Tag: Sikhs

  • ಸಿಖ್ಖರ ಅವಹೇಳನ ಆರೋಪ – ಚಂಡೀಗಢ ಕೋರ್ಟ್‌ನಿಂದ ಕಂಗನಾಗೆ ʻಎಮರ್ಜೆನ್ಸಿʼ ನೋಟಿಸ್‌!

    ಸಿಖ್ಖರ ಅವಹೇಳನ ಆರೋಪ – ಚಂಡೀಗಢ ಕೋರ್ಟ್‌ನಿಂದ ಕಂಗನಾಗೆ ʻಎಮರ್ಜೆನ್ಸಿʼ ನೋಟಿಸ್‌!

    ಚಂಡೀಗಢ: ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಅವರು ಸದ್ಯ ಟೆನ್ಶನ್‌ನಲ್ಲಿದ್ದಾರೆ. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಂಬಂಧಿಸಿದ ‘ಎಮರ್ಜೆನ್ಸಿ’ ಸಿನಿಮಾವನ್ನು (Emergency cinema) ನಟಿ ಕಂಗನಾ ಅವರು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಜೊತೆಗೆ ಇದರಲ್ಲಿ ಇಂದಿರಾ ಗಾಂಧಿ  ಪಾತ್ರವನ್ನು ಕೂಡ ಅವರೇ ನಿಭಾಯಿಸಿದ್ದಾರೆ. ಆದರೆ ಅಂದುಕೊಂಡ ಸಮಯಕ್ಕೆ ಈ ಸಿನಿಮಾ ಬಿಡುಗಡೆ ಮಾಡಲು ಆಗಿಲ್ಲ. ಒಂದಿಲ್ಲೊಂದು ವಿವಾದಗಳ ಸುಳಿಗೆ ಸಿನಿಮಾ ಸಿಲುಕುತ್ತಲೇ ಇದೆ. ಈ ನಡುವೆ ಹೊಸದೊಂದಿ ಟೆನ್ಶನ್‌ ಶುರುವಾಗಿದೆ.

    ವಿವಾದಾತ್ಮಕ ಚಿತ್ರ ʻಎಮರ್ಜೆನ್ಸಿʼಗೆ ಸಂಬಂಧಿಸಿದಂತೆ ಕಂಗನಾ ಅವರಿಗೆ ಚಂಡೀಗಢದ ಜಿಲ್ಲಾ ನ್ಯಾಯಾಲಯ (Chandigarh Court) ನೋಟಿಸ್ ಜಾರಿ ಮಾಡಿದೆ. ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಕೀಲ ರವೀಂದರ್ ಸಿಂಗ್ ಬಸ್ಸಿ ಅವರು, ಈ ಚಿತ್ರದಲ್ಲಿ ಸಿಖ್ಖರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಖ್ಖರ ಚಿತ್ರಣವನ್ನು ತಪ್ಪಾಗಿ ಪ್ರದರ್ಶಿಸಲಾಗಿದೆ. ಜೊತೆಗೆ ಸಿಖ್‌ ಸಮುದಾಯದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಹಾಗಾಗಿ ಕಂಗನಾ ವಿರುದ್ಧ ಕೇಸ್‌ ದಾಖಲಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ಇದನ್ನೂ ಓದಿ: Bigg Boss Kannada 11: ವೈರಲ್‌ ಆಗ್ತಿದೆ ದೊಡ್ಮನೆ ಸ್ಪರ್ಧಿಗಳ ಸಂಭಾವ್ಯ ಪಟ್ಟಿ

    ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್‌ ಕಂಗನಾ ಅವರಿಗೆ ನೋಟಿಸ್‌ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 5ಕ್ಕೆ ಮುಂದೂಡಿದೆ. ಇದನ್ನೂ ಓದಿ: ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹಿನಾ ಖಾನ್ ರ‍್ಯಾಂಪ್ ವಾಕ್- ಮದುಮಗಳಂತೆ ಮಿಂಚಿದ ನಟಿ

    ಸಿಖ್‌ ಸಂಘಟನೆಗಳಿಂದಲೂ ವ್ಯಾಪಕ ವಿರೋಧ:
    ʻಎಮರ್ಜೆನ್ಸಿʼ ಸಿನಿಮಾ ಆರಂಭದಿಂದಲೂ ವಿವಾದದ ಸುಳಿಯಲ್ಲಿ ಸಿಲುಕಿದೆ. ಈ ನಡುವೆ ಶಿರೋಮಣಿ ಅಕಾಲಿ ದಳ ಸೇರಿದಂತೆ ಅನೇಕ ಸಿಖ್‌ ಸಂಘಟನೆಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಆರಂಭದಿಂದಲೂ ಸಿಖ್ ಸಮುದಾಯವನ್ನು (Sikh Community) ತಪ್ಪಾಗಿ ಬಿಂಬಿಸಲಾಗಿದೆ, ಸಿಖ್ಖರ ಸಮುದಾಯಗಳ ಬಗೆಗಿನ ನೈಜತೆಯನ್ನು ತಿರುಚಲಾಗಿದೆ ಎಂದು ಆರೋಪಿಸಿವೆ. ಇದನ್ನೂ ಓದಿ: ದರ್ಶನ್ & ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ – ಇನ್ನೂ 14 ದಿನ ಜೈಲೇ ಗತಿ

    ‘ಎಮರ್ಜೆನ್ಸಿ’ ಸಿನಿಮಾ ಪೋಸ್ಟ್‌ಪೋನ್‌
    ‘ಎಮರ್ಜೆನ್ಸಿ’ ಚಿತ್ರವನ್ನು ಸೆ.6ರಂದು ರಿಲೀಸ್ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಿಡುಗಡೆಗೆ ಹಲವು ಅಡ್ಡಿ ಆತಂಕಗಳು ಎದುರಾಗಿವೆ. ಸೆನ್ಸಾರ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆ ಸಿಲುಕಿಕೊಂಡಿರುವ ಈ ಸಿನಿಮಾಗೆ ಇನ್ನೂ ಕೂಡ ಪ್ರಮಾಣ ಪತ್ರ ಸಿಕ್ಕಿಲ್ಲ. ಹಾಗಾಗಿ, ಕಂಗನಾ ಸಂಕಷ್ಟಕ್ಕೆ ಈಡಾಗಿದ್ದಾರೆ. ಅದೇ ಬೇಸರದಲ್ಲಿ ಅವರು ಒಂದಿಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿಂದೆ ಸೆನ್ಸಾರ್ ಸಮಸ್ಯೆಗೆ ಸಿಲುಕಿದ್ದ ದೀಪಿಕಾ ಪಡುಕೋಣೆ ಅವರ ‘ಪದ್ಮಾವತ್’ ಮತ್ತು ಆಲಿಯಾ ಭಟ್ ಅವರ ‘ಉಡ್ತಾ ಪಂಜಾಬ್’ ಸಿನಿಮಾಗಳನ್ನು ಕಂಗನಾ ನೆನಪು ಮಾಡಿದ್ದಾರೆ.

    ಇತ್ತೀಚೆಗೆ ನಟಿ ಕಂಗನಾ ಸಿನಿಮಾಗಾಗಿ ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ತಮ್ಮ ಬಂಗಲೆಯನ್ನೇ 32 ಕೋಟಿ ರೂ.ಗೆ ಮಾರಾಟ ಮಾಡಿರುವ ಬಗ್ಗೆ ವರದಿಯಾಗಿತ್ತು. ಇದನ್ನೂ ಓದಿ: ದರ್ಶನ್‌ಗೆ ರಾಜಾತಿಥ್ಯ – ಕಲಬುರಗಿ ಜೈಲಿಗೆ ವಿಲ್ಸನ್‌ ಗಾರ್ಡನ್‌ ನಾಗ ಶಿಫ್ಟ್‌

  • ರಾಹುಲ್ ಗಾಂಧಿಯನ್ನು ಕೋರ್ಟ್‌ಗೆಳೆಯುತ್ತೇವೆ; ಸಿಖ್ ಸಮುದಾಯದ ಬಗ್ಗೆ ಹೇಳಿಕೆಗೆ ಎಚ್ಚರಿಕೆ ನೀಡಿ ಕೇಂದ್ರ ಸಚಿವ ಪುರಿ

    ರಾಹುಲ್ ಗಾಂಧಿಯನ್ನು ಕೋರ್ಟ್‌ಗೆಳೆಯುತ್ತೇವೆ; ಸಿಖ್ ಸಮುದಾಯದ ಬಗ್ಗೆ ಹೇಳಿಕೆಗೆ ಎಚ್ಚರಿಕೆ ನೀಡಿ ಕೇಂದ್ರ ಸಚಿವ ಪುರಿ

    ವಾಷಿಂಗ್ಟನ್‌: ಒಂದು ಕಡೆ ಮೀಸಲಾತಿ ಬಗ್ಗೆ ಹೇಳಿಕೆ ಕೊಟ್ಟು ತೀವ್ರ ಟೀಕೆಗೆ ಗುರಿಯಾಗಿರೋ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi), ಸಿಖ್ ಧರ್ಮವನ್ನು ಉಲ್ಲೇಖಿಸಿ, ಭಾರತದಲ್ಲಿ ರಾಜಕೀಯಕ್ಕಿಂತ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆಯೇ ಹೆಚ್ಚು ಹೋರಾಟಗಳು ನಡೆಯುತ್ತವೆ ಅಂದಿರೋದು ವಿವಾದಕ್ಕೆ ಕಾರಣವಾಗಿದೆ.

    ಭಾರತದ ಕೆಲ ವರ್ಗ, ಭಾಷೆ, ಧರ್ಮಗಳಲ್ಲಿ ಆರ್‌ಎಸ್‌ಎಸ್ ಅಭದ್ರತೆಯ ಭಾವನೆ ಮೂಡಿಸಿದೆ. ಉದಾಹರಣೆಗೆ ಸಿಖ್ಖರು (Sikhs) ಟರ್ಬನ್, ಖಡಗ ಧರಿಸೋದಕ್ಕೆ ಹೆದರುವಂತಾಗಿದೆ. ಇದು ಒಬ್ಬ ವ್ಯಕ್ತಿ ಮತ್ತು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಧರ್ಮಗಳಲ್ಲೂ ಇಂತಹ ಸ್ಥಿತಿ ಇದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ ಅನುದಾನವನ್ನು ಕೇಂದ್ರ ತಕ್ಷಣವೇ ಬಿಡುಗಡೆಗೊಳಿಸಲಿ : ಎಚ್.ಕೆ ಪಾಟೀಲ್

    ಇದೇ ವೇಳೆ ರಾಹುಲ್‌ ಗಾಂಧಿ ಅವರು, ಇಂದಿರಾ ಗಾಂಧಿಯವರ ಹತ್ಯೆಯ ನಂತರ 1984 ರ ಸಿಖ್ ವಿರೋಧಿ ದಂಗೆಯನ್ನು ಉಲ್ಲೇಖಿಸಿ ಮಾತನಾಡಿದರು. ಸ್ವಾತಂತ್ರ್ಯಾನಂತರದ ಇತಿಹಾಸದಲ್ಲಿ, ಸಿಖ್‌ ಸಮುದಾಯದ ಮೇಲೆ ಹತ್ಯಾಕಾಂಡ ನಡೆದ ಸಂದರ್ಭವಿತ್ತು. ಆಗ 3,000 ಅಮಾಯಕ ಸಿಖ್ಖರನ್ನು ಕೊಲ್ಲಲಾಯಿತು. ಆ ಸಂದರ್ಭದಲ್ಲಿ ನನ್ನ ಕೆಲವು ಸಹೋದರರು ಪೇಟ ಧರಿಸುವುದನ್ನೇ ಬಿಟ್ಟರು ಎಂದು ಹೇಳಿದ್ದರು.

    ರಾಹುಲ್‌ ಗಾಂಧಿ ಅವರು ಅಮೆರಿಕದ ವೇದಿಕೆಯಲ್ಲಿ ನೀಡಿದ ಹೇಳಿಕೆಯನ್ನು ಬಿಜೆಪಿಯಲ್ಲಿರುವ ಸಿಖ್‌ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಪುರಿ, ಬಿಜೆಪಿ ಹಿರಿಯ ಮುಖಂಡ ಆರ್‌.ಪಿ ಸಿಂಗ್‌ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದೀಪಿಕಾ – ರಣ್‌ವೀರ್‌ ಸಿಂಗ್ ಮಗಳ ನೋಡಲು ಬಂದ ಮುಕೇಶ್ ಅಂಬಾನಿ

    ರಾಹುಲ್‌ ಗಾಂಧಿ ಅವರು ಅಪಾಯಕಾರಿ ಸಂಗತಿಗಳನ್ನು ಹರಡುತ್ತಿದ್ದಾರೆ. ವಿರೋಧಪಕ್ಷದ ನಾಯಕನ ಹುದ್ದೆಯಲ್ಲಿರುವಾಗ ವಿದೇಶದಲ್ಲಿ ನಿಂತು ಭಾರತ ಸರ್ಕಾರವನ್ನು ಟೀಕಿಸುವುದು ಎಷ್ಟು ಸರಿ? ಅಮೆರಿಕದಲ್ಲಿ ನನ್ನ ಸಮುದಾಯದ ಜನ ಇದ್ದಾರೆ. ಅವರು ಭಾರತದೊಂದಿಗೆ ಹೆಚ್ಚು ಬಲವಾದ ಸಂಪರ್ಕವನ್ನು ಹೊಂದಿಲ್ಲ. ರಾಹುಲ್‌ ಗಾಂದಿ ಅವರಿಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅವರನ್ನು ಕೋರ್ಟ್‌ಗೆ ಎಳೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಅಲ್ಲಲ್ಲಿ ಪ್ರತಿಭಟನೆಗಳು ಶುರುವಾಗಿವೆ. ಈ ಮಧ್ಯೆ, ಪ್ರಧಾನಿ ಮೋದಿ ಬಗ್ಗೆಯೂ ಪ್ರಸ್ತಾಪಿಸಿರೋ ರಾಹುಲ್ ಗಾಂಧಿ, ಮೋದಿ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ. ನಮ್ಮಿಬ್ಬರದ್ದೂ ಭಿನ್ನ ವ್ಯಕ್ತಿತ್ವ. ಅವರನ್ನು ಶತ್ರುವಿನ ರೀತಿ ನೋಡಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹಿರಿಯ ಅಧಿಕಾರಿ ವಿರುದ್ಧ IAF ಫ್ಲೈಯಿಂಗ್‌ ಸ್ಕ್ವಾಡ್‌ ಮಹಿಳಾಧಿಕಾರಿಯಿಂದ ಅತ್ಯಾಚಾರ ಆರೋಪ – ಕೇಸ್‌ ದಾಖಲು

    ಇನ್ನೂ ಲೋಕಸಭೆ ಚುನಾವಣೆಯ ಪ್ರಕ್ರಿಯೆಯನ್ನು ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ. ಲೋಕಸಭೆ ಚುನಾವಣೆ ಪಾರದರ್ಶಕವಾಗಿ ನಡೆದಿದ್ರೆ ಬಿಜೆಪಿಗೆ 240 ಸೀಟ್ ಕೂಡ ಬರ್ತಿರಲಿಲ್ಲ. ಬಿಜೆಪಿಗೆ ಆರ್ಥಿಕ ಬಲ ಇದೆ. ಚುನಾವಣಾ ಆಯೋಗ ಅವರಿಗೆ ಅನುಕೂಲವಾಗಿ ಕೆಲಸ ಮಾಡಿತು ಎಂದು ಅಮೆರಿಕಲ್ಲಿ ಆರೋಪಿಸಿದ್ದಾರೆ.

  • Deepavali: 52 ರಾಜರನ್ನು ಬಂಧನದಿಂದ ಬಿಡಿಸಿ ಕರೆತಂದ ಧೀರ; ಸಿಖ್ಖರ ದೀಪಾವಳಿ ಹಿಂದಿದೆ ರೋಚಕ ಕಥೆ!

    Deepavali: 52 ರಾಜರನ್ನು ಬಂಧನದಿಂದ ಬಿಡಿಸಿ ಕರೆತಂದ ಧೀರ; ಸಿಖ್ಖರ ದೀಪಾವಳಿ ಹಿಂದಿದೆ ರೋಚಕ ಕಥೆ!

    ಬೆಳಕಿನ ಹಬ್ಬ ದೀಪಾವಳಿ (Deepavali). ದೇಶದೆಲ್ಲೆಡೆ ದೀಪದ ಹಾವಳಿ. ಕತ್ತಲಿನಿಂದ ಬೆಳಕಿನೆಡೆಗೆ ನಡಿಗೆ.. ಕೆಡುಕಿನ ವಿರುದ್ಧ ಒಳಿತಿನ ಯುದ್ಧದ ಸಂಕೇತ ಈ ದೀಪಾವಳಿ. ಮನೆ ಮನೆಗಳಲ್ಲಿ ದೀಪ ಹಚ್ಚಿ, ಮನ ಮನಗಳಲ್ಲಿ ಬೆಳಕು ಹೊಮ್ಮಿಸುವುದು ಎಷ್ಟು ಸೊಗಸು ಅಲ್ಲವೇ? ದೀಪಾವಳಿ ಕೇವಲ ಹಬ್ಬ, ಆಚರಣೆಯಾಗಷ್ಟೇ ಉಳಿದುಕೊಂಡಿಲ್ಲ. ಭಾರತೀಯ ಸಂಸ್ಕೃತಿ, ಇತಿಹಾಸದ ಸಂಗತಿಗಳೊಂದಿಗೆ ಬೆಳಕಿನ ಹಬ್ಬ ಸಮ್ಮಿಲನಗೊಂಡಿದೆ.

    ಆಯಾ ಪ್ರಾದೇಶಿಕ ಮಹತ್ತಿನ ಸಂಗತಿಗಳು ಕಾಲಾಂತರದಲ್ಲಿ ದೀಪಾವಳಿ ಹಬ್ಬದೊಂದಿಗೆ ಮಿಳಿತಗೊಂಡಂತಿದೆ. ಅದಕ್ಕೆ ಸಾಕಷ್ಟು ಉದಾಹರಣೆಗಳೂ ಇವೆ. ಆದ್ದರಿಂದಲೇ ಭಾರತದ ಭಿನ್ನ ಭಿನ್ನ ಪ್ರದೇಶಗಳಲ್ಲಿ ದೀಪಾವಳಿಯ (Diwali) ಜೊತೆಗೆ ಬೆಸೆದುಕೊಂಡಿರುವ ಕಥೆಗಳು ಸಹ ಭಿನ್ನ ಭಿನ್ನ. ರಾವಣನನ್ನು ಸೋಲಿಸಿದ ನಂತರ ಶ್ರೀರಾಮನು ಸೀತೆಯನ್ನು ಅಯೋಧ್ಯೆಗೆ ಕರೆದುಕೊಂಡ ಬಂದ ಸಂದರ್ಭವನ್ನು ಜನರು ಸಂಭ್ರಮಿಸುತ್ತಾರೆ. ಕಾಲಾಂತರದಲ್ಲಿ ಆ ಸಂಭ್ರಮ ದೀಪಾವಳಿಯೊಂದಿಗೆ ಬೆಸೆದುಕೊಳ್ಳುತ್ತದೆ. ಇಂತಹ ಅನೇಕ ಐತಿಹ್ಯ ಸಂಗತಿಗಳು ದೀಪಾವಳಿ ಜೊತೆಗೆ ಸಮ್ಮಿಲನಗೊಂಡಿವೆ. ಇದನ್ನೂ ಓದಿ: ದೀಪಾವಳಿಯಲ್ಲಿ ಗೋಪೂಜೆಯ ಮಹತ್ವವೇನು?

    ಸಿಖ್ಖರ ದೀಪಾವಳಿ
    ಸಿಖ್ಖರು (Sikhs Diwali) ಸಹ ತಮ್ಮ ಪ್ರದೇಶದ ಮಹತ್ತಿನ ಸಂಗತಿಯೊಂದನ್ನು ಸ್ಮರಿಸುವ ಮೂಲಕ ವಿಶೇಷ ರೀತಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಸಿಖ್ಖರಲ್ಲಿ, ದೀಪಾವಳಿ ಆಚರಿಸಲು ಮತ್ತೊಂದು ಕಾರಣವಿದೆ. ಇದನ್ನು ‘ಬಂದಿ ಛೋರ್ ದಿವಸ್’ (Bandi Chhor Divas) ಅಂದರೆ ವಿಮೋಚನೆಯ ದಿನ ಎಂದು ಕರೆಯಲಾಗುತ್ತದೆ. ಈ ಆಚರಣೆಯ ಹಿಂದೆ ಶೌರ್ಯ, ತ್ಯಾಗ ಮತ್ತು ಶ್ರದ್ಧೆಯ ಕಥೆಯಿದೆ. ಶ್ರೀರಾಮನ ವಿಜಯಕ್ಕೆ ಇದನ್ನು ಹೋಲಿಸಿ ಜನ ಸಂಭ್ರಮಿಸುತ್ತಾರೆ.

    ಬಂದಿ ಛೋರ್ ದಿವಸ್ ಹಿಂದಿನ ಕಥೆ
    ಸಿಖ್ ಧರ್ಮದಲ್ಲಿಯೂ ಸಹ ದೀಪಾವಳಿ ಮುಖ್ಯ ಹಬ್ಬ. 1620 ರಲ್ಲಿ ಸಿಖ್ಖರ ದೊರೆ 6ನೇ ಗುರು ಹರಗೋಬಿಂದ್ ಸಿಂಗ್ (Guru Hargobind Singh), ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸಿ ತಂದ ದಿನವೆಂದು ದೀಪಾವಳಿಯನ್ನು ಆಚರಿಸುತ್ತಾರೆ. ಚಕ್ರವರ್ತಿ ಜಹಾಂಗೀರ್ ಸೆರೆಯಿಂದ 52 ರಾಜರನ್ನು ಬಿಡುಗಡೆ ಮಾಡಿದ ಗುರು ಹರಗೋಬಿಂದ್ ಜಿ ಅವರ ಧೈರ್ಯದ ಕಾರ್ಯವನ್ನು ಸ್ಮರಿಸಲು ಸಿಖ್ಖರು ಈ ದಿನವನ್ನು ದೀಪಾವಳಿ ಸಂದರ್ಭದಲ್ಲಿ ಆಚರಿಸುತ್ತಾರೆ. 1606 ಶತಮಾನದಲ್ಲಿ ಗುರು ಹರಗೋಬಿಂದ್ ಅವರು ತಮ್ಮ ತಂದೆ ಮತ್ತು ಐದನೇ ಸಿಖ್ ಗುರು ಅರ್ಜನ್ ದೇವ್ ಅವರ ಮರಣದಂಡನೆಯ ನಂತರ ಸಿಂಹಾಸನ ಅಲಂಕರಿಸಿದರು. ಇದನ್ನೂ ಓದಿ: ದೀಪಾವಳಿ: ವ್ಯಾಪಾರ ವೃದ್ಧಿಗೆ ಮಾಡಿ ಧನಲಕ್ಷ್ಮಿ ಪೂಜೆ

    ಗುರು ಹರಗೋಬಿಂದ್ ಸಿಂಗ್ ತಮ್ಮ 11 ನೇ ವಯಸ್ಸಿನಲ್ಲೇ ಸಿಂಹಾಸನ ಏರಿದರು. ಆರಂಭದಲ್ಲಿ ತಮ್ಮ ಸೇನಾಪಡೆಯ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡರು. ಅಮೃತಸರದಲ್ಲಿ ಶ್ರೀ ಅಕಲ್ ತಖತ್ ಸಾಹಿಬ್ (ಸರ್ವಶಕ್ತರ ಸಿಂಹಾಸನ) ನಿರ್ಮಿಸಿದರು. ಸಿಂಗ್ ಸಾಮ್ರಾಜ್ಯದಲ್ಲಿ ಹೆಚ್ಚುತ್ತಿದ್ದ ಸೇನಾ ಶಕ್ತಿಯು ಇತರ ಆಡಳಿತಗಾರರನ್ನು ಎಚ್ಚರಿಸಿತು. ಪರಿಣಾಮವಾಗಿ ಲಾಹೋರ್‌ನ ನವಾಬ್, ಮುರ್ತಾಜಾ ಖಾನ್, ಚಕ್ರವರ್ತಿ ಜಹಾಂಗೀರ್‌ಗೆ ಈ ಬಗ್ಗೆ ಮಾಹಿತಿ ರವಾನಿಸಿದರು. ಹರಗೋಬಿಂದ್ ಸಿಂಗ್ ನಮ್ಮ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಹಾಗೆ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ.

    ಗುರು ಹರಗೋಬಿಂದ್ ಬಂಧನ
    ಸೇನಾ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದ ಹರಗೋಬಿಂದ್ ಸಿಂಗ್ ಬಂಧನಕ್ಕೆ ಜಹಾಂಗೀರ್ ಗುರು ತಂತ್ರ ರೂಪಿಸುತ್ತಾರೆ. ಸಿಂಗ್‌ನನ್ನು ಬಂಧಿಸಲು ತನ್ನ ಬಹುಕಾಲದ ವಿಶ್ವಾಸಾರ್ಹ ಸಹಾಯಕ ವಜೀರ್ ಖಾನ್‌ಗೆ ಆದೇಶ ಹೊರಡಿಸುತ್ತಾರೆ. ಆಗ ವಜೀರ್, ದೆಹಲಿಯಲ್ಲಿ ಚಕ್ರವರ್ತಿ ಜಹಾಂಗೀರರನ್ನು ಭೇಟಿಯಾಗಲೆಂದು ಹರಗೋಬಿಂದ್ ಸಿಂಗ್‌ಗೆ ಆಹ್ವಾನ ನೀಡುತ್ತಾರೆ. ಆಹ್ವಾನವನ್ನು ಒಪ್ಪಿ ಸಿಂಗ್, ಜಹಾಂಗೀರರ ಆಸ್ಥಾನವನ್ನು ತಲುಪುತ್ತಾರೆ. ಆಗ ಅವರನ್ನು ಗ್ವಾಲಿಯರ್ ಕೋಟೆಯಲ್ಲಿ ಬಂಧಿಸಲಾಗುತ್ತದೆ. ಇದನ್ನೂ ಓದಿ: ಬೆಳಕಿನ ಹಬ್ಬಕ್ಕಿದೆ ರಾಮಾಯಣದ ನಂಟು

    ಗುರು ಹರಗೋಬಿಂದ್ ಜೊತೆಗೆ, ಅನೇಕ ರಜಪೂತ ರಾಜಕುಮಾರರನ್ನು ಸಹ ಕೋಟೆಯಲ್ಲಿ ಒತ್ತೆಯಾಳಾಗಿ ಇರಿಸಲಾಗಿತ್ತು. ಒಳಗೆ ರಾಜ ಗುರುವನ್ನು ದುರ್ಬಲಗೊಳಿಸಲು ಅನೇಕ ಪ್ರಯತ್ನಗಳು ನಡೆದವು. ಆದರೆ ಅವರ ನಂಬಿಕೆಯು ಅವರನ್ನು ಉತ್ತೇಜಿಸಿತು. ಅವರ ಆಸ್ಥಾನ ಮತ್ತು ಸಾಮ್ರಾಜ್ಯದ ಹಿತೈಷಿಗಳು ಅವರ ತ್ಯಾಗಕ್ಕೆ ಗೌರವ ಸಲ್ಲಿಸಲು ಗ್ವಾಲಿಯರ್‌ಗೆ ಹೋದರು. ಅವರಲ್ಲಿ ಒಬ್ಬರು ಹೆಸರಾಂತ ಸೂಫಿ ಸಂತ, ಮಿಯಾನ್ ಮಿರ್. ಈ ಸಂತ ಗ್ವಾಲಿಯರ್ ತಲುಪಿದಾಗ, ಗುರು ಹರಗೋಬಿಂದ್‌ಗೆ ಸ್ವಾತಂತ್ರ‍್ಯವನ್ನು ನೀಡುವಂತೆ ಚಕ್ರವರ್ತಿಯನ್ನು ವಿನಂತಿಸಿದರು. ವಿನಂತಿಗೆ ಮಣಿದ ಚಕ್ರವರ್ತಿ ಹರಗೋಬಿಂದ್ ಬಿಡುಗಡೆಗೆ ಆದೇಶಿಸುತ್ತಾರೆ.

    ಬಂಧನದಿಂದ 52 ರಾಜರ ಬಿಡುಗಡೆ
    ಆದಾಗ್ಯೂ, ಇತರ 52 ರಜಪೂತ ರಾಜಕುಮಾರರನ್ನು ಸಹ ಬಿಡುಗಡೆ ಮಾಡುವವರೆಗೆ ನಾನು ಬಿಡುಗಡೆ ಆಗುವುದಿಲ್ಲ ಎಂದು ಹರಗೋಬಿಂದ್ ನಿರಾಕರಿಸುತ್ತಾರೆ. ಇದನ್ನು ಕೇಳಿದ ಚಕ್ರವರ್ತಿಯು ಸವಾಲೊಂದನ್ನು ಹಾಕುತ್ತಾರೆ. ಆ ಸವಾಲಿನಲ್ಲಿ ಹರಗೋಬಿಂದ್ ಗೆಲುವು ಸಾಧಿಸುತ್ತಾರೆ. ನಂತರ ಬಂಧನದಲ್ಲಿದ್ದ 52 ರಾಜಕುಮಾರರನ್ನೂ ಬಂಧಮುಕ್ತಗೊಳಿಸಿ ಕರೆ ತರುತ್ತಾರೆ. ಈ ವಿಜಯೋತ್ಸವವನ್ನು ಸಿಖ್ ಜನರು ದೀಪಾವಳಿಯಂದು ಆಚರಿಸುತ್ತಾರೆ.

    ಬಂದಿ ಛೋರ್ ದಿವಸ್ ಆಚರಣೆ ಹೇಗಿರುತ್ತೆ?
    ಬಂದಿ ಛೋರ್ ದಿವಸ್ ಆಚರಣೆಗಳು ದೀಪಾವಳಿಯನ್ನು ಹೋಲುತ್ತವೆ. ಗುರುದ್ವಾರಗಳು ಅತಿರಂಜಿತವಾಗಿ ಬೆಳಗುತ್ತವೆ. ಅಲ್ಲಿ ಸಾವಿರಾರು ಸಿಖ್ಖರು ಮತ್ತು ಇತರ ಆರಾಧಕರು ಗೌರವಾರ್ಥವಾಗಿ ಮೇಣದಬತ್ತಿಗಳನ್ನು ಬೆಳಗಿಸುತ್ತಾರೆ. ಸ್ವಯಂಸೇವಕರು ಸಿದ್ಧಪಡಿಸಿದ ಗುರುದ್ವಾರಗಳಲ್ಲಿ ವಿಸ್ತಾರವಾದ ಔತಣಗಳು ಅಥವಾ ಲಂಗರ್‌ಗಳನ್ನು ನೀಡಲಾಗುತ್ತದೆ. ಗುರುವಿನ ವಿಜಯ ಮತ್ತು ಶೌರ್ಯವನ್ನು ಸ್ಮರಿಸಲು ಹಗಲಿನಲ್ಲಿ ನಾಗರ ಕೀರ್ತನೆ ಎಂಬ ಮೆರವಣಿಗೆ ನಡೆಯುತ್ತದೆ.

  • ರಾಮ ಜನ್ಮಭೂಮಿ ಆಂದೋಲನ ಆರಂಭಿಸಿದ್ದೇ ಸಿಖ್ಖರು: ರಾಜನಾಥ್‌ ಸಿಂಗ್‌

    ರಾಮ ಜನ್ಮಭೂಮಿ ಆಂದೋಲನ ಆರಂಭಿಸಿದ್ದೇ ಸಿಖ್ಖರು: ರಾಜನಾಥ್‌ ಸಿಂಗ್‌

    ಲಕ್ನೋ: ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram Mandir) ನಿರ್ಮಾಣಕ್ಕಾಗಿ ಆಂದೋಲನ ಆರಂಭಿಸಿದ್ದು ದೇಶದ ಸಿಖ್ ಸಮುದಾಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿಕೆ ನೀಡಿದ್ದಾರೆ.

    ಶನಿವಾರ ಉತ್ತರ ಪ್ರದೇಶದ (Uttar Pradesh) ಲಕ್ನೋದ ಗುರುದ್ವಾರ ಆಲಂಬಾಗ್‌ನಲ್ಲಿ ನಡೆದ ಗುರು ಗ್ರಂಥ ಸಾಹಿಬ್ ಪ್ರಕಾಶ್ ಉತ್ಸವದಲ್ಲಿ ರಾಜನಾಥ್‌ ಸಿಂಗ್‌ ಭಾಗವಹಿಸಿದ್ದರು. ನಂತರ ಮಾತನಾಡಿದ ಅವರು, ಸನಾತನ ಧರ್ಮದ ರಕ್ಷಣೆಗೆ ಸಿಖ್ ಸಮುದಾಯ ಸಾಕಷ್ಟು ಕೆಲಸ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಆಂಧ್ರದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; 6 ಮಂದಿ ಸಾವು

    ರಾಮ ಜನ್ಮಭೂಮಿ ಆಂದೋಲನ ಪ್ರಾರಂಭಿಸಿದವರು ಸಿಖ್ಖರು. ಅವರ ಕೊಡುಗೆಯನ್ನು ಯಾವುದೇ ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಿಖ್ (Sikhs) ಸಮುದಾಯವು ಸನಾತನ ಧರ್ಮವನ್ನು ರಕ್ಷಿಸಲು ಸಾಕಷ್ಟು ಮಾಡಿದೆ ಎಂದು ತಿಳಿಸಿದ್ದಾರೆ.

    ರಾಮ ಜನ್ಮಭೂಮಿಗೆ ಸಿಖ್ ಸಮುದಾಯದ ಕೊಡುಗೆಯನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಸರ್ಕಾರಿ ದಾಖಲೆಯ ಪ್ರಕಾರ ನಾನು ಒಂದು ಪ್ರಮುಖ ಸಂಗತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಡಿಸೆಂಬರ್ 1, 1858 ರಂದು, ಗುರು ಗೋವಿಂದ್ ಸಿಂಗ್ ಅವರ ಘೋಷಣೆಗಳನ್ನು ಕೂಗುವ ಮೂಲಕ ಸಿಖ್ಖರ ಗುಂಪು ಆವರಣವನ್ನು ವಶಪಡಿಸಿಕೊಂಡಿತು. ಗೋಡೆಗಳ ಮೇಲೆ ಎಲ್ಲೆಡೆ ‘ರಾಮ್ ರಾಮ್’ ಎಂದು ಬರೆಯಿತು ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಹಮಾಸ್‌ನ್ನು ಭಾರತದ ಭಯೋತ್ಪಾದಕರ ಪಟ್ಟಿಗೆ ಸೇರಿಸೋ ಕಾಲ ಬಂದಿದೆ: ಇಸ್ರೇಲಿ ರಾಯಭಾರಿ

    ಸಿಖ್ ಗುರು ಗುರುನಾನಕ್ ದೇವ್ ಅವರನ್ನು ಸ್ಮರಿಸಿದ ಸಚಿವರು, ಭಾರತ ಮತ್ತು ಭಾರತೀಯರನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಗುರುನಾನಕ್ ದೇವ್ ಕೂಡ ನಮಗೆ ಈ ಸ್ಫೂರ್ತಿಯನ್ನು ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಲವಂತದ ಮತಾಂತರ ಆರೋಪ – ಪಾದ್ರಿಯ ಕಾರಿಗೆ ಬೆಂಕಿ, ಚರ್ಚ್ ಧ್ವಂಸ

    ಬಲವಂತದ ಮತಾಂತರ ಆರೋಪ – ಪಾದ್ರಿಯ ಕಾರಿಗೆ ಬೆಂಕಿ, ಚರ್ಚ್ ಧ್ವಂಸ

    ಚಂಡೀಗಢ: ಸಿಖ್ಖರ ಉನ್ನತ ತಾತ್ಕಾಲಿಕ ಸ್ಥಾನದ ಮುಖ್ಯಸ್ಥ ಅಕಲ್ ತಖ್ತ್ ಜಥೇದಾರ್ ಅವರು ಕ್ರಿಶ್ಚಿಯನ್ ಮಿಷನರಿಗಳು ಬಲವಂತದ ಮತಾಂತರ ಮಾಡಿಸಿರುವುದಾಗಿ ಆರೋಪಿಸಿದ್ದು, ಈ ಹಿನ್ನೆಲೆ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಜನರ ಗುಂಪೊಂದು ಮಂಗಳವಾರ ರಾತ್ರಿ ಸ್ಥಳೀಯ ಚರ್ಚ್ಗೆ ನುಗ್ಗಿ ಪ್ರತಿಮೆಗಳನ್ನು ಧ್ವಂಸಗೊಳಿಸಿದ್ದಾರೆ. ಮಾತ್ರವಲ್ಲದೇ ಚರ್ಚ್‌ನ ಪಾದ್ರಿಯ ಕಾರಿಗೂ ಬೆಂಕಿ ಹಚ್ಚಿರುವುದಾಗಿ ವರದಿಯಾಗಿದೆ.

    ಕ್ರೈಸ್ತ ಮಿಷನರಿಗಳು ಮೋಸದ ಆಚರಣೆಗಳ ಮೂಲಕ ಸಿಖ್ಖರನ್ನು ಬಲವಂತವಾಗಿ ಮತಾಂತರಿಸುತ್ತಿದ್ದಾರೆ. ಪಂಜಾಬ್‌ನ ಸಿಖ್ ಮತ್ತು ಹಿಂದೂಗಳನ್ನು ದಾರಿ ತಪ್ಪಿಸಿ ಮತಾಂತರಗೊಳಿಸಲಾಗುತ್ತಿದೆ. ಇದು ಸರ್ಕಾರದ ಕಣ್ಣೆದುರಲ್ಲೇ ನಡೆಯುತ್ತಿದೆ. ಕಾನೂನಿನಲ್ಲಿ ಮೂಢನಂಬಿಕೆ ಆಚರಣೆಗಳನ್ನು ಮಟ್ಟ ಹಾಕುವ ಅವಕಾಶಗಳಿವೆ. ಆದರೆ ವೋಟ್‌ಬ್ಯಾಂಕ್ ರಾಜಕೀಯದಿಂದಾಗಿ ಯಾವುದೇ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ವಕೀಲ ಗಿಯಾನಿ ಹರ್‌ಪ್ರೀತ್ ಸಿಂಗ್ ನಿನ್ನೆ ಫೇಸ್‌ಬುಕ್ ಲೈವ್ ವೀಡಿಯೋದಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಗುಡ್ಡದಲ್ಲಿ ಅನ್ಯಕೋಮಿನ ಜೋಡಿ ಪತ್ತೆ- ವಿದ್ಯಾರ್ಥಿ ತಂಡದಿಂದ ಹಲ್ಲೆ

    ಈ ಬೆನ್ನಲ್ಲೇ ಪಂಜಾಬ್‌ನಲ್ಲಿ ಕ್ರಿಶ್ಚಿಯನ್ ಮಿಷನರಿಗಳು ನಡೆಸುತ್ತಿರುವ ಮತಾಂತರ ಪ್ರಯತ್ನಗಳ ವಿರುದ್ಧ ಸಿಖ್ ಮುಖಂಡರು ದನಿಯೆತ್ತಿದ್ದಾರೆ. ನಿನ್ನೆ ರಾತ್ರಿ ತರ್ನ್ ತರನ್ ಜಿಲ್ಲೆಯ ಪಟ್ಟಿ ವಿಧಾನಸಭಾ ಕ್ಷೇತ್ರದ ಥಕರ್‌ಪುರ ಗ್ರಾಮದಲ್ಲಿ ಚರ್ಚ್ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಸ್ಥಳೀಯ ಚರ್ಚ್‌ನ ಏಸು ಹಾಗೂ ಮೇರಿಯ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ಪಾದ್ರಿಯ ಕಾರಿಗೂ ಬೆಂಕಿ ಹಚ್ಚಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದಯವಿಟ್ಟು ಬೆಂಗಳೂರನ್ನು ಕಾಪಾಡಿ- ಪ್ರಧಾನಿಗೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಮನವಿ

    ಪಂಜಾಬ್ ಗಡಿ ರಾಜ್ಯವಾಗಿದ್ದು, ಮತಾಂತರ ಮಾಡಿಸಲು ಅಲ್ಲಿಗೆ ವಿದೇಶಗಳಿಂದ ಹಣ ಬರುತ್ತದೆ ಎಂಬುದು ನಮಗೆ ತಿಳಿದು ಬಂದಿದೆ. ನಕಲಿ ಪಾದ್ರಿಗಳು ಸಿಖ್ಖರ ದಾರಿ ತಪ್ಪಿಸುತ್ತಿದ್ದಾರೆ ಹಾಗೂ ಮತಾಂತರ ಮಾಡುತ್ತಿದ್ದಾರೆ. ಈ ಕೂಡಲೇ ಇದನ್ನು ನಿಯಂತ್ರಿಸಬೇಕು. ಈ ನಕಲಿ ಪಾದ್ರಿಗಳ ವಿರುದ್ಧ ಮೂಢನಂಬಿಕೆಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಹರ್‌ಪ್ರೀತ್ ಸಿಂಗ್ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಡ್ಡಧಾರಿ ವ್ಯಕ್ತಿಗಳ ವಿರುದ್ಧ ಅಪಹಾಸ್ಯ – ಹಾಸ್ಯ ನಟಿ ಭಾರತಿ ಸಿಂಗ್ ವಿರುದ್ಧ FIR

    ಗಡ್ಡಧಾರಿ ವ್ಯಕ್ತಿಗಳ ವಿರುದ್ಧ ಅಪಹಾಸ್ಯ – ಹಾಸ್ಯ ನಟಿ ಭಾರತಿ ಸಿಂಗ್ ವಿರುದ್ಧ FIR

    ಮುಂಬೈ: ಗಡ್ಡಧಾರಿ ವ್ಯಕ್ತಿಗಳನ್ನು ಅಪಹಾಸ್ಯ ಮಾಡಿದ ಹಳೆಯ ವೀಡಿಯೋವೊಂದರ ಕುರಿತಂತೆ ಬಾಲಿವುಡ್ ಹಾಸ್ಯನಟಿ ಭಾರತಿ ಸಿಂಗ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಭಾರತಿ ಸಿಂಗ್ ಅವರಿಂದ ಸಿಖ್ಖರ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಪಂಜಾಬ್‍ನ ಅಮೃತಸರದಲ್ಲಿ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ ನೀಡಿದ ದೂರಿನ ಆಧಾರದ ಮೇರೆಗೆ ಸೋಮವಾರ ರಾತ್ರಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ವೈರಲ್ ಆದ ಹಳೆಯ ವೀಡಿಯೋದಲ್ಲಿ, ಗಡ್ಡ-ಮೀಸೆಯಿಂದ ಅನೇಕ ಪ್ರಯೋಜನಗಳಿವೆ. ಹಾಲು ಕುಡಿಯುವಾಗ ನಿಮ್ಮ ಗಡ್ಡವನ್ನು ನಿಮ್ಮ ಬಾಯಿಯೊಳಗೆ ಹಾಕಿಕೊಳ್ಳಿ. ಅದು ನಿಮಗೆ ಶಾವಿಗೆ ಪಾಯಸದಷ್ಟೇ ರುಚಿಯನ್ನು ನೀಡುತ್ತದೆ ಎಂದು ಭಾರತಿ ಸಿಂಗ್ ಅಪಹಾಸ್ಯ ಮಾಡಿದ್ದರು. ಈ ವಿಚಾರವಾಗಿ ಸಿಖ್ಖರು ನಮ್ಮ ಧಾರ್ಮಿಕ ನಂಬಿಕೆಯ ಭಾಗವಾದ ಗಡ್ಡದ ಬಗ್ಗೆ ಭಾರತಿ ಸಿಂಗ್ ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಿ ಸೋಮವಾರ ಅಮೃತಸರದಲ್ಲಿ ಭಾರತಿ ಸಿಂಗ್ ವಿರುದ್ಧ ಸಿಖ್ ಗುಂಪುಗಳು ಪ್ರತಿಭಟನೆ ನಡೆಸಿದ್ದವು.

     

    View this post on Instagram

     

    A post shared by Bharti Singh (@bharti.laughterqueen)

    ನಂತರ ಸೋಮವಾರ ಈ ಕುರಿತಂತೆ ವೀಡಿಯೋವೊಂದನ್ನು ಪೋಸ್ಟ್ ಮಾಡಿ ಭಾರತಿ ಸಿಂಗ್ ಅವರು ಕ್ಷಮೆಯಾಚಿಸಿದ್ದಾರೆ ಮತ್ತು ತಾವು ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪಠ್ಯಕ್ರಮದಲ್ಲಿ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ – ಶೀಘ್ರವೇ ಹಿಂತೆಗೆಯಲು ಕ್ಯಾಂಪಸ್ ಫ್ರಂಟ್ ಒತ್ತಾಯ

    ಕಳೆದ ಮೂರ್ನಾಲ್ಕು ದಿನಗಳಿಂದ ನಾನು ಗಡ್ಡಧಾರಿಗಳನ್ನು ಗೇಲಿ ಮಾಡಿದ್ದೇನೆ ಎಂಬ ವೀಡಿಯೋ ಹರಿದಾಡುತ್ತಿದೆ. ಆದರೆ ದಯವಿಟ್ಟು ವೀಡಿಯೋವನ್ನು ಸರಿಯಾಗಿ ನೋಡಿ. ನಾನು ಅದರಲ್ಲಿ ಏನನ್ನು ಹೇಳಿಲ್ಲ. ಅಲ್ಲದೇ ಯಾವುದೇ ಧರ್ಮ ಅಥವಾ ಜಾತಿ, ಸಿಖ್ಖರನ್ನು ಅಪಹಾಸ್ಯ ಮಾಡಿಲ್ಲ. ದಾಡಿಯಿಂದ ಯಾವ ರೀತಿ ಸಮಸ್ಯೆಗಳು ಬರಬಹುದು ಎಂದು ಹೇಳಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.

  • ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಂತರ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ಅವರು ‘ದಿ ಡೆಲ್ಲಿ ಫೈಲ್ಸ್’ ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾ ಘೋಷಣೆ ಆಗುತ್ತಿದ್ದಂತೆಯೇ ಮಹಾರಾಷ್ಟ್ರ  ಸಿಖ್ ಅಸೋಷಿಯೇಷನ್ ನಿರ್ದೇಶಕರ ವಿರುದ್ಧ ಕಿಡಿಕಾರಿದೆ. ಇಂತಹ ದ್ವೇಷದ ಕಥೆಗಳನ್ನು ಇಟ್ಟುಕೊಂಡು ನಿರ್ದೇಶಕರು ದುಡ್ಡು ಮಾಡುತ್ತಿದ್ದಾರೆ. ಸಮಾಜದಲ್ಲಿ ಮತ್ತಷ್ಟು ದ್ವೇಷ ಬಿತ್ತುತ್ತಿದ್ದಾರೆ ಎಂದು ಅಸೋಷಿಯೇಷನ್ ಆಪಾದನೆ ಮಾಡಿದೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ದಿ ಡೆಲ್ಲಿ ಫೈಲ್ಸ್’ ಸಿನಿಮಾದಲ್ಲಿ ಯಾವ ರೀತಿಯ ಕಥೆಯನ್ನು ಹೇಳುತ್ತಿದ್ದಾರೆ ಎಂದು ಈವರೆಗೂ ಬಹಿರಂಗ ಪಡಿಸಲಿಲ್ಲ. ಆದರೆ, ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದ್ದಾರೆ. ಡೆಲ್ಲಿಗೂ ಚೆನ್ನೈಗೂ ನಂಟಿದೆ ಎಂದು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಇದು ಸಿಖ್‍ ನರಮೇಧದ ಕಥೆ ಎಂದು ಊಹಿಸಲಾಗುತ್ತಿದೆ. ಹೀಗಾಗಿಯೇ ಸಿಖ್ ಸಂಘ ಈ ಸಿನಿಮಾಗೆ ವಿರೋಧ ವ್ಯಕ್ತ ಪಡಿಸಿದೆ. ಇದನ್ನೂ ಓದಿ : ಗಮನ ಸೆಳೆದ ‘ಒಂದಂಕೆ ಕಾಡು’ ಮೋಷನ್ ಪೋಸ್ಟರ್

    ಸಮಾಜದಲ್ಲಿ ಈಗಾಗಲೇ ಧರ್ಮ ಧರ್ಮಗಳ ನಡುವೆ ದ್ವೇಷದ ಭಾವನೆಗಳನ್ನು ಹಂಚಲಾಗುತ್ತಿದೆ. ಧ್ರುವೀಕರಣದಲ್ಲಿ ಕೆಲಸಗಳು ಮಾನ ಸಂಬಂಧಗಳನ್ನೇ ಹಾಳು ಮಾಡುತ್ತಿವೆ. ಶಾಂತಿಯನ್ನು ಸ್ಥಾಪಿಸಬೇಕಾದ ಇಂತಹ ಸಮಯದಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ದುಡ್ಡಿಗಾಗಿ ಜನರ ನಡುವೆ ದ್ವೇಷದ ಭಾವನೆಗಳನ್ನು ಬಿತ್ತುತ್ತಿದ್ದಾರೆ. ಇದರಿಂದಾಗಿ ಮತ್ತಷ್ಟು ಮನಸ್ಸುಗಳು ಹಾಳಾಗುತ್ತವೆ. ಹಾಗಾಗಿ ‘ದಿ ಡೆಲ್ಲಿ ಫೈಲ್ಸ್’ ಸಿನಿಮಾವನ್ನು ವಿರೋಧಿಸುವುದಾಗಿ ಮಹಾರಾಷ್ಟ್ರ ಸಿಖ್ ಅಸೋಷಿಯೇಷನ್ ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದೆ. ಇದನ್ನೂ ಓದಿ : Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್‌ ಹೇಗಿದೆ ಗೊತ್ತಾ?

    ಈಗಾಗಲೇ ವಿವೇಕ್ ಅಗ್ನಿಹೋತ್ರಿ ಅವರು ‘ದಿ ತಾಷ್ಕೆಂಟ್ ಫೈಲ್ಸ್’ ಮತ್ತು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ಮೂಲಕ ಜನಾಂಗದ ಮಧ್ಯೆ ಮನಸ್ತಾಪಗಳನ್ನು ತಂದಿಟ್ಟಿದ್ದಾರೆ. ಆದ ಘಟನೆಗಳನ್ನು ನೆನಪಿಸುವುದಕ್ಕಿಂತ ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸುವಂತಹ ಸಿನಿಮಾಗಳನ್ನು ಮಾಡಲಿ. ಸೃಜನಶೀಲ ಮಾಧ್ಯಮ ದುರಂತಗಳಿಗೆ ಬಳಕೆ ಆಗಬಾರದು. ದುಡ್ಡು ಮಾಡುವುದಕ್ಕಾಗಿ ಈ ರೀತಿಯ ಸಿನಿಮಾಗಳನ್ನು ಮಾಡಬಾರದು ಎಂದು ಪತ್ರದಲ್ಲಿ ಬರೆದಿದೆ ಸಿಖ್ ಅಸೋಷಿಯೇನ್.

  • ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ಸರ್ಕಾರದ  ನೆರವು

    ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ಸರ್ಕಾರದ ನೆರವು

    ಕಾಬೂಲ್: ಅಫ್ಘಾನಿಸ್ತಾನ ತೊರೆಯಲು ಬಯಸುವವರನ್ನು ಭಾರತಕ್ಕೆ ಕರೆತರಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಅರಿಂದಮ್ ಬಾಗ್‍ಚಿ ಹೇಳಿದ್ದಾರೆ.

    ಅಫ್ಘಾನಿಸ್ತಾನ ಆಡಳಿತವನ್ನು ತಾಲಿಬಾನ್ ಕೈವಶ ಮಾಡಿಕೊಂಡ ನಂತರ ದೇಶ ತೊರೆಯಲು ಹಾತೊರೆಯುತ್ತಿರುವ ಜನರು ವಿಮಾನ ನಿಲ್ದಾಣದಲ್ಲಿಯೇ ರಾತ್ರಿ ಕಳೆಯುತ್ತಿದ್ದಾರೆ. ಅಫ್ಘಾನಿಸ್ತಾನ ತೊರೆಯಲು ಬಯಸುವವರನ್ನು ಭಾರತಕ್ಕೆ ಕರೆತರಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಅರಿಂದಮ್ ಬಾಗ್‍ಚಿ ಹೇಳಿದ್ದಾರೆ. ಕಾಬೂಲ್‍ನಿಂದ ಭಾರತಕ್ಕೆ ವಾಣಿಜ್ಯ ವಿಮಾನ ಸಂಚಾರ ಮರುಸ್ಥಾಪನೆ ಆದ ಮೇಲೆ ಹಿಂದೂ ಮತ್ತು ಸಿಖ್ಖರಿಗೆ ಆದ್ಯತೆ ನೀಡಲಾಗುವುದು ಎಂದು ಭಾರತ ಸರ್ಕಾರ ಭರವಸೆ ನೀಡಿದೆ. ಇದನ್ನೂ ಓದಿ:  ಅಫ್ಘಾನಿಸ್ತಾನದಲ್ಲಿ ಶಾಲೆ, ಕಾಲೇಜು ಬಂದ್ – ಬುರ್ಖಾ ಅಂಗಡಿ ಓಪನ್

    ಕಾಬೂಲ್ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಗಳಿಗೆ ತೊಡಕು ಉಂಟಾಗಿದೆ. ಅಫ್ಘಾನಿಸ್ತಾನದಲ್ಲಿರುವ ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರ ಸ್ಥಿತಿಗತಿಯ ಬಗ್ಗೆ ಸತತವಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ:  ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ

    ಕಾಬೂಲ್‍ನ ಪರಿಸ್ಥಿತಿ ದಿನದಿಂದ ಹದಗೆಡುತ್ತಿದೆ. ಅಫ್ಘಾನಿಸ್ತಾನದ ಸಿಖ್ ಮತ್ತು ಹಿಂದೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದ್ದೇವೆ. ಭಾರತ ಸರ್ಕಾರವು ಅಫ್ಘಾನಿಸ್ತಾನದಲ್ಲಿ ನಿರ್ವಹಿಸುತ್ತಿದ್ದ ಹಲವು ಯೋಜನೆಗಳಿಗಾಗಿ ಅಲ್ಲಿನ ಸ್ಥಳೀಯರು ನೆರವಾಗಿದ್ದಾರೆ. ನಾವು ಅವರಿಗೆ ನೆರವಾಗಲು ಬದ್ಧರಾಗಿದ್ದೇವೆ ಎಂದು ಬಾಗ್‍ಚಿ ಹೇಳಿದ್ದಾರೆ. ಇದನ್ನೂ ಓದಿ:  ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಆಡಳಿತ – ಅಫ್ಘನ್ ದೇಶವನ್ನುದ್ದೇಶಿಸಿ ಅಮೆರಿಕ ಅಧ್ಯಕ್ಷ ಜೊ ಬೈಡನ್ ಭಾಷಣ

  • ಸಿಎಎ ವಿರೋಧಿಸುವವರಿಗೆ ನಂಕಾನಾ ಸಾಹಿಬ್ ಮೇಲೆ ನಡೆದ ದಾಳಿಯೇ ಉತ್ತರ: ಅಮಿತ್ ಶಾ

    ಸಿಎಎ ವಿರೋಧಿಸುವವರಿಗೆ ನಂಕಾನಾ ಸಾಹಿಬ್ ಮೇಲೆ ನಡೆದ ದಾಳಿಯೇ ಉತ್ತರ: ಅಮಿತ್ ಶಾ

    ನವದೆಹಲಿ: ಸಿಎಎ ವಿರೋಧಿಸುತ್ತಿರುವವರಿಗೆ ಪಾಕಿಸ್ತಾನದಲ್ಲಿನ ಗುರುದ್ವಾರದ ನಂಕಾನಾ ಸಾಹಿಬ್ ಮೇಲೆ ನಡೆದಿರುವ ದಾಳಿಯೇ ಉತ್ತರ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

    ದೆಹಲಿಯಲ್ಲಿ ನಡೆದ ಬಿಜೆಪಿ ಅಭಿಯಾನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ರಾಹುಲ್, ಸೋನಿಯಾ ಗಾಂಧಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸಿಎಎಯನ್ನು ವಿರೋಧಿಸುತ್ತಿದ್ದಾರೆ. ಅವರು ಪಾಕಿಸ್ತಾನದಲ್ಲಿನ ಗುರುದ್ವಾರದ ನಂಕಾನಾ ಸಾಹಿಬ್ ಮೇಲೆ ದಾಳಿ ನಡೆದಿದ್ದನ್ನು ಅರಿಯಬೇಕು. ಅಲ್ಲದೆ ಯಾರು ಸಿಎಎ ವಿರೋಧಿಸುತ್ತಿದ್ದಾರೋ ಅವರೆಲ್ಲರಿಗೂ ಇದು ಸೂಕ್ತ ಉತ್ತರ ಎಂದು ತಿಳಿಸಿದರು.

    ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿಯವರು ಜನತೆಯನ್ನು ಪ್ರಚೋದಿಸುತ್ತಿದ್ದಾರೆ. ಅಲ್ಲದೆ ನಿಮ್ಮ ಪೌರತ್ವವನ್ನು ಕಳೆದುಕೊಳ್ಳುತ್ತೀರಿ ಎಂದು ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಿ, ಪ್ರಚೋದಿಸುತ್ತಿದ್ದಾರೆ. ಆದರೆ ಅಲ್ಪಸಂಖ್ಯಾತರು ಈ ಕುರಿತು ತಲೆ ಕೆಡಿಸಿಕೊಳ್ಳಬೇಕಿಲ್ಲ. ಅಲ್ಲದೆ ಸಿಎಎಯಿಂದ ಅಲ್ಪಸಂಖ್ಯಾತರು ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    1984ರ ಸಿಖ್ ವಿರೋಧಿ ಗಲಭೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಂಕಾನಾ ಸಾಹಿಬ್‍ನಲ್ಲಿ ಏನಾಯಿತು? ಸಿಖ್ಖರ ಮೇಲೆ ದಾಳಿ ನಡೆಸಿದ ರೀತಿ ನೋಡಿ. ಈ ರೀತಿಯಾದಾಗ ನಮ್ಮ ಸಿಖ್ ಸಹೋದರರು ಭಾರತವಿಲ್ಲದಿದ್ದರೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಸುಳ್ಳು ಭರವಸೆ ನೀಡುವುದರ ಮೂಲಕವೇ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. 5 ವರ್ಷ ಆಡಳಿತ ನಡೆಸಿದರೂ ಅವರು ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

    ದೇಶಾದ್ಯಂತ ಸಿಎಎ ವಿರೋಧಿ ಹೋರಾಟಗಳು ನಡೆಯುತ್ತಿವೆ. ಇದರ ಮಧ್ಯೆಯೇ ಪಾಕಿಸ್ತಾನದಲ್ಲಿನ ಗುರುದ್ವಾರದ ಸಿಖ್ಖರ ಪವಿತ್ರ ಕ್ಷೇತ್ರ ನಂಕಾನಾ ಸಾಹೀಬ್ ಮೇಲೆ ಮುಸ್ಲಿಂ ಗುಂಪೊಂದು ದಾಳಿ ನಡೆಸಿ, ಕಲ್ಲು ತೂರಾಟ ನಡೆಸಿದೆ. ಇದು ತೀವ್ರ ಸಂಚಲನ ಸೃಷ್ಟಿಸಿದೆ. ಈ ಕುರಿತು ಸಿಖ್ ಸಮುದಾಯದವರು ದೇಶದಲ್ಲಿನ ಪಾಕಿಸ್ತಾನದ ರಾಯಭಾರಿ ಕಚೇರಿ ಮುಂಭಾಗ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.