Tag: Simbhu

  • ಶ್ರೀಲಂಕಾ ಹುಡುಗಿ ಜೊತೆ ಖ್ಯಾತನಟ ಸಿಂಭು ಮದುವೆ

    ಶ್ರೀಲಂಕಾ ಹುಡುಗಿ ಜೊತೆ ಖ್ಯಾತನಟ ಸಿಂಭು ಮದುವೆ

    ಮಿಳಿನ ಸ್ಟಾರ್ ನಟ ಸಿಲಂಬರಸನ್ ಅಲಿಯಾಸ್ ಸಿಂಭು ಬಗ್ಗೆ ಹೊಸ ಸುದ್ದಿಯೊಂದು ಕಾಲಿವುಡ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ತಡವಾಗಿಯಾದರೂ ಮದುವೆಗೆ ಒಪ್ಪಿಕೊಂಡಿರುವ ಸಿಂಭು, ಶ್ರೀಲಂಕಾದ ಶ್ರೀಮಂತ ಉದ್ಯಮಿಯೊಬ್ಬರ ಮಗಳನ್ನು ಸಿಂಭು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಎರಡೂ ಕುಟುಂಬಗಳ ಮಾತುಕತೆ ಕೂಡ ಮುಗಿದಿದೆ ಎನ್ನಲಾಗುತ್ತಿದೆ.

    ಸಿಂಭು ಮದುವೆಯಾಗಲು ಹಲವರು ತುದಿಗಾಲಲ್ಲಿ ನಿಂತಿದ್ದರು. ಆದರೆ, ಅಷ್ಟು ಸುಲಭಕ್ಕೆ ಸಿಂಭು ಒಪ್ಪುತ್ತಿರಲಿಲ್ಲ. ಅದಕ್ಕೆ ಅನೇಕ ಕಾರಣಗಳನ್ನು ಹೇಳಲಾಗುತ್ತಿದೆ. ತಮ್ಮ ಜೊತೆ ನಟಿಸಿದ್ದ ಹೆಸರಾಂತ ನಾಯಕಿಯನ್ನು ಅವರು ಪ್ರೀತಿಸುತ್ತಿದ್ದರಂತೆ. ಆದರೆ, ಆಕೆಯನ್ನು ಪಡೆಯಲಾಗಲಿಲ್ಲ ಎನ್ನುವ ನೋವು ಅವರಲ್ಲಿ ಉಳಿದಿತ್ತು ಎಂದು ಹೇಳಲಾಗುತ್ತಿದೆ. ಅಲ್ಲದೇ, ನಯನತಾರಾ, ತ್ರಿಶಾ ಸೇರಿದಂತೆ ಹಲವು ನಾಯಕಿಯರ ಹೆಸರು ಕೂಡ ಸಿಂಭು ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಹೀಗಾಗಿ ಅವರು ವಿವಾಹದಿಂದ ದೂರ ಉಳಿಸಿದ್ದರು.

    ಈಗಾಗಲೇ ಸಿಂಭು ಅವರ ಕಿರಿಯ ಸಹೋದರಿ ಮತ್ತು ಸಹೋದರನಿಗೆ ಮದುವೆ ಆಗಿದೆ. ಆದರೂ, ಕೂಡ ಸಿಂಭು ಮದುವೆ ಬಗ್ಗೆ ಯೋಚಿಸಿರಲಿಲ್ಲ. ಈ ಕುರಿತು ಯಾರೇ ಪ್ರಶ್ನೆ ಮಾಡಿದರೂ, ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದರು. ಆದಷ್ಟು ಮದುವೆ ಕುರಿತಾಗಿ ಚರ್ಚೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಇದೀಗ ಮದುವೆ ಆಗಲು ಅವರು ಮುಂದೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ

    ಅಂದುಕೊಂಡಂತೆ ನಡೆದರೆ 42ರ ವಯಸ್ಸಿನ ಸಿಂಭು, ತಮಿಳು ಕುಟುಂಬದ ಶ್ರೀಲಂಕಾ ಉದ್ಯಮಿಯ ಮಗಳ ಜೊತೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಆ ಹುಡುಗಿ ವೃತ್ತಿಯಲ್ಲಿ ವೈದ್ಯೆ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ಪರಿಚಯವಿರುವ ಕುಟುಂಬ ಎನ್ನುವುದು ಅವರ ಆಪ್ತರು ಕೊಟ್ಟಿರುವ ಮಾಹಿತಿ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೆ ಜನರ ಮನಸನ್ನು ಗೆದ್ದ ನಟ ಸಿಂಬು!

    ಮತ್ತೆ ಜನರ ಮನಸನ್ನು ಗೆದ್ದ ನಟ ಸಿಂಬು!

    ಚೆನ್ನೈ: ಕಾಲಿವುಡ್ ನಟ ಸಿಂಬು ಕಾವೇರಿ ವಿಚಾರದ ಬಗ್ಗೆ ಮಾತನಾಡಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಈಗ ಮೃತಪಟ್ಟ ತನ್ನ ಅಭಿಮಾನಿಯ ಪೋಸ್ಟರ್ ಅಂಟಿಸುವ ಮೂಲಕ ಸಿಂಬು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಸಿಂಬು ಅವರ ಅಪ್ಪಟ ಅಭಿಮಾನಿ ಮದನ್ ಕಳೆದ ವಾರ ಚೆನ್ನೈನಲ್ಲಿ ಮೃತಪಟ್ಟಿದ್ದರು. ಮದನ್ ಮೃತಪಟ್ಟಿದ್ದ ಸಮಯದಲ್ಲಿ ಸಿಂಬು ಮಣಿರತ್ನಂ ನಿರ್ದೇಶನದ ಸಿನಿಮಾದ ಶೂಟಿಂಗ್‍ಗಾಗಿ ಬೇರೆ ಕಡೆ ಹೋಗಿದ್ದರು. ಹಾಗಾಗಿ ಸಿಂಬು ಅವರಿಗೆ ತನ್ನ ಅಭಿಮಾನಿ ನಿಧನ ಹೊಂದಿರುವ ವಿಷಯ ತಿಳಿದಿರಲಿಲ್ಲ.

    ಸಿಂಬು ತನ್ನ ಶೂಟಿಂಗ್ ಮುಗಿಸಿ ರಾತ್ರಿ ಕಾರಿನಲ್ಲಿ ಪ್ರಯಾಣಿಸುವಾಗ ಮದನ್ ಗೆಳೆಯರು ರಸ್ತೆ ಬಳಿ ಆತನ ಪೋಸ್ಟರ್ ಅಂಟಿಸುತ್ತಿದ್ದರು. ಆಗ ಸಿಂಬು ಅದನ್ನು ಗಮನಿಸಿ ತಕ್ಷಣ ಕಾರಿನಿಂದ ಇಳಿದು ಸ್ವತಃ ತನ್ನ ಅಭಿಮಾನಿಯ ಪೋಸ್ಟರ್ ಗಳನ್ನು ಅಂಟಿಸಿದ್ದಾರೆ.

    ಸಿಂಬು ತನ್ನ ಅಭಿಮಾನಿಯ ಪೋಸ್ಟರ್ ಅಂಟಿಸಿದ್ದಕ್ಕೆ ಎಲ್ಲರೂ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಯ ನಿಧನದಿಂದ ಸಿಂಬು ಬೇಸರ ವ್ಯಕ್ತಪಡಿಸಿದ್ದಾರೆ. ಮದನ್ ಅವರು ಸಿಂಬು ಫ್ಯಾನ್ ಕ್ಲಬ್‍ನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು.