Tag: Sindhagi

  • ಉಪಚುನಾವಣೆ ಟಿಕೆಟ್‍ಗೆ ಲಾಬಿ – ಮನೋಹರ್ ತಹಶೀಲ್ದಾರ್ ಭೇಟಿಗೆ ಒಪ್ಪದ ಸಿದ್ದರಾಮಯ್ಯ

    ಉಪಚುನಾವಣೆ ಟಿಕೆಟ್‍ಗೆ ಲಾಬಿ – ಮನೋಹರ್ ತಹಶೀಲ್ದಾರ್ ಭೇಟಿಗೆ ಒಪ್ಪದ ಸಿದ್ದರಾಮಯ್ಯ

    – ಆರ್‍ಎಸ್‍ಎಸ್ ಜೊತೆ ಸಿಎಂ ಬೊಮ್ಮಾಯಿ ಚರ್ಚೆ

    ಬೆಂಗಳೂರು: ಹಾನಗಲ್, ಸಿಂದಗಿ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್‍ನಲ್ಲಿ ಟಿಕೆಟ್ ಲಾಬಿ ಜೋರಾಗಿದೆ. ಕಾಂಗ್ರೆಸ್‍ನಲ್ಲಿ ಟಿಕೆಟ್ ಘೋಷಣೆಗೂ ಮೊದಲೇ ಬಂಡಾಯದ ಕೂಗು ಎದ್ದಿದೆ.

    ಇಂದು ಬೆಳಗ್ಗೆ ತಮ್ಮ ಮನೆಗೆ ಬಂದ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ರನ್ನು ಸಿದ್ದರಾಮಯ್ಯ ಭೇಟಿ ಮಾಡದೇ ವಾಪಸ್ ಕಳಿಸಿದ್ದಾರೆ. ಇದರಿಂದ ಫುಲ್ ಗರಂ ಆಗಿರುವ ಮನೋಹರ್ ತಹಶೀಲ್ದಾರ್, ನಮ್ಮ ಕ್ಷೇತ್ರದ ಯಾರಿಗೆ ಟಿಕೆಟ್ ಕೊಟ್ರೂ ಓಕೆ.. ಆದರೆ ಹೊರಗಿನ ಶ್ರೀನಿವಾಸ್ ಮಾನೆಗೆ ಟಿಕೆಟ್ ಕೊಟ್ರೆ ಮಾತ್ರ ಸುಮ್ಮನಿರಲ್ಲ. ಯಾಕೆ ನಮ್ಮ ಕ್ಷೇತ್ರದಲ್ಲಿ ನಾವು ಗಂಡಸರಲ್ವಾ ಎಂದು ಪಕ್ಷದ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

    ಈ ಮಧ್ಯೆ ಇಂದು ಕೇಶವಕೃಪಾಗೆ ಭೇಟಿ ನೀಡಿದ್ದ ಸಿಎಂ, ಉಪಚುನಾವಣೆ ಸಂಬಂಧ ಸಂಘಪರಿವಾರದ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಕಳೆದ ರಾತ್ರಿ ಮುಖ್ಯಮಂತ್ರಿಗಳನ್ನು ಸಂಸದ ಶಿವಕುಮಾರ್ ಉದಾಸಿ ಭೇಟಿ ಮಾಡಿ ಚರ್ಚೆ ನಡೆಸಿದ್ರು. ಸಿಂದಗಿ ಟಿಕೆಟ್ ಆಕಾಂಕ್ಷಿ ರಮೇಶ್ ಭೂಸನೂರು, ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ. ಇನ್ನು 2ದಿನದಲ್ಲಿ ಸಂಭಾವ್ಯರ ಪಟ್ಟಿ ಹೈಕಮಾಂಡ್‍ಗೆ ಕಳಿಸಿಕೊಡ್ತೀವಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.

  • ಹೂತಿದ್ದ ಶವ ತೆಗೆದು ಮತ್ತೆ ಮರಣೋತ್ತರ ಪರೀಕ್ಷೆ!

    ಹೂತಿದ್ದ ಶವ ತೆಗೆದು ಮತ್ತೆ ಮರಣೋತ್ತರ ಪರೀಕ್ಷೆ!

    ವಿಜಯಪುರ: ಹೂತಿದ್ದ ಶವ ತೆಗೆದು ಮತ್ತೆ ಮರಣೋತ್ತರ ಪರೀಕ್ಷೆ ಮಾಡಿರುವ ಘಟನೆ ಸಿಂದಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಸಿಂದಗಿ ತಹಶೀಲ್ದಾರ್ ಡಿಹೆಚ್ ಜಮಾದಾರ ನೇತೃತ್ವದಲ್ಲಿ ದೇವರಹಿಪ್ಪರಗಿ ಪೊಲೀಸರು ಹೂತಿದ್ದ ಬನ್ನಿಹಟ್ಟಿ ನಿವಾಸಿ ಪ್ರಕಾಶ್ ಹರಿಜನ್ ಶವವನ್ನು ಹೊರ ತೆಗೆದಿದ್ದಾರೆ. ನಂತರ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

    ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎಂದು ಪತ್ನಿ ಸುನೀತಾ ಹರಿಜನ್ ಹಾಗೂ ಮತ್ತಿಬ್ಬರು ಸೇರಿ ಮಾರ್ಚ್ 21 ರಂದು ಪ್ರಕಾಶ್ ಅವರನ್ನು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.