Tag: silencer

  • ಯುವಕರಿಗೆ ಸಂಚಾರಿ ಅರಿವು ಮೂಡಿಸಲು ಮಾಸ್ಟರ್ ಪ್ಲಾನ್ – ಬೈಕ್ ಸೈಲೆನ್ಸರ್ ನಾಶಪಡಿಸಿದ ಪೊಲೀಸರು

    ಯುವಕರಿಗೆ ಸಂಚಾರಿ ಅರಿವು ಮೂಡಿಸಲು ಮಾಸ್ಟರ್ ಪ್ಲಾನ್ – ಬೈಕ್ ಸೈಲೆನ್ಸರ್ ನಾಶಪಡಿಸಿದ ಪೊಲೀಸರು

    ಕೋಲಾರ: ನಗರದಲ್ಲಿ ಕರ್ಕಶ ಶಬ್ದ ಮಾಡುತ್ತಿದ್ದ ನೂರಾರು ಬೈಕ್‌ಗಳ ಸೈಲೆನ್ಸರ್‌ಗಳನ್ನು ನಾಶ ಮಾಡುವ ಮೂಲಕ ಪೊಲೀಸರು ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲಾ ರಕ್ಷಣಾಧಿಕಾರಿ ಡಿ ದೇವರಾಜ್ ನೇತೃತ್ವದಲ್ಲಿ ಪೊಲೀಸರ ತಂಡ ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜು ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಬೈಕ್ ಸೈಲೆನ್ಸರ್‌ಗಳನ್ನು ನಾಶ ಮಾಡಿದರು. ಭಾರೀ ಕರ್ಕಶ ಸದ್ದು ಹಾಗೂ ವ್ಹೀಲಿಂಗ್ ಮಾಡುತ್ತಿದ್ದ ಬೈಕ್‌ಗಳ ಸೈಲೆನ್ಸರ್‌ಗಳ ಮೇಲೆ ರೋಡ್ ರೋಲರ್ಸ್ ಹರಿಸಿ ನಾಶಪಡಿಸಲಾಯಿತು. ಇದನ್ನೂ ಓದಿ: ಸಮಾನತೆಯ ಸಂದೇಶದೊಂದಿಗೆ ವಿದ್ಯಾರ್ಥಿನಿಯರಿಂದ ಬೈಕ್ ರ‍್ಯಾಲಿ

    ಕಳೆದ ಒಂದೂವರೆ ತಿಂಗಳನಿಂದ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 85 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದರು. ವ್ಹೀಲಿಂಗ್ ಮಾಡುವವರಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದ್ದು, ಕೋಲಾರ ಗ್ರಾಮಾಂತರ ಪೊಲೀಸರು ವಿಶೇಷ ರೈಡ್ ಮಾಡಿದ್ದರು. ಅದರಂತೆ ಸುಮಾರು 1.85 ಲಕ್ಷ ರೂ. ದಂಡ ಹಾಕಿ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದರು.

    ಯುವಕರು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ವ್ಹೀಲಿಂಗ್ ಮಾಡಿದವರ ಬೈಕ್ ಸೀಜ್ ಮಾಡಿ ಐಪಿಸಿ ಸೆಕ್ಷನ್ ಪ್ರಕಾರ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು. ಮುಂದೆ ಅಂತಹ ಸೈಲೆನ್ಸರ್‌ಗಳ ಮಾರಾಟ ಮಾಡುವವರ ಮೇಲೂ ನಿಗಾ ಇಟ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ: ಡೀಮ್ಡ್ ಅಧ್ಯಕ್ಷ

    ಟ್ರಾಫಿಕ್ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಬಾಡಿ ಕ್ಯಾಮೆರಾ ಅಳವಡಿಸಲಾಗಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವವರ ಮೇಲೆ ನಿಗಾ ಇಡಲಾಗುವುದು. ಹೀಗಾಗಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕೆಂದು ಕೋಲಾರ ಎಸ್ಪಿ ದೇವರಾಜ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

  • ಸೈಲೆನ್ಸರ್ ವಿರೂಪಗೊಳಿಸಿ ಚಾಲನೆ – 40ಕ್ಕೂ ಹೆಚ್ಚು ವಾಹನಗಳ ಮೇಲೆ ಕ್ರಮ

    ಸೈಲೆನ್ಸರ್ ವಿರೂಪಗೊಳಿಸಿ ಚಾಲನೆ – 40ಕ್ಕೂ ಹೆಚ್ಚು ವಾಹನಗಳ ಮೇಲೆ ಕ್ರಮ

    ಬೆಂಗಳೂರು: ವಿರೂಪಗೊಳಿಸಿದ ಹಾಗೂ ಮಾರ್ಪಾಡಿತ ಸೈಲೆನ್ಸರ್ ಹೊಂದಿದ ವಾಹನಗಳ ವಿರುದ್ಧ ಹಾಸನ-ನೆಲಮಂಗಲ ಟೋಲ್ ಗೇಟ್ ಬಳಿ ಸಾರಿಗೆ ಅಧಿಕಾರಿಗಳು ಇಂದು ಕಾರ್ಯಾಚರಣೆ ನಡೆಸಿ 300 ಹೈಎಂಡ್ ಬೈಕ್ ಹಾಗೂ 60ಕ್ಕೂ ಹೆಚ್ಚು ಕಾರುಗಳ ಪರಿಶೀಲನೆ ನಡೆಸಿದರು.

    ಸೈಲೆನ್ಸರ್ ವಿರೂಪಗೊಳಿಸಿ ವಾರಾಂತ್ಯಗಳಲ್ಲಿ ಜಾಲಿ ರೈಡ್‍ಗೆ ಮಾತ್ರ ಹಲವಾರು ವಾಹನಗಳನ್ನು ಬಹಳಸಲಾಗುತ್ತಿರುವ ಅಂಶ ಸಾರಿಗೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಇದನ್ನು ತಡೆಗಟ್ಟುವ ಹಾಗೂ ಪತ್ತೆಹಚ್ಚುವ ನಿಟ್ಟಿನಲ್ಲಿ ಇಂದು ಕಾರ್ಯಾಚರಣೆಯನ್ನು ನಡೆಸಲಾಯಿತು.

    ಈ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಬೈಕುಗಳು ಹಾಗೂ 60ಕ್ಕೂ ಹೆಚ್ಚು ಕಾರುಗಳನ್ನು ತಪಾಸಣೆಗೊಳಿಸಲಾಯಿತು. ಈ ವೇಳೆ ಸೈಲೆನ್ಸರ್ ವಿರೂಪಗೊಳಿಸದ್ದ 40 ಕ್ಕೂ ಹೆಚ್ಚು ವಾಹನಗಳ ಮೇಲೆ ದೂರು ದಾಖಲಿಸಿಕೊಂಡಿರುವ ಸಾರಿಗೆ ಅಧಿಕಾರಿಗಳು ಅವುಗಳ ಆರ್‍ಸಿ ರದ್ದುಗೊಳಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಮೋಟಾರ್ ವಾಹನ ನಿರೀಕ್ಷಕ ಸುಧಾಕರ್ ತಿಳಿಸಿದ್ದಾರೆ. ಇದನ್ನೂ ಓದಿ: ನಂದಿಬೆಟ್ಟದ ತಪ್ಪಲಲ್ಲಿ ರಾಜಾರೋಷವಾಗಿ ಪ್ರವಾಸಿಗರಿಂದ ಹುಕ್ಕಾ ಸೇವನೆ

    ಸಾರಿಗೆ ಇಲಾಖೆ ಅಪರ ಮುಖ್ಯ ಆಯುಕ್ತರಾದ ನರೇಂದ್ರ ಹೋಳ್ಕರ್ ಹಾಗೂ ಜಂಟಿ ಸಾರಿಗೆ ಆಯುಕ್ತರಾದ ಹಾಲಪ್ಪಸ್ವಾಮಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಯಿತು. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್ ರಾಜಣ್ಣ, ಮೋಟಾರ್ ವಾಹನ ನೀರೀಕ್ಷಕರುಗಳಾದ ರಂಜಿತ್ (ದೇವನಹಳ್ಳಿ ಭಾಗದಲ್ಲಿ) ಚೇತನ್, ಸುಧಾಕರ್, ಸುಂದರ್ ಮತ್ತು ರಂಜಿತ್ (ನೆಲಮಂಗಲ-ಹಾಸನ ಟೋಲ್‍ಗೇಟ್) ಅವರನ್ನೊಳಗೊಂಡ ಮೂರು ತಂಡ ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿತು.

  • ಕಾರು ಸೈಲೆನ್ಸರ್ ಕದ್ದು 21 ಲಕ್ಷ ಗಳಿಸಿದ ಚೋರರು ಪೊಲೀಸರ ಬಲೆಗೆ

    ಕಾರು ಸೈಲೆನ್ಸರ್ ಕದ್ದು 21 ಲಕ್ಷ ಗಳಿಸಿದ ಚೋರರು ಪೊಲೀಸರ ಬಲೆಗೆ

    ಅಹಮದಾಬಾದ್: ಇಕೋ ಕಾರುಗಳ ಸೈಲೆನ್ಸ್ ರ್ ಗಳನ್ನು ಕದಿಯುವ ಮೂಲಕ ಲಕ್ಷಾಂತರ ರೂಪಾಯಿ ಹಣಗಳಿಸುತ್ತಿದ್ದ ಕಳ್ಳರನನ್ನು ಪೊಲೀಸರು ಬಂಧಿಸಿರುವ ಘಟನೆ ಅಹಮದಬಾದ್‍ನಲ್ಲಿ ನಡೆದಿದೆ.

    ಕೇವಲ ಒಂದು ವಾರದೊಳಗೆ ಕಳ್ಳರು 21 ಲಕ್ಷ ರೂಪಾಯಿ ಮೌಲ್ಯದ ಸೈಲೆನ್ಸರ್ ಗಳನ್ನು ಕದ್ದಿದ್ದಾರೆ. ಅದರಲ್ಲೂ ಮಾರುತಿ ಸುಜುಕಿ ತಯಾರಿಸಿದ ಇಕೋ ವ್ಯಾನ್‍ಗಳೇ ಇವರ ಮುಖ್ಯ ಟಾರ್ಗೆಟ್. ಒಂದು ಸೈಲೆನ್ಸರ್ ಬೆಲೆ 57,272ರೂ ಆಗಿದ್ದು, ಈ ಚಲಾಕಿ ಕಳ್ಳರು ಕೇವಲ ಒಂದೆರಡು ನಿಮಿಷಗಳಲ್ಲಿ ವಾಹನದ ಕೆಳಗೆ ಇರುವ ಸೈಲೆನ್ಸರ್ ತೆಗೆದು ಹಾಕಿ ಕದಿಯುತ್ತಾರೆ ಎಂದು ವರದಿಯಲ್ಲಿ ತಿಳಿದು ಬಂದಿದೆ.

    ಸನಾಥಲ್‍ನ ಕಿರಣ್ ಮೋಟಾರ್ಸ್ ಮತ್ತು ಬಕ್ರೋಲ್‍ನಲ್ಲಿರು ಸ್ಟಾಕ್‍ಯಾರ್ಡ್‍ನಲ್ಲಿ ನಿಲ್ಲಿಸಿದ್ದ ಸುಮಾರು 33 ವಾಹನಗಳ ಸೈಲೆನ್ಸರ್ ಗಳನ್ನು ಖದೀಮರು ಕದ್ದಿದ್ದಾರೆ. ಈ ಕಳ್ಳರು ಈ ವರೆಗೂ ಸುಮಾರು 20.59 ರೂ. ಮೌಲ್ಯದ ಸೈಲೆನ್ಸರ್ ಗಳನ್ನು ಕದಿದ್ದಾರೆ. ಕಳೆದ ವರ್ಷ ಇದೇ ರೀತಿ 30 ಇಕೋ ವ್ಯಾನ್‍ಗಳ ಸೈಲೆನ್ಸರ್‍ಗಳನ್ನು ಕದಿಯುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದರು.

  • ಕರ್ಕಶ ಶಬ್ದ – ಜೆಸಿಬಿಯಿಂದ ಸೈಲೆನ್ಸರ್ ಬಿಚ್ಚಿ ಪುಡಿ ಪುಡಿ

    ಕರ್ಕಶ ಶಬ್ದ – ಜೆಸಿಬಿಯಿಂದ ಸೈಲೆನ್ಸರ್ ಬಿಚ್ಚಿ ಪುಡಿ ಪುಡಿ

    ದಾವಣಗೆರೆ: ಕರ್ಕಶವಾಗಿ ಶಬ್ದ ವಾಗುವ ಸೈಲೆನ್ಸರ್ ಅಳವಡಿಕೆ ಮಾಡಿದ ದ್ವಿಚಕ್ರ ವಾಹನಗಳ ಮೇಲೆ ದಾವಣಗೆರೆ ಪೊಲೀಸರು ಸಮರ ಸಾರಿದ್ದಾರೆ.

    ದಾವಣಗೆರೆ ನಗರದಲ್ಲಿ ಇಂದು ಆರ್‌ಟಿಓ ಅಧಿಕಾರಿಗಳು ಹಾಗೂ ಪೊಲೀಸರ ಜಂಟಿಯಾಗಿ ಕಾರ್ಯಚರಣೆ ಮಾಡಿ 70ಕ್ಕೂ ಹೆಚ್ಚು ಬುಲೆಟ್ ಸೇರಿದಂತೆ ಹಲವು ಬೈಕ್ ಗಳನ್ನು ಸೀಜ್ ಮಾಡಿದ್ದಲ್ಲದೆ ದಂಡ ಹಾಕಿದ್ದಾರೆ. ಸೀಜ್ ಮಾಡಲಾದ ಬೈಕ್‍ಗಳ ಸೈಲೆನ್ಸರ್ ಕಿತ್ತು ಹಾಕಿ ಜೆಸಿಬಿಯಿಂದ ಪುಡಿ ಮಾಡಿ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

    ಯುವಕರು ತಮ್ಮ ಬೈಕ್‍ಗಳಿಗೆ ಕರ್ಕಶವಾಗಿ ಶಬ್ದಮಾಡುವ ಸೈಲೆನ್ಸರ್ ಅಳವಡಿಸಿಕೊಂಡು ಶಬ್ದ ಮಾಲಿನ್ಯದ ಜೊತೆಗೆ ಪರಿಸರ ಮಾಲಿನ್ಯ ಮಾಡಿಕೊಂಡು ಹೋಗುತ್ತಿದ್ದರು. ಇದರಿಂದ ರೋಸಿಹೋದ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

    ನಗರದಲ್ಲಿ ಕರ್ಕಶವಾಗಿ ಶಬ್ದ ಮಾಡಿಕೊಂಡು ಓಡಾಡುವ ದ್ವಿಚಕ್ರ ವಾಹನಗಳು ಬಹಳ ಇವೆ. ಅವುಗಳನ್ನು ಸಹ ಹಿಡಿದು ದಂಡ ವಿಧಿಸುವುದರ ಜೊತೆ ಸೈಲೆನ್ಸರ್ ಪುಡಿ ಪುಡಿ ಮಾಡುವುದಾಗಿ ಆರ್‌ಟಿಓ ಅಧಿಕಾರಿಗಳು ತಿಳಿಸಿದ್ದಾರೆ.

  • ಏರ್ ಶೋ ಅಗ್ನಿ ಅವಘಡ: ಕಾರಿನ ಓವರ್ ಹೀಟ್ ಸೈಲೆನ್ಸರ್‌ನಿಂದ ಬೆಂಕಿ?

    ಏರ್ ಶೋ ಅಗ್ನಿ ಅವಘಡ: ಕಾರಿನ ಓವರ್ ಹೀಟ್ ಸೈಲೆನ್ಸರ್‌ನಿಂದ ಬೆಂಕಿ?

    ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಓವರ್ ಹೀಟ್ ಆಗಿದ್ದ ಕಾರಿನ ಸೈಲೆನ್ಸರ್ ಕಾರಣ ಎಂಬ ಶಂಕೆ ವ್ಯಕ್ತವಾಗಿರುವುದಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪರಿಶೀಲನೆ ವೇಳೆ ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅವಘಡ ನಡೆದ ಸ್ಥಳದಲ್ಲಿ ಇಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ನಿರ್ಮಲಾ ಸೀತಾರಾಮನ್ ಅವರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಪ್ರದರ್ಶನದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಸೈಲೆನ್ಸರ್ ನಿಂದ ಬೆಂಕಿಯ ಜ್ವಾಲೆ ಆರಂಭವಾಗಿದೆ ಎಂಬ ಬಗ್ಗೆ ವಿವರಣೆ ನೀಡಿದ್ದಾಗಿ ರಕ್ಷಣಾ ವಕ್ತಾರರ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.

    ಬೆಂಕಿ ಕಾಣಿಸಿಕೊಂಡ ವೇಳೆ ವೇಗದ ಗಾಳಿಯಿಂದ ಕೆಲವೇ ಕ್ಷಣಗಳಲ್ಲಿ ಅಗ್ನಿಯ ಜ್ವಾಲೆ ಹೆಚ್ಚಾಗಿ ಇಡೀ ಪ್ರದೇಶವನ್ನು ಆವರಿಸಿಕೊಂಡಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಘಟನೆ ಗಮನಕ್ಕೆ ಬಂದ ಕೂಡಲೇ ವಾಯು ಪಡೆಯ ತುರ್ತು ಸೇವಾ ಅಧಿಕಾರಿಗಳು ಸೇರಿದಂತೆ ಇಲಾಖೆ ಪರಿಹಾರ ಕ್ರಮಗಳನ್ನು ನಡೆಸಿದೆ. ಕೆಲ ವಾಹನಗಳನ್ನು ಬೆಂಕಿಯಿಂದ ರಕ್ಷಣೆ ಮಾಡಿರುವ ಬಗ್ಗೆಯೂ ವಿವರಣೆ ನೀಡಿದ್ದಾರೆ. ಇದನ್ನು ಓದಿ: ಹಣ ಉಳಿಸಲು ಕಾಂಟ್ರ್ಯಾಕ್ಟರ್‌ಗಳು ಮುಂಜಾಗ್ರತ ಕ್ರಮಕೈಗೊಂಡಿಲ್ಲ: ಏರೋ ಶೋ ಹಿಂದಿನ ಕಾಂಟ್ರ್ಯಾಕ್ಟರ್

    ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡ ಸಾರ್ವಜನಿಕರಿಗೆ ನೆರವಾಗಲು ಸಹಾಯವಾಣಿಯನು ತೆರಯಲಾಗಿದ್ದು, 94808 01415 ಮತ್ತು 080-2294 2536 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಇತ್ತ ಏರ್ ಶೋನ ಅಂತಿಮ ದಿನದ ಪ್ರದರ್ಶನ ಆರಂಭಗೊಂಡು ಯಾವುದೇ ಅಡೆ ತಡೆ ಇಲ್ಲದೆ ನಡೆಯುತ್ತಿದೆ. ಬೆಂಕಿಯ ಅವಘಡದ ಬಳಿಕವೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವ್ಹೀಲಿಂಗ್ ಮಾಡ್ತಿದ್ದ ಬೈಕ್ ಸವಾರರಿಗೆ ಶಾಕ್ ಕೊಟ್ಟ ಟ್ರಾಫಿಕ್ ಪೊಲೀಸರು- ವಿಡಿಯೋ ನೋಡಿ

    ವ್ಹೀಲಿಂಗ್ ಮಾಡ್ತಿದ್ದ ಬೈಕ್ ಸವಾರರಿಗೆ ಶಾಕ್ ಕೊಟ್ಟ ಟ್ರಾಫಿಕ್ ಪೊಲೀಸರು- ವಿಡಿಯೋ ನೋಡಿ

    ಹಾಸನ: ಜೋರಾಗಿ ಶಬ್ಧ ಮಾಡುವಂತಹ ಬೈಕ್ ಗಳ ಸೈಲೆನ್ಸರ್ ಗಳನ್ನು ಪೊಲೀಸರು ನಾಶಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.

    ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡುವ ಹಿನ್ನೆಲೆಯಲ್ಲಿ ಹಾಸನ ಸಂಚಾರಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಬುಲೆಟ್, ಯಮಹಾ ಆರ್ ಎಕ್ಸ್ ಸೇರಿದಂತೆ ವಿವಿಧ ಬೈಕ್ ಗಳ ಸುಮಾರು 77 ಸೈಲೆನ್ಸರ್ ಗಳನ್ನು ಪೊಲೀಸರು ಕಿತ್ತುಕೊಂಡಿದ್ದಾರೆ.

    ಹಾಸನ ನಗರದಲ್ಲಿ ಪಡ್ಡೆ ಹುಡುಗರ ಬೈಕ್ ವ್ಹೀಲಿಂಗ್ ದಿನದಿಂದ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು.

    ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಟ್ರಾಫಿಕ್ ಪೊಲೀಸರು ಬೈಕ್ ಗಳನ್ನು ವಶಕ್ಕೆ ಪಡೆದು ಸೈಲೆನ್ಸರ್ ಕಿತ್ತು ಹಾಕಿದ್ದಾರೆ. ಕಿತ್ತು ಹಾಕಿದ ಸೈಲೆನ್ಸರ್ ಮೇಲೆ ಪೊಲೀಸರು ರೋಲರ್ ಓಡಿಸಿದ್ದಾರೆ. ಬಳಿಕ ಸವರಾರಿಗೆ ಎಚ್ಚರಿಕೆ ನೀಡಿ ಬೈಕ್ ಗಳನ್ನು ನೀಡಿದ್ದಾರೆ.

    https://www.youtube.com/watch?v=F71wW9Nvkno

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬೈಕಿಗೆ ಹೆಚ್ಚು ಸದ್ದು ಬರೋ ಸೈಲೆನ್ಸರ್- ಪ್ರಶ್ನಿಸಿದ್ದಕ್ಕೆ ಸ್ನೇಹಿತರ ಜೊತೆ ದಾಂಧಲೆ ನಡೆಸಲು ಹೋಗಿ ಗ್ರಾಮಸ್ಥರಿಂದ ಥಳಿಸಿಕೊಂಡ ಯುವಕ

    ಬೈಕಿಗೆ ಹೆಚ್ಚು ಸದ್ದು ಬರೋ ಸೈಲೆನ್ಸರ್- ಪ್ರಶ್ನಿಸಿದ್ದಕ್ಕೆ ಸ್ನೇಹಿತರ ಜೊತೆ ದಾಂಧಲೆ ನಡೆಸಲು ಹೋಗಿ ಗ್ರಾಮಸ್ಥರಿಂದ ಥಳಿಸಿಕೊಂಡ ಯುವಕ

    ಬೆಂಗಳೂರು: ಬೈಕ್ ಗೆ ಹೆಚ್ಚು ಸದ್ದು ಬರುವಂತಹ ಸೈಲೆನ್ಸರ್ ಹಾಕಿಕೊಂಡಿದ್ದ ಯುವಕರನ್ನು ಗ್ರಾಮಸ್ಥರು ಪ್ರಶ್ನಿಸಿದ್ದಕ್ಕೆ ಅಕ್ರೋಶಗೊಂಡ ಯುವಕ ತನ್ನ ಸ್ನೇಹಿತರನ್ನು ಕರೆತಂದು ದಾಂಧಲೆ ನಡೆಸಲು ಹೋಗಿ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ಥಳಿಸಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಬೆಟ್ಟೆನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಯಲಹಂಕದ ಶೇಷಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿದ್ದವರುವ ಹರೀಶ್ ಮತ್ತು ಹೇಮಂತ್ ಎಂಬ ಯುವಕರು ತಮ್ಮ ಬೈಕ್ ಗೆ ಹೆಚ್ಚು ಶಬ್ದ ಬರುವ ಸೈಲೆನ್ಸರ್ ಅಳವಡಿಸಿಕೊಂಡು ಬಂದು ಗ್ರಾಮದಲ್ಲಿ ಸುತ್ತಾಡುವಾಗ ಗ್ರಾಮಸ್ಥರು ಬೈದು ಕಳುಹಿಸಿದ್ದರು. ಇದ್ರಿಂದ ಅಕ್ರೋಶಗೊಂಡ ಹರೀಶ್ ಹಾಗೂ ಹೇಮಂತ್, ತಮ್ಮ ಕಾಲೇಜಿನ 20 ಯುವಕರೊಂದಿಗೆ ಬೆಟ್ಟೇನಹಳ್ಳಿ ಗ್ರಾಮಕ್ಕೆ ತೆರಳಿ ವಿಕೆಟ್, ಬ್ಯಾಟ್, ಲಾಂಗ್ ತೆಗೆದುಕೊಂಡು ಗಲಾಟೆ ಮಾಡಲು ಮುಂದಾಗಿದ್ದರು.

    ಈ ವೇಳೆ ಗ್ರಾಮಸ್ಥರು ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹರೀಶ್ ಮತ್ತು ಹೇಮಂತ್ ನ ತಂದೆ ಹಾಗೂ ಅಜ್ಜನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.