ಬೆಂಗಳೂರು: ಕೊರಿಯಾದಲ್ಲಿ ನಡೆದ 20ನೇ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಧನುಷ್ ಬಾಬು ಬೆಳ್ಳಿ ಪದಕ ಜಯಿಸಿದ್ದಾರೆ.
200 ಮೀಟರ್ ಟೈಮ್ ಟ್ರಯಲ್ ರೇಸ್‌ನಲ್ಲಿ ಅವರು ಪ್ರಬಲ ಪೈಪೋಟಿ ನೀಡುವ ಮೂಲಕ ಬೆಳ್ಳಿ ಪದಕ ವಿಜೇತರಾದರು. ಧನುಷ್ ಬೆಂಗಳೂರಿನ ಕರ್ನಾಟಕ ಸಿಟಿ ಸ್ಕೇಟರ್ಸ್ ತಂಡದ ಸದಸ್ಯರಾಗಿದ್ದಾರೆ.
ಬಸವೇಶ್ವರನಗರದ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿರೋ ಅವರು, ಸ್ವತಃ ಕೋಚ್ ಆಗಿರುವ ಬಾಲಾಜಿ ಬಾಬು ಹಾಗೂ ಸುಧಾ ಅವರ ಪುತ್ರನಾಗಿದ್ದಾರೆ. ಇವರ ಸಹೋದರಿ ಮೌನ ಬಾಬು ಕೂಡಾ ರಾಷ್ಟ್ರೀಯ ಮಟ್ಟದ ಸ್ಕೇಟರ್ ಆಗಿದ್ದಾರೆ.
ಪ್ಯಾರಿಸ್: ಪ್ರಸ್ತುತ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ (Paris Paralympics) ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ. 2ನೇ ದಿನ ಭಾರತೀಯ (India) ಕ್ರೀಡಾಪಟುಗಳು ಪ್ರಾಬಲ್ಯ ಮೆರೆದಿದ್ದಾರೆ. ಶುಕ್ರವಾರ ಶೂಟಿಂಗ್‌ನಲ್ಲಿ ಮೂರು ಪದಕಗಳು ಹಾಗೂ 100 ಮೀಟರ್ ರಿಲೇ ವಿಭಾಗದಲ್ಲಿ 1 ಪದಕ ಭಾರತದ ಪಾಲಾಗಿದೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ SH1 ವಿಭಾಗದ ಫೈನಲ್‌ನಲ್ಲಿ ಶೂಟರ್ ಅವನಿ ಲೆಖರಾ ಮತ್ತು ಮೋನಾ ಅಹರ್ವಾಲ್ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದು ಬೀಗಿದರು. ಈ ಬೆನ್ನಲ್ಲೇ ಚಟೌರೊಕ್ಸ್‌ನಲ್ಲಿ ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ (SH1) ವಿಭಾಗದಲ್ಲಿ ಶೂಟರ್ ಮನೀಷ್ ನರ್ವಾಲ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಕಠಿಣ ಪೈಪೋಟಿ ನೀಡಿದ್ದ ನರ್ವಾಲ್ 2+ ಪಾಯಿಂಟ್‌ಗಳ ಅಂತರದಲ್ಲಿ ಚಿನ್ನದ ಪದಕದಿಂದ ವಂಚಿತರಾದರು.
Despite stiff competition, Preeti turned up with her personal best performance.
The 23-year-old finished the 100m run within 14.21 seconds and sealed India’s second Bronze so far at the… pic.twitter.com/vncnlZvoO4
22 ವರ್ಷ ವಯಸ್ಸಿನ ಮನೀಷ್ ನರ್ವಾಲ್ (Manish Narwal) ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಪ್ರಸಕ್ತ ಸ್ಪರ್ಧೆಯಲ್ಲೂ ಫೈನಲ್ ವರೆಗೆ ಕಠಿಣ ಪೈಪೋಟಿ ನೀಡಿದರು. ಆದ್ರೆ ದಕ್ಷಿಣ ಕೊರಿಯಾದ ಅನುಭವಿ ಶೂಟರ್ ಜೊ ಜಿಯೊಂಗ್ಡು 237.4 ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ನರ್ವಾಲ್ 234.9 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
Congratulations to Preeti Pal for winning the Bronze medal! ???????? 3rd medal for India at #Paralympics2024!
ಪ್ರೀತಿ ಪಾಲ್ ಕಂಚಿನ ಓಟ:
ಇನ್ನೂ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ನಡೆದ ಮಹಿಳೆಯರ 100 ಮೀ-ಟಿ 35 ಫೈನಲ್‌ನಲ್ಲಿ ಪ್ರೀತಿ ಪಾಲ್ (Preethi Pal) 3ನೇ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. 23 ವರ್ಷ ವಯಸ್ಸಿನ ಪ್ರೀತಿ ಪಾಲ್ 14.21 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ 3ನೇ ಸ್ಥಾನ ಗಳಿಸಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯೂ ಆಗಿದೆ ಎಂದು ತಿಳಿದುಬಂದಿದೆ.
ಚೀನಾದ ವಿಶ್ವದಾಖಲೆ ಓಟಗಾರ್ತಿ ಝೌ ಕ್ಸಿಯಾ 13.58 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರೆ, ಗುವೊ ಕಿಯಾನ್ಕಿಯಾನ್ 13.74 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದುಕೊಂಡರು.
ಪ್ರೀತಿ ಪಾಲ್ ಅವರು 2024ರಲ್ಲಿ ನಡೆದಿದ್ದ ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ, ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಇಂಟರ್ನ್ಯಾಷನಲ್ ಚಾಂಪಿಯನ್‌ಶಿಪ್ (2024) ಮತ್ತು ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ (2024) ಎರಡರಲ್ಲೂ ಚಿನ್ನದ ಪದಕ ವಿಜೇತರಾಗಿದ್ದಾರೆ. ಆದ್ರೆ ಕಳೆದ ವರ್ಷ ಹ್ಯಾಂಗ್‌ಝೌನಲ್ಲಿ ನಡೆದ 2022ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 4ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದರು.
ಪ್ಯಾರಿಸ್: ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರು ಸಲ್ಲಿಸಿರುವ ಮೇಲ್ಮನವಿ ಮೇಲಿನ ತೀರ್ಪನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯ ಮಂಡಳಿ (CAS) ಮತ್ತೆ ಮುಂದಕ್ಕೆ ಹಾಕಿದೆ. ಭಾರತೀಯ ಕಾಲಮಾನ ಮಂಗಳವಾರ ರಾತ್ರಿ ತೀರ್ಪು ಪ್ರಕಟವಾಗಬೇಕಿತ್ತು. ಆದರೆ ಈಗ ಆ.16 ರಂದು ತೀರ್ಪು ನೀಡುವುದಾಗಿ ಪ್ರಕಟಿಸಿದೆ.
ನಿಗದಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಫೋಗಟ್ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಮಹಿಳೆಯರ ಕುಸ್ತಿ ಸ್ಪರ್ಧೆಯ 50 ಕೆ.ಜಿ. ವಿಭಾಗದ ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು.ಕ್ರೀಡಾಕೂಟದ ಸಂದರ್ಭದಲ್ಲಿ ವಿವಾದ ಪರಿಹಾರಕ್ಕಾಗಿ ವಿಶೇಷವಾಗಿ ಸ್ಥಾಪಿಸಲಾಗಿರುವ ಸಿಎಎಸ್‌ನ ತಾತ್ಕಾಲಿಕ ವಿಭಾಗಕ್ಕೆ ತಮ್ಮ ವಿರುದ್ಧದ ಕ್ರಮ ಪ್ರಶ್ನಿಸಿ ವಿನೇಶ್ ಆ.9 ರಂದು ಮೇಲ್ಮನವಿ ಸಲ್ಲಿಸಿದ್ದರು.
ಫೈನಲ್ ಪಂದ್ಯದ ಮುನ್ನಾದಿನ ನಾನು ಮೂರು ಪಂದ್ಯವನ್ನು ಆಡಿದ್ದೇನೆ. ಆ ದಿನ ನಿಗದಿತ 50 ಕೆಜಿ ತೂಕದ ಮಿತಿಯಲ್ಲಿ ಇದ್ದ ಕಾರಣ ಜಂಟಿಯಾಗಿ ಬೆಳ್ಳಿ ಪದಕದ ಗೌರವ ನೀಡಬೇಕೆಂದು ಮನವಿ ಮಾಡಿದ್ದರು.
ವಿನೇಶ್ ಫೋಗಟ್ ಪರವಾಗಿ ಖ್ಯಾತ ವಕೀಲ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಬೀಜಿಂಗ್: ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ (Aditi Ashok) ಅವರು ಏಷ್ಯನ್ ಗೇಮ್ಸ್ 2023ರಲ್ಲಿ (Asian Games 2023) ಐತಿಹಾಸಿಕ ಬೆಳ್ಳಿ ಪದಕ (Silver Medal) ಗೆದ್ದು ದೇಶಕ್ಕೆ ಹಿರಿಮೆ ತಂದುಕೊಟ್ಟಿದ್ದಾರೆ.
ಭಾನುವಾರ ಬೆಳಗ್ಗೆ ನಡೆದ ಗಾಲ್ಫ್ ಫೈನಲ್ ಪಂದ್ಯದಲ್ಲಿ ಅದಿತಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ಗಾಲ್ಫ್ (Golf) ಕ್ರೀಡೆಯಲ್ಲಿ ಪದಕ ಗೆದ್ದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಅದಿತಿ ಅಶೋಕ್ ಪಾತ್ರರಾಗಿದ್ದಾರೆ.
ಶನಿವಾರ 3ನೇ ಸುತ್ತಿನ ಪಂದ್ಯದ ಬಳಿಕ ಅದಿತಿ ಚಿನ್ನ ಗಳಿಸಲು ಹೆಜ್ಜೆಯಿಟ್ಟಿದ್ದರು. 7 ಸ್ಟ್ರೋಕ್ ಮುನ್ನಡೆಯೊಂದಿಗೆ ಆಟವನ್ನು ಆರಂಭಿಸಿದ ಅವರಿಗೆ ಮೊದಲ ಸ್ಥಾನವನ್ನು ಗಳಿಸಲು ಉತ್ತಮ ಅವಕಾಶವಿತ್ತು. ಆದರೆ ಕೊನೆಯ 3 ಹೊಡೆತದಲ್ಲಿ ಹಿನ್ನಡೆ ಅನುಭವಿಸಿ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಥೈಲ್ಯಾಂಡ್‌ನ ಅರ್ಪಿಚುಯಾ ಯುಬೋಲ್ ಚಿನ್ನದ ಪದಕವನ್ನು ಬಾಚಿಕೊಂಡಿದ್ದಾರೆ. ಇದನ್ನೂ ಓದಿ: Asian Games 2023: ಎದುರಾಳಿ ಪಾಕ್ ವಿರುದ್ಧ ಭಾರತಕ್ಕೆ ಜಯ – ಸ್ಕ್ವಾಷ್‌ನಲ್ಲಿ ಚಿನ್ನದ ಬೇಟೆ
ಬರ್ಮಿಂಗ್‌ಹ್ಯಾಮ್: ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುರಿದಿದ್ದು, 6ನೇ ದಿನ ಮಹಿಳೆಯರ 78 ಕೆಜಿ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಭಾರತದ ತುಲಿಕಾ ಮಾನ್ ಅವರು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.
ತುಲಿಕಾ ಮಾನ್ ಅವರು ಇಂದು ನಡೆದ ಮಹಿಳೆಯರ 78 ಕೆಜಿ ವಿಭಾಗದ ಫೈನಲ್‌ನಲ್ಲಿ ಸ್ಕಾಟ್ಲೆಂಡ್‌ನ ಸಾರಾ ಅಡ್ಲಿಂಗ್ಟನ್ ವಿರುದ್ಧ ಪರಾಭವಗೊಳ್ಳುವ ಮೂಲಕ ಬೆಳ್ಳಿಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಜೂಡೋದಲ್ಲಿ ಭಾರತಕ್ಕೆ ಇದು 3ನೇ ಪದಕವಾಗಿದೆ. ಇದನ್ನೂ ಓದಿ: CWG 2022: ಲಾನ್ ಬಾಲ್ಸ್‌ನಲ್ಲಿ ಚಿನ್ನ – ವರ್ಕೌಟ್ ಆಯ್ತು ಧೋನಿ ಟಿಪ್ಸ್!
ತುಲಿಕಾ ಮಾನ್ ಅವರ ಈ ಸಾಧನೆಯೊಂದಿಗೆ ಭಾರತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 5 ಚಿನ್ನ, 6 ಬೆಳ್ಳಿ ಹಾಗೂ 7 ಕಂಚು ಸಹಿತ 18 ಪದಕಗಳನ್ನು ಪಡೆದುಕೊಂಡಿದ್ದು, ಟಾಪ್-10 ಪಟ್ಟಿಯಲ್ಲೇ ಸ್ಥಾನ ಉಳಿಸಿಕೊಂಡಿದೆ.
Live Tv
[brid partner=56869869 player=32851 video=960834 autoplay=true]
ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನ ಗುಂಪು ಹಂತದ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಕೈಚೆಲ್ಲಿದ್ದ ಭಾರತ ಫೈನಲ್ಸ್‌ನಲ್ಲಿ ಮಲೇಷ್ಯಾ ವಿರುದ್ಧ 1-3 ಅಂತರದಲ್ಲಿ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ ಶ್ರೀಕಾಂತ್ ಮಲೇಷ್ಯಾದ ಕೆಳಕ್ರಮಾಂಕದ ಆಟಗಾರ ತ್ಸೆಯಾಂಗ್ ಜಿ-ವಿರುದ್ಧ ಸೋಲು ಅನುಭವಿಸಿದ್ದು, ತಂಡದ ಸೋಲಿಗೆ ಕಾರಣವಾಯಿತು. ಅಲ್ಲದೇ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ಸೋಲನುಭವಿಸಿದರು. ಇದರಿಂದ ತಂಡ 2-0 ಯಿಂದ ಹಿನ್ನಡೆ ಕಾಯ್ದುಕೊಂಡಿತು. ಇದನ್ನೂ ಓದಿ: ವೇಟ್ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ 8ನೇ ಪದಕ – ವಿಕಾಸ್ ಠಾಕೂರ್‌ಗೆ ಬೆಳ್ಳಿ
ಮಹಿಳಾ ಸಿಂಗಲ್ಸ್‌ನಲ್ಲಿ ಮಲೇಷ್ಯಾದ ಗೋಹ್ ಜಿನ್ ವೀ ಅವರು, 2 ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧುಗೆ ಸುಲಭ ತುತ್ತಾದರು. ಮೊದಲು ನಡೆದ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಒಲಿಂಪಿಕ್ ಕಂಚಿನ ಪದಕ ವಿಜೇತ ಜೋಡಿಯಾದ ಮಲೇಷ್ಯಾದ ಟೆಂಗ್ ಫಾಂಗ್ ಆರನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಎದುರಿಸಿತು. ಕಠಿಣ ಸವಾಲು ಒಡ್ಡಿದ ಚಿಯಾ ಸೋಹ್ ಜೋಡಿ ಭಾರತದ ಎದುರು 21-18, 21-15 ನೇರ ಸೆಟ್‌ಗಳಿಂದ ಪಂದ್ಯ ಜಯಿಸಿತು. ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಸಿಂಗಲ್ಸ್‌ನಲ್ಲಿ ಸಿಂಧುಗೆ ಜಯ: ನಂತರ ನಡೆದ ಮಹಿಳೆಯರ ಸಿಂಗಲ್ಸ್ನಲ್ಲಿ ಪಿವಿ ಸಿಂಧು, ಗೋಹ್ ಜಿನ್ ವೀ ಸವಾಲು ಎದುರಿಸಿದರು. 22-20, 21-17 ನೇರ ಸೆಟ್‌ಗಳಿಂದ ಸಿಂಧು ಜಯಿಸುವ ಮೂಲಕ 1-1 ರಲ್ಲಿ ಸಮಬಲ ಸಾಧಿಸಿದರು. ವಿಶ್ವ ಕ್ರಮಾಂಕದಲ್ಲಿ 40ನೇ ಸ್ಥಾನದಲ್ಲಿದ್ದ ಮಲೇಷ್ಯಾದ ಗೋಹ್, 7ನೇ ಕ್ರಮಾಂಕದಲ್ಲಿರುವ ಸಿಂಧುಗೆ ಕಠಿಣ ಸವಾಲು ಒಡ್ಡಿದರು. ಇದನ್ನೂ ಓದಿ: ಇಂದು ಸುವರ್ಣ ದಿನ- ಟೇಬಲ್ ಟೆನಿಸ್‍ನಲ್ಲಿ ಚಿನ್ನ ಗೆದ್ದ ಭಾರತ
ಶ್ರೀಕಾಂತ್‌ಗೆ ಸೋಲು: ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ 14 ನೇ ಶ್ರೇಯಾಂಕಿತ, ಭಾರತದ ಅಗ್ರ ಶೆಟ್ಲರ್ ಕಿಡಂಬಿ ಶ್ರೀಕಾಂತ್ ತ್ಸೆಯಾಂಗ್ ಜಿ ವಿರುದ್ಧ ಸೋತು ಶಾಕ್ ನೀಡಿದರು. 21-19, 6-21, 21-16 ಮೂರು ಸೆಟ್‌ಗಳಲ್ಲಿ ನಡೆದ ಆಟದಲ್ಲಿ ತ್ಸೆಯಾಂಗ್ ಜಿ ಗೆಲುವು ಸಾಧಿಸಿದರು.
ನಿರ್ಣಾಯಕ ಪಂದ್ಯವಾದ ಮಹಿಳೆಯರ ಮಿಶ್ರ ಡಬಲ್ಸ್‌ನಲ್ಲಿ ವಿಶ್ವದ 11ನೇ ಶ್ರೇಯಾಂಕದ ಮಲೇಷ್ಯಾ ಜೋಡಿಯಾದ ಥಿನಾ ಮುರಳೀಧರನ್ ಮತ್ತು ಕೂಂಗ್‌ಲೆ ಪರ್ಲಿ ತಾನ್ ಭಾರತದ ಜೋಡಿಯಾದ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜಾಲಿ ವಿರುದ್ಧ 21-18, 21-17ರ ನೇರ ಸೆಟ್‌ಗಳಿಂದ ಸುಲಭ ಜಯ ಸಾಧಿಸಿದರು. ಈ ಮೂಲಕ ತಂಡ 1-3ರ ಅಂತರದಲ್ಲಿ ಚಿನ್ನಕ್ಕೆ ಕೊರಳೊಡ್ಡಿತು. ಭಾರತ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
Live Tv
[brid partner=56869869 player=32851 video=960834 autoplay=true]
ಬರ್ಮಿಂಗ್‌ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪದಕದ ಬೇಟೆ ಆರಂಭಸಿದ್ದು, ಈಗಾಗಲೇ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದೆ. 21ರ ತರುಣ ಸಂಕೇತ್ ಮಹಾದೇವ್ ಸರ್ಗರ್ ಬೆಳ್ಳಿ ಪದಕ ಪಡೆಯುವ ಮೂಲಕ ಭಾರತದ ಖಾತೆ ತೆರೆದಿದ್ದಾರೆ.
ಸಂಕೇತ್ ಮಹಾದೇವ್ ಸರ್ಗರ್ (21) ಪುರುಷರ ವಿಭಾಗದ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 248 ಕೆಜಿ (113+135) ಭಾರ ಎತ್ತುವ ಮೂಲಕ ಬೆಳ್ಳಿ ಕಿರೀಟ ಧರಿಸಿದ್ದಾರೆ. ಇಂದು ದೇಶವೇ ಹೆಮ್ಮೆ ಪಡುವ ಮಟ್ಟದಲ್ಲಿ ಅವರು ಸಾಧನೆ ಮಾಡಿದ್ದಾರೆ. ಆದರೆ ಸಂಕೇತ್ ಹಿನ್ನೆಲೆ ಕೇಳಿದ್ರೆ ಪ್ರತಿಯೊಬ್ಬರು ಅಚ್ಚರಿ ಪಡುತ್ತಾರೆ. ಜೀವನೋಪಾಯಕ್ಕಾಗಿ ಪಾನ್ ಬೀಡಾ, ಚಹಾ ಮಾರಿಕೊಂಡಿದ್ದ ಸಂಕೇತ್ ಇಂದು ದೇಶವೇ ಕೊಂಡಾಡುವ ಕ್ರೀಡಾಪಟುವಾಗಿದ್ದಾರೆ. ಇದನ್ನೂ ಓದಿ: ಭಾರತದ ಪದಕ ಬೇಟೆ ಆರಂಭ – ಸಂಕೇತ್‌ಗೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ
ಯಾರಿದು ಸಂಕೇತ್ ಸರ್ಗರ್?
1990ರ ದಶಕದಲ್ಲಿ ಜೀವನೋಪಾಯಕ್ಕಾಗಿ ಮಹಾರಾಷ್ಟ್ರದ ಸಾಂಗ್ಲಿಗೆ ಬಂದ ಸಂಕೇತ್ ಮೊದಲು ತಳ್ಳುಗಾಡಿಯಿಂದ ಹಣ್ಣುಗಳನ್ನು ಮಾರುವ ವೃತ್ತಿ ಆರಂಭಿಸಿದರು. ನಂತರದಲ್ಲಿ ಪಾನ್ ಶಾಪ್ ತೆರೆದು, ಇದರ ಪಕ್ಕದಲ್ಲೇ ಚಹಾ ಹಾಗೂ ಸಣ್ಣ ಉಪಾಹಾರ ಮಂದಿರವನ್ನೂ ತೆರೆದರು. ಇದರಿಂದಾಗಿ ಇವರ ಚಿತ್ತವೆಲ್ಲವೂ ವ್ಯವಹಾರವನ್ನು ನಡೆಸಲು ಸಹಾಯ ಮಾಡುವುದೇ ಆಗಿತ್ತು. ಸಂಕೇತ್ ಪಾನ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿಬಿಟ್ಟಿದ್ದರು. ಚಿಕ್ಕ ವಯಸ್ಸಿನಲ್ಲೇ ಸಾದಾ ಪಾನ್, ಮೀಟಾ ಪಾನ್ (ಸ್ವೀಟ್ ಪಾನ್), ಮಸಾಲೆ ಪಾನ್ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಇದರೊಂದಿಗೆ ಚಾಯ್, ವಡಾ ಪಾವ್ ಹಾಗೂ ಕಂಡಪೋವಾ ಮಾಡುವುದರಲ್ಲೂ ಎತ್ತಿದ ಕೈ.
ಸಂಕೇತ್ ಕ್ರೀಡಾಪಟು ಆಗಬೇಕು ಅನ್ನೋ ಕನಸೇ ಇರಲಿಲ್ಲ. ಅದು ಸಾಧ್ಯವಿಲ್ಲವೆಂದು ಅವರೇ ನಿರ್ಧರಿಸಿದ್ದರು. ಒಂದೊಮ್ಮೆ ಸಂಕೇತ್ ತಂದೆ ತಮ್ಮ ಅಂಗಡಿ ಪಕ್ಕದಲ್ಲೇ ವೇಟ್‌ಲಿಫ್ಟಿಂಗ್ ಜಿಮ್‌ಗೆ ಸೇರಿಸಿದರು. ಮಾರನೇ ದಿನ ಬೆಳಗ್ಗೆ 6.30ಕ್ಕೆ ತರಬೇತಿಗೆ ಬರಬೇಕು ಎಂದು ಕೋಚ್ ಹೇಳಿದರು. ಮಾರನೇ ದಿನದಿಂದ ನಿರಂತರ ಅಭ್ಯಾಸವಾಯಿತು. ‘ಮೊದಲು ಲಿಫ್ಟ್ ಮಾಡುವಾಗ ಅಷ್ಟೇನೂ ಪ್ರೀತಿ ಇರಲಿಲ್ಲ. ಏಕೆಂದರೆ ಅದು ಕಷ್ಟವೋ ಸುಲಭವೋ ಎಂದೂ ನಾನು ಯೋಚಿಸಿರಲಿಲ್ಲ. ಆದರೆ ಹೆಚ್ಚೆಚ್ಚು ಕಲಿಯುತ್ತಲೇ ಇದ್ದೆ. ಕಲಿತಷ್ಟು ಬಲಶಾಲಿಯಾಗುತ್ತಿದ್ದೆ’ ಎಂದು ಅವರು ಹೇಳಿಕೊಂಡಿದ್ದಾರೆ.
ಜಿಮ್ ಪ್ರಾರಂಭವಾದ ಒಂದೆರಡು ವರ್ಷಗಳ ನಂತರ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ಆ ವೇಳೆಗೆ ಜಿಲ್ಲಾಮಟ್ಟದ ಸ್ಪರ್ಧೆಗಳ ಬಗ್ಗೆಯೂ ಸಂಕೇತ್‌ಗೆ ತಿಳಿದಿರಲಿಲ್ಲ. ಇದರ ಹೊರತಾಗಿಯೂ 9ನೇ ತರಗತಿಯಲ್ಲಿದ್ದಾಗ ವಿಭಾಗೀಯ ಸ್ಪರ್ಧೆಯಲ್ಲಿ ಭಾಗವಹಿಸಿ, ತರಬೇತಿ ಇಲ್ಲದೆಯೇ ಬೆಳ್ಳಿ ಪಡೆದುಕೊಂಡಿದ್ದರು. ಸಂಕೇತ್ ಸರ್ಗರ್ 13 ವರ್ಷ ವಯಸ್ಸಿನವರಾಗಿದ್ದಾಗ ಕುಸ್ತಿ ಅಖಾಡಕ್ಕಿಳಿದರು. ಅಲ್ಲಿಂದ ಒಂದಿಲ್ಲೊಂದು ಪದಕಗಳನ್ನು ಮುಡಿಗೇರಿಸಿಕೊಂಡರು. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಕರ್ನಾಟಕದ ಗುರುರಾಜ್‌ಗೆ ಕಂಚು – ಭಾರತಕ್ಕೆ 2ನೇ ಪದಕ
𝙂𝙧𝙞𝙩. 𝙋𝙖𝙞𝙣. 𝙂𝙡𝙤𝙧𝙮. 👊
Sanket Sargar refused to give up even after hurting his right elbow on the second clean and jerk lift 💪
ಇವರು ಪ್ರಖ್ಯಾತ ವೇಟ್‌ಲಿಫ್ಟಿಂಗ್ ಕೋಚ್ ವಿಜಯ್ ಶರ್ಮಾ ಅವರ ನೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬರು. ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಭಾರತ ಸರ್ಕಾರವು ಆತಿಥೇಯ ನಗರದಲ್ಲಿ ವೇಟ್‌ಲಿಫ್ಟರ್‌ಗಳಿಗೆ ಪೂರ್ವಸಿದ್ಧತಾ ಶಿಬಿರವನ್ನು ಏರ್ಪಡಿಸಿದ್ದರಿಂದ ಒಂದು ತಿಂಗಳ ಮುಂಚಿತವಾಗಿ ಬರ್ಮಿಂಗ್‌ಹ್ಯಾಮ್‌ಗೆ ಆಗಮಿಸಿ ತರಬೇತಿ ನಡೆಸಿದ್ದರು.
ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿರುವ 21ರ ತರುಣ ಮುಂದೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬರ್ಮಿಂಗ್‌ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪದಕದ ಬೇಟೆ ಆರಂಭಸಿದೆ. 21ರ ತರುಣ ಸಂಕೇತ್ ಮಹಾದೇವ್ ಸರ್ಗರ್ ಬೆಳ್ಳಿಪದಕ ಗೆದ್ದಿದ್ದಾರೆ.
ಚಿನ್ನಕ್ಕಾಗಿ ಸೆಟ್ಟೇರಿದ್ದ ಸಂಕೇತ್‌ಗೆ ಸರ್ಗರ್ ಕ್ಲೀನ್ ಮತ್ತು ಜರ್ಕ್ ಸುತ್ತಿನ 2ನೇ ಪ್ರಯತ್ನದಲ್ಲಿ ಚಿನ್ನ ಕೈತಪ್ಪಿತು. 139 ಕೆಜಿ ಎತ್ತಲು ಪ್ರಯತ್ನಿಸಿದರೂ ಸಾಧ್ಯವಾಗದ ಕಾರಣ ಬೆಳ್ಳಿ ಪದಕ ಗೆದ್ದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮಡಿಕೇರಿ: ಭೋಪಾಲ್‍ನಲ್ಲಿ ಇತ್ತೀಚೆಗೆ ನಡೆದ ಭಾರತೀಯ 12ನೇ ಹಾಕಿ ಹಿರಿಯ ಬಾಲಕಿಯರ ವಿಭಾಗದಲ್ಲಿ ಪಾಲ್ಗೊಂಡು ಬೆಳ್ಳಿ ಪದಕವನ್ನು ಮಡಿಕೇರಿ ವಿದ್ಯಾರ್ಥಿನಿಯರು ಪಡೆದಿದ್ದಾರೆ. ಈ ಹಿನ್ನೆಲೆ ನಗರದ ಭಾರತೀಯ ಕ್ರೀಡಾ ಪ್ರಾಧಿಕಾರದ ಐವರು ವಿದ್ಯಾರ್ಥಿನಿಯರಿಗೆ ಜಿಲ್ಲಾಡಳಿತ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಬುಧವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು, ಭಾರತೀಯ ಹಾಕಿ ಹಿರಿಯ ಬಾಲಕಿಯರ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿರುವುದು ಶ್ಲಾಘನೀಯ. ತಾವು ಇತರರಿಗೆ ಆದರ್ಶವಾಗಿದ್ದು, ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಅವರು ಸಲಹೆ ಕೊಟ್ಟರು. ಹಾಕಿ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳುವಂತಾಗಬೇಕು. ಜಿಲ್ಲಾಡಳಿತ ವತಿಯಿಂದ ಭಾರತೀಯ ಕ್ರೀಡಾ ಪ್ರಾಧಿಕಾರ ಸಂಸ್ಥೆಯನ್ನು ಮತ್ತಷ್ಟು ಅತ್ಯುನ್ನತ್ತ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಮಾತನಾಡಿ, ತಮ್ಮ ಸಾಧನೆಗೆ ಅಭಿನಂದನೆ. ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಬೇಕು. ನಿರಂತರ ಅಭ್ಯಾಸ ಮಾಡಿದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ಆಸಕ್ತಿ ಇದ್ದಲ್ಲಿ ಜಯ ಗಳಿಸಬಹುದು. ಆ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದು ಹೇಳಿದರು. ಇದನ್ನೂ ಓದಿ: ವ್ಯಕ್ತಿ ಕಾಲಿಡಿದು ಒಳಗೆ ಎಳೆದುಕೊಳ್ಳಲು ಯತ್ನಿಸಿದ ಗೊರಿಲ್ಲಾ – ಬೋನ್‌ದಲ್ಲಿದ್ರೂ ಫುಲ್ ಸ್ಟ್ರಾಂಗ್
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಇದೆ. ಆ ದಿಸೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಸಲಹೆ ಕೊಟ್ಟರು.
ಹಾಸನ: ಜಿಲ್ಲೆಯ ಅರಸೀಕೆರೆ ತಾಲೂಕಿನ ಲಾಳನಕೆರೆ ಗ್ರಾಮದ ಹಾಗೂ ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸುಹಾಸ್ ಟೋಕಿಯೋದಲ್ಲಿ ನಡೆದ ಪ್ಯಾರಾಲಂಪಿಕ್ಸ್ ಕೂಟದಲ್ಲಿ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಈ ಮೂಲಕ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಹಿರಿಮೆಯನ್ನು ಹೆಚ್ಚಿಸುವುದರ ಮೂಲಕ ಹಾಸನ ಜಿಲ್ಲೆಯ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಬಲಿಸಿದ ಕರ್ನಾಟಕದ ಜನತೆಗೆ ಧನ್ಯವಾದ: ಸುಹಾಸ್
ಸಚಿವ ಗೋಪಾಲಯ್ಯನವರು, ಜಪಾನ್ ರಾಜಧಾನಿ ಟೋಕಿಯೋದಲ್ಲಿ ವಿಶೇಷ ಚೇತನ ಕ್ರೀಡಾಪಟುಗಳಿಗಾಗಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ನಲ್ಲಿ ಉತ್ತರ ಪ್ರದೇಶದ ಜಿಲ್ಲಾಧಿಕಾರಿಯಾಗಿರುವ ಹಾಸನ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಎಲ್.ಯತಿರಾಜ್‍ರವರು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಪ್ಯಾರಾಲಂಪಿಕ್ಸ್ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಐಎಎಸ್ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸುಹಾಸ್ ಒಬ್ಬ ಕನ್ನಡಿಗ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದಿದ್ದಾರೆ. ಇದನ್ನೂ ಓದಿ:ಬೆಳ್ಳಿ ಹುಡುಗ ಸುಹಾಸ್‍ಗೆ ಕುಟುಂಬಸ್ಥರ ಅಭಿನಂದನೆ
ಸುಹಾಸ್ ಹಾಸನದ ಲಾಳನಕೆರೆಯಲ್ಲಿ ಜನಿಸಿ, ಶಿವಮೊಗ್ಗದಲ್ಲಿ ಬೆಳೆದು, ದಕ್ಷಿಣ ಕನ್ನಡದ ಸುರತ್ಕಲ್‍ನಲ್ಲಿ ಎನ್‍ಐಟಿಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಕಲಿತು, ಉತ್ತರ ಪ್ರದೇಶದ ಐಎಎಸ್ ಅಧಿಕಾರಿಯಾಗಿ, ಮಥುರಾದ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿದ್ದ ಇವರು, ಆರು ಜಿಲ್ಲೆಗಳ ಡಿಎಂ ಆಗಿ ಸೇವೆ ಸಲ್ಲಿಸಿದ ನಂತರ, ಈಗ ಗೌತಮ್ ಬುದ್ಧ ನಗರದ ಜಿಲ್ಲೆಯ ದಂಡಾಧಿಕಾರಿಯಾದ್ದಾರೆ. ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿ ನಾಲ್ಕು ಚಿನ್ನದ ಪದಕ, ಐದು ಬೆಳ್ಳಿ, ಎಂಟು ಕಂಚಿನ ಪದಕ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಹಾಸ್ ನಮ್ಮ ಕನ್ನಡಿಗ ಎಂದು ಹೇಳಲು ನಮಗೆ ಹೆಮ್ಮೆಯ ವಿಷಯವಾಗಿದೆ. ಸುಹಾಸ್ ಎಲ್.ಯತಿರಾಜ್ ರವರಿಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ಎಂದು ಹೇಳಿದ್ದಾರೆ.