Tag: Silver Jewelery

  • ಬಂಗಾರ ಬದಿಗಿಟ್ಟು ಸಿಲ್ವರ್ ಜ್ಯುವೆಲ್ಲರಿ ಮೊರೆಹೋದ ಫ್ಯಾಷನ್ ಪ್ರಿಯರು

    ಬಂಗಾರ ಬದಿಗಿಟ್ಟು ಸಿಲ್ವರ್ ಜ್ಯುವೆಲ್ಲರಿ ಮೊರೆಹೋದ ಫ್ಯಾಷನ್ ಪ್ರಿಯರು

    ಫ್ಯಾಷನ್ ಲೋಕದಲ್ಲಿ ಈಗ ಸಿಲ್ವರ್‌ಗೆ ಬೇಡಿಕೆ ಹೆಚ್ಚಾಗಿದೆ. ಬಂಗಾರ (Gold) ಬದಿಗಿಟ್ಟು ಸಿಲ್ವರ್ ಜ್ಯುವೆಲ್ಲರಿ (Silver Jewellery) ಮೊರೆ ಹೋಗ್ತಿದ್ದಾರೆ ಫ್ಯಾಷನ್ ಪ್ರಿಯರು. ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆಯುವಂತಹ ಡಿಸೈನ್‌ನಲ್ಲಿ ಸಿಲ್ವರ್ ಜ್ಯುವೆಲ್ಲರಿಗಳು ಇದೀಗ ಟ್ರೆಂಡಿಯಾಗಿವೆ. ಮಹಿಳೆಯರು ಸಾಮಾನ್ಯ ಡಿಸೈನ್‌ಗಳಿಂದಿಡಿದು ಬ್ರೈಡಲ್ ಜ್ಯುವೆಲ್ಲರಿಗಳಲ್ಲೂ (Bridal Jewellery) ಎಂಟ್ರಿ ನೀಡಿವೆ. ವೆಡ್ಡಿಂಗ್ ಸೀಸನ್‌ನಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಲೆಕ್ಕವಿಲ್ಲದಷ್ಟು ಬಂಗಾರದ ಇಮಿಟೇಷನ್ ಡಿಸೈನ್‌ಗಳಲ್ಲೂ ಬಿಡುಗಡೆಗೊಂಡಿವೆ.

    ಸಿಲ್ವರ್ ಜ್ಯುವೆಲ್ಲರಿಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ವೆಡ್ಡಿಂಗ್ ಸೀಸನ್‌ಗೆ ಊಹೆಗೂ ಮೀರಿದ ಡಿಸೈನ್‌ನಲ್ಲಿ ಆಗಮಿಸಿವೆ. ಒಂದಕ್ಕಿಂತ ಒಂದು ಡಿಸೈನ್‌ಗಳು ಬಂಗಾರದ ಆಭರಣಗಳ ಡಿಸೈನ್‌ಗಳನ್ನು ಮೀರಿಸಿವೆ. ಹಾಗಾಗಿ ಮದುವೆಯಾಗುವ ಹೆಣ್ಣು ಮಕ್ಕಳು ಮಾತ್ರವಲ್ಲ, ಫ್ಯಾಮಿಲಿಯ ಇತರೇ ಹೆಣ್ಣು ಮಕ್ಕಳು ಕೂಡ ಇವನ್ನು ಕೊಳ್ಳತೊಡಗಿದ್ದಾರೆ. ಆ ಮಟ್ಟಿಗೆ ಇವು ಮಾನಿನಿಯರನ್ನು ಸೆಳೆದಿವೆ. ಇದನ್ನೂ ಓದಿ:ನಿರ್ದೇಶನದತ್ತ ‘ರಂಗಿತರಂಗ’ ಚಿತ್ರದ ನಟ ನಿರೂಪ್ ಭಂಡಾರಿ

    ಆಂಟಿಕ್ ಆಭರಣಗಳ ಸೆಟ್, ಪ್ರೀಶಿಯಸ್ ಜ್ಯುವೆಲ್ಲರಿಗಳು, ಟೆಂಪಲ್ ಜ್ಯುವೆಲರಿ, ಕಂಟೆಂಪರರಿ ಡಿಸೈನ್ಸ್, ಹವಳದ ಸೆಟ್, ಮುತ್ತಿನ ಸೆಟ್, ಎಮರಾಲ್ಡ್ ಸೆಟ್, ಮೋಹನ್‌ಮಾಲ, ಬಿಗ್ ಚೋಕರ್ಸ್, ಸೊಂಟದ ಪಟ್ಟಿ, ಬಾಜುಬಂಧ್, ಕಡಗ, ಬಂಗಾರದ ಬಳೆಗಳ ಸೆಟ್, ಜಡೆನಾಗರ, ಮಾಟಿ, ಕಿವಿಯ ಬಿಗ್ ಮುತ್ತಿನ ಜುಮಕಿಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್‌ನ ಸಿಲ್ವರ್ ಆಭರಣಗಳು ಎಂಟ್ರಿ ನೀಡಿವೆ. ಅದರಲ್ಲೂ ಬಂಗಾರದ ಹಾಗೂ ವಜ್ರಾಭರಣಗಳ ಸೆಟ್‌ಗಳು ಅತಿ ಹೆಚ್ಚು ವೆಡ್ಡಿಂಗ್ ಬ್ರೈಡಲ್ ಸೆಟ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.

    ಬ್ರೇಸ್‌ಲೆಟ್ಸ್, ಕತ್ತಿನ ನಾನಾ ಬಗೆಯ ಚೈನ್‌ಗಳು, ಕೈ ಉಂಗುರಗಳು ಇದೀಗ ಮೆನ್ಸ್ ಜ್ಯುವೆಲ್ಲರಿ ಕೆಟಗರಿಯಲ್ಲಿ ದೊರೆಯುತ್ತಿವೆ. ಬಂಗಾರ ಖರೀದಿಸಲು ಆಗದಿದ್ದವರಿಂದಿಡಿದು, ವೆರೈಟಿ ಡಿಸೈನ್ ಸೆಟ್‌ಗಳನ್ನು ಧರಿಸಲು ಬಯಸುವವರು, ಒಮ್ಮೆ ಧರಿಸಿ, ಮತ್ತೆ ರಿಪೀಟ್ ಮಾಡಲು ಬಯಸದವರು ಸಿಲ್ವರ್ ಜ್ಯುವೆಲ್ಲರಿಗಳನ್ನು ಖರೀದಿಸತೊಡಗಿದ್ದಾರೆ.

    ಮೊದಮೊದಲು ಕೇವಲ ಹೆಣ್ಣು ಮಕ್ಕಳ ಸಿಲ್ವರ್ ಜ್ಯುವೆಲ್ಲರಿಗಳು ಹೆಚ್ಚು ಲಭ್ಯವಿದ್ದವು. ಇದೀಗ ಪುರುಷರ ಜ್ಯುವೆಲ್ಲರಿಗಳು ಬಂದಿವೆ. ಕಡಿಮೆ ದರದಲ್ಲಿ ಅಂದರೇ ಸಾವಿರಾರು ರೂ.ಗಳಲ್ಲಿ ಭಾರೀ ಡಿಸೈನ್‌ನವನ್ನು ಖರೀದಿಸಬಹುದೆಂಬ ಲೆಕ್ಕಚಾರ ಹಲವರದ್ದು. ಲಕ್ಷಗಟ್ಟಲೇ ಬಂಗಾರಕ್ಕೆ ಸುರಿಯುವ ಬದಲು ಅದರ ತದ್ರೂಪದಂತಿರುವ ಸಿಲ್ವರ್ ಜ್ಯುವೆಲ್ಲರಿಗಳನ್ನು ಖರೀದಿಸಿ, ಧರಿಸುವುದು ಇದೀಗ ಕಾಮನ್ ಆಗಿದೆ.

    ಇಲ್ಲಿದೆ ಫ್ಯಾಷನ್ ಟಿಪ್ಸ್:
    ಟ್ರೆಂಡಿಯಾಗಿರುವ ವಿನ್ಯಾಸವನ್ನು ಖರೀದಿಸಿ.
    ಹೆವ್ವಿ ಬಂಗಾರದ ರಿಪ್ಲೀಕಾ ಡಿಸೈನ್‌ನವು ಹೆಚ್ಚು ಚಾಲ್ತಿಯಲ್ಲಿವೆ.
    ನಿರ್ವಹಣೆ ಬಗ್ಗೆ ಮೊದಲೇ ತಿಳಿದುಕೊಳ್ಳಿ.
    ನೀರು ಸೋಕಿಸಿದಲ್ಲಿ ಮಾಸಬಹುದು.
    ಪಾಲಿಶ್ ಕಡಿಮೆಯಾದಾಗ ಮತ್ತೊಮ್ಮೆ ಹಾಕಿಸಲು ಅಂಗಡಿಯವರನ್ನು ಸಂಪರ್ಕಿಸಿ.
    ರೀಸೇಲ್ ವ್ಯಾಲ್ಯೂ ಬಗ್ಗೆ ತಿಳಿದುಕೊಂಡು ಖರೀದಿಸಿ.
    ಬ್ರಾಂಡೆಡ್ ಆಭರಣ ಮಾರಾಟಗಾರರ ಬಳಿ ಖರೀದಿಸಿ

  • ಜನಾರ್ದನ ರೆಡ್ಡಿ ಮಾವನ ಮನೆಯಲ್ಲಿ ಕಳ್ಳತನ – ಭಾರೀ ಪ್ರಮಾಣದ ಬೆಳ್ಳಿ ಆಭರಣದೊಂದಿಗೆ ಪರಾರಿ

    ಜನಾರ್ದನ ರೆಡ್ಡಿ ಮಾವನ ಮನೆಯಲ್ಲಿ ಕಳ್ಳತನ – ಭಾರೀ ಪ್ರಮಾಣದ ಬೆಳ್ಳಿ ಆಭರಣದೊಂದಿಗೆ ಪರಾರಿ

    ಬಳ್ಳಾರಿ: ಮಾಜಿ ಸಚಿವ, ಗಣಿ ಧಣಿ ಜನಾರ್ದನ ರೆಡ್ಡಿ ಅವರ ಮಾವನ ಮನೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಭಾರೀ ಪ್ರಮಾಣದ ಬೆಳ್ಳಿ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.

    ಬಳ್ಳಾರಿಯ ಇನ್ನಾರೆಡ್ಡಿ ಕಾಲೋನಿಯಲ್ಲಿರುವ ಜನಾರ್ದನ ರೆಡ್ಡಿ ಪತ್ನಿಯ ತಂದೆ ಪರಮೇಶ್ವರ ರೆಡ್ಡಿಯವರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಮನೆಯ ಸದಸ್ಯರೆಲ್ಲ ಊರಿಗೆ ಹೋಗಿರುವ ಮಾಹಿತಿ ಪಡೆದ ಕಳ್ಳರು ಇಂದು ನಸುಕಿನ ಜಾವ ಮನೆಯ ಬಾಗಿಲು ಮುರಿದು ಬೆಡ್ ರೂಮ್ ನಲ್ಲಿದ್ದ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ.

    ಚಿನ್ನಾಭರಣ ಹಾಗೂ ವಜ್ರದ ಒಡೆವೆಗಳನ್ನು ಲಾಕರ್ ನಲ್ಲಿ ಇಟ್ಟ ಪರಿಣಾಮ ಕಳ್ಳರಿಗೆ ಯಾವುದೇ ಚಿನ್ನಾಭರಣದ ವಸ್ತುಗಳು ಸಿಕ್ಕಿಲ್ಲ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೌಲಬಜಾರ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.