Tag: SIIMA 2023

  • SIIMA 2023: ರಾರಾ ರಕ್ಕಮ್ಮ ಸೇರಿ ವಿಕ್ರಾಂತ್ ರೋಣಕ್ಕೆ ಎರಡು ಪ್ರಶಸ್ತಿ

    SIIMA 2023: ರಾರಾ ರಕ್ಕಮ್ಮ ಸೇರಿ ವಿಕ್ರಾಂತ್ ರೋಣಕ್ಕೆ ಎರಡು ಪ್ರಶಸ್ತಿ

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾಗೆ 2 ವಿಭಾಗದಲ್ಲಿ ಪ್ರತಿಷ್ಠಿತ ಸೈಮಾ (SIIMA 2023) ಪ್ರಶಸ್ತಿ ಒಲಿದು ಬಂದಿದೆ. ಅತ್ಯುತ್ತಮ ಉದಯೋನ್ಮುಖ ನಟಿ ಹಾಗೂ ಅತ್ಯುತ್ತಮ ಗಾಯಕಿ ಪ್ರಶಸ್ತಿ ವಿಕ್ರಾಂತ್ ರೋಣ ಸಿನಿಮಾಗೆ ನೀಡಲಾಗಿದೆ. ದುಬೈನಲ್ಲಿ ನಡೆದ ಸೈಮಾ ಅಂಗಳದಲ್ಲಿ ಗೋಲ್ಡನ್ ಬ್ಯೂಟಿಗೆ ನಾಯಕಿ ನೀತಾ ಅಶೋಕ್, ಗಾಯಕಿ ಸುನಿಧಿ ಚೌಹಾಣ್ (Sunidhi Chauhan) ಮುತ್ತಿಟ್ಟಿದ್ದಾರೆ.

    ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದ ಅನೂಪ್ ಭಂಡಾರಿ ಪದ ಪೋಣಿಸಿದ್ದ ರಾರಾ ರಕ್ಕಮ್ಮ ಹಾಡು ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಜಬರ್ದಸ್ತ್ ಹಾಡಿನಲ್ಲಿ ಸುದೀಪ್ ಜೊತೆ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಹೆಜ್ಜೆ ಹಾಕಿದ್ದರು. ಇದೇ ರಕ್ಮಮ್ಮನಿಗೆ ಸುನಿಧಿ ಚೌಹಾಣ್ ಕಂಠ ನೀಡಿದ್ದರು.

     

    ದುಬಾರಿ ಬಜೆಟ್ ನಲ್ಲಿ ತಯಾರಾಗಿದ್ದ ವಿಕ್ರಾಂತ್ ರೋಣ ಸಿನಿಮಾಗೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿದ್ದರು. ನೀತಾ ಆಶೋಕ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಚೊಚ್ಚಲ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ನೀತಾ (Neeta Ashok) ಸೈಮಾ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • SIIMA 2023: ರಿಷಬ್, ರಕ್ಷಿತ್ ಸೇರಿ ಹಲವರಿಗೆ  ಪ್ರಶಸ್ತಿ

    SIIMA 2023: ರಿಷಬ್, ರಕ್ಷಿತ್ ಸೇರಿ ಹಲವರಿಗೆ ಪ್ರಶಸ್ತಿ

    ನಿನ್ನೆಯಿಂದ ದುಬೈನಲ್ಲಿ (Dubai) ಸೈಮಾ 2023ರ (SIIMA 2023) ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು,  ದಕ್ಷಿಣದ ಅನೇಕ ತಾರೆಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಕನ್ನಡವೂ ಸೇರಿದಂತೆ, ಹಲವು ಭಾಷೆಯ ಚಿತ್ರಗಳಿಗೆ ಮತ್ತು ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

    ಎರಡು ದಿನಗಳ ಕಾಲ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕನ್ನಡದ ನಟ, ನಿರ್ದೇಶಕರಾದ ರಿಷಬ್ ಶೆಟ್ಟಿ (Rishabh Shetty), ರಕ್ಷಿತ್ ಶೆಟ್ಟಿ ( (Rakshit Shetty)), ಪವನ್ ಒಡೆಯರ್, ನಟ ಅಚ್ಯುತ್ ಕುಮಾರ್, ಗಾಯಕ ವಿಜಯ ಪ್ರಕಾಶ್, ಸಂಗೀತ ನಿರ್ದೇಶಕ ಅಜನಿಶ್ ಲೋಕನಾಥ್, ನಟಿ ಶ್ರೀಲೀಲಾ, ಪೃಥ್ವಿ ಶಾಮನೂರು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

    ಸ್ಯಾಂಡಲ್ ವುಡ್ ವಿಭಾಗದಲ್ಲಿ ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯು (Award) ಕೆಜಿಎಫ್ 2 (KGF 2) ಚಿತ್ರಕ್ಕಾಗಿ ಯಶ್ ಪಡೆದಿದ್ದರೆ, ರಿಷಬ್ ಶೆಟ್ಟಿ ಅತ್ಯುತ್ತಮ ನಟ (ಕ್ರಿಟಿಕ್ಸ್), ಭುವನ್ ಗೌಡಗೆ ಅತ್ಯುತ್ತಮ ಛಾಯಾಗ್ರಾಹಕ (ಕೆಜಿಎಫ್ 2), ಪರಂವಃ ಸ್ಟುಡಿಯೋ ನಿರ್ಮಾಣದ ರಕ್ಷಿತ್ ಶೆಟ್ಟಿ  ನಟನೆಯ ಚಾರ್ಲಿ 777 ಅತ್ಯುತ್ತಮ ಸಿನಿಮಾ, ಪೃಥ್ವಿ ಶಾಮನೂರುಗೆ ಅತ್ಯುತ್ತಮ ಉದಯೋನ್ಮುಖ ನಟ (ಪದವಿ ಪೂರ್ವ), ಪವನ್ ಒಡೆಯರ್ ಅವರಿಗೆ ಡೊಳ್ಳು ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ಮಾಣ, ದಿಗಂತ್ ಗೆ ಗಾಳಿಪಟ 2 ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ, ಕಿರಣ್ ರಾಜ್ ಗೆ ಚಾರ್ಲಿ ಸಿನಿಮಾಗಾಗಿ ಅತ್ಯುತ್ತಮ ನಿರ್ದೇಶಕ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

    ಕೆಜಿಎಫ್ 2 ಸಿನಿಮಾಗಾಗಿ ಶ್ರೀನಿಧಿ ಶೆಟ್ಟಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರೆ, ಕ್ರಿಟಿಕ್ಸ್ ಅತ್ಯುತ್ತಮ ನಟಿ ಪ್ರಶಸ್ತಿಯು ಕಾಂತಾರ ಚಿತ್ರಕ್ಕಾಗಿ ಸಪ್ತಮಿ ಗೌಡ ಪಾಲಾಗಿದೆ. ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ವಿಶೇಷ ಮೆಚ್ಚುಗೆ ಪ್ರಶಸ್ತಿ ಪಡೆದಿದ್ದರೆ, ನೀತಾ ಅಶೋಕ್‍ ಗೆ ಅತ್ಯುತ್ತಮ ಹೊಸ ನಟಿ ಪ್ರಶಸ್ತಿಯು ವಿಕ್ರಾಂತ್ ರೋಣ ಸಿನಿಮಾದ ನಟನೆಗಾಗಿ ದೊರೆತಿದೆ.

     

    ಇನ್ನೂ ಅನೇಕರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದು, ಇನ್ನೂ ಹಲವು ಪ್ರಶಸ್ತಿಗಳು ಕನ್ನಡಕ್ಕೆ ಬರಲಿವೆ. ಜೊತೆಗೆ ತಮಿಳು, ತೆಲುಗು ಮತ್ತು ಮಲೆಯಾಳಂ ಸಿನಿಮಾ ರಂಗಕ್ಕೂ ಪ್ರತ್ಯೇಕವಾಗಿಯೇ ಪ್ರಶಸ್ತಿಗಳನ್ನು ನೀಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]