Tag: Silver coin

  • ದಾಖಲೆ ಇಲ್ಲದ 18 ಲಕ್ಷ ರೂ. ಹಣ, 6 ಲಕ್ಷ ರೂ. ಮೌಲ್ಯದ ಬೆಳ್ಳಿ ನಾಣ್ಯಗಳು ಜಪ್ತಿ

    ದಾಖಲೆ ಇಲ್ಲದ 18 ಲಕ್ಷ ರೂ. ಹಣ, 6 ಲಕ್ಷ ರೂ. ಮೌಲ್ಯದ ಬೆಳ್ಳಿ ನಾಣ್ಯಗಳು ಜಪ್ತಿ

    ಬೀದರ್: ಹೈದರಾಬಾದ್‌ನಿಂದ (Hyderabad) ಬೀದರ್‌ಗೆ (Bidar) ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಲಕ್ಷ ರೂ. ಹಣ ಹಾಗೂ 6 ಲಕ್ಷ ರೂ. ಮೌಲ್ಯದ ಬೆಳ್ಳಿ ನಾಣ್ಯಗಳನ್ನು (Silver Coin) ಬೀದರ್ ಪೊಲೀಸರು ಜಪ್ತಿ ಮಾಡಿದ್ದಾರೆ.

    ಬೀದರ್  ಮತ್ತು ತೆಲಂಗಾಣ (Telangana) ಗಡಿಯ ಶಾಪೂರ್ ಗ್ರಾಮದ ಬಳಿಯ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನಲ್ಲಿ 18 ಲಕ್ಷ ರೂ. ಹಣ, 5 ಗ್ರಾಂನ 1,250 ನಾಣ್ಯಗಳು ಮತ್ತು 1 ಗ್ರಾಂನ 1,000 ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ಇದನ್ನೂ ಓದಿ: ಏರಿಯಾ ಆಂಟಿಗಳಿಗೆ ಮೆಸೇಜ್‌ ಮಾಡ್ತೀಯಾ ಎಂದು ಬೆಂಗಳೂರಲ್ಲಿ ವ್ಯಕ್ತಿ ಮೇಲೆ ಹಲ್ಲೆ 

    ಈ ಕುರಿತು ಪೊಲೀಸರು ಅಕ್ರಮ ಸಾಗಾಟ ಮಾಡುತ್ತಿದ್ದ ಕಾರು, ಹಣ ಹಾಗೂ ಬೆಳ್ಳಿಯ ನಾಣ್ಯಗಳನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ರೇಡ್

  • ಪ್ರವಾಹದ ಬಳಿಕ ನದಿ ಕಿನಾರೆಯಲ್ಲಿ ಬೆಳ್ಳಿ ನಾಣ್ಯಗಳು ಪತ್ತೆ

    ಪ್ರವಾಹದ ಬಳಿಕ ನದಿ ಕಿನಾರೆಯಲ್ಲಿ ಬೆಳ್ಳಿ ನಾಣ್ಯಗಳು ಪತ್ತೆ

    – ನಾಣ್ಯ ಹುಡುಕಾಟಕ್ಕೆ ನದಿಗೆ ಇಳಿದ ಗ್ರಾಮಸ್ಥರು

    ಭೋಪಾಲ್: ಪ್ರವಾಹದ ಬಳಿಕ ಮಧ್ಯಪ್ರದೇಶದ ಗ್ರಾಮದ ಬಳಿಯ ನದಿ ದಡದಲ್ಲಿ ಬೆಳ್ಳಿ ನಾಣ್ಯಗಳು ಸಿಗುತ್ತಿದ್ದು, ಇಡೀ ಗ್ರಾಮಸ್ಥರು ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಅಶೋಕ ನಗರ ದ ಪಂಚವಾಲಿ ಗ್ರಾಮದ ಬಳಿಯಲ್ಲಿರುವ ಸಿಂಧ್ ನದಿಯ ದಡದಲ್ಲಿ ಬೆಳ್ಳಿ ನಾಣ್ಯಗಳು ಸಿಗುತ್ತಿವೆ.

    ಕಳೆದ ಒಂದು ವಾರದಿಂದ ಸಿಂಧ್ ನದಿಯ ಪ್ರವಾಹ ಕಂಡು ಜನರು ಆತಂಕಕ್ಕೊಳಗಾಗಿದ್ದರು. ಮಳೆ ಕಡಿಮೆಯಾದ ಹಿನ್ನೆಲೆ ಪ್ರವಾಹ ಇಳಿಮುಖವಾಗಿದೆ. ಆದ್ರೆ ಭಾನುವಾರ ನದಿ ದಡದ ಬಳಿ ಹೊರಟಿದ್ದ ಕೆಲವರಿಗೆ ಬೆಳ್ಳಿ ನಾಣ್ಯ ಸಿಕ್ಕಿವೆ. ಹಾಗೆ ಹುಡುಕುತ್ತಾ ಹೊರಟವರಿಗೆ ಕೆಲವು ನಾಣ್ಯಗಳು ಸಿಕ್ಕಿವೆ. ಕ್ಷಣಾರ್ಧದಲ್ಲಿ ಈ ಸುದ್ದಿ ಗ್ರಾಮದ ತುಂಬೆಲ್ಲ ವ್ಯಾಪಿಸಿದೆ. ಇಡೀ ಗ್ರಾಮಸ್ಥರು ನದಿ ದಡಕ್ಕೆ ಆಗಮಿಸಿ ಬೆಳ್ಳಿ ನಾಣ್ಯಗಳನ್ನು ಹುಡುಕುತ್ತಿದ್ದಾರೆ.

    ಗ್ರಾಮಸ್ಥರಿಗೆ ಸಿಕ್ಕಿರುವ ನಾಣ್ಯಗಳ ಮೇಲೆ ಇಂಗ್ಲಿಷ್ ನಿಂದ ಬರೆಯಲಾಗಿದ್ದು, 1862 ಇಸವಿಯ ಅಚ್ಚು ಇದೆ. ಜೊತೆಗೆ ಒಂದು ರೂಪಾಯಿ, ಭಾರತ ಅಂತ ಟಂಕಿಸಲಾಗಿದೆ. 1862ರಲ್ಲಿಯ ನಾಣ್ಯಗಳು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇದನ್ನೂ ಓದಿ: ಬಿಗಿ ಉಡುಪು ಧರಿಸಿದ್ದಕ್ಕೆ ಯುವತಿಯ ಕೊಲೆ

    ಸದ್ಯ ನಾಣ್ಯಗಳ ಫೋಟೋ ಮತ್ತು ನದಿಯಲ್ಲಿ ಜನರು ಹುಡುಕಾಟ ನಡೆಸುತ್ತಿರುವ ವೀಡಿಯೋಗಳು ವೈರಲ್ ಆಗಿವೆ. ಈ ನಾಣ್ಯಗಳು ಗ್ರಾಮದ ಬಳಿ ಹೇಗೆ ಬಂದವು? ಯಾರಿಗೆ ಎಷ್ಟು ನಾಣ್ಯ ಸಿಕ್ಕಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಯಾರೋ ಮನೆಯಲ್ಲಿ ಈ ನಾಣ್ಯಗಳನ್ನು ಬಚ್ಚಿಟ್ಟಿರಬೇಕು. ಮನೆ ಪ್ರವಾಹಕ್ಕೆ ಸಿಲುಕಿರೋದರಿಂದ ನಾಣ್ಯಗಳು ಚೆಲ್ಲಾಪಿಲ್ಲಿ ಆಗಿರಬಹುದು ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ. ಇದನ್ನೂ ಓದಿ: ಕಾರ್ ಕಿಟಕಿಯ ಮೇಲೆ ಕುಳಿತು ಸ್ಟಂಟ್ – ಪೊಲೀಸರು ಕೊಟ್ರು 20-20ಯ ತ್ರಿಪಲ್ ಶಾಕ್!

  • ಮನೆ ಬುನಾದಿ ತೆಗೆಯುತ್ತಿದ್ದಾಗ 169 ಬೆಳ್ಳಿ, 2 ಬಂಗಾರ ನಾಣ್ಯಗಳು ಪತ್ತೆ

    ಮನೆ ಬುನಾದಿ ತೆಗೆಯುತ್ತಿದ್ದಾಗ 169 ಬೆಳ್ಳಿ, 2 ಬಂಗಾರ ನಾಣ್ಯಗಳು ಪತ್ತೆ

    ಹಾವೇರಿ: ಹಾನಗಲ್ ತಾಲೂಕಿನ ವರ್ದಿ ಗ್ರಾಮದಲ್ಲಿ ಮನೆಯೊಂದರ ನಿರ್ಮಾಣಕ್ಕಾಗಿ ಬುನಾದಿ ತೆಗೆಯುತ್ತಿದ್ದಾಗ ಬೆಳ್ಳಿ ಹಾಗೂ ಬಂಗಾರದ ನಾಣ್ಯಗಳು ಪತ್ತೆಯಾಗಿವೆ.

    ಗ್ರಾಮದ ಲಕ್ಷ್ಮವ್ವ ಕುರುಬರ ಎಂಬವರ ಮನೆ ಬುನಾದಿ ತೆಗೆಯುತ್ತಿದ್ದಾಗ ನಾಣ್ಯಗಳು ಪತ್ತೆಯಾಗಿವೆ. 169 ಬೆಳ್ಳಿ ನಾಣ್ಯಗಳು ಹಾಗೂ 2 ಬಂಗಾರದ ನಾಣ್ಯಗಳು ಸೇರಿದಂತೆ 6 ಬೆಳ್ಳಿಯ ಮುದ್ರೆಗಳು ಪತ್ತೆಯಾಗಿವೆ. ಮಣ್ಣಿನ ಮಡಿಕೆಯಲ್ಲಿ ನಾಣ್ಯಗಳು ಮತ್ತು ಮುದ್ರೆಗಳು ದೊರೆತಿವೆ.

    1904, 1908 ಇಸ್ವಿ ಇರುವ ನಾಣ್ಯಗಳು ಇವತ್ತು ಲಭ್ಯವಾಗಿವೆ. ಕಳೆದ ಎರಡು ತಿಂಗಳ ಹಿಂದೆ ಅತಿವೃಷ್ಠಿ ಮತ್ತು ವರದಾ ನದಿ ನೀರಿನಿಂದ ಮನೆ ಬಿದ್ದಿದ್ದರಿಂದ ಹೊಸದಾಗಿ ಮನೆ ನಿರ್ಮಿಸಲು ಬುನಾದಿ ತೆಗೆಯುತ್ತಿದ್ದ ವೇಳೆ ನಾಣ್ಯಗಳು ಹಾಗೂ ಮುದ್ರೆಗಳು ಪತ್ತೆಯಾಗಿವೆ. ಅವುಗಳನ್ನು ನೋಡಿದ ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಾಣ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.