Tag: Sikh Student

  • ಕಿರ್ಪಾನ್‌ ಹೊಂದಿದ್ದಕ್ಕೆ ಅಮೆರಿಕ ಪೊಲೀಸರಿಂದ ಸಿಖ್‌ ವಿದ್ಯಾರ್ಥಿ ಬಂಧನ

    ಕಿರ್ಪಾನ್‌ ಹೊಂದಿದ್ದಕ್ಕೆ ಅಮೆರಿಕ ಪೊಲೀಸರಿಂದ ಸಿಖ್‌ ವಿದ್ಯಾರ್ಥಿ ಬಂಧನ

    ವಾಷಿಂಗ್ಟನ್‌: ಕಿರ್ಪಾನ್‌ (ಚಾಕು ಮಾದರಿಯ ಆಯುಧ) ಹೊಂದಿದ್ದ ಸಿಖ್‌ ವಿದ್ಯಾರ್ಥಿಯನ್ನು ಅಮೆರಿಕದಲ್ಲಿ (America) ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

    ಚಾರ್ಲೋಟ್‌ನಲ್ಲಿರುವ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ಸಿಖ್ ವಿದ್ಯಾರ್ಥಿಯನ್ನು (Sikh) ಕಿರ್ಪಾನ್ (Kirpan) ಹೊಂದಿದ್ದಕ್ಕಾಗಿ ಕ್ಯಾಂಪಸ್‌ನಲ್ಲಿ ಬಂಧಿಸಲಾಯಿತು. ಈ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ, ಬಾಲಕಿಯರ ಕಿಡ್ನಾಪ್- ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮದುವೆ

    https://twitter.com/thatsamaan/status/1573422591246753794?ref_src=twsrc%5Etfw%7Ctwcamp%5Etweetembed%7Ctwterm%5E1573422591246753794%7Ctwgr%5Eea4f17f8ab20a01ac1336ef5da1a519562491b09%7Ctwcon%5Es1_&ref_url=https%3A%2F%2Fwww.ndtv.com%2Fworld-news%2Fvideo-sikh-student-with-kirpan-arrested-in-us-university-3375600

    ಕಿರ್ಪಾನ್‌ ತೆಗೆಯಲು ನಿರಾಕರಿಸಿದ್ದಕ್ಕೆ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ಈ ಬಗ್ಗೆ ಯಾರೋ ಪೊಲೀಸರಿಗೆ ಕರೆ ಮಾಡಿ ನನ್ನ ಬಗ್ಗೆ ದೂರಿದ್ದಾರೆ ಎಂದು ಬಂಧನಕ್ಕೊಳಗಾಗಿದ್ದ ವಿದ್ಯಾರ್ಥಿ ಟ್ವೀಟ್‌ ಮಾಡಿ ಬೇಸರ ವ್ಯಕ್ತಪಡಿಸಿದ್ದಾನೆ.

    ಅಮೆರಿಕ ಪೊಲೀಸರ ವರ್ತನೆಗೆ ವಿಶ್ವದಾದ್ಯಂತ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸಿಖ್‌ ಧರ್ಮ ಸೇರಿದಂತೆ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಪ್ರತಿಯೊಬ್ಬರಿಗೂ ಸಾಮಾನ್ಯ ಜ್ಞಾನವಾದರೂ ಇರಬೇಕು ಎಂದು ಒಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಕ್ಷಿಪ್ರ ಕಾಂತ್ರಿ – ಗೃಹ ಬಂಧನದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌?

    ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, ಸಿಖ್‌ ಯುವಕ ಕಿರ್ಪಾನ್‌ ಹೊಂದಿದ್ದಕ್ಕೆ ಆತನನ್ನು ಬಂಧಿಸಿರುವುದು ನಿರಾಶಾದಾಯಕವಾಗಿದೆ. ಇದು ಖಂಡನೀಯ. ಸಿಖ್ ವಿದ್ಯಾರ್ಥಿಗಳ ಬಗ್ಗೆ ವಿಶ್ವವಿದ್ಯಾನಿಲಯದ ಅಧಿಕಾರಿಗಳ ತಾರತಮ್ಯ ಧೋರಣೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]