Tag: simple recipe

  • ಸುಲಭವಾಗಿ ಮಾಡಿ ಬೇಕರಿ ಸ್ಟೈಲ್ ಮಸಾಲಾ ಕಡ್ಲೆ

    ಸುಲಭವಾಗಿ ಮಾಡಿ ಬೇಕರಿ ಸ್ಟೈಲ್ ಮಸಾಲಾ ಕಡ್ಲೆ

    ಸಂಜೆ ವೇಳೆ ಚಳಿ ಇರುವ ಕಾರಣ ಬಿಸಿ ಬಿಸಿಯಾಗಿ ಟೀ ಬೇಕು ಜೊತೆಯಲ್ಲಿ ನಾಲಿಗೆ ಚಪ್ಪರಿಸಲು ಏನಾದರೂ ಬೇಕು ಎನ್ನಿಸುವುದು ಸಹಜ. ಹೀಗಿರುವಾಗ ಬೇಕರಿಯಿಂದ ಗರಿ ಗರಿಯಾದ ಚಿಪ್ಸ್,ಕಡ್ಲೆ ಎಂದು ಹೀಗೆ ಹಲವು ಕುರುಕಲು ತಿಂಡಿಗಳನ್ನು ತಂದು ಇಟ್ಟುಕೊಳ್ಳುತ್ತೇವೆ. ಇದರ ಬದಲಾಗಿ ನಾವೇ ಮನೆಯಲ್ಲಿ ರುಚಿಯಾದ ಮಸಾಲಾ ಕಡ್ಲೆಯನ್ನು ಮಾಡಬಹುದು.

    ಬೇಕಾಗುವ ಸಾಮಗ್ರಿಗಳು:
    *ಶೇಂಗಾ- 1 ಕೆಜಿ
    *ಕಡ್ಲೆ ಹಿಟ್ಟು- 3 ಕಪ್
    *ಜೀರಿಗೆ- 1 ಟೀ ಸ್ಪೂನ್
    *ಕಾಳು ಮೆಣಸಿನ ಪುಡಿ- ಅರ್ಧ ಟೀ ಸ್ಪೂನ್
    *ಗರಂ ಮಸಾಲಾ ಪೌಡರ್- ಅರ್ಧ ಟೀ ಸ್ಪೂನ್
    *ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
    *ಅಡುಗೆ ಎಣ್ಣೆ- 2ಕಪ್


    ಮಾಡುವ ವಿಧಾನ:
    *ಮೂರು ಕಪ್ ಕಡ್ಲೆ ಹಿಟ್ಟನ್ನು ತೆಗೆದುಕೊಂಡು  ಒಂದು ಬೌಲ್‍ಗೆ ಹಾಕಿ ಜೊತೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
    * ನಂತರ ಇದೇ ಬೌಲ್‍ಗೆ ಒಂದು ಸ್ಪೂನ್ ಜೀರಿಗೆ, ಅರ್ಧ ಟೀ ಸ್ಪೂನ್ ಕಾಳು ಮೆಣಸಿನ ಪುಡಿಯನ್ನು ಹಾಕಬೇಕು.
    *ಒಂದು ಸ್ಪೂನ್ ಕೆಂಪುಮೆಣಸು ಪುಡಿಯನ್ನು ಹಾಕಬೇಕು ಕಾರಾ ಹೆಚ್ಚು ಬೇಕಾದಲ್ಲಿ ನೀವು ಒಂದು ಟೀ ಸ್ಪೂನ್ ಹೆಚ್ಚು ಸೇರಿಸಿಕೊಳ್ಳಬಹುದು.
    * ನಂತರ ಈ ಮಿಶ್ರಣಕ್ಕೆ ನೀರನ್ನು ಹಾಕಿ ಸ್ವಲ್ಪ ದಪ್ಪ ಪ್ರಮಾಣದಲ್ಲಿ ಬರುವಂತೆ ಮಸಾಲೆಯನ್ನು ಕಲಸಿಕೊಳ್ಳಬೇಕು. ಗರಿಗರಿಯಾಗಿ ಮಸಾಲೆ ಕಡ್ಲೆ ಬೇಕಾದರೆ ಸ್ವಲ್ಪ ಪ್ರಮಾಣದಲ್ಲಿ ಅಕ್ಕಿಹಿಟ್ಟು ಸೇರಿಸಿಕೊಳ್ಳವುದು ಉತ್ತಮ.( ಬೇಕಾದಲ್ಲಿ ಮಾತ್ರ ಸೇರಿಸಿಕೊಳ್ಳಿ)
    * ಈ ಮಿಶ್ರಣಕ್ಕೆ ಒಂದು ಕೆಜಿ  ಕಡಲ್ಲೆ ಬೀಜಗಳನ್ನು ಈ ಮಸಾಲೆಯೊಂದಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಸಾಲೆಯೊಂದಿಗೆ ಕಡ್ಲೆ ಮಿಶ್ರವಾಗಲು 10 ರಿಂದ 20 ನಿಮಿಷ ಇಟ್ಟಿರಬೇಕು.

    *ನಂತರ ಸ್ಟೋವ್ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾಗಲು ಬಿಡಬೇಕು. ನಂತರ ಮಸಾಲೆಯೊಂದಿಗೆ ಮಿಶ್ರಣ ಮಾಡಿಟ್ಟುಕೊಂಡಿರುವ ಕಡ್ಲೆಯನ್ನು ನಿಧಾನವಾಗಿ ಬಿಸಿ ಬಿಸಿ ಎಣ್ಣೆಯಲ್ಲಿ ಬಿಟ್ಟು ಫ್ರೈ ಮಾಡಬೇಕು.
    *ಮಸಾಲಾ ಕಡ್ಲೆ ಬಿಸಿ ಎಣ್ಣೆಯಲ್ಲಿ ಪಟ ಪಟಾ ಶಬ್ಧ ಬಂದು ಗರಿಗರಿಯಾಗಿ ಬೇಯುವವರೆಗೂ ಫ್ರೈ ಮಾಡಿತೆಗೆಯಬೇಕು.
    * ನಂತರ ಕರಿಬೇವು ತೆಗೆದುಕೊಂಡು ಎಣ್ಣೆಯಲ್ಲಿ ಹಾಕಿ ಪ್ರೈ ಮಾಡಿಕೊಂಡು ಮಸಾಲಾ ಕಡ್ಲೆಯೊಂದಿಗೆ ಸೇರಿಸಿಕೊಳ್ಳಬೇಕು.
    ಈಗ ಗರಿಗರಿಯಾದ ಬೇಕರಿ ಸ್ಟೈಲ್ ಮಸಾಲಾ ಕಡ್ಲೆ ಸವಿಯಲು ಸಿದ್ಧವಾಗುತ್ತದೆ.