Tag: sikh

  • ಭಾರತದಲ್ಲಿ ಹಿಂದೂ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ

    ಭಾರತದಲ್ಲಿ ಹಿಂದೂ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ

    ನವದೆಹಲಿ: ಭಾರತದಲ್ಲಿ (India) ಬಹುಸಂಖ್ಯಾತ ಹಿಂದೂಗಳು (Hindu) ಸಂಖ್ಯೆ ಬಹಳ ಕುಸಿತವಾಗಿದೆ ಎಂದು ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಯೊಂದು (Economic Advisory Council to the Prime Minister) ವರದಿ ಪ್ರಕಟಿಸಿದೆ.

    ಶಮಿಕಾ ರವಿ, ಅಪೂರ್ವ್ ಕುಮಾರ್ ಮಿಶ್ರಾ, ಅಬ್ರಹಾಂ ಜೋಸ್ ಅವರಿದ್ದ ತಂಡ 1950 ಮತ್ತು 2015ರ ನಡುವೆ 167 ದೇಶಗಳಲ್ಲಿರುವ ಧರ್ಮಗಳನ್ನು (Religion) ಅಧ್ಯಯನ ಮಾಡಿ ವರದಿಯನ್ನು ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣಾ (Lok Sabha Election) ಸಮಯದಲ್ಲಿ ಈ ವರದಿ ಬಿಡುಗಡೆ ಮಾಡಿದ್ದು ರಾಜಕೀಯ ಪಕ್ಷಗಳ ಮಧ್ಯೆ ಮತ್ತೊಂದು ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆಯಿದೆ.

    ವರದಿಯಲ್ಲಿ ಏನಿದೆ?
    1950 ಮತ್ತು 2015 ರ ನಡುವೆ ಭಾರತದಲ್ಲಿ ಹಿಂದೂಗಳ ಪ್ರಮಾಣ 7.8% ರಷ್ಟು ಕುಸಿತವಾದರೆ ಮುಸ್ಲಿಮರ (Muslims) ಪ್ರಮಾಣ 53% ಏರಿಕೆಯಾಗಿದೆ. 1950ರಲ್ಲಿ 84.68% ಹಿಂದೂಗಳಿದ್ದರೆ ಈಗ ಇದು 78.06% ಇಳಿಕೆಯಾಗಿದೆ. ಮುಸ್ಲಿಮ್‌ ಜನಸಂಖ್ಯೆ 9.84% ಇದ್ದರೆ ಈಗ ಇದು 14.09% ಏರಿಕೆಯಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ – ಮಲಗಿದ್ದಲ್ಲೇ 7 ಕಾರ್ಮಿಕರು ಸಾವು

    ಭಾರತದಲ್ಲಿ ಹಿಂದೂ ಜನಸಂಖ್ಯೆಯು ಕುಗ್ಗಿದರೆ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಮತ್ತು ಸಿಖ್‌ ಜನಾಂಗವರ ಸಂಖ್ಯೆ ಹೆಚ್ಚಳವಾದರೆ ಜೈನ ಮತ್ತು ಪಾರ್ಸಿಗಳ ಸಂಖ್ಯೆ ಕಡಿಮೆಯಾಗಿದೆ.

    ಕೈಸ್ತರು 5.38%, ಸಿಖ್‌ 6.58%, ಬೌದ್ಧ 0.81% ಪ್ರಮಾಣದಲ್ಲಿ ಏರಿಕೆಯಾಗಿದೆ. 1950 ರಲ್ಲಿ ಕ್ರೈಸ್ತರ ಸಂಖ್ಯೆ 2.24 ಇದ್ದರೆ 2015ರಲ್ಲಿ 2.36% ಏರಿದೆ. 1950 ರಲ್ಲಿ ಸಿಖ್ಬರ ಸಂಖ್ಯೆ 1.24% ಇದ್ದರೆ 2015ರಲ್ಲಿ 1.85% ಏರಿಕೆಯಾಗಿದೆ. 1950 ರಲ್ಲಿ ಬೌದ್ಧರ ಸಂಖ್ಯೆ 0.05% ಇದ್ದರೆ 0.81% ಏರಿಕೆಯಾಗಿದೆ.

    ಜೈನರ ಸಂಖ್ಯೆ 1950ರಲ್ಲಿ 0.45% ಇದ್ದರೆ 2015ರಲ್ಲಿ 0.36% ಇಳಿದಿದೆ. ಪಾರ್ಸಿ ಜನಾಂಗದ ಸಂಖ್ಯೆ 85% ಇಳಿಕೆಯಾಗಿದ್ದು 0.03% ನಿಂದ ಇದು 0.004% ಇಳಿದಿದೆ.

     

    ಪಾಕಿಸ್ತಾನದಲ್ಲಿ 3.75%, ಬಾಂಗ್ಲಾದೇಶ 18.55% ಬಹುಸಂಖ್ಯಾತ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗಿದೆ. ಫ್ರಾನ್ಸ್‌ನಲ್ಲಿ 36.76%, ಯುಕೆ 25.29% ಅಮೆರಿಕದಲ್ಲಿ 45.80% ಕ್ರೈಸ್ತರ ಸಂಖ್ಯೆ ಇಳಿಕೆಯಾಗಿದೆ.

    ಅಲ್ಪಸಂಖ್ಯಾತರ ಏರಿಕೆಗೆ ಕಾರಣ ಏನು?
    ಅಲ್ಪಸಂಖ್ಯಾತರ (Minority) ಜೀವನವನ್ನು ಸುಧಾರಿಸಲು ಭಾರತದ ಸರ್ಕಾರ ನೀತಿಗಳು, ರಾಜಕೀಯ ನಿರ್ಧಾರಗಳು, ಭಾರತದಲ್ಲಿ ವೈವಿಧ್ಯತೆ ವಾತಾವರಣದಿಂದಾಗಿ ಭಾರತದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಏರಿಕೆಯಾಗಿದೆ.

     

  • ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ್ದಕ್ಕೆ ಯುವಕನ ಕೊಲೆ

    ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ್ದಕ್ಕೆ ಯುವಕನ ಕೊಲೆ

    ಚಂಡೀಗಢ: ಸಿಖ್‌ (Sikh) ಧರ್ಮದ ಪವಿತ್ರ ಪುಸ್ತಕ ಗುರು ಗ್ರಂಥ ಸಾಹಿಬ್‌ (Guru Granth Sahib) ಕೆಲ ಪುಟಗಳನ್ನು ಹರಿದು ಹಾಕಿದ್ದಕ್ಕೆ 19 ವರ್ಷದ ಯುವಕನನ್ನು ಹೊಡೆದು ಕೊಂದು ಹಾಕಿದ ಘಟನೆ ಪಂಜಾಬ್‌ (Punjab) ಫಿರೋಜ್‌ಪುರದ ಗುರುದ್ವಾರದಲ್ಲಿ (Gurudwara) ಶನಿವಾರ ನಡೆದಿದೆ.

    ಬಂಡಾಲ ಗ್ರಾಮದ ಗುರುದ್ವಾರ ಬಾಬಾ ಬೀರ್‌ನಲ್ಲಿ ಬಕ್ಷೀಶ್ ಸಿಂಗ್ ಈ ಕೃತ್ಯ ಎಸಗಿದ್ದು, ನಂತರ ಕೋಪಗೊಂಡ ಆತನನ್ನು ಅಲ್ಲಿದ್ದ ಜನರು ಹಿಡಿದು ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ ಎಂದು ಉಪ ಪೊಲೀಸ್ ವರಿಷ್ಠ ಸಿಂಗ್ ಸುಖವಿಂದರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಗಂಡನೊಂದಿಗೆ ಗಲಾಟೆ – ಕೋಪದಲ್ಲಿ ಮಗನನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ

     

    ಮೃತಪಟ್ಟ ಯುವಕ ಮಾನಸಿಕ ಅಸ್ವಸ್ಥನಾಗಿದ್ದು ಎರಡು ವರ್ಷಗಳಿಂದ ಔಷಧಿ ಸೇವಿಸುತ್ತಿದ್ದ ಎಂದು ಆತನ ತಂದೆ ಲಖ್ವಿಂದರ್ ಸಿಂಗ್ ಹೇಳಿದ್ದಾರೆ. ಈಗ ಮಗನನ್ನು ಹತ್ಯೆಗೈದವರ ವಿರುದ್ಧ ಪ್ರಕರಣ ದಾಖಲಿಸುವಂತೆ ತಂದೆ ದೂರು ನೀಡಿದ್ದಾರೆ. ಇದನ್ನೂ ಓದಿ: ರೇವಣ್ಣ ಅರೆಸ್ಟ್‌ ಬೆನ್ನಲ್ಲೇ ಭವಾನಿಗೂ ಸಂಕಷ್ಟ?

    ಜನರು ಥಳಿಸಲು ಆರಂಭಿಸಿದಾಗ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಹರಿದು ಹಾಕಿದ ವಿಚಾರ ತಿಳಿದು ಗ್ರಾಮಸ್ಥರು ಗುರುದ್ವಾರದಲ್ಲಿ ಜಮಾಯಿಸಿ ಥಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವಕನನ್ನು ಥಳಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

  • ವಿದೇಶದಲ್ಲಿ ಮುಂದುವರೆದ ಜನಾಂಗೀಯ ದ್ವೇಷ: ಕೆನಾಡದಲ್ಲಿ ಸಿಖ್ ವಿದ್ಯಾರ್ಥಿ ಮೇಲೆ ಹಲ್ಲೆ

    ವಿದೇಶದಲ್ಲಿ ಮುಂದುವರೆದ ಜನಾಂಗೀಯ ದ್ವೇಷ: ಕೆನಾಡದಲ್ಲಿ ಸಿಖ್ ವಿದ್ಯಾರ್ಥಿ ಮೇಲೆ ಹಲ್ಲೆ

    ಒಟ್ಟಾವ: ವಿದೇಶಗಳಲ್ಲಿ ಜನಾಂಗೀಯ ದ್ವೇಷ (Racial hatred) ಮರುಕಳಿಸಿದ್ದು, ಕೆನಡಾದ (Canada) ಬ್ರಿಟಿಷ್ ಕೊಲಂಬಿಯಾದಲ್ಲಿ (British Columbia) ಭಾರತದ (India) ಸಿಖ್ (Sikh) ವಿದ್ಯಾರ್ಥಿಯ ಮೇಲೆ (Student) ಅಪರಿಚಿತ ವ್ಯಕ್ತಿಗಳ ಗುಂಪು ಶುಕ್ರವಾರ ಹಲ್ಲೆ ನಡೆಸಿದೆ.

    ಗಗನ್‍ದೀಪ್ ಸಿಂಗ್ (21) ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾತ್ರಿ ಅಂಗಡಿಯೊಂದಕ್ಕೆ ತೆರಳಿದ್ದ ಗಗನ್‍ದೀಪ್ ಸಿಂಗ್ ರಾತ್ರಿ 10.30ರ ವೇಳೆಗೆ ಬಸ್‍ನಲ್ಲಿ ಬರುತ್ತಿದ್ದ. ಈ ಸಂದರ್ಭದಲ್ಲಿ 10 ರಿಂದ 15 ಜನರ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ ಎಂದು ಕೌನ್ಸಿಲರ್ ಮೋಹಿನಿ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಚಾಕಲೇಟ್ ಆಮಿಷವೊಡ್ಡಿ 4ರ ಬಾಲಕಿ ಮೇಲೆ ಅತ್ಯಾಚಾರ

    ಆತನನ್ನು ಹಿಂಬಾಲಿಸಿ ಧರಿಸದ್ದ ಪೇಟವನ್ನು ಕಿತ್ತೆಸೆದಿದ್ದಾರೆ. ಆತನ ಕಾಲು, ಕೈ ಹಾಗೂ ಪಕ್ಕೆಲುಬುಗಳಿಗೆ ಒದ್ದು, ತಲೆಕೂದಲನ್ನು ಹಿಡಿದೆಳೆದು ರಸ್ತೆ ಬದಿಗೆ ತಳ್ಳಿದ್ದಾರೆ ಎಂದು ಕೌನ್ಸಿಲರ್ ತಿಳಿಸಿದ್ದಾರೆ.

    ನಂತರ ಆತನ ಸ್ನೇಹಿತರು ಸ್ಥಳಕ್ಕೆ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಭಾರತೀಯರು ಎಂಬ ಒಂದೇ ಕಾರಣದಿಂದ ಹಲ್ಲೆ ನಡೆದಿದೆ ಎಂದು ಕೌನ್ಸಿಲರ್ (Councillor) ಆರೋಪಿಸಿದ್ದಾರೆ.

    ಕೆಲೋವ್ನಾದ ಆರ್‌ಸಿಎಂಪಿ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಹಾಗೂ ತಮ್ಮ ವ್ಯಾಪ್ತಿಯಲ್ಲಿ ಅಪರಾಧ ನಡೆದಿದ್ದಕ್ಕೆ ವಕ್ತಾರ ಕಾನ್ಸ್‌ಟೇಬಲ್‌ ಮೈಕ್ ಡೆಲ್ಲಾ ಪೋಲೆರಾ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: HDK `ಪಂಚರತ್ನ’ಯಾತ್ರೆ ಪಂಚರ್ ಆಗಿದೆ, ಕಾಂಗ್ರೆಸ್ಸಿಗೆ ಹೀನಾಯ ಸ್ಥಿತಿ ಬಂದಿದೆ – ಕಟೀಲ್ ಲೇವಡಿ

  • ಕಾಶ್ಮೀರಿ ಪಂಡಿತರ ಮೇಲೆ ಮುಂದುವರಿದ ದಾಳಿ- ಉಗ್ರರ ಗುಂಡಿಗೆ ಓರ್ವ ಬಲಿ

    ಕಾಶ್ಮೀರಿ ಪಂಡಿತರ ಮೇಲೆ ಮುಂದುವರಿದ ದಾಳಿ- ಉಗ್ರರ ಗುಂಡಿಗೆ ಓರ್ವ ಬಲಿ

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪಂಡಿತರ (Kashmiri Pandits) ಹತ್ಯೆ ಮುಂದುವರಿದಿದೆ. ಶನಿವಾರ ಶೋಪಿಯಾನ್ (Shopian) ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಉಗ್ರರು (Terrorists) ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಕ್ಷಿಣ ಕಾಶ್ಮೀರ (South Kashmir) ಜಿಲ್ಲೆಯ ಚೌಧರಿ ಗುಂಡ್ ಪ್ರದೇಶದ ನಿವಾಸಿಯಾಗಿದ್ದ ಪುರನ್ ಕ್ರಿಶನ್ ಭಟ್ ಮೇಲೆ ದಾಳಿ ನಡೆಸಲಾಯಿತು. ಕ್ರಿಶನ್ ನಿವಾಸದ ಬಳಿಯೇ ಈ ದಾಳಿ ನಡೆದಿದ್ದು, ಅವರನ್ನು ಶೋಪಿಯಾನ್ ಆಸ್ಪತ್ರೆಗೆ (Hospital) ಸ್ಥಳಾಂತರಿಸಲಾಯಿತು. ಆದರೆ ಕ್ರಿಶನ್ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು – ಜೋ ಬೈಡೆನ್‌

    ಪುರನ್ ಕ್ರಿಶನ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರಿಗೆ 11 ಮಗಳು ಹಾಗೂ 8 ವರ್ಷದ ಮಗನಿದ್ದಾನೆ. ಹತ್ಯೆ ನಡೆದ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ದಾಳಿಕೋರರನ್ನು ಬೇಟೆಯಾಡಲು ಪ್ರಯತ್ನ ಆರಂಭಿಸಲಾಗಿದೆ ಎಂದು ಸ್ಥಳೀಯ ಪೊಲೀಸರು (Kashmir Police) ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಯಾವುದೇ ದೂರದೃಷ್ಟಿ ಇಲ್ಲ: ಅರುಣ್‌ ಸಿಂಗ್

    ಹತ್ಯೆಯ ಬೆನ್ನಲ್ಲೇ ಪಂಡಿತರು ಪ್ರತಿಭಟನೆ (Protest) ನಡೆಸಿದ್ದಾರೆ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಈ ದಾಳಿಯನ್ನು ಖಂಡಿಸಿದೆ. ಸಂತ್ರಸ್ತೆಯ ಕುಟುಂಬಕ್ಕೆ ಸಾಂತ್ವನ ಹೇಳಿದೆ. ಆಗಸ್ಟ್ 16 ರಂದು ಶೋಪಿಯಾನ್‌ನ ಚೋಟಿಪೋರಾ ಪ್ರದೇಶದಲ್ಲಿದ್ದ ಸೇಬು ಹಣ್ಣಿನ ತೋಟದಲ್ಲಿ ಇಬ್ಬರು ಪಂಡಿತ ಸಹೋದರರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಓರ್ವ ಮೃತಪಟ್ಟು ಮತ್ತೋರ್ವ ಗಾಯಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭಾರತೀಯರು, ಸಿಖ್ ದೇಶಬಾಂಧವರು ಆಫ್ಘಾನ್‍ಗೆ ಮರಳಿ: ತಾಲಿಬಾನ್

    ಭಾರತೀಯರು, ಸಿಖ್ ದೇಶಬಾಂಧವರು ಆಫ್ಘಾನ್‍ಗೆ ಮರಳಿ: ತಾಲಿಬಾನ್

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಗಣಿಸಿ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರು ದೇಶಕ್ಕೆ ಮರಳುವಂತೆ ಕೇಳಲಾಗುತ್ತಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.

    ತಾಲಿಬಾನ್ ರಾಜ್ಯ ಸಚಿವರ ಕಚೇರಿಯ ಮಹಾನಿರ್ದೇಶಕ ಮುಲ್ಲಾ ಅಬ್ದುಲ್ ವಾಸಿ ಅವರು ಜುಲೈ 24 ರಂದು ಅಫ್ಘಾನಿಸ್ತಾನದ ಹಿಂದೂ ಮತ್ತು ಸಿಖ್ ಕೌನ್ಸಿಲ್‍ನ ಹಲವಾರು ಸದಸ್ಯರನ್ನು ಭೇಟಿಯಾದ ನಂತರ, ಅಫ್ಘಾನಿಸ್ತಾನದ ಮುಖ್ಯಸ್ಥರ ಕಚೇರಿ ಟ್ವೀಟ್ ಮಾಡುವ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾಯಿಗಳಿಗೂ ಏರ್ ಕಂಡೀಷನ್ ಫ್ಲ್ಯಾಟ್ ಒದಗಿಸಿದ್ದ ಪಾರ್ಥ 

    ವಾಸಿ ಅವರು ಕಾಬೂಲ್‍ನಲ್ಲಿ ಹಿಂದೂ ಮತ್ತು ಸಿಖ್ ನಾಯಕರ ನಿಯೋಗವನ್ನು ಭೇಟಿ ಮಾಡಿ, ಭದ್ರತಾ ಸಮಸ್ಯೆಗಳಿಂದಾಗಿ ದೇಶವನ್ನು ತೊರೆದ ಎಲ್ಲ ಭಾರತೀಯ ಮತ್ತು ಸಿಖ್ ದೇಶಬಾಂಧವರು ಈಗ ಅಫ್ಘಾನಿಸ್ತಾನಕ್ಕೆ ಮರಳಬಹುದು. ಏಕೆಂದರೆ ದೇಶದಲ್ಲಿ ಭದ್ರತೆಯನ್ನು ಸ್ಥಾಪಿಸಲಾಗಿದೆ ಎಂದು ಕೇಳಿಕೊಂಡಿದ್ದಾರೆ.

    ಅಫ್ಘಾನಿಸ್ತಾನದಲ್ಲಿ ಸಿಖ್ ಸಮುದಾಯ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ದಾಳಿ ಮಾಡಲಾಗಿತ್ತು. ಈ ಹಿನ್ನೆಲೆ ಹಲವು ಹಿಂದೂಗಳು ಮತ್ತು ಸಿಖ್‍ರು ಪ್ರಾಣ ಉಳಿಸಿಕೊಳ್ಳಲು ಬೇರೆ ಕಡೆ ಪಲಾಯನ ಮಾಡಿದ್ದರು. ಈ ಹಿನ್ನೆಲೆ ಅವರನ್ನು ತಾಲಿಬಾನ್‌ ಮರಳಿ ಬರುವಂತೆ ಕೇಳಿಕೊಂಡಿದೆ.

    ತಾಲಿಬಾನ್ ಬಿಡುಗಡೆ ಮಾಡಿದ ಪ್ರಕಟಣೆ ಪ್ರಕಾರ, ಕಾಬೂಲ್‍ನ ಗುರುದ್ವಾರದ ಮೇಲೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದ(ಐಎಸ್‍ಕೆಪಿ) ದಾಳಿಯನ್ನು ತಡೆಗಟ್ಟಿದ್ದಕ್ಕಾಗಿ ಸಿಖ್ ನಾಯಕರು ತಾಲಿಬಾನ್‍ಗೆ ಧನ್ಯವಾದ ಅರ್ಪಿಸಿದರು.

    ನಡೆದಿದ್ದೇನು?
    ಜೂನ್ 18 ರಂದು, ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ(ISKP) ಕಾಬೂಲ್‍ನ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ದಾಳಿ ಮಾಡಿತು. ಮಾರಣಾಂತಿಕ ದಾಳಿಯ ಸಮಯದಲ್ಲಿ ಸಿಖ್ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡರು. ಇದನ್ನೂ ಓದಿ:  ಒರಾಯನ್ ಮಾಲ್ ಮುಂಭಾಗ ನಡೆಯಿತು ಅಚಾತುರ್ಯ: ಅಮಲಿನ ಶೋಕಿಗೆ ಬಡಜೀವ ಬಲಿ 

    ಮೂಲಗಳ ಪ್ರಕಾರ, ದಾಳಿಕೋರರು ಆವರಣವನ್ನು ಪ್ರವೇಶಿಸಿದಾಗ ಸುಮಾರು 25 ರಿಂದ 30 ಜನರು ತಮ್ಮ ಬೆಳಗಿನ ಪ್ರಾರ್ಥನೆಗಾಗಿ ಗುರುದ್ವಾರಕ್ಕೆ ಬಂದಿದ್ದರು. ಈ ವೇಳೆ ಅವರ ಮೇಲೆ ಉಗ್ರರು ದಾಳಿ ಗುರುದ್ವಾರದ ಸಿಬ್ಬಂದಿಯಾಗಿದ್ದ ಅಹ್ಮದ್‍ನನ್ನು ಹತ್ಯೆ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಔರಂಗಜೇಬ ಅನೇಕರನ್ನು ಕೊಂದಿರ್ಬೋದು ಆದರೆ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ: ಮೋದಿ

    ಔರಂಗಜೇಬ ಅನೇಕರನ್ನು ಕೊಂದಿರ್ಬೋದು ಆದರೆ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ: ಮೋದಿ

    ನವದೆಹಲಿ: ಸಿಖ್ ಗುರು ತೇಗ್ ಬಹುದ್ದೂರ್ 400ನೇ ಜನ್ಮದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಕೆಂಪುಕೋಟೆಯಲ್ಲಿ ಸ್ಮರಣಾರ್ಥ ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡಿದರು. ನಂತರ ಗುರುಗಳ ತ್ಯಾಗದಿಂದ ಭಾರತ ಸಂಪ್ರದಾಯಗಳ ಬೀಡಾಗಿದೆ ಎಂದು ಜನರಿಗೆ ಹೇಳುತ್ತಾ, ಭಾರತವನ್ನು ಕಟ್ಟುವುದಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಕರೆಕೊಟ್ಟರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುರುಗಳ ಆರ್ಶೀವಾದದಿಂದ ಅವರ ಆದರ್ಶನವನ್ನು ದೇಶದ ಜನರು ಮುಂದುವರಿಸುತ್ತಿರುವುದು ತುಂಬಾ ಸಂತೋಷ ತರುತ್ತಿದೆ. ಈ ಶುಭ ಸಮಯದಲ್ಲಿ ನಾನು ಎಲ್ಲ 10 ಗುರುಗಳ ಪಾದಕ್ಕೆ ನಮನವನ್ನು ಸಲ್ಲಿಸುತ್ತಿದ್ದೇನೆ. ಈ ಪ್ರಕಾಶ್ ಪರ್ವ್ ಸಂದರ್ಭದಲ್ಲಿ ನಾನು ನಿಮ್ಮೆಲ್ಲರನ್ನು ಹೃದಯ ತುಂಬಿ ಅಭಿನಂದಿಸುತ್ತಿದ್ದೇನೆ ಎಂದರು. ಇದನ್ನೂ ಓದಿ:  ಧ್ವಂಸಗೊಂಡ ಅಪ್ಪನ ಅಂಗಡಿಯಲ್ಲಿ ಕಾಯಿನ್ ಸಂಗ್ರಸುತ್ತಿದ್ದ ಬಾಲಕ – ಫೋಟೋ ವೈರಲ್ 

    ಮೊಘಲ್ ದೊರೆ ಔರಂಗಜೇಬ್‍ನ ನಿರಂಕುಶ ಚಿಂತೆನೆಗಳಿಗೆ ಎದೆಯೊಡ್ಡಿದ ಗುರು ತೇಜ್ ಬಹಾದ್ದೂರ್, ಭಾರತದ ಆದರ್ಶಗಳ ರಕ್ಷಣೆಗೆ ಬಂಡೆಯಂತೆ ನಿಂತರು. ಔರಂಗಜೇಬ್ ನೂರಾರು ತಲೆಗಳನ್ನು ಕತ್ತರಿಸಿದರೂ, ಗುರು ತೇಜ್ ಬಹಾದ್ದೂರ್ ಅವರ ನಂಬಿಕೆಯನ್ನು ಆತನಿಂದ ಅಲುಗಾಡಿಲು ಸಾಧ್ಯವಾಗಲಿಲ್ಲ. ಆಧುನಿಕ ಭಾರತ ಕೂಡ ಗುರುಗಳ ಆಶೀರ್ವಾದದಿಂದ ಇಂತದ್ದೇ ಛಾತಿಯನ್ನು ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಅನೇಕ ಹೋರಾಟಗಾರರ ಬಲಿದಾನದಿಂದ ನಾವು ಇಲ್ಲಿದ್ದೇವೆ. ಈಗಿರುವ ನಮ್ಮ ಭಾರತ ಎಲ್ಲ ನಿರ್ಧಾರಗಳನ್ನು ಸ್ವತಃ ತೆಗೆದುಕೊಳ್ಳುತ್ತೆ. ರಾಜತಂತ್ರಗಳ ಬಗ್ಗೆ ಎಲ್ಲಾ ರೀತಿಯ ಮಾಹಿತಿಗಳ ಬಗ್ಗೆ ಭಾರತವೇ ನಿರ್ಧಾರ ಮಾಡುತ್ತೆ. ಪರೋಪಕಾರವನ್ನು ಹೇಳಿಕೊಟ್ಟಿರುವುದು ನಮ್ಮ ಹಿಂದೂಸ್ತಾನ್. ಭಾರತಕ್ಕೆ ಗೌರವ ತಂದುಕೊಂಡಲು ಎಷ್ಟೋ ಜನರು ತಮ್ಮ ಜೀವವನ್ನು ಬಲಿಕೊಟ್ಟಿದ್ದಾರೆ. ಈ ಭಾರತೀಯ ಭೂಮಿ ಕೇವಲ ದೇಶವಲ್ಲ. ಇದು ಶ್ರೇಷ್ಠವಾದ ಸಂಪ್ರದಾಯವನ್ನು ಹೊಂದಿದೆ. ಇದಕ್ಕಾಗಿ ನಮ್ಮ ಹಲವು ಖುಷಿಗಳು, ಸನ್ಯಾಸಿಗಳು ಹಲವು ವರ್ಷಗಳ ತಪಸ್ಸು ಮಾಡಿದ್ದಾರೆ. ಅವರ ವಿಚಾರವನ್ನು ಎಲ್ಲಕಡೆ ತಿಳಿಸಿದ್ದಾರೆ ಎಂದರು.

    ಈ ಕಾರ್ಯಕ್ರಮಕ್ಕೆ ಬಂದು ನನಗೆ ಯಾವ ರೀತಿಯ ಶಾಂತಿ ಸಿಕ್ಕಿದೆ ಎಂದು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೊಸ ಚಿಂತನೆ, ನಿರಂತರ ಶ್ರಮ ನಮ್ಮ ಸಿಖ್ ಧರ್ಮದ ಗುರುತು. ಇಂದು ಭಾರತವು ತನ್ನ ಗುರುಗಳ ಆದರ್ಶಗಳೊಂದಿಗೆ ಮುಂದೆ ನಡೆಯುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಕೆಂಪು ಕೋಟೆ ವಿಶೇಷ, ಶ್ರೇಷ್ಠ ದಿನಗಳ ಆಚರಣೆಗೆ ಸಾಕ್ಷಿಯಾಗಿದೆ. ಇಂದು ಗುರು ತೇಜ್ ಬಹುದ್ದೂರ್ ಅವರ ಹುತಾತ್ಮತೆಯ ಕಾರ್ಯಕ್ರಮ ಮಾಡುತ್ತಿರುವುದು ನಮಗೆ ಹೆಮ್ಮೆ ತರುತ್ತಿದೆ ಎಂದರು.

    ಭಾರತ ಯಾವತ್ತೂ ಬೇರೆ ದೇಶಕ್ಕೆ ತೊಂದರೆ ಕೊಡಲು ಇಷ್ಟಪಡುವುದಿಲ್ಲ. ಬೇರೆ ದೇಶಗಳಿಗೆ ಸಹಾಯ ಮಾಡುತ್ತೇವೆ. ಭಾರತ ವಿಶ್ವದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದೆ. ನಮ್ಮ ರಾಷ್ಟ್ರ ಶಾಂತಿಯಿಂದ ಎಲ್ಲವನ್ನು ಎದುರಿಸುತ್ತೆ. ನಾವು ತಮ್ಮ ಗುರುತಿನ ಬಗ್ಗೆ ಹೆಮ್ಮೆ ಪಡಬೇಕು. ನಾವು ನಮ್ಮ ಭಾರತವನ್ನು ಮೇಲೆ ತೆಗೆದುಕೊಂಡು ಹೋಗಬೇಕು. ಅದಕ್ಕೆ ಎಲ್ಲರೂ ಕೆಲಸ ಮಾಡಬೇಕು. ಇದಕ್ಕೆ ಗುರುಗಳ ಆರ್ಶೀವಾದಿಂದ ನಮ್ಮ ದೇಶ ಮೇಲೆ ಬರುತ್ತೆ ಎಂದು ಹೇಳಿದರು. ಇದನ್ನೂ ಓದಿ: ಕರ್ಮಭೂಮಿಯಿಂದ ಪುಣ್ಯ ಭೂಮಿವರೆಗೂ ಅಮರ ಜ್ಯೋತಿ ಯಾತ್ರೆ: ಡಾ.ರಾಜ್ ಸಹೋದರಿ ನಾಗಮ್ಮರಿಂದ ಚಾಲನೆ

    ನಮ್ಮ ಪ್ರತಿ ಕ್ಷಣವನ್ನು ದೇಶಕ್ಕಾಗಿ ಮೀಸಲಿಡಬೇಕು. ನಮ್ಮ ಪ್ರತಿಯೊಂದು ಯೋಚನೆಯನ್ನು ದೇಶಕ್ಕಾಗಿ ಮೀಸಲಿಡಬೇಕು. ಈ ಶುಭದಿನದಂದು ನಾನು ನಿಮ್ಮೆಲ್ಲರಲ್ಲೂ ಕೇಳಿಕೊಳ್ಳುವುದು ಒಂದೇ ನಾವು ದೇಶಕ್ಕಾಗಿ ಹೋರಾಟ ಮಾಡೋಣ. ದೇಶಕ್ಕಾಗಿ ಒಟ್ಟಿಗೆ ಸೇರಿ ಕೆಲಸ ಮಾಡೋಣ. ಎಲ್ಲರೂ ಸರಿಸಮಾನರು ಎಂದು ಕರೆ ಕೊಟ್ಟರು. ಇದೇ ವೇಳೆ ಭಾರತ ನಮ್ಮ ಗುರುಗಳು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ಮುನ್ನಡೆಯಲಿದೆ. ನಾವು ಭಾರತವನ್ನು ವಿಶ್ವ ಭೂಪಟದಲ್ಲಿ ಅತ್ಯಂತ ಬಲಿಷ್ಠ ಹಾಗೂ ಸಮರ್ಥ ರಾಷ್ಟ್ರವನ್ನಾಗಿ ಮಾಡುತ್ತೇವೆ. ಆಧುನಿಕ ಭಾರತದ ನಾಗಾಲೋಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದರು.

  • ಸಿಖ್ಖರು ಈಗ ವಿಮಾನ ನಿಲ್ದಾಣಗಳಲ್ಲಿ ಕಿರ್ಪನ್‍ಗಳನ್ನು ಒಯ್ಯಬಹುದು: ಕೇಂದ್ರದ ಹೊಸ ರೂಲ್ಸ್

    ಸಿಖ್ಖರು ಈಗ ವಿಮಾನ ನಿಲ್ದಾಣಗಳಲ್ಲಿ ಕಿರ್ಪನ್‍ಗಳನ್ನು ಒಯ್ಯಬಹುದು: ಕೇಂದ್ರದ ಹೊಸ ರೂಲ್ಸ್

    ನವದೆಹಲಿ: ವಿಮಾನಯಾನ ಭದ್ರತಾ ನಿಯಂತ್ರಕ ಬಿಸಿಎಎಸ್(ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ) ಸಿಖ್ ವಾಯುಯಾನ ವಲಯದ ಉದ್ಯೋಗಿಗಳಿಗೆ ವಿಮಾನ ನಿಲ್ದಾಣದ ಆವರಣದೊಳಗೆ ಸಿಖ್‍ನ ಕಿರ್ಪನ್ ತೆಗೆದುಕೊಂಡು ಹೋಗಬಹುದು ಎಂದು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿ ಮಾಡಿದೆ.

    ಬಿಸಿಎಎಸ್ ಮಾರ್ಚ್ 4 ರಂದು, ವಿಮಾನ ನಿಲ್ದಾಣದೊಳಗೆ ಸಿಖ್ ಧರ್ಮದವರು ಕಿರ್ಪನ್ ತರಲು ನಿಷೇಧವನ್ನು ಹೇರಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಾರ್ಚ್ 12 ರಂದು, ಬಿಸಿಎಎಸ್ ಈ ಬಗ್ಗೆ ನಿಷೇಧವನ್ನು ತೆಗೆದುಹಾಕಿತು. ಕಿರ್ಪಾನ್ ಸಿಖ್ ಧರ್ಮದ ಒಂದು ಆಚರಣೆ ಮತ್ತು ಸಂಪ್ರದಾಯವಾಗಿದೆ. ಈ ಹಿನ್ನೆಲೆ ಕಿರ್ಪಾನ್‍ನನ್ನು ಸಿಖ್ ಪ್ರಯಾಣಿಕರು ಮಾತ್ರ ಸಾಗಿಸಬಹುದು. ಆದರೆ ಬ್ಲೇಡ್‍ನ ಉದ್ದವು ಆರು ಇಂಚುಗಳನ್ನು ಮೀರಬಾರದು ಮತ್ತು ಒಟ್ಟು ಉದ್ದವು ಒಂಬತ್ತು ಇಂಚುಗಳನ್ನು ಮೀರಬಾರದು ಎಂದು ಆದೇಶವನ್ನು ಹೊರಡಿಸಲಾಗಿತ್ತು. ಇದನ್ನೂ ಓದಿ:  ದಿಢೀರ್ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ಕೊಟ್ಟು ಕುತೂಹಲ ಕೆರಳಿಸಿದ ವಿಜಯೇಂದ್ರ

    ಭಾರತದೊಳಗೆ ಭಾರತೀಯ ವಿಮಾನದಲ್ಲಿ ಪ್ರಯಾಣಿಸುವಾಗ ಕಿರ್ಪನ್‍ಗೆ ಅನುಮತಿಸಲಾಗಿದೆ. ಈ ವಿನಾಯಿತಿಯು ಸಿಖ್ ಪ್ರಯಾಣಿಕರಿಗೆ ಮಾತ್ರ. ವಿಮಾನ ನಿಲ್ದಾಣದಲ್ಲಿ(ಸಿಖ್ ಸೇರಿದಂತೆ) ಮತ್ತು ಯಾವುದೇ ಟರ್ಮಿನಲ್, ದೇಶೀಯ ಅಥವಾ ಅಂತರಾಷ್ಟ್ರೀಯ ಟರ್ಮಿನಲ್‍ನಲ್ಲಿ ಕೆಲಸ ಮಾಡುವ ಯಾವುದೇ ಉದ್ಯೋಗಿಗಳಿಗೆ ಕಿರ್ಪನ್ ವೈಯಕ್ತಿಕವಾಗಿ ಸಾಗಿಸಲು ಅನುಮತಿಸಲಾಗುವುದಿಲ್ಲ ಎಂದು ದಾಖಲೆಗಳಲ್ಲಿ ತಿಳಿಸಲಾಗಿದೆ.

    ಮಾರ್ಚ್ 9 ರಂದು, ಎಸ್‍ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಅವರು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದ್ದು, ಮಾರ್ಚ್ 4 ರ ಆದೇಶವು ಸಿಖ್ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:  ರಿವಾಲ್ವರ್ ಬಳಸಿ ನಾಲ್ಕು ತಿಂಗಳ ಗರ್ಭಿಣಿ ಪತ್ನಿಗೆ ಗುಂಡು ಹಾರಿಸಿದ ಕಾನ್‍ಸ್ಟೆಬಲ್ 

    ಕಿರ್ಪನ್ ಅಂದರೆ ಏನು?
    ಕಿರ್ಪನ್ ಎಂಬುದು ಒಂದು ಧಾರ್ಮಿಕ ಚಾಕುವಾಗಿದೆ. ಇದು ವಿಧ್ಯುಕ್ತ ಚಾಕುವಾಗಿದ್ದು, ಪ್ರಪಂಚದಾದ್ಯಂತದ ಸಿಖ್ಖರ ಸಾಂಪ್ರದಾಯಿಕ ದೈನಂದಿನ ಉಡುಪಿನ ಭಾಗವಾಗಿದೆ. ಇದನ್ನು ಸಿಖ್ ಧಾರ್ಮಿಕ ಗ್ರಂಥದಲ್ಲಿಯೂ ಬರೆದಿದ್ದು, ಸಿಖ್‍ರ ಅವಿಭಾಜ್ಯ ಅಂಗವಾಗಿದೆ.

  • 1947ರಲ್ಲಿ ಭಾರತ ಹುಟ್ಟಲಿಲ್ಲ: ಪ್ರಧಾನಿ ಮೋದಿ

    1947ರಲ್ಲಿ ಭಾರತ ಹುಟ್ಟಲಿಲ್ಲ: ಪ್ರಧಾನಿ ಮೋದಿ

    ನವದೆಹಲಿ: ಭಾರತ 1947ರಲ್ಲಿ ಹುಟ್ಟಲಿಲ್ಲ ಎಂದು ಹಿರಿಯ ಸಿಖ್‌ ನಾಯಕರೊಂದಿಗಿನ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

    ಪಂಜಾಬ್‌ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ ಪ್ರಧಾನಿ ಮೋದಿ, 1947ರಲ್ಲಿ ಈ ದೇಶ ಹುಟ್ಟಲಿಲ್ಲ. ನಮ್ಮ ಗುರುಗಳು ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾವು ತುಂಬಾ ದಬ್ಬಾಳಿಕೆ ಅನುಭವಿಸಿದ್ದೇವೆ. ಆ ಸಮಯದಲ್ಲಿ ನಾನೂ ಭೂಗತನಾಗಿದ್ದೆ. ನಾನು ಅಡಗಿಕೊಳ್ಳಲು ಸಿಖ್‌ ವೇಷ ಧರಿಸುತ್ತಿದ್ದೆ. ನಾನು ಪಗ್ಡಿ ಧರಿಸುತ್ತಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನು ವಿಶ್ವದ ಸ್ವೀಟೆಸ್ಟ್‌ ಭಯೋತ್ಪಾದಕ: ಅರವಿಂದ್‌ ಕೇಜ್ರಿವಾಲ್‌

    1947ರ ವಿಭಜನೆಯ ಸಂದರ್ಭದಲ್ಲಿ ಸಿಖ್‌ ಪುಣ್ಯಕ್ಷೇತ್ರ ಕರ್ತಾರ್‌ಪುರ ಸಾಹಿಬ್‌ ಅನ್ನು ಭಾರತದಲ್ಲಿಯೇ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಕರ್ತಾರ್‌ಪುರ ಸಾಹಿಬ್‌ ಪಾಕಿಸ್ತಾನದಲ್ಲಿದ್ದು, ಪಂಜಾಬ್‌ನಿಂದ ಸುಮಾರು ಆರು ಕಿ.ಮೀ. ದೂರದಲ್ಲಿದೆ ಎಂದರು.

    ಗುರು ಗ್ರಂಥ ಸಾಹಿಬ್‌ ಅನ್ನು ಅಫ್ಘಾನಿಸ್ತಾನದಿಂದ ಮರಳಿ ತರಬೇಕು. ನಾವು ಅದಕ್ಕೆ ವ್ಯವಸ್ಥೆ ಮಾಡಿದ್ದೇವೆ. ಅದಕ್ಕಾಗಿ ವಿಶೇಷ ವಿಮಾನ ಒದಗಿಸಿದ್ದೇವೆ. ಅದನ್ನು ಗೌರವದಿಂದ ವಾಪಸ್‌ ತರಿಸಿಕೊಳ್ಳಲು ನಾನು ಸಚಿವರಿಗೆ ಹೇಳಿದ್ದೇನೆ. ಅದು ನಮ್ಮ ಜೀವನದ ಅಮೂಲ್ಯವಾಗಿದೆ ಗುರು ಗೋಬಿಂದ್‌ ಸಿಂಗ್‌ ಅವರು ಗುಜರಾತ್‌ನವರಾಗಿದ್ದರಿಂದ ನಾನು ನಿಮ್ಮ ರಕ್ತ ಸಂಬಂಧಿಯೇ ಆಗಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ: ಚರಣ್‍ಜಿತ್ ಸಿಂಗ್ ಚನ್ನಿ

    ಇದೇ ಫೆ.20ರಂದು ಪಂಜಾಬ್‌ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾ.10 ರಂದು ಫಲಿತಾಂಶ ಹೊರ ಬೀಳಲಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ, ಎಎಪಿ ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿವೆ.

  • ಸಿಖ್‌ ಧರ್ಮಕ್ಕೆ ಅಪಚಾರ ಎಸಗಿದರೆಂದು ಉದ್ರಿಕ್ತರ ಗುಂಪಿನಿಂದ ಹಲ್ಲೆ- ಇಬ್ಬರು ಸಾವು

    ಸಿಖ್‌ ಧರ್ಮಕ್ಕೆ ಅಪಚಾರ ಎಸಗಿದರೆಂದು ಉದ್ರಿಕ್ತರ ಗುಂಪಿನಿಂದ ಹಲ್ಲೆ- ಇಬ್ಬರು ಸಾವು

    ಚಂಡೀಗಢ: ಕಳೆದ 24 ಗಂಟೆಗಳ ಅವಧಿಯಲ್ಲಿ ಪ್ರತ್ಯೇಕ ಎರಡು ಕಡೆ ಕೋಪೋದ್ರಿಕ್ತ ಜನರ ಗುಂಪು ಇಬ್ಬರು ವ್ಯಕ್ತಿಗಳನ್ನು ಹೊಡೆದು ಹತ್ಯೆ ಮಾಡಿರುವ ಧಾರುಣ ಘಟನೆ ನಡೆದಿದೆ.

    ಅಮೃತಸರದ ಸ್ವರ್ಣ ಮಂದಿರವನ್ನು ಅಪವಿತ್ರಗೊಳಿಸಲು ಯತ್ನಿಸಿದ ಎಂದು ಆರೋಪಿಸಿ ಉದ್ರಿಕ್ತರ ಗುಂಪು ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದ ಘಟನೆ ಶನಿವಾರ ನಡೆದಿತ್ತು. ಇದಾದ 24 ಗಂಟೆಯೊಳಗಡೆ ಮತ್ತೊಂದು ಕಡೆ ಇದೇ ಕಾರಣಕ್ಕೆ ವ್ಯಕ್ತಿಯನ್ನು ಹೊಡೆದು ಕೊಲ್ಲಲಾಗಿದೆ. ಇದನ್ನೂ ಓದಿ: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ವೇಳೆ ಬಾಂಬ್ ಸ್ಫೋಟ

    ಪಂಜಾಬ್‌ನ ಕಪುರ್ತಲಾದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಸಿಖ್‌ ಬಾವುಟವನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ವೇಳೆ ಗುಂಪೊಂದು ಆತನನ್ನು ಹಿಡಿದಿದೆ. ಗಲಾಟೆ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಆಗ ಕೋಪೋದ್ರಿಕ್ತ ಗುಂಪು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಪೊಲೀಸರು ತಕ್ಷಣ ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರೊಳಗೆ ವ್ಯಕ್ತಿ ಮೃತಪಟ್ಟಿದ್ದಾನೆ.

    ಮೃತ ವ್ಯಕ್ತಿ ಸಿಖ್‌ ಬಾವುಟ ತೆರವುಗೊಳಿಸಿ ಅಪವಿತ್ರಗೊಳಿಸಲು ಬಂದಿರಲಿಲ್ಲ. ಆತ ಕಳ್ಳತನ ಮಾಡಲು ಬಂದಿದ್ದ. ಆದರೆ ಜನರು ತಪ್ಪು ತಿಳಿದು ವ್ಯಕ್ತಿಯನ್ನು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 43 ತಮಿಳುನಾಡಿನ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

    POLICE JEEP

    ಇದೇ ರೀತಿಯ ಘಟನೆ ಶನಿವಾರ ಸಂಜೆ ಅಮೃತಸರದ ಸ್ವರ್ಣ ಮಂದಿರದಲ್ಲಿ ಶನಿವಾರ ನಡೆದಿತ್ತು. ನಿನ್ನೆ ಸಂಜೆ ವ್ಯಕ್ತಿಯೊಬ್ಬ ಖಡ್ಗವನ್ನು ಹಿಡಿದುಕೊಂಡು ಪ್ರಾರ್ಥನೆಯ ಸಂದರ್ಭದಲ್ಲಿ ಗರ್ಭಗುಡಿಯೊಳಗೆ ಜಿಗಿದು, ಗುರು ಗ್ರಂಥ ಸಾಹೀಬ್‌ ಪಠಿಸುತ್ತಿದ್ದ ಸ್ಥಳದ ಸಮೀಪ ತಲುಪಿದ್ದ. ಈ ವೇಳೆ ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಸಮಿತಿ ಕಾರ್ಯಪಡೆ ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ಪಡೆದಿತ್ತು. ಆದರೆ ಕೋಪೋದ್ರಿಕ್ತ ಗುಂಪು ವ್ಯಕ್ತಿಯನ್ನು ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದ.

  • ಕಂಗನಾ ವಿರುದ್ಧ FIR ದಾಖಲಿಸುವಂತೆ ಸಿಖ್ ಸಮುದಾಯ ಮನವಿ

    ಕಂಗನಾ ವಿರುದ್ಧ FIR ದಾಖಲಿಸುವಂತೆ ಸಿಖ್ ಸಮುದಾಯ ಮನವಿ

    ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್(kangana ranaut) ಸಾಮಾಜಿಕ ಜಾಲತಾಣದಲ್ಲಿ ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆಂದು ಆರೋಪಿಸಿ ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್‍ಮೆಂಟ್ ಕಮಿಟಿಯು (ಡಿಎಸ್‍ಜಿಎಂಸಿ) ದೂರು ಸಲ್ಲಿಸಿ ಎಫ್‍ಐಆರ್ ದಾಖಲಿಸುವಂತೆ ಮನವಿ ಮಾಡಿದೆ.

    ಶಿರೋಮಣಿ ಅಕಾಲಿದಳದ ನಾಯಕ ಮತ್ತು ಡಿಎಸ್‍ಜಿಎಂಸಿ ಅಧ್ಯಕ್ಷ ಮನ್‍ಜಿಂದರ್ ಸಿಂಗ್ ಸಿರ್ಸಾ ನೇತೃತ್ವದ ನಿಯೋಗವು ಕಂಗನಾ ವಿರುದ್ಧ ದೂರು ಸಲ್ಲಿಸಿದೆ. ಕಂಗನಾ ಅವರು ರೈತರ ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಖಲಿಸ್ತಾನಿ ಆಂದೋಲನಕ್ಕೆ ಹೋಲಿಸಿದ್ದಾರೆ. ಸಿಖ್ ಸಮುದಾಯವನ್ನು ಖಲಿಸ್ತಾನಿ ಉಗ್ರರು ಎಂದು ಬಿಂಬಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ ಎಂದು ಖಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:  ನಟಿ ಕಂಗನಾರನ್ನು ಹುಚ್ಚಾಸ್ಪತ್ರೆಗೆ ಸೇರಿಸ್ಬೇಕು ಇಲ್ಲವೇ ಜೈಲಿಗೆ ಹಾಕ್ಬೇಕು: ಮಂಜಿಂದರ್‌ ಸಿಂಗ್‌

    1984ರಲ್ಲಿ ಮತ್ತು ಅದಕ್ಕೂ ಮೊದಲಿನ ಸಾಮೂಹಿಕ ಹತ್ಯೆ ಮತ್ತು ನರಮೇಧವನ್ನು ನೆನಪಿಸಿಕೊಂಡಿರುವ ಕಂಗನಾ, ಇವು ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ವ್ಯಾವಹಾರಿಕ ಮತ್ತು ಯೋಜಿತ ನಡೆ. ಸಿಖ್ ಸಮುದಾಯದವರು ಇಂದಿರಾ ಅವರ ಷೂ ಕೆಳಗೆ ನಲುಗಿದರು ಎಂದು ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದೂ ದೂರಿನಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಗೇಮ್ ಆಡುತ್ತಾ ಹಳಿ ಮೇಲೆ ಕುಳಿತ ಬಾಲಕರ ಮೇಲೆ ಹರಿದ ರೈಲು