Tag: silkyara tunnel

  • 41 ಕಾರ್ಮಿಕರ ಆರೋಗ್ಯ ಸ್ಥಿರವಾಗಿದ್ದು, ಮನೆಗೆ ತೆರಳಬಹುದು: ಏಮ್ಸ್

    41 ಕಾರ್ಮಿಕರ ಆರೋಗ್ಯ ಸ್ಥಿರವಾಗಿದ್ದು, ಮನೆಗೆ ತೆರಳಬಹುದು: ಏಮ್ಸ್

    ನವದೆಹಲಿ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿ ಹೊರಬಂದಿರುವ 41 ಕಾರ್ಮಿಕರ ಆರೋಗ್ಯವು (41 Workers Health) ಉತ್ತಮವಾಗಿದ್ದು, ಅವರಿನ್ನು ಮನೆಗೆ ಹೋಗಬಹುದು ಎಂದು ಏಮ್ಸ್ ಆಸ್ಪತ್ರೆಯ (AIIMS Hospital) ವೈದ್ಯರು ತಿಳಿಸಿದ್ದಾರೆ.

    40 ಮಂದಿ ಕಾರ್ಮಿಕರು ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೋರ್ವನಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಕೂಡ ಆದಷ್ಟು ಬೇಗ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

    ಈ ಸಂಬಂಧ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಏಮ್ ಆಸ್ಪತ್ರೆ, ಸಿಲ್ಕ್ಯಾರಾ ಸುರಂಗದಿಂದ (Silkyara-Barkot Tunnel) ಸುರಕ್ಷಿತವಾಗಿ ರಕ್ಷಣೆಗೊಂಡ ಬಳಿಕ ಎಲ್ಲಾ 41 ಮಂದಿ ಕಾರ್ಮಿಕರು ಏಮ್ಸ್-ರಿಷಿಕೇಶ್ ಆಸ್ಪತ್ರೆಗೆ ಬುಧವಾರ ಮಧ್ಯಾಹ್ನ ದಾಖಲಾಗಿದ್ದಾರೆ. ಪ್ರಾಥಮಿಕ ತಪಾಸಣೆಯ ವೇಳೆ ಈ ಕಾರ್ಮಿಕರ ಮೈಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ನಂತರ ಅವರನ್ನು ತೀವ್ರ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಅವರ ರಕ್ತ ಪರೀಕ್ಷೆಗಳು, ಮೂತ್ರಪಿಂಡ, ಇಸಿಜಿ ವರದಿಗಳು, ಯಕೃತ್ತಿನ ಕಾರ್ಯ ಪರೀಕ್ಷೆ ಮತ್ತು ಎಕ್ಸ್ ರೇನಲ್ಲಿ ಎಲ್ಲರೂ ದೈಹಿಕವಾಗಿ ಸ್ಥಿರರಾಗಿದ್ದಾರೆ ಎಂದು ತಿಳಿಸಿದರು.

    40 ಕಾರ್ಮಿಕರಲ್ಲಿ ಒಬ್ಬರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಅವರನ್ನು ಹೆಚ್ಚಿನ ತಪಾಸಣೆಗಾಗಿ ಡಿಸಾಸ್ಟರ್ ವಾರ್ಡ್‍ನಿಂದ ಹೃದ್ರೋಗ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಆದರೆ ಇದು ಸುರಂಗ ಕುಸಿತ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಎಲ್ಲಾ ಕಾರ್ಮಿಕರ ಆರೋಗ್ಯದ ಬಗ್ಗೆ ಆಸ್ಪತ್ರೆಯು ಕ್ಲಿಯರೆನ್ಸ್ ನೀಡಿದ್ದು, ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಬಹುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ 41 ಜನರ ಪೈಕಿ 15 ಮಂದಿ ಏಮ್ಸ್ ನಿಂದ ತಮ್ಮ ಊರಾದ ಜಾರ್ಖಂಡ್‍ಗೆ ಹೊರಟಿದ್ದಾರೆ. ಈ 15 ಕಾರ್ವಿಕರನ್ನು ಅವರ ಕುಟುಂಬಸ್ಥರ ಸಮೇತ ಉತ್ತರಾಖಂಡದ ಡೆಹ್ರಾಡೂನ್‍ನಿಂದ ದೆಹಲಿಗೆ ಏರ್ ಲಿಫ್ಟ್ ಮಾಡಲಾಗಿದ್ದು, ಅಲ್ಲಿಂದ ಅವರನ್ನು ವಿಮಾನದಲ್ಲಿ ರಾಂಚಿಗೆ ಕಳುಹಿಸಿಕೊಡಲಾಗುತ್ತದೆ.

  • 41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ

    41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ

    ನವದೆಹಲಿ: ಮಂಗಳವಾರ ತಡರಾತ್ರಿ ಉತ್ತರಕಾಶಿಯಲ್ಲಿ (Uttarkashi) ನಡೆಯುತ್ತಿದ್ದ ಕಾರ್ಮಿಕರ (Workers) ರಕ್ಷಣಾ ಕಾರ್ಯಚರಣೆ ನೇರ ಪ್ರಸಾರ ವೀಕ್ಷಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi), ಕಾರ್ಯಚರಣೆ ಯಶಸ್ವಿಯಾದ ಬಳಿಕ ಭಾವುಕರಾಗಿದ್ದರು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿದ್ದಾರೆ.

    ಮಂಗಳವಾರ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆಯುತ್ತಿತ್ತು. ಕ್ಯಾಬಿನೆಟ್ ಸಹದ್ಯೋಗಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಕಾರ್ಯಚರಣೆ ನೇರ ಪ್ರಸಾರವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಸಿಕ್ಕಿಬಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ನಂತರ ಪ್ರಧಾನಿ ಭಾವುಕರಾದರು ಎಂದರು. ಇದನ್ನೂ ಓದಿ: ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ – ಸಂಪುಟ ಸಭೆಯಲ್ಲಿ ಮೋದಿ ಮಹತ್ವದ ನಿರ್ಧಾರ

    ಸುರಂಗ ಕುಸಿತದ ಬಳಿಕ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆಗೆ ನಿರಂತರವಾಗಿ ದೂರವಾಣಿ ಮೂಲಕ ಮಾಹಿತಿ ಪಡೆಯುತ್ತಿದ್ದರು. ಪ್ರಧಾನಿ ಕಾರ್ಯಲಯದಿಂದ ಮೇಲ್ವಿಚಾರಣೆಗೆ ವಿಶೇಷ ತಂಡವನ್ನು ಕಳುಹಿಸಿದ್ದರು. ಕಾರ್ಮಿಕರ ರಕ್ಷಣೆ ಬಳಿಕ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಕಾರ್ಯಚರಣೆಯಲ್ಲಿ ಭಾಗಿಯಾದ ಎಲ್ಲರನ್ನು ಶ್ಲಾಘಿಸಿದ್ದರು. ಇದನ್ನೂ ಓದಿ: ಧ್ವನಿವರ್ಧಕಗಳಲ್ಲಿ ಆಜಾನ್ ಕೂಗುವುದು ನಿಷೇಧಿಸಲು ಮನವಿ- ಅರ್ಜಿದಾರರಿಗೆ ಹೈಕೋರ್ಟ್ ತರಾಟೆ

  • ನಾವು ಆರಾಮಾಗಿದ್ದು, ಈಗ ದೀಪಾವಳಿ ಆಚರಿಸುತ್ತೇವೆ: ಸಂತಸ ಹಂಚಿಕೊಂಡ ಕಾರ್ಮಿಕರು

    ನಾವು ಆರಾಮಾಗಿದ್ದು, ಈಗ ದೀಪಾವಳಿ ಆಚರಿಸುತ್ತೇವೆ: ಸಂತಸ ಹಂಚಿಕೊಂಡ ಕಾರ್ಮಿಕರು

    ಡೆಹ್ರಾಡೂನ್: ನಾವು ಸಂತೋಷವಾಗಿದ್ದು, ಈಗ ದೀಪಾವಳಿಯನ್ನು (Deepavali) ಆಚರಿಸುತ್ತೇವೆ ಎಂದು ಉತ್ತರಕಾಶಿ (Uttarakshi) ಸುರಂಗದಿಂದ (Tunnel) ರಕ್ಷಿಸಲ್ಪಟ್ಟ ಕಾರ್ಮಿಕರು (Workers) ಸಂತಸವನ್ನು ಹಂಚಿಕೊಂಡಿದ್ದಾರೆ.

    ಸತತ 17 ದಿನಗಳ ನಿರಂತರ ಕಾರ್ಯಾಚರಣೆಯಿಂದ ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ (Silkyara Tunnel) ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ಎನ್‌ಡಿಆರ್‌ಎಫ್ (NDRF) ತಂಡ ರಕ್ಷಣೆ ಮಾಡಿದೆ. ಸುರಂಗದಿಂದ ಸುರಕ್ಷಿತವಾಗಿ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವಜೀತ್, ಅವಶೇಷಗಳು ಬಿದ್ದಾಗ ನಾವು ಸಿಲುಕಿಕೊಂಡಿದ್ದೇವೆ ಎಂದು ನಮಗೆ ತಿಳಿದಿತ್ತು. ಮೊದಲ 10-15 ಗಂಟೆಗಳ ಕಾಲ ನಾವು ಕಷ್ಟವನ್ನು ಎದುರಿಸಿದೆವು. ಆದರೆ ನಂತರ ಅಕ್ಕಿ, ದಾಲ್ ಮತ್ತು, ಡ್ರೈಫ್ರೂಟ್ಸ್ ಒದಗಿಸಲು ಪೈಪ್ ಹಾಕಲಾಯಿತು. ನಂತರ ಮೈಕ್ ಅನ್ನು ಸ್ಥಾಪಿಸಲಾಯಿತು. ಇದರಿಂದ ನಾನು ನನ್ನ ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ಸಾಧ್ಯವಾಯಿತು ಎಂದರು. ಇದನ್ನೂ ಓದಿ: ಧೈರ್ಯ ಮೆಚ್ಚುವಂತದ್ದು: ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರ ಜೊತೆ ಮೋದಿ ಮಾತುಕತೆ

    ಮತ್ತೊಬ್ಬ ಕಾರ್ಮಿಕ ಸುಬೋಧ್ ಕುಮಾರ್ ಈ ಕುರಿತು ಮಾತನಾಡಿದ್ದು, ಎಲ್ಲಾ 41 ಜರ‍್ನು ಸುರಕ್ಷಿತವಾಗಿ ಹೊರತರುವ ಪ್ರಯತ್ನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸಕಾರಗಳಿಗೆ ಧನ್ಯವಾದಗಳು. ಮೊದಲ 24 ಗಂಟೆಗಳು ಕಠಿಣವಾಗಿದ್ದವು. ಆದರೆ ನಂತರ ನಮಗೆ ಪೈಪ್ ಮೂಲಕ ಆಹಾರವನ್ನು ಒದಗಿಸಲಾಯಿತು. ನಾನು ಸಂಪೂರ್ಣವಾಗಿ ಉತ್ತಮನಾಗಿದ್ದೇನೆ ಮತ್ತು ಈಗ ಆರೋಗ್ಯವಾಗಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಮಾನವೀಯತೆ, ಟೀಮ್‌ವರ್ಕ್‌ಗೆ ಅದ್ಭುತ ಉದಾಹರಣೆ – ಕಾರ್ಯಾಚರಣೆಯಲ್ಲಿ ಭಾಗಿಯಾದವರಿಗೆ ನಮಸ್ಕರಿಸುತ್ತೇನೆ: ಮೋದಿ

    ಇತ್ತ ರಕ್ಷಣಾ  ಕಾರ್ಯಚರಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. ದೂರವಾಣಿ ಮೂಲಕ ಕಾರ್ಮಿಕರೊಂದಿಗೆ ಮಾತನಾಡಿರುವ ಮೋದಿ, ನೀವು ಸುರಕ್ಷಿತವಾಗಿ ಹೊರಬಂದಿರುವುದು ಖುಷಿಯ ಸಂಗತಿ. ಅದನ್ನು ಶಬ್ದದಲ್ಲಿ ವರ್ಣನೆ ಮಾಡಲು ಸಾಧ್ಯವಿಲ್ಲ. ಕೇದಾರನಾಥ, ಬದರಿನಾಥನ ಆಶೀರ್ವಾದ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಮಂಗಳವಾರ 41 ಕಾರ್ಮಿಕರನ್ನು ಸುರಂಗದಿಂದ ರಕ್ಷಣೆ ಮಾಡುತ್ತಿದ್ದಂತೆಯೇ ಮೋದಿ ಈ ಕುರಿತು ಎಕ್ಸ್ನಲ್ಲಿ ಸಂತಸ ಹಂಚಿಕೊಂಡಿದ್ದು, ನಮ್ಮ ಕಾರ್ಮಿಕ ಬಂಧುಗಳ ರಕ್ಷಣಾ ಕಾರ್ಯಾಚರಣೆಯ ಯಶಸ್ಸು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ. ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

  • ಅಮೆರಿಕ ಮಷಿನ್ ಕೈಕೊಟ್ಟ ನಂತರ 41 ಕಾರ್ಮಿಕರ ರಕ್ಷಣೆಗೆ ಧಾವಿಸಿದ ವಾಯುಸೇನೆ

    ಅಮೆರಿಕ ಮಷಿನ್ ಕೈಕೊಟ್ಟ ನಂತರ 41 ಕಾರ್ಮಿಕರ ರಕ್ಷಣೆಗೆ ಧಾವಿಸಿದ ವಾಯುಸೇನೆ

    ಡೆಹ್ರಾಡೂನ್: ಕಳೆದ 15 ದಿನಗಳಿಂದ ಉತ್ತರಕಾಶಿಯ (Uttarkashi) ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದಲ್ಲಿ (Silkyara Tunnel) ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಭಾರತೀಯ ಸೇನೆ ಕೈ ಜೋಡಿಸಿದೆ. ವಾಯುಪಡೆ (Indian Air Force) ಡಿಆರ್‌ಡಿಒ ಉಪಕರಣಗಳನ್ನು ತೆಗೆದುಕೊಂಡು ಘಟನಾ ಸ್ಥಳಕ್ಕೆ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಗರ್ ಯಂತ್ರದ ಬ್ಲೇಡ್‍ಗಳು ಅವಶೇಷಗಳ ಅಡಿ ಸಿಲುಕಿದ ಬಳಿಕ, ಸಿಕ್ಕಿಬಿದ್ದ 41 ಕಾರ್ಮಿಕರ ರಕ್ಷಣೆಗೆ ಕೊನೆಯ ಮಾರ್ಗವಾಗಿ ಕೈಯಿಂದ ಕೊರೆಯಲು ತಯಾರಿ ನಡೆಸಲಾಗಿದೆ. ಮಾನವ ಸಂಪನ್ಮೂಲ ಬಳಸಿ ಸುರಂಗದ 10-15 ಮೀಟರ್‍ಗಳನ್ನು ಕೊರೆಯಲು ಸುಮಾರು 18 ಗಂಟೆಗಳ ಕಾಲ ತೆಗೆದುಕೊಳ್ಳಲಿದೆ. ಇದಕ್ಕಾಗಿ ಭಾರತೀಯ ಸೇನೆ, ಕೇಂದ್ರ ಮತ್ತು ರಾಜ್ಯದ ಏಜೆನ್ಸಿಗಳು ಸೇರಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ – ನೆನೆಪಿದೆಯಾ ಆ ಕರಾಳ ದಿನಗಳು..?

    ಅವಶೇಷಗಳ ಅಡಿ ಸಿಲುಕಿರುವ ಆಗರ್ ಯಂತ್ರದ ಭಾಗಗಳನ್ನು ಕತ್ತರಿಸಿ ತೆಗೆಯಲು ಭಾನುವಾರ ಹೈದರಾಬಾದ್‍ನಿಂದ ಪ್ಲಾಸ್ಮಾ ಕಟ್ಟರ್ ತರಿಸಿ ಯತ್ನಿಸಲಾಗಿದೆ. ಅಲ್ಲದೇ ಯಂತ್ರದ ಮೂಲಕ ಕಾರ್ಯಾಚರಣೆ ಮಾಡುವುದನ್ನು ನಿಲ್ಲಿಸಿ, ಕಾರ್ಮಿಕರನ್ನು ಕರತರಲು ಪೈಪ್‍ನ್ನು ಕೈಯ್ಯಾರೆ ತಳ್ಳಲಾಗುತ್ತಿದೆ. ಇದರೊಂದಿಗೆ ಲಂಬವಾಗಿ ಕೊರೆಯಲು ಒಂದು ಯಂತ್ರ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅವಶೇಷಗಳ ಅಡಿ ಸಿಲುಕಿರುವ ಕಾರ್ಮಿಕರಿಗೆ ಪೈಪ್‍ಗಳ ಮೂಲಕ ಆಹಾರ, ಔಷಧ ಹಾಗೂ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನ.12 ರಂದು ಉತ್ತರಕಾಶಿಯಲ್ಲಿ ಬೆ.5 ಗಂಟೆ ಸುಮಾರಿಗೆ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ-ಬರ್ಕೋಟ್ ಸುರಂಗದ ಒಂದು ಭಾಗವು ಕುಸಿದಿತ್ತು. ಇದರಿಂದಾಗಿ ಕೆಲಸ ಮಾಡುತ್ತಿದ್ದ 41 ಕಾರ್ಮಿಕರು ಅವಶೇಷಗಳೊಳಗೆ ಸಿಲುಕಿಕೊಂಡಿದ್ದಾರೆ. ಸಿಲುಕಿದವರ ರಕ್ಷಣೆಗೆ ಕಳೆದ 15 ದಿನಗಳಿಂದ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತ