Tag: Simple Sun

  • ಸಿಂಪಲ್ ಸುನಿಗೆ ನೀತಾ ಅಂಬಾನಿ ಸೀಕ್ರೆಟ್ ತಿಳಿಯಬೇಕಂತೆ

    ಸಿಂಪಲ್ ಸುನಿಗೆ ನೀತಾ ಅಂಬಾನಿ ಸೀಕ್ರೆಟ್ ತಿಳಿಯಬೇಕಂತೆ

    ಬೆಂಗಳೂರು: ಐಪಿಎಲ್ 12ನೇ ಆವೃತ್ತಿಗೆ ಭಾನುವಾರ ತೆರೆಬಿದ್ದಿದೆ. ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟು ಸಂಭ್ರಮದಲ್ಲಿ ಮುಳುಗಿದೆ. ಮುಂಬೈ ಇಂಡಿಯನ್ಸ್ ಗೆಲುವಿನ ಬಳಿಕ ಎಲ್ಲರೂ ತಂಡಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸಹ ತಮ್ಮ ಟ್ವಟ್ಟರ್ ನಲ್ಲಿ ಶುಭಾಶಯ ತಿಳಿಸಿ, ತಂಡದ ಒಡತಿ ನೀತಾ ಅಂಬಾನಿ ಪೂಜಿಸುವ ಆ ದೇವರ ಬಗ್ಗೆ ತಿಳಿಯಬೇಕೆಂಬ ಆಸೆಯನ್ನು ಹೊರಹಾಕಿದ್ದಾರೆ.

    ಇತ್ತೀಚೆಗೆ ಮುಂಬೈ ಇಂಡಿಯನ್ಸ್ ತಂಡದ ಒಡತಿ ನೀತಾ ಅಂಬಾನಿ ಸ್ಟೇಡಿಯಂನಲ್ಲಿ ದೇವರಲ್ಲಿ ಪ್ರಾರ್ಥಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ವಿಡಿಯೋಗೆ ಹಲವರು ನೀತಾ ಅಂಬಾನಿ ಪೂಜಿಸುವ ದೇವರನ್ನು ನಾವು ಪ್ರಾರ್ಥನೆ ಮಾಡಿ ಶ್ರೀಮಂತರಾಗುತ್ತೇವೆ ಎಂದು ಟ್ರೋಲ್ ಮಾಡಿದ್ದರು. ಅದೇ ವಿಡಿಯೋಗೆ ಸಂಬಂಧಿಸಿದಂತೆ ಸಿಂಪಲ್ ಸುನಿ, ಟ್ವಿಟ್ಟರ್ ನಲ್ಲಿ ನಾಲ್ಕು ಬಾರಿ ಮುಂಬೈ ಇಂಡಿಯನ್ಸ್ ಗೆ ಶುಭಾಶಯಗಳು ಎಂದು ಬರೆದು, ನೀತಾ ಅಂಬಾನಿ ಪೂಜಿಸುವ ಆ ದೇವರ ಬಗ್ಗೆ ತಿಳಿಯಬೇಕೆಂಬ ಎಂದು ಬರೆದುಕೊಂಡಿದ್ದಾರೆ.

    ಭಾನುವಾರ ನಡೆದ ಫೈನಲ್‍ನಲ್ಲಿ ಮುಂಬೈ ಚೆನ್ನೈ ತಂಡದ ವಿರುದ್ಧ 1 ರನ್‍ಗಳ ರೋಚಕ ಜಯವನ್ನು ಪಡೆದುಕೊಂಡಿತ್ತು. 150 ರನ್‍ಗಳ ಗುರಿ ಪಡೆದ ಚೆನ್ನೈ ತಂಡವನ್ನು 149 ರನ್‍ಗಳಿಗೆ ಕಟ್ಟಿ ಹಾಕಿ ನಾಲ್ಕನೇಯ ಬಾರಿ ಟ್ರೋಫಿಯನ್ನು ಗೆದ್ದುಕೊಂಡಿತು.