Tag: SIIMA

  • ಸೈಮಾಗೆ ದಿನಗಣನೆ: ಕಾಟೇರ, ಸಪ್ತಸಾಗರದಾಚೆ ಮಧ್ಯ ಬಿಗ್ ಫೈಟ್

    ಸೈಮಾಗೆ ದಿನಗಣನೆ: ಕಾಟೇರ, ಸಪ್ತಸಾಗರದಾಚೆ ಮಧ್ಯ ಬಿಗ್ ಫೈಟ್

    2024ನೇ ಸಾಲಿನ ದಕ್ಷಿಣ ಭಾರತದ ಪ್ರತಿಷ್ಠಿತ ಪ್ರಶಸ್ತಿ ಸೈಮಾ ಸಮಾರಂಭ ದುಬೈನಲ್ಲಿ ಸೆಪ್ಟಂಬರ್ 14 ಮತ್ತು 15ರಂದು ನಡೆಯಲಿದೆ. ಇದರ ಭಾಗವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಿನ್ನೆ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ಸೈಮಾ ಅಧ್ಯಕ್ಷರಾದ ಬೃಂದಾ ಪ್ರಸಾದ್, ನಟರಾದ ಡಾಲಿ ಧನಂಜಯ್, ರಿಷಿ, ನಟಿಯರಾದ ನೇಹಾ ಶೆಟ್ಟಿ, ನಿಧಿ ಅಗರ್ವಾಲ್, ಅವಿಕಾ ಗೋರ್, ಶಾನ್ವಿ ಶ್ರೀವಾಸ್ತವ್, ಶುಭ್ರ ಅಯ್ಯಪ್ಪ, ಮಾರುತಿ ಸುಜುಕಿ ಇಂಡಿಯಾಲಿಮಿಟೆಡ್ ಸೀನಿಯರ್ ಎಕ್ಸಿಕ್ಯೂಟಿವ್ ಆಫೀಸರ್ ನೊಬುಟಾಕಾ ಸುಜುಕಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ರಾಯ್ ಸಿಜೆ ಸೇರಿದಂತೆ ಹಲವರು ಭಾಗಿಯಾಗಿದ್ದರು. ಬೃಂದಾ ಪ್ರಸಾದ್ ಮಾತನಾಡಿ, ಈ ಬಾರಿ ನಡೆಯುತ್ತಿರುವುದು 12ನೇ ಆವೃತ್ತಿ ಸೈಮಾ. 12 ಬರೀ ನಂಬರ್ ಅಲ್ಲ. ಅದೊಂದು ಸುಂದರ ಪಯಣ. ದಕ್ಷಿಣ ಭಾರತದಲ್ಲಿ ಪ್ರತಿ ವರ್ಷ ನಡೆಯುವ ಪ್ರತಿಷ್ಠಿತ ಪ್ರಶಸ್ತಿ ಎಂಬ ಹೆಗ್ಗಳಿಕೆಗೆ ಸೈಮಾ ಭಾಜನವಾಗಿದೆ. ದಕ್ಷಿಣ ಸಿನಿರಂಗದ ಪ್ರತಿಭೆಗಳನ್ನು ಗುರುತಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಭ್ರಮಿಸುವ ಸೈಮಾದಲ್ಲಿ ನಾಲ್ಕು ಇಂಡಸ್ಟ್ರೀಗಳು ಒಂದೇ ಕುಟುಂಬದಂತೆ ಭಾಗಿಯಾಗುತ್ತಾರೆ ಎಂದು ತಿಳಿಸಿದರು.

    ನಟ ಡಾಲಿ ಧನಂಜಯ್  (Dolly Dhananjay) ಮಾತನಾಡಿ, ಸೈಮಾ ಎಂದರೆ ನಮಗೆ ಖುಷಿ. ಈ ಬಾರಿ ದುಬೈನಲ್ಲಿ ಮತ್ತೆ ಸೈಮಾ ಆಗುತ್ತಿದೆ. ಸೈಮಾ ನನಗೆ ಅದ್ಭುತ ಮೆಮೋರಿ ಕ್ರಿಯೇಟ್ ಮಾಡುವ ಜಾಗ. ಲಾಸ್ಟ್ ಇಯರ್ ನನ್ನ ಹುಟ್ಟುಹಬ್ಬಕ್ಕೆ ಇಂಡಸ್ಟ್ರೀಗೆಲ್ಲಾ ನಾನು ಪಾರ್ಟಿ ಕೊಟ್ಟಿದೆ. ಈ ಬಾರಿ ನನಗೆ ಸೈಮಾದಿಂದ ಪಾರ್ಟಿ ಕೊಡುತ್ತಿದ್ದಾರೆ. ಎಲ್ಲಾ ಇಂಡಸ್ಟ್ರೀಯ ಕಲಾವಿದರು, ನಿರ್ದೇಶಕರನ್ನು ನೋಡುವ ಒಳ್ಳೆ ವೇದಿಕೆ. ಈ ರೀತಿಯ ಇವೆಂಟ್ ಚೆನ್ನಾಗಿರುತ್ತವೆ, ಸೈಮಾ ಎಂದಾಗ ನಮ್ಮ ಪ್ರೆಸೆಂಟ್ ಇರುತ್ತದೆ. ಲಿರಿಕ್ಸ್ ಕೆಟಗರಿಯಲ್ಲಿ ನಾನು ನಾಮಿನೇಟ್ ಮಾಡಲಾಗಿದೆ. ಸೈಮಾ ಅನ್ನುವುದು ಸೆಲೆಬ್ರೆಷನ್ ಎಂದು ಸಂತಸ ಹಂಚಿಕೊಂಡರು.

    ನಿಧಿ ಅಗರ್ವಾಲ್ ಮಾತನಾಡಿ, ನಾನು ಇಲ್ಲಿ ಭಾಗಿಯಾಗಿರುವುದಕ್ಕೆ ಬಹಳಷ್ಟು ಖುಷಿಯಾಗಿದೆ. ಪ್ರತಿ ವರ್ಷ ನಡೆಯುವ ಸೈಮಾ ಸಂಭ್ರಮದಲ್ಲಿ ನಾನು ಭಾಗಿಯಾಗುತ್ತಿದ್ದೇನೆ. ಸೈಮಾ ಎನ್ನುವುದು ಅಮೇಜಿಂಗ್ ಶೋ. ಸೈಮಾದಲ್ಲಿ ಎಲ್ಲರನ್ನೂ ನೋಡುವುದು ಖುಷಿ ಎಂದರು. ಶಾನ್ವಿ ಶ್ರೀವಾಸ್ತವ್ ಮಾತನಾಡಿ, ಸೈಮಾ ಎನ್ನುವುದು ಹೋಳಿ, ದೀಪಾವಳಿ ರೀತಿ ಹಬ್ಬ. ಪ್ರತಿ ವರ್ಷದಂತೆ ಈ ವರ್ಷ ಸೈಮಾ ಮತ್ತೆ ಬಂದಿದೆ. ನಾನು ಸೆಲೆಬ್ರೆಟ್ ಮಾಡಲು ಕಾಯುತ್ತಿದ್ದೇವೆ. ಎಲ್ಲಾ ಇಂಡಸ್ಟ್ರೀಯ ಕಲಾವಿದರು ಒಂದು ಜಾಗದಲ್ಲಿ ಒಂದು ಸಮಾರಂಭದಲ್ಲಿ ಭಾಗಿಯಾಗಿ ಸಿನಿಮಾವನ್ನು ಸಂಭ್ರಮಿಸುತ್ತೇವೆ ಎಂದರು.

    ಈಗಾಗಲೇ ಸೈಮಾ ಪ್ರಶಸ್ತಿಗೆ ನಾಮಿನೇಷನ್ಸ್ ಆರಂಭವಾಗಿದೆ. ‘ಕಾಟೇರ’ (Katera) ಹಾಗೂ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ (Saptasagaradache Yello)  ಸಿನಿಮಾಗಳು ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ. ತರುಣ್ ಸುಧೀರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರ 8 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಅತ್ತ ರಕ್ಷಿತ್ ಶೆಟ್ಟಿ ನಟನೆಯ, ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೋ ಸೈಡ್-ಎ ಚಿತ್ರ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

    ತೆಲುಗಿನಲ್ಲಿ, ನಾನಿ ಮತ್ತು ಕೀರ್ತಿ ಸುರೇಶ್ ಅಭಿನಯದ ಶ್ರೀಕಾಂತ್ ಒಡೆಲಾ ನಿರ್ದೇಶನದ ‘ದಸರಾ’ ಚಿತ್ರ 11 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದು, ನಾನಿ ಮತ್ತು ಮೃಣಾಲ್ ಠಾಕೂರ್ ಅಭಿನಯದ ‘ಹಾಯ್ ನನ್ನಾ’ 10 ವಿಭಾಗಗಳಲ್ಲಿ ನಾಮಿನೇಷನ್ ಗೊಂಡಿದೆ. ತಮಿಳಿನಲ್ಲಿ, ರಜನಿಕಾಂತ್ ಅಭಿನಯದ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್’ 11 ವಿಭಾಗದಲ್ಲಿ ನಾಮನಿರ್ದೇಶನಗಳೊಂದಿಗೆ ಮುಂಚೂಣಿಯಲ್ಲಿದ್ದರೆ, ಉದಯನಿಧಿ ಸ್ಟಾಲಿನ್ ಮತ್ತು ಕೀರ್ತಿ ಸುರೇಶ್ ಅಭಿನಯದ ‘ಮಾಮಣ್ಣನ್‌’ ಸಿನಿಮಾ 9 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಮಲಯಾಳಂನಲ್ಲಿ, ಟೊವಿನೋ ಥಾಮಸ್ ಮತ್ತು ಆಸಿಫ್ ಅಲಿ ಅಭಿನಯದ ಜೂಡ್ ಆಂಥನಿ ಜೋಸೆಫ್ ನಿರ್ದೇಶನದ ‘2018’ ಸಿನಿಮಾ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ, ಮಮ್ಮುಟ್ಟಿ ಮತ್ತು ಜ್ಯೋತಿಕಾ ಅಭಿನಯದ ‘ಕಾತಲ್ – ದಿ ಕೋರ್’ 7 ವಿಭಾಗಗಳಲ್ಲಿ ನಾಮಿನೇಷನ್ ಆಗಿದೆ.

  • ‘ಸೈಮಾ ಅವಾರ್ಡ್’ ಐಷಾರಾಮಿ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳ ತಡರಾತ್ರಿ ಪಾರ್ಟಿ : FIR ದಾಖಲು

    ‘ಸೈಮಾ ಅವಾರ್ಡ್’ ಐಷಾರಾಮಿ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳ ತಡರಾತ್ರಿ ಪಾರ್ಟಿ : FIR ದಾಖಲು

    ದೇ ಮೊದಲ ಬಾರಿಗೆ ಸೈಮಾ (SIIMA) ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ (Bangalore) ನಡೆಯಿತು. ಪುನೀತ್ ರಾಜ್‌ಕುಮಾರ್ ಸ್ಮರಣೆಗಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣದ ಬಹುತೇಕ ತಾರೆಯರು ಭಾಗಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಸಿನಿಮಾ ರಂಗದ ಅನೇಕ ದಿಗ್ಗಜರು ಕೂಡ ಪಾಲ್ಗೊಂಡಿದ್ದರು. ಕಾರ್ಯಕ್ರಮ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. ಸೈಮಾ ಅವಾರ್ಡ್ (Award) ನಲ್ಲಿ ಭಾಗಿಯಾಗಿದ್ದ ಗಣ್ಯರಿಗೆ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಅಲ್ಲೀಗ ಎಡವಟ್ಟಾಗಿದೆ.

    ಸೈಮಾಗೆ ಹತ್ತು ವರ್ಷಗಳ ಸಂಭ್ರಮ. ಅಲ್ಲದೇ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜನೆ. ಅಲ್ಲದೇ, ಬಹುತೇಕ ತಾರೆಯರು (Celebrity) ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರಿಂದ ಕನ್ನಡದ ಅನೇಕ ಸ್ಟಾರ್ ನಟರು ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮದ ನಂತರ ಇವರೆಲ್ಲ ಐಷಾರಾಮಿ ಹೋಟೆಲ್‌ನಲ್ಲಿ ತಡರಾತ್ರಿ ಪಾರ್ಟಿ ಮಾಡಿ, ನಿಯಮ ಮುರಿದ ಕಾರಣಕ್ಕಾಗಿ ಕಬ್ಬನ ಪಾರ್ಕ್ ಪೊಲೀಸ್ ಸ್ಟೇಶನ್ ನಲ್ಲಿ ದೂರು ದಾಖಲಾಗಿದೆ. ತಡರಾತ್ರಿ 1 ಗಂಟೆಗೆ ಪಾರ್ಟಿ ಮುಗಿಸಬೇಕು ಎಂದು ಪೊಲೀಸರು ತಿಳಿಸಿದ್ದರೂ, ಮಧ್ಯರಾತ್ರಿ 3.30ರವರೆಗೂ ಪಾರ್ಟಿ ನಡೆದಿದೆ. ಹಾಗಾಗಿ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ

    ಅವಧಿ ಮೀರಿ ಮಧ್ಯರಾತ್ರಿವರೆಗೂ ಪಾರ್ಟಿ (Party) ಮಾಡುವುದಕ್ಕೆ ಅವಕಾಶ ಕೊಟ್ಟ ಹೋಟೆಲ್ ಮೇಲೆ ಈ ದೂರು ದಾಖಲಾಗಿದ್ದು, ಹೋಟೆಲ್‌ನ ಮ್ಯಾನೇಜರ್ ಮತ್ತು ಪಾರ್ಟಿ ಆಯೋಜಕರ ಮೇಲೆ ಎಫ್.ಐ.ಆರ್ (FIR) ದಾಖಲಿಸಿದ್ದಾರೆ ಪೊಲೀಸ್ ಅಧಿಕಾರಿಗಳು. ಕಬ್ಬನ್ ಪಾರ್ಕ್ (Kabbana Park)  ಪೊಲೀಸ್ ಅಧಿಕಾರಿ ಚೈತನ್ಯಾ ಅವರು ಮೊದಲು ಒಂದು ಗಂಟೆಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಒಂದು ಗಂಟೆಗೆ ಪಾರ್ಟಿ ಮುಗಿಸಿ ಎಂದೂ ಹೇಳಿದ್ದಾರೆ. ಆದರೆ, ಆಯೋಜಕರು ಮಧ್ಯರಾತ್ರಿ 3.30ರವರೆಗೂ ಪಾರ್ಟಿ ಮಾಡಿದ್ದಾರೆ ಎಂದು ಚೈತನ್ಯಾ (Chaitanya) ಅವರೇ ದೂರು ದಾಖಲಿಸಿದ್ದಾರೆ.

    ಸೈ,ಮಾ ಆವಾರ್ಡ್ ಸಂದರ್ಭದಲ್ಲಿ ಅದೇ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳು ರೂಮ್ ಬುಕ್ ಮಾಡಿದ್ದರು ಎನ್ನಲಾಗುತ್ತಿದೆ. ಅಲ್ಲದೇ, ಕನ್ನಡದ ಕೆಲ ಸ್ಟಾರ್ ನಟರು ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಎಫ್.ಐ.ಆರ್ ನಲ್ಲಿ ಯಾರ ಹೆಸರೂ ದಾಖಲಿಸಿಲ್ಲ. ಕೇವಲ ಹೋಟೆಲ್ ಸಿಬ್ಬಂದಿ ಮೇಲೆ ದೂರು ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ರಣವೀರ್ ಸಿಂಗ್ ಗೆ ಕಪಾಳಮೋಕ್ಷ: ವೈರಲ್ ಆದ ವಿಡಿಯೋ ಅಸಲಿಯತ್ತೇನು?

    ಬೆಂಗಳೂರಿನಲ್ಲಿ ರಣವೀರ್ ಸಿಂಗ್ ಗೆ ಕಪಾಳಮೋಕ್ಷ: ವೈರಲ್ ಆದ ವಿಡಿಯೋ ಅಸಲಿಯತ್ತೇನು?

    ನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ (Bangalore) ನಡೆದ ಸೈಮಾ (SIIMA) ಪ್ರಶಸ್ತಿ (Award) ಪ್ರದಾನ ಸಮಾರಂಭದಲ್ಲಿ ಬಾಲಿವುಡ್ ಖ್ಯಾತ ನಟ, ಬೆಂಗಳೂರಿನ ಅಳಿಯ ರಣವೀರ್ ಸಿಂಗ್ ಕೂಡ ಭಾಗಿಯಾಗಿದ್ದರು. ಅವರು ಕಾರ್ಯಕ್ರಮದ ಮುಖ್ಯ ನಿರೂಪಕರಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಚಾತುರ್ಯವೊಂದು ನಡೆದು ಹೋಗಿದೆ. ರಣವೀರ್ ಸಿಂಗ್ ಅವರಿಗೆ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ. ಆ ವಿಡಿಯೋ ವೈರಲ್ ಕೂಡ ಆಗಿದೆ.

    ಅಭಿಮಾನಿಯೊಬ್ಬ ಸೆಲ್ಫಿಗಾಗಿ ರಣವೀರ್ ಸಿಂಗ್ (Ranveer Singh) ದುಂಬಾಲು ಬೀಳುತ್ತಾನೆ. ರಣವೀರ್ ಸೆಲ್ಫಿ ಕೊಡಲು ನಿರಾಕರಿಸುತ್ತಾರೆ. ಆಗ ರಣವೀರ್ ಸಿಂಗ್ ಗೆ ಕಪಾಳಮೋಕ್ಷ ಮಾಡುವಂತಹ ಸನ್ನಿವೇಶ ಎದುರಾಗುತ್ತದೆ. ವ್ಯಕ್ತಿಯು ರಣವೀರ್ ಗೆ ಕಪಾಳಕ್ಕೆ ಏಟು ಕೊಡುತ್ತಾನೆ.  ಈ ಘಟನೆ ಗುಂಪಿನ ಮಧ್ಯ ನಡೆದಿದ್ದರಿಂದ ಕೆಲವರು  ಅಚ್ಚರಿ ವ್ಯಕ್ತ ಪಡಿಸುತ್ತಾರೆ. ಇನ್ನೂ ಕೆಲವರು ನೋಡಿಯೋ ನೋಡದಂತೆ ಉಳಿದು ಬಿಡುತ್ತಾರೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

    ಮೂಲಗಳ ಪ್ರಕಾರ ರಣವೀರ್ ಸಿಂಗ್ ಕಪಾಳಕ್ಕೆ ಹೊಡೆದ್ದು ಬಾಡಿಗಾರ್ಡ್ ಎಂದು ಹೇಳಲಾಗುತ್ತಿದೆ. ಅಲ್ಲದೇ, ಇದು ಉದ್ದೇಶ ಪೂರ್ವಕವಾಗಿ ನಡೆದ ಘಟನೆಯ‍ಲ್ಲ, ಆಕಸ್ಮಿಕವಾಗಿ ಹಾಗೆ ಆಗಿದೆ ಎನ್ನುವ ಮಾತಿದೆ. ರಣವೀರ್ ಸಿಂಗ್ ಕಪಾಳ ಮುಟ್ಟುವಷ್ಟು ಧೈರ್ಯ ಯಾರಿಗಿದೆ? ಹಾಗಾಗಿ ಏನೋ ಮಾಡಲು ಹೋಗಿ, ಇನ್ನೇನೋ ಆಗಿದೆ. ಹಾಗಾಗಿ ರಣವೀರ್ ಸುಮ್ಮನೆ ಆಗಿದ್ದಾರಂತೆ. ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ಶುರುವಾಗುವ ಮುನ್ನವೇ ಈ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ. ಅಲ್ಲದೇ, ಹೊಡದವ ರಣವೀರ್ ಅಭಿಮಾನಿ ಅಂತಾನೂ ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]