Tag: siege

  • ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿ ಕೆರೆ ಸೀಜ್

    ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿ ಕೆರೆ ಸೀಜ್

    ಬೆಂಗಳೂರು: ನಗರದ ಇತಿಹಾಸದಲ್ಲೇ ಮೊದಲ ಬಾರಿಗೆ ಕೆರೆಯೊಂದನ್ನು (Lake) ಸೀಜ್ ಮಾಡಲಾಗಿದೆ. ಕೆರೆಯ ಒಳಗೆ ಪ್ರವೇಶಿಸುವ ಮಾರ್ಗಗಳನ್ನು ಜಿಲ್ಲಾಡಳಿತ ಬಂದ್ ಮಾಡಿದೆ.

    ಖಾಸಗಿ ಕಂಪನಿಯೊಂದರಿಂದ ಜಿಗಣಿಯ (Jigani) ಹೆನ್ನಾಗರ ಕೆರೆ (Hennagar Lake) ಒತ್ತುವರಿ ಕಾರ್ಯ ನಡೆಯುತ್ತಿತ್ತು. ಕೆರೆ ಒಳಗಡೆ ಮಣ್ಣು ಹಾಕಿ ಮುಚ್ಚಲು ಯತ್ನಿಸಲಾಗುತ್ತಿತ್ತು. ಹೆನ್ನಾಗರ ಕೆರೆ ಒತ್ತುವರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಆನೇಕಲ್ ತಹಶೀಲ್ದಾರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

    ದೂರು ನೀಡಿದ ಬಳಿಕ ಕೆರೆ ಒತ್ತುವರಿ ಬಗ್ಗೆ ಅಧಿಕಾರಿಗಳು ಪರಿಶೀಲನೆ ಮಾಡಿ ಖಾಸಗಿ ಕಂಪನಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಲಾರಿಗಳಲ್ಲಿ ಮಣ್ಣನ್ನು ಕೊಂಡೊಯ್ದು ಮುಚ್ಚಲು ಯತ್ನಿಸುತ್ತಿದ್ದವರನ್ನು ತಡೆಯಲಾಗಿದೆ. ಈಗ ಒಳಗಡೆ ಯಾವುದೇ ವಾಹನ ಪ್ರವೇಶ ಮಾಡದಂತೆ ಕೆರೆಯ ಪ್ರವೇಶ ದ್ವಾರಗಳನ್ನು ಬ್ಯಾರಿಕೇಡ್ ಹಾಗೂ ಕಬ್ಬಿಣದ ಸರಳುಗಳನ್ನು ಹಾಕಿ ಬಂದ್ ಮಾಡಲಾಗಿದೆ. ಇದನ್ನೂ ಓದಿ: ಕೆರೆಯ ಮಣ್ಣು ಅಕ್ರಮ ಸಾಗಾಟ – ಗ್ರಾಮಸ್ಥರಿಂದ 50ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಆಕ್ರೋಶ

    ತಹಶೀಲ್ದಾರ್ ದೂರಿನ ಅನ್ವಯ ಜಿಗಣಿ ಪೊಲೀಸ್ ಠಾಣೆ ಪೊಲೀಸರು ಕೆರೆಯ ಪ್ರವೇಶದ್ವಾರಗಳನ್ನು ಮುಚ್ಚಿದ್ದಾರೆ. ಒತ್ತುವರಿ ಮಾಡುತ್ತಿದ್ದ ವೀಡಿಯೋ ಆಧರಿಸಿ ತಹಶೀಲ್ದಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದೀಗ ಖಾಸಗಿ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ – ತನಿಖೆಗೆ ಹಾಜರಾಗದೇ ಶ್ರೀಕಿ ಕಳ್ಳಾಟ

  • ಪ್ರಶಾಂತ್ ಹತ್ಯೆ ಕೇಸ್ – ಆರೋಪಿಗಳು ತಂಗಿದ್ದ ಲಾಡ್ಜ್ ಸೀಜ್

    ಪ್ರಶಾಂತ್ ಹತ್ಯೆ ಕೇಸ್ – ಆರೋಪಿಗಳು ತಂಗಿದ್ದ ಲಾಡ್ಜ್ ಸೀಜ್

    ಹಾಸನ: ಹಾಸನ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಹಾಗೂ ಪೊಲೀಸರ ತನಿಖೆ ಚುರುಕುಗೊಂಡಿದ್ದು, ಆರೋಪಿಗಳು ತಂಗಿದ್ದ ಲಾಡ್ಜ್ ಸೀಜ್ ಮಾಡಲಾಗಿದೆ.

    ನಗರದ ಡಬಲ್ ಟ್ಯಾಂಕ್ ರಸ್ತೆಯ ಹಳೇ ಮಟನ್ ಮಾರ್ಕೆಟ್ ಬಳಿ ಇರುವ ಖಾಸಗಿ ಲಾಡ್ಜ್‌ಗೆ ಕಳೆದ ರಾತ್ರಿ ಡಿವೈಎಸ್ಪಿ ಉದಯಬಾಸ್ಕರ್ ನೇತೃತ್ವದಲ್ಲಿ ದಾಳಿ ಮಾಡಿ ಸೀಝ್ ಮಾಡಲಾಗಿದೆ. ಹಂತಕರು ಕೊಲೆಗೂ ಮುನ್ನ ಲಾಡ್ಜ್‌ನಲ್ಲಿ ಸೇರಿ ಪ್ಲಾನ್ ಮಾಡಿದ್ದರು. ಅಲ್ಲಿಯೇ ಪಾರ್ಟಿ ಕೂಡಾ ಮಾಡಿದ್ದರು ಎಂಬ ವಿಚಾರವನ್ನು ಬಂಧಿಯಾಗಿರುವ ವಿಶ್ವ ಹಾಗೂ ಸಂತೋಷ್ ಬಾಯ್ಬಿಟ್ಟಿದ್ದರು. ಆರೋಪಿಗಳ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಹಾಸನ ಡಿವೈಎಸ್ಪಿ ಉದಯಬಾಸ್ಕರ್ ನೇತೃತ್ವದ ತಂಡ ದಾಳಿ ಮಾಡಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಂಪೂರ್ಣ ಪಠ್ಯ ಪುಸ್ತಕ ಪರಿಷ್ಕರಣೆ ಕೈ ಬಿಡೋಲ್ಲ: ಬಿ.ಸಿ.ನಾಗೇಶ್

    ಲಾಡ್ಜ್‌ನ ಸಿಸಿಟಿವಿ ಪರಿಶೀಲನೆ ನಡೆಸಿ, ಲಾಡ್ಜ್‌ನಲ್ಲಿದ್ದ ಎಲ್ಲರನ್ನೂ ಖಾಲಿ ಮಾಡಿಸಿ ಬೀಗ ಜಡಿಯಲಾಗಿದೆ. ದಾಳಿ ವೇಳೆ ಲಾಡ್ಜ್‌ನಲ್ಲಿ ಸರಿಯಾಗಿ ದಾಖಲೆ ಇಡದೆ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಆಕ್ಷೇಪ ವ್ಯಕ್ತವಾಗ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಪ್ರಕರಣವನ್ನ ಸಿಐಡಿಗೆ ವಹಿಸಿದ್ದು, ಸಿಐಡಿ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ತನಿಖೆಯನ್ನು ಮುಂದುವರೆಸಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಗಲಿಕೆಗೆ ಎರಡು ವರ್ಷ : ಕುಟುಂಬದಿಂದ ಇಂದು ವಿಶೇಷ ಪೂಜೆ

    ಹತ್ಯೆ ಕೇಸ್‍ನ ಪ್ರಮುಖ ಆರೋಪಿ ಹಾಗೂ ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಪ್ರಮುಖ ಆರೋಪಿ ಸಿಕ್ಕಿದ ಬಳಿಕ ಹತ್ಯೆಗೆ ನಿಖರ ಕಾರಣ ತಿಳಿಯಲಿದೆ. ಹಾಸನ ನಗರದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಹಾಸನ ನಗರಸಭೆ ಸದಸ್ಯ, ಜೆಡಿಎಸ್ ಮುಖಂಡ ಪ್ರಶಾಂತ್ ನಾಗರಾಜ್‍ರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

  • ಬೇಕಾಬಿಟ್ಟಿ ಓಡಾಟ- ಕೊಡಗಿನಲ್ಲಿ ವಾಹನಗಳು ಸೀಜ್

    ಬೇಕಾಬಿಟ್ಟಿ ಓಡಾಟ- ಕೊಡಗಿನಲ್ಲಿ ವಾಹನಗಳು ಸೀಜ್

    ಮಡಿಕೇರಿ: ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಗೆ ತರಲಾಗಿದ್ದು, ಕೊಡಗು ಜಿಲ್ಲಾಡಳಿತ ಸಹ ಟಫ್ ರೂಲ್ಸ್ ಮಾಡಿದೆ. ವಾರದಲ್ಲಿ ಎರಡು ದಿನ ಮಾತ್ರ ಜನ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಉಳಿದ ದಿನಗಳಲ್ಲಿ ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ.

    ಕೊಡಗು ಜಿಲ್ಲೆಯಾದ್ಯಂತ ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 6 ರಿಂದ 12 ಗಂಟೆಯ ವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಅದರೂ ಗ್ರಾಮೀಣ ಭಾಗದಲ್ಲಿ ಕೆಲವರು ಅನಾವಶ್ಯಕವಾಗಿ ಸಂಚರಿಸುತ್ತಿದ್ದಾರೆ. ಈ ಹಿನ್ನೆಲೆ ಮಡಿಕೇರಿ ತಾಲೂಕಿನ ನಾಪೋಕ್ಲಿವಿನ ಪೊಲೀಸರು ಇಂದು ಬೆಳಗ್ಗೆಯಿಂದಲೇ ಪಟ್ಟಣದಲ್ಲಿ ಅನವಶ್ಯಕವಾಗಿ ಓಡಾಡುತ್ತಿರುವವರ ವಾಹಗಳನ್ನು ಸೀಜ್ ಮಾಡಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಜನ ಮಾತ್ರ ಇದರ ಅರಿವು ಇಲ್ಲದೆ ಪಟ್ಟಣ ಪ್ರದೇಶಗಳಲ್ಲಿ ಸುಖಾಸುಮ್ಮನೆ ಓಡಾಡುತ್ತಿದ್ದಾರೆ. ಹೀಗಾಗಿ ನಾಪೋಕ್ಲು ಠಾಣೆಯ ಎಸ್‍ಐ ಕಿರಣ್ ಕುಮಾರ್ ಹಾಗೂ ಸಿಬ್ಬಂದಿ ಅನವಶ್ಯಕವಾಗಿ ಓಡಾಡುತ್ತಿದ್ದ 20ಕ್ಕೂ ಹೆಚ್ಚು ಬೈಕ್, 6 ಪಿಕಪ್, 5 ಕಾರ್ ಹಾಗೂ 3 ಮೊಪೆಡ್ ಸೇರಿದಂತೆ ಹಲವು ವಾಹಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕೋವಿಡ್ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 4 ಬಸ್ ಜಪ್ತಿ

    ಕೋವಿಡ್ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ 4 ಬಸ್ ಜಪ್ತಿ

    ಬೆಂಗಳೂರು: ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕಳ್ಳ ಮಾರ್ಗದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ನಾಲ್ಕು ಬಸ್‍ಗಳನ್ನು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್ ನೇತೃತ್ವದ ತಂಡ ದಾಳಿ ಮಾಡಿ ಜಪ್ತಿ ಮಾಡಿದೆ.

    ಬಾಗೇಪಲ್ಲಿ, ಅತ್ತಿಬೆಲೆ ಮತ್ತು ಎಸ್ಟೀಮ್ ಮಾಲ್ ಬಳಿ ದಾಳಿ ನಡೆಸಿ ಈ ಬಸ್‍ಗಳನ್ನು ಆರ್‍ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೋವಿಡ್ ನಿಯಮಾವಳಿಗಳ ಪ್ರಕಾರ ಯಾವುದೇ ಬಸ್‍ಗಳು ಕಾರ್ಯಾರಣೆ ಮಾಡುವಂತಿಲ್ಲ. ಆದರೆ ಈ ನಾಲ್ಕು ಖಾಸಗಿ ಬಸ್‍ಗಳು ನಿಯಮಗಳನ್ನು ಉಲ್ಲಂಘಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವು.

    ಬಾಗೇಪಲ್ಲಿಯಲ್ಲಿ ಮೋಟಾರ್ ವಾಹನ ನಿರೀಕ್ಷಕ ಸಿ.ತಿಪ್ಪೇಸ್ವಾಮಿ, ವೆಂಕಟೇಶ್, ಜಿ.ಎನ್.ಸುರೇಶ್ ತಂಡ ಕಾರ್ಯಾಚರಣೆ ನಡೆಸಿ ಮೂರು ಬಸ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಎಆರ್ ಟಿಒ ರಾಜಣ್ಣ, ಕೃಷ್ಣಾನಂದ, ಇನ್‍ಸ್ಪೆಕ್ಟರ್ ರಾಜ್ ಕುಮಾರ್, ಸುಧಾಕರ್, ರಾಜೇಶ್, ಜಗದೀಶ್ ಮತ್ತು ಜಯಣ್ಣ ಅವರನ್ನೊಳಗೊಂಡ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಾತ್ರಿ ವೇಳೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಒಂದು ಬಸ್‍ನ್ನು ವಶಪಡಿಸಿಕೊಂಡಿದ್ದಾರೆ.

    ನೇಪಾಳಕ್ಕೆ ತೆರಳಲು ಸಿದ್ಧವಾಗಿದ್ದ ಬಸ್‍ನಲ್ಲಿದ್ದ ಪ್ರಯಾಣಿಕರನ್ನು ವಾಪಸ್ ಕಳುಹಿಸಿಲಾಗಿದೆ. ಇನ್ನೂ ಮೂರು ಬಸ್ ಗಳಲ್ಲಿದ್ದ ಪ್ರಯಾಣಿಕರಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳ ವ್ಯವಸ್ಥೆ ಮಾಡಿ ಅವರ ಊರುಗಳಿಗೆ ತಲುಪಿಸಲಾಗಿದೆ.

  • ಬೇಕಾ ಬಿಟ್ಟಿ ತಿರುಗಾಟ- ಬೈಕ್ ಸೀಜ್ ಆಗಿದ್ದಕ್ಕೆ ಶಾಸಕರ ಹೆಸರು ಹೇಳಿ ಪೊಲೀಸರಿಗೇ ಅವಾಜ್

    ಬೇಕಾ ಬಿಟ್ಟಿ ತಿರುಗಾಟ- ಬೈಕ್ ಸೀಜ್ ಆಗಿದ್ದಕ್ಕೆ ಶಾಸಕರ ಹೆಸರು ಹೇಳಿ ಪೊಲೀಸರಿಗೇ ಅವಾಜ್

    ಯಾದಗಿರಿ: ಕೊರೊನಾ ತಾಂಡವಾಡುತ್ತಿದ್ದು, ಜನ ಆಕ್ಸಿಜನ್, ಬೆಡ್ ಇಲ್ಲದೆ ನರಳಿ ಪ್ರಾಣ ಬಿಡುತ್ತಿದ್ದಾರೆ. ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪುಂಡನೊಬ್ಬ ಬೇಕಾಬಿಟ್ಟಿ ತಿರುಗಾಡಿದ್ದು, ಬೈಕ್ ಸೀಜ್ ಮಾಡಿದ್ದಕ್ಕೆ ಶಾಸಕರ ಹೆಸರು ಹೇಳಿ ಪಿಎಸ್‍ಐಗೆ ನಡು ರಸ್ತೆಯಲ್ಲೇ ಅವಾಜ್ ಹಾಕಿದ್ದಾನೆ.

    ನಗರದ ಡಿಗ್ರಿ ಕಾಲೇಜು ವೃತ್ತದಲ್ಲಿ ಈ ಘಟನೆ ನಡೆದಿದ್ದು, ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿ ಸಂಚಾರ ಮಾಡುತ್ತಿದ್ದವರ ಬೈಕ್ ಗಳನ್ನು ಟ್ರಾಫಿಕ್ ಪಿಎಸ್‍ಐ ಪ್ರದೀಪ್ ಮತ್ತು ಸಿಬ್ಬಂದಿ ಸೀಜ್ ಮಾಡುತ್ತಿದ್ದರು. ಈ ವೇಳೆ ಕೆಂಡಾಮಂಡಲವಾದ ಓರ್ವ ಬೈಕ್ ಸವಾರ ಪೊಲೀಸರಿಗೆ ಮನಬಂದಂತೆ ನಿಂಧಿಸಿದ್ದಾನೆ.

    ಇಷ್ಟಕ್ಕೆ ಸುಮ್ಮನಾಗದ ಬೈಕ್ ಸವಾರ, ಯಾದಗಿರಿ ಶಾಸಕರ ಹೆಸರು ಹೇಳಿ ಅವಾಜ್ ಹಾಕಿದ್ದಾನೆ. ಶಾಸಕರಿಗೆ ಹೇಳುತ್ತೇನೆ ಎಂದು ಬೇಕಾಬಿಟ್ಟಿ ಮಾತನಾಡಿದ್ದಾನೆ. ಬೈಕ್ ಸವಾರನ ವರ್ತನೆಗೆ ಬೇಸತ್ತ ಸಿಬ್ಬಂದಿ ಆತನ ಜೊತೆಗೆ ವಾಗ್ವಾದಕ್ಕಿಳಿದ್ದಾರೆ. ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂಧಿಸಿಕೊಂಡಿದ್ದಾರೆ.

  • ಸೀಜ್ ಮಾಡಿ ಠಾಣೆಯಲ್ಲಿಟ್ಟಿದ್ದ 1,459 ಬಾಕ್ಸ್ ಮದ್ಯ ನಾಪತ್ತೆ- ಇಲಿ ಕಾರಣವೆಂದ ಪೊಲೀಸರು

    ಸೀಜ್ ಮಾಡಿ ಠಾಣೆಯಲ್ಲಿಟ್ಟಿದ್ದ 1,459 ಬಾಕ್ಸ್ ಮದ್ಯ ನಾಪತ್ತೆ- ಇಲಿ ಕಾರಣವೆಂದ ಪೊಲೀಸರು

    – 35 ಲಕ್ಷ ರೂ. ಬೆಲೆಬಾಳುವ ಮದ್ಯ ಕಾಣೆ

    ಲಕ್ನೋ: ಸೀಜ್ ಮಾಡಿ ಪೊಲೀಸ್ ಠಾಣೆಯಲ್ಲಿರಿಸಿದ್ದ 1,459 ಬಾಕ್ಸ್ ಅಕ್ರಮ ಮದ್ಯ ಕಾಣೆಯಾಗಲು ಇಲಿಗಳು ಕಾರಣ ಎಂದು ಪೊಲೀಸರು ದೂರಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ.

    ಇಟಾ ಜಿಲ್ಲೆಯ ಕೊತ್ವಾಲಿ ದೇಹತ್ ಪೊಲೀಸ್ ಠಾಣೆಯಲ್ಲಿದ್ದ 1,459 ಅಕ್ರಮ ಮದ್ಯದ ಬಾಕ್ಸ್ ಗಳು ಕಾಣೆಯಾಗಿದ್ದು, ಇದೆಲ್ಲವನ್ನೂ ಪೊಲೀಸರು ಸೀಜ್ ಮಾಡಿ ಠಾಣೆಯಲ್ಲಿಟ್ಟುಕೊಂಡಿದ್ದರು. ಆದರೆ ಇದೀಗ ಮದ್ಯದ ಎಲ್ಲ ಬಾಕ್ಸ್ ಗಳು ಕಾಣೆಯಾಗಿವೆ. ಈ ಬಗ್ಗೆ ಪೊಲೀಸರನ್ನು ಕೇಳಿದರೆ ಇದೆಲ್ಲದಕ್ಕೂ ಇಲಿಗಳೇ ಕಾರಣ, ಬಾಕ್ಸ್ ಗಳನ್ನು ಕಚ್ಚಿ ಹಾಳು ಮಾಡಿವೆ ಎಂದು ಹೇಳಿದ್ದಾರೆ.

    ಅಕ್ರಮ ಮದ್ಯ ತುಂಬಿದ್ದ ಪ್ಲಾಸ್ಟಿಕ್ ಕ್ಯಾನ್‍ಗಳನ್ನು ಇಲಿಗಳು ಕಚ್ಚಿದ್ದು, ಗಾಜಿನ ಬಾಟಲಿ ಒಡೆದು, ಇತರ ಹಾನಿಗೊಳಗಾದ ಚೀಲಗಳನ್ನು ಹರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಗ್ರಾ ವಲಯದ ಎಡಿಜಿ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದು, ಅಲೀಘರ್ ಐಪಿಎಸ್ ಅಧಿಕಾರಿಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಬರೋಬ್ಬರಿ 35 ಲಕ್ಷ ರೂ. ಬೆಲೆಬಾಳುವ ಮದ್ಯ ಕಾಣೆಯಾಗಿದೆ ಎಂದು ಅಂದಾಜಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಗ್ಯಾಂಗ್‍ಸ್ಟರ್ ಬಂಟು ಯಾದವ್‍ಗೆ ಪೊಲೀಸರು ಮದ್ಯವನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಫೇಕ್ ಢಾಬಾ ಎನ್‍ಕೌಂಟರ್ ಕೇಸ್‍ಗೆ ಸಂಬಂಧಿಸಿದಂತೆ ಯಾದವ್‍ನನ್ನು ಶುಕ್ರವಾರ ಬಂಧಿಸಲಾಗಿದೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಭಾ ಚಹಲ್ ಹಾಗೂ ಎಸ್‍ಎಸ್‍ಪಿ ಸುನಿಲ್ ಸಿಂಗ್ ಅವರು ಸರ್ಪ್ರೈಸ್ ಇನ್‍ಸ್ಪೆಕ್ಷನ್‍ಗೆ ಠಾಣೆಗೆ ಆಗಮಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. 1,459 ಬಾಕ್ಸ್ ಮದ್ಯ ಕಾಣೆಯಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಎಸ್‍ಎಚ್‍ಒ ಇಂದ್ರೇಶ್‍ಪಾಲ್ ಸಿಂಗ್ ಹಾಗೂ ಪ್ರಧಾನ ಕ್ಲರ್ಕ್ ರಸಾಲ್ ಸಿಂಗ್ ಪ್ರಕರಣದ ಕುರಿತು ವಿವರಿಸುವಲ್ಲಿ ವಿಫಲರಾಗಿದ್ದಾರೆ.

    ಬಳಿಕ ಎಸ್‍ಎಚ್‍ಒ ಹಾಗೂ ಕ್ಲರ್ಕ್ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಇಬ್ಬರನ್ನು ಅಮಾನತು ಮಾಡಲಾಗಿದೆ. ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಸೆಕ್ಷನ್ 409(ನಂಬಿಕೆ ಇರಿಸಿದ್ದ ಸಾರ್ವಜನಿಕ ಸೇವೆಯಲ್ಲಿರುವವರಿಂದ ಅಪರಾಧ ಕೃತ್ಯ), ಭ್ರಷ್ಟಾಚಾರ ತಡೆ ಕಾಯ್ದೆ, ಎಕ್ಸೈಜ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಎಸ್‍ಎಚ್‍ಒ ತಲೆಮರೆಸಿಕೊಂಡಿದ್ದಾರೆ.

    ಈ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, 239 ಬಾಕ್ಸ್ ಗಳನ್ನು ಇಲಿಗಳು ಡ್ಯಾಮೇಜ್ ಮಾಡಿವೆ ಎಂದು ಪೊಲೀಸ್ ಜನರಲ್ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಈ ವಿಷಯ ಬಾಲಿಶ ಎನ್ನಿಸುತ್ತದೆ. ಕೃತ್ಯವನ್ನು ಮುಚ್ಚಿಡಲು ಈ ರೀತಿ ಉಲ್ಲೇಖಿಸಲಾಗಿದೆ ಎಂದು ಭಾಸವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

  • ಪರಿಸರ ಮಾಲಿನ್ಯದ ದೂರು- ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗ ಮುದ್ರೆ

    ಪರಿಸರ ಮಾಲಿನ್ಯದ ದೂರು- ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗ ಮುದ್ರೆ

    ಬಳ್ಳಾರಿ: ಭಾರೀ ಪ್ರಮಾಣದಲ್ಲಿ ಹೊಗೆ ಹೊರಸೂಸುವುದು ಹಾಗೂ ಧೂಳಿನಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿತ್ತು. ಹೀಗಾಗಿ ಹೆಚ್ಚು ದೂರು ಕೇಳಿ ಬರುತ್ತಿದ್ದವು. ಈ ಹಿನ್ನೆಲೆ ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗ ಜಡಿಯಲಾಯಿತು.

    ಜಿಲ್ಲೆಯ ಸಂಡೂರು ತಾಲೂಕಿನ ಸುಲ್ತಾನಪುರ ಗ್ರಾಮದ ಬಳಿಯಿರುವ ಪದ್ಮಾವತಿ ಸ್ಪಾಂಜ್ ಐರನ್ ಮತ್ತು ಜೆಎಸ್ ಡಬ್ಲ್ಯು ಪ್ರಾಜೆಕ್ಟ್ ಫ್ಯಾಕ್ಟರಿಗಳಿಗೆ ಬೀಗ ಜಡಿಯಲಾಗಿದೆ. ಸುಲ್ತಾನಪುರ ಗ್ರಾಮದ ಯುವಕ ಕೆ.ಎಸ್.ಜಂಬಯ್ಯ ನೀಡಿದ್ದ ದೂರಿನ ಮೇರೆಗೆ ಸಂಡೂರು ತಹಶೀಲ್ದಾರ್ ಹೆಚ್.ಜೆ.ರಶ್ಮಿ ನೇತೃತ್ವದ ತಂಡ ಬೀಗ ಜಡಿದಿದೆ. ಸೋಮವಾರ ಫ್ಯಾಕ್ಟರಿಗಳಿಗೆ ತೆರಳಿ ತಹಶೀಲ್ದಾರ್ ತಂಡ ಪರಿಶೀಲನೆ ನಡೆಸಿದ್ದು, ಈ ವೇಳೆ ಫ್ಯಾಕ್ಟರಿಗಳಿಂದ ಪರಿಸರ ಮಾಲಿನ್ಯ ಉಂಟಾಗುವುದು ತಿಳಿದಿದೆ. ಈ ಹಿನ್ನೆಲೆ ಎರಡೂ ಫ್ಯಾಕ್ಟರಿಗಳಿಗೆ ಬೀಗಮುದ್ರೆ ಜಡಿದಿದ್ದಾರೆ.

    ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಸೂಚನೆಯ ಮೇರೆಗೆ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಹಾಗೂ ಸಂಡೂರು ತಹಶೀಲ್ದಾರ್ ರಶ್ಮಿ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಫ್ಯಾಕ್ಟರಿಗಳನ್ನು ಸೀಜ್ ಮಾಡಿರುವುದಕ್ಕೆ ಸುತ್ತ ಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಾಲಿನ್ಯಕಾರಕ ಕಾರ್ಖಾನೆಗಳನ್ನು ಮುಚ್ಚಿಸಿರುವ ರಾಜ್ಯ ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮ ನನಗೂ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಸಂತಸ ತಂದಿದೆ. ಭವಿಷ್ಯದಲ್ಲಿ ಸರ್ಕಾರ ಮಾಲಿನ್ಯಕಾರಕ ಕಾರ್ಖಾನೆಗಳನ್ನು ತೆರೆಯಲು ಅವಕಾಶ ಕೊಡಬಾರದು. ಇಂತಹ ಕಾರ್ಖಾನೆಗಳಿಂದ ಈಗಾಗಲೇ ಪರಿಸರ, ರೈತರ ಬೆಳೆಗಳು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಈ ಬಗ್ಗೆ ಕೂಡಲೇ ತಜ್ಞರ ತಂಡ ರಚಿಸಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಹಾಳಾಗಿರುವ ಪರಿಸರವನ್ನು ಮರು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸುಲ್ತಾನಪುರ ಗ್ರಾಮದ ಜನ ಆಗ್ರಹಿಸಿದ್ದಾರೆ.

  • ಮಾಧ್ಯಮದವರನ್ನು ಇಟ್ಕೊಂಡು ಹೀಗೆಲ್ಲಾ ಮಾತಾಡಿದ್ರೆ ನನಗೆ ಕೋಪ ಬರುತ್ತೆ: ಜಯಮಾಲಾ

    ಮಾಧ್ಯಮದವರನ್ನು ಇಟ್ಕೊಂಡು ಹೀಗೆಲ್ಲಾ ಮಾತಾಡಿದ್ರೆ ನನಗೆ ಕೋಪ ಬರುತ್ತೆ: ಜಯಮಾಲಾ

    ಉಡುಪಿ: ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ವೇಳೆ ಮಾಧ್ಯಮದವರನ್ನು ಇಟ್ಕೊಂಡು ಹೀಗೆಲ್ಲಾ ಮಾತನಾಡಿದರೆ ನನಗೆ ಕೋಪ ಬರುತ್ತದೆ ಎಂದು ಉಡುಪಿಯ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದ್ದಾರೆ.

    ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ `ಗಾಂಧಿ 150′ ಹೆಸರಿನ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಭಾರತ್ ಬಂದ್ ವೇಳೆ ಪೊಲೀಸರಿಂದ ಲಾಠಿಚಾರ್ಚ್ ಗೆ ಒಳಗಾಗಿದ್ದ ಪಕ್ಷದ ಕಾರ್ಯಕರ್ತರ ನೋವನ್ನು ಕೇಳಿಲ್ಲ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿವೆ ಜಯಮಾಲಾಗೆ ಮುತ್ತಿಗೆ ಹಾಕಿದರು.

    ಉಡುಪಿಯ ಎಸ್ಪಿಯನ್ನು ಎತ್ತಂಗಡಿ ಮಾಡಿಸಲು ಹಲವು ಬಾರಿ ಹೇಳಿದರೂ ಎತ್ತಂಗಡಿ ಮಾಡಿಸಿಲ್ಲ. ಆಸ್ಪತ್ರೆಗೆ ದಾಖಲಾದವರ ಆರೋಗ್ಯವನ್ನು ವಿಚಾರಿಸಿಲ್ಲ. ಆದರೆ ಗಣಪತಿ ಕೂರಿಸಿದ್ದ ಎಸ್ಪಿ ಮನೆಗೆ ನೀವು ಊಟಕ್ಕೆ ಹೋಗಿದ್ದು ಎಷ್ಟು ಸರಿ ಎಂದು ಎಂದು ಕಾಂಗ್ರೆಸ್ ಕಾರ್ಯಕತ್ರರು ಆಕ್ರೋಶಗೊಂಡು ಜಯಮಾಲಾ ಅವರನ್ನು ಪ್ರಶ್ನಿಸಿದ್ದಾರೆ.

    ಮಾಧ್ಯಮಗಳ ಮುಂದೆ ನಿಂತು ಈ ರೀತಿಯ ಡ್ರಾಮಾ ಮಾಡಬೇಡಿ. ಈ ರೀತಿ ಹೇಳಿದ್ರೆ ನನಗೆ ಕೋಪ ಬರುತ್ತದೆ ಎಂದು ಜಯಾಮಾಲ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿ ಕಾಂಗ್ರೆಸ್ ಭವನದಿಂದ ಹೊರಬಂದು ಕಾರು ಹತ್ತಿ ಕಾಲ್ಕಿತ್ತರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಗಸ್ಟ್ 2ರಂದು ವಿಧಾನಸೌಧಕ್ಕೆ ಮುತ್ತಿಗೆ: ವಾಟಾಳ್

    ಆಗಸ್ಟ್ 2ರಂದು ವಿಧಾನಸೌಧಕ್ಕೆ ಮುತ್ತಿಗೆ: ವಾಟಾಳ್

    ಬೆಂಗಳೂರು: ಉತ್ತರ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಸಭೆ ನಡೆಸುವಂತೆ ಆಗ್ರಹಿಸಿ ಆಗಸ್ಟ್ 2ರಂದು ವಿಧಾನಸಭೆಗೆ ಮುತ್ತಿಗೆ ಹಾಕುವುದಾಗಿ ಕನ್ನಡ ಒಕ್ಕೂಟ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

    ಪ್ರತ್ಯೇಕ ರಾಜ್ಯ ಕುರಿತು ಪ್ರತಿಕ್ರಿಯಿಸಿದ ಅವರು, ಇದೇ ಆಗಸ್ಟ್ 2ರಂದು ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಸಭೆ ನಡೆಸುವಂತೆ ಆಗ್ರಹಿಸಿ ಕನ್ನಡ ಒಕ್ಕೂಟದಿಂದ ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುತ್ತಿರುವವನ್ನು ಖುದ್ದು ಭೇಟಿ ಮಾಡಿ ಹೋರಾಟ ಕೈಬಿಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

    ಸರ್ಕಾರ ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕುಮಾರಸ್ವಾಮಿಯವರು ಹುಬ್ಬಳ್ಳಿ ಭಾಗಕ್ಕೆ ಹೋಗಿ ಹಾದಿ ಬೀದಿಯಲ್ಲಿ ಚರ್ಚೆ ಮಾಡೋದಲ್ಲ. ಉತ್ತರ ಕರ್ನಾಟಕಕ್ಕೆ ವಿಶೇಷ ಅಧಿವೇಶನ ನಡೆಸಿ, ಸಮಸ್ಯೆಯ ಬಗ್ಗೆ ವಿಸ್ತೃತ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

  • ವಿಧಾನಸೌಧ ಮುತ್ತಿಗೆ ಹಾಕಲು ಮುಂದಾದ ಹೋಂಗಾರ್ಡ್ ಗಳಿಗೆ ಗೃಹ ಬಂಧನ

    ವಿಧಾನಸೌಧ ಮುತ್ತಿಗೆ ಹಾಕಲು ಮುಂದಾದ ಹೋಂಗಾರ್ಡ್ ಗಳಿಗೆ ಗೃಹ ಬಂಧನ

    ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ಗೃಹ ರಕ್ಷಕ ದಳ (ಹೋಂಗಾರ್ಡ್ಸ್) ಸಿಬ್ಬಂದಿಯನ್ನು ಅಧಿಕಾರಿಗಳು ಸಿಎಆರ್ ಗ್ರೌಂಡ್‍ನಲ್ಲಿ ಕೂಡಿ ಹಾಕಿದ್ದಾರೆ.

    ಇಂದು ಅಧಿವೇಶನ ಪ್ರಾರಂಭವಾಗಿದ್ದರಿಂದ ರಾಮನಗರ, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ 25 ಸಾವಿರ ಜನ ಗೃಹ ರಕ್ಷಕ ಸಿಬ್ಬಂದಿ ಬೆಂಗಳೂರಿಗೆ ಆಗಮಿಸಿದ್ದಾರೆ. 3-4 ತಿಂಗಳಿನಿಂದ ಸರಿಯಾಗಿ ಸಂಬಳವಾಗುತ್ತಿಲ್ಲ. ಅಷ್ಟೇ ಅಲ್ಲದೆ ತೀರಾ ಕಡಿಮೆ ಸಂಬಳಕ್ಕೆ ದುಡಿಯಬೇಕಿದೆ. ಹೀಗಾಗಿ ವೇತನ ಹೆಚ್ಚಳ, ಶಾಶ್ವತ ಉದ್ಯೋಗ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು.

    ಸದ್ಯ ಅಧಿಕಾರಿಗಳು 1.5 ಸಾವಿರ ಗೃಹರಕ್ಷಕ ಸಿಬ್ಬಂದಿಯನ್ನು ಸಿಎಆರ್ ಗ್ರೌಂಡ್‍ನಲ್ಲಿ ಇರಿಸಿ ಪರೇಡ್ ಮಾಡಿಸುತ್ತಿದ್ದಾರೆ. ಅಲ್ಲದೇ ಇನ್ನುಳಿದವರನ್ನು ಬೇರೊಂದು ಕಡೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.