Tag: sim

  • ಪ್ರಜ್ವಲ್ ಬಳಿ ಇತ್ತಂತೆ 15 ಸಿಮ್- ಸಂತ್ರಸ್ತೆಯರಿಗೆ ನಗ್ನರಾಗುವಂತೆ ಬೆದರಿಕೆ!

    ಪ್ರಜ್ವಲ್ ಬಳಿ ಇತ್ತಂತೆ 15 ಸಿಮ್- ಸಂತ್ರಸ್ತೆಯರಿಗೆ ನಗ್ನರಾಗುವಂತೆ ಬೆದರಿಕೆ!

    ಹಾಸನ: ಜೈಲಿನಲ್ಲಿರುವ ಅತ್ಯಾಚಾರ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನ (Prajwal Revanna) ಒಂದೊಂದೇ ಕೃತ್ಯಗಳು ಬಯಲಿಗೆ ಬರುತ್ತಿವೆ.

    ಪ್ರಜ್ವಲ್ ರೇವಣ್ಣ ಬಳಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 15 ಸಿಮ್‍ಗಳು ಇತ್ತಂತೆ. ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್ ನಿಂದ ಕಾಲ್. ಹೀಗೆ ಪ್ರಜ್ವಲ್ ರೇವಣ್ಣ ಬರೋಬ್ಬರಿ 15 ಸಿಮ್ ಕಾರ್ಡ್ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್‍ಗೆ ಟಾರ್ಗೆಟ್. ಕೆಲಸ ಕೇಳಿಕೊಂಡು, ಮಕ್ಕಳಿಗೆ ಸೀಟ್ ಕೇಳಿಕೊಂಡು ಬಂದವರ ಮೇಲೂ ಕಣ್ಣು ಹಾಕಿದ್ದ. ಅವರ ಬಳಿ ಫೋನ್ ನಂಬರ್ ಪಡೆದು ಪದೇ ಪದೇ ಕಾಲ್ ಮಾಡುತ್ತಿದ್ದ. ಕ್ರಮೇಣ ಅವರೊಂದಿಗೆ ಸಲುಗೆ ಬೆಳೆಸಿ ಕರೆ ಮಾಡುತ್ತಿದ್ದ. ನಂತರ ವೀಡಿಯೋ ಕಾಲ್ ಮಾಡಿ ಬೆತ್ತಲಾಗುವಂತೆ ಬೆದರಿಕೆ ಹಾಕುತ್ತಿದ್ದ. ಇದನ್ನೂ ಓದಿ: ರ್ಶನ್ ಖೈದಿ 6106 ನಂಬರ್ ಟ್ರೆಂಡಿಂಗ್- ಮೊಬೈಲ್, ವಾಹನದ ಮೇಲೂ ಇದೇ ಸ್ಟಿಕ್ಕರ್

    ಇಷ್ಟು ಮಾತ್ರವಲ್ಲದೇ ನನ್ನೊಂದಿಗೆ ಸಹಕರಿಸದಿದ್ದರೆ ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ. ಬೆದರಿಕೆಗೆ ಹೆದರಿ ನಗ್ನರಾಗಿರುವುದಾಗಿ ಇತ್ತೀಚಿಗೆ ಸಂತ್ರಸ್ತೆಯೊಬ್ಬರು ಕೊಟ್ಟ ದೂರಿನಲ್ಲಿ ಪ್ರಜ್ವಲ್ ಕರಾಳಮುಖ ಬಯಲು ಮಾಡಿದ್ದಾರೆ.

  • ಹಿಂದೂಗಳು ಕೊಡುವ ದಾಖಲಾತಿ ಪೋರ್ಜರಿ ಮಾಡಿ ಇನ್ನೊಂದು ಸಿಮ್ ಖರೀದಿ ಮಾಡಿದ್ದಾರೆ: ಬಿವೈ ರಾಘವೇಂದ್ರ

    ಹಿಂದೂಗಳು ಕೊಡುವ ದಾಖಲಾತಿ ಪೋರ್ಜರಿ ಮಾಡಿ ಇನ್ನೊಂದು ಸಿಮ್ ಖರೀದಿ ಮಾಡಿದ್ದಾರೆ: ಬಿವೈ ರಾಘವೇಂದ್ರ

    ಶಿವಮೊಗ್ಗ: ನಮ್ಮ ಹಿಂದೂ ಹುಡುಗರು ಕೊಡುವ ದಾಖಲಾತಿ ಪೋರ್ಜರಿ ಮಾಡಿ ಅವರ ಹೆಸರಿನಲ್ಲಿ ಇನ್ನೊಂದು ಸಿಮ್ (Sim) ಖರೀದಿ ಮಾಡಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ (BY Raghavendra) ತಿಳಿಸಿದ್ದಾರೆ.

    ಬಿಜೆಪಿ ಸಂಸ್ಥಾಪನಾ ದಿನ ಹಿನ್ನೆಲೆ ಶಿವಮೊಗ್ಗ ನಗರದ ಹಲವು ಬಿಜೆಪಿ ಬೂತ್‌ಗಳಿಗೆ ಭೇಟಿ ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗೆ ಜನರ ಮಧ್ಯೆ ಇದ್ದು ಗೊತ್ತಿಲ್ಲ- ಯದುವೀರ್ ಬಗ್ಗೆ ಯತೀಂದ್ರ ವ್ಯಂಗ್ಯ

    ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast) ಪ್ರಕರಣದಲ್ಲಿ ಎನ್‌ಐಎ (NIA) ತೀರ್ಥಹಳ್ಳಿಯ (Thirthahalli) ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆಗೆ ಒಳಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ತೀರ್ಥಹಳ್ಳಿ ಬಿಜೆಪಿ  (BJP) ಕಾರ್ಯಕರ್ತನನ್ನು ಎನ್‌ಐಎ ತಂಡ ತನಿಖೆ ವಿಚಾರಣೆಗೆ ಕರೆದೊಯ್ದು 24 ಗಂಟೆಯಲ್ಲಿ ವಾಪಸ್ ಕಳುಹಿಸಿಕೊಟ್ಟಿದ್ದಾರೆ. ಕಾರ್ಯಕರ್ತ ವಾಪಸ್ ಬಂದ ನಂತರ ಆತಂಕದ ವಿಚಾರ ಗೊತ್ತಾಯಿತು. ಹಿಂದೂ ಹುಡುಗರು ಕೊಡುವ ದಾಖಲಾತಿಯನ್ನು ಪೋರ್ಜರಿ ಮಾಡಿ ಸಿಮ್ ಖರೀದಿಸಿ ಇಂತಹ ದುಷ್ಕೃತ್ಯ ಮಾಡುವ ಮನಸ್ಥಿತಿ ಇರುವ ವ್ಯಕ್ತಿಗಳಿಗೆ ಸಿಮ್ ಕೊಡುತ್ತಿದ್ದರು ಎಂದು ಅವರು ತಿಳಿಸಿದರು. ಇದನ್ನೂ ಓದಿ: ಕರಾವಳಿಯಲ್ಲಿ ನಕ್ಸಲರ ಚಲನವಲನ – ಕಡಬದ ಮನೆಗೆ ಬಂದು ಊಟ ಮಾಡಿದ ಶಂಕಿತರು

    ಸರ್ವ ಜನಾಂಗದ ಶಾಂತಿಯ ತೋಟ ಎಂಬಂತಹ ಕುವೆಂಪು ಅವರ ಜನ್ಮ ಸ್ಥಳದಲ್ಲಿ ಇಂತಹ ಘಟನೆ ನಡೆಯುತ್ತಿರೋದು ಆತಂಕದ ವಿಚಾರ. ಕೇಂದ್ರ ಸರ್ಕಾರದಿಂದ ಗಟ್ಟಿಯಾದ ನಿಲುವು ತನಿಖೆ ಆಗುತ್ತಿದೆ. ಈ ಆತಂಕದಿಂದ ಮುಕ್ತ ಆಗಬೇಕು ಎಂದರೆ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಎಂದರು. ಇದನ್ನೂ ಓದಿ: ಪ್ರಚಾರಕ್ಕೆ ಮೋದಿ ಫೋಟೋ ಬಳಸಲು ಈಶ್ವರಪ್ಪರಿಂದ ಕೋರ್ಟ್‍ಗೆ ಕೆವಿಯಟ್ ಸಲ್ಲಿಕೆ

    ಇಂದು ಬಿಜೆಪಿಯ ಸಂಸ್ಥಾಪನಾ ದಿನ. ಎಲ್ಲಾ ಬೂತ್‌ನಲ್ಲೂ ಸಂಸ್ಥಾಪನಾ ದಿನ ಆಚರಣೆ ಮಾಡುತ್ತಿದ್ದೇವೆ. 1,700ಕ್ಕಿಂತ ಹೆಚ್ಚಿನ ಬೂತ್‌ಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಬೂತ್‌ನಲ್ಲೇ ಇರಬೇಕು. ಕಾರ್ಯಕ್ರಮ ಮಾಡಬೇಕು. ನಾನು ಸಹ 8-10 ಬೂತ್‌ಗಳಿಗೆ ಪ್ರವಾಸ ಮಾಡುತ್ತೇನೆ. ಶಿವಮೊಗ್ಗದಲ್ಲಿ ನಡೆಯುವ ಮಹಿಳಾ ಸಮಾವೇಶದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸೇತುವೆ ಮೇಲೆ ಉಕ್ಕಿ ಹರಿಯುತ್ತಿರುವ ಘಟಪ್ರಭಾ – ಮೂರು ದಿನ ಸಂಚಾರ ನಿಷೇಧ

    ಈಶ್ವರಪ್ಪ (KS Eshwarappa) ಕೆವಿಯೆಟ್ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೋದಿ ಬೇಕು. ಮೋದಿಗಿಂತ ಇನ್ನೊಂದು ಹಿಂದುತ್ವದ ಮುಖ ಬೇರೊಂದಿಲ್ಲ. ಮೋದಿ ಪಕ್ಷದ ಅಧಿಕೃತ ಅಭ್ಯರ್ಥಿ ನಾನಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೋದಿ ಪೋಟೋ ಹಾಕಿಕೊಂಡು ಅವರೊಂದು ಪ್ರಯತ್ನ ಮಾಡುತ್ತಿದ್ದಾರೆ. ಜನ ಪ್ರಜ್ಞಾವಂತರಿದ್ದಾರೆ. ಇದರಲ್ಲಿ ಸ್ವಾರ್ಥ ಇದೆಯಾ? ನಿಜವಾದ ಹಿಂದುತ್ವಕ್ಕಾಗಿ ಬಿಜೆಪಿ ಪಕ್ಷ. ಹಿಂದುತ್ವ ಕಟ್ಟಿ ಬೆಳೆಸುವ ಕಾರ್ಯ ನಡೆದಿದೆ. ಮನಸ್ಸಿಗೆ ನೋವಾಗಿ ಸ್ವಂತಕೋಸ್ಕರ ಹಿಂದುತ್ವ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ಜನ ಕೊಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಟ್ವಿಸ್ಟ್‌ – ಈಗಾಗಲೇ A1 ಆರೋಪಿ ಅರೆಸ್ಟ್‌!

  • ವ್ಯಾಪಾರಿಗೆ ಗುಂಡೇಟು – ಚಿನ್ನ, ಮೊಬೈಲ್ ಬಿಟ್ಟು ಸಿಮ್ ತಗೊಂಡು ಎಸ್ಕೇಪ್

    ವ್ಯಾಪಾರಿಗೆ ಗುಂಡೇಟು – ಚಿನ್ನ, ಮೊಬೈಲ್ ಬಿಟ್ಟು ಸಿಮ್ ತಗೊಂಡು ಎಸ್ಕೇಪ್

    – ಹೆದ್ದಾರಿಯಲ್ಲಿ ತಡೆದು ಐದು ಬಾರಿ ಶೂಟ್

    ಪಾಟ್ನಾ: ವ್ಯಾಪಾರಿಗೆ ಗುಂಡಿಕ್ಕಿದ್ದ ಅಪರಿಚಿತರು ಚಿನ್ನ, ಮೊಬೈಲ್ ಬಿಟ್ಟು ಸಿಮ್ ತೆಗೆದುಕೊಂಡು ಪರಾರಿಯಾಗಿರೋ ಘಟನೆ ಪಾಟ್ನಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಸಂಜಯ್ ಕುಮಾರ್ ಕೊಲೆಯಾದ ವ್ಯಾಪಾರಿ. ಸಂಜಯ್ ಹಾಜಿಪುರಕ್ಕೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-19ರಲ್ಲಿ ಕೆಲವರು ತಡೆದಿದ್ದಾರೆ. ನಂತರ ಐದು ಬಾರಿ ಸಂಜಯ್ ಮೇಲೆ ಗುಂಡು ಹಾರಿಸಿದ್ದಾರೆ. ಸಂಜಯ್ ಸಾವನ್ನಪ್ಪಿದ್ದ ಅವರ ಬಳಿಯಲ್ಲಿದ್ದ ನಗದು, ಚಿನ್ನದ ಚೈನ್ ಮತ್ತು ಮೊಬೈಲ್ ಸಹ ತೆಗೆದುಕೊಂಡಿಲ್ಲ. ಬದಲಾಗಿ ಸಂಜಯ್ ಬಳಸುತ್ತಿದ್ದ ಸಿಮ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

    ಮೃತ ಸಂಜಯ್ ಕುಮಾರ್ ಮೂಲತಃ ಆಲಂಗಂಜ್ ಕ್ಷೇತ್ರದ ನುರಾನಿಬಾಗ್ ಗ್ರಾಮದ ನಿವಾಸಿ. ಪಾಟ್ನಾದಲ್ಲಿ ಔಷಧಿಗಳ ವ್ಯಾಪಾರಿಯಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಂಜಯ್ ಕುಟುಂಬ ಮತ್ತು ಆಪ್ತರು ಆಗಮಿಸಿದ್ದಾರೆ. ಇದನ್ನೂ ಓದಿ: ವಿಧವೆ ಅತ್ತೆಯನ್ನ ರೇಪ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಅಳಿಯ

    ಸಂಜಯ್ ಹಾಜಿಪುರಕ್ಕೆ ತೆರಳುತ್ತಿರುವ ವಿಷಯ ತಿಳಿದವರೇ ಈ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ದಾಳಿಕೋರರು ಕೇವಲ ಸಿಮ್ ಮಾತ್ರ ತೆಗೆದುಕೊಂಡು ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೊಲದಲ್ಲೇ ಪ್ರೇಮಿಯೊಂದಿಗೆ ತಾಯಿ ಸಲ್ಲಾಪ – ಮರುದಿನ 6ರ ಬಾಲಕನ ಶವ ಪತ್ತೆ

  • ಶಿರಸಿಯ ಮೌಲ್ವಿ ಹೆಸರಿನಲ್ಲಿ ಉಗ್ರ ಸಂಘಟನೆಯಿಂದ ಸಿಮ್ ಬಳಕೆ- ಎನ್‍ಐಎಯಿಂದ ತನಿಖೆ

    ಶಿರಸಿಯ ಮೌಲ್ವಿ ಹೆಸರಿನಲ್ಲಿ ಉಗ್ರ ಸಂಘಟನೆಯಿಂದ ಸಿಮ್ ಬಳಕೆ- ಎನ್‍ಐಎಯಿಂದ ತನಿಖೆ

    ಕಾರವಾರ: ಉಗ್ರ ಸಂಘಟನೆಗೆಗಳ ಸಂಘಟನೆಗಾಗಿ ಶಿರಸಿ ತಾಲೂಕಿನ ಬನವಾಸಿಯ ಮೌಲ್ವಿ ಹೆಸರಿನಲ್ಲಿ ಸಿಮ್ ಬಳಕೆಯಾಗಿದೆ. ಈ ಕುರಿತು ಶಿರಸಿ ತಾಲೂಕಿನ ಬನವಾಸಿ ಮೂಲದ ಮೌಲ್ವಿ ಅಬ್ದುಲ್ ಮತೀನ್‍ನನ್ನು ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ ತನಿಖೆ ನಡೆಸಿ ಬಿಡುಗಡೆಗೊಳಿಸಿದ್ದಾರೆ.

    ಅಬ್ದುಲ್ ಮತೀನ್ ಉಡುಪಿ ಜಿಲ್ಲೆಯ ಬೈಂದೂರಿನ ಮದರಸಾದಲ್ಲಿ ಅಧ್ಯಯನ ಮಾಡುತ್ತಿದ್ದ, ಈ ವೇಳೆಯಲ್ಲಿ ಈತನೊಂದಿಗೆ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳು ಸಹ ಮದರಸಾದಲ್ಲಿ ಓದುತ್ತಿದ್ದು, ಈ ವೇಳೆ ಶಿರಸಿಯ ಅಬ್ದುಲ್ ಮತೀನ್ ತನ್ನ ಸಹಪಾಠಿಗಳಾದ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳಿಗೆ ತನ್ನದೇ ಹೆಸರಿನ ದಾಖಲೆಗಳಲ್ಲಿ ಸಿಮ್ ಕೊಡಿಸಿದ್ದ.

    ಈತ ವಿದ್ಯಾಭ್ಯಾಸ ಮುಗಿಸಿ ಮಂಗಳೂರಿನ ಮದರಸಾ ಒಂದರಲ್ಲಿ ಸಹಾಯಕ ಮೌಲ್ವಿಯಾಗಿ ಕಾರ್ಯ ನಿರ್ವಹಿಸುತಿದ್ದ. ಆದರೇ ಈತ ತನ್ನ ಸ್ನೇಹಿತರಿಗೆ ತನ್ನ ಹೆಸರಿನಲ್ಲಿ ಸಿಮ್ ಕೊಡಿಸಿದ್ದು, ಈ ಸಿಮ್‍ಗಳು ಪಶ್ಚಿಮ ಬಂಗಾಳ ಸೇರಿದಂತೆ ದೇಶದ ನಾನಾ ಭಾಗದಲ್ಲಿ ಬಳಕೆಯಾಗುತ್ತಿವೆ. ಈತನ ಹೆಸರಿನಲ್ಲಿರುವ ಸಿಮ್ ನಿಷೇಧಿತ ಜೆ.ಎಮ್.ಬಿ ಸಂಘಟನೆಯ ಸಂಘಟನೆಗೂ ಬಳಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಿ.ಸಿ.ಬಿ, ಇಡಿ, ಎನ್.ಐ.ಎ ಕೂಡ ಈತನನ್ನು ಕರೆಯಿಸಿ ಹೆಚ್ಚಿನ ತನಿಖೆ ಕೈಗೊಂಡಿದೆ.

    ಶಿರಸಿಯ ಬನವಾಸಿ ಮೌಲ್ವಿ ಹೆಸರಿನಲ್ಲಿ ಒಂಬತ್ತಕ್ಕೂ ಹೆಚ್ಚು ಸಿಮ್ ಬಳಕೆಯಾಗುತ್ತಿವೆ. ಇತನ ಹೆಸರಿನಲ್ಲಿ ಬಳಕೆಯಾಗುತ್ತಿರುವ ಸಿಮ್‍ಗಳು ಪಶ್ಚಿಮ ಬಂಗಾಳ, ಜಮ್ಮು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಕ್ರಿಯವಾಗಿವೆ. ತನಿಖೆ ವೇಳೆ ತಾನು ಉಡುಪಿ ಜಿಲ್ಲೆಯ ಬೈಂದೂರಿನ ಮದರಸಾದಲ್ಲಿ ಕಲಿಯುತಿದ್ದಾಗ ತನ್ನ ಸ್ನೇಹಿತರಿಗೆ ತನ್ನ ದಾಖಲೆ ಮೂಲಕ ಅಬ್ದುಲ್ ಮತೀನ್ ಸಿಮ್ ಖರೀದಿಸಿ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಯಾರು ಯಾರಿಗೆ ಸಿಮ್ ನೀಡಿದ್ದೇನೆ ಎಂಬುವ ಮಾಹಿತಿಯನ್ನು ಕೇಂದ್ರ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದಾನೆ.

    ಕಳೆದ ಆರು ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಯಲ್ಲಾಪುರ-ಅಂಕೋಲ ಗಡಿಯಲ್ಲಿ ನಿಷೇಧಿತ ಸೆಟಲೈಟ್ ಫೋನ್‍ಗಳು ಸಕ್ರಿಯವಾಗಿದ್ದು, ಐದಕ್ಕೂ ಹೆಚ್ಚು ಬಾರಿ ಬಳಸಲಾಗಿದೆ. ಈ ಕುರಿತು ಸಹ ಜಿಲ್ಲಾ ಪೊಲೀಸರು, ಸಿಸಿಬಿ ಹಾಗೂ ಕೇಂದ್ರ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಕಾರವಾರ, ಯಲ್ಲಾಪುರ ಭಾಗದ ಕಾಡುಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಆದರೇ ಇದರ ಬಗ್ಗೆ ಹೆಚ್ಚಿನ ಮಾಹಿತಿ ದೊರಕದ ಹಿನ್ನೆಲೆಯಲ್ಲಿ ಬರಿಗೈಯಲ್ಲಿ ಹಿಂತಿರುಗುವಂತಾಗಿತ್ತು.

  • ಸಿಮ್ ಖರೀದಿಸಿದ್ರೆ ಕೆಜಿ ಈರುಳ್ಳಿ ಫ್ರಿ!

    ಸಿಮ್ ಖರೀದಿಸಿದ್ರೆ ಕೆಜಿ ಈರುಳ್ಳಿ ಫ್ರಿ!

    ಶಿವಮೊಗ್ಗ: ಆಫರ್‌ಗಳ ಮೇಲೆ ಆಫರ್‌ಗಳನ್ನು ಕೊಡುತ್ತಾ ಬರುತ್ತಿರುವ, ಅಗ್ಗದ ದರದಲ್ಲಿ (ಉಚಿತವಾಗಿ) ಕರೆ ಸೌಲಭ್ಯವನ್ನು ನೀಡಿದ ಜಿಯೋ ಸಂಸ್ಥೆ ಈಗ ದಿನಬಳಕೆ ವಸ್ತುಗಳ ಮೇಲೂ ಆಫರ್ ನೀಡಲು ಮುಂದಾಗಿದೆ.

    ಈರುಳ್ಳಿ ಬೆಲೆ ಶತಕ ಬಾರಿಸಿದ್ದೇ ತಡ ಈರುಳ್ಳಿ ಕೇಂದ್ರಿತ ಭಿನ್ನ ಭಿನ್ನ ಆಫರ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಈರುಳ್ಳಿಯನ್ನು ಜಿಯೋ ಸಂಸ್ಥೆ ಆಫರ್‌ನಲ್ಲಿ ನೀಡುತ್ತಿದೆ. ಸಿಮ್ ಖರೀದಿಸಿದರೆ ಒಂದು ಕೆಜಿ ಈರುಳ್ಳಿ ಉಚಿತವಾಗಿ ನೀಡುತ್ತಿದೆ. ಇದನ್ನೂ ಓದಿ: ಮೊಬೈಲ್ ಕೊಂಡ್ರೆ 1 ಕೆ.ಜಿ ಈರುಳ್ಳಿ ಫ್ರೀ

    ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮಕ್ಕೆ ಟೆಲಿಕಾಂ ಸಂಸ್ಥೆ ತಂಡ ಆಗಮಿಸಿದೆ. ಗ್ರಾಹಕರು 300 ರೂ. ಕೊಟ್ಟು ಸಿಮ್ ಖರೀದಿಸಿದರೆ, ಅವರಿಗೆ 120 ರೂ. ಬೆಲೆಯಿರುವ ಈರುಳ್ಳಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಮೂಲಕ ಟೆಲಿಕಾಂ ಸಂಸ್ಥೆ ಗ್ರಾಹಕರ ಗಮನವನ್ನು ಸೆಳೆಯುತ್ತಿದೆ.

  • ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಬಾಬಾ ರಾಮ್‍ದೇವ್

    ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಬಾಬಾ ರಾಮ್‍ದೇವ್

    ನವದೆಹಲಿ: ಪತಂಜಲಿ ಸಂಸ್ಥಾಪಕ ಯೋಗ ಗುರು ಬಾಬಾ ರಾಮ್‍ದೇವ್ ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ ಗಳನ್ನು ಬಿಎಸ್‍ಎನ್‍ಎಲ್ ಸಹಯೋಗದಲ್ಲಿ ಬಿಡುಗಡೆ ಮಾಡಿದ್ದಾರೆ. ವೇಗವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ(ಎಫ್‍ಎಂಸಿಜಿ) ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪತಂಜಲಿ ಬ್ರಾಂಡ್ ಈ ಮೂಲಕ ಅಧಿಕೃತವಾಗಿ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಯಾಗಿದೆ.

    ಮೊದಲಿಗೆ ಪತಂಜಲಿ ಸಿಬ್ಬಂದಿ ಹಾಗೂ ಕಾರ್ಮಿಕ ವರ್ಗದವರು ಸಿಮ್ ಕಾರ್ಡ್‍ನ ಉಪಯೋಗವನ್ನು ಪಡೆಯಲಿದ್ದಾರೆ. ನಂತರ ಗ್ರಾಹಕರು ಸಿಮ್ ಕಾರ್ಡ್ ಹೊಂದಿದ್ದಲ್ಲಿ ಪತಂಜಲಿ ಉತ್ಪನ್ನಗಳ ಮೇಲೆ ಶೇ.10ರ ವಿನಾಯಿತಿಯನ್ನು ಪಡೆಯಲಿದ್ದಾರೆ.

    144 ರೂ. ಗಳಿಗೆ ರೀಚಾರ್ಜ್ ಮಾಡಿಸಿದರೆ ದೇಶಾದ್ಯಂತ ಅನ್ ಲಿಮಿಟೆಡ್ ಕರೆಗಳನ್ನು ಮಾಡಬಹುದಾಗಿದೆ. ಜೊತೆಗೆ 2ಜಿಬಿ ಡೇಟಾ, 100 ಎಸ್‍ಎಂಎಸ್‍ಗಳು ಉಚಿತವಾಗಿ ದೊರೆಯಲಿದೆ. ಇಷ್ಟೇ ಅಲ್ಲದೇ ಗ್ರಾಹಕರಿಗೆ ಆರೋಗ್ಯ, ಅಪಘಾತ, ಜೀವ ವಿಮೆಗಳು ಇರಲಿವೆ ಎಂದು ಕಂಪೆನಿ ತಿಳಿಸಿದೆ.

    ಇದೇ ಸಂದರ್ಭದಲ್ಲಿ ಮಾತನಾಡಿದ ರಾಮ್‍ದೇವ್, ಬಿಎಸ್‍ಎನ್‍ಎಲ್ ಸ್ವದೇಶಿ ಕಂಪೆನಿಯಾಗಿರುವ ಕಾರಣ ದೇಶದ ಒಳಿತಿಗಾಗಿ ಕೈ ಜೋಡಿಸಿದ್ದೇವೆ. ಗ್ರಾಹಕರಿಗೆ ಮೆಡಿಕಲ್ ಹಾಗೂ ಜೀವ ವಿಮೆ ಕೂಡ ದೊರೆಯಲಿದ್ದು 2.5 ಲಕ್ಷ ರೂ. ಮತ್ತು 5 ಲಕ್ಷ ರೂ. ವರೆಗಿನ ಮಿತಿ ಇರಲಿದೆ ಎಂದು ತಿಳಿಸಿದರು.

    ಬಿಎಸ್‍ಎನ್‍ಎಲ್ ಜನರಲ್ ಮ್ಯಾನೇಜರ್ ಸುನಿಲ್ ಗಾರ್ಗ್ ಪತಂಜಲಿ ಜೊತೆಗಿನ ಸಹಯೋಗಕ್ಕೆ ಹರ್ಷವನ್ನು ವ್ಯಕ್ತಪಡಿಸಿದರು. ಪತಂಜಲಿ ಕಾರ್ಮಿಕರು ಗುರುತಿನ ಚೀಟಿ ತೋರಿಸಿ ಸಿಮ್ ಆಕ್ಟಿವೇಟ್ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

  • ಬೆಂಗಳೂರು ಶೋರೂಂನಲ್ಲಿ ಸಿಮ್ ಹಾಕ್ತಿದ್ದಾಗ ರೆಡ್‍ಮಿ ನೋಟ್ 4 ಮೊಬೈಲ್ ಸ್ಫೋಟ!- ವಿಡಿಯೋ ನೋಡಿ

    ಬೆಂಗಳೂರು ಶೋರೂಂನಲ್ಲಿ ಸಿಮ್ ಹಾಕ್ತಿದ್ದಾಗ ರೆಡ್‍ಮಿ ನೋಟ್ 4 ಮೊಬೈಲ್ ಸ್ಫೋಟ!- ವಿಡಿಯೋ ನೋಡಿ

    ಬೆಂಗಳೂರು: ರೆಡ್ ಮೀ ನೋಟ್ 4 ಫೋನ್ ಇದ್ದಕ್ಕಿದ್ದಂತೆಯೇ ಸ್ಫೋಟವಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಚೀನಾ ಮೂಲದ ಕ್ಸಿಯೋಮಿ ಕಂಪನಿಯ ರೆಡ್ ಮಿ ನೋಟ್ 4 ಮೊಬೈಲ್ ಫೋನನ್ನು ಅರ್ಜುನ್ ಎಂಬವರು ಮೊಬೈಲ್ ಶೋರೂಂದರಿಂದ ಖರೀದಿಸಿದ್ದಾರೆ.  ಬಳಿಕ ಸ್ಥಳೀಯ ಮೊಬೈಲ್ ಶಾಪ್ ಒಂದರಲ್ಲಿ ಸಿಮ್ ಹಾಕುತ್ತಿದ್ದ ವೇಳೆ ರೆಡ್‍ಮಿ ನೋಟ್ 4 ಇದ್ದಕ್ಕಿದ್ದಂತೆಯೇ ಬ್ಲಾಸ್ಟ್ ಆಗಿದೆ.

    ಘಟನೆಯಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಕೂಡಲೇ ಅವರು ಕಂಪೆನಿಗೆ ದೂರು ನೀಡಿದ್ದು, ಬಳಿಕ ಕಂಪನಿ ಫೋನ್ ರಿಪ್ಲೇಸ್‍ಮೆಂಟ್ ಮಾಡಿಕೊಟ್ಟಿದೆ. ಕ್ಸಿಯೋಮಿ ಹೊಸ ಮೊಬೈಲ್ ನೀಡಿದ್ದಕ್ಕೆ ಗ್ರಾಹಕ ಅರ್ಜುನ್ ಧನ್ಯವಾದ ಹೇಳಿದ್ದಾರೆ.

    ಸ್ಫೋಟ ಹೇಗಾಯ್ತು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕ್ಸಿಯೋಮಿ ತಿಳಿಸಿದೆ. ಜುಲೈ 17ಕ್ಕೆ ಈ ಘಟನೆ ನಡೆದಿದ್ದು, ಮೊಬೈಲ್ ಸ್ಫೋಟಗೊಳ್ಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.