ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಚಿನ್ನಾಭರಣ (Gold Jewellery) ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನ, ಬೆಳ್ಳಿ ದರ ಈಗ ಕೊಂಚ ಇಳಿಕೆಯಾಗಿದೆ.
ದಿಢೀರ್ ಇಳಿಕೆಗೆ ಕಾರಣ ಏನು?
* ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
* ಅಮೆರಿಕ-ಭಾರತದ ಮಧ್ಯೆ ಕಚ್ಚಾ ತೈಲದ ವ್ಯಾಪಾರದ ಮುನ್ಸೂಚನೆ
* ಮುಂದಿನ ದಿನದಲ್ಲಿ ತೈಲ (Oil) ವ್ಯಾಪಾರದ ಮುನ್ಸೂಚನೆ
* ತಿಳಿಯಾದ ಚೀನಾ-ಅಮೆರಿಕ ಜಾಗತಿಕ ವ್ಯಾಪಾರ
ಚಿನ್ನ, ಬೆಳ್ಳಿ ಯಾವಾಗಲೂ ಒಂದು ಸಮೃದ್ಧಿಯ ಹೊಳಪು. ನೀವು ಎಷ್ಟೇ ಖರೀದಿ ಮಾಡಿದರೂ ಸಾಕೇನಿಸೊಲ್ಲ. ಹಾಗಂತ ಬೇಕಾದಷ್ಟು ಖರೀದಿ ಮಾಡೋಕೂ ಆಗಲ್ಲ. ಆದರೆ ಖರೀದಿ ಮಾಡಿದ್ದು ಯಾವೂದು ಹಾಳಾಗೋದು ಇಲ್ಲ. ಇದೇ ಚಿನ್ನ ಹಾಗೂ ಬೆಳ್ಳಿಯಲ್ಲಿರುವ ಒಂದು ಸೊಬಗು. ಆದರೆ ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಹಾಗೂ ಚಿನ್ನ ಸ್ಪರ್ಧೆಗಿಳಿಂತಿದೆ. ಪ್ರತಿ ದಿನವೂ ನಾ ಮುಂದು, ತಾ ಮುಂದು ಎಂದು ಓಟವನ್ನು ನಿಲ್ಲಿಸುತ್ತಲೇ ಇಲ್ಲ ಎನ್ನುವಂತಾಗಿದೆ. ಇವೆರಡರ ಓಟಗಳ ನಡುವೆ ಗ್ರಾಹಕರು ಪರದಾಡುವಂತಾಗಿದೆ.
ಹೌದು, ಮೊದಲೆಲ್ಲ ಚಿನ್ನದ ಬೆಲೆ ಏರಿಕೆಯಾದಾಗ ಬೆಳ್ಳಿ ದರ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೂಡ ಸ್ಥಿರವಾಗಿರುವಂತೆ ಭಾಸವಾಗುತ್ತಿತ್ತು. ಹೆಚ್ಚು ವ್ಯತ್ಯಾಸವೇನು ಕಂಡುಬರುತ್ತಿರಲಿಲ್ಲ. ಆದರೆ ಈಗ ಚಿನ್ನದ ಬೆಲೆ ಏರಿಕೆಯಾದಂತೆ ಬೆಳ್ಳಿಯ ದರವೂ ಏರಿಕೆಯಾಗುತ್ತಿದೆ. ಆದರೆ ಭಾರತಕ್ಕೆ ಬೆಳ್ಳಿ ಆಮದು ತೀರಾ ಕಡಿಮೆಯಾಗಿದೆ. ಇದರಿಂದ ಬೆಳ್ಳಿ ಕೊರತೆ ಎದ್ದು ಕಾಣುತ್ತಿದೆ. ಹಬ್ಬ ಬಂತೆಂದರೆ ಸಾಕು ಚಿನ್ನ, ಬೆಳ್ಳಿ ಖರೀದಿ ಹೆಚ್ಚಾಗುತ್ತದೆ. ಆದರೆ ಇದೀಗ ವಿಶ್ವದಲ್ಲೇ ಅತಿ ದೊಡ್ಡ ಬೆಳ್ಳಿ ಖರೀದಿ ರಾಷ್ಟ್ರವಾಗಿರುವ ಭಾರತದಲ್ಲಿ ಬೆಳ್ಳಿ ಕೊರತೆ ಉಂಟಾಗಿದೆ. ಇದರ ಪರಿಣಾಮ ವಿಶ್ವದ ಬೇರೆ ದೇಶಗಳಿಗೆ ತುಲನೆ ಮಾಡಿದಾಗ ಭಾರತದಲ್ಲಿ ಬೆಳ್ಳಿ ಬೆಲೆ ಶೇ.10 ರಷ್ಟು ಏರಿಕೆಯಾಗಿದೆ.
ಬೆಳ್ಳಿ ಕೊರತೆಗೆ ಕಾರಣ:
ಸಾಮಾನ್ಯವಾಗಿ ಹಬ್ಬಗಳು ಬಂದಾಗ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಶುಭದಿನದಂದು ಚಿನ್ನ, ಬೆಳ್ಳಿ ಖರೀದಿಸುವುದು ಭಾರತೀಯರ ಸಂಪ್ರದಾಯ ಎಂಬ ನಂಬಿಕೆಯಿದೆ. ಆದರೆ ಇದೀಗ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆ ಜನರು ಬೆಳ್ಳಿ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಇನ್ನೂ ಭಾರತಕ್ಕೆ ಚಿನ್ನದ ಆಮದು ಕಡಿಮೆಯಾಗಿದ್ದು, ಶೇ.42ಗೆ ಕುಸಿತಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ವಿಶ್ವದಲ್ಲಿ ಬೆಳ್ಳಿ ಬೇಡಿಕೆ ಪೂರೈಕೆಗಿಂತ ಹೆಚ್ಚಾಗಿದೆ. ಇದರಿಂದಾಗಿ ಐದು ವರ್ಷಗಳಲ್ಲಿ ಉತ್ಪಾದಿಸಲಾಗಿದ್ದ ಹೆಚ್ಚುವರಿಯೂ ಬೆಳ್ಳಿಯು ಖಾಲಿಯಾಗದೆ. ಹೀಗಾಗಿ ಈ ವರ್ಷ ಚಿನ್ನದ ಬೆಲೆ ಹೆಚ್ಚಾದ ಪರಿಣಾಮ ಬೆಳ್ಳಿ ಬೆಳಿಗ್ಗೆ ಹೆಚ್ಚಾಗಿದೆ. ಇದರಿಂದ ಜನರ ಬೇಡಿಕೆಯನ್ನು ಸದ್ಯದ ಪೂರೈಕೆಗೆ ಹೊಂದಿಸಲು ಸಾಧ್ಯವಾಗುತ್ತಿಲ್ಲ.
ಬೆಳ್ಳಿ ದರ ಏರಿಕೆಗೆ ಕಾರಣ:
ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಸಮರವನ್ನು ಆರಂಭಿಸಿದ್ದಾರೆ. ಟ್ರಂಪ್ ಆರಂಭದಲ್ಲಿ 50ಕ್ಕು ಹೆಚ್ಚು ದೇಶಗಳ ಮೇಲೆ ಸುಂಕ ಸಮರ ಹೇರಿದ್ದರು. ಅಮೆರಿಕ ಹಾಗೂ ಚೀನಾದ ನಡುವಿನ ಸುಂಕ ಸಮರದ ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗುತ್ತಿದೆ. ಹಿನ್ನೆಲೆ ಜನರು ಬೆಳ್ಳಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದು, ಪರಿಣಾಮ ಎರಡರ ಬೆಲೆಯೂ ಏರಿಕೆಯಾಗುತ್ತದೆ.
ಇನ್ನು ಬೆಳ್ಳಿಯಂತೆ ಚಿನ್ನದ ಉತ್ಪಾದನೆಯು ಕೆಲವು ದೇಶಗಳಲ್ಲಿ ಮಾತ್ರವಿದೆ. ಬೆರಳೆಣಿಕೆಯಷ್ಟು ಮಾತ್ರ ಕೆಲ ದೇಶಗಳು ಬೆಳ್ಳಿ ಗಣಿಗಾರಿಕೆ ಮಾಡುತ್ತವೆ. ಮೆಕ್ಸಿಕೊ, ಪೋಲ್ಯಾಂಡ್, ಯುಕೆ, ಆಸ್ಟ್ರೇಲಿಯ ಮಾತ್ರ ಬೆಳ್ಳಿ ಗಣಿಗಾರಿಕೆ ಮಾಡಲಾಗುತ್ತದೆ. ಅಲ್ಲದೆ ಸೌರ ಶಕ್ತಿ , ಎಲೆಕ್ಟ್ರಾನಿಕ್ಸ್ ಮತ್ತು ಹೈಟೆಕ್ ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಮಾಡಲಾಗುತ್ತಿರುವುದರಿಂದ, ಆ ಕ್ಷೇತ್ರಗಳಲ್ಲೂ ಕೂಡ ಬೆಳ್ಳಿ ಬೇಡಿಕೆ ಹೆಚ್ಚಾಗಿದೆ. ಇದೆಲ್ಲ ಕಾರಣಗಳಿಂದ ಬೆಳ್ಳಿ ದರ ಏರಿಕೆಯಾಗಿದೆ.
ಬೆಳ್ಳಿ ಆಮದು ಎಷ್ಟಿದೆ?
ಕಳೆದ ಐದು ವರ್ಷಗಳ ಹಿಂದೆ ಅಂದರೆ 2020ರಿಂದ 2021ರಲ್ಲಿ 2218 ರಿಂದ 2773 ಟನ್ ಬೆಳ್ಳಿ ಭಾರತಕ್ಕೆ ಆಮದಾಗುತ್ತಿತ್ತು. 2022 ರಲ್ಲಿ ದಾಖಲೆಯ 8000 ದಿಂದ 9450 ಟನ್ ಬೆಳ್ಳಿ ಆಮದಾಗುತ್ತು. ಬಳಿಕ 2023 ರಲ್ಲಿ 3625 ಟನ್, 2024 ರಲ್ಲಿ 7000 ಟನ್ ಸದ್ಯ 2025 ರ ಅಂತ್ಯದವರೆಗೆ 5500 ರಿಂದ 6000 ಟನ್ ಆಮದಾಗುವ ನಿರೀಕ್ಷೆಯಿದ್ದು, ಆಗಸ್ಟ್ ವರೆಗೆ 3,302 ಟನ್ ಆಮದಾಗಿದ್ದು, ಭಾರತಕ್ಕೆ ಬೆಳ್ಳಿ ಆಮದು ಶೇಕಡ 42ಕ್ಕೆ ಕುಸಿದಿದೆ.
ಐದು ವರ್ಷಗಳಿಗೂ ತುಲನೆ ಮಾಡಿದಾಗ ಹೆಚ್ಚೇನು ವ್ಯತ್ಯಾಸವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗುತ್ತಿರುವದರಿಂದ ಬೆಳ್ಳಿಯ ಬೇಡಿಕೆ ಹೆಚ್ಚಾಗುತ್ತದೆ. ಪರಿಣಾಮ ಕೊರತೆ ಹೆಚ್ಚು ಕಾಣುತ್ತಿದೆ. ಅಲ್ಲದೆ ಹೆಚ್ಚಿನ ಕ್ಷೇತ್ರಗಳಲ್ಲಿ ಬೆಳ್ಳಿಯ ಬೇಡಿಕೆ ಹೆಚ್ಚಿರುವುದರಿಂದ ಕೊರತೆ ಉಂಟಾದಂತೆ ತೋರುತ್ತಿದೆ.
ಬೆಳ್ಳಿ ಕೊರತೆಯಿಂದ ಸಾಮಾಗ್ರಿಗಳ ತಯಾರಿಕೆಗೆ ಅಥವಾ ಆಭರಣಗಳ ತಯಾರಿಕೆಗೆ ಕಷ್ಟಕರವಾಗುವ ಸಾಧ್ಯತೆಯಿದೆ. ಸದ್ಯ ಚಿನ್ನ ಬೆಲೆ ಹೆಚ್ಚಾಗಿರುವುದರಿಂದ ಹೆಚ್ಚಿನ ಜನ ಬೆಳ್ಳಿಯನ್ನು ಖರೀದಿಸುತ್ತಾರೆ. ಹೀಗಾಗಿ ಬೆಳ್ಳಿ ಮಾರಾಟಗಾರರಿಗೂ ಇದರಿಂದ ಸಮಸ್ಯೆಯುಂಟಾಗುವ ಸಾಧ್ಯತೆಯಿದೆ. ಆಭರಣ ವ್ಯಾಪಾರಿಗಳು ಗ್ರಾಹಕರ ಬೇಡಿಕೆಯನ್ನು ಪೂರೈಸಲು ಪರದಾಡುವಂತಾಗಿದೆ. ತಮಗೂ ಪೂರೈಕೆಯಿಲ್ಲದೇ ಗ್ರಾಹಕರಿಗೂ ಪೂರೈಕೆ ಮಾಡಲು ಸಾಧ್ಯವಾಗದಂತಾಗಿದೆ.
ಸದ್ಯ ಕೆ.ಜಿಗೆ ಬೆಳ್ಳಿಯ ಬೆಲೆ 1,70,000ಕ್ಕೂ ಅಧಿಕವಾಗಿದೆ. ಇತ್ತ ಚಿನ್ನದ ಬೆಲೆಯೂ ಏರಿಕೆಯಾಗುತ್ತಿದ್ದು, ಬೆಳ್ಳಿಯೂ ಅದರ ಬೆನ್ಹಿಂದೆ ಓಟಕ್ಕಿಳಿದಂತಾಗಿದೆ.
ಬೆಂಗಳೂರು: ದೀಪಾವಳಿಗೂ ಮೊದಲೇ ಬೆಳ್ಳಿ-ಚಿನ್ನ ಪೈಪೋಟಿಗೆ ಬಿದ್ದಿದೆ. ಇತ್ತ ಚಿನ್ನ (Gold) ಬಿಟ್ಟು ಬೆಳ್ಳಿ ಕಡೆ ಮುಖ ಮಾಡಿದವರಿಗೂ ಬಿಗ್ ಶಾಕ್ ಆಗ್ತಿದೆ. ಬಂಗಾರದ ಜೊತೆಗೆ ಬೆಳ್ಳಿ ಬೆಲೆಯೂ ದಿಢೀರನೇ ಏರುತ್ತಿದೆ. ಹಾಗಿದ್ರೆ ಧನತ್ರಯೋದಶಿಗೆ ಚಿನ್ನ-ಬೆಳ್ಳಿ ಇನ್ನಷ್ಟು ಏರಿಕೆಯಾಗುತ್ತಾ? ಈ ಕುತೂಹಲ ನಿಮಗೂ ಇದ್ರೆ ಮುಂದೆ ಓದಿ..
ಯಾವುದೇ ಹಬ್ಬ ಇರಲಿ ಹೊಸ ಬದುಕಿನ ಜೊತೆಗೆ ಚಿನ್ನ ಬೆಳ್ಳಿ ಖರೀದಿ ಮಾಡೋದು ವಾಡಿಕೆ. ಇನ್ನು ದೀಪಾವಳಿಯಲ್ಲಂತೂ (Deepavali) ಚಿನ್ನ ಬೆಳ್ಳಿ ಖರೀದಿಯಲ್ಲಿ ಜನ ಮುಗಿ ಬಿದ್ದಿರುತ್ತಾರೆ. ಜನ ಸಾಮಾನ್ಯರಿಗೆ ಚಿನ್ನ-ಬೆಳ್ಳಿಯ ಮೇಲೆ ಸಾಕಷ್ಟು ವ್ಯಾಮೋಹವಿದೆ. ಹಬ್ಬ ಬಂದ್ರೆ ಸಾಕು ಚಿನ್ನ ಅಥವಾ ಬೆಳ್ಳಿ ಕೊಂಡರೇನೇ ಶುಭ ಅನ್ನೋ ನಂಬಿಕೆಯೂ ಬೇರೂರಿದೆ. ಹಾಗಾಗೇ ಹಬ್ಬಗಳು ಹತ್ತಿರ ಆಗ್ತಿದ್ದಂತೆ ಚಿನ್ನ ಬೆಳ್ಳಿ ರೇಟ್ ಹೆಚ್ಚಾಗ್ತಿರುತ್ತೆ. ಆದ್ರೆ ಈ ಬಾರಿ ಚಿನ್ನ-ಬೆಳ್ಳಿ ರೇಟ್ (Gold And Silver Price Hike) ಸಖತ್ ಪೈಪೋಟಿಯೊಂದಿಗೆ ಜನರಿಗೆ ಶಾಕ್ ಕೊಡುತ್ತಿವೆ.
ಈಗಾಗಲೇ ಚಿನ್ನದ ರೇಟ್ ಅಂತೂ ಕೇಳೋ ಹಾಗಿಲ್ಲ. 10 ಗ್ರಾಂ ಚಿನ್ನದ ರೇಟ್ 1 ಲಕ್ಷ ಗಡಿ ದಾಟಿದ್ದಲ್ಲದೇ 1 ಲಕ್ಷ 20 ಸಾವಿರಕ್ಕೆ ಬಂದು ನಿಲ್ಲುತ್ತಿದೆ. ದೀಪಾವಳಿ ವೇಳೆಗೆ ಒಂದೂವರೆ ಲಕ್ಷ ತಲುಪುವ ಸಾಧ್ಯತೆಯಿದೆ. ಜೊತೆಗೆ ಇನ್ನೇನು ಈ ವಾರ ಕಳೆದ್ರೆ ದೀಪಾವಳಿ. ದೀಪಾವಳಿಗೆ ಬೆಳ್ಳಿ ದೀಪನೋ.. ಬೆಳ್ಳಿ ಲಕ್ಷ್ಮಿವಿಗ್ರಹವೋ ಹೀಗೆ ಬೆಳ್ಳಿಯಲ್ಲಿ ಏನಾದರೂ ಖರೀದಿಸೊಕೆ ಮುಂದಾದವರಿಗೂ ಬೆಲೆಯೂ ಕೈ ಸುಡುವಂತೆ ಮಾಡಿದೆ. ದೀಪಾವಳಿ ಹೊತ್ತಿಗೆಲ್ಲಾ ಬೆಳ್ಳಿ ಬೆಲೆ ಕೆಜಿಗೆ 2 ಲಕ್ಷ ರೂ. ದಾಟಲಿದೆ ಅನ್ನೋ ಮಾತುಗಳೂ ಕೇಳಿ ಬರ್ತಿದೆ. ಇದೇಲ್ಲದಕ್ಕೂ ಹಲವು ಕಾರಣಗಳನ್ನ ಚಿನ್ನದ ವ್ಯಾಪಾರಿಗಳು ಕೊಡ್ತಿದ್ದಾರೆ.
ಅಕ್ಷಯ ತೃತಿಯದಂತೆ ಧನತ್ರಯೋದಶಿ!
ಅಕ್ಷಯ ತೃತಿಯದಂತೆ ಧನತ್ರಯೋದಶಿ. ಧನತ್ರಯೋದಶಿ ದಿನ ಚಿನ್ನ ಹಾಗೂ ಬೆಳ್ಳಿ ಖರೀದಿ ಮಾಡಿದ್ರೆ ಒಳಿತಾಗುತ್ತೆ ಅನ್ನೋ ನಂಬಿಕೆ ಜನರಲ್ಲಿದೆ. ಈ ಬೆಲೆ ಏರಿಕೆ ನಡುವೆ ಧನತ್ರಯೋದಶಿಗೂ ಜನ ಸಂಕಷ್ಟ ಎದುರಿಸುವಂತಾಗಿದೆ.
ಚಿನ್ನ-ಬೆಳ್ಳಿ ದರ ಏರಿಕೆಗೆ ಕಾರಣಗಳೇನು?
– ಅಮೆರಿಕದ ಅಧ್ಯಕ್ಷ ಟ್ರಂಪ್ ನೀತಿಗಳಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಏರಿಳಿತ
– ಹೂಡಿಕೆದಾರರು ಡಾಲರ್ ಬದಲು ಚಿನ್ನದ ಖರೀದಿಗೆ ಮುಂದಾಗಿರೋದು
– ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನದ ಖರೀದಿ ಹೆಚ್ಚಳ
– ಕೈಗಾರಿಕೆ ಉದ್ದೇಶದಿಂದ ಬೆಳ್ಳಿ ಬಳಕೆ
– ಇರಾನ್-ಇಸ್ರೇಲ್, ಉಕ್ರೇನ್-ರಷ್ಯಾ ಯುದ್ಧಗಳ ಪರಿಣಾಮ
ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಲಕ್ಷ್ಮೀ ಪೂಜೆಗೆ ಸಿದ್ಧತೆಗಳು ಆರಂಭವಾಗಿವೆ. ಜೊತೆಗೆ ಮದುವೆ ಸೀಜನ್ ಸಹ ಸ್ಟ್ರಾಟ್ ಆಗಿದೆ. ಆದ್ರೇ ಈ ಸಮಯದಲ್ಲೇ ಬಂಗಾರ (Gold), ಬೆಳ್ಳಿ ಬಲು ಭಾರವಾಗಿದ್ದು, ಮಧ್ಯಮ ಮತ್ತು ಬಡ ವರ್ಗದವರಿಗೆ ಕೈಗೆಟುಕದಂತಾಗಿದೆ.
ದಿನದಿಂದ ದಿನಕ್ಕೆ ಚಿನ್ನದ ಬೆಲೆ (Gold Rate) ಗಗನಕ್ಕೇರುತ್ತಿದ್ದು, ಬಂಗಾರದ ಬೆಲೆಯಲ್ಲಿ ಆಲ್ ಟೈಮ್ ರೆಕಾರ್ಡ್ ನಿರ್ಮಾಣವಾಗ್ತಿದೆ. ಕಳೆದ ಒಂದು ವರ್ಷದಲ್ಲಿ 65% ರಷ್ಟು ದರ ಏರಿಕೆ ಆಗಿದ್ದರೂ ಸಹ ಚಿನ್ನದ ಮೇಲೆ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಇನ್ನು ಬೆಳ್ಳಿ ಒಂದು ವರ್ಷದಲ್ಲಿ 75% ಏರಿಕೆಯಾಗಿದೆ. ಹಿಂದಿನ ಯಾವ ವರ್ಷಗಳಲ್ಲೂ ಆಗದ ಬೆಲೆ ಏರಿಕೆ ಕಳೆದ ಅಕ್ಟೋಬರ್‌ನಿಂದ ಈ ವರ್ಷ ಅಕ್ಟೋಬರ್‌ನಲ್ಲಿ ಆಗಿದೆ. ದೀಪಾವಳಿ ಹಾಗೂ ಈಗಾಗಲೇ ಮದುವೆ ಸೀಜನ್ ಆರಂಭವಾಗಿದ್ದು, ಮಧ್ಯಮ ವರ್ಗ ಹಾಗೂ ಬಡವರ್ಗದ ಮಹಿಳೆಯರಿಗೆ ಬಂಗಾರ ಕೊಳ್ಳಂಗಿಲ್ಲ, ಮುಟ್ಟಂಗಿಲ್ಲ ಎನ್ನುವಂತಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಶೂಟಿಂಗ್‌ನಲ್ಲಿ ಸುದೀಪ್ ಭಾಗಿ
ಇನ್ನೂ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,24,000 ರೂ. ಆಗಿದ್ರು, ಬೆಳ್ಳಿ ಕೆ.ಜಿಗೆ 1,60,000 ರೂ. ಆಗಿದೆ. ಪ್ರಮುಖವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೇಡಿಕೆ ಹೆಚ್ಚುತ್ತಿರೋದು, ವಿವಿಧ ದೇಶದ ಬ್ಯಾಂಕ್‌ಗಳು ಚಿನ್ನ ಕೊಳ್ಳುತ್ತಿರೋದು, ಟ್ರಂಪ್‌ನ ಟಾರಿಫ್ ನೀತಿ ಮೊದಲಾದ ಕಾರಣಗಳಿಂದ ಚಿನ್ನ, ಬೆಳ್ಳಿ ಏರಿಕೆಯಾಗ್ತಿದೆ. ಇದನ್ನೂ ಓದಿ: 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, 12 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ಇನ್ನೂ ಎರಡ್ಮೂರು ತಿಂಗಳು ಇದೇ ದರ ಇರಲಿದ್ದು, 10 ಗ್ರಾಂ ಚಿನ್ನದ ಬೆಲೆ 1,35,000 ರೂ. ಹಾಗೂ ಬೆಳ್ಳಿ ಕೆ.ಜಿಗೆ 1,75,000 ರೂ.ವರೆಗೆ ಹೆಚ್ಚಳವಾಗೋ ಸಾಧ್ಯತೆಯಿದೆ. ಇನ್ನೂ ಒಂದೆರಡು ತಿಂಗಳಲ್ಲಿ ಕೇವಲ 10ರಿಂದ 15% ಮಾತ್ರ ಇಳಿಕೆಯಾಗೋ ನಿರೀಕ್ಷೆಯಿದೆ. ಹೆಚ್ಚಿನ ಇಳಿಕೆಯನ್ನು ನಿರೀಕ್ಷಿಸಲಾಗ್ತಿಲ್ಲ. ಹೀಗಾಗಿ ಶಾಸ್ತ್ರಕ್ಕಾಗಿ ಚಿನ್ನ ಖರೀದಿಸಿ, ಯಾವುದೇ ಕಾರಣಕ್ಕೂ ಚಿನ್ನದ ಮೇಲೆ ಹೂಡಿಕೆ ಮಾಡಬೇಡಿ ಎಂದು ಹಣಕಾಸು ತಜ್ಞರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಮಧ್ಯಮ ಮತ್ತು ಬಡ ವರ್ಗದವರಲ್ಲಿಯೇ ಈ ಚಿನ್ನದ ಮೇಲಿನ ಕ್ರೇಜ್ ಹೆಚ್ಚಾಗಿದೆ. ಇನ್ನು ಸದ್ಯಕ್ಕೆ ಚಿನ್ನ ಹಾಗೂ ಬೆಳ್ಳಿಯ ನಾಗಲೋಟಕ್ಕೆ ಬ್ರೇಕ್ ಬೀಳುವ ಲಕ್ಷಣಗಳಿಲ್ಲ.
ನವದೆಹಲಿ: ಭಾರತೀಯ ಆಮದುಗಳ ಮೇಲೆ ಟ್ರಂಪ್ ಹೆಚ್ಚುವರಿ 25% ಸುಂಕ (Tariff) ವಿಧಿಸಿದ ಪರಿಣಾಮ ಚಿನ್ನದ ಬೆಲೆ (Gold Price) ಏರಿಕೆ ಕಂಡಿದೆ.
ಭಾರತದ ಮೇಲೆ ಟ್ರಂಪ್ ಸುಂಕ ಘೋಷಿಸಿದ ಹಿನ್ನೆಲೆ ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳನ್ನು ಮುಖ ಮಾಡಿದ್ದಾರೆ. ಹೀಗಾಗಿ, ಚಿನ್ನದ ಬೆಲೆ 3,600 ರೂ. ಏರಿಕೆಯಾಗಿದ್ದು, 10 ಗ್ರಾಂಗೆ 1,02,620 ರೂ.ಗೆ ತಲುಪಿ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದನ್ನೂ ಓದಿ: ಟ್ರಂಪ್ ಸುಂಕ ಶಾಕ್ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್ ಭೇಟಿ
ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, 99.9% ಶುದ್ಧತೆಯ ಚಿನ್ನವು ಬುಧವಾರ 10 ಗ್ರಾಂಗೆ 99,020 ರೂ.ಗೆ ತಲುಪಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಶೇ.99.5 ರಷ್ಟು ಶುದ್ಧತೆಯ ಚಿನ್ನದ ಬೆಲೆ 3,600 ರುಪಾಯಿ ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳು ಸೇರಿದಂತೆ) 1,02,200 ರು. ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದೆ.
ಆ.1 ರಿಂದಲೇ ಜಾರಿಗೆ ಬರುವಂತೆ ಭಾರತದ ಆಮದುಗಳ ಮೇಲೆ ಅಮೆರಿಕವು ಶೇ.25 ರಷ್ಟು ಸುಂಕ ವಿಧಿಸಿತ್ತು. ರಷ್ಯಾ ಜೊತೆಗಿನ ಒಪ್ಪಂದ ಕೊನೆಗಾಣಿಸದಿದ್ದಕ್ಕೆ ಹೆಚ್ಚುವರಿಯಾಗಿ ಶೇ.25 ಸುಂಕವನ್ನು ಭಾರತದ ಮೇಲೆ ವಿಧಿಸಿದೆ. ಆ ಮೂಲಕ 50% ಸುಂಕವನ್ನು ಅಮೆರಿಕ ಹಾಕಿದೆ. ಇದು ಎರಡು ಆರ್ಥಿಕತೆಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ತೀವ್ರಗೊಳಿಸಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್
ಗುರುವಾರ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,500 ರೂ. ಏರಿಕೆಯಾಗಿ 1,14,000 ರೂ.ಗೆ ತಲುಪಿದೆ (ಎಲ್ಲಾ ತೆರಿಗೆಗಳು ಸೇರಿದಂತೆ). ಬುಧವಾರ ಬಿಳಿ ಲೋಹ ಬೆಲೆ ಪ್ರತಿ ಕೆಜಿಗೆ 1,12,500 ರೂ. ಇತ್ತು.
ನವದೆಹಲಿ: ಕೆಲ ದಿನಗಳಿಂದ ಭಾರೀ ಏರಿಕೆ ಕಾಣುತ್ತಿದ್ದ ಚಿನ್ನದ (Gold) ಮತ್ತು ಬೆಳ್ಳಿಯ ದರ ಈಗ ದಿಢೀರ್ ಇಳಿಕೆಯಾಗಿದೆ.
ಇಂದು 24 ಕ್ಯಾರೆಟ್ ಚಿನ್ನದ ಬೆಲೆ 1,740 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 1,600 ರೂ. ಕಡಿಮೆಯಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ 91,640 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 84,000 ರೂ.ಗೆ ಇಳಿಕೆಯಾಗಿದೆ.
ಪ್ರತಿ ಕೆಜಿ ಬೆಳ್ಳಿಯ (Silver) ಬೆಲೆ 4,000 ರೂ.ಗಳಷ್ಟು ಕಡಿಮೆಯಾಗಿದ್ದು 1 ಕೆಜಿ ಬೆಳ್ಳಿಗೆ 99,900 ರೂ. ದರವಿದೆ.
ದರ ಇಳಿಕೆ ಯಾಕೆ?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತೆರಿಗೆ ಸಮರ (Tax War) ಆರಂಭಿಸಿದ ಬಳಿಕ ಹೂಡಿಕೆದಾರರಿಗೆ ಭಾರೀ ನಷ್ಟವಾಗುತ್ತಿದೆ. ಹೀಗಾಗಿ ಈ ನಷ್ಟವನ್ನು ಸರಿದೂಗಿಸಲು ಚಿನ್ನದ ಮೇಲೆ ಹೂಡಿಕೆ ಮಾಡಿರುವ ಹೂಡಿಕೆದಾರರು ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ʼರಾಜ್ಯʼದಲ್ಲೂ ಗೆದ್ದ ಮೋದಿ ಸರ್ಕಾರ – ವಕ್ಫ್ ಬಿಲ್ ಜಾರಿಗೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ
ಅಂತರರಾಷ್ಟ್ರೀಯ ಮಾರುಕಟ್ಟೆ ದರಗಳು, ಆಮದು ಸುಂಕಗಳು, ತೆರಿಗೆಗಳು ಮತ್ತು ವಿನಿಮಯ ದರಗಳಲ್ಲಿನ ಏರಿಳಿತಗಳು ಪ್ರಾಥಮಿಕವಾಗಿ ಭಾರತದಲ್ಲಿ ಚಿನ್ನದ ಬೆಲೆಗಳ ಮೇಲೆ ಪ್ರಭಾವ ಬೀರುತ್ತವೆ. ಈ ಅಂಶಗಳು ಒಟ್ಟಾಗಿ ದೇಶಾದ್ಯಂತ ದೈನಂದಿನ ಚಿನ್ನದ ದರಗಳನ್ನು ನಿರ್ಧರಿಸುತ್ತವೆ.
ಧಾರವಾಡ: ಯಾವುದೇ ದಾಖಲಾತಿ ಇಲ್ಲದೇ ಮುಂಬೈನಿಂದ (Mumbai) ಹುಬ್ಬಳ್ಳಿಗೆ (Hubballi) ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ 98 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಧಾರವಾಡ ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ.
ಭವರ್‌ಸಿಂಗ್ ಬಂಧಿತ ವ್ಯಕ್ತಿ. ಈತನಿಂದ ಒಬರೊಬ್ಬರಿ 98 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ. ಮೇಲ್ನೋಟಕ್ಕೆ ಸುಮಾರು 2 ಕೋಟಿ ರೂ. ನಷ್ಟು ಚಿನ್ನಾಭರಣವನ್ನು ಜಪ್ತಿ ಮಾಡಲಾಗಿತ್ತು ಎಂದು ಊಹಿಸಲಾಗಿತ್ತು. ಆದರೆ, 98 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸಕುಮಾರ್ ಅವರೇ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನದ್ದು 80 ಪರ್ಸೆಂಟ್ ಭ್ರಷ್ಟಾಚಾರ ಸರ್ಕಾರ: ಕಟೀಲ್ ವಾಗ್ದಾಳಿ
ಮೂಲತಃ ರಾಜಸ್ಥಾನದವನಾದ ಹಾಗೂ ಹಾಲಿ ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ವಾಸವಿದ್ದ ಭರವರಸಿಂಗ್ ಚೌಹಾಣ್ ಎಂಬಾತ ಯಾವುದೇ ದಾಖಲೆ ಇಲ್ಲದೇ ಒಂದು ಬ್ಯಾಗ್ ಹಾಗೂ ಒಂದು ಸೂಟ್‌ಕೇಸ್‌ನಲ್ಲಿ ಒಟ್ಟು 1237.20 ಗ್ರಾಂ ತೂಕದ ಚಿನ್ನದ ಆಭರಣ ಹಾಗೂ ಚಿನ್ನದ ಬಿಸ್ಕೆಟ್, 15 ಕೆಜಿ ಬೆಳ್ಳಿಯ ಗಟ್ಟಿ ಆಭರಣ ಹಾಗೂ ಸಾಮಾನುಗಳನ್ನು ಸಾಗಿಸುತ್ತಿದ್ದ. ಒಟ್ಟು 98 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಸಾಮಾನುಗಳನ್ನು ಆತನಿಂದ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಿಟೇಲ್ ಸ್ಟೋರ್ ತೆರೆಯಲು ಮುಂದಾದ ಆಪಲ್
ಭವರಸಿಂಗ್ ಕೊರಿಯರ್ ಸರ್ವಿಸ್ ಕೆಲಸ ಮಾಡುತ್ತಿದ್ದ. ರಾಜಸ್ತಾನ (Rajasthan) ಮೂಲದ ನರಪಲ್‌ಸಿಂಗ್ ಬಾಲೋಥ್ ಕೂಡ ಕೊರಿಯರ್ ಸರ್ವಿಸ್ ಕೆಲಸ ಮಾಡುತ್ತಿದ್ದ. ನರಪಲ್ ಸಿಂಗ್ ಕೈಕೆಳಗಡೆ ಈ ಭವರ್‌ಸಿಂಗ್ ಕೆಲಸ ಮಾಡುತ್ತಿದ್ದ. ಸದ್ಯ ಭವರ್‌ಸಿಂಗ್ ಪೊಲೀಸರ ವಶದಲ್ಲಿದ್ದು, ನರಪಲ್‌ಸಿಂಗ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಜಾಲ ಬೀಸಲಾಗಿದೆ. ಸದ್ಯ ಧಾರವಾಡದಲ್ಲಿ ಸಿಕ್ಕ ಚಿನ್ನ ಹಾಗೂ ಬೆಳ್ಳಿಯ ಆಭರಣಕ್ಕೆ ಯಾವುದೇ ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿಯನ್ನು ಸ್ವತಃ ಐಜಿಪಿಯವರೇ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢ ಎನ್‌ಕೌಂಟರ್| 35 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ನವದೆಹಲಿ: ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ (Union Budget) ಭಾಷಣ ಮುಗಿದ ಬೆನ್ನಲ್ಲೇ ಚಿನ್ನ (Gold) ಮತ್ತು ಬೆಳ್ಳಿ (Silver) ದರದಲ್ಲಿ ಭಾರೀ ಇಳಿಕೆಯಾಗಿದೆ.
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ(MCX) 10 ಗ್ರಾಂ ಚಿನ್ನದ ಬೆಲೆ 3,916 ರೂ. ಇಳಿಕೆಯಾಗಿದ್ದರೆ 1 ಕೆಜಿ ಬೆಳ್ಳಿ ದರ 4,213 ರೂ. ಇಳಿಕೆಯಾಗಿದೆ. ಅಂತಿಮವಾಗಿ 10 ಗ್ರಾಂ ಚಿನ್ನದ ದರ 68,789 ರೂ. ಕೊನೆಯಾದರೆ 1 ಕೆಜಿ ಬೆಳ್ಳಿ ದರ 84,990 ರೂ.ನಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: Budget 2024 | ಮೊದಲ ಬಾರಿಗೆ ಉದ್ಯೋಗ ಪಡೆದವರಿಗೆ 15 ಸಾವಿರ ರೂ.
ಈ ಮೊದಲು ಚಿನ್ನ ಮತ್ತು ಬೆಳ್ಳಿಗೆ 15% ಆಮದು ಸುಂಕ (Customs Duty) ವಿಧಿಸಲಾಗುತ್ತಿತ್ತು. ಆದರೆ ಈಗ ಆಮದು ಸುಂಕವನ್ನು 6% ಇಳಿಕೆ ಮಾಡಲಾಗಿದೆ.
ದೇಶದಲ್ಲಿ ಚಿನ್ನ ಮತ್ತು ಬೆಲೆಬಾಳುವ ಲೋಹದ ಆಭರಣಗಳಲ್ಲಿ ದೇಶೀಯ ಮೌಲ್ಯವರ್ಧನೆ ಹೆಚ್ಚಿಸಲು ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಕ್ಕೆ ಮತ್ತು ಪ್ಲಾಟಿನಂ ಮೇಲೆ 6.4% ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ (Budget Speech) ಹೇಳಿದರು.
6% ತೆರಿಗೆ ಹೇಗೆ?
ಚಿನ್ನ ಮತ್ತು ಬೆಳ್ಳಿ ಮೇಲಿನ ಅಮದು ಸುಂಕವನ್ನು 10% ರಿಂದ 5% ಇಳಿಕೆ ಮಾಡಿದ್ದರೆ ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್ (AIDC) 5% ರಿಂದ 1% ಕ್ಕೆ ಇಳಿಸಲಾಗಿದೆ. ಹೀಗಾಗಿ ಈ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲೆ 6% ತೆರಿಗೆ ವಿಧಿಸುವ ಪ್ರಸ್ತಾಪ ಮಾಡಲಾಗಿದೆ. ಇದನ್ನೂ ಓದಿ: ಉದ್ಯೋಗಿಗಳಿಗೆ 17,500 ರೂ. ಉಳಿತಾಯ – ಮೊದಲು ತೆರಿಗೆ ಎಷ್ಟಿತ್ತು? ಈಗ ಏನು ಬದಲಾವಣೆಯಾಗಿದೆ?
ನವದೆಹಲಿ: ಆಭರಣ ಪ್ರಿಯರಿಗೆ ಸಿಹಿ ಸುದ್ದಿ. ಈ ಬಜೆಟ್‌ನಲ್ಲಿ ಚಿನ್ನ (Gold) ಮತ್ತು ಬೆಳ್ಳಿಯ (Silver) ಮೇಲೆ ಆಮದು ಸುಂಕವನ್ನು ಕಡಿತ ಮಾಡಿದ್ದರಿಂದ ಆಭರಣಗಳ ದರ ಇಳಿಕೆಯಾಗಲಿದೆ.
ಈ ಮೊದಲು ಚಿನ್ನ ಮತ್ತು ಬೆಳ್ಳಿಗೆ 15% ಆಮದು ಸುಂಕ (Customs Duty) ವಿಧಿಸಲಾಗುತ್ತಿತ್ತು. ಆದರೆ ಈಗ ಆಮದು ಸುಂಕವನ್ನು 6% ಇಳಿಕೆ ಮಾಡಲಾಗಿದೆ.
ದೇಶದಲ್ಲಿ ಚಿನ್ನ ಮತ್ತು ಬೆಲೆಬಾಳುವ ಲೋಹದ ಆಭರಣಗಳಲ್ಲಿ ದೇಶೀಯ ಮೌಲ್ಯವರ್ಧನೆ ಹೆಚ್ಚಿಸಲು, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಕ್ಕೆ ಮತ್ತು ಪ್ಲಾಟಿನಂ ಮೇಲೆ 6.4% ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಮ್ಮ ಬಜೆಟ್ ಭಾಷಣದಲ್ಲಿ (Budget Speech) ಹೇಳಿದರು. ಇದನ್ನೂ ಓದಿ: ಬಜೆಟ್ 2024 – ಯಾವೆಲ್ಲ ವಸ್ತುಗಳ ಬೆಲೆ ಏರಿಕೆ? ಯಾವುದರ ಬೆಲೆ ಇಳಿಕೆ?
ವಿಘ್ನಹರ್ತಾ ಗೋಲ್ಡ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕ ಮಹೇಂದ್ರ ಲುನಿಯಾ ಪ್ರತಿಕ್ರಿಯಿಸಿ, 2023 ಹಣಕಾಸು ವರ್ಷದಲ್ಲಿ ಭಾರತ ಅಂದಾಜು 2.8 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ. 15% ಆಮದು ಸುಂಕ ಇರುವ ಕಾರಣ ಅಂದಾಜು 42,000 ಕೋಟಿ ರೂ. ಪಾವತಿಸಲಾಗಿದೆ ಎಂದು ತಿಳಿಸಿದರು.
ವರ್ಷದಿಂದ ವರ್ಷಕ್ಕೆ ಚಿನ್ನದ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಚಿನ್ನದ ದರವೂ ಭಾರತದಲ್ಲಿ ಏರಿಕೆಯಾಗುತ್ತಿದೆ. ಆಮದು ಸುಂಕವು ಹೆಚ್ಚಿದ್ದರಿಂದ ಚಿನ್ನದ ಕಳ್ಳಸಾಗಾಣೆ ಹೆಚ್ಚಾಗುತ್ತಿದೆ. ಈ ಕಳ್ಳ ಸಾಗಾಣೆಯನ್ನು ನಿಯಂತ್ರಿಸಲು ಸರ್ಕಾರ ಈಗ ಆಮದು ಸುಂಕವನ್ನು ಇಳಿಸಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಇದನ್ನೂ ಓದಿ: Union Budget 2024: ಬಿಹಾರ, ಆಂಧ್ರಪ್ರದೇಶಕ್ಕೆ ಬಜೆಟ್‌ನಲ್ಲಿ ಭರ್ಜರಿ ಅನುದಾನ
ಬೆಂಗಳೂರು: ಚಿನ್ನ ಅಂದ್ರೇ ಯಾರಿಗೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಮುಂದಿನ ತಿಂಗಳು ಮದುವೆ ಸೀಜನ್ ಆರಂಭವಾಗಿದ್ದು, ಸಾಕಷ್ಟು ಮದುವೆ, ಶುಭ ಸಮಾರಂಭಗಳು ನಡೆತ್ತವೆ. ಈ ಟೈಮ್ ನಲ್ಲೇ ಜನರಿಗೆ ಗೋಲ್ಡ್ ಶಾಕ್ ಎದುರಾಗಿದ್ದು, ಎಲ್ಲಾ ರೆರ್ಕಾಡ್‍ಗಳನ್ನ ಬ್ರೇಕ್ ಮಾಡಿದೆ.
ಬಡವರು ಹಾಗೂ ಮಧ್ಯಮ ಪಾಲಿನ ಜನರಿಗೆ ಗಗನ ಕುಸುಮವಾಗಿದೆ. ಭಾನುವಾರ ಬಂಗಾರದ ರೇಟ್ (Gold & Silver Rate) ಚಿನಿವಾರಪೇಟೆಯ ಇತಿಹಾಸದಲ್ಲೇ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಚಿನ್ನದ ಬೆಲೆ 67 ಸಾವಿರದ ಗಡಿ ದಾಟಿದ್ದು, ಬೆಳ್ಳಿ 75 ಸಾವಿರವನ್ನು ಕ್ರಾಸ್ ಮಾಡಿದೆ.
ಇದೊಂದು ಆಲ್ ಟೈಮ್ ಹೈಯೆಸ್ಟ್ ರೆರ್ಕಾಡ್ ಆಗಿದೆ. ಬಂಗಾರ ಯಾವತ್ತೂ ಈ ರೇಟ್‍ಗೆ ತಲುಪಿರಲಿಲ್ಲ. ಮುಂದಿನ ತಿಂಗಳಿನಿಂದ ಮದುವೆ ಸೀಜನ್ ಇದ್ದು, ಅಕ್ಷಯ ತೃತೀಯಕ್ಕೂ ಚಿನ್ನಕ್ಕೆ ಡಿಮ್ಯಾಂಡ್ ಇರೋದ್ರಿಂದ ಈ ರೇಟ್ ಇದೇ ತರಹ ಮುಂದುವರಿಯಬಹುದು ಎಂದು ಜ್ಯುವೆಲ್ಲರಿ ಅಸೋಸಿಯೇಷನ್ ಖಜಾಂಚಿ ರವಿಕುಮಾರ್ ಹೇಳುತ್ತಾರೆ.
ಶುಭ ಸಮಾರಂಭಗಳ ಹೊತ್ತಲ್ಲಿ ಬಂಗಾರದ ಬೆಲೆ ಏರಿಕೆಯಾಗಿರೋದು ಗ್ರಾಹಕರಲ್ಲಿ ಆತಂಕ ತಂದಿದೆ. ಮದುವೆಗೆ ಆಭರಣಗಳನ್ನು ಮಾಡಿಸೋದು ಹೇಗೆ ಅಂತಾ ಚಿಂತಿತರಾಗಿದ್ದಾರೆ. ಒಟ್ಟಿನಲ್ಲಿ ಚಿನ್ನದ ರೇಟ್ ಮತ್ತಷ್ಟು ಗಗನಕ್ಕೆ ಏರುವ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟದ ಮಧ್ಯೆ ಗ್ರಾಹಕರಿಗೆ ಮತ್ತೊಂದು ಬರೆ ಬಿದ್ದಿದೆ.