಬರುತ್ತೆ ‘ಹೀಗೊಂದು ದಿನ’..!

    ಮಹಿಳಾ ದಿನಾಚರಣೆ ವೇಳೆಯಲ್ಲೇ ಬರುತ್ತೆ ‘ಹೀಗೊಂದು ದಿನ’..!

    ಬೆಂಗಳೂರು: ಈ ವರ್ಷದ ಮಹಿಳಾ ದಿನದಂದೇ ‘ಹೀಗೊಂದು ದಿನ’ ಅಂತಾ ಬರ್ತಿದ್ದಾರೆ ಸ್ವಲ್ಪ ಕಾಲದಿಂದ ಸ್ಯಾಂಡಲ್ ವುಡ್ ನಿಂದ ಮರೆಯಾಗಿದ್ದ ಸಿಂಧು ಲೋಕನಾಥ್. ಹೀಗೊಂದು ದಿನ ಎಂಬ ಹೆಸರಿನ ಈ ಸಿನೆಮಾ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಹುಟ್ಟಿದೆ.

    ಮದುವೆಯಾದ ನಂತರ ಸಿನಿಲೋಕದಿಂದ ನಾಪತ್ತೆಯಾದಂತಿದ್ದ ಸಿಂಧು ಲೋಕನಾಥ್ ಪ್ರಧಾನ ಪಾತ್ರದದಲ್ಲಿರುವ ಈ ಚಿತ್ರದ ಕಥೆಯ ಎಳೆ ಹೇಗಿರಬಹುದು ಎಂಬ ಪ್ರಶ್ನೆ ಪ್ರೇಕ್ಷಕರದ್ದು. ಯಾವುದೇ ಚಿತ್ರದ ಪಾಲಿಗಾದರೂ ತಾನೇ ತಾನಾಗಿ ಹುಟ್ಟಿಕೊಳ್ಳುವ ಇಂಥಾ ನಿರೀಕ್ಷೆಯೇ ಗೆಲುವಿನ ಮೊದಲ ಮೆಟ್ಟಿಲು. ಅಂಥಾದ್ದೊಂದು ಮೆಟ್ಟಿಲೇರಿ ನಿಂತಿರುವ ಖುಷಿಯಲ್ಲಿ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ನೇತೃತ್ವದ ಚಿತ್ರತಂಡ ಮಿಂದೇಳುತ್ತಿದೆ!

    ‘ಹೀಗೊಂದು ದಿನ’ ಅನ್ ಕಟ್ ಮೂವಿ ಎಂಬ ಕಾರಣದಿಂದಲೇ ಭಾರೀ ಸದ್ದು ಮಾಡುತ್ತಿದೆ. ಅಂದಹಾಗೆ ಅನ್‍ಕಟ್ ಮೆಥಡ್ ನಲ್ಲಿ ಒಂದು ಚಿತ್ರವನ್ನು ರೂಪಿಸೋದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡ ಸಮರ್ಥವಾಗಿ ನಿಭಾಯಿಸಿದ ಖುಷಿಯಲ್ಲಿದೆ. ಇದು ಎರಡು ಘಂಟೆಯಲ್ಲಿ ನಡೆಯೋ ಕಥಾ ಹಂದರ ಹೊಂದಿರೋ ಚಿತ್ರ. ವಿಶೇಷ ಕಾರಣವೊಂದರ ಬೆನ್ನು ಬಿದ್ದು ಮನೆಯಿಂದ ಹೊರ ಬೀಳೋ ಹುಡುಗಿಯ ಸುತ್ತಾ ಎರಡು ಗಂಟೆಗಳ ಕಾಲ ನಡೆಯುವ ವಿದ್ಯಮಾನ ಈ ಚಿತ್ರದ ಮುಖ್ಯ ವಿಚಾರ.

    ಇದಕ್ಕಾಗಿ ಪ್ರತಿನಿತ್ಯ ಬೆಳಗ್ಗೆ ಆರರಿಂದ ಎಂಟು ಗಂಟೆವರೆಗೆ ಶೂಟ್ ಮಾಡಿದ್ದರಂತೆ. ಎಲ್ಲಾ ಕಲಾವಿದರು ಹೊಸ ಪ್ರಯೋಗವೆಂಬ ಕಾರಣದಿಂದ ಸಾಥ್ ನೀಡಿದ್ದಾರೆಂಬ ತೃಪ್ತಿ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಅವರದ್ದು. ಮೊದಲ ಚಿತ್ರದಲ್ಲಿಯೇ ಸವಾಲಿನ ಕಥಾ ಹಂದರವನ್ನು ಕೈಗೆತ್ತಿಕೊಂಡು ಚಿತ್ರವನ್ನು ಮಾಡಿ ಮುಗಿಸಿರುವ ನಿರ್ಮಾಪಕ ಚಂದ್ರಶೇಖರ್ ಸದ್ಯ ಭರ್ಜರಿ ಗೆಲುವೊಂದರ ನಿರೀಕ್ಷೆಯಲ್ಲಿದ್ದಾರೆ.

  • ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿಂಧು ಲೋಕನಾಥ್

    ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿಂಧು ಲೋಕನಾಥ್

    ಬೆಂಗಳೂರು: ನಟಿ ಸಿಂಧು ಲೋಕನಾಥ್ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮಂಗಳೂರು ಮೂಲದ ಶ್ರೇಯಸ್ ಕೊಡಿಯಾಲ್ ಅವರನ್ನ ಕಳೆದ ಭಾನುವಾರ ಸಿಂಧು ಲೋಕನಾಥ್ ಮದುವೆಯಾಗಿದ್ದಾರೆ. ಶ್ರೇಯಸ್ ಪೂಮಾ ಕಂಪನಿಯಲ್ಲಿ ಹೆಚ್‍ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಟುಂಬದ ಸಮ್ಮುಖದಲ್ಲಿ ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ಸಿಂಧು ವಿವಾಹ ನೆರವೇರಿದೆ.

    ಡ್ರಾಮಾ, ಲೈಫು ಇಷ್ಟೇನೆ, ಯಾರೇ ಕೂಗಾಡಲಿ ಇನ್ನೂ ಮುಂತಾದ ಸಿನಿಮಾಗಳಲ್ಲಿ ಸಿಂಧು ಲೋಕನಾಥ್ ಅಭಿನಯಿಸಿದ್ದಾರೆ.