Tag: Sikander Kher

  • ಒಳ ಉಡುಪಿನಲ್ಲೇ ಬರ್ತ್‍ಡೆ ಗಿಫ್ಟ್ ಕೊಟ್ಟ ಅನುಪಮ್ ಖೇರ್

    ಒಳ ಉಡುಪಿನಲ್ಲೇ ಬರ್ತ್‍ಡೆ ಗಿಫ್ಟ್ ಕೊಟ್ಟ ಅನುಪಮ್ ಖೇರ್

    ಮುಂಬೈ: ಬಾಲಿವುಡ್ ಹೆಸರಾಂತ ನಟ ಅನುಪಮ್ ಖೇರ್ ಸೋಮವಾರ ತಮ್ಮ 67ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ಹುಟ್ಟುಹಬ್ಬಕ್ಕೆ ಒಂದಿಲ್ಲೊಂದು ವಿಶೇಷ ಉಡುಗೊರೆಯನ್ನು ಅಭಿಮಾನಿಗಳಿಗೆ ನೀಡುವ ಈ ಹಿರಿಯ ನಟ, ತಮ್ಮ 67ನೇ ವಯಸ್ಸಿನಲ್ಲಿ ದೇಹ ಹುರಿಗೊಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಆ ದೇಹಸಿರಿ ತೋರಿಸಲೆಂದೇ ಅವರು ಒಳ ಉಡುಪಿನಲ್ಲೇ ಫೋಟೋಶೂಟ್ ಮಾಡಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

    ಹುಟ್ಟು ಹಬ್ಬದ ಪ್ರಯುಕ್ತ ಅನುಪಮ್ ಖೇರ್, ತಮ್ಮ ದೈಹಿಕ ರೂಪಾಂತರ ಮಾಡಿಕೊಂಡ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದೇ ತಡ, ಅಭಿಮಾನಿಗಳು ಕೂಡ ಕ್ರೇಜಿಯಾಗಿಯೇ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ. ಒಳ ಉಡುಪಿನ ಮೇಲೆ ಕುಳಿತ, ಅನುಪಮ್ ಖೇರ್ ತಮ್ಮ ಕಟ್ಟು ಮಸ್ತಾದ ದೇಹ ಪ್ರದರ್ಶಿಸಿದ್ದಕ್ಕೆ ಕೆಲವರು ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ.

     

    View this post on Instagram

     

    A post shared by Anupam Kher (@anupampkher)

    “ಅಭಿಮಾನಿಗಳೇ 37 ವರ್ಷಗಳ ಹಿಂದೆ ನೀವು ಅತ್ಯಂತ ಅಸಾಂಪ್ರದಾಯಿಕ ರೀತಿಯಲ್ಲಿ ಪಾದಾರ್ಪಣೆ ಮಾಡಿದ ಮತ್ತು 65 ವರ್ಷದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ ಯುವ ನಟನನ್ನು ಭೇಟಿಯಾಗಿದ್ದಿರಿ. ನನ್ನ ವೃತ್ತಿಜೀವನದುದ್ದಕ್ಕೂ ನಾನು ಪ್ರದರ್ಶಕನಾಗಿ ಪ್ರತಿಯೊಂದು ಮಾರ್ಗವನ್ನೂ ಅನ್ವೇಷಿಸಲು ಪ್ರಯತ್ನಿಸಿದೆ. ಆದರೆ ನನ್ನೊಳಗೆ ಯಾವಾಗಲೂ ಒಂದು ಕನಸು ಇದೆ. ಅದನ್ನು ನನಸಾಗಿಸಲು ಎಂದಿಗೂ ಏನನ್ನೂ ಮಾಡಲಿಲ್ಲ. ಹೀಗಾಗಿ 2022ರಲ್ಲಿ ನಾನು ನನ್ನ ಫಿಟ್‍ನೆಸ್ ಅನ್ನು ಗಂಭೀರವಾಗಿ ಪರಿಗಣಿಸಿ ದೇಹವನ್ನು ಸಧೃಡವಾಗಿ ಇಟ್ಟುಕೊಳ್ಳಲು ಇಚ್ಚಿಸಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೇ, “ನನ್ನ ಜೀವನದಲ್ಲಿ ನಡೆದ ಕೆಲ ಒಳ್ಳೆಯ ದಿನಗಳು ಮತ್ತು ಕೆಟ್ಟ ದಿನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದೂ ಅವರು ಹೇಳಿದ್ದಾರೆ.

     

    View this post on Instagram

     

    A post shared by Anupam Kher (@anupampkher)

    ಅನುಪಮ್ ಅವರ ಜನ್ಮದಿನಕ್ಕಾಗಿ ಹಲವು ಬಾಲಿವುಡ್ ತಾರೆಯರು ಅಭಿನಂದಿಸಿದ್ದು, ಅವರ ದೈಹಿಕ ರೂಪಾಂತರದ ಈ ಪೋಸ್ಟ್‍ಗೆ ಕಾಮೆಂಟ್ ಮೂಲಕ ಶ್ಲಾಘಿಸಿದ್ದಾರೆ. ಅನುಪಮ್ ಪುತ್ರ ಸಿಕಂದರ್ ಖೇರ್ ಕೂಡ ಶುಭಾಶಯ ಕೋರಿ, ಅಪ್ಪನ ಸಾಧನೆ ಕೊಂಡಿದ್ದಾನೆ. ಅನುಪಮ್ ಇದೀಗ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರವು ಮಾರ್ಚ್ 11 ರಂದು ಬಿಡುಗಡೆಯಾಗಲಿದೆ.