Tag: Silent

  • ‘ನಾನು ಸೈಲೆಂಟ್ ಅಲ್ಲ ವೈಲೆಂಟ್’ ಎಂದು ಖಡಕ್ ಎಚ್ಚರಿಕೆ ಕೊಟ್ಟ ಆರ್ಯವರ್ಧನ್ ಗುರೂಜಿ

    ‘ನಾನು ಸೈಲೆಂಟ್ ಅಲ್ಲ ವೈಲೆಂಟ್’ ಎಂದು ಖಡಕ್ ಎಚ್ಚರಿಕೆ ಕೊಟ್ಟ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ 9ನೇ (Bigg Boss Season 9) ಸೀಸನ್ ಶುರುವಾಗಿದೆ. ಪ್ರವೀಣರ ಜೊತೆ ನವೀನರ ಜುಗಲ್ ಬಂದಿ ಕೂಡ ಜೋರಾಗಿದೆ. ಇದೀಗ ದೊಡ್ಮನೆಯಲ್ಲಿ ಮೊದಲ ದಿನವೇ ಜಗಳ ಶುರುವಾಗಿದ್ದು,  ಕೆಣಕಲು ಬಂದ ಪ್ರಶಾಂತ್ ಸಂಬರ್ಗಿಗೆ ಆರ್ಯವಧನ್ ಗುರೂಜಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?

    ದೊಡ್ಮನೆಯಲ್ಲಿ 18 ಜನ ಭಿನ್ನ ವ್ಯಕ್ತಿಗಳಿದ್ದಾರೆ. ಮನೆಯ ರಂಗು ಮತ್ತಷ್ಟು ಜೋರಾಗಿದೆ. ಇನ್ನೂ ಈ ವೇಳೆ ಗುರೂಜಿ ಪ್ರಶಾಂತ್ ಸಂಬರ್ಗಿ (Prashant Sambargi) ಅವರನ್ನು ಸಂಪಂಗಿ ಅಂದಿದ್ದಾರೆ. ಈ ಮಾತು ಜಗಳಕ್ಕೆ ಎಡೆ ಮಾಡಿ ಕೊಟ್ಟಿದೆ. ರೀ ಅದು ಸಂಬರ್ಗಿ ಊರಿನ ಹೆಸರು ಎಂದು ಪ್ರಶಾಂತ್ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಬಳಿಕ ನೀವು ಆರ್ಯವರ್ಧನ್ ಅಂತಾ ಯಾಕೆ  ಇಟ್ಟುಕೊಂಡ್ರಿ ನಾನು ಹೇಳಲಾ ನಿಮ್ಮ ನಿಜವಾದ ಹೆಸರು ಎಂದು ಪ್ರಶಾಂತ್, ಗುರೂಜಿಗೆ ಟಾಂಗ್ ಕೊಟ್ಟಿದ್ದಾರೆ.

    ಆರ್ಯವರ್ಧನ್ (Aryavardhan Guruji) ಉರುಫ್ ಏನು ಎಂದು ಪ್ರಶಾಂತ್ ಮತ್ತೆ ಕೇಳಿದ್ದಾರೆ. ಈ ಮಾತಿನ ಚಕಮಕಿ ಉರ್ಫಿಯಿಂದ ಉರಿಸೋದರವೆಗೆ ಚರ್ಚೆ ಆಗಿದೆ. ಈ ಜಗಳದ ನಡುವೆ ಇತ್ತ ಅರುಣ್ ಸಾಗರ್ (Arun Sagar) ಉರ್ಫಿಗೆ ಉರವಿದ್ದಾರೆ ಎಂದು ನಗೆಚಟಾಕಿ ಹಾರಿಸಿದ್ದಾರೆ. ಇವರು ಇನ್ಮೇಲೆ ಆರ್ಯವರ್ಧನ್ ಉರಸು ಎಂದು ಅರಣ್ ಸಾಗರ್ ಮನೆ ಮಂದಿ ಮುಂದೆ ಹೇಳಿದ್ದಾರೆ. ಅಷ್ಟಕ್ಕೇ ನಿಲ್ಲದ ಈ ಚರ್ಚೆ ಕಡೆಗೆ ಗುರೂಜಿ ಸಂಬರ್ಗಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ನನಗೆ ಏನೇ ಹೇಳಬೇಕಿದ್ದರೂ ನೇರವಾಗಿ ಹೇಳಿ ಎಂದು ನಾನು ಸೈಲೆಂಟ್ (Silent) ಅಲ್ಲ ವೈಲೆಂಟ್.. ಫೈಯರ್ ನಾನು‌ ಎಂದು ಸಂಬರ್ಗಿಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ. ಉರಿಸಲು ಬಂದ ಪ್ರಶಾಂತ್ ಗೆ ಪಂಚಿಂಗ್ ಡೈಲಾಗ್ ಗಳ ಮೂಲಕ ಗುರೂಜಿ ಬೆವರಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ಕಸ್ಟಡಿಯಲ್ಲಿ ಅಮೂಲ್ಯ ಲಿಯೋನಾ ಸೈಲೆಂಟೋ ಸೈಲೆಂಟ್

    ಪೊಲೀಸ್ ಕಸ್ಟಡಿಯಲ್ಲಿ ಅಮೂಲ್ಯ ಲಿಯೋನಾ ಸೈಲೆಂಟೋ ಸೈಲೆಂಟ್

    ಬೆಂಗಳೂರು: ಪಾಕ್ ಪರ ಘೋಷಣೆ ಕೂಗಿ ಜೈಲು ಪಾಲಾಗಿರೋ ದೇಶದ್ರೋಹಿ ಅಮೂಲ್ಯ ಲಿಯೋನಾ ಈಗ ಫುಲ್ ಸೈಲೆಂಟ್. ಪಾಕಿಸ್ತಾನಕ್ಕೆ ಜೈಕಾರ ಹಾಕಿ ಜೈಲಿಗೆ ಹೋಗುವಾಗ ವಿಕ್ಟರಿ ಸಿಂಬಲ್ ತೋರಿಸಿ ಹೋಗಿದ್ದ ಅಮೂಲ್ಯ ಈಗ ಫುಲ್ ಸೈಲೆಂಟ್ ಆಗಿದ್ದಾಳೆ. ಮಾಡಿದ ತಪ್ಪಿಗೆ ಜೈಲೇನೋ ಆಯ್ತು ಬಳಿಕ ಜಾಮೀನನ್ನು ಪಡೆದು ಹೊರಗೆ ಹೋಗೋಣ ಅಂದುಕೊಂಡಿದ್ದ ಅಮೂಲ್ಯಗೆ ಪೊಲೀಸರು ಶಾಕ್ ನೀಡಿದ್ದರು.

    ಯಾವಾಗ ಪೊಲೀಸರು ಪೊಲೀಸ್ ಕಸ್ಟಡಿಗೆ ಅಮೂಲ್ಯಳನ್ನು ಪಡೆದುಕೊಂಡರೋ ಬಳಿಕ ಫುಲ್ ಸೈಲೆಂಟ್ ಆಗಿ ಹೋಗಿದ್ದಾಳೆ. ವಿಕ್ಟರಿ ಸಿಂಬಲ್ ಕೂಡ ಇಲ್ಲ, ಪಾಕ್ ಪರ ಮಾತುಕತೆಯೂ ಇಲ್ಲ. ನಾನು ಮಾಡಿದ್ದು ಸರಿ ಅಷ್ಟೇ, ಆಯೋಜಕರು ಮಾಡಿದ್ದ ತಪ್ಪಿಗೆ ನಾನು ಈಗ ಜೈಲು ಸೇರಿದ್ದೇನೆ. ನಾನೇನೂ ದೇಶದ್ರೋಹಿ ಅಲ್ಲ ಎಂದು ಹೇಳಿ ಸೈಲೆಂಟ್ ಆಗಿದ್ದಾಳೆ.

    ಜೈಲಿನಲ್ಲಿ ಅಮೂಲ್ಯಳನ್ನು ನೋಡುವುದಕ್ಕೆ ಸ್ನೇಹಿತೆಯರು ಬಾರದ ಹಿನ್ನೆಲೆಯಲ್ಲಿ ಬೇಸರ ಮಾಡಿಕೊಂಡಿದ್ದು, ಮಾನಸಿಕವಾಗಿಯೂ ಖಿನ್ನತೆಗೆ ಒಳಗಾಗಿದ್ದಾಳೆ ಅನ್ನೋ ಮಾಹಿತಿ ತಿಳಿದು ಬಂದಿದೆ. ಸದ್ಯ ಪೊಲೀಸರ ಬಲೆಯಲ್ಲಿ ಇರುವ ಅಮೂಲ್ಯ ಈಗ ಫುಲ್ ಸೈಲೆಂಟ್ ಆಗಿದ್ದಾಳೆ.