Tag: silvio berlusconi

  • ನಿಧನಕ್ಕೂ ಮುನ್ನ 33 ವರ್ಷದ ಗೆಳತಿಯ ಹೆಸರಲ್ಲಿ 900 ಕೋಟಿ ಆಸ್ತಿ ಬರೆದಿಟ್ಟ ಇಟಲಿ ಮಾಜಿ ಪ್ರಧಾನಿ

    ನಿಧನಕ್ಕೂ ಮುನ್ನ 33 ವರ್ಷದ ಗೆಳತಿಯ ಹೆಸರಲ್ಲಿ 900 ಕೋಟಿ ಆಸ್ತಿ ಬರೆದಿಟ್ಟ ಇಟಲಿ ಮಾಜಿ ಪ್ರಧಾನಿ

    ರೋಮ್: ಇಟಲಿಯ ಮಾಜಿ ಪ್ರಧಾನಿ (Former Italian Prime Minister) ಸಿಲ್ವಿಯೊ ಬೆರ್ಲುಸ್ಕೋನಿ (Silvio Berlusconi) ಅವರು ಕಳೆದ ತಿಂಗಳು ನಿಧನರಾಗಿದ್ದಾರೆ. ಅವರು ಸಾವನ್ನಪ್ಪುವುದಕ್ಕೂ ಮುನ್ನ ತನ್ನ 33 ವರ್ಷದ ಗೆಳತಿಯ (Girlfriend) ಹೆಸರಿನಲ್ಲಿ ಬರೋಬ್ಬರಿ 900 ಕೋಟಿ ರೂ. ಮೌಲ್ಯದ ಆಸ್ತಿ ಬರೆದಿರುವುದಾಗಿ ವರದಿಯಾಗಿದೆ.

    86 ವರ್ಷದ ಬೆರ್ಲುಸ್ಕೋನಿ ಅವರು 33 ವರ್ಷದ ಮಾರ್ಟಾ ಫಾಸಿನಾ ಅವರನ್ನು ಪ್ರೀತಿಸುತ್ತಿದ್ದರು. ಆದರೆ ಮದುವೆಯಾಗಿರಲಿಲ್ಲ. ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಜೂನ್ 12 ರಂದು ನಿಧನರಾಗಿದ್ದಾರೆ. ಅವರ ಕೊನೆ ದಿನಗಳಲ್ಲಿ ತಮ್ಮ ಗೆಳತಿಯನ್ನು ಪತ್ನಿ ಎಂದು ಉಲ್ಲೇಖಿಸಿ ತಮ್ಮ ಸುಮಾರು 905 ಕೋಟಿ ರೂ. ಮೌಲ್ಯದ ಆಸ್ತಿಯನ್ನು (100 ದಶಲಕ್ಷ ಯುರೋ) ಬರೆದಿದ್ದಾರೆ.

    ಸಿಲ್ವಿಯೊ ಬರ್ಲುಸ್ಕೋನಿ ಹಾಗೂ ಮಾರ್ಟಾ ಫಾಸಿನಾ ನಡುವೆ 2020ರಲ್ಲಿ ಪ್ರೇಮಾಂಕುರವಾಗಿತ್ತು. ಈ ಹಿಂದೆ ಇಬ್ಬರನ್ನು ಮದುವೆಯಾಗಿದ್ದ ಇಟಲಿಯ ಮಾಜಿ ಪ್ರಧಾನಿ ಇಬ್ಬರಿಗೂ ವಿಚ್ಛೇದನ ನೀಡಿ ಬಳಿಕ ಮಾರ್ಟಾ ಫಾಸಿನಾ ಜೊತೆ ಸಂಬಂಧ ಬೆಳೆಸಿದ್ದರು. ಇದನ್ನೂ ಓದಿ: ಅನಾರೋಗ್ಯ ಪೀಡಿತ ತಂದೆ ನೋಡಲು ಹೋಗಿ ಅನಾರೋಗ್ಯಕ್ಕೀಡಾದ ಮದನಿ

    ವರದಿಗಳ ಪ್ರಕಾರ ಬರ್ಲುಸ್ಕೋನಿ ಅವರ ಸಂಪತ್ತನ್ನು 5 ಶತಕೋಟಿ ಯೂರೋಗಳೆಂದು ಅಂದಾಜಿಸಲಾಗಿದೆ. ಅವರು ದೊಡ್ಡ ಉದ್ಯಮಿಯೂ ಆಗಿದ್ದರಿಂದ ತಮ್ಮ ಗೆಳತಿಯ ಹೆಸರಿನಲ್ಲಿ ದೊಡ್ಡ ಮೊತ್ತದ ಆಸ್ತಿಯನ್ನು ಬರೆದಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೇ ಬರ್ಲುಸ್ಕೋನಿ ಅವರು ತಮ್ಮ ಕುಟುಂಬಸ್ಥರ ಹೆಸರಿನಲ್ಲೂ ಆಸ್ತಿಯನ್ನು ಬರೆದಿದ್ದಾರೆ. ತಮ್ಮ ಸಹೋದರ ಪಾವೋಲೊ ಅವರಿಗೆ 100 ದಶಲಕ್ಷ ಯೂರೋ, ಇಬ್ಬರು ಮಕ್ಕಳಿಗೆ ಕಂಪನಿಯಲ್ಲಿ 53% ರಷ್ಟು ಶೇರುಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಶೋನಲ್ಲೇ ‘ಧಮ್’ ಹೊಡೆದ ಸಲ್ಮಾನ್ ಖಾನ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ನಿಧನ

    ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ನಿಧನ

    ರೋಮ್: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ (86) (Silvio Berlusconi) ನಿಧನರಾಗಿದ್ದಾರೆ.

    ಸಿಲ್ವಿಯೊ ಬೆರ್ಲುಸ್ಕೋನಿ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 2016 ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 2020ರಲ್ಲಿ ಕೊರೊನಾ ವೈರಸ್‍ (Corona Virus) ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. 6 ವಾರಗಳ ಹಿಂದೊಮ್ಮೆ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಆಗಿದ್ದರು. ಅದಾದ ಬಳಿಕ ಕಳೆದ ಶುಕ್ರವಾರ ಮಾಜಿ ಪ್ರಧಾನಿಯನ್ನು ಮಿಲನ್ ಆಸ್ಪತ್ರೆ (Milan Hospital) ಗೆ ದಾಖಲಿಸಲಾಗಿತ್ತು. ಈ ವೇಳೆ ಅಪರೂಪದ ರಕ್ತದ ಕ್ಯಾನ್ಸರ್ (Blood Cancer) ಇದೆ ಎಂದು ವೈದ್ಯರು ಬಹಿರಂಗಪಡಿಸಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    1994 ಮತ್ತು 2011 ರ ನಡುವೆ ಒಟ್ಟು 9 ವರ್ಷಗಳ ಕಾಲ ಮೂರು ಬಾರಿ ಇಟಲಿಯ ಪ್ರಧಾನ ಮಂತ್ರಿಯಾದರು. ಆದರೆ ಲೈಂಗಿಕ ಹಗರಣಗಳು ಮತ್ತು ಭ್ರಷ್ಟಾಚಾರ ಆರೋಪಗಳಿಂದಾಗಿ ಪ್ರಧಾನಿ ಹುದ್ದೆಯಿಂದ ಹಿಂದೆ ಸರಿದಿದ್ದರು. ಸದ್ಯ ಅವರು ತಮ್ಮ 33 ವರ್ಷದ ಗೆಳತಿ ಮಾರ್ಟಾ ಫಾಸಿನಾ, ಇಬ್ಬರು ಮಾಜಿ ಪತ್ನಿಯರು ಮತ್ತು ಐದು ಮಕ್ಕಳನ್ನು ಅಗಲಿದ್ದಾರೆ.

    ಸಿಲ್ವಿಯೊ ಬೆರ್ಲುಸ್ಕೋನಿ ಅವರ ಸಾವು ದೊಡ್ಡ ನಷ್ಟವನ್ನು ಉಂಟುಮಾಡಿದೆ. ಅವರು ಒಬ್ಬ ಮಹಾನ್ ವ್ಯಕ್ತಿ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ ಎಂದು ಇಟಾಲಿಯನ್ ರಕ್ಷಣಾ ಸಚಿವ ಗಿಡೋ ಕ್ರೊಸೆಟ್ಟೊ ಟ್ವಿಟರ್‍ನಲ್ಲಿ ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆಸಿದ್ದ ಪುಂಡ ಅರೆಸ್ಟ್‌