Tag: Silicon Valley Bank

  • ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನಂತೆ ಅಮೆರಿಕದ 186 ಬ್ಯಾಂಕ್‌ಗಳು ಅಪಾಯದಲ್ಲಿ – ಅಧ್ಯಯನ

    ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ನಂತೆ ಅಮೆರಿಕದ 186 ಬ್ಯಾಂಕ್‌ಗಳು ಅಪಾಯದಲ್ಲಿ – ಅಧ್ಯಯನ

    ನ್ಯೂಯಾರ್ಕ್: ಅಮೆರಿಕದ (America) ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ (Silicon Valley Bank) ನಷ್ಟದಿಂದಾಗಿ ಬಾಗಿಲು ಮುಚ್ಚಿದೆ. ಅದೇ ರೀತಿ ದೇಶದ 186 ಬ್ಯಾಂಕ್‌ಗಳು ಅಪಾಯದಲ್ಲಿವೆ ಎಂದು ಅಧ್ಯಯನವೊಂದು ತಿಳಿಸಿದೆ. ವಿಮೆ ಮಾಡಿಸದೇ ಇರುವ ಠೇವಣಿಗಳು ಹಾಗೂ ಹೆಚ್ಚುತ್ತಿರುವ ಬಡ್ಡಿದರಗಳೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

    ಸಾಮಾಜಿಕ ವಿಜ್ಞಾನ ಸಂಶೋಧನಾ ನೆಟ್‌ವರ್ಕ್ (Social Science Research Network) ಅಧ್ಯಯನವು ಈ ಮಾಹಿತಿಯನ್ನು ಬಹಿರಂಗಪಡಿಸಿದೆ. 186 ಬ್ಯಾಂಕ್‌ಗಳು ವಿಮೆ ಮಾಡದ ಠೇವಣಿದಾರರಲ್ಲಿ ಅರ್ಧದಷ್ಟು ಹಣವನ್ನು ಹಿಂಪಡೆದರೆ ವಿಫಲವಾಗಬಹುದು ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ನನ್ನನ್ನು ಕೋರ್ಟ್‌ನಲ್ಲೂ ಕೊಲ್ಬೋದು – ಪಾಕ್ ನ್ಯಾಯಮೂರ್ತಿಗೆ ಪತ್ರ ಬರೆದ ಇಮ್ರಾನ್ ಖಾನ್

    ಗ್ರಾಹಕರ ಠೇವಣಿ ಹಣವನ್ನು ಬಾಂಡ್‌ ಖರೀದಿಗೆ ಬ್ಯಾಂಕ್‌ ಬಳಸಿತು. ಬಾಂಡ್‌ಗಳಿಂದ ಬರಬೇಕಿದ್ದ ಆದಾಯ ಕುಸಿದಿದ್ದರಿಂದ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಅಲ್ಲದೇ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್ ರಿಸರ್ವ್, ಬಡ್ಡಿದರಗಳಲ್ಲಿ ಏರಿಕೆ ಮಾಡಿದೆ. ಇದರಿಂದ ನವೋದ್ಯಮಗಳು ಸಹ ಬಂದ್‌ ಆಗುತ್ತಿವೆ. ಪರಿಣಾಮವಾಗಿ ಬ್ಯಾಂಕ್‌ಗಳು ಸಂಕಷ್ಟದ ಸುಳಿಗೆ ಸಿಲುಕಿವೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಿದೆ.

    ನವೋದ್ಯಮಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದ ಅಮೆರಿಕದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ದಿವಾಳಿಯಾಗಿ ಕೆಲ ದಿನಗಳ ಹಿಂದೆಯಷ್ಟೇ ಬಾಗಿಲು ಮುಚ್ಚಿತು. ಇದರ ಬೆನ್ನಲ್ಲೇ ಸಿಗ್ನೇಚರ್‌ ಬ್ಯಾಂಕ್‌ ಸಹ ಆರ್ಥಿಕ ಸಂಕಷ್ಟದಿಂದ ಬಂದ್‌ ಆಯಿತು. ಹೀಗಾಗಿ ಅಮೆರಿಕದ ಹಲವು ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ಕುರಿತು ಸಂಶೋಧನೆ ನಡೆಸಲಾಗಿದೆ. ಇದನ್ನೂ ಓದಿ: 92ನೇ ವಯಸ್ಸಿನಲ್ಲಿ 5ನೇ ಮದುವೆ – ಇದು ಕೊನೆಯದ್ದು ಎಂದ ಮುರ್ಡೋಕ್‌

  • ಅಮೆರಿಕನ್ ಬ್ಯಾಂಕ್ ದಿವಾಳಿ – ಮಾಧ್ಯಮಗಳ ಪ್ರಶ್ನೆ ನಿರ್ಲಕ್ಷಿಸಿ ಹೊರನಡೆದ ಬೈಡನ್

    ಅಮೆರಿಕನ್ ಬ್ಯಾಂಕ್ ದಿವಾಳಿ – ಮಾಧ್ಯಮಗಳ ಪ್ರಶ್ನೆ ನಿರ್ಲಕ್ಷಿಸಿ ಹೊರನಡೆದ ಬೈಡನ್

    ವಾಷಿಂಗ್ಟನ್: ಅಮೆರಿಕದಲ್ಲಿ (America) ಬ್ಯಾಂಕ್‌ಗಳು ದಿವಾಳಿಯಾಗುತ್ತಿರುವ (Bankrupt) ಹಿನ್ನೆಲೆ ಅಧ್ಯಕ್ಷ ಜೋ ಬೈಡನ್‌ಗೆ (Joe Biden) ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಈ ಕುರಿತು ಪ್ರಶ್ನೆಯನ್ನು ಕೇಳಿದ್ದರು. ಆದರೆ ಯುಎಸ್ ಅಧ್ಯಕ್ಷ ಅವರ ಪ್ರಶ್ನೆಗಳನ್ನು ನಿರ್ಲಕ್ಷಿಸಿ ಹೊರನಡೆದಿದ್ದಾರೆ. ಇದರಿಂದ ಬೈಡನ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

    ಬೈಡನ್ ಸುದ್ದಿಗೋಷ್ಠಿಯಲ್ಲಿ ಕೊನೆಯದಾಗಿ ಚೇತರಿಸಿಕೊಳ್ಳುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿರ್ವಹಿಸುವುದು ಹಾಗೂ ನಮ್ಮ ಐತಿಹಾಸಿಕ ಚೇತರಿಕೆಯನ್ನು ರಕ್ಷಿಸುವಲ್ಲಿ ಕೆಲಸ ಮಾಡುವುದಾಗಿ ತಿಳಿಸಿ ಮಾತನ್ನು ಮುಗಿಸಿದ್ದಾರೆ. ಈ ವೇಳೆ ವರದಿಗಾರರೊಬ್ಬರು, ಬ್ಯಾಂಕ್‌ಗಳು ಏಕೆ ದಿವಾಳಿಯಾಗುತ್ತಿದೆ? ನೀವು ಇನ್ನು ಮುಂದೆ ಈ ರೀತಿ ಬ್ಯಾಂಕ್‌ಗಳು ದಿವಾಳಿಯಾಗುವುದಿಲ್ಲ ಎಂದು ಅಮೆರಿಕನ್ನರಿಗೆ ಭರವಸೆ ನೀಡಬಹುದೇ ಎಂದು ಪ್ರಶ್ನಿಸಿದ್ದಾರೆ.

    ಅಮೆರಿಕ ಅಧ್ಯಕ್ಷ ವರದಿಗಾರರ ಪ್ರಶ್ನೆಗೆ ಉತ್ತರಿಸದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದೇ ವೇಳೆ ಮತ್ತೊಬ್ಬ ವರದಿಗಾರರು ಈಗಾಗಲೇ ದಿವಾಳಿಯಾಗಿರುವ ಬ್ಯಾಂಕುಗಳಂತೆ ಇತರ ಬ್ಯಾಂಕುಗಳ ಸ್ಥಿತಿಯೂ ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ ಬೈಡನ್ ವರದಿಗಾರರೆಡೆ ಕಣ್ಣು ಹಾಯಿಸದೇ ಸುದ್ದಿಗೋಷ್ಠಿ ನಡೆಯುತ್ತಿದ್ದ ಕೊಠಡಿಯನ್ನು ತೊರೆದಿದ್ದಾರೆ. ಇದನ್ನೂ ಓದಿ: Bengaluru Mysuru Expressway- ಟೋಲ್ ಸಂಗ್ರಹ ಪ್ರಾರಂಭವಾದ ಮೊದಲ ದಿನವೇ ತಾಂತ್ರಿಕ ದೋಷ

    ಇದೀಗ ಬೈಡನ್ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸದೇ ಅಲ್ಲಿಂದ ಜಾಗ ಖಾಲಿ ಮಾಡಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಅಮೆರಿಕದಲ್ಲಿ ಬ್ಯಾಂಕುಗಳು ದಿವಾಳಿಯಾಗುತ್ತಿರುವ ಬಗ್ಗೆ ಅಧ್ಯಕ್ಷರು ಜನರಿಗೆ ಯಾವುದೇ ರೀತಿಯ ಭರವಸೆ ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ.

    ಕಳೆದ ವಾರ ಸಿಲಿನಾನ್ ವ್ಯಾಲಿ ಬ್ಯಾಂಕ್ (Silicon Valley Bank) ದಿವಾಳಿಯಾದ ಬೆನ್ನಲ್ಲೇ ಅಮೆರಿಕದ ಅಧಿಕಾರಿಗಳು ಮತ್ತೊಂದು ಟೆಕ್ ಸ್ನೇಹಿ ಸಿಗ್ನೇಚರ್ ಬ್ಯಾಂಕ್ ಅನ್ನು ಮುಚ್ಚಿದ್ದಾರೆ. ಬ್ಯಾಂಕ್‌ಗಳ ಠೇವಣಿದಾರರು ಹಾಗೂ ಹೂಡಿಕೆದಾರರು ಬೃಹತ್ ಮೊತ್ತದ ಹಣವನ್ನು ಹಿಂಪಡೆದಿರುವ ಪರಿಣಾಮವಾಗಿ ಬ್ಯಾಂಕ್‌ನ ನಗದು ವ್ಯವಹಾರದಲ್ಲಿ ಕೊರತೆ ಕಂಡುಬಂದಿದೆ. ಈ ಹಿನ್ನೆಲೆ ಈ ಬ್ಯಾಂಕ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಫುಲ್ ಡಿಮ್ಯಾಂಡ್: ಹಿಂದೆ ಎಷ್ಟಿತ್ತು? ಈಗ ಎಷ್ಟು ಹೆಚ್ಚಾಗಿದೆ?

  • UK ಸಿಲಿಕಾನ್ ವ್ಯಾಲಿ ಬ್ಯಾಂಕ್ ಘಟಕವನ್ನು 99 ರೂ.ಗೆ ಖರೀದಿದ HSBC

    UK ಸಿಲಿಕಾನ್ ವ್ಯಾಲಿ ಬ್ಯಾಂಕ್ ಘಟಕವನ್ನು 99 ರೂ.ಗೆ ಖರೀದಿದ HSBC

    ಲಂಡನ್: ಸ್ಟಾರ್ಟ್ಅಪ್‌ಗಳಿಗೆ ಸಾಲ ನೀಡಲು ಹೆಸರುವಾಸಿಯಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅಮೆರಿಕದಲ್ಲಿ (USA) ದಿವಾಳಿಯಾಗಿರುವ ಬೆನ್ನಲ್ಲೇ ಸಿಲಿಕಾನ್ ವ್ಯಾಲಿ ಬ್ಯಾಂಕಿನ ಬ್ರಿಟನ್ ಘಟಕವನ್ನು ಹೆಚ್‌ಎಸ್‌ಬಿಸಿ (HSBC) ಕೇವಲ 1 ಪೌಂಡ್‌ಗೆ (99.86 ರೂಪಾಯಿ) ಖರೀದಿಸಿದೆ.

    ಮಾರ್ಚ್ 10ರ ಹೊತ್ತಿಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಯುಕೆ ಘಟಕವು ಸುಮಾರು 5.5 ಬಿಲಿಯನ್ ಪೌಂಡ್ ಸಾಲಗಳನ್ನು ಮತ್ತು ಸುಮಾರು 6.7 ಬಿಲಿಯನ್ ಪೌಂಡ್ ಠೇವಣಿ ಹೊಂದಿದೆ. ಜೊತೆಗೆ ಒಟ್ಟು 8.8 ಶತಕೋಟಿ ಪೌಂಡ್‌ಗಳಷ್ಟು ಬ್ಯಾಲೆನ್ಸ್ ಶೀಟ್ ಗಾತ್ರವನ್ನು ಹೊಂದಿದೆ. ಇದೀಗ ಹೂಡಿಕೆದಾರರಲ್ಲಿ ಮತ್ತಷ್ಟು ಉತ್ಸಾಹ ತುಂಬಲು ಹೆಚ್‌ಎಸ್‌ಬಿಸಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಿಲಿಕಾನ್ ವ್ಯಾಲಿ ಬಳಿಕ ಅಮೆರಿಕದ ಮತ್ತೊಂದು ಬ್ಯಾಂಕ್ ದಿವಾಳಿ

    Silicon Valley Bank

    ಬ್ಯಾಂಕ್‌ನ ಬ್ರಿಟನ್ (UK) ವ್ಯವಹಾರಕ್ಕೆ ಇದು ಅತ್ಯುತ್ತಮ ಕಾರ್ಯತಂತ್ರದ ಅರ್ಥ ನೀಡುವ ಜೊತೆಗೆ ವಾಣಿಜ್ಯ ಬ್ಯಾಂಕಿಂಗ್ ಅನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ ಬ್ರಿಟನ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಹಾಗೂ ಜೀವ-ವಿಜ್ಞಾನ ಕ್ಷೇತ್ರಗಳನ್ನು ಒಳಗೊಂಡಂತೆ ನವೀನ ಮತ್ತು ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಗಳಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಬ್ರಿಟನ್‌ನ ಬ್ಲೂ-ಚಿಪ್ FTSC 100 ಷೇರುಗಳ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ ಶೇ.1ರಷ್ಟು ಕಡಿಮೆಯಾಗಿದೆ. ಸಿಲಿಕಾನ್ ವ್ಯಾಲಿಬ್ಯಾಂಕ್ ಮೌಲ್ಯ ಕುಸಿತದಿಂದ ಎಚ್‌ಎಸ್‌ಬಿಸಿ ಷೇರುಗಳು ಶೇ.1.7ರಷ್ಟು ಕುಸಿದಿವೆ ಎಂದು ಎನ್ನಲಾಗಿದೆ. ಇದನ್ನೂ ಓದಿ: 

    ಆರ್ಥಿಕ ಹಿಂಜರಿತದ ಭೀತಿಯ ನಡುವೆ ಅಮೆದಿಕದ ದೊಡ್ಡ-ದೊಡ್ಡ ಬ್ಯಾಂಕ್‌ಗಳು ದಿವಾಳಿ ಹಂತ ತಲುಪಿತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಒಂದು ದಿನದ ಅಂತರದಲ್ಲಿ ಎರಡು ಬ್ಯಾಂಕ್‌ಗಳು ಬಾಗಿಲುಮುಚ್ಚಿವೆ. ಠೇವಣಿದಾರರು ದೊಡ್ಡ ಮಟ್ಟದಲ್ಲಿ ಹೂಡಿಕೆ ಹಿಂಪಡೆದ ಕಾರಣ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿ ಎದ್ದಿದೆ. ಎಸ್‌ವಿಬಿ ವೈಫಲ್ಯದ ಕಾರಣ ಇದರಲ್ಲಿ ಡೆಪಾಸಿಟ್ ಮಾಡಿದ 10,000 ಚಿಕ್ಕ ಚಿಕ್ಕ ವಾಣಿಜ್ಯ ಸಂಸ್ಥೆಗಳು ತಮ್ಮ 2 ಲಕ್ಷ ಉದ್ಯೋಗಿಗಳಿಗೆ ವೇತನ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ.

    Signature Bank

    ಹಣದುಬ್ಬರ ನಿಯಂತ್ರಿಸಲು ಅಮೆರಿಕಾದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ವಿಪರೀತವಾಗಿ ಹೆಚ್ಚಿಸಿರುವುದೇ ಎಸ್‌ವಿಬಿ ಪತನಕ್ಕೆ ಕಾರಣ ಎನ್ನಲಾಗುತ್ತಿದೆ. ಇದು ಬೇರೆ ದೇಶಗಳಲ್ಲಿನ ಎಸ್‌ವಿಬಿ ಬ್ಯಾಂಕ್‌ಗಳ ಮೇಲೆಯೂ ಪರಿಣಾಮ ಬೀರಿದೆ…

  • ಸಿಲಿಕಾನ್ ವ್ಯಾಲಿ ಬಳಿಕ ಅಮೆರಿಕದ ಮತ್ತೊಂದು ಬ್ಯಾಂಕ್ ದಿವಾಳಿ

    ಸಿಲಿಕಾನ್ ವ್ಯಾಲಿ ಬಳಿಕ ಅಮೆರಿಕದ ಮತ್ತೊಂದು ಬ್ಯಾಂಕ್ ದಿವಾಳಿ

    ವಾಷಿಂಗ್ಟನ್: ಸ್ಟಾರ್ಟ್ಅಪ್‌ಗಳಿಗೆ ಸಾಲ ನೀಡಲು ಹೆಸರುವಾಸಿಯಾಗಿದ್ದ ಅಮೆರಿಕದ (America) ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ದಿವಾಳಿಯಾಗಿರುವ ಬೆನ್ನಲ್ಲೇ ಅಮೆರಿಕದ ಅಧಿಕಾರಿಗಳು ಮತ್ತೊಂದು ಟೆಕ್ ಸ್ನೇಹಿ ಬ್ಯಾಂಕ್ ಅನ್ನು ಮುಚ್ಚಿರುವುದಾಗಿ ಘೋಷಿಸಿದ್ದಾರೆ.

    ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ದಿವಾಳಿಯಾದ ಬೆನ್ನಲ್ಲೇ ಸಿಗ್ನೇಚರ್ ಬ್ಯಾಂಕ್ (Signature Bank) ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಬ್ಯಾಂಕ್ ಕ್ರಿಪ್ಟೋಕರೆನ್ಸಿಗಳ ಸ್ಟಾಕ್ ಅನ್ನು ಹೊಂದಿತ್ತು. ಇದೀಗ ಅಪಾಯದ ದೃಷ್ಟಿಯಿಂದ ಬ್ಯಾಂಕ್ ಅನ್ನು ಸ್ವಲ್ಪ ಸಮಯದವರೆಗೆ ಮುಚ್ಚಲಾಗಿದೆ.

    ಸಿಗ್ನೇಚರ್ ಬ್ಯಾಂಕ್ ನ್ಯೂಯಾರ್ಕ್ನಲ್ಲಿರುವ ಪ್ರಾದೇಶಿಕ ಬ್ಯಾಂಕ್ ಆಗಿದೆ. ಕಳೆದ ವರ್ಷ ಕೊನೆಯಲ್ಲಿ ಈ ಬ್ಯಾಂಕ್ ಅನ್ನು ಫೆಡರಲ್ ಡೆಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (FDIC) ತೆಗೆದುಕೊಂಡಿದೆ ಎಂದು ನ್ಯೂಯಾರ್ಕ್ ರಾಜ್ಯ ಹಣಕಾಸು ಸೇವೆಗಳ ಇಲಾಖೆ ತಿಳಿಸಿದೆ. ಸದ್ಯ ಸಿಗ್ನೇಚರ್ ಬ್ಯಾಂಕ್ ಹಾಗೂ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಯಾವುದೇ ನಷ್ಟದ ಹೊರೆಯನ್ನು ತೆರಿಗೆದಾರರು ಭರಿಸುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಲಂಕಾ ವಿರುದ್ಧ ಕಿವೀಸ್‌ಗೆ ರೋಚಕ ಜಯ – 2ನೇ ಬಾರಿ WTC ಫೈನಲ್‌ಗೆ ಭಾರತ

    ಟೆಕ್ ಸ್ಟಾರ್ಟ್ಅಪ್‌ಗಳಿಗೆ ಮೂಲ ಕಂಪನಿಯಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಠೇವಣಿದಾರರು ಹಾಗೂ ಹೂಡಿಕೆದಾರರು ಬರೋಬ್ಬರಿ 42 ಬಿಲಿಯನ್ ಡಾಲರ್‌ನಷ್ಟು (ಸುಮಾರು 282 ಲಕ್ಷ ಕೋಟಿ ರೂ.) ಬೃಹತ್ ಮೊತ್ತದ ಹಣವನ್ನು ಹಿಂಪಡೆದ ಪರಿಣಾಮವಾಗಿ ಬ್ಯಾಂಕ್‌ನ ನಗದು ವ್ಯವಹಾರದಲ್ಲಿ ಕೊರತೆ ಕಂಡುಬಂದಿದೆ. ಈ ಕಾರಣದಿಂದಾಗಿ ಕಳೆದ ವಾರ ಸಿಲಿಕಾನ್ ವ್ಯಾಲಿ ಬ್ಯಾಂಕ್ ವ್ಯವಹಾರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

    ಕಳೆದ ಶುಕ್ರವಾರ ಕ್ಯಾಲಿಫೋರ್ನಿಯಾದ ಬ್ಯಾಂಕಿಂಗ್ ಅಧಿಕಾರಿಗಳು ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಮುಚ್ಚಿದ್ದಾರೆ. 2008ರಲ್ಲಿ ಉಂಟಾದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಳಿಕ ಇದು ಅತ್ಯಂತ ದೊಡ್ಡ ಬ್ಯಾಂಕಿಂಗ್‌ನ ವೈಫಲ್ಯ ಎನಿಸಿಕೊಂಡಿದೆ. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಕೇಂದ್ರ ಸರ್ಕಾರದ ವಿರೋಧ

  • ಅಮೆರಿಕದ ಅತಿದೊಡ್ಡ ಬ್ಯಾಂಕ್ ದಿವಾಳಿ – Silicon Valley Bank ಬಂದ್

    ಅಮೆರಿಕದ ಅತಿದೊಡ್ಡ ಬ್ಯಾಂಕ್ ದಿವಾಳಿ – Silicon Valley Bank ಬಂದ್

    ವಾಷಿಂಗ್ಟನ್: ಸ್ವೀಸ್ ಬ್ಯಾಂಕ್ ನಷ್ಟದ ಬೆನ್ನಲ್ಲೇ ಸ್ಟಾರ್ಟ್‌ಅಪ್‍ಗಳಿಗೆ ಸಾಲ ನೀಡಲು ಹೆಸರುವಾಸಿಯಾದ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ತನ್ನ ವ್ಯವಹಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ.

    ಟೆಕ್ ಸ್ಪಾರ್ಟ್‌ಅಪ್‍ಗಳಿಗೆ (Technology Startups) ಮೂಲ ಕಂಪನಿಯಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್‍ನ ಠೇವಣಿದಾರರು ಹಾಗೂ ಹೂಡಿಕೆದಾರರು ಬರೋಬ್ಬರಿ 282 ಲಕ್ಷ ಕೋಟಿ ರೂ. (42 ಬಿಲಿಯನ್ ಯುಎಸ್ ಡಾಲರ್) ಬೃಹತ್ ಮೊತ್ತದ ಹಣವನ್ನು ಹಿಂಪಡೆದ ಪರಿಣಾಮ ಬ್ಯಾಂಕ್‍ನ ನಗದು ವ್ಯವಹಾರದಲ್ಲಿ ಕೊರತೆ ಕಂಡುಬಂದಿತ್ತು. ಈ ಕಾರಣದಿಂದಾಗಿ ಬ್ಯಾಂಕ್ ವ್ಯವಹಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

    ಕ್ಯಾಲಿಫೋರ್ನಿಯಾ ಬ್ಯಾಂಕಿಂಗ್ ಅಧಿಕಾರಿಗಳು ಶುಕ್ರವಾರ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಮುಚ್ಚಿದ್ದಾರೆ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಇದು ಅತಿದೊಡ್ಡ ಬ್ಯಾಂಕಿಂಗ್‍ನ ವೈಫಲ್ಯವಾಗಿದೆ.

    ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಕಂಪನಿಗಳಿಗೆ ಹಾಗೂ ವೆಂಚರ್ ಕ್ಯಾಪಿಟಲಿಸ್ಟ್ ಹೊಂದಿರುವ ಕಂಪನಿಗಳಿಗೆ ಈ ಬ್ಯಾಂಕ್ ಬೆಂಬಲ ನೀಡಿದೆ. ಅದಲ್ಲದೆ, ಪ್ರಸ್ತುತ ಉದ್ಯಮದ ಪ್ರತಿಷ್ಠಿತ ಬ್ರ್ಯಾಂಡ್ ಆಗಿರುವ ಕಂಪನಿಯನ್ನೂ ಸಿಲಿಕಾನ್ ವ್ಯಾಲಿ ಬ್ಯಾಂಕ್ ಬೆಂಬಲಿಸಿತ್ತು.

    ಬಿಕ್ಕಟ್ಟಿಗೆ ಕಾರಣವೇನು?: ಎಸ್‍ವಿಬಿ ಮಾತೃ ಸಂಸ್ಥೆಯಾದ ಎಸ್‍ವಿಬಿ ಫೈನಾನ್ಸಿಯಲ್ ಗ್ರೂಪ್, ತನ್ನ ಭಾಗವಾಗಿರುವ 21 ಬಿಲಿಯನ್ ಡಾಲರ್‍ನಷ್ಟು ಮೌಲ್ಯದ ಬಾಂಡ್ಸ್ ಮತ್ತು ಡಿಬೆಂಚರ್ಸ್ ಅನ್ನು ಮಾರಾಟ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಹೂಡಿಕೆದಾರರು ಮತ್ತು ಠೇವಣಿದಾರರಲ್ಲಿ ಆತಂಕ ಹುಟ್ಟಿಸಲು ಕಾರಣವಾಗಿತ್ತು. ಇದರ ಮುಂದುವರಿದ ಭಾಗವಾಗಿ ಸಿಲಿಕಾನ್ ವ್ಯಾಲಿ ಬ್ಯಾಂಕ್‍ನ ಗ್ರಾಹಕರು ಭಾರೀ ಪ್ರಮಾಣದ ಠೇವಣಿ ಹಿಂಪಡೆದಿದ್ದು, ಸ್ಟಾರ್ಟ್‍ಅಪ್ ಇಂಡಸ್ಟ್ರಿ ಮೇಲೆ ದೊಡ್ಡ ಹೊಡೆತ ಬಿದ್ದಿದೆ.

    ಇದರಿಂದಾಗಿ ಸಿಲಿಕಾನ್ ವ್ಯಾಲಿ ಬ್ಯಾಂಕ್‍ನಲ್ಲಿ ಆರ್ಥಿಕ ಕುಸಿತ ಉಂಟಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಎಸ್‍ವಿಬಿ ಷೇರು ಮೌಲ್ಯ ಕುಸಿತ ಕಂಡಿತ್ತು. ಇದರ ಪರಿಣಾಮವಾಗಿ 80 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚನೆ ನೀಡಿದೆ. ಇದನ್ನೂ ಓದಿ: ಮಹಿಳೆಯರ ಮನ ಗೆಲ್ಲಲು ಹೊರಟ ಬಿಜೆಪಿ – ಕಮಲ್ ಮಿತ್ರ ಹೆಸರಿನಲ್ಲಿ ಹೊಸ ಅಭಿಯಾನ

    ಸೋಮವಾರ ಬೆಳಗ್ಗೆ ಬ್ಯಾಂಕ್‍ನ ಎಲ್ಲ ಶಾಖೆಗಳನ್ನು ತೆರೆದ ನಂತರ ಅವರು ವಿಮೆ ಮಾಡಿದ ಠೇವಣಿಗಳನ್ನು ವಾಪಸ್ ನೀಡುವುದಾಗಿ ಠೇವಣಿದಾರರಿಗೆ ಎಫ್‍ಡಿಐಸಿ ಭರವಸೆ ನೀಡಿದೆ. ಇದನ್ನೂ ಓದಿ: ಎರಡು ಕಾಲಿರುವ ಯಾರೇ ಬಂದರೂ ಚುನಾವಣೆಯಲ್ಲಿ ಎದುರಿಸಲು ಸಿದ್ಧ: ಬಿ.ನಾಗೇಂದ್ರ