Tag: Sidlaghatta

  • ಹದಿಹರೆಯದ ವಯಸ್ಸಲ್ಲೇ ಪ್ರೀತಿ, ಪ್ರೇಮ – ಒಂದೇ ಹಗ್ಗಕ್ಕೆ ನೇಣು ಬಿಗಿದು ಅಪ್ರಾಪ್ತ ಪ್ರೇಮಿಗಳ ಆತ್ಮಹತ್ಯೆ

    ಹದಿಹರೆಯದ ವಯಸ್ಸಲ್ಲೇ ಪ್ರೀತಿ, ಪ್ರೇಮ – ಒಂದೇ ಹಗ್ಗಕ್ಕೆ ನೇಣು ಬಿಗಿದು ಅಪ್ರಾಪ್ತ ಪ್ರೇಮಿಗಳ ಆತ್ಮಹತ್ಯೆ

    – ಜೈಲಿನಿಂದ ಬಂದು ಪ್ರೇಯಸಿ ಜೊತೆ ಯುವಕ ಸೂಸೈಡ್
    – ಶಾಲೆಯಿಂದಲೇ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದ ವಿದ್ಯಾರ್ಥಿನಿ

    ಚಿಕ್ಕಬಳ್ಳಾಪುರ: ಹದಿಹರೆಯದ ವಯಸ್ಸಲ್ಲೇ ಪ್ರೀತಿ-ಪ್ರೇಮ-ಪ್ರಣಯ ಅಂತಾ ಸುತ್ತಾಡಿದ ಜೋಡಿ ಕೊನೆಗೆ ಒಂದೇ ಹಗ್ಗದಲ್ಲಿ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ (Sidlaghatta) ತಾಲೂಕಿನ ಚಿಕ್ಕದಾಸೇನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಮೂಲತಃ ಚಿಂತಾಮಣಿ (Chintamani) ತಾಲೂಕಿನ ಸೀತಾರಾಮಪುರ ಗ್ರಾಮದ ವಂದನಾ ಹಾಗೂ ನವೀನ್ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇವರಿಬ್ಬರು ಒಂದೇ ಗ್ರಾಮದವರಾಗಿದ್ದು, ಹದಿಹರೆಯದ ವಯಸ್ಸಲ್ಲಿ ಪರಸ್ಪರ ಪ್ರೀತಿಸಿ (Love) ಮನೆ ಬಿಟ್ಟು ಹೋಗಿದ್ದರು. ಈ ಸಂಬಂಧ 4 ತಿಂಗಳ ಹಿಂದೆಯೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಬಿಡಲಾಗಿತ್ತು. ಇನ್ನು ಯುವಕನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದನ್ನೂ ಓದಿ: PUBLiC TV Impact | ಅರೆಹೊಟ್ಟೆಯಲ್ಲಿ ಪರದಾಡಿದ್ದ ವಿದ್ಯಾರ್ಥಿನಿಯರ ಶಾಲೆಗೆ ತಲುಪಿದ ಆಹಾರ ಸಾಮಗ್ರಿ

    ಸಾಂತ್ವನ ಕೇಂದ್ರದಲ್ಲಿದ್ದ ಬಾಲಕಿ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಎರಡು ದಿನಗಳ ಹಿಂದೆ ಜೈಲಿನಿಂದ ಜಾಮೀನಿನ ಮೇರೆಗೆ ಬಿಡುಗಡೆಯಾಗಿ ಬಂದಿದ್ದ ಯುವಕ ಶಾಲೆಯ ಬಳಿ ಬಂದು ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗ್ರಾಹಕರಿಗೆ ಬೆಲೆ ಏರಿಕೆ ಮಾಡಿ ರೈತರಿಗೂ ಸಿದ್ದರಾಮಯ್ಯ ಸರ್ಕಾರ ಮೋಸ ಮಾಡ್ತಿದೆ: ಹೆಚ್‌ಡಿಕೆ ಕಿಡಿ

  • ಅಮ್ಮನ ಸಾವಿನ ಅಗಲಿಕೆಯಿಂದ ಮನನೊಂದು ಅಣ್ಣ, ತಂಗಿ ಆತ್ಮಹತ್ಯೆ

    ಅಮ್ಮನ ಸಾವಿನ ಅಗಲಿಕೆಯಿಂದ ಮನನೊಂದು ಅಣ್ಣ, ತಂಗಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಅಮ್ಮನ ಸಾವಿನ ನೋವು ತಾಳಲಾರದೇ ಅಣ್ಣ (Brother) ಮತ್ತು ತಂಗಿ (Sister) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ (Suicide) ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ.

    ಶಿಡ್ಲಘಟ್ಟ ನಗರದ ಶೆಟ್ಟಪ್ಪನ ತೋಪಿನ ಬಳಿಯ ರೈಲ್ವೇ ಹಳಿಗಳ ಬಳಿ ಘಟನೆ ನಡೆದಿದ್ದು, ಮೃತರು ಅಣ್ಣ ಪ್ರಭು ಮತ್ತು ತಂಗಿ ನವ್ಯ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸೈನಿಕರಿಗೆ ಸೆಲ್ಯೂಟ್‌: ಕೇವಲ 16 ಗಂಟೆಯಲ್ಲಿ 24 ಟನ್‌ ಸಾಮರ್ಥ್ಯದ 190 ಅಡಿ ಉದ್ದದ ಸೇತುವೆ ರೆಡಿ!

     

    ಶಿಡ್ಲಘಟ್ಟದ ಪ್ರೇಮ ನಗರದ ನಿವಾಸಿಗಳಾಗಿರುವ ಪ್ರಭು ಮತ್ತು ನವ್ಯ ಆತ್ಮಹತ್ಯೆ ಶರಣಾಗುವ ಮುನ್ನ ಒಬ್ಬರ ಕೈಯನ್ನು ಒಬ್ಬರು ದಾರದಿಂದ ಕಟ್ಟಿಕೊಂಡು ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿದ್ದಾರೆ.

    ಇತ್ತೀಚೆಗೆ ತಾಯಿಯ ಮರಣದಿಂದ ಮಾನಸಿಕವಾಗಿ ಜರ್ಜರಿತರಾಗಿದ್ದ ಇಬ್ಬರು ತಾಯಿಯ ಸಾವಿನ ಅಗಲಿಕೆಯ ನೋವು ತಾಳಲಾರದೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯ ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

  • ಒವರ್ ಟೇಕ್ ಮಾಡಲೋಗಿ ಕ್ಯಾಂಟರ್‌ಗಳ ನಡುವೆ ಡಿಕ್ಕಿ – ಚಾಲಕರಿಗೆ ಗಂಭೀರ ಗಾಯ

    ಒವರ್ ಟೇಕ್ ಮಾಡಲೋಗಿ ಕ್ಯಾಂಟರ್‌ಗಳ ನಡುವೆ ಡಿಕ್ಕಿ – ಚಾಲಕರಿಗೆ ಗಂಭೀರ ಗಾಯ

    ಚಿಕ್ಕಬಳ್ಳಾಪುರ: ಓವರ್ ಟೇಕ್ (Over take) ಮಾಡಲು ಹೋಗಿ ಎರಡು ಕ್ಯಾಂಟರ್‌ಗಳ (Canter) ನಡುವೆ ಡಿಕ್ಕಿಯಾಗಿ, ಕ್ಯಾಂಟರ್ ಚಾಲಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಅಮ್ಮನ ಕೆರೆಯ ಕಟ್ಟೆ ಮೇಲೆ ಭಾನುವಾರ (ಜ.28) ನಡೆದಿದೆ.

    ಶಿಡ್ಲಘಟ್ಟ-ಚಿಕ್ಕಬಳ್ಳಾಪುರ (Sidlaghatta-Chikkaballapur) ಮಾರ್ಗದಲ್ಲಿರುವ ಅಮ್ಮನ ಕೆರೆ ಕಟ್ಟೆಮೇಲೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಎರಡು ಕ್ಯಾಂಟರ್ ಚಾಲಕರು ಜಿದ್ದಿಗೆ ಬಿದ್ದವರಂತೆ ಪರಸ್ಪರ ಓವರ್ ಟೇಕ್ ಮಾಡಲು ಅತೀ ವೇಗವಾಗಿ ಕ್ಯಾಂಟರ್ ಚಾಲನೆ ಮಾಡಿದ್ದಾರೆ. ಈ ವೇಳೆ ಓವರ್ ಸ್ಪೀಡ್‌ನಿಂದ ಡಿವೈಡರ್‌ಗೆ ಡಿಕ್ಕಿ ಹೊಡೆದು, ಮುಗ್ಗರಿಸಿ ನೆಲಕ್ಕುರುಳಿವೆ. ಇದನ್ನೂ ಓದಿ: ಹೃದಯಾಘಾತ – ಮಾಜಿ ಶಾಸಕ ನಾಗನಗೌಡ ಕಂದಕೂರು ನಿಧನ

    ಅದೃಷ್ಟವಶಾತ್ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸ್ನೇಹಿತನ ಮೇಲೆ ಹಲ್ಲೆ – ಪ್ರಶ್ನೆ ಮಾಡಿದಕ್ಕೆ ಕುಚಿಕುಗಳಿಂದಲ್ಲೇ ಕೊಲೆ

    ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಿಡ್ಲಘಟ್ಟ ತಾಲೂಕಿನ ಪೊಲೀಸರು ಪ್ರಕರಣ ಕುರಿತು ದೂರು ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೂ ಅಧಿಕಾರ – ಡಿಕೆ ಶಿವಕುಮಾರ್

  • ಪ್ರೀತಿಗೆ ವಯಸ್ಸಿನ ಗಡಿ ಇಲ್ಲ – 30ರ ಯುವತಿಗೆ ತಾಳಿ ಕಟ್ಟಿದ 60ರ ವರ

    ಪ್ರೀತಿಗೆ ವಯಸ್ಸಿನ ಗಡಿ ಇಲ್ಲ – 30ರ ಯುವತಿಗೆ ತಾಳಿ ಕಟ್ಟಿದ 60ರ ವರ

    ಚಿಕ್ಕಬಳ್ಳಾಪುರ: ಪ್ರೀತಿಗೆ ಯಾವುದೇ ಗಡಿ ಇಲ್ಲ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಅದರಂತೆ ವಯಸ್ಸಿನ ಗಡಿಯೂ ಇಲ್ಲ ಎಂಬುದು ಇದೀಗ ಸಾಬೀತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಿಕ್ಕಬಳ್ಳಾಪುರದಲ್ಲಿ (Chikkaballapur) 65 ವರ್ಷದ ವರ 30 ವರ್ಷದ ಯುವತಿಯನ್ನು ಮದುವೆಯಾಗಿರುವುದು (Marriage) ವರದಿಯಾಗಿದೆ.

    ಅಪರೂಪದ ಜೋಡಿ ಜಿಲ್ಲೆಯ ಶಿಡ್ಲಘಟ್ಟದ (Sidlaghatta) ಅಪ್ಪೇಗೌಡನಹಳ್ಳಿ ಗೇಟ್‍ನ ಬಯಲಾಂಜನೇಯ ಸ್ವಾಮಿ ದೇವಾಲಯದ ಬಳಿ ಮದುವೆಯಾಗಿದ್ದಾರೆ. ಈರಣ್ಣ ಹಾಗೂ ಅನು ಮದುವೆಯಾಗಿರುವ ನವ ದಂಪತಿಯಾಗಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಮನೆಯ ಅಂಗಳಕ್ಕೆ ಎಂಟ್ರಿ ಕೊಟ್ಟ ಗಜ

    ಆರು ತಿಂಗಳ ಹಿಂದೆ ಈರಣ್ಣ ಅವರ ಪತ್ನಿ ತೀರಿಕೊಂಡಿದ್ದರು. ಇದರಿಂದ ಸಂಗಾತಿ ಇಲ್ಲದ ಕೊರತೆಯನ್ನು ತುಂಬಿಕೊಳ್ಳಲು ಅವರು ಮರು ಮದುವೆಯಾಗಿದ್ದಾರೆ. ವಿಶೇಷ ದಂಪತಿಗೆ ಗ್ರಾಮಸ್ಥರು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಭಾರತ, ಅಮೆರಿಕದ ನಡುವೆ ದ್ವಿಪಕ್ಷೀಯ ಮಾತುಕತೆ – ಮೋದಿ, ಬೈಡೆನ್ ಮಧ್ಯೆ ಏನು ಚರ್ಚೆ ನಡೆದಿದೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತನಗಿಂತ 2 ವರ್ಷ ಕಿರಿಯವನನ್ನ ಪ್ರೀತಿಸಿ ಮದ್ವೆಯಾಗಿದ್ದ ವಿವಾಹಿತೆ ಆತ್ಮಹತ್ಯೆ

    ತನಗಿಂತ 2 ವರ್ಷ ಕಿರಿಯವನನ್ನ ಪ್ರೀತಿಸಿ ಮದ್ವೆಯಾಗಿದ್ದ ವಿವಾಹಿತೆ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಕುಟುಂಬದವರ ವಿರೋಧದ ನಡುವೆಯೂ ತನಗಿಂತ ಎರಡು ವರ್ಷ ಕಿರಿಯವನನ್ನ ಪ್ರೀತಿಸಿ ಮದುವೆಯಾಗಿದ್ದ (Marriage) ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದಿದೆ.

    ಶಿಡ್ಲಘಟ್ಟ ನಗರದ (Sidlaghatta City) ಮಯೂರ ವೃತ್ತದ ಬಳಿ ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ವಿವಾಹಿತೆ ನಾಗಮಣಿ (23) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಬಿಜೆಪಿಗರು ಪ್ರಾಮಾಣಿಕರಾಗಿದ್ದರೆ ನ್ಯಾಯಾಂಗ ತನಿಖೆ ಬಗ್ಗೆ ಭಯವೇಕೆ? – ಡಿಕೆಶಿ ಪ್ರಶ್ನೆ

    ಖಾಸಗಿ ಕ್ಲಿನಿಕ್ ಒಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಜಾತವಾರಹೊಸಹಳ್ಳಿ ಗ್ರಾಮದ ನಾಗಮಣಿ, ಕಳೆದ ಒಂದೂವರೆ ವರ್ಷದ ಹಿಂದೆ ತಾತಹಳ್ಳಿ ಗ್ರಾಮದ ಪವನ್ (21) ಎಂಬಾತನನ್ನ ಪ್ರೀತಿಸಿ ಮದುವೆಯಾಗಿದ್ದಳು. ಪವನ್ ಕುಟುಂಬದವರು ಯುವತಿ ಬೇರೆ ಸಮುದಾಯ ಎಂಬ ಕಾರಣಕ್ಕೆ ಮನೆಗೆ ಸೇರಿಸಿರಲಿಲ್ಲ. ಹೀಗಾಗಿ ಇಬ್ಬರು ಶಿಡ್ಲಘಟ್ಟ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ಮಧ್ಯೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು, ಇಂದು ಮಹಿಳೆ ನೇಣಿಗೆ ಶರಣಾಗಿದ್ದಾಳೆ.

    ಶಿಡ್ಲಘಟ್ಟ ಪೊಲೀಸರು ಮೃತದೇಹವನ್ನ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಆದ್ರೆ ಯುವತಿ ಹಾಗೂ ಯುವಕನ ಕಡೆಯವರು ರಾಜೀ ಪಂಚಾಯತಿಗೆ ಮಾತುಕತೆ ನಡೆಸಿದ್ದಾರೆ. ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಲಕ್ಷ್ಮಿ ಹೆಬ್ಬಾಳ್ಕರ್

    Web Stories

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರವಿ ಕುಮಾರ್ ಶಾಸಕರಾಗುವುದು ಸತ್ಯ, ಕುಮಾರಸ್ವಾಮಿ ಸಿಎಂ ಆಗೋದು ಅಷ್ಟೇ ಸತ್ಯ: ಹೆಚ್‌ಡಿಡಿ

    ರವಿ ಕುಮಾರ್ ಶಾಸಕರಾಗುವುದು ಸತ್ಯ, ಕುಮಾರಸ್ವಾಮಿ ಸಿಎಂ ಆಗೋದು ಅಷ್ಟೇ ಸತ್ಯ: ಹೆಚ್‌ಡಿಡಿ

    ಚಿಕ್ಕಬಳ್ಳಾಪುರ: ಶಿಡ್ಲಘಟ್ಟ (Sidlaghatta) ವಿಧಾನಸಭಾ ಕ್ಷೇತ್ರದಿಂದ ಮೇಲೂರು ರವಿಕುಮಾರ್ ಶಾಸಕರಾಗೋದು ಸತ್ಯ. ಅದೇ ರಿತಿ ಕುಮಾರಸ್ವಾಮಿ (H.D.Kumaraswamy) ಸಹ ಸಿಎಂ ಆಗೋದು ಅಷ್ಟೇ ಸತ್ಯ. ಆ ದಿನ ನೋಡೋಕೆ ನಾನು ಕಾಯುತ್ತಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (H.D.Deve Gowda) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಶಿಡ್ಲಘಟ್ಟ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಮೋದಿ ಯಾಕೆ ಎರಡು ದಿನ ರೋಡ್ ಶೋ ಮಾಡುತ್ತಿದ್ದಾರೆ? ಇದೇನು ಪಾರ್ಲಿಮೆಂಟ್ ಚುನಾವಣೆನಾ? ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿ ಕುಂದಿದೆ ಎಂದು ಮೋದಿಯವರಿಗೆ (Narendra Modi) ಅರ್ಥ ಆಗಿದೆ. ಹಾಗಾಗಿ ಎರಡು ದಿನ ರೋಡ್ ಶೋ ಮಾಡುತ್ತಿದ್ದಾರೆ. ಮೋದಿಯವರು ರೋಡ್ ಶೋ ಮಾಡಿ ಜನರನ್ನು ಮರಳು ಮಾಡಲು ಆಗಲ್ಲ. ದೇಶದಲ್ಲಿ ಬಿಜೆಪಿ (BJP) ಆಡಳಿತದ ಯಾವ ರಾಜ್ಯದಲ್ಲಿ ಮುಸ್ಲಿಂ ಮುಖ್ಯಮಂತ್ರಿ ಇದ್ದಾರೆ ತೋರಿಸಿ. ನಾನು ಮುಸ್ಲಿಂಗೆ ರಿಸರ್ವೇಶನ್ ಕೊಟ್ಟೆ. ನಾವು ಭಾರತಾಂಬೆಯ ಮಕ್ಕಳು. ಯಾಕೆ ಈ ತಾರತಮ್ಯ ಎಂದು ಕಿಡಿಕಾರಿದರು. ಇದನ್ನೂ ಓದಿ: ಖರ್ಗೆ ಹತ್ಯೆಗೆ ಸಂಚು ಆಡಿಯೋ ಬಾಂಬ್‌ – ಸಿಎಂ ಬೊಮ್ಮಾಯಿ ಹೇಳಿದ್ದೇನು?

    ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಕಾಂಗ್ರೆಸ್ (Congress) ಮುಖಂಡರು. ಅವರು ಕುಮಾರಸ್ವಾಮಿಯನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. 18 ಜನರನ್ನು ಮುಂಬೈಗೆ ಕಳುಹಿಸಿದವರು ಯಾರು? ಕಾಂಗ್ರೆಸ್ ಮುಖಂಡರೇ ಸತ್ಯ ಹೇಳಿ. ರಾಹುಲ್ ಗಾಂಧಿ (Rahul Gandhi) ಹಾಸನಕ್ಕೆ ಬಂದು ಜೆಡಿಎಸ್ ಬಿಜೆಪಿಯ ಬಿ ಟೀಮ್ ಎನ್ನುತ್ತಾರೆ. ಏನು ಹುಡುಗಾಟಿಕೆನಾ ಎಂದು ಹರಿಹಾಯ್ದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಯನ್ನು ಜಿರಲೆಗೆ ಹೋಲಿಸಿದ ಸಚಿವ ಈಶ್ವರಪ್ಪ

  • ಕುತ್ತಿಗೆ ಕೊಯ್ದು ಪ್ರಾವಿಜನ್ ಸ್ಟೋರ್ ಮಾಲೀಕನ ಹತ್ಯೆ

    ಕುತ್ತಿಗೆ ಕೊಯ್ದು ಪ್ರಾವಿಜನ್ ಸ್ಟೋರ್ ಮಾಲೀಕನ ಹತ್ಯೆ

    ಚಿಕ್ಕಬಳ್ಳಾಪುರ: ಕುತ್ತಿಗೆ ಕೊಯ್ದು ಹಾಗೂ ಚಾಕುವಿನಿಂದ ಇರಿದು ಪ್ರಾವಿಜನ್ ಸ್ಟೋರ್ ಮಾಲೀಕನ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಬಳಿ ನಡೆದಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಐಬಸಾಪುರ ಗ್ರಾಮದ ನಿರಂಜನಮೂರ್ತಿ (48) ಕೊಲೆಯಾದ ವ್ಯಕ್ತಿ. ಜಂಗಮಕೋಟೆ ಕ್ರಾಸ್ ನಲ್ಲಿ ಪ್ರಾವಿಜನ್ ಸ್ಟೋರ್ ಇಟ್ಟುಕೊಂಡಿದ್ದ ನಿರಂಜನಮೂರ್ತಿ ಪ್ರತಿ ದಿನ ಐಬಸಾಪುರ ಗ್ರಾಮದಿಂದ ಜಂಗಮಕೋಟೆ ಕ್ರಾಸ್‍ಗೆ ಹೋಗಿ ಬರುತ್ತಿದ್ದ.

    ಪ್ರತಿದಿನ ಸಂಜೆ 07 ಗಂಟೆಗೆ ವೇಳೆಗೆ ಮನೆಗೆ ಬರುತ್ತಿದ್ದ ನಿರಂಜನಮೂರ್ತಿ ನಿನ್ನೆ ರಾತ್ರಿ ಮನೆಗೆ ಬಂದಿಲ್ಲ. ಮನೆಯವರು ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಅನುಮಾನಗೊಂಡ ಅವರು ಬೆಳಗ್ಗೆ ಹುಡುಕಾಟ ಆರಂಭಿಸಿದ್ದರು, ಈ ವೇಳೆ ನಿರಂಜನಮೂರ್ತಿ ಬೈಕ್ ಪೆಟ್ರೋಲ್ ಬಂಕ್ ಬಳಿಯ ಚರ್ಚ್ ಬಳಿ ಪತ್ತೆಯಾಗಿತ್ತು.

    ಕೂಡಲೇ ಅನುಮಾನಗೊಂಡು ಸುತ್ತ ಸುತ್ತಲೂ ನಿರ್ಜನ ಪ್ರದೇಶಗಳಲ್ಲಿ ಹುಡುಕಾಡಿದಾಗ ಜಂಗಮಕೋಟೆ ಹೊಸಕೋಟೆ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ಸದ್ಯ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಹಣಕ್ಕಾಗಿ ಅಥವಾ ಹಳೇ ದ್ವೇಷದ ಹಿನ್ನೆಲೆ ಕೊಲೆ ಮಾಡಿರಬಹುದಾ ಎಂಬ ಸಂಶಯ ಮೂಡಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಟ್ಟೆ ಒಗೆದುಕೊಡಲ್ಲ ಎಂದು ತುಂಬು ಗರ್ಭಿಣಿಯನ್ನ ಕೊಚ್ಚಿ ಕೊಂದ ಪಾಪಿ ಬಾವ

    ಬಟ್ಟೆ ಒಗೆದುಕೊಡಲ್ಲ ಎಂದು ತುಂಬು ಗರ್ಭಿಣಿಯನ್ನ ಕೊಚ್ಚಿ ಕೊಂದ ಪಾಪಿ ಬಾವ

    – ಸೀಮಂತದ ಖುಷಿಯಲ್ಲಿದ್ದ ಗರ್ಭಿಣಿ ಮಸಣ ಸೇರಿದ್ಳು

    ಚಿಕ್ಕಬಳ್ಳಾಪುರ: ಆರು ತಿಂಗಳ ತುಂಬು ಗರ್ಭಿಣಿಯನ್ನ ಬಾವನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಅನೆಮಡುಗು ಗ್ರಾಮದಲ್ಲಿ ನಡೆದಿದೆ.

    ಅನೆಮಡುಗು ಗ್ರಾಮದ ಜ್ಯೋತಿ (26) ಕೊಲೆಯಾದ ತುಂಬು ಗರ್ಭಿಣಿ. ಹರೀಶ್ ಬಾಬು (40) ಕೊಲೆಗೈದ ಪಾಪಿ ಬಾವ. ಸೀಮಂತದ ಖುಷಿಯಲ್ಲಿದ್ದ ಜ್ಯೋತಿ ಮಸಣ ಸೇರಿದ್ದಾರೆ.

    ಜ್ಯೋತಿ, ಅವರ ಗಂಡ, ಅತ್ತೆ, ಮಾವ ಸೇರಿದಂತೆ ಬಾವ ಒಂದೇ ಮನೆಯಲ್ಲಿ ವಾಸವಾಗಿದ್ದರು. ತವರು ಮನೆ ಚಿಂತಾಮಣಿಯಲ್ಲಿದ್ದ ತಾಯಿಯನ್ನು ಕರೆದುಕೊಂಡುಬರಲು ಇಂದು ಜ್ಯೋತಿಯ ಪತಿ ಹೋಗಿದ್ದ. ಇತ್ತ ಜ್ಯೋತಿ ಅವರ ಮಾವ ತೋಟದ ಮನೆ ಬಳಿ ಇದ್ದರಂತೆ. ಈ ವೇಳೆ ಮನೆಯಲ್ಲಿ ಏಕಾಂಗಿಯಾಗಿದ್ದ ಗರ್ಭಿಣಿಯ ಜೊತೆ ವಿನಾಕಾರಣ ಹರೀಶ್ ಬಾಬು ಜಗಳ ಆರಂಭಿಸಿದ್ದ.

    ನನಗೆ ಬಟ್ಟೆ ಒಗೆದುಕೊಡುವುದಿಲ್ಲ. ಸರಿಯಾಗಿ ನೋಡಿಕೊಳ್ಳಲ್ಲ ಎಂದು ಹರೀಶ್ ತಗಾದೆ ತೆಗೆದು ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಕೋಪಗೊಂಡ ಹರೀಶ್ ತುಂಬು ಗರ್ಭಿಣಿ ಅಂತಲೂ ನೋಡದೆ ಮಚ್ಚಿನಿಂದ ತಲೆಗೆ ಬಲವಾಗಿ ಹೊಡೆದು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.

    ಅದೇ ಗ್ರಾಮದ ಜ್ಯೋತಿ ತಾಯಿ ಮಗಳನ್ನ ನೋಡುವುದಕ್ಕೆ ಅಂತ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿದ್ದ ಜ್ಯೋತಿ ಕೊನೆಯುಸಿರುನಲ್ಲಿ ವಿಲ ವಿಲ ಅಂತ ಒದ್ದಾಡುತ್ತಿದ್ದಳು. ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲೇ ಜ್ಯೋತಿ ಕೊನೆಯುಸಿರುಳೆದಿದ್ದಾರೆ.

    ಜ್ಯೋತಿ ಅವರ ಪತಿ ರೈಲ್ವೆ ಇಲಾಖೆ ಉದ್ಯೋಗಿಯಾಗಿದ್ದು, 08 ವರ್ಷಗಳ ನಂತರ ಮಗು ಆಗುತ್ತಿದ್ದ ಸಂತಸದಲ್ಲಿ ಮನೆಮಂದಿಯೆಲ್ಲಾ ಇದ್ದರು. 10ರಿಂದ 12 ದಿನಗಳಲ್ಲಿ ಜ್ಯೋತಿಗೆ ಹೆರಿಗೆಯಾಗುವ ದಿನಾಂಕ ಸಹ ವೈದ್ಯರು ನೀಡಿದ್ದರು. ಇತ್ತ ಚಿಂತಾಮಣಿಗೆ ಹೋಗಿದ್ದ ಗಂಡ ಸಹ ತನಗೆ ಸೀಮಂತಕ್ಕೆ ಸೀರೆ ತರುವುದಾಗಿ ಹೇಳಿ ಹೋಗಿದ್ದ. ಆದರೆ ಅಷ್ಟರಲ್ಲೇ ಪಾಪಿ ಬಾವ ನಾದಿನಿಯ ಪ್ರಾಣವನ್ನ ಬಲಿ ಪಡೆದುಬಿಟ್ಟಿದ್ದಾನೆ.

    ಈ ಸಂಬಂಧ ದಿಬ್ಬೂರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪಾಪಿ ಹರೀಶ್ ಬಾಬುನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

  • ಕೊರೊನಾ ಬಂದಿದೆ ಎಂದು ಅಪಹಾಸ್ಯ- ಮಚ್ಚು ಹಿಡಿದು ಸ್ನೇಹಿತರನ್ನ ಅಟ್ಟಾಡಿಸಿದ ಯುವಕ

    ಕೊರೊನಾ ಬಂದಿದೆ ಎಂದು ಅಪಹಾಸ್ಯ- ಮಚ್ಚು ಹಿಡಿದು ಸ್ನೇಹಿತರನ್ನ ಅಟ್ಟಾಡಿಸಿದ ಯುವಕ

    ಚಿಕ್ಕಬಳ್ಳಾಪುರ: ಪದೇ ಪದೇ ಕೆಮ್ಮುತ್ತಿದ್ದಕ್ಕೆ ಕೊರೊನಾ ಬಂದಿದೆ ಅಂತ ಸ್ನೇಹಿತರು ಅಪಹಾಸ್ಯ ಮಾಡಿದ್ದಕ್ಕೆ ರೊಚ್ಚಿಗೊದ್ದ ಯುವಕ ಮಚ್ಚುಹಿಡಿದು ಹುಚ್ಚಾಟ ನಡೆಸಿದ ಘಟನೆ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹಿತ್ತಲಹಳ್ಳಿ ಗ್ರಾಮದ ಹರೀಶ್ ಮಚ್ಚುಹಿಡಿದು ಹುಚ್ಚಾಟ ನಡೆಸಿದ ಯುವಕ. ಹರೀಶ್ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾನೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಗ್ರಾಮದಲ್ಲಿನ ಹರೀಶ್ ಸ್ನೇಹಿತರು ಸುಖಾಸುಮ್ಮನೆ ಕೊರೊನಾ ಬಂದಿದೆ ಅಂತ ರೇಗಿಸುತ್ತಿದ್ದರು. ಇದರಿಂದ ಕೋಪಗೊಂಡ ಯುವಕ ಹರೀಶ್ ಮಚ್ಚು ಹಿಡಿದು ಬಂದು ಹುಚ್ಚಾಟ ಮೆರೆದಿದ್ದಾನೆ. ಈ ವಿಡಿಯೋವನ್ನ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಕಂಡ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಯುವಕನಿಗಾಗಿ ಹುಡುಕಾಡ ನಡೆಸಿದ್ದಾರೆ.

    ಪೊಲೀಸರು ಹುಡಾಕಾಡುತ್ತಿರುವ ವಿಷಯ ತಿಳಿದ ಹರೀಶ್ ಊರು ಬಿಟ್ಟು ನಾಪತ್ತೆಯಾಗಿದ್ದಾನೆ. ಹಿತ್ತಲಹಳ್ಳಿ ಗ್ರಾಮದ ಯುವಕರು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಮಾದರಿಯಾಗಿದ್ದರು. ಆದರೆ ಈಗ ಯುವಕ ಹರೀಶ್‍ನ ಹುಚ್ಚಾಟದಿಂದ ಹಿತ್ತಲಹಳ್ಳಿ ಗ್ರಾಮಕ್ಕೆ ಕೆಟ್ಟು ಹೆಸರು ಬರುವಂತಾಗಿದೆ ಅಂತ ಗ್ರಾಮಸ್ಥರು ನೊಂದುಕೊಂಡಿದ್ದಾರೆ.

  • ರಿಜಿಸ್ಟರ್ ಮ್ಯಾರೇಜ್, ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಓಡಿದ ಪ್ರೇಮಿಗಳು

    ರಿಜಿಸ್ಟರ್ ಮ್ಯಾರೇಜ್, ರಕ್ಷಣೆಗಾಗಿ ಪೊಲೀಸ್ ಠಾಣೆಗೆ ಓಡಿದ ಪ್ರೇಮಿಗಳು

    ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ನವಜೋಡಿ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಓಡಿ ಬಂದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಶಿಡ್ಲಘಟ್ಟ ತಾಲೂಕಿನ ಯುವಕ ಹಾಗೂ ಬೆಂಗಳೂರು ಮೂಲದ ಯುವತಿ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅವರ ವಿವಾಹಕ್ಕೆ ಯುವತಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಮನೆ ಬಿಟ್ಟು ಹೋಗಿ ದಾವಣಗೆರೆಯಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ಸಂಬಂಧ ಯುವತಿಯ ಸಂಬಂಧಿಕರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದು, ನವಜೋಡಿಗೆ ಪ್ರಾಣಭೀತಿ ಎದುರಾಗಿದೆ.

    ಪೋಷಕರ ಭಯದಿಂದ ನವಜೋಡಿ ಚಿಕ್ಕಬಳ್ಳಾಪುರ ನಗರ ಮಹಿಳಾ ಪೊಲೀಸ್ ಠಾಣೆಗೆ ಬಂದು ರಕ್ಷಣೆಗೆ ಮೊರೆಯಿಟ್ಟಿದ್ದಾರೆ. ಇನ್ನೂ ಯುವತಿ ಕಾಣೆಯಾದ ಸಂಬಂಧ ಯುವತಿ ಕಡೆಯವರು ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇತ್ತ ಯುವಕನ ಸಂಬಂಧಿಕರು ಸಹ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸ್ ಠಾಣೆಗೆ ಬಂದ ಯುವಕ ಯುವತಿಯನ್ನು ಶಿಡ್ಲಘಟ್ಟ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ.

    ಯುವಕನ ಪೋಷಕರು ಮದುವೆಗೆ ಸಮ್ಮತಿಸಿ ಸೂಚಿಸಿದ್ದಾರೆ. ಆದರೆ ಯುವತಿ ಪೋಷಕರು ಮಾತ್ರ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ತಮಗೆ ರಕ್ಷಣೆ ಕೊಡುವಂತೆ ಪ್ರೇಮಿಗಳು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ. ಯುವತಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಶ್ರೀಮಂತ ಮನೆತನ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳಾಗಿದ್ದಾಳೆ. ಯುವಕ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.