Tag: simple suni

  • ಸುನಿ-ಶಿವಣ್ಣ ಕಾಂಬಿನೇಷನ್‌ನ `ಮನಮೋಹಕ’ ಸಿನಿಮಾ ನಿಲ್ಲೋಕೆ ಕಾರಣವೇನು?

    ಸುನಿ-ಶಿವಣ್ಣ ಕಾಂಬಿನೇಷನ್‌ನ `ಮನಮೋಹಕ’ ಸಿನಿಮಾ ನಿಲ್ಲೋಕೆ ಕಾರಣವೇನು?

    ಟ ಶಿವರಾಜ್‌ಕುಮಾರ್ (Shivarajkumar) ಹಾಗೂ ಸಿಂಪಲ್ ಸುನಿ (Simple Suni) ನಿರ್ದೇಶನದ `ಮನಮೋಹಕ’ ಸಿನಿಮಾ (Manamohaka Cinema) ಸುಮಾರು 10 ವರ್ಷಗಳ ಹಿಂದೆ ಸೆಟ್ಟೇರಬೇಕಿತ್ತು. ಆ ಸಿನಿಮಾಗಾಗಿ ಫೋಟೋ ಶೂಟ್ ಕೂಡಾ ಮಾಡಲಾಗಿತ್ತು. ನವಿರಾದ ಪ್ರೇಮಕಥೆಯುಳ್ಳ ಮನಮೋಹಕ ಸಿನಿಮಾದ ಕಥೆ ಕೇಳಿ ಶಿವಣ್ಣ ತುಂಬಾನೇ ಖುಷಿಯಿಂದ ಒಪ್ಪಿಕೊಂಡಿದ್ದರು. ಆದ್ರೆ ಆ ಸಿನಿಮಾ ಕಾರಣಾಂತರಗಳಿಂದ ನಿಂತು ಹೋಯ್ತು.

    ಮನಮೋಹಕ ಸಿನಿಮಾದ ವಿಶೇಷ ಪಾತ್ರದಲ್ಲಿ ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ಅವರನ್ನ ಕರೆತರಲು ಕೂಡಾ ಪ್ಲ್ಯಾನ್ ಮಾಡಲಾಗಿತ್ತಂತೆ. ಸುಮಾರು 10 ವರ್ಷಗಳಾದರೂ ಆ ಸಿನಿಮಾದ ಇಂಚಿಂಚೂ ಘಟನೆಗಳನ್ನ, ನೆನಪುಗಳನ್ನ ಇತ್ತೀಚೆಗೆ ನಿರ್ದೇಶಕ ಸಿಂಪಲ್ ಸುನಿ ಶಿವರಾಜ್‌ಕುಮಾರ್ ಮುಂದೆ ಹಂಚಿಕೊಂಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ `ಗತವೈಭವ’ ಸಿನಿಮಾದ ಹಾಡೊಂದರ ರಿಲೀಸ್ ಇವೆಂಟ್‌ನಲ್ಲಿ ಈ ಬಗ್ಗೆ ನಿರ್ದೇಶಕ ಸುನಿ ಮಾತ್ನಾಡಿದ್ದಾರೆ.

    ಮನಮೋಹಕ ಸಿನಿಮಾದ ಬಗ್ಗೆ ನಿರ್ದೇಶಕ ಸುನಿ ಮಾತಾಡೋಕು ಕಾರಣ ಇದೆ. ಸುನಿ ನಿರ್ದೇಶನದ `ಗತವೈಭವ’ ಚಿತ್ರದ ಹಾಡು ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಶಿವಣ್ಣನ ಮುಂದೆ ಹಳೆ ನೆನಪು ಬಿಚ್ಚಿಟ್ಟಿದ್ದಾರೆ. ಬಳಿಕ ಮಾತಾಡಿದ ಶಿವಣ್ಣ `ಮನಮೋಹಕ’ ಸಿನಿಮಾ ಖಂಡಿತಾ ಆಗುತ್ತೆ. ಟೈಂ ಕೂಡಿ ಬರಬೇಕು. ಸುನಿ ಜೊತೆ ಸಿನಿಮಾ ಮಾಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಿಂಪಲ್ ಸುನಿಗೆ ಶಿವಣ್ಣ ಅವಕಾಶ ಮಾಡಿಕೊಟ್ಟರೆ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರೋ ನಿರೀಕ್ಷೆಗಳು ಹೆಚ್ಚಾಗಿವೆ.

  • ನಾವೇ ಒಂದು ಬ್ರ್ಯಾಂಡ್‌, ನಾವ್ಯಾಕೆ ಬ್ರ್ಯಾಂಡ್‌ ಹಿಂದೆ ಹೋಗ್ಬೇಕು – ಶಿವಣ್ಣ ಖಡಕ್ ನುಡಿ

    ನಾವೇ ಒಂದು ಬ್ರ್ಯಾಂಡ್‌, ನಾವ್ಯಾಕೆ ಬ್ರ್ಯಾಂಡ್‌ ಹಿಂದೆ ಹೋಗ್ಬೇಕು – ಶಿವಣ್ಣ ಖಡಕ್ ನುಡಿ

    ನಾವು ಯಾವಾಗಲೂ ಬ್ರ್ಯಾಂಡ್‌ ಹಿಂದೆ ಹೋಗಬಾರದು. ನಾವೇ ಒಂದು ಬ್ರ್ಯಾಂಡ್‌ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಖಡಕ್ ಆಗಿ ನುಡಿದಿದ್ದಾರೆ.

    ಶಿವರಾಜ್‌ಕುಮಾರ್ ಇತ್ತೀಚೆಗೆ `ಗತವೈಭವ’ (Gatha Vaibhava) ಸಿನಿಮಾದ ಹಾಡು ರಿಲೀಸ್ ಇವೆಂಟ್‌ಗೆ ಆಗಮಿಸಿದ್ದರು. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಸಿಂಪಲ್ ಸುನಿ ಹಾಗೂ ಅವರ ಕಾಂಬಿನೇಷನ್‌ನ ಸಿನಿಮಾ ನಿಲ್ಲಲು ಕಾರಣವೇನು ಎಂದು ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ನಾವು ಯಾವಾಗಲೂ ಬ್ರ್ಯಾಂಡ್‌ ಹಿಂದೆ ಹೋಗ್ಬಾರ್ದು, ನಾವೇ ಒಂದು ಬ್ರ್ಯಾಂಡ್‌ ಎಂದಿದ್ದಾರೆ. ಇದನ್ನೂ ಓದಿ: ಉರಿಯುತ್ತಿದ್ದ ಬಸ್‌ನೊಳಗೆ ಪ್ರಯಾಣಿಕರು ಅದೆಷ್ಟು ನೋವು ಅನುಭವಿಸಿರಬೇಕು: ಕರ್ನೂಲ್‌ ದುರಂತಕ್ಕೆ ರಶ್ಮಿಕಾ ಕಂಬನಿ

    ನನಗೆ ಬಂದಿರೋ ಭಾಗ್ಯ ಅಂದ್ರೆ ಹೊಸ ಹೊಸ ಡೈರೆಕ್ಟರ್ ಬರ್ತಾರೆ. ಹೊಸ ಹೊಸ ಕಥೆಗಳನ್ನ ಹೇಳ್ತಾರೆ. ಹೊಸಬರು ಬಂದು ಸಿನಿಮಾ ಮಾಡ್ಬೇಕು ಅಂತಾರೆ ಅದೇನು ಆಗುತ್ತೋ, ಬಿಡುತ್ತೋ ಗೊತ್ತಿಲ್ಲ. ಹೊಸಬರ ಮೇಲೆ ನಂಬಿಕೆ ಇಡ್ಬೇಕು. ನಾವು ಬ್ರ್ಯಾಂಡ್‌ ಹಿಂದೆ ಹೋಗೋದು ಬಿಡ್ಬೇಕು. ನಾವೇ ಒಂದು ಬ್ರ್ಯಾಂಡ್‌. ನಾವ್ಯಾಕೆ ಬ್ರ್ಯಾಂಡ್‌ ಹಿಂದೆ ಹೋಗ್ಬೇಕು? ಬ್ರ್ಯಾಂಡ್‌ ಅದಾಗೇ ಆಗುತ್ತೆ. ನಂಬಿಕೆ ಇಡಬೇಕು ಎಂದಿದ್ದಾರೆ ಶಿವಣ್ಣ.

    ಸಿಂಪಲ್ ಸುನಿ (Simple Suni) ನಿರ್ದೇಶನದ `ಗತವೈಭವ’ ಸಿನಿಮಾದ ಸಾಂಗ್ ಲಾಂಚ್ ಇವೆಂಟ್‌ಗೆ ಅತಿಥಿಯಾಗಿ ಶಿವಣ್ಣ ಬಂದಿದ್ದರು. ಸಿಂಪಲ್ ಸುನಿ ಹಾಗೂ ಶಿವರಾಜ್‌ಕುಮಾರ್ ಕಾಂಬಿನೇಷನ್‌ನ ಮನಮೋಹಕ ಸಿನಿಮಾ ಸೆಟ್ಟೇರದಿರಲು ಕಾರಣವನ್ನ ಬಿಚ್ಚಿಟ್ಟಿದ್ದಾರೆ.

  • ದುಶ್ಯಂತ್-ಆಶಿಕಾ ನಟನೆಯ `ಗತವೈಭವ’ದ ಫಸ್ಟ್‌ ಸಾಂಗ್‌ ರಿಲೀಸ್

    ದುಶ್ಯಂತ್-ಆಶಿಕಾ ನಟನೆಯ `ಗತವೈಭವ’ದ ಫಸ್ಟ್‌ ಸಾಂಗ್‌ ರಿಲೀಸ್

    ನಿರ್ದೇಶಕ ಸಿಂಪಲ್ ಸುನಿ ಬೆಳ್ಳಿತೆರೆಯಲ್ಲಿ ‘ಗತವೈಭವ’ (Gathavaibhava Movie) ಸೃಷ್ಟಿಸಲು ಸಜ್ಜಾಗಿದ್ದಾರೆ. ಹೊಸ ಪ್ರತಿಭೆ ದುಶ್ಯಂತ್ ನಾಯಕನಾಗಿ, ಚುಟುಚುಟು ಬ್ಯೂಟಿ ಆಶಿಕಾ ರಂಗನಾಥ್ (Ashika Ranganath) ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದ ಮೊದಲ ಗೀತೆ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ಟೀಸರ್ ಮೂಲಕ ಗಮನಸೆಳೆದಿರುವ ಗತವೈಭವ ಸಿನಿಮಾದ ಮೊದಲ ಹಾಡನ್ನು ಅನಾವರಣ ಮಾಡಲಾಗಿದೆ.

    ಪತ್ರಗಳ ಮೂಲಕ ಪ್ರೀತಿ ವಿನಿಮಯ ಮಾಡುವ ನವ ಪ್ರೇಮಿಗಳ ನಡುವಿನ ವರ್ಣಮಾಲೆ ಹಾಡಿಗೆ ಸಿಂಪಲ್ ಸುನಿ (Simple Suni) ಕ್ಯಾಚಿ ಮ್ಯಾಚಿ ಪದ‌ ಪೋಣಿಸಿದ್ದಾರೆ. ಅಭಿನಂದನ್ ಮಹಿಶಾಲೆ, ಸುನಿಧಿ ಗಣೇಶ್ ಕಂಠ ಕುಣಿಸಿದ್ದು, ಜೂಡಾ ಸ್ಯಾಂಡಿ‌ ಸಂಗೀತದ ಇಂಪು ವರ್ಣಮಾಲೆ ಗೀತೆಯ ಶ್ರೀಮಂತಿಕೆ ಹೆಚ್ಚಿಸಿದೆ. ದುಶ್ಯಂತ್-ಆಶಿಕಾ ಹಳ್ಳಿ ಗೆಟಪ್ ನಲ್ಲಿ ಮಿಂಚಿದ್ದಾರೆ.

    ‘ಗತವೈಭವ’ ಫ್ಯಾಂಟಸಿ ಹಾಗೂ ಪುರಾಣದ ಕಥೆ ಜೊತೆಗೆ ರೋಮ್ಯಾಂಟಿಕ್ ಲವ್ ಸ್ಟೋರಿ ಮಿಕ್ಸ್ ಮಾಡಿ ಸಿನಿಮಾ ಮಾಡಲಾಗಿದೆ. ಹೀಗಾಗಿ ಇದು ಸಿಂಪಲ್ ಸುನಿ ಕರಿಯರ್‌ನ ವಿಭಿನ್ನ ಸಿನಿಮಾ. ಕಥೆ-ಚಿತ್ರಕಥೆ, ಸಂಭಾಷಣೆ ಜೊತೆಗೆ ಹಾಡಿಗೆ ಸಾಹಿತ್ಯ ಕೂಡ ಬರೆದಿದ್ದಾರೆ. ಸರ್ವ್‌ಗರಾ ಸಿಲ್ವರ್ ಸ್ಕ್ರೀನ್ಸ್ ಹಾಗೂ ಸುನಿ ಸಿನಿಮಾಸ್ ಸಂಸ್ಥೆಯಲ್ಲಿ ದೀಪಿಕ್ ತಿಮ್ಮಯ್ಯ ಹಾಗೂ ಸುನಿ ಇಬ್ಬರೂ ಸೇರಿ ನಿರ್ಮಾಣ ಮಾಡ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.

  • ತಪ್ಪಿದ ಭಾರಿ ಅನಾಹುತ: ಆಯತಪ್ಪಿ ಬಿದ್ದ ನಟಿ

    ತಪ್ಪಿದ ಭಾರಿ ಅನಾಹುತ: ಆಯತಪ್ಪಿ ಬಿದ್ದ ನಟಿ

    ಸಿಂಪಲ್ ಸುನಿ (Simple Suni) ನಿರ್ದೇಶನದ ಹೊಸ ಸಿನಿಮಾದ ಶೂಟಿಂಗ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ಹಾಡಿನ ಚಿತ್ರೀಕರಣವನ್ನು ನಡೆಸುತ್ತಿದ್ದಾರೆ ನಿರ್ದೇಶಕರು ಈ ಸಮಯದಲ್ಲಿ ಅವಘಡವೊಂದು ಸಂಭವಿಸಿದೆ. ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಾಯಕಿ ಸಾತ್ವಿಕಾ (Sathvika) ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೆಲವು ಕ್ಷಣ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

    ಸಿಂಪಲ್ ಸುನಿ ನಿರ್ದೇಶನದ ಹೊಸ ಸಿನಿಮಾ ಶೂಟಿಂಗ್ ವೇಳೆ ಈ ದುರಂತ ನಡೆದಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಹೊಸ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಸಾಂಗ್ ಶೂಟಿಂಗ್ ವೇಳೆ ಹಗ್ಗದ ಮೇಲೆ ನೇತಾಡುತ್ತಿದ್ದ ನಟಿ ಸಾತ್ವಿಕಾ ಮೇಲಿಂದ ಆಯಾ ತಪ್ಪಿ ಬಿದ್ದಿದ್ದಾರೆ. ಕೆಳಗೆ ಬೆಡ್ ಹಾಕಿದ್ದರಿಂದ ಬಚಾವ್ ಆಗಿದ್ದಾರೆ. ಇದನ್ನೂ ಓದಿ: ಉದಯಪುರ ಫೈಲ್ಸ್ ಭಾರೀ ವಿವಾದ: 150 ಕಡೆ ಕತ್ತರಿ

    ನಟಿ ಸಾತ್ವಿಕ ನಿರ್ದೇಶಕ ಓಂ ಪ್ರಕಾಶ್ ರಾವ್ ಪುತ್ರಿ. ಶ್ರಾವ್ಯ ಅಂತಿದ್ದ ಹೆಸರನ್ನು ಅವರು ಸಾತ್ವಿಕಾ ಅಂತ ಬದಲಾಯಿಸಿಕೊಂಡಿದ್ದಾರೆ. ಅವರೇ ರೋಪ್ ಕಟ್ಟಿ ಶೂಟಿಂಗ್ ಮಾಡುವ ವೇಳೆ ನಡೆದಿರುವ ಘಟನೆಯಲ್ಲಿ ಆಯಾ ತಪ್ಪಿ ಬಿದ್ದವರು. ಅದೃಷ್ಟವಶಾತ್ ಏನು ಪೆಟ್ಟಾಗದೆ ಬಚಾವ್ ಆಗಿದ್ದಾರೆ ಸಾತ್ವಿಕಾ.

  • ಶೂಟಿಂಗ್‌ ಮುಗಿಸಿದ ದುಷ್ಯಂತ್‌, ಆಶಿಕಾ ನಟನೆಯ ‘ಗತವೈಭವ’ ಸಿನಿಮಾ

    ಶೂಟಿಂಗ್‌ ಮುಗಿಸಿದ ದುಷ್ಯಂತ್‌, ಆಶಿಕಾ ನಟನೆಯ ‘ಗತವೈಭವ’ ಸಿನಿಮಾ

    ಸ್ಯಾಂಡಲ್‌ವುಡ್ ಬೆಳ್ಳಿಪರದೆಯಲ್ಲಿ ʻಗತವೈಭವʼ (Gathavaibhava) ಕಥೆಯನ್ನು ಹರವಿಡೋದಿಕ್ಕೆ ಟ್ಯಾಲೆಂಡ್ ಡೈರೆಕ್ಟರ್ ಸಿಂಪಲ್ ಸುನಿ ರೆಡಿಯಾಗಿದ್ದಾರೆ. ಸುನಿ ಭತ್ತಳಿಕೆಯಿಂದ ಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಗತವೈಭವ’ ಚಿತ್ರೀಕರಣ ಮುಕ್ತಾಯಗೊಂಡಿದೆ. ಪೋರ್ಚುಗಲ್‌ನಲ್ಲಿ ಹಾಗೂ ಮುಂತಾದೆಡೆ ಯಶಸ್ವಿಯಾಗಿ 100 ಕಾಲ್‌ಶೀಟ್‌ಗಳಲ್ಲಿ ಶೂಟಿಂಗ್ ಮುಗಿಸಲಾಗಿದೆ. ದುಷ್ಯಂತ್ ಹಾಗೂ ಆಶಿಕಾ ರಂಗನಾಥ್ ಚಿತ್ರೀಕರಣ ಅನುಭವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದೇ ವರ್ಷದ ಮೊದಲಾರ್ಧದಲ್ಲಿ ‘ಗತವೈಭವ’ ಸಿನಿಮಾವನ್ನು ತೆರೆಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಿಂಪಲ್ ಸುನಿ ಎಲ್ಲಾ ಪ್ರಕಾರದ ಸಿನಿಮಾಗೂ ಕೈ ಹಾಕಿದ್ದಾರೆ. ಕಾಮಿಡಿ, ಸಿರೀಯಸ್, ಫ್ಯಾಂಟಸಿ, ಹಾರರ್ ಹೀಗೆ ಭಿನ್ನ-ವಿಭಿನ್ನ ಕಥೆಯನ್ನು ಹೊತ್ತುತಂದಿದ್ದಾರೆ. ಲವ್‌ಸ್ಟೋರಿಯನ್ನು ಸೈಂಟಿಫಿಕ್ ಥ್ರಿಲ್ಲರ್ ಮಾದರಿಯ ಗತವೈಭವ ಚಿತ್ರದ ಮೂಲಕ ಯುವ ಪ್ರತಿಭೆ ದುಷ್ಯಂತ್ ನಾಯಕನಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ಸಿಂಪಲ್ ಸುನಿ ಈ ಸಿನಿಮಾಗೆ ಕೇವಲ ನಿರ್ದೇಶಕ ಅಷ್ಟೇ ಅಲ್ಲ. ಅವರು ನಿರ್ಮಾಪಕ ಕೂಡ ಹೌದು.’ಗತವೈಭವ’ ಸಿನಿಮಾಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಿಕ್ ರವರ ಮಾತಾ ಮೂವಿ ಮೇಕರ್ಸ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಈ ಚಿತ್ರಕ್ಕಿದೆ.

    ಶೂಟಿಂಗ್ ಎಲ್ಲೆಲ್ಲಿ ನಡೆದಿದೆ?
    ಗತವೈಭವ ಚಿತ್ರದ ಸಂಪೂರ್ಣ ಚಿತ್ರೀಕರಣ ಪೂರ್ಣಗೊಂಡಿದೆ. ಕೂರ್ಗ್, ಮಂಗಳೂರು, ಪೋರ್ಚುಗಲ್‌ನಲ್ಲಿ ಸಿನಿಮಾದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಬರೋಬ್ಬರಿ 100 ಕಾಲ್‌ಶೀಟ್‌ಗಳಲ್ಲಿ ಶೂಟಿಂಗ್ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಈ ವರ್ಷಾಂತ್ಯಕ್ಕೆ ‘ಗತವೈಭವ’ ಸಿನಿಮಾವನ್ನು ಚಿತ್ರತಂಡ ತೆರೆಗೆ ತರುವ ಆಲೋಚನೆ ಹಾಕಿಕೊಂಡಿದೆ.

  • ಕುವೆಂಪು ಕೃತಿಯಿಂದ ಪ್ರೇರಣೆ- ಯುವ ನಟನಿಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್

    ಕುವೆಂಪು ಕೃತಿಯಿಂದ ಪ್ರೇರಣೆ- ಯುವ ನಟನಿಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್

    ಸ್ಯಾಂಡಲ್‌ವುಡ್ ಖ್ಯಾತ ನಿರ್ದೇಶಕ ಸಿಂಪಲ್ ಸುನಿ (Simple Suni) ‘ಅವತಾರ ಪುರುಷ 2’ (Avatara Purusha 2) ಸಿನಿಮಾದ ನಂತರ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ‘ದೇವರು ರುಜು ಮಾಡಿದನು’ ಎಂಬುದು ಕುವೆಂಪು (Kuvempu) ಅವರ ಕವಿತೆ ಸಾಲು. ಈ ಸಾಲನ್ನೇ ಚಿತ್ರದ ಟೈಟಲ್ ಮಾಡಿಕೊಂಡು ಹೊಸ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ:ಕಿರುತೆರೆಗೆ ಖ್ಯಾತ ಹಾಸ್ಯನಟ ನರಸಿಂಹರಾಜು ಮೊಮ್ಮಗ ಎಂಟ್ರಿ

    ಇದೊಂದು ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು, ಚಿತ್ರದ ನಾಯಕಿ ಕುವೆಂಪು ಅಭಿಮಾನಿಯಾಗಿರುತ್ತಾಳೆ. ‘ದೇವರು ರುಜು ಮಾಡಿದನು’ ಎಂಬ ಕುವೆಂಪು ಕವಿತೆಯ ಒಳಾರ್ಥ ಕಾಡುವಂತಿದೆ. ಜೀವನದಲ್ಲಿ ನಾವೆಂದುಕೊಂಡಂತೆ ನಡೆಯಲ್ಲ. ನಮಗೆ ದೇವರು ಮೊದಲೇ ಸ್ಕ್ರೀಪ್ಟ್ ಮಾಡಿರುತ್ತಾನೆ. ಅದರಲ್ಲಿ ನಾವು ನಟಿಸುತ್ತಿರುತ್ತೇವೆ. ನಾವೇನು ಬದಲಾವಣೆ ಮಾಡಲು ಹೊರಟರೂ ದೇವರ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ ಎಂಬುದೇ ಈ ಸಿನಿಮಾದ ಒನ್‌ಲೈನ್ ಕಥೆಯಾಗಿದೆ.

    ಕುವೆಂಪು ಅವರ ಜನಪ್ರಿಯ ಕವಿತೆ ‘ದೇವರು ಋಜು ಮಾಡಿದನು’ ಇಂದ ಸ್ಪೂರ್ತಿ ಪಡೆದು ಹೊಸ ಕತೆ ಬರೆದು ಸಿನಿಮಾ ಮಾಡುತ್ತಿರುವ ಸಿಂಪಲ್ ಸುನಿ, ತಮ್ಮ ಸಿನಿಮಾಗೆ ಅದೇ ಹೆಸರನ್ನು ಇರಿಸಿದ್ದಾರೆ. ‘ದೇವರು ರುಜು ಮಾಡಿದರು’ ಎಂದು ಸಿನಿಮಾಗೆ ಹೆಸರಿಟ್ಟಿದ್ದಾರೆ. ವಿರಾಜ್ (Viraj) ಹೆಸರಿನ ಹೊಸ ಪ್ರತಿಭೆಯನ್ನು ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಶೀಘ್ರವೇ ಪ್ರಾರಂಭ ಆಗಲಿದೆ.

  • IPL Playoffs: ಪಂದ್ಯದ ಪ್ರತಿ ಕ್ಷಣವನ್ನೂ ಆನಂದಿಸಿದ್ದೇನೆ – ಆರ್‌ಸಿಬಿ ಗೆಲುವನ್ನು ಕೊಂಡಾಡಿದ ಸಿಎಂ!

    IPL Playoffs: ಪಂದ್ಯದ ಪ್ರತಿ ಕ್ಷಣವನ್ನೂ ಆನಂದಿಸಿದ್ದೇನೆ – ಆರ್‌ಸಿಬಿ ಗೆಲುವನ್ನು ಕೊಂಡಾಡಿದ ಸಿಎಂ!

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಸ್‌ಕೆ (CSK) ವಿರುದ್ಧ ನಡೆದ ನಾಕೌಟ್‌ ಕದನದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಆರ್‌ಸಿಬಿ (RCB) ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮನಸಾರೆ ಹೊಗಳಿದ್ದಾರೆ. ಬ್ಯುಸಿ ರಾಜಕೀಯ ಒತ್ತಡದ ನಡುವೆಯೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಚಿವರೊಂದಿಗೆ ಕುಳಿತು ಪೂರ್ಣ ಪಂದ್ಯ ವೀಕ್ಷಣೆ ಮಾಡಿದ್ದಾರೆ.

    ಈ ಕುರಿತು ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ, ಸತತ 6ನೇ ಗೆಲುವಿನೊಂದಿಗೆ ನಮ್ಮ ಆರ್‌ಸಿಬಿ ಪ್ಲೇಆಫ್ ಸುತ್ತಿಗೆ ಲಗ್ಗೆಯಿಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯದ ಪ್ರತಿ ಕ್ಷಣವನ್ನು ಆನಂದಿಸಿದೆ. ನಮ್ಮ ಆರ್‌ಸಿಬಿ (Namma RCB) ತಂಡದ ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿಯಾದುದ್ದು ಖುಷಿಕೊಟ್ಟಿದೆ. ಇದು ಆರ್.ಸಿ.ಬಿ ಯ ಹೊಸ ಅಧ್ಯಾಯ ಎಂದು ಬರೆದುಕೊಂಡಿದ್ದಾರೆ.

    ಹೌದು. ʻಇದು ಹೊಸ ಅಧ್ಯಾಯʼ ಎಂದು ಹೇಳಿಕೊಂಡು ಸೋಲಿನೊಂದಿಗೆ ಲೀಗ್‌ ಆರಂಭಿಸಿದ್ದ ಆರ್‌ಸಿಬಿ ನಿಜಕ್ಕೂ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಮೊದಲ 8 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಲೀಗ್‌ ಸುತ್ತಿನಲ್ಲೇ ಹೊರ ಬೀಳುವ ಸಾಧ್ಯತೆಯಿತ್ತು. ಅಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ ಗೆದ್ದು ಪ್ಲೇ ಆಫ್​ಗೆ ಅಧಿಕೃತ ಎಂಟ್ರಿ ಕೊಟ್ಟಿದೆ.

    ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳಬೇಕಿತ್ತು. ಸದ್ಯ ಆರ್‌ಸಿಬಿ ತಂಡದ ಅದ್ಭುತ ಜಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಕ್ಸ್‌, ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳು ಆರ್‌ಸಿಬಿ ಪಂದ್ಯದ ಒಂದೊಂದೇ ದೃಶ್ಯಗಳನ್ನು ಹಂಚಿಕೊಳ್ಳುತ್ತಾ ಕೊಂಡಾಡುತ್ತಿದ್ದಾರೆ.

    ಬೆಂಗಳೂರಿನಲ್ಲಂತೂ ಬೀದಿ ಬೀದಿಗಳಲ್ಲಿ ಪಟಾಕಿ ಸಿಡಿಸಿ, ತಡರಾತ್ರಿ ವರೆಗೂ ಕುಣಿದು ಕುಪ್ಪಳಿಸಿದ್ದಾರೆ. ಆರ್‌ಸಿಬಿ ಕಪ್‌ ಗೆಲ್ಲದಿದ್ದರೂ ಪರವಾಗಿಲ್ಲ, ಚೆನ್ನೈ ವಿರುದ್ಧ ಗೆದ್ದಿದ್ದೇ ನಮಗೆ ಖುಷಿ ಕೊಟ್ಟಿದೆ ಎಂದು ಕೂಗಿ ಹೇಳಿದ್ದಾರೆ.

    ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ 218 ರನ್‌ ಸಿಡಿಸಿ, ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಗುರಿ ನೀಡಿತ್ತು. ಆದ್ರೆ ಸಿಎಸ್‌ಕೆ ಪ್ಲೇ ಆಫ್‌ ತಲುಪಲು 201 ರನ್‌ಗಳ ಅಗತ್ಯವಿತ್ತು. ಕೊನೆಯವರೆಗೂ ಹೋರಾಡಿದ ಸಿಎಸ್‌ಕೆ 27 ರನ್‌ ಗಳ ಅಂತರದಿಂದ ಸೋತು ಪ್ಲೇ ಆಫ್‌ ಪ್ರವೇಶಿಸುವ ಅರ್ಹತೆಯನ್ನೇ ಕಳೆದುಕೊಂಡಿತು.

  • ಆರ್‌ಸಿಬಿಯ ಹೊಸ ಅಧ್ಯಾಯ – ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು ಬಾಯ್ಸ್‌ಗೆ ಹೊಗಳಿಕೆಯ ಮಹಾಪೂರ!

    ಆರ್‌ಸಿಬಿಯ ಹೊಸ ಅಧ್ಯಾಯ – ಪ್ಲೇ ಆಫ್‌ ಪ್ರವೇಶಿಸಿದ ಬೆಂಗಳೂರು ಬಾಯ್ಸ್‌ಗೆ ಹೊಗಳಿಕೆಯ ಮಹಾಪೂರ!

    ಬೆಂಗಳೂರು: ಈ ಬಾರಿ ಹೊಸ ಅಧ್ಯಾಯ ಎಂದು ಹೇಳಿಕೊಂಡು ಸೋಲಿನೊಂದಿಗೆ ಲೀಗ್‌ ಆರಂಭಿಸಿದ್ದ ಆರ್‌ಸಿಬಿ (RCB) ನಿಜಕ್ಕೂ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಮೊದಲ 8 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಲೀಗ್‌ ಸುತ್ತಿನಲ್ಲೇ ಹೊರ ಬೀಳುವ ಸಾಧ್ಯತೆಯಿತ್ತು. ಅಷ್ಟರಲ್ಲಿ ಪುಟಿದೆದ್ದ ಆರ್​ಸಿಬಿ ಇದೀಗ ಯಾರೂ ಊಹಿಸಿದ, ಪವಾಡ ಸಂಭವಿಸಿದ ರೀತಿಯಲ್ಲಿ ಗೆದ್ದು ಪ್ಲೇ ಆಫ್​ಗೆ (IPL Playoffs) ಅಧಿಕೃತ ಎಂಟ್ರಿ ಕೊಟ್ಟಿದೆ.

    ಪ್ಲೇ ಆಫ್​ ಪ್ರವೇಶಕ್ಕೆ ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್ (CSK)​ ವಿರುದ್ಧ 27 ರನ್​ ಗಳ ಗೆಲುವು ಸಾಧಿಸಿ ಈ ಅಭೂತಪೂರ್ವ ಸಾಧನೆ ಮಾಡಿದೆ. ಒಂದೊಮ್ಮೆ ಚೆನ್ನೈ 201 ರನ್​ ಬಾರಿಸುತ್ತಿದ್ದರೂ ಆರ್​ಸಿಬಿ ಪ್ಲೇ ಆಫ್​ನಿಂದ ಹೊರ ಬೀಳಬೇಕಿತ್ತು. ಸದ್ಯ ಆರ್‌ಸಿಬಿ ತಂಡದ ಅದ್ಭುತ ಜಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಕ್ಸ್‌, ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಅಭಿಮಾನಿಗಳು ಆರ್‌ಸಿಬಿ (RCB Fans) ಪಂದ್ಯದ ಒಂದೊಂದೇ ದೃಶ್ಯಗಳನ್ನು ಹಂಚಿಕೊಳ್ಳುತ್ತಾ ಕೊಂಡಾಡುತ್ತಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗೌತಮ್‌ ಗಂಭೀರ್‌ ಹೆಸರು ಪ್ರಸ್ತಾಪ!

    ಈ ಸಂಭ್ರಮದಲ್ಲಿ ಸಿನಿ ತಾರೆಯರೂ ಭಾಗಿಯಾಗಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾಗಳಲ್ಲಿ ಆರ್‌ಸಿಬಿ ತಂಡದ ಗೆಲುವನ್ನು ಕೊಂಡಾಡಿದ್ದಾರೆ. ಹಾಗಾದ್ರೆ ಯಾರು ಏನು ಹೇಳಿದ್ದಾರೆ ಎಂಬುದನ್ನೊಮ್ಮೆ ನೋಡೋಣ… ಇದನ್ನೂ ಓದಿ: ಆರ್‌ಸಿಬಿ ‘ರಾಯಲ್‌’ ಆಗಿ ಪ್ಲೇ-ಆಫ್‌ಗೆ; ಚೆನ್ನೈ ಮನೆಗೆ

    ಕಿಚ್ಚ ಸುದೀಪ್‌ (Kichcha Sudeep):
    ಅಭಿನಂದನೆಗಳು ಆರ್‌ಸಿಬಿ ಎಂತಹ ಹೊಂದಾಣಿಕೆ, ಆದ್ರೆ ದುರಾದೃಷ್ಟ ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಚೆನ್ನಾಗಿ ಆಡಿದೆ ಎಂದು ಆರ್‌ಸಿಬಿ ಗೆಲುವನ್ನು ಹೊಗಳಿದ್ದಾರೆ.

    ನಿರ್ದೇಶಕ ಸಿಂಪಲ್‌ ಸುನಿ (Simple Suni):
    ಬರ್ತೀವಿ ಬರ್ತೀವಿ .. ಗುಜರಾತ್ ಗು ಬರ್ತೀವಿ, ಚೆನ್ನೈಗೂ ಬರ್ತೀವಿ, ಬರೀ ಹೊಡೆದಿಲ್ಲ ..ಇಷ್ಟ್ ರನ್ ಒಳಗೆ ಹೊಡಿತೀವಿ ಅಂತ ಹೇಳಿ ಹೊಡೆದಿರೋದು ಅಂತಾ ತಮ್ಮದೇ ಶೈಲಿಯಲ್ಲಿ ಶ್ಲಾಘಿಸಿದ್ದಾರೆ.

    ಪಂದ್ಯ ವೀಕ್ಷಿಸಿದ ರಿಷಭ್‌ ಶೆಟ್ಟಿ (Rishab Shetty):
    ಇನ್ನೂ ಮೊದಲಿನಿಂದಲೂ ಆರ್‌ಸಿಬಿ ಪಕ್ಕಾ ಫ್ಯಾನ್‌ ಆಗಿರುವ ಕಾಂತಾರ ನಟ ರಿಷಭ್‌ ಶೆಟ್ಟಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಸ್‌ಗೇಲ್‌ ಅವರೊಟ್ಟಿಗೆ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದಾರೆ. ಕೊನೆಯವರೆಗೂ ಕುಳಿತು ಆರ್‌ಸಿಬಿ ಗೆಲುವನ್ನು ಕಣ್ತುಂಬಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದು ಇತಿಹಾಸ, ಕ್ರೀಡಾಂಗಣದಲ್ಲಿ ನಾನು ವೀಕ್ಷಿಸಿದ ಮೊದಲ ಪಂದ್ಯ. ಮೇಲ್ಭಾಗದಲ್ಲಿ ನಿಮ್ಮನ್ನು ನೋಡೋಣ ಆರ್‌ಸಿಬಿ! ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • ನಾಲ್ಕು ಭಾಷೆಗಳಲ್ಲಿ ಡಬ್ ಆಗಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ ವಿನಯ್ ರಾಜ್ ಕುಮಾರ್ ಚಿತ್ರ

    ನಾಲ್ಕು ಭಾಷೆಗಳಲ್ಲಿ ಡಬ್ ಆಗಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ ವಿನಯ್ ರಾಜ್ ಕುಮಾರ್ ಚಿತ್ರ

    ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ (Vinay Rajkumar) ಜೋಡಿಯ ಒಂದು ಸರಳ ಪ್ರೇಮಕಥೆ (Ondu sarala prema kathe) ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಫೆಬ್ರವರಿ 8ರಂದು ತೆರೆಗೆ ಬಂದ ಚಿತ್ರ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಇದೇ ಸಂಭ್ರಮದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಚಿತ್ರತಂಡ ಖುಷಿ ಹಂಚಿಕೊಂಡಿದೆ.

    ಈ ವೇಳೆ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ಸಕ್ಸಸ್ ಒಂದ್ ಒಂದು ಟೈಮ್ ನಲ್ಲಿ ಒಂಥರ ಡಿಫೈನ್ ಆಗುತ್ತದೆ. ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಸಕ್ಸಸ್ ಮಾಡಿದಾಗ ಅದು 75 ದಿನಕ್ಕೆ ಮಾಡಿದ್ದೆ.  ಟಿವಿ ರೈಟ್ಸ್ ಜೊತೆ ಒಂದು ಪ್ರೋಗ್ರಾಂ ಕೊಡ್ತೀವಿ ಎಂದು ಕಮಿಟ್ ಆಗಿದ್ದೇವು. ಹೀಗಾಗಿ 75 ದಿನಕ್ಕೆ ಸಕ್ಸಸ್ ಸೆಲೆಬ್ರೆಟ್ ಮಾಡಿದೆವು. ಇವತ್ತಿಗೆ ಸಕ್ಸಸ್ ಅಂದರೆ ಯಾವುದರು ಟಿವಿ ಚಾನೆಲ್ ಕರೆದು ಮಾತನಾಡಿಸಿದರೆ. ಜನ ನೋಡಕ್ಕೆ ಇಷ್ಟು ಬಂದಿದ್ದಾರೆ ಅನ್ನೋದೇ ಸಕ್ಸಸ್. ರಿರ್ಟನ್ಸ್ ಆಗಿದೆ. ಖುಷಿ ಇದೆ. ಕನ್ನಡದ ಜೊತೆ ಉಳಿದ ನಾಲ್ಕು ಭಾಷೆಗೆ ಒಂದು ಸರಳ ಪ್ರೇಮ ಕಥೆ ಸಿನಿಮಾ ಕ್ಲಿಯರ್ ಕಟ್ ಆಗಿ ಡಬ್ ಆಗಿದೆ. ಆಯಾ ಭಾಷೆಯಲ್ಲಿ ಆಯಾ ಟೈಟಲ್ನಲ್ಲೇ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದರು.

    ವಿನಯ್ ರಾಜ್ ಕುಮಾರ್ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. 25 ದಿನ ನಮ್ಮ ಸಿನಿಮಾ ಕಂಪ್ಲೀಟ್ ಆಗಿದೆ. ಫ್ಯಾಮಿಲಿ ಎಂಟರ್ ಟೈನರ್. ಕ್ಲೀನ್ ಕಾಮಿಡಿ, ಇಡೀ ಫ್ಯಾಮಿಲಿ ಕುಳಿತುಕೊಂಡು ನೋಡುವ ಚಿತ್ರ. ಜನರಿಂದ ತುಂಬಾ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಜನರು ನನ್ನ , ಸಿನಿಮಾ , ನಿರ್ದೇಶಕ, ಮ್ಯೂಸಿಕ್ ಹಾಗೂ ಟೆಕ್ನಿಷಿಯನ್ಸ್ ಮೆಚ್ಚಿಕೊಂಡಿದ್ದಾರೆ. ಇಡೀ ಫ್ಯಾಮಿಲಿ ಚಿತ್ರವನ್ನು ಎಂಜಾಯ್ ಮಾಡಿರುವುದು ದೊಡ್ಡ ಸಕ್ಸಸ್ ಎಂದರು. ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮಾತನಾಡಿ, 15 ವರ್ಷದ ಕೆರಿಯರ್ ನಲ್ಲಿ ಹಿಟ್ ಸಿನಿಮಾ ನೋಡುತ್ತಿದ್ದೇನೆ. ಹಾಡುಗಳನ್ನು ತುಂಬಾ ಜನ ಮೆಚ್ಚುಕೊಂಡಿದ್ದಾರೆ‌. ಈ ಚಿತ್ರ ಮಾಡುವಾಗ ಇಷ್ಟು ದೊಡ್ಟಮಟ್ಟದ ಪ್ರತಿಕ್ರಿಯೆ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನನಗೆ ಎಲ್ಲಾ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ಭಾವುಕರಾದರು.

    ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್, ನಾಯಕ ವಿನಯ್, ನಾಯಕಿಯರಾದ ಸ್ವಾತಿಷ್ಠಾ, ಮಲ್ಲಿಕಾ ಅಮೋಘ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್ ಸಿನಿರಸಿಕರು ಸಖತ್ ಇಷ್ಟಪಟ್ಟಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ಆದಿ ಅವರ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ.

    ‘ಒಂದು ಸರಳ ಪ್ರೇಮಕಥೆ’ ವಿನಯ್ ರಾಜ್ಕುಮಾರ್ಗೆ ಬ್ರೇಕ್ ಕೊಟ್ಟಿದೆ. ಸಿಂಪಲ್ ಸುನಿ ಮತ್ತೊಂದು ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತಿಳಿ ಹಾಸ್ಯ, ಒನ್ಲೈನರ್ ಡೈಲಾಗ್ಗಳು ಪ್ರೇಕ್ಷಕರಿಗೆ ಸಖತ್ ಮಜಾ ಕೊಡುತ್ತಿವೆ. ಇಂತಹ ಸುಂದರ ಪ್ರೇಮಕಥೆಗೆ ಶಕ್ತಿಯಾಗಿ ನಿಂತ ನಿರ್ಮಾಪಕ ಮೈಸೂರು ರಮೇಶ್ ಅವರನ್ನು ಜನ ಜೈ ಎಂದಿದ್ದಾರೆ.

  • ತೆರೆಯ ಮೇಲೆ ಕಬಡ್ಡಿ ಆಟಗಾರನ ದುರಂತದ ಕಥೆ: ಪರ್ಶು ಚಿತ್ರಕ್ಕೆ ಸುನಿ ಸಾಥ್

    ತೆರೆಯ ಮೇಲೆ ಕಬಡ್ಡಿ ಆಟಗಾರನ ದುರಂತದ ಕಥೆ: ಪರ್ಶು ಚಿತ್ರಕ್ಕೆ ಸುನಿ ಸಾಥ್

    ನೈಜ ಘಟನೆ ಆಧಾರಿತ ಸಿನಿಮಾಗಳಿಗೇನು ಸ್ಯಾಂಡಲ್‌ನಲ್ಲಿ ಬರವಿಲ್ಲ.  ಬಿಲ್ಡಪ್, ಹೊಡಿ ಬಡಿ ಸಿನಿಮಾಗಳ ನಡುವೆಯೂ ನೈಜ ಘಟನೆ ಆಧಾರಿತ ಸಿನಿಮಾಗಳು ಸಹ ಅಭಿಮಾನಿಗಳ  ಗಮನ ಸೆಳೆಯುತ್ತಿವೆ. ಇದೀಗ ಹೊಸಬರ ತಂಡವೊಂದು ರಾಜ್ಯ ಮಟ್ಟದ  ಕಬಡ್ಡಿ ಆಟಗಾರನೊಬ್ಬನ ದುರಂತದ ಕಥೆಯನ್ನು ತೆರೆಮೇಲೆ ತರುವ  ಸಾಹಸಕ್ಕೆ ಕೈಹಾಕಿದ್ದಾರೆ. ಚಿತ್ರಕ್ಕೆ ‘ಪರ್ಶು’ ಎಂದು ಟೈಟಲ್ ಇಡಲಾಗಿದೆ. ಟೈಟಲ್ ರಿಲೀಸ್ ಮಾಡುವ ನೆಪದಲ್ಲಿ ‘ಪರ್ಶು’ (Parshu) ಸಿನಿಮಾತಂಡ ಮಾಧ್ಯಮ ಮುಂದೆ ಹಾಜರಾಗಿತ್ತು. ಪರ್ಶು ಸಿನಿಮಾತಂಡಕ್ಕೆ ನಿರ್ದೇಶಕ  ಸಿಂಪಲ್ ಸುನಿ (Simple Suni), ಮಾಜಿ ಪೊಲೀಸ್ ಅಧಿಕಾರಿ, ನಾಯಕಿ ಸಪ್ತಮಿ ಗೌಡ ಅವರ ತಂದೆ ಹೆಚ್ ಸಿ ಉಮೇಶ್, ಕಾಶಿನಾಥ್ ಅವರ ಪುತ್ರ ಅಭಿಮನ್ಯು ಸಾಥ್ ನೀಡಿದರು. ಟೈಟಲ್ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭಹಾರೈಸಿದರು.

    ಪರ್ಶು ಸಿನಿಮಾಗೆ ರುದ್ರ ಶ್ರೀನಿವಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ಶ್ರೀನಿವಾಸ್ ಅವರಿಗೆ ಇದು ಚೊಚ್ಚಲ ಸಿನಿಮಾ. ಹಾಗಂತ ಸಿನಿಮಾರಂಗ ಅವರಿಗೆ ಹೊಸದೇನಲ್ಲ. ಶ್ರೀನಿವಾಸ್ ಅವರು ಊರ್ವಶಿ ಚಿತ್ರಮಂದಿರದಲ್ಲಿ ಅನೇಕ  ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇದೀಗ ನಿರ್ದೇಶಕರಾಗಿ ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಪರ್ಶು ಚಿತ್ರಕ್ಕೆ ಪರಶುರಾಮ್ ಬಂಡವಾಳ ಹೂಡುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಕಬಡ್ಡಿ ಆಟಗಾರನ ಪಾತ್ರದಲ್ಲಿ ಪರಶುರಾಮ್ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಪರ್ಶು 2014 ಮತ್ತು 2015ರಲ್ಲಿ  ನಡೆದ ಘಟನೆಯಾಗಿದೆ. ಮೈಸೂರು ಭಾಗದ ರಾಜ್ಯಮಟ್ಟದ ಕಬಡ್ಡಿ ಆಟಗಾರನೊಬ್ಬನ ಕಥೆ ಇದಾಗಿದೆ. ದೊಡ್ಡ ಆಟಗಾರನಾಗಬೇಕು ಎನ್ನುವ ಕನಸುಕಂಡಿದ್ದ ವ್ಯಕ್ತಿಯ ಮೇಲೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕುಳುಹಿಸಿ ಆತನ ಜೀವನ ಮತ್ತು ಇಡೀ ಕುಟುಂಬದ ಬದುಕನ್ನೇ ಕಿತ್ತುಕೊಂಡ ಘಟನೆ ಇದಾಗಿದೆ. ಈ ಬಗ್ಗೆ ಸಂಪೂರ್ಣವಾಗಿ ಸಂಶೋದನೆ ಮಾಡಿರುವ ಸಿನಿಮಾತಂಡ ತಂಡ ತೆರೆಮೇಲೆ ತರುವ ಪ್ರಯತ್ನ ಮಾಡುತ್ತಿದೆ.

    ಸಿನಿಮಾದ ಪೋಸ್ಟರ್ ಅನಾವರಣ ಮಾಡಿ ಮಾತನಾಡಿದ ಮಾಜಿ ಪೊಲೀಸ್ ಅಧಿಕಾರಿ ಹೆಚ್ ಸಿ ಉಮೇಶ್, ‘ಈ ಸಿನಿಮಾಗೆ ನಾನು ಕೂಡ ಸಾಕಷ್ಟು ಇನ್‌ಪುಟ್ ಕೊಡುತ್ತಿದ್ದೀನಿ. ನನ್ನ ಬೆಂಬಲ ಖಂಡಿತ ಇರುತ್ತೆ’ ಎಂದು ಹೇಳಿದರು. ಇನ್ನೂ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ‘ಈ ಕಥೆ ತುಂಬಾ ಚೆನ್ನಾಗಿ ಇದೆ. ನೈಜ ಘಟನೆ ಆಧಾರಿತ ಘಟನೆ, ಪರಶು ಅವರೇ ಈ ಸಿನಿಮಾಗೆ ಸೂಕ್ತ’ಎಂದು ಹೇಳಿದರು. ನಟ ಕಾಶಿನಾಥ್ ಅವರ ಪುತ್ರ ಮಾತನಾಡಿ, ‘ಕಥೆ ಕೇಳಿದಾಗ ತುಂಬಾ ಇಷ್ಟ ಆಯ್ತು. ಜೊತೆಗೆ ಅಷ್ಟೇ ನೋವು ಕೂಡ ಆಯ್ತು. ಕರಳು ಹಿಂಡುವ ಕಥೆ’ ಎಂದರು.

    ಇನ್ನೂ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಬಡವರ ಮೇಲಿನ ದೌರ್ಜನ್ಯದ  ಬಗ್ಗೆ ಇರುವ ಸಿನಿಮಾವಾಗಿದೆ. ಈ ಕಥೆ ಮಾಡುವಾಗ ಆ ಕುಟುಂಬದ ಜೊತೆ ಒಂದಿಷ್ಟು ದಿನ ಇದ್ದೆ’ ಎಂದರು. ಇನ್ನೂ ನಾಯಕ ಮತ್ತು ನಿರ್ಮಾಪಕ  ಪರಶುರಾಮ್ ಮಾತನಾಡಿ, ‘ಅನೇಕ ವರ್ಷಗಳಿಂದ ಈ ಸಿನಿಮಾದ ಕಥೆಗಾಗಿ ಕೆಲಸ ಮಾಡಿದ್ದೀನಿ. ಯಾವುದೇ ತಪ್ಪು ಮಾಡದ ಉತ್ತಮ ಆಟಗಾರನ ದುರಂತ ಬದುಕಿನ ಘಟನೆ ಇದು. ಸಿನಿಮಾಗೆ ಸಹಾಯ ಮಾಡಿ’ ಎಂದು ಕೇಳಿದರು.

    ಅನೇಕ ವರ್ಷಗಳಿಂದ ಈ ಸಿನಿಮಾಗಾಗಿ ತಯಾರಿ ನಡೆಯುತ್ತಿದ್ದು ಇದೀಗ ಅಧಿಕೃತವಾಗಿ ಟೈಟಲ್ ಪೋಸ್ಟರ್ ಲಾಂಚ್ ಮಾಡುವ ಶೂಟಿಂಗ್‌ಗೆ ಸಿದ್ಧವಾಗಿದೆ ಸಿನಿಮಾತಂಡ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಹೇಳಿದೆ.