Tag: Simon

  • ಕಾಳಾ ಸಿನ್ಮಾದಲ್ಲಿ ನಟಿಸಿದ ನಾಯಿಗೆ 2 ಕೋಟಿ ಕೊಡ್ತೀನಿ ಅಂದ್ರು ಕೊಡಲ್ಲ ಅಂದ ತರಬೇತುದಾರ

    ಕಾಳಾ ಸಿನ್ಮಾದಲ್ಲಿ ನಟಿಸಿದ ನಾಯಿಗೆ 2 ಕೋಟಿ ಕೊಡ್ತೀನಿ ಅಂದ್ರು ಕೊಡಲ್ಲ ಅಂದ ತರಬೇತುದಾರ

    ಚೆನ್ನೈ: ಜೂನ್ 7 ರಂದು ತೆರೆಕಾಣಲಿರುವ ರಜಿನಿಕಾಂತ್ ಅವರ ಚಿತ್ರ ಕಾಳಾದಲ್ಲಿ ನಟಿಸಿರುವ ಮಣಿ ಎಂಬ ನಾಯಿಯ ಬೆಲೆ ಬರೋಬ್ಬರಿ 2 ಕೋಟಿ ರೂ. ಅಂತಾ ಹೇಳಲಾಗುತ್ತಿದೆ.

    ಕಾಳಾ ಚಿತ್ರಕ್ಕೆಂದೆ ಶ್ವಾನ ತರಬೇತುದಾರ ಸೈಮನ್ 30 ಕ್ಕೂ ಹೆಚ್ಚು ನಾಯಿಗಳನ್ನು ಪರೀಕ್ಷೆ ಮಾಡಿದ್ದರು. ಮಣಿ ನಾಯಿ ಅವರಿಗೆ ಬೀದಿಯಲ್ಲಿ ಸಿಕ್ಕಿದೆ. ಚಿತ್ರದ ಪೋಸ್ಟರ್ ಗಳು ಬಿಡುಗಡೆಗೊಂಡ ಮೇಲೆ ಮಣಿಯ ಬೆಲೆ 2 ಕೋಟಿ ರೂ. ಆಗಿದೆ ಅಂತೆ.

    ಅಭಿಮಾನಿಗಳು ಸೈಮನ್ ಮನೆಗೆ ಬಂದು ನಾಯಿಯನ್ನು ಕೇಳುತ್ತಿದ್ದಾರೆ. ಮಣಿ ನಮ್ಮ ಕುಟುಂಬದ ಸದಸ್ಯನಿದ್ದಂತೆ. ಹಣ ನನಗೆ ಮುಖ್ಯವಲ್ಲ. ಬೆಳಗ್ಗೆ ಎದ್ದ ತಕ್ಷಣ ಅದರ ಮುಖ ನೋಡುತ್ತೇನೆ ಹೇಗೆ ಕೊಡಲಿ. ಬೀದಿಯಲ್ಲಿ ಸಿಕ್ಕ ಮಣಿಗೆ ತರಬೇತಿ ಕೊಡಲು ತುಂಬಾ ಕಷ್ಟವಾಗಿತ್ತು. ಆರಂಭದಲ್ಲಿ ಕಚ್ಚಲು ಬಂದಿತ್ತು. ಈಗ ಸ್ನೇಹಿತನಾಗಿದ್ದಾನೆ ಎಂದು ಹೇಳಿದರು.

    ಸೆಟ್ ನಲ್ಲಿ ಮಣಿ ರಜಿನಿಕಾಂತ್ ಅವರ ಜೊತೆ ಹೊಂದಿಕೊಂಡಿದ್ದರಿಂದ ನನ್ನ ಕೆಲಸವನ್ನು ಕಡಿಮೆ ಮಾಡಿತು. ಪೂರ್ತಿ ಸಿನಿಮಾದಲ್ಲಿ ಮಣಿ ರಜಿನಿಕಾಂತ್ ಅವರ ಜೊತೆ ನಟಿಸಿದ್ದಾನೆ. ರಜಿನಿಕಾಂತ್ ಹೇಳಿದ ತಕ್ಷಣ ಜೀಪ್ ಒಳಕ್ಕೆ ನೆಗೆದು ಕೂತುಕೊಳ್ಳುವುದು ಎಲ್ಲವನ್ನೂ ಚಿತ್ರದಲ್ಲಿ ನೋಡಬಹುದು ಎಂದು ಹೇಳಿದರು. ಕಾಲಾ ಚಿತ್ರದ ನಂತರ ಮಣಿ ಇನ್ನೂ ಮೂರು ಚಿತ್ರದಲ್ಲಿ ನಟಿಸಿದ್ದಾನೆ.

  • ಐಪಿಎಸ್ ಅಧಿಕಾರಿ ಸೇರಿದಂತೆ 22 ಪೊಲೀಸರ ಸಾವಿಗೆ ಕಾರಣನಾಗಿದ್ದ ವೀರಪ್ಪನ ಸಹಚರ ಸೈಮನ್ ಸಾವು

    ಐಪಿಎಸ್ ಅಧಿಕಾರಿ ಸೇರಿದಂತೆ 22 ಪೊಲೀಸರ ಸಾವಿಗೆ ಕಾರಣನಾಗಿದ್ದ ವೀರಪ್ಪನ ಸಹಚರ ಸೈಮನ್ ಸಾವು

    ಬೆಂಗಳೂರು: ಪಾಲರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಹಾಗು ವೀರಪ್ಪನ್ ಸಹಚರ ಸೈಮನ್ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

    ಸಾವನ್ನಪ್ಪಿರುವ ಸೈಮನ್ ಮಾದಯ್ಯ 1993 ರಲ್ಲಿ ಐಪಿಎಸ್ ಆಧಿಕಾರಿ ರಾಂಬೋ ಗೋಪಾಲಕೃಷ್ಣ ಸೇರಿದಂತೆ 22 ಜನ ಎಸ್‍ಟಿಎಫ್ ಅಧಿಕಾರಿಗಳು ಸಾವಿಗೆ ಕಾರಣನಾಗಿದ್ದನು. ರಾಂಬೋ ಗೋಪಾಲಕೃಷ್ಣ ತಮ್ಮ ತಂಡದೊಂದಿಗೆ ಕಾಡುಗಳ್ಳ ವೀರಪ್ಪನನ್ನು ಹಿಡಿಯಲು ಸೊರ್ ಕಾಯ್‍ಮಡು ಅರಣ್ಯಕ್ಕೆ ತೆರಳಿದ್ದರು.

    ಈ ವೇಳೆ ನೆಲಬಾಂಬ್ ಸ್ಫೋಟಿಸುವುದರಲ್ಲಿ ಪ್ರವೀಣನಾಗಿದ್ದ ಸೈಮನ್ ಮಾದಯ್ಯನಿಗೆ ಹೇಳಿ ವೀರಪ್ಪನ್ ಸೂರ್‍ಕಾಯ್‍ಮಡುವಿನ ಬಾಂಬ್ ಹೂತಿಡಿಸಿದ್ದ. ರಾಂಬೋ ಗೋಪಾಲಕೃಷ್ಣ ಅರಣ್ಯ ಪ್ರದೇಶಕ್ಕೆ ಕಾಲಿಡುತ್ತಿದ್ದಂತೆ 14 ಕಡೆ ಬಾಂಬ್ ಸ್ಫೋಟ ನಡೆಸಿದ್ದನು. ಘಟನೆಯಲ್ಲಿ ಒಟ್ಟು 22 ಜನ ಎಸ್‍ಟಿಎಫ್ ಅಧಿಕಾರಿಗಳು ಸಾವನ್ನಪಿದ್ರು.

    ಈ ಪ್ರಕರಣ ಸಂಬಂಧ ಸೈಮನ್ ಮಾದಯ್ಯ ಸೇರಿದಂತೆ 4 ಜನರಿಗೆ ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್ ವಿಧಿಸಿತು. ಅಂದಿನಿಂದ ಜೈಲು ಹಕ್ಕಿಯಾಗಿದ್ದ ಸೈಮನ್ ಮಾದಯ್ಯ ವಿಕ್ಟೋರಿಯ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಇಂದು ಬೆಳಗ್ಗೆ ಮೃತ ಪಟ್ಟಿದ್ದಾನೆ.