Tag: siezed

  • ದಾಖಲೆ ಇಲ್ಲದೆ ಸಾಗಿಸುತ್ತಿದ್ದ 42 ಲಕ್ಷ ರೂ. ಜಪ್ತಿ!

    ದಾಖಲೆ ಇಲ್ಲದೆ ಸಾಗಿಸುತ್ತಿದ್ದ 42 ಲಕ್ಷ ರೂ. ಜಪ್ತಿ!

    ಹುಬ್ಬಳ್ಳಿ: ಮೇ 19ಕ್ಕೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 42 ಲಕ್ಷ ರೂ. ಹಣವನ್ನು ಚುನಾವಣಾಧಿಕಾರಿಗಳು ಹುಬ್ಬಳ್ಳಿ ತಾಲೂಕಿನ ಅಗಡಿ ಗ್ರಾಮದ ಬಳಿ ಇರುವ ಚೆಕ್‍ಪೋಸ್ಟ್ ನಲ್ಲಿ ಜಪ್ತಿ ಮಾಡಿದ್ದಾರೆ.

    ಅಗಡಿ ಗ್ರಾಮದ ಚೆಕ್‍ಪೋಸ್ಟ್ ನಲ್ಲಿ ತಡ ರಾತ್ರಿ ಚುನಾವಣಾಧಿಕಾರಿಗಳು ದಾಖಲೆ ಇಲ್ಲದೆ ಸಾಗುತ್ತಿದ್ದ ಬರೋಬ್ಬರಿ 42 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ. ಮೇ 19ಕ್ಕೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆ ಈ ಹಣವನ್ನು ಸಾಗಿಸಲಾಗುತ್ತಿತ್ತು ಎಂದು ಶಂಕಿಸಲಾಗಿದೆ.

    ಈ ಹಣವನ್ನು ಖಾಸಗಿ ಬ್ಯಾಂಕ್ ಸಿಬ್ಬಂದಿ ಸಾಗಿಸುತ್ತಿದ್ದರು. ಅಲ್ಲದೆ ಬ್ಯಾಂಕ್ ಸಿಬ್ಬಂದಿ ಹಣ ಜಪ್ತಿ ಮಾಡಿದ ವೇಳೆ ಕೇವಲ 12 ಲಕ್ಷ ರೂಪಾಯಿಗಳಿಗೆ ಎಕ್ಸಿಸ್ ಬ್ಯಾಂಕ್ ದಾಖಲೆ ತೋರಿಸಿದ್ದಾರೆ. ಆದ್ರೆ ಉಳಿದ 30 ಲಕ್ಷ ರೂ.ಗಳಿಗೂ ಇಂದು ದಾಖಲೆಗಳನ್ನು ಒದಗಿಸುವುದಾಗಿ ಚುನಾವಣಾಧಿಕಾರಿಗಳ ಬಳಿ ಹೇಳಿದ್ದಾರೆ. ಹೀಗಾಗಿ ಸರಿಯಾದ ದಾಖಲೆಯನ್ನು ನೀಡದೆ ಭಾರೀ ಪ್ರಮಾಣದಲ್ಲಿ ಹಣವನ್ನು ಸಾಗಿಸುತ್ತಿದ್ದರಿಂದ ಹಣವನ್ನು ವಶಕ್ಕೆ ಪಡೆದ ಚುನಾವಣಾಧಿಕಾರಿಗಳು ಅದನ್ನು ಜಿಲ್ಲಾ ಖಜಾನೆಯಲ್ಲಿರಿಸಿದ್ದಾರೆ.

  • ಕಸ್ಟಮ್ಸ್ ಅಧಿಕಾರಿಗಳಿಂದ 1 ಸಾವಿರ ಇರುವೆ ಸೀಜ್!

    ಕಸ್ಟಮ್ಸ್ ಅಧಿಕಾರಿಗಳಿಂದ 1 ಸಾವಿರ ಇರುವೆ ಸೀಜ್!

    ಬೀಜಿಂಗ್: ಅಕ್ರಮವಾಗಿ ಸಾಗಾಟ ಮಾಡುವ ಹಣ, ಬಂಗಾರ, ಡ್ರಗ್ಸ್ ಹೀಗೆ ಇತರೆ ವಸ್ತುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡುವುದು ನಿಮಗೆ ಗೊತ್ತೆ ಇದೆ. ಈಗ ಚೀನಾದಲ್ಲಿ 1 ಸಾವಿರ ಇರುವೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

    ಇರುವೆಗಳನ್ನ ಸೀಜ್ ಮಾಡಿದ್ದಾರಾ ಅಂತ ಅಚ್ಚರಿಯಾದರೂ ಇದು ನಿಜ. ಕೋರಿಯರ್ ಮೂಲಕ ಸಾಗಾಣೆಯಾಗುತ್ತಿದ್ದ ಪಾರ್ಸೆಲ್‍ವೊಂದನ್ನು ಸೀಜ್ ಮಾಡಿದ್ದ ಕಸ್ಟಮ್ ಅಧಿಕಾರಿಗಳಿಗೆ ಅದನ್ನು ತೆರೆದಾಗ ಅದರಲ್ಲಿದ್ದ ಇರುವೆಗಳನ್ನು ನೋಡಿ ಶಾಕ್ ಆಗಿದ್ದಾರೆ.

    ಅಕ್ರಮವಾಗಿ ಕೋರಿಯರ್ ಮೂಲಕ ಬ್ರಿಟನ್‍ನಿಂದ ಚೀನಾಗೆ ಈ ಇರುವೆಗಳನ್ನು ಕಳುಹಿಸಲಾಗಿತ್ತು. ಈ ಇರುವೆಗಳು ವಿಲಕ್ಷಣ ಸಾಕುಪ್ರಾಣಿಗಳ ಪಟ್ಟಿಗೆ ಸೇರಿದರಿಂದ ಕಸ್ಟಮ್ಸ್ ಅಧಿಕಾರಿಗಳು ತಕ್ಷಣ ಪಾರ್ಸಲ್‍ನಲ್ಲಿದ್ದ ಒಂದು ಸಾವಿರ ಇರುವೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇದರಲ್ಲಿ 37 ಕೆಂಪು ಮತ್ತು ಕಪ್ಪು ಬಣ್ಣದ ರಾಣಿ ಇರುವೆಗಳು ಸೇರಿದಂತೆ ಇತರೆ ಇರುವೆಗಳು ಇವೆ. ಜೀವಂತ ಇರುವೆಗಳನ್ನು ಪಾರ್ಸೆಲ್ ಮೂಲಕ ಸಾಗಾಟ ಮಾಡುವುದು ಚೀನಾದಲ್ಲಿ ನಿಷೇಧಿಸಲಾಗಿದ್ದು, ಸ್ಥಳೀಯವಲ್ಲದ ಇಂಥಹ ಇರುವೆಗಳ ಸಾಗಾಟ ನಮ್ಮ ಪರಿಸರಕ್ಕೆ ಹಾನಿ ತಂದೊಡ್ಡುತ್ತವೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

    ಅಲ್ಲದೆ ಇತ್ತೀಚೆಗೆ ಇ-ಕಾಮರ್ಸ್ ಹಾಗೂ ಆನ್‍ಲೈನ್ ಮೂಲಕ ಚೀನಾಕ್ಕೆ ಇಂತಹ ಹಾವುಗಳು, ಹಲ್ಲಿಗಳು ಹಾಗೂ ವಿವಿಧ ರೀತಿಯ ಕೀಟಗಳ ಅಕ್ರಮ ಸಾಗಾಟ ಹೆಚ್ಚಾಗಿದ್ದು, ದೇಶದಲ್ಲಿ ವಿದೇಶಿ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಕಳ್ಳಸಾಗಣೆಗಾಗಿ ಇ-ಕಾಮರ್ಸ್ ಬಳಕೆ ಆಗುತ್ತಿರುವುದು ಚೀನಾ ಸರ್ಕಾರಕ್ಕೆ ತಲೆನೋವು ತಂದೊಡ್ಡಿದೆ.