Tag: sikkim

  • ಟರ್ಕಿ, ಸಿರಿಯಾ ಬೆನ್ನಲ್ಲೇ ಭಾರತದಲ್ಲೂ ಭೂಕಂಪನ

    ಗ್ಯಾಂಗ್ಟಾಕ್: ಟರ್ಕಿ, ಸಿರಿಯಾ (Turkey Syria Earthquake) ದೇಶಗಳಲ್ಲಿ ಭೂಕಂಪನ ಸಂಭವಿಸಿದ್ದು ಸಾವಿರಾರು ಜನರನ್ನ ಬಲಿ ಪಡೆದಿದೆ. ಈಗಾಗಲೇ 33 ಸಾವಿರ ಮಂದಿ ಮೃತಪಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅಲ್ಲದೇ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಈ ಬೆನ್ನಲ್ಲೇ ಸೋಮವಾರ (ಫೆ.13) ಬೆಳ್ಳಂಬೆಳಗ್ಗೆ ಸಿಕ್ಕಿಂನಲ್ಲಿ (Sikkim) 4.3 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ. ಭೂಕಂಪನವು ಸಿಕ್ಕಿಂನ ಯುಕ್ಸೋಮ್‌ನ ವಾಯುವ್ಯ ಭಾಗದಲ್ಲಿ ಮುಂಜಾನೆ 4.15ರ ಸುಮಾರಿಗೆ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ ಗುರುತಿಸಲಾಗಿದೆ. ಇದನ್ನೂ ಓದಿ: ವಾರದಲ್ಲಿ 4ನೇ ಕಾರ್ಯಾಚರಣೆ – ಮತ್ತೊಂದು ಹಾರುವ ವಸ್ತುವನ್ನು ಹೊಡೆದುರುಳಿಸಿದ ಅಮೆರಿಕ

    ಭಾನುವಾರ ಮಧ್ಯಾಹ್ನ ಅಸ್ಸಾಂನ (Assam) ನಾಗಾನ್‌ನಲ್ಲಿ 4.0 ತೀವ್ರತೆಯ ಭೂಕಂಪನ ಸಂಭವಿಸಿದ ಒಂದು ದಿನದ ನಂತರ ಕಂಪನ ಸಂಭವಿಸಿದೆ. ಎರಡು ದಿನಗಳ ಹಿಂದೆಯಷ್ಟೇ ಗುಜರಾತ್‌ನ (Gujarat) ಸೂರತ್ ಜಿಲ್ಲೆಯಲ್ಲೂ 3.8 ತೀವ್ರತೆಯ ಭೂಕಂಪನ ದಾಖಲಾಗಿತ್ತು.

    ಅಫ್ಘಾನ್‌ನಲ್ಲೂ ಭೂಕಂಪನ: ಇಂದು (ಫೆ.13) ಬೆಳಗ್ಗೆ ಅಫ್ಘಾನಿಸ್ತಾನದ (Afghanistan) ಫೈಜಾಬಾದ್‌ನಲ್ಲಿಯೂ 4.3 ತೀವ್ರತೆಯ ಭೂಕಂಪ ಸಂಭವಿಸಿದೆ. ಇಲ್ಲಿನ ಈಶಾನ್ಯ ನಗರವಾದ ಫೈಜಾಬಾದ್‌ನ ಆಗ್ನೇಯಕ್ಕೆ 100 ಕಿಮೀ ದೂರದಲ್ಲಿ ಭೂಕಂಪನ ಉಂಟಾಗಿದೆ. ಬೆಳಗ್ಗೆ 6:47ರ ಸುಮಾರಿಗೆ 135 ಕಿಮೀ ಆಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಭೂಕಂಪನ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

    ಸದ್ಯ ಯಾವುದೇ ಆಸ್ತಿಪಾಸ್ತಿ ಹಾನಿ ಅಥವಾ ಪ್ರಾಣ ಹಾನಿ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜಭವನದಲ್ಲಿ ಮೋದಿ ರಾತ್ರಿ ವಾಸ್ತವ್ಯ – 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಣಿವೆಗೆ ಉರುಳಿದ ಸೇನಾ ವಾಹನ – 16 ಸೈನಿಕರು ಹುತಾತ್ಮ

    ಕಣಿವೆಗೆ ಉರುಳಿದ ಸೇನಾ ವಾಹನ – 16 ಸೈನಿಕರು ಹುತಾತ್ಮ

    ಗ್ಯಾಂಗ್ಟಾಕ್: ಭಾರತೀಯ ಸೇನಾ ವಾಹನವು (Army Truck) ಕಣಿವೆಗೆ ಉರುಳಿ 16 ಯೋಧರು ಹುತಾತ್ಮರಾಗಿರುವ ದುರ್ಘಟನೆ ಉತ್ತರ ಸಿಕ್ಕಿಂನ (Sikkim) ಝೆಮಾ ಎಂಬಲ್ಲಿ ನಡೆದಿದೆ.

    ಸೈನಿಕರು (Soldiers) ಪ್ರಯಾಣಿಸುತ್ತಿದ್ದ ಟ್ರಕ್ ಕಡಿದಾದ ಇಳಿಜಾರಿನಲ್ಲಿ ಆಯತಪ್ಪಿ ಕಣಿವೆಗೆ ಬಿದ್ದಿದ್ದರಿಂದ ಭಾರತೀಯ ಸೇನೆಯ ಮೂವರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಸೇರಿದಂತೆ 16 ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ನಿವೃತ್ತ ಪ್ರಾಧ್ಯಾಪಕಿ ಶೆಲ್ಲಿ ದೆಹಲಿ ಮೇಯರ್ ಅಭ್ಯರ್ಥಿಯಾಗಿ ಘೋಷಣೆ

    ಈ ವಾಹನವು ಮೂರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿತ್ತು. ಬೆಳಗ್ಗೆ ಚಾಟೆನ್‌ನಿಂದ ಥಾಂಗು ಕಡೆಗೆ ಹೊರಟಿತ್ತು. ಝೆಮಾದಲ್ಲಿ ಸಾಗುತ್ತಿದ್ದಾಗ ವಾಹನವು ತೀಕ್ಷ್ಣವಾದ ತಿರುವಿನಲ್ಲಿ ಆಯತಪ್ಪಿ ಕಣಿವೆಗೆ ಉರುಳಿದೆ ಎಂದು ಸೇನೆ ಹೇಳಿದೆ. ಅಪಘಾತದಲ್ಲಿ ಗಾಯಗೊಂಡ ನಾಲ್ವರು ಯೋಧರನ್ನು ಚಿಕಿತ್ಸೆಗಾಗಿ ಏರ್‌ಲಿಫ್ಟ್‌ ಮಾಡಲಾಗಿದೆ.

    ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh), ಹುತಾತ್ಮ ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. “ಉತ್ತರ ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಭಾರತೀಯ ಸೇನೆಯ ಸಿಬ್ಬಂದಿಯ ಪ್ರಾಣಹಾನಿಯಿಂದ ತೀವ್ರ ನೋವಾಗಿದೆ. ಅವರ ಸೇವೆ ಮತ್ತು ಬದ್ಧತೆಗೆ ರಾಷ್ಟ್ರವು ಆಳವಾಗಿ ಕೃತಜ್ಞವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ

    Live Tv
    [brid partner=56869869 player=32851 video=960834 autoplay=true]

  • ಸಿಕ್ಕಿಂ ಪ್ರವಾಸದಲ್ಲಿ ನಟಿ ಸಿಂಧು ಲೋಕನಾಥ್

    ಸಿಕ್ಕಿಂ ಪ್ರವಾಸದಲ್ಲಿ ನಟಿ ಸಿಂಧು ಲೋಕನಾಥ್

    ಸ್ಯಾಂಡಲ್‌ವುಡ್ ಬ್ಯೂಟಿ ಸಿಂಧು ಲೋಕನಾಥ್ ಪರಿಚಯ, ಡ್ರಾಮಾ, `ಲವ್ ಇನ್ ಮಂಡ್ಯ’ ಚಿತ್ರದ ಮೂಲಕ ಗಮನ ಸೆಳೆದ ನಟಿ ಈಗ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಬೈಕ್‌ನಲ್ಲಿ ಒಬ್ಬರೇ ಟ್ರಾವೆಲ್ ಮಾಡುತ್ತಾ ಹೊಸ ಜಾಗಗಳಿಗೆ ಭೇಟಿ ಕೊಡ್ತಿದ್ದಾರೆ. ಈ ಫೋಟೋಗಳು ಸದ್ಯ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Sindhu Loknath (@sindhuloknath)

    ಚಂದನವನದ `ಡ್ರಾಮಾ’ ಚೆಲುವೆ ಸಿಂಧು ಲೋಕನಾಥ್ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಶೂಟಿಂಗ್ ಮಧ್ಯೆ ಹೊಸ ಜಾಗಗಳಿಗೆ ಆಗಾಗ ಭೇಟಿ ಕೊಡ್ತಿರತ್ತಾರೆ. ಟ್ರಾವೆಲಿಂಗ್‌ನ ಅತೀ ಹೆಚ್ಚು ಇಷ್ಟ ಪಡುವ ನಟಿ ಸಿಂಧು ಇದೀಗ ಸಿಕ್ಕಿಂಗೆ ಭೇಟಿ ಕೊಟ್ಟಿದ್ದಾರೆ. ಬೆಂಗಳೂರಿಂದ ಸಿಕ್ಕಂಗೆ ಒಬ್ಬರೇ ಜರ್ನಿ ಮಾಡಿ ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಿಂಧು ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4 : ನಿರ್ದೇಶಕ ಮಂಸೋರೆ ಮನದಾಳ

     

    View this post on Instagram

     

    A post shared by Sindhu Loknath (@sindhuloknath)

    ಇನ್ನು ಸಿಂಧು ಲೋಕನಾಥ್ ಕಡೆಯದಾಗಿ ಕಾಣಿಸಿಕೊಂಡ ಸಿನಿಮಾ, ಕಾಣದಂತೆ ಮಾಯವಾದನು, ಕೃಷ್ಣ ಟಾಕೀಸ್ ಚಿತ್ರದಲ್ಲಿ ನಟಿಸಿದ್ದರು. ಇದೀಗ `60 ಡೇಸ್’ ಎಂಬ ಸಿನಿಮಾಗೆ ಬಣ್ಣ ಹಚ್ಚಿದ್ದು, ಸದ್ಯದಲ್ಲೇ ಈ ಕುರಿತು ಅಪ್‌ಡೇಟ್ ಸಿಗಲಿದೆ.

  • ಲವ್ವರ್ ಮಾತಾಡಲು ನಿರಾಕರಿಸಿದಳೆಂದು ಆಸ್ಪತ್ರೆ ವೈದ್ಯ, ರೋಗಿಗಳಿಗೆ ಚಾಕುವಿನಿಂದ ಇರಿದ!

    ಲವ್ವರ್ ಮಾತಾಡಲು ನಿರಾಕರಿಸಿದಳೆಂದು ಆಸ್ಪತ್ರೆ ವೈದ್ಯ, ರೋಗಿಗಳಿಗೆ ಚಾಕುವಿನಿಂದ ಇರಿದ!

    ಗ್ಯಾಂಗ್ಟಾಕ್: ಫೋನ್ ಕರೆಯನ್ನು ಸ್ವೀಕರಿಸದೆ ಇರುವ ಪ್ರಿಯಕರ, ಆಕೆ ಕೆಲಸ ಮಾಡುವ ಆಸ್ಪತ್ರೆಯ ವೈದ್ಯ ಹಾಗೂ ರೋಗಿಗಳಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿರುವ ಘಟನೆ ಸಿಕ್ಕಿಂ ಎಸ್‌ಟಿಎನ್‌ಎಂ ಆಸ್ಪತ್ರೆಯಲ್ಲಿ ನಡೆದಿದೆ.

    ತಂಗಚ್ಚಿನ್ ಹಲ್ಲೆ ಮಾಡಿದ ಆರೋಪಿ. ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಚೂರಿ ಇರಿತಕ್ಕೆ ವೈದ್ಯರು ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.

    ಇಬ್ಬರು ನಡುವೆ ಹಲವು ದಿನಗಳಿಂದ ಮುನಿಸು ಇತ್ತು. ಅವಳು ಆತನೊಂದಿಗೆ ಮಾತನಾಡಲು ನಿರಾಕರಿಸಿದ್ದಾಳೆ. ಈ ವಿಚಾರವಾಗಿ ಕೋಪಗೊಂಡ ಆತ ಆಸ್ಪತ್ರೆಯಲ್ಲಿರುವವರ ಮೇಲೆ ಚೂರಿಯಿಂದ ಹಲ್ಲೆ ಮಾಡಿದ್ದಾನೆ. ಚೂರಿ ಇರಿತಕ್ಕೊಳಗಾದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಉತ್ತರಾಖಂಡದ ಆರೋಗ್ಯ ಸಚಿವರ ಕಾರು ಅಪಘಾತ!

    ಗೆಳತಿಯನ್ನು ಭೇಟಿಯಾಗಲು ಹೋದಾಗ ಚಾಕುವನ್ನು ಏಕೆ ಹಿಡಿದುಕೊಂಡಿದ್ದೀಯಾ ಎಂದು ಕೇಳಿದಾಗ, ಆಕೆಯ ಸೋದರಮಾವನನ್ನು ಕೊಲ್ಲಲು ಯೋಜಿಸಿದ್ದಾಗಿ ತಂಗಚ್ಚಿನ್ ಪೊಲೀಸರಿಗೆ ತಿಳಿಸಿದ್ದಾನೆ. ಇಬ್ಬರು ಹಣಕಾಸಿನ ವಿಚಾರದಲ್ಲಿ ಜಗಳವಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಪ್ಪು ಸಮಾಧಿಗೆ ಧಾರವಾಡದಿಂದ ನಡೆದೇ ಬಂದ ಅಭಿಮಾನಿ

  • ಸಿಕ್ಕಿಂನಲ್ಲಿ ಮಿನರಲ್ ವಾಟರ್ ಬಾಟಲ್ ಬ್ಯಾನ್

    ಸಿಕ್ಕಿಂನಲ್ಲಿ ಮಿನರಲ್ ವಾಟರ್ ಬಾಟಲ್ ಬ್ಯಾನ್

    ಗ್ಯಾಂಗ್ಟಾಕ್: ಜನವರಿ 1ರಿಂದ ಸಿಕ್ಕಿಂನಲ್ಲಿ ಮಿನರಲ್ ವಾಟರ್ ಬಾಟಲಿಗಳನ್ನು ಬ್ಯಾನ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪಿ.ಎಸ್.ತಮಂಗ್ ಹೇಳಿದ್ದಾರೆ.

    ಗಾಂಧಿ ಜಯಂತಿ ಅಂಗವಾಗಿ ಮಾತನಾಡಿದ ಅವರು, ಮಿನರಲ್ ವಾಟರ್ ಬಾಟಲ್ ಬ್ಯಾನ್ ಮಾಡಿದ ಬಳಿಕ ಜನತೆಗೆ ನೈಸರ್ಗಿಕ, ಶುದ್ಧ ಕುಡಿಯುವ ನೀರನ್ನು ನಿಡಲಾಗುವುದು. ಪ್ಲಾಸ್ಟಿಕ್ ಬಾಟಲ್‍ನಲ್ಲಿ ದೊರೆಯುವ ನೀರಿಗಿಂತ ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದ್ದಾರೆ. ಇದನ್ನೂ ಓದಿ: 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    ಸಿಕ್ಕಿಂನಲ್ಲಿ ಪ್ರತಿಯೊಬ್ಬರೂ ಮಿನರಲ್ ವಾಟರ್ ಬಾಟಲ್ ತೊರೆದು, ನೈಸರ್ಗಿಕವಾಗಿ ದೊರೆಯುವ ಶುದ್ಧ ನೀರನ್ನು ಕುಡಿಯಬೇಕು. ಅಲ್ಲದೆ ಈಗಿರುವ ನೀರಿನ ಬಾಟಲಿಗಳ ಸ್ಟಾಕ್ ಖಾಲಿ ಮಾಡಲು ಮೂರು ತಿಂಗಳ ಬಫರ್ ಟೈಮ್ ನೀಡಲಾಗಿದೆ. ಬಳಿಕ ಯಾವುದೇ ಮಿನರಲ್ ವಾಟರ್ ಬಾಟಲ್ ಮಾರಾಟ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.

    ಇನ್ನೂ ಗಮನಿಸಬೇಕಾದ ಅಂಶವೆಂದರೆ ಪ್ರವಾಸಿ ತಾಣಗಳಾದ ಉತ್ತರ ಸಿಕ್ಕಿಂನ ಲಾಚೆನ್ ನಲ್ಲಿ ಈಗಾಗಲೇ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬ್ಯಾನ್ ಮಾಡಲಾಗಿದೆ. ಸಿಕ್ಕಿಂ ಉತ್ತಮ ಜಲ ಸಂಪನ್ಮೂಲವನ್ನು ಹೋಂದಿದ್ದು, ಇವುಗಳನ್ನು ಪರಿಸರ ಸ್ನೇಹಿಯಾಗಿ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

  • ನನ್ನ ಕೋಳಿ ಬೇಕು – ಬಿಕ್ಕಿ ಬಿಕ್ಕಿ ಅತ್ತ ಕಂದ

    ನನ್ನ ಕೋಳಿ ಬೇಕು – ಬಿಕ್ಕಿ ಬಿಕ್ಕಿ ಅತ್ತ ಕಂದ

    ಗಾಂಗ್ಟಕ್: ಸಾಕಿರುವ ಕೋಳಿ ಮರಿಗಳನ್ನು ಮನೆಯವರು ಮಾರಾಟ ಮಾಡಿದ್ದರು. ಕೋಳಿ ಮರಿಗಳನ್ನಿ ಬಿಟ್ಟಿ ಬಿಡಿ ಎಂದು ಸಿಕ್ಕಿಂನ ಪುಟ್ಟ ಬಾಲಕನೊಬ್ಬ ಅಳುತ್ತಾ ಕಣ್ಣೀರು ಹಾಕಿರುವ ವೀಡಿಯೋ ವೈರಲ್ ಸಖತ್ ಆಗಿದೆ. ಇದನ್ನೂ ಓದಿ: ಶಂಕರ್ ನಾಗ್ ನೆನೆದು ಭಾವುಕರಾದ ಬಾಲಿವುಡ್ ನಟಿ

    ಬಾಲಕನ ಕುಟುಂಬ ಕೋಳಿಗಳನ್ನು ಸಾಕಿ ಮಾರಾಟ ಮಾಡುತ್ತಿದ್ದರು. ತನ್ನ ಕುಟುಂಬದೊಂದಿಗೆ ಸಾಕುತ್ತಿದ್ದ ಕೋಳಿಗಳನ್ನು ಕೋಳಿಗಳನ್ನು ಮಾರಾಟ ಮಾಡುವ ಉದ್ದೇಶಿಸಿ ಸಾಕಲಾಗಿದೆ ಎಂದು ಅರ್ಥಮಾಡಿಕೊಳ್ಳದ ಕಂದ ಅಸಾಹಯಕತೆಯಿಂದ ಕೋಳಿಯನ್ನು ಮರಳಿ ಕೊಟ್ಟು ಬಿಡಿ ಎಂದು ಕಣ್ಣೀರು ಹಾಕಿದ್ದಾನೆ. ಕೋಳಿಗಳನ್ನು ಕರೆದೊಯ್ಯುವಾಗ ಮಗು ತನ್ನ ಕುಟುಂಬವನ್ನೇ ಕರೆದೊಯ್ಯುತ್ತಿದ್ದಾರೇನೋ ಎಂಬಂತೆ ಕಣ್ಣೀರಿಟ್ಟು ಕೈಮುಗಿದು ಬೇಡಿಕೊಳ್ಳುತ್ತಿರುವ ವೀಡಿಯೋ ನೋಡಿದ ನೆಟ್ಟಿಗರು ಮಗುವಿನ ಮುಗ್ದತೆಯನ್ನು ಮೆಚ್ಚಿಕೊಂಡಿದ್ದಾರೆ.

    ವೈರಲ್ ವೀಡಿಯೋದಲ್ಲಿ ಏನಿದೆ?

    ಐದು ನಿಮಿಷಗಳ ವೀಡಿಯೋದಲ್ಲಿ ಚಿಕ್ಕ ಹುಡುಗ ಅಳುತ್ತಾ ಕೋಳಿಯನ್ನು ತೆಗೆದುಕೊಂಡು ಹೋಗಬಾರದೆಂದು ಮನವಿ ಮಾಡುತ್ತಾನೆ. ಕಸಾಯಿಖಾನೆಗೆ ಹೋಗುವ ವ್ಯಾನ್‍ನಲ್ಲಿರುವ ಕೋಳಿಗಳನ್ನು ಇರಿಸಲಾಗಿತ್ತು. ಆಗ ಕೋಳಿಗಳನ್ನು ಬಿಟ್ಟು ಹೋಗಿ ಎಂದು ಮಗು ಪ್ರಯತ್ನಿಸುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದನು.

  • ಇಂದಿನಿಂದ ಯುಪಿ, ಪಂಜಾಬ್, ಸಿಕ್ಕಿಂನಲ್ಲಿ ಶಾಲೆಗಳು ಓಪನ್ – ಮಾರ್ಗಸೂಚಿಯಲ್ಲಿ ಏನಿದೆ?

    ಇಂದಿನಿಂದ ಯುಪಿ, ಪಂಜಾಬ್, ಸಿಕ್ಕಿಂನಲ್ಲಿ ಶಾಲೆಗಳು ಓಪನ್ – ಮಾರ್ಗಸೂಚಿಯಲ್ಲಿ ಏನಿದೆ?

    ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್‍ನಿಂದ ಮುಚ್ಚಿರುವ ಶಾಲೆಗಳು ಹಂತ ಹಂತವಾಗಿ ತೆರೆಯಲ್ಪಡುತ್ತಿದೆ. ಅನ್‍ಲಾಕ್ 5.0 ಅಂಗವಾಗಿ 9 ರಿಂದ 12 ತರಗತಿವರೆಗಿನ ಶಾಲೆಗಳು ಉತ್ತರ ಪ್ರದೇಶ, ಪಂಜಾಬ್ ಮತ್ತು ಸಕ್ಕಿಂನಲ್ಲಿ ಸೋಮವಾರದಿಂದ ಪ್ರಾರಂಭವಾಗಿದೆ.

    ಶಾಲೆಗಳು ಪ್ರಾರಂಭವಾಗುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರದ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಕಟ್ಟು ನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದೆ. ಪ್ರತಿಯೊಬ್ಬರು ಇದನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ.

    ಉತ್ತರಪ್ರದೇಶದಲ್ಲಿ ಪ್ರಾರಂಭವಾಗುವ ಶಾಲೆಗಳು ಎರಡು ಪಾಳಿಯಲ್ಲಿ ತರಗತಿಗಳು ನಡೆಯಲಿದೆ. ಮೊದಲ ಪಾಳಿಯಲ್ಲಿ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿರುತ್ತಾರೆ. ಎರಡನೇ ಪಾಳಿಯಲ್ಲಿ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗುತ್ತದೆ.

    ಮೊದಲ ಪಾಳಿಯಲ್ಲಿ ಬೆಳಿಗ್ಗೆ 8:50 ರಿಂದ ಮಧ್ಯಾಹ್ನ 3:50ರವರೆಗೆ ನಡೆದರೆ ಎರಡನೇ ಪಾಳಿಯನ್ನು ಮಧ್ಯಾಹ್ನ 12:20 ರಿಂದ ಮಧ್ಯಾಹ್ನ 3:30ರವರೆಗೆ ನಡೆಸಲಾಗುತ್ತದೆ. ಸರ್ಕಾರದ ಆದೇಶದಂತೆ ಪ್ರತಿ ತರಗತಿಯಲ್ಲಿ 50 ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುವುದು ಮತ್ತು ಉಳಿದ ವಿದ್ಯಾರ್ಥಿಗಳಿಗೆ ಮರುದಿನ ತರಗತಿಯನ್ನು ನಡೆಸಲಾಗುತ್ತದೆ.

    ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯ. ತರಗತಿಗಳು ಪ್ರಾರಂಭವಾಗುವ ಮುನ್ನ ಶುಚಿತ್ವವನ್ನು ಕಾಪಾಡಿಕೊಳ್ಳಲು ಸೂಚನೆಯನ್ನು ನೀಡಲಾಗಿದೆ. ಶಾಲೆಗಳಲ್ಲಿ ಸ್ಯಾನಿಟೈಸರ್, ಹ್ಯಾಂಡ್ ವಾಶ್ ಇಡಬೇಕು ಮತ್ತು ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದೆ.

    ಸಿಬ್ಬಂದಿ ಅಥವಾ ವಿದ್ಯಾರ್ಥಿಯಲ್ಲಿ ಜ್ವರ ಅಥವಾ ಶೀತದ ಲಕ್ಷಣ ಕಾಣಿಸಿಕೊಂಡರೆ ಪ್ರಾಥಮಿಕ ಚಿಕಿತ್ಸೆ ನಂತರ ಅವರನ್ನು ಮನೆಗೆ ಕಳುಹಿಸಿಕೊಡಬೇಕು. ಶಾಲಾ ಬಸ್ಸುಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಪಂಜಾಬ್‍ನಲ್ಲಿ ಹೇಗೆ?
    ಸರ್ಕಾರದ ಆದೇಶದ ಪ್ರಕಾರ ಪ್ರತಿದಿನ ಮೂರು ಗಂಟೆಗಳ ಕಾಲ ಮಾತ್ರ ಶಾಲೆ ತೆರೆದಿರುತ್ತೆದೆ. ಕಂಟೈನ್ಮೆಂಟ್ ಜೋನ್‍ನಲ್ಲಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತರಗತಿಗೆ ಹಾಜರಾಗಲು ಅವಕಾಶ ಇರುವುದಿಲ್ಲ. ಓರ್ವ ವಿದ್ಯಾರ್ಥಿ ಮಾತ್ರ ಒಂದು ಬೆಂಚ್‍ನಲ್ಲಿ ಕುಳಿತು ಪಾಠ ಕೇಳಲು ಅವಕಾಶ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಸಿಕ್ಕಿಂನಲ್ಲಿ ಹೇಗೆ?
    ಸಿಕ್ಕಿಂನಲ್ಲಿ ಸೆಪ್ಟೆಂಬರ್ 21 ರಿಂದಲೇ ಹೆಚ್ಚಿನ ಶಾಲೆಗಳನ್ನು ತೆರೆಯಲಾಗಿದೆ. ಆದರೆ ಇಂದಿನಿಂದ ಎಲ್ಲಾ ಶಾಲೆಗಳನ್ನು ಶ್ರೇಣೀಕೃತ ರೀತಿಯಲ್ಲಿ ಪುನಃ ತೆರೆಯಲು ಸಿಕ್ಕಿಂ ಸರ್ಕಾರ ನಿರ್ಧರಿಸಿದೆ. ಜೊತೆಗೆ ಚಳಿಗಾಲದ ರಜೆ ಮತ್ತು ವಾರಾಂತ್ಯದ ರಜೆಯನ್ನು ರದ್ದುಗೊಳಿಸುವುದಾಗಿ ಸರ್ಕಾರ ಘೋಷಿಸಿದೆ.

    ಆನ್‍ಲೈನ್ ತರಗತಿಗಳು ಆಫ್‍ಲೈನ್ ತರಗತಿಗಳೊಂದಿಗೆ ಮುಂದುವರೆಯುತ್ತವೆ. ವಿದ್ಯಾರ್ಥಿಯನ್ನು ಶಾಲೆಗೆ ಬರುವಂತೆ ಒತ್ತಾಯಿಸುವಂತಿಲ್ಲ. ಪೋಷಕರು ತಮ್ಮ ಮಗುವನ್ನು ಶಾಲೆಗೆ ಕಳುಹಿಸಲು ಲಿಖಿತ ಒಪ್ಪಿಗೆಯನ್ನು ನೀಡಬೇಕಾಗುತ್ತದೆ.

  • ಬಚ್ಚನ್ ಹೆಸರಿನಲ್ಲೊಂದು ಫಾಲ್ಸ್- ಹೆಸರಿಟ್ಟ ಕಾರಣ ಕೇಳಿ ನಕ್ಕ ಬಿಗ್ ಬಿ

    ಬಚ್ಚನ್ ಹೆಸರಿನಲ್ಲೊಂದು ಫಾಲ್ಸ್- ಹೆಸರಿಟ್ಟ ಕಾರಣ ಕೇಳಿ ನಕ್ಕ ಬಿಗ್ ಬಿ

    ಮುಂಬೈ: ದೊಡ್ಡ ಸ್ಟಾರ್ ಕಲಾವಿದರ ನೆನಪಿಗಾಗಿ ಕೆಲ ಸ್ಥಳಗಳಿಗೆ ಅವರ ಹೆಸರನ್ನು ನಾಮಕಾರಣ ಮಾಡಲಾಗುತ್ತದೆ. ಸಿನಿಮಾ ತಾರೆಯರ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಮೂರ್ತಿಗಳನ್ನ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸುತ್ತಾರೆ. ದೊಡ್ಡ ನಗರಗಳಲ್ಲಿ ಪ್ರಮುಖ ರಸ್ತೆಗಳಿಗೆ ನಟರ ಹೆಸರು ನಾಮಕರಣ ಮಾಡುವ ಮೂಲಕ ಸರ್ಕಾರಗಳು ಗೌರವ ಸೂಚಿಸುತ್ತವೆ. ಬಾಲಿವುಡ್ ನ ಬಿಗ್ ಬಿ ಎಂದೇ ಗುರುತಿಸಿಕೊಳ್ಳುವ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲೊಂದು ಫಾಲ್ಸ್ ಇದೆ. ಈ ವಿಷಯ ಬಚ್ಚನ್ ಅವರಿಗೆ ಶುಕ್ರವಾರ ತಿಳಿದಿದೆ.

    ಶುಕ್ರವಾರ ಅಮಿತಾಬ್ ಬಚ್ಚನ್ ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿಕೊಂಡಿದ್ದರು. ಟ್ವೀಟ್ ನಲ್ಲಿ ಮೂವರು ಫಾಲ್ಸ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು, ಅಮಿತಾಬ್ ಬಚ್ಚಬ್ ಒಂದು ಬಾರಿ ಈ ಸ್ಥಳಕ್ಕೆ ಭೇಟಿ ನೀಡಬೇಕೆಂದು ಬರೆದುಕೊಂಡಿದ್ದರು. ಕೆಳಗಡೆ ಸ್ಥಳ ಅಮಿತಾಬ್ ಬಚ್ಚನ್ ಫಾಲ್ಸ್ ಎಂದು ಬರೆಯಲಾಗಿತ್ತು. ಜಲಪಾತಕ್ಕೆ ತಮ್ಮ ಹೆಸರು ಇದೆಯಾ? ಇದು ನಿಜಾನಾ ಎಂದು ಬಿಗ್ ಬಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಎಲ್ಲಿದೆ ಜಲಪಾತ?
    ಸಿಕ್ಕಿಂ ರಾಜ್ಯದ ಲಾಚುಂಗ್ ಪ್ರದೇಶದ ಚುಂಗ್‍ಥಾಕ್ ಮತ್ತು ಯುಮ್‍ಥಾಂಗ್ ಕಣಿವೆ ನಡುವೆ ಈ ಜಲಪಾತವಿದೆ. ಲಾಚುಂಗ್ ಪ್ರದೇಶದ 14 ಕಿ.ಮೀ. ದೂರದಲ್ಲಿ ಅಮಿತಾಬ್ ಬಚ್ಚನ್ ಫಾಲ್ಸ್ ಇದೆ. ಈ ಜಲಪಾತದ ಹೆಸರು ಭೀಮಾ ನಾಲಾ ಫಾಲ್ಸ್ ಅಂತಾ ಇದ್ದರೂ, ಅತಿ ಎತ್ತರವಾಗಿ ನೀರು ಧುಮ್ಮಿಕ್ಕಿ ಬೀಳುವದರಿಂದ ಸ್ಥಳೀಯರು ಅಮಿತಾಬ್ ಬಚ್ಚನ್ ಜಲಪಾತ ಎಂದು ಕರೆಯುತ್ತಾರೆ. ಸ್ಥಳೀಯವಾಗಿ ಈ ಜಲಪಾತವನ್ನು ಅಮಿತಾಬ್ ಬಚ್ಚನ್ ಫಾಲ್ಸ್ ಎಂದು ಕರೆಯಲಾಗುತ್ತದೆ.

  • 1 ಸ್ಥಾನ ಗೆಲ್ಲದಿದ್ರೂ ಬಿಜೆಪಿ ಈಗ ಸಿಕ್ಕಿಂನಲ್ಲಿ ಅಧಿಕೃತ ವಿರೋಧ ಪಕ್ಷ

    1 ಸ್ಥಾನ ಗೆಲ್ಲದಿದ್ರೂ ಬಿಜೆಪಿ ಈಗ ಸಿಕ್ಕಿಂನಲ್ಲಿ ಅಧಿಕೃತ ವಿರೋಧ ಪಕ್ಷ

    ನವದೆಹಲಿ: ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳದ ಬಳಿಕ ಈಗ ಸಿಕ್ಕಿಂನಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದ್ದು, ಸಿಕ್ಕಿಂ ಪ್ರಜಾಸತ್ತಾತ್ಮಕ ಒಕ್ಕೂಟ(ಎಸ್‍ಡಿಎಫ್)ನ 10 ಶಾಸಕರು ಇಂದು ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಈ ಮೂಲಕ ಎಸ್‍ಡಿಎಫ್ ನಾಯಕ ಹಾಗೂ ಸಿಕ್ಕಿಂ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರಿಗೆ ಶಾಸಕರು ಶಾಕ್ ನೀಡಿದ್ದಾರೆ. ಪವನ್ ಕುಮಾರ್ ಚಾಮ್ಲಿಂಗ್ ಅವರು ಸಿಕ್ಕಿಂ ಮತ್ತು ಭಾರತದ ದೀರ್ಘಾವಧಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದಾರೆ. ಈ ವರೆಗೆ ಇವರ ನಾಯಕತ್ವದಲ್ಲಿ ಎಸ್‍ಡಿಎಫ್ ಪಕ್ಷವು ಹೆಚ್ಚು ಸ್ಥಾನ ಗಳಿಸಿತ್ತು.

    ಇದೀಗ ಹತ್ತು ಎಸ್‍ಡಿಎಫ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸೇರಿದ್ದಾರೆ. ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯನಿರ್ವಾಹಕ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.

    ಇಲ್ಲಿಯವರೆಗೆ ಈಶಾನ್ಯ ಭಾರತದ ರಾಜ್ಯಗಳ ಪೈಕಿ ಬಿಜೆಪಿ ಅಧಿಕಾರದಲ್ಲಿ ಇಲ್ಲದಿರುವ ಏಕೈಕ ರಾಜ್ಯ ಸಿಕ್ಕಿಂ ಆಗಿತ್ತು. ಈಶಾನ್ಯ ಭಾರತದ ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ತನ್ನ ಬಲವನ್ನು ಇಮ್ಮಡಿಗೊಳಿಸಲು ರಚಿಸಿರುವ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ(ನೆಡಾ) ಮೂಲಕ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದೆ.

    ಸಿಕ್ಕಿಂ ಒಟ್ಟು 32 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, 2019ರ ವಿಧಾನಸಭೆ ಚುನಾವಣೆಯಲ್ಲಿ ಪವನ್ ಕುಮಾರ್ ಚಾಮ್ಲಿಂಗ್ ನೇತೃತ್ವದ ಎಸ್‍ಡಿಎಫ್ 15 ಸ್ಥಾನಗಳಲ್ಲಿ ಜಯಗಳಿಸಿತ್ತು. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(ಎಸ್‍ಕೆಎಂ) 17 ಸ್ಥಾನಗಳಲ್ಲಿ ಜಯಗಳಿಸಿತ್ತು.

    ಈಗ ಎಸ್‍ಡಿಎಫ್‍ನ 10 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ಅವರ ಸದಸ್ಯರ ಸಂಖ್ಯೆ ಕೇವಲ ಮೂರಕ್ಕೆ ಕುಸಿದಿದೆ. ಇಬ್ಬರು ಎಸ್‍ಡಿಎಫ್ ಶಾಸಕರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಹೀಗಾಗಿ ಎರಡು ಕ್ಷೇತ್ರಗಳು ಖಾಲಿ ಇವೆ. ಈ ಮೂಲಕ ಎಸ್‍ಡಿಎಫ್ ಸಿಕ್ಕಿಂ ಇತಿಹಾಸದಲ್ಲೇ ಅತಿ ಕಡಿಮೆ ಸ್ಥಾನಗಳನ್ನು ಪಡೆದಂತಾಗಿದೆ.

    ಮೂರನೇ ಒಂದರಷ್ಟು ಶಾಸಕರು ಪಕ್ಷವನ್ನು ತ್ಯಜಿಸಿದರೆ ಆ ಶಾಸಕರ ಮೇಲೆ ಪಕ್ಷಾಂತರ ನಿಷೇಧ ಕಾನೂನು ಅನ್ವಯವಾಗುವುದಿಲ್ಲ. ಶಾಸಕರು ಸೇರ್ಪಡೆಯಾದ ನಂತರ ಮಾತನಾಡಿದ ರಾಮ್ ಮಾಧವ್, ಬಿಜೆಪಿ ವಿರೋಧ ಪಕ್ಷವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ ತಿಳಿಸಿದ್ದಾರೆ.

    2019ರ ಚುನಾವಣೆಯಲ್ಲಿ ಬಿಜೆಪಿ ಶೇ.1.62 ರಷ್ಟು ಮತವನ್ನು ಪಡೆದಿತ್ತು. ಸದ್ಯ ಸಿಕ್ಕಿಂ ವಿಧಾನಸಭೆಯಲ್ಲಿ ಬಿಜೆಪಿಯ 10, ಎಸ್‍ಕೆಎಂ ಪಕ್ಷದ 17, ಎಸ್‍ಡಿಎಫ್ ಪಕ್ಷದ 3 ಶಾಸಕರಿದ್ದರೆ ಎರಡು ಸ್ಥಾನ ಖಾಲಿಯಿದೆ.

  • ಒಂದು ಕುಟುಂಬ, ಒಂದು ಉದ್ಯೋಗ: ಹೊಸ ಯೋಜನೆ ಘೋಷಿಸಿದ ಸಿಕ್ಕಿಂ ಸಿಎಂ

    ಒಂದು ಕುಟುಂಬ, ಒಂದು ಉದ್ಯೋಗ: ಹೊಸ ಯೋಜನೆ ಘೋಷಿಸಿದ ಸಿಕ್ಕಿಂ ಸಿಎಂ

    – ಕೃಷಿ ಸಾಲಮನ್ನಾ ಘೋಷಣೆ

    ಗ್ಯಾಂಗ್‍ಟೋಕ್: ಸಿಕ್ಕಿಂ ರಾಜ್ಯದ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಶನಿವಾರ ಒಂದು ಕುಟುಂಬ, ಒಂದು ಉದ್ಯೋಗ (One Family, One Job) ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆಯಿಂದಾಗಿ ಸಿಕ್ಕಿಂ ರಾಜ್ಯದ ಪ್ರತಿ ಕುಟುಂಬದ ಓರ್ವ ಸದಸ್ಯನಿಗೆ ರೋಜಗಾರ್ ಅಂದರೆ ದಿನಗೂಲಿ ಕೆಲಸ ಸಿಗಲಿದೆ. ಇದೇ ವೇಳೆ ಮಾತನಾಡಿದ ಸಿಎಂ, ತಮ್ಮ ರಾಜ್ಯದ ಎಲ್ಲರ ಕೃಷಿ ಸಾಲಮನ್ನಾ ಮಾಡಲಾಗುವುದು ಅಂತಾ ಹೇಳಿದ್ದಾರೆ.

    ಸ್ವತಂತ್ರ ಭಾರತದ ದೀರ್ಘಾವದಿಯ ಸಿಎಂ ಎಂಬ ಕೀರ್ತಿಗೆ ಪಾತ್ರರಾಗಿರುವ ಪವನ್ ಚಾಮ್ಲಿಂಗ್ ಶನಿವಾರ ರೋಜಗಾರ್ ಮೇಳ-2019ರಲ್ಲಿ ಭಾಗಿಯಾಗಿದ್ದರು. ಈ ವೇಳೆ 32 ವಿಧಾನಸಭಾ ಕ್ಷೇತ್ರದ ತಲಾ ಇಬ್ಬರು ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಿಸಿದರು. ಮುಂದಿನ ದಿನಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಸ್ಥಳೀಯವಾಗಿ ಋಣ ಮುಕ್ತ ಪ್ರಮಾಣ ಪತ್ರವನ್ನು ವಿತರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.

    ಸದ್ಯ 11,772 ರೈತರಿಗೆ ಋಣ ಮುಕ್ತ ಪ್ರಮಾಣ ಪತ್ರ ವಿತರಿಸಲಾಗಿದ್ದು, ಉಳಿದವನ್ನು ಅತಿ ಶೀಘ್ರದಲ್ಲಿಯೇ ವಿತರಿಸುತ್ತೇವೆ. ಒಂದು ಕುಟುಂಬ, ಒಂದು ಉದ್ಯೋಗ ಯೋಜನೆಯಿಂದಾಗಿ ಸುಮಾರು 20 ಸಾವಿರ ಯುವಕರಿಗೆ ಉದ್ಯೋಗ ಲಭಿಸಲಿದೆ. ಮುಂದಿನ ಐದು ವರ್ಷಗಳವರೆಗೆ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸಿದ ಬಳಿಕ ಸರ್ಕಾರಿ ನೌಕರರಾಗಲಿದ್ದಾರೆ. ರಾಜ್ಯದ ಯುವಕರಿಗೆ ಇದೊಂದು ಒಳ್ಳೆಯ ಯೋಜನೆಯಾಗಿದ್ದು, ಎಲ್ಲರು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರದ 12 ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಘೋಷಿಸುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ‘ಪವನ್ ಚಾಮ್ಲಿಂಗ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv