Tag: simple suni

  • ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ‘ರೌಡಿ ಬೇಬಿ’ ಹಾಡು

    ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ‘ರೌಡಿ ಬೇಬಿ’ ಹಾಡು

    ಸುಮುಖ ಎಂಟರ್ ಟೈನರ್ಸ್ ಹಾಗೂ ವಾರ್ ಫುಟ್ ಸ್ಟುಡಿಯೋಸ್ ಲಾಂಛನದಲ್ಲಿ ಎಸ್.ಎಸ್. ರವಿಗೌಡ ಹಾಗೂ ಶ್ಯಾಮಲಾ ರೆಡ್ಡಿ ಅವರು ನಿರ್ಮಿಸುತ್ತಿರುವ ‘ರೌಡಿ ಬೇಬಿ` ಚಿತ್ರಕ್ಕಾಗಿ ಡಾ. ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ‘ಸಾಗು ಮುಂದೆ ಸಾಗು ಈ ಭೂಮಿ ದೊಡ್ಡದು’ ಹಾಡನ್ನು ಖ್ಯಾತ ಗಾಯಕ ಚಂದನ್ ಶೆಟ್ಟಿ ಹಾಡಿದ್ದಾರೆ. ಅರ್ಮಾನ್ ಸಂಗೀತ ನೀಡಿದ್ದಾರೆ.

    ರೆಡ್ಡಿ ಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮಂಗಳೂರು, ಕೇರಳ, ಬೆಂಗಳೂರು ಮುಂತಾದ ಕಡೆ ಮೂವತ್ತು ದಿನಗಳ ಚಿತ್ರೀಕರಣ ನಡೆದಿದೆ. ಈ ಹಿಂದೆ ‘ಪ್ರಯಾಣಿಕರ ಗಮನಕ್ಕೆ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ರೆಡ್ಡಿ ಕೃಷ್ಣ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

    ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಡಾ. ವಿ.ನಾಗೇಂದ್ರ ಪ್ರಸಾದ್, ಸಿಂಪಲ್ ಸುನಿ, ಚೇತನ್ ಕುಮಾರ್ ಕಿನಾಲ್ ರಾಜ್ ಬರೆದಿದ್ದಾರೆ. ಸಾಮ್ರಾಟ್ ಛಾಯಾಗ್ರಹಣ, ಪ್ರಮೋದ್ ಸೋಮರಾಜ್ ಸಂಕಲನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಎರಡು ಸಾಹಸ ಸನ್ನಿವೇಶಗಳಿದ್ದು, ಚಂದ್ರು ಸಾಹಸ ನಿರ್ದೇಶನ ಮಾಡಿದ್ದಾರೆ. ಚೇತನ್ ಕುಮಾರ್ ಸಂಭಾಷಣೆ ಬರೆದಿದ್ದಾರೆ.

    ನಿರ್ಮಾಪಕ ರವಿಗೌಡ ಅವರು ಈ ಚಿತ್ರದ ನಾಯಕರಾಗಿ ನಟಿಸಿದ್ದು, ಹೀರಕೌರ್, ದಿವ್ಯರಾವ್, ಅರುಣ ಬಾಲರಾಜ್, ಅಮಿತ್, ಕೆಂಪೇಗೌಡ, ಶ್ರೀನಾಥ್ ವಸಿಷ್ಠ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಸಿಂಪಲ್ ಸುನಿ ಆರ್‌ಸಿಬಿ ಭವಿಷ್ಯ ಹೇಳಿದ್ರು

    ಸಿಂಪಲ್ ಸುನಿ ಆರ್‌ಸಿಬಿ ಭವಿಷ್ಯ ಹೇಳಿದ್ರು

    ಬೆಂಗಳೂರು: ಐಪಿಎಲ್ ಪ್ರಾರಂಭವಾದ ನಂತರದಿಂದ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ರಾರಾಜಿಸುವ  ಪೋಸ್ಟ್  ಅಂದ್ರೆ `ಈ ಬಾರಿ ಕಪ್ ನಮ್ದೇ’. ಕಳೆದ ಆವೃತ್ತಿಗಳಿಗೆ ಹೋಲಿಸಿದರೆ ಈ ಆವೃತ್ತಿಯಲ್ಲಿ ಆರ್.ಸಿ.ಬಿ ತಂಡದ ಅಭಿಮಾನಿಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರವನ್ನೇ ನೀಡಿದ್ರೂ ಸಹ ಆರ್.ಸಿ.ಬಿ ತಂಡವೂ ಇಲ್ಲಿಯವರೆಗೂ ಆಡಿದ ನಾಲ್ಕು ಪಂದ್ಯಗಳಲ್ಲೂ ಸೋಲಿನ ಲಡ್ಡುವನ್ನು ತಿನ್ನುತ್ತಲೇ ಇದೆ. ಅಲ್ಲದೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಚೆನ್ನೈ, ಮುಂಬೈ, ಹೈದ್ರಾಬಾದ್, ರಾಜಸ್ಥಾನ ತಂಡಗಳ ವಿರುದ್ಧ ಸೋತಿರುವ ಆರ್ ಸಿ ಬಿ ತಂಡದ ಬಗ್ಗೆ ಅಭಿಮಾನಿಗಳು ಈಗಾಗಲೇ ನಂಬಿಕೆ ವಿಶ್ವಾಸ ಎಲ್ಲವನ್ನು ಕಳೆದುಕೊಂಡಿದ್ದಾರೆ. ಎಷ್ಟೇ ಪಂದ್ಯ ಸೋತರೂ ನಮ್ಮ ಒಲವು ನಮ್ಮ ತಂಡಕ್ಕೆ ಮಾತ್ರ ಎಂಬ ವಿಶ್ವಾಸದಲ್ಲಿರುವ ಆರ್ ಸಿ ಬಿ ತಂಡದ ಅಪ್ಪಟ ಅಭಿಮಾನಿ ಸಿಂಪಲ್ ಸುನಿ ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ.

    ಸುನಿ ಭವಿಷ್ಯವಾಣಿಯ ಪ್ರಕಾರ ಮುಂದಿನ ಪಂದ್ಯದಲ್ಲಿ ಆರ್ ಸಿ ಬಿ ಗೆಲ್ಲೋ ಲಕ್ಷಣಗಳಿವೆಯಂತೆ. ಸರಣಿಯಲ್ಲಿ ಸೋಲಿನ ರುಚಿ ಉಂಡಿರುವ ಆರ್ ಸಿ ಬಿ ಈ ಪಂದ್ಯದಲ್ಲಿ ಗೆಲ್ಲಲೇ ಬೇಕು. ಗೆದ್ದೇ ಗೆಲ್ಲುತ್ತದೆ. ಸೋತವರು ಗೆಲ್ಲಲೇ ಬೇಕಲ್ಲವೇ ಎಂದು ತಂಡದ ಬಗ್ಗೆ ಒಲುಮೆಯ ಮಾತುಗಳನ್ನಾಡಿದ್ದಾರೆ. ಸುನಿ ಅವರ ಮಾತಿಗೆ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಈ ಮಾತು ನಿಜವಾಗ್ಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಸತತ 4 ಪಂದ್ಯ ಸೋತು ನಿರಾಸೆಯಲ್ಲಿರುವ ಆರ್ ಸಿ ಬಿ ಇಂದಿನ ಪಂದ್ಯದಲ್ಲಿ ಫಾರ್ಮ್ ಗೆ ಮರಳಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಸಿಂಪಲ್ ಸುನಿಯ ಭವಿಷ್ಯವಾಣಿ ನಿಜವಾಗುತ್ತಾ, ಇಲ್ಲ ಮತ್ತೆ ಅಭಿಮಾನಿಗಳು ಇವರು ಬಾಳು ಇಷ್ಟೇ ಅಂತ ಮೂಗು ಮುರಿಯೋ ಹಾಗಾಗುತ್ತಾ ಕಾದು ನೋಡೋಣ.

  • ಬಜಾರಲ್ಲಿ ಹಾರಾಡಲಿರೋದು ಭೂಗತ ಪಾರಿವಾಳ!

    ಬಜಾರಲ್ಲಿ ಹಾರಾಡಲಿರೋದು ಭೂಗತ ಪಾರಿವಾಳ!

    ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರ ಈಗಾಗಲೇ ವಿಭಿನ್ನವಾಗಿರೋ ಪೋಸ್ಟರ್, ಟ್ರೈಲರ್‍ಗಳಿಂದಾಗಿ ಸಖತ್ ಸೌಂಡ್ ಮಾಡುತ್ತಿದೆ. ಫೆಬ್ರವರಿ ಒಂದರಂದು ತೆರೆ ಕಾಣುತ್ತಿರೋ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿರೋ ಕುತೂಹಲ ಒಂದೆರಡಲ್ಲ. ಅದೆಲ್ಲದಕ್ಕೂ ಕಾರಣ ಪಾರಿವಾಳ!

    ಈವರೆಗೂ ಪಾರಿವಾಳಗಳನ್ನು ಸಿನಿಮಾಗಳಲ್ಲಿ ಬಳಸುವ ಪರಿಪಾಠ ನಡೆದುಕೊಂಡು ಬಂದಿದೆ. ಆದರೆ ಪಾರಿವಾಳಗಳೇ ಪ್ರಧಾನವಾಗಿರುವ, ಅದರ ಮೂಲಕವೇ ಕಥೆ ಬಿಚ್ಚಿಕೊಳ್ಳುವ ಸಿನಿಮಾಗಳು ಬಂದಿಲ್ಲ. ಈ ನಿಟ್ಟಿನಲ್ಲಿ ಬಜಾರ್ ಚಿತ್ರ ಮೈಲಿಗಲ್ಲಾಗಿ ದಾಖಲಾಗುತ್ತದೆ.

    ಬೆಂಗಳೂರಿನಂಥಾ ನಗರಗಳಲ್ಲಿ ಪಾರಿವಾಳಗಳ ರೇಸ್ ಆಗಾಗ ನಡೆಯುತ್ತಿರುತ್ತದೆ. ಈಗ ಮೋಜಿಗಷ್ಟೇ ಸೀಮಿತವಾಗಿರೋ ಈ ಆಟ ಒಂದು ಕಾಲದಲ್ಲಿ ರೌಡಿಸಂನ ಸೂತ್ರವಾಗಿತ್ತೆಂಬುದು ಅಚ್ಚರಿಯ ವಿಚಾರ. ಅಂಥಾ ಸೂಕ್ಷ್ಮ ಕಥೆಯನ್ನು ಕಲೆ ಹಾಕಿಯೇ ಸುನಿ ಈ ಚಿತ್ರವನ್ನು ರೂಪಿಸಿದ್ದಾರೆ. ನವ ನಾಯಕ ಧನ್ವೀರ್ ಇಲ್ಲಿ ವಿಭಿನ್ನವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ಮೂಲಕವೇ ಅವರು ನಾಯಕನಾಗಿಯೂ ಅದ್ಧೂರಿ ಎಂಟ್ರಿ ಕೊಡುವ ಸನ್ನಾಹದಲ್ಲಿದ್ದಾರೆ.

    https://www.youtube.com/watch?v=m1gTKSLidMs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಜಾರ್: ಸಿಂಪಲ್ ಸುನಿಯ ಸಿನಿ ಜರ್ನಿ ಸಲೀಸಿನದ್ದಲ್ಲ!

    ಬಜಾರ್: ಸಿಂಪಲ್ ಸುನಿಯ ಸಿನಿ ಜರ್ನಿ ಸಲೀಸಿನದ್ದಲ್ಲ!

    ಸಿಂಪಲ್ಲಾಗೊಂದು ಲವ್ ಸ್ಟೋರಿ ಚಿತ್ರದ ಮೂಲಕವೇ ಸ್ಟಾರ್ ನಿರ್ದೇಶಕರಾಗಿ ಹೊರ ಹೊಮ್ಮಿದವರು ಸುನಿ. ಈ ಚಿತ್ರದ್ದು ಕನ್ನಡ ಚಿತ್ರರಂಗದಲ್ಲಿಯೇ ಅಚ್ಚರಿದಾಯಕವಾದ ಗೆಲುವು. ಒಂದು ಹೊಸ ತಂಡ, ಫ್ರೆಶ್ ಆದ ಕಥೆಯೊಂದಿಗೆ ಸುನಿ ಮಾಡಿದ್ದ ಮೋಡಿ ಸಣ್ಣದೇನಲ್ಲ. ಹೊರ ಜಗತ್ತಿನ ಪಾಲಿಗೆ ಸುನಿ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಮೂಲಕ ಏಕಾಏಕಿ ಉದ್ಭವಿಸಿದ ಹುಡುಗ ಅನ್ನಿಸಿದ್ದರೂ ಇರಬಹುದು. ಆದರೆ, ಸುನಿ ಯುವ ನಿರ್ದೇಶಕ ಸಿಂಪಲ್ ಸುನಿ ಆಗಿದ್ದರ ಹಾದಿಯೇನೂ ಅಷ್ಟು ಸಲೀಸಿನದ್ದಲ್ಲ.

    ಹೆಸರಘಟ್ಟ ಸೀಮೆಯಲ್ಲಿಯೇ ಹುಟ್ಟಿ ಬೆಳೆದವರು ಸುನಿ. ಅವರ ತಂದೆ ಇನ್ಸ್ ಪೆಕ್ಟರ್ ಆಗಿದ್ದವರು. ಆದ್ದರಿಂದ ಸುನಿ ಪಾಲಿಗೆ ಮನೆಯ ವಾತಾವರಣದಲ್ಲಿ ಕಷ್ಟ ಗೊತ್ತಾಗಿಲ್ಲ. ಆದರೆ ಆ ಕಾಲದಲ್ಲಿಯೇ ಓದುವ, ಕಥೆ ಕವನ ಬರೆಗೋ ಗೀಳಿತ್ತಲ್ಲಾ? ಅದುವೇ ಸಿನಿಮಾ ಹುಚ್ಚು ಹತ್ತಿಸಿ ಸುನಿಯನ್ನು ಕಡು ಕಷ್ಟದ ಟ್ರ್ಯಾಕಿಗೆ ತಂದು ಬಿಟ್ಟಿತ್ತು.

    ಸಿನಿಮಾ ನಿರ್ದೇಶಕನಾಗೋ ಕನಸು ಹೊತ್ತು ಗಾಂಧಿನಗರದತ್ತ ಬಂದ ಸುನಿ ಕಷ್ಟದ ಹಾದಿ ಸವೆಸಿದ್ದಾರೆ. ಕೆಲ ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿದ್ದುಕೊಂಡು ವರ್ಷಾಂತರಗಳ ಕಾಲ ದುಡಿದಿದ್ದಾರೆ. ಆದರೆ ಏನೇ ಕಷ್ಟಗಳು ಬಂದರೂ ಎದೆಗುಂದದೆ ಮುಂದುವರೆದ ಪರಿಣಾಮವಾಗಿಯೇ ಅವರು ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ.

    ಸಿಂಪಲ್ ಆಗೊಂದ್ ಲವ್ ಸ್ಟೋರಿಯಿಂದ ಆರಂಭವಾದ ಅವರ ಪ್ರಯಾಣ ಬಜಾರ್ ವರೆಗೂ ಬಂದು ತಲುಪಿಕೊಂಡಿದೆ. ಆದರೆ ಬಜಾರ್ ಸುನಿಯ ಈ ಹಿಂದಿನ ಚಿತ್ರಗಳಿಗಿಂತಲೂ ಸಂಪೂರ್ಣ ಭಿನ್ನ. ಈ ಸಿನಿಮಾ ಈ ಪಾಟಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋದೇ ಆ ಕಾರಣಕ್ಕಾಗಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದರ್ಶನ್ ಅಭಿಮಾನಿ ‘ಬಜ್ಹಾರ್’ಗೆ ಬಂದಾಗ…

    ದರ್ಶನ್ ಅಭಿಮಾನಿ ‘ಬಜ್ಹಾರ್’ಗೆ ಬಂದಾಗ…

    ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಬಜ್ಹಾರ್ ಚಿತ್ರದ ಮೂಲಕ ಹೊಸಾ ಹುಡುಗ ಧನ್ವೀರ್ ನಾಯಕ ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಅವರು ಈ ಸಿನಿಮಾಗಾಗಿ ಅದೆಷ್ಟು ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ, ಹೇಗೆಲ್ಲ ತಯಾರಾಗಿದ್ದಾರೆಂಬ ವಿಚಾರವೂ ಹೊರ ಬಿದ್ದಿದೆ. ಈ ಬಗ್ಗೆ ಜನಸಾಮಾನ್ಯರೂ ಧನ್ವೀರ್ ಬಗ್ಗೆ ಪ್ರೀತಿ ಮೂಡಿಸಿಕೊಳ್ಳುವಂತೆಯೂ ಆಗಿದೆ.

    ಬಜ್ಹಾರ್ ಮೂಲಕ ರಗಡ್ ಲುಕ್ಕಿನಲ್ಲಿಯೇ ಎಂಟ್ರಿ ಕೊಟ್ಟಿರೋ ಧನ್ವೀರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಸ್ಫೂರ್ತಿ. ಚಿಕ್ಕ ವಯಸ್ಸಿನಿಂದಲೇ ದರ್ಶನ್ ಅವ್ರ ಚಿತ್ರಗಳನ್ನು ನೋಡುತ್ತಾ ಅವರ ಕಾರಣದಿಂದಲೇ ನಾಯಕನಾಗಬೇಕು ಎಂಬ ಕನಸು ಕಂಡ ಧನ್ವೀರ್ ಅವರಂತೆಯೇ ಕಷ್ಟಪಟ್ಟರೆ ಮಾತ್ರವೇ ಏನಾದರೂ ಮಾಡಲು ಸಾಧ್ಯ ಎಂಬ ಮನಸ್ಥಿತಿ ಹೊಂದಿದ್ದಾರೆ.

    ದರ್ಶನ್ ಅವರೇ ತನ್ನ ಪಾಲಿನ ದೇವರಿದ್ದಂತೆ ಅನ್ನೋವಷ್ಟರ ಮಟ್ಟಿಗೆ ಧನ್ವೀರ್ ಅವರಿಗೆ ದರ್ಶನ್ ಅಂದ್ರೆ ಪ್ರೀತಿ. ಇದನ್ನು ಮನಗಂಡು ದರ್ಶನ್ ಕೂಡಾ ಬಜ್ಹಾರಿನ ಆಡಿಯೋ ಲಾಂಚ್ ಮಾಡಿದ್ದರು. ತಮ್ಮ ಅಭಿಮಾನಿಯನ್ನು ಹರಸಿದ್ದರು. ಧನ್ವೀರ್ ಈ ಚಿತ್ರದಲ್ಲಿ ಕಾಣಿಸಿಕೊಂಡಿರೋ ರೀತಿ ನೋಡಿದರೆ ಕನ್ನಡಕ್ಕೊಬ್ಬ ಹೀರೋ ಸಿಕ್ಕುವ ಲಕ್ಷಣಗಳೇ ಕಾಣಿಸುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷ ಶರಣ್ ಪಾಲಿಗೆ ತ್ರಿಶಂಕು ಸ್ವರ್ಗ!

    ಹೊಸ ವರ್ಷ ಶರಣ್ ಪಾಲಿಗೆ ತ್ರಿಶಂಕು ಸ್ವರ್ಗ!

    ಬೆಂಗಳೂರು: ಶರಣ್ ಒಂದಾದ ಮೇಲೊಂದರಂತೆ ಸಿನಿಮಾಗಳನ್ನು ಒಪ್ಪಿಕೊಂಡು ಮುಂದುವರೆಯುತ್ತಿದ್ದಾರೆ. ಇದೀಗ ಮೊದಲ ಸಲ ಅವರು ಯುವ ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದಲ್ಲೊಂದು ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ಇದು ಮಹಾಭಾರತದಲ್ಲಿ ಬರೋ ತ್ರಿಶಂಕು ಸ್ವರ್ಗ ಅಧ್ಯಾಯದಿಂದ ಸ್ಫೂರ್ತಿ ಪಡೆದಿರೋ ಕಥೆಯಂತೆ!

    ಇದು ಸಿಂಪಲ್ ಸುನಿ ಮತ್ತು ಶರಣ್ ಕಾಂಬಿನೇಷನ್ನಿನ ಮೊದಲ ಚಿತ್ರ. ಸಿಂಪಲ್ ಸುನಿ ಇದುವರೆಗೂ ವಿಭಿನ್ನ ಕಥೆಗಳನ್ನು ನವೀನ ರೀತಿಯಲ್ಲಿ ಅನಾವರಣಗೊಳಿಸೋ ಮೂಲಕವೇ ಸದ್ದು ಮಾಡುತ್ತಾ ಬಂದಿರುವವರು. ಶರಣ್ ಕೂಡಾ ವಿಶಿಷ್ಟ ನಟರೇ. ಶರಣ್ ಅವರನ್ನು ಈವರೆಗಿನ ಪಾತ್ರಗಳಿಗಿಂತಲೂ ಬೇರೆ ಥರದಲ್ಲಿ ತೋರಿಸೋ ಇರಾದೆಯಿಂದಲೇ ಸುನಿ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರಂತೆ.

    ಈ ಚಿತ್ರವನ್ನು ಸುನಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿ ನಿರ್ಮಾಣ ಮಾಡಲಿದ್ದಾರೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿರೋ ಸುನಿ ಜನವರಿಯಲ್ಲಿ ಟೈಟಲ್ ಲಾಂಚ್ ಮಾಡಲಿದ್ದಾರೆ. ಮಹಾಭಾರತದ ತ್ರಿಶಂಕು ಸ್ವರ್ಗದ ಕಥಾ ಎಳೆಯನ್ನು ಇಲ್ಲಿ ಆಧುನಿಕ ಕಥಾಹಂದರದೊಂದಿಗೆ ಬೆರೆಸಿ ತೆರೆದಿಡೋ ಪ್ರಯತ್ನ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದು ಗೃಹಸ್ಥಾಶ್ರಮಕ್ಕೆ ಕಾಲಿಡ್ತಿದ್ದಾರೆ ಸಿಂಪಲ್ ಸುನಿ

    ಇಂದು ಗೃಹಸ್ಥಾಶ್ರಮಕ್ಕೆ ಕಾಲಿಡ್ತಿದ್ದಾರೆ ಸಿಂಪಲ್ ಸುನಿ

    ಬೆಂಗಳೂರು: ಸಿಂಪಲ್ಲಾಗ್ ಒಂದ್ ಲವ್‍ಸ್ಟೋರಿ ಸಿನಿಮಾದ ಮೂಲಕ ಭಾರೀ ಹೆಸರು ಮಾಡಿರೋ ನಿರ್ದೇಶಕ ಸಿಂಪಲ್ ಸುನಿ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಸೌಂದರ್ಯ ಜೊತೆ ಸಪ್ತಪದಿ ತುಳಿಯಲಿದ್ದಾರೆ

    ತಮ್ಮ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿ ಮುಂದೆ ಹೆಸರುವಾಸಿ ನಿರ್ದೇಶಕರಾದ ಸಿಂಪಲ್ ಸುನಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಸೌಂದರ್ಯ ಗೌಡರನ್ನ ಕೈಹಿಡಿಯಲಿದ್ದಾರೆ. ಟ್ವಿಟರ್ ಮೂಲಕ ನಿರ್ದೇಶಕ ಸುನಿಗೆ ಪರಿಚಯವಾದ ಸೌಂದರ್ಯ ಮೂಲತಃ ಶೃಂಗೇರಿಯವರು.

    ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ 10.30ರ ಶುಭ ಮುಹೂರ್ತದಲ್ಲಿ ಸುನಿ-ಸೌಂದರ್ಯ ಮದುವೆ ನಡೆಯಲಿದೆ. ನಂತರ ಫೆಬ್ರವರಿ 19ಕ್ಕೆ ಬೆಂಗಳೂರಿನಲ್ಲಿ ಅದ್ಧೂರಿ ಆರತಕ್ಷತೆ ಸಮಾರಂಭ ನಡೆಯಲಿದೆ. ಮದುವೆ ಮುಹೂರ್ತಕ್ಕೆ ಕೇವಲ ಕುಟುಂಬಸ್ಥರನ್ನ ಮಾತ್ರ ಆಹ್ವಾನಿಸಿದ್ದು ಆರತಕ್ಷತೆಗೆ ಚಿತ್ರರಂಗದ ಅನೇಕ ಗಣ್ಯರಿಗೆ ಸುನಿ ಆಹ್ವಾನಿಸಿದ್ದಾರೆ.

    ನಿರ್ದೇಶಕ ಸುನಿ ಈ ಹಿಂದೆ ಸಿಂಪಲ್ಲಾಗ್ ಒಂದ್ ಲವ್‍ಸ್ಟೋರಿ, ಬಹುಪರಾಕ್, ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ, ಸಿನಿಮಾ ನಿರ್ದೇಶನ ಮಾಡಿದ್ದಾರೆ. ಶೀಘ್ರದಲ್ಲೇ ಇವರ ಆಪರೇಷನ್ ಅಲಮೇಲಮ್ಮ ಬಿಡುಗಡೆಗೆ ಸಿದ್ಧವಾಗಿದ್ರೆ ಗಣೇಶ್ ಅಭಿನಯಿಸುತ್ತಿರುವ ಚಮಕ್ ಸಿನಿಮಾ ಸೆಟ್ಟೇರೋಕೆ ರೆಡಿಯಾಗಿದೆ.