Tag: Sidharth Malhotra

  • ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಹೆಣ್ಣು ಮಗು ಜನನ

    ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಹೆಣ್ಣು ಮಗು ಜನನ

    ಬಾಲಿವುಡ್ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Advani) ಹೆಣ್ಣು ಮಗುವಿಗೆ ತಂದೆ-ತಾಯಿಯಾಗಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

    ನಟಿಗೆ ಆಗಸ್ಟ್‌ನಲ್ಲಿ ಮಗು ಜನಿಸಬೇಕಿತ್ತು. ಆದರೆ ಮಗು ಬೇಗನೆ ಜನಿಸಿದೆ. ಕಿಯಾರಾಳನ್ನು ಹೆರಿಗೆಗಾಗಿ ಮುಂಬೈನ ಗಿರ್ಗಾಂವ್ ಪ್ರದೇಶದ ಹೆಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

     

    View this post on Instagram

     

    A post shared by KIARA (@kiaraaliaadvani)

    ಕಳೆದ ವಾರ, ಸಿದ್ಧಾರ್ಥ್ ಮತ್ತು ಕಿಯಾರಾ ಮುಂಬೈನ ಕ್ಲಿನಿಕ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್ ಅವರ ತಾಯಿ ರಿಮ್ಮಾ ಮಲ್ಹೋತ್ರಾ ಮತ್ತು ಕಿಯಾರಾ ಅವರ ಪೋಷಕರು ಜೆನೆವೀವ್ ಮತ್ತು ಜಗದೀಪ್ ಅಡ್ವಾಣಿ ಅವರೊಂದಿಗೆ ಆಸ್ಪತ್ರೆಯಲ್ಲಿದ್ದಾರೆ.

    ಕಿಯಾರಾ ಪ್ರೆಗ್ನೆನ್ಸಿ ಘೋಷಿಸಿದಾಗಿನಿಂದ, ಕಿಯಾರಾ ಮತ್ತು ಸಿದ್ಧಾರ್ಥ್‌ ಸೋಷಿಯಲ್‌ ಮೀಡಿಯಾದಲ್ಲಿ ಅಷ್ಟೇನು ಆಕ್ಟೀವ್‌ ಆಗಿರಲಿಲ್ಲ. ಫೆಬ್ರವರಿ 28 ರಂದು, ಸಿದ್ಧಾರ್ಥ್ ಮತ್ತು ಕಿಯಾರಾ ಇನ್ಸ್ಟಾಗ್ರಾಮ್‌ನಲ್ಲಿ ‘ನಮ್ಮ ಜೀವನದ ಶ್ರೇಷ್ಠ ಉಡುಗೊರೆ ಶೀಘ್ರದಲ್ಲೇ ಬರಲಿದೆ’ ಎಂದು ಪೋಸ್ಟ್ ಮಾಡಿದ್ದರು.

  • ಬೇಬಿ ಬಂಪ್‌ನೊಂದಿಗೆ ‘ಮೆಟ್ ಗಾಲಾ’ದಲ್ಲಿ ಹೆಜ್ಜೆ ಹಾಕಿದ ಕಿಯಾರಾ ಅಡ್ವಾಣಿ

    ಬೇಬಿ ಬಂಪ್‌ನೊಂದಿಗೆ ‘ಮೆಟ್ ಗಾಲಾ’ದಲ್ಲಿ ಹೆಜ್ಜೆ ಹಾಕಿದ ಕಿಯಾರಾ ಅಡ್ವಾಣಿ

    ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ (Kiara Advani) ಅಮ್ಮನಾಗ್ತಿರೋ ಸಂತಸದಲ್ಲಿದ್ದಾರೆ. ಇದೇ ಖುಷಿಯಲ್ಲಿ ಅವರು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಮೆಟ್ ಗಾಲಾ ಫ್ಯಾಷನ್ ಹಬ್ಬದಲ್ಲಿ ಭಾಗಿಯಾಗಿದ್ದಾರೆ.‌ ಇದನ್ನೂ ಓದಿ:ಅಯ್ಯೋ ನನಗೆ ಹೊಟ್ಟೆ ಬಂದಿದೆ ಎಂದಿದ್ದ ನಟಿ ರಿತಿಕಾ ಸಿಂಗ್ ಸೊಂಟ ಬಳ್ಳಿಯಂತಾಗಿದ್ದು ಹೇಗೆ ಗೊತ್ತಾ?

    ಪ್ರತಿ ವರ್ಷದಂತೆ ಈ ವರ್ಷವು ಕೂಡ ‘ಮೆಟ್ ಗಾಲಾ 2025’ (Met Gala 2025) ಫ್ಯಾಷನ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ದೇಶ- ವಿದೇಶಗಳಿಂದ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಈ ಸಾಲಿನಲ್ಲಿ ಪ್ರೆಗ್ನೆಂಟ್ ಕಿಯಾರಾ ಅಡ್ವಾಣಿ ಕೂಡ ಭಾಗಿಯಾಗಿದ್ದಾರೆ.

    ನ್ಯೂಯಾರ್ಕ್‌ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ‘ಮೆಟ್ ಗಾಲಾ’ ಫ್ಯಾಷನ್ ಹಬ್ಬ ನಡೆಯುತ್ತಿದೆ. ಇಲ್ಲಿನ ರೆಡ್ ಕಾರ್ಪೆಟ್‌ನಲ್ಲಿ ಕಿಯಾರಾ ಮಸ್ತ್ ಆಗಿ ಬೇಬಿ ಬಂಪ್‌ನೊಂದಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ಅವಮಾನ ಸಹಿಸುವಷ್ಟು ಚಿಕ್ಕವನಲ್ಲ – ಸ್ಯಾಂಡಲ್‌ವುಡ್‌ನಿಂದ ಅಸಹಕಾರದ ಬೆನ್ನಲ್ಲೇ ಸೋನು ನಿಗಮ್ ರಿಯಾಕ್ಷನ್

    ಕಪ್ಪು ಬಣ್ಣದ ಗೌನ್‌ಗೆ ಗೋಲ್ಡನ್ ಕಲರ್ ವಿನ್ಯಾಸವಿರುವ ಧಿರಿಸಿನಲ್ಲಿ ಕಿಯಾರಾ ಮಿಂಚಿದ್ದಾರೆ. ಈ ವೇಳೆ, ಅವರಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿದೆ. ಗೌನ್‌ನ ಹೊಟ್ಟೆಯ ಭಾಗದಲ್ಲಿ ಹೃದಯಾಕಾರದ ಚಿತ್ತಾರವಿದೆ. ಈ ಲುಕ್‌ನಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಸ್ಟೈಲಿಶ್ ಆಗಿ ಹೆಜ್ಜೆ ಹಾಕಿದ್ದಾರೆ.

    ಅಂದಹಾಗೆ, ಪತ್ನಿಯನ್ನು ನೋಡಿಕೊಳ್ಳಲು ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಭಾಗಿಯಾಗಿದ್ದರು. ಕಿಯಾರಾ ಅವರನ್ನು ನಟ ಆರೈಕೆ ಮಾಡುತ್ತಿರುವ ರೀತಿ ಕಂಡು ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    ಅಂದಹಾಗೆ, ಕಿಯಾರಾ ಅವರ ಲುಕ್ ಅನ್ನು ಐಶ್ವರ್ಯಾ ರೈ ಹೊಲಿಸಿದ್ದಾರೆ. ಕಳೆದ ಬಾರಿ `ಮೆಟ್ ಗಾಲಾ’ ಕಾರ್ಯಕ್ರಮದಲ್ಲಿ ಇದೇ ಕಪ್ಪು ಬಣ್ಣದ ಗೌನ್‌ನಲ್ಲಿ ಅವರು ಮಿಂಚಿದ್ದರು.

    2023ರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಕಿಯಾರಾ ಮದುವೆಯಾದರು. ಹಲವು ವರ್ಷಗಳ ಡೇಟಿಂಗ್ ಬಳಿಕ ಗುರುಹಿರಿಯರ ಸಮ್ಮತಿ ಪಡೆದು ಮದುವೆಯಾದರು. ಈಗ ಪೋಷಕರಾಗುತ್ತಿರುವ ಸಂತಸದಲ್ಲಿದ್ದಾರೆ.

  • ಬಾಲಿವುಡ್‌ನ ಖ್ಯಾತ ನಿರ್ಮಾಪಕನ ಜೊತೆ ಶ್ರೀಲೀಲಾ- ಶುರುವಾಯ್ತು ಚರ್ಚೆ

    ಬಾಲಿವುಡ್‌ನ ಖ್ಯಾತ ನಿರ್ಮಾಪಕನ ಜೊತೆ ಶ್ರೀಲೀಲಾ- ಶುರುವಾಯ್ತು ಚರ್ಚೆ

    ನ್ನಡತಿ ಶ್ರೀಲೀಲಾ (Sreeleela) ‘ಪುಷ್ಪ 2’ನಲ್ಲಿ (Pushpa 2) ಸೊಂಟ ಬಳುಕಿಸಿದ್ಮೇಲೆ ಬಾಲಿವುಡ್‌ನಿಂದ ಬಂಪರ್ ಆಫರ್ಸ್ ಅರಸಿ ಬರುತ್ತಿವೆ. ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರಾಗೆ ಶ್ರೀಲೀಲಾ ನಾಯಕಿ ಎಂಬ ಸುದ್ದಿ ಹಬ್ಬಿತ್ತು. ಈ ವಿಚಾರಕ್ಕೆ ಪುಷ್ಠಿ ನೀಡುವಂತಹ ಫೋಟೋವೊಂದು ಸಿಕ್ಕಿದೆ. ಸಿದ್ಧಾರ್ಥ್ ಸಿನಿಮಾವನ್ನು ನಿರ್ಮಿಸಲಿರುವ ನಿರ್ಮಾಪಕನ ಜೊತೆ ಶ್ರೀಲೀಲಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ:ಪಾಕಿಸ್ತಾನದ ನಟನ ಸಿನಿಮಾ ಭಾರತದಲ್ಲಿ ಬ್ಯಾನ್ ಮಾಡೋಕೆ ಅದೇನು ನೀಲಿಚಿತ್ರವಾ?- ಪ್ರಕಾಶ್ ರಾಜ್ ಕೆಂಡ

    ಶ್ರೀಲೀಲಾ ಅವರು ನಿರ್ಮಾಪಕ ಮಹಾವೀರ್ ಜೈನ್ ಜೊತೆ ಕಾಣಿಸಿಕೊಂಡಿದ್ದಾರೆ. ಇವರು ರಾಜ್ ಶಾಂಡಿಲ್ಯ ನಿರ್ದೇಶನ ಮಾಡುತ್ತಿರುವ ಮುಂದಿನ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರಕ್ಕೆ ಸಿದ್ದಾರ್ಥ್ ಮಲ್ಹೋತ್ರ ನಾಯಕ. ಇದೀಗ ವೈರಲ್ ಆಗಿರೋ ಫೋಟೋದಿಂದ ಶ್ರೀಲೀಲಾ ಅವರು ಸಿದ್ಧಾರ್ಥ್ ಮಲ್ಹೋತ್ರಾ ಚಿತ್ರದಲ್ಲಿ ನಟಿಸೋದು ಬಹುತೇಕ ಖಚಿತ ಆದಂತೆ ಕಾಣುತ್ತಿದೆ. ಮಹಾವೀರ್ ಜೈನ್ (Mahaveer Jain) ಅವರು ಇನ್ಸ್ಟಾಗ್ರಾಂನಲ್ಲಿ ಶ್ರೀಲೀಲಾ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾಗೆ ಚಾಲನೆ ಸಿಗಲಿದೆ. ಇದನ್ನೂ ಓದಿ:ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ನಾಮಿನೇಷನ್ ಪ್ರಕಟ – ಯಾರ ಪಾಲಾಗಲಿದೆ‌ ಅವಾರ್ಡ್?

    ಅಂದಹಾಗೆ ಶ್ರೀಲೀಲಾ ಪ್ರಸ್ತುತ ಕಾರ್ತಿಕ್ ಆರ್ಯನ್ ಜೊತೆಗಿನ ‘ಆಶಿಕಿ 3’ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಈ ಸಿನಿಮಾವನ್ನು ಅನುರಾಗ್ ಬಸು ನಿರ್ದೇಶನ ಮಾಡುತ್ತಿದ್ದಾರೆ.

    ಈ ಸಿನಿಮಾದ ಜೊತೆ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಚಿತ್ರಕ್ಕೂ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾಗಾಗಿ ಇಬ್ಬರಿಗೂ ವರ್ಕ್ ಶಾಪ್ ಮಾಡಲಾಗುತ್ತಿದೆ. ಸ್ಕ್ರೀಪ್ಟ್‌ಗೆ ತಯಾರಿ ಮಾಡಲಾಗುತ್ತಿದೆ. ಈ ಜೋಡಿಯ ಮೂಲಕ ಭಿನ್ನವಾಗಿರೋ ಲವ್ ಸ್ಟೋರಿ ಹೇಳಲು ನಿರ್ದೇಶಕರು ಸಜ್ಜಾಗಿದ್ದಾರೆ.

    ಕನ್ನಡದ ಕಿಸ್, ಭರಾಟೆ, ಬೈಟು ಲವ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಶ್ರೀಲೀಲಾ ಸಿನಿಮಾ ಕೆರಿಯರ್ ಶುರು ಮಾಡಿದರು. ‘ಪೆಳ್ಳಿ ಸಂದಡಿ’ ಚಿತ್ರದ ಮೂಲಕ ತೆಲುಗಿಗೆ ಕಾಲಿಟ್ಟರು. ‘ಪುಷ್ಪ 2’ (Pushpa 2) ಚಿತ್ರದಲ್ಲಿನ್ ಕಿಸ್ಸಿಕ್ ಸಾಂಗ್‌ನಿಂದ ನಟಿ ಮತ್ತಷ್ಟು ಫೇಮಸ್ ಆಗಿ ಈಗ ಬಾಲಿವುಡ್‌ನಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ.

  • ಪತಿಯೊಂದಿಗೆ ಗರ್ಭಿಣಿ ಕಿಯಾರಾ ಅಡ್ವಾಣಿ ವೆಕೇಷನ್

    ಪತಿಯೊಂದಿಗೆ ಗರ್ಭಿಣಿ ಕಿಯಾರಾ ಅಡ್ವಾಣಿ ವೆಕೇಷನ್

    ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ (Kiara Advani) ವೆಕೇಷನ್ ಮೂಡ್‌ನಲ್ಲಿದ್ದಾರೆ. ಪತಿ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಜೊತೆ ಗರ್ಭಿಣಿ ಕಿಯಾರಾ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಪ್ರವಾಸದ ಸುಂದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಬೇಬಿ ಬಂಪ್ ಮರೆ ಮಾಚಿ ವೆಕೇಷನ್ ಸುಂದರ ಫೋಟೋಗಳನ್ನು ಕಿಯಾರಾ ಹಂಚಿಕೊಂಡಿದ್ದಾರೆ. ನಟಿಯ ಮುಖದಲ್ಲಿ ಪ್ರೆಗ್ನೆನ್ಸಿ ಕಳೆ ಎದ್ದು ಕಾಣುತ್ತಿದೆ. ಪತಿಯೊಂದಿಗೆ ನಟಿ ಖುಷಿಯಲ್ಲಿರೋದನ್ನು ನೋಡಬಹುದಾಗಿದೆ. ಇದನ್ನೂ ಓದಿ:ತಮಿಳು ನಟ ಅಜಿತ್ ಕುಮಾರ್ ಆಸ್ಪತ್ರೆಗೆ ದಾಖಲು

    ಫೆ.28ರಂದು ಕಿಯಾರಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಅಧಿಕೃತವಾಗಿ ಘೋಷಿಸಿದ್ದರು. ಈ ದಂಪತಿಗೆ ಸಮಂತಾ, ರಶ್ಮಿಕಾ, ಆಲಿಯಾ ಭಟ್, ಜಾಕ್ವೆಲಿನ್ ಸೇರಿದಂತೆ ಅನೇಕರು ಶುಭಕೋರಿದ್ದರು. ಇದನ್ನೂ ಓದಿ:ಮದುವೆ ಬಳಿಕ ಮೊದಲ ಬಾರಿಗೆ ಪತಿಯೊಂದಿಗಿನ ಫೋಟೋ ಹಂಚಿಕೊಂಡ ಗಾಯಕಿ ಪೃಥ್ವಿ ಭಟ್

    ಪ್ರೆಗ್ನೆಂಟ್ ಆಗಿರೋ ಹಿನ್ನೆಲೆ ಇತ್ತೀಚೆಗೆ ರಣವೀರ್ ಸಿಂಗ್ ನಟನೆಯ ‘ಡಾನ್ 3’ ಚಿತ್ರದಿಂದ ಕಿಯಾರಾ ಹೊರಬಂದಿದ್ದಾರೆ. ಕೆಲವು ಪ್ರಾಜೆಕ್ಟ್‌ಗಳನ್ನು ಅವರು ಕೈಬಿಟ್ಟಿದ್ದಾರೆ.

    2023ರ ಫೆ.7ರಂದು ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಕಿಯಾರಾ ಅಡ್ವಾಣಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.

  • ತಮನ್ನಾಗೆ ಬಿಗ್ ಚಾನ್ಸ್- ಬಾಲಿವುಡ್‌ನ ಹೊಸ ಚಿತ್ರಕ್ಕೆ ಮಿಲ್ಕಿ ಬ್ಯೂಟಿ ನಾಯಕಿ

    ತಮನ್ನಾಗೆ ಬಿಗ್ ಚಾನ್ಸ್- ಬಾಲಿವುಡ್‌ನ ಹೊಸ ಚಿತ್ರಕ್ಕೆ ಮಿಲ್ಕಿ ಬ್ಯೂಟಿ ನಾಯಕಿ

    ನಟ ವಿಜಯ್ ವರ್ಮಾ (Vijay Varma) ಜೊತೆ ಬ್ರೇಕಪ್ ಆದ್ಮೇಲೆ ಸಿನಿಮಾದತ್ತ ತಮನ್ನಾ (Tamannaah Bhatia) ಹೆಚ್ಚು ಫೋಕಸ್ ಮಾಡ್ತಿದ್ದಾರೆ. ಬಾಲಿವುಡ್‌ನಲ್ಲಿ ನಟಿಗೆ ಬಿಗ್ ಚಾನ್ಸ್‌ವೊಂದು ಸಿಕ್ಕಿದೆ. ಲವರ್ ಬಾಯ್ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಲ್ಕಿ ಬ್ಯೂಟಿ ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:1.12 ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸಿದ್ಧಾರ್ಥ್ ಮಲ್ಹೋತ್ರಾ

    ಪೌರಾಣಿಕ ಕುರಿತಾದ ‘ವ್ವಾನ್’ ಚಿತ್ರಕ್ಕಾಗಿ ಏಕ್ತಾ ಕಪೂರ್ ಜೊತೆ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರವನ್ನು ದೀಪಕ್ ಮಿಶ್ರಾ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ತಮನ್ನಾರನ್ನು ಆಯ್ಕೆ ಮಾಡಲಾಗಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:‘ಜೈಲರ್ 2’ ಶೂಟಿಂಗ್ ನಡುವೆ ರಜನಿಕಾಂತ್ ಟೆಂಪಲ್ ರನ್

    ಸಿದ್ಧಾರ್ಥ್ ಜೊತೆ ತಮನ್ನಾ ಈ ಹೊಸ ಜೋಡಿಯನ್ನು ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ. ಈಗಾಗಲೇ ನಟಿಯೊಂದಿಗೆ ಚಿತ್ರತಂಡ ಮಾತುಕತೆ ನಡೆಸಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ತಮನ್ನಾನೇ ನಾಯಕಿನಾ? ಎಂಬುದನ್ನು ಚಿತ್ರತಂಡ ತಿಳಿಸಬೇಕಿದೆ.

    ಅಂದಹಾಗೆ, ತಮನ್ನಾ ಭಾಟಿಯಾಗೆ ಬಾಲಿವುಡ್‌ನಲ್ಲಿ ಮಾತ್ರವಲ್ಲ, ತೆಲುಗು, ತಮಿಳಿನಲ್ಲೂ ಭಾರೀ ಬೇಡಿಕೆಯಿದೆ. ನಾಯಕಿಯಾಗುವುದರ ಜೊತೆಗೆ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡೋದ್ದಕ್ಕೂ ಅವರಿಗೆ ಡಿಮ್ಯಾಂಡ್ ಇದೆ.

  • ಪ್ರೆಗ್ನೆನ್ಸಿ ಗುಡ್ ನ್ಯೂಸ್ ಕೊಟ್ಮೇಲೆ ಮತ್ತೆ ಚಿತ್ರೀಕರಣದಲ್ಲಿ ಕಿಯಾರಾ ಬ್ಯುಸಿ

    ಪ್ರೆಗ್ನೆನ್ಸಿ ಗುಡ್ ನ್ಯೂಸ್ ಕೊಟ್ಮೇಲೆ ಮತ್ತೆ ಚಿತ್ರೀಕರಣದಲ್ಲಿ ಕಿಯಾರಾ ಬ್ಯುಸಿ

    ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ (Kiara Advani) ಅವರು ತಾಯಿ ಆಗುತ್ತಿರುವ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಬೆನ್ನಲ್ಲೇ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಸಿಹಿಸುದ್ದಿ ಕೊಟ್ಟ ಬೆನ್ನಲ್ಲೇ ಚಿತ್ರೀಕರಣಕ್ಕೆ ನಟಿ ಹಾಜರಿ ಹಾಕಿದ್ದಾರೆ. ಇದನ್ನೂ ಓದಿ:ನಿನ್ನ ನಗುವಿನ ಬೆಳಕಲ್ಲಿ, ನನ್ನ ಬದುಕು ಬೆಳಗಿದೆ: ಪತ್ನಿ ಬರ್ತ್‌ಡೇಗೆ ರಿಷಬ್ ಲವ್ಲಿ ವಿಶ್

    ನಿನ್ನೆಯಷ್ಟೇ (ಫೆ.28) ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಕಿಯಾರಾ ದಂಪತಿ ಘೋಷಿಸಿದ್ದರು. ಈ ಬೆನ್ನಲ್ಲೇ ನಟಿ ಚಿತ್ರೀಕರಣಕ್ಕೆ ಮರಳಿದ್ದಾರೆ. ವ್ಯಾನಿಟಿ ವ್ಯಾನ್‌ ಬಳಿ ಕಿಯಾರಾ ನಡೆದುಕೊಂಡು ಬರುವ ವೇಳೆ, ನಟಿಯ ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿತ್ತು. ಶುಭಹಾರೈಸಿದ ಪಾಪರಾಜಿಗಳಿಗೆ ನಗುತ್ತಾ ಧನ್ಯವಾದ ಹೇಳಿದ್ದಾರೆ.ತಾಯಿ ಆಗುತ್ತಿರುವ ಸಂತಸದ ನಡುವೆಯೂ ಶೂಟಿಂಗ್‌ಗೆ ಮರಳಿರುವ ನಟಿಯ ನಡೆಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Manav Manglani (@manav.manglani)

    ಇನ್ನೂ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಹಾಗೂ ಕಿಯಾರಾ ಅಡ್ವಾಣಿ ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. 2023ರಲ್ಲಿ ರಾಜಸ್ಥಾನದಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆಯಾದರು. ಇದನ್ನೂ ಓದಿ:ತಂಗಿ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಕಾಮೆಂಟ್: ಹೀಗ್ಯಾಕಂದ್ರು ಶ್ರೀವಲ್ಲಿ?

     

    View this post on Instagram

     

    A post shared by KIARA (@kiaraaliaadvani)

    ಅಂದಹಾಗೆ, ಕಿಯಾರಾ ಸದ್ಯ ವಾರ್ 2, ಟಾಕ್ಸಿಕ್, ಕರಣ್ ಜೋಹರ್ ನಿರ್ಮಾಣದ ಹೊಸ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಿವೆ.

  • ಗುಡ್ ನ್ಯೂಸ್ ಕೊಟ್ಟ ನಟಿ- ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿಯಾರಾ ಅಡ್ವಾಣಿ

    ಗುಡ್ ನ್ಯೂಸ್ ಕೊಟ್ಟ ನಟಿ- ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿಯಾರಾ ಅಡ್ವಾಣಿ

    ಬಾಲಿವುಡ್ ಸ್ಟಾರ್ ಕಪಲ್ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಹಾಗೂ ಕಿಯಾರಾ ಅಡ್ವಾಣಿ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ಕುರಿತು ನಟಿ ಇನ್ಸ್ಟಾಗ್ರಾಂನಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಟ ದರ್ಶನ್‌ಗೆ ಇನ್ಮುಂದೆ ದೇಶಾದ್ಯಂತ ಸಂಚಾರಕ್ಕೆ ಅವಕಾಶ – ಹೈಕೋರ್ಟ್ ಆದೇಶ

    ‘ನಮ್ಮ ಜೀವನದ ಶ್ರೇಷ್ಠ ಉಡುಗೊರೆ ಶೀಘ್ರದಲ್ಲಿಯೇ ಬರಲಿದೆ’ ಎಂದು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿಯನ್ನು ಕಿಯಾರಾ ದಂಪತಿ ಬರೆದುಕೊಂಡಿದ್ದಾರೆ. ಮಗುವಿನ ಪುಟ್ಟ ಶೂ ಫೋಟೋ ಶೇರ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಜೋಡಿಗೆ ಅನೇಕರು ಶುಭಕೋರುತ್ತಿದ್ದಾರೆ.

     

    View this post on Instagram

     

    A post shared by KIARA (@kiaraaliaadvani)

    ಇನ್ನೂ ಹಲವು ವರ್ಷಗಳ ಡೇಟಿಂಗ್ ಬಳಿಕ 2023ರಲ್ಲಿ ಫೆ.7ರಂದು ಕಿಯಾರಾ ಮತ್ತು ಸಿದ್ಧಾರ್ಥ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  • ‘ರೈಸ್ 4’ಗಾಗಿ ಸೈಫ್ ಅಲಿ ಖಾನ್ ಜೊತೆ ಕೈಜೋಡಿಸಿದ ಸಿದ್ಧಾರ್ಥ್ ಮಲ್ಹೋತ್ರಾ

    ‘ರೈಸ್ 4’ಗಾಗಿ ಸೈಫ್ ಅಲಿ ಖಾನ್ ಜೊತೆ ಕೈಜೋಡಿಸಿದ ಸಿದ್ಧಾರ್ಥ್ ಮಲ್ಹೋತ್ರಾ

    ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಇದೀಗ ಹೊಸ ಪ್ರಾಜೆಕ್ಟ್‌ವೊಂದನ್ನು ಒಪ್ಪಿಕೊಂಡಿದ್ದಾರೆ. ಸೈಫ್ ಅಲಿ ಖಾನ್ ನಟನೆಯ ಬಹುನಿರೀಕ್ಷಿತ ‘ರೈಸ್ 4’ (Race 4) ಚಿತ್ರಕ್ಕೆ ಸಿದ್ಧಾರ್ಥ್ ಎಂಟ್ರಿ ಕೊಡಲಿದ್ದಾರೆ. ಇದನ್ನೂ ಓದಿ:ಹುಟ್ಟೂರಿನಲ್ಲಿ ಮೀನಿಗೆ ಗಾಳ ಹಾಕುತ್ತಿರುವ ರಿಷಬ್‌ ಶೆಟ್ಟಿ ಫೋಟೋ ವೈರಲ್

    ‘ರೈಸ್ 4’ ಸಿನಿಮಾದ ಬಗ್ಗೆ ದಿನದಿಂದ ದಿನಕ್ಕೆ ಇಂಟರೆಸ್ಟಿಂಗ್ ಅಪ್‌ಡೇಟ್ ಸಿಗುತ್ತಿದೆ. ಸೈಫ್ ಅಲಿ ಖಾನ್ (Saif Ali Khan) ಜೊತೆ ಸಿನಿಮಾ ಮಾಡಲು ಸಿದ್ಧಾರ್ಥ್ ಮುಂದಾಗಿದ್ದಾರೆ. ಚಿತ್ರದಲ್ಲಿ ತಿರುವು ಕೊಡಲಿರುವ ಪಾತ್ರದಲ್ಲಿ ಅವರು ನಟಿಸಲಿದ್ದಾರೆ ಎಂಬುದು ಬಾಲಿವುಡ್ ಗಲ್ಲಿಯಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಸಂಗತಿ.

    ಸಾಮಾನ್ಯವಾಗಿ ತಾವು ಕೂಡ ಹೀರೋ ಆಗಿದ್ದು ಬೇರೆ ಅವರ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಳ್ಳುವುದಿಲ್ಲ. ಈಗ ಕಾಲ ಬದಲಾಗಿದೆ. ಕತೆ ಮತ್ತು ಪಾತ್ರಕ್ಕೆ ಸ್ಕೋಪ್ ಇದ್ರೆ ಎಂತಹ ಸ್ಟಾರ್ ಆದ್ರೂ ನಟಿಸಿ ಹೋಗ್ತಾರೆ. ಸಿದ್ಧಾರ್ಥ್ ವಿಚಾರದಲ್ಲೂ ಹಾಗೇ ಆಗಿದೆ. ಅವರು ನಟಿಸಲಿರುವ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ರೋಲ್ ಇಷ್ಟವಾಗಿ ‘ರೈಸ್ 4’ ಚಿತ್ರತಂಡಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಇನ್ನೂ ಸೈಫ್ (Saif ali Khan) ಜೊತೆ ಸಿದ್ಧಾರ್ಥ್ ಜುಗಲ್‌ಬಂದಿ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಮುಂದಿನ ವರ್ಷ ಶುರುವಿನಲ್ಲಿ ಈ ಚಿತ್ರಕ್ಕೆ ಚಾಲನೆ ಸಿಗಲಿದೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ

    ಬಾಲಿವುಡ್‍ನ ಪ್ರೇಮ ಪಕ್ಷಿಗಳಾದ ಸಿದ್ಧಾರ್ಥ್ (Sidharth Malhotra) ಮತ್ತು ಕಿಯಾರಾ (Kiara Advani) ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮದುವೆಯ ಮುದ್ದಾದ ಫೋಟೋ ಶೇರ್ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

    ಹಲವು ವರ್ಷಗಳ ಪ್ರೀತಿ (Love Marriage) ಗೆ ಇದೀಗ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಗುರು-ಹಿರಿಯರು, ಆಪ್ತರ ಸಮ್ಮುಖದಲ್ಲಿ ಸಿದ್- ಕಿಯಾರಾ ಜೋಡಿ ಅದ್ಧೂರಿಯಾಗಿ ಹಸೆಮಣೆ ಏರಿದ್ದಾರೆ. ರಾಜಸ್ಥಾನದ ಸೂರ್ಯಗಢನಲ್ಲಿ ಮದುವೆ ಆಗಿದ್ದಾರೆ.

    ನಟಿ ಕಿಯಾರಾ ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ರೆ, ಸಿದ್ಧಾರ್ಥ್ ಮಲ್ಹೋತ್ರಾ ಬಿಳಿ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ನಟ ಪ್ರಭಾಸ್ ಜೊತೆ ಕೃತಿ ಸನೋನ್ ಮದುವೆ: ಬ್ರೇಕಿಂಗ್ ನ್ಯೂಸ್ ಎಂದ ಉಮೈರ್

    ನವಜೋಡಿಯ ಮದುವೆಯ ಫೋಟೋ ಶೇರ್ ಆಗ್ತಿದ್ದಂತೆ ಅಭಿಮಾನಿಗಳು, ಸೆಲೆಬ್ರಿಟಿ ಸ್ನೇಹಿತರ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗಿನ ಬ್ರೇಕ್‍ಅಪ್‍ಗೆ ಹೊಸ ಟ್ವಿಸ್ಟ್ ಕೊಟ್ಟ ನಟಿ ಕಿಯಾರಾ

    ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗಿನ ಬ್ರೇಕ್‍ಅಪ್‍ಗೆ ಹೊಸ ಟ್ವಿಸ್ಟ್ ಕೊಟ್ಟ ನಟಿ ಕಿಯಾರಾ

    ಬಾಲಿವುಡ್ ಕ್ಯೂಟ್ ಜೋಡಿ ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ನಡುವಿನ ಪ್ರೇಮದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಬಿ-ಟೌನ್ ಅಂಗಳದಲ್ಲಿ ಭಾರೀ ಗಾಸಿಪ್‍ಗಳು ಹರಿದಾಡಿದವು. ಇಬ್ಬರ ಸಂಬಂಧ ಕಿತ್ತೇ ಹೋಯಿತು ಎನ್ನುವ ಸುದ್ದಿ ಕೂಡ ಆಯಿತು. ಆದರೆ ಈ ಎಲ್ಲಾ ವದಂತಿಗಳಿಗೆ ಕಿಯಾರಾ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕೊಟ್ಟಿದ್ದಾರೆ. ಪೋಸ್ಟರ್‌ವೊಂದನ್ನು ಹಂಚಿಕೊಂಡಿರುವ ಅವರು, ಈಗ ಹರಿದಾಡುತ್ತಿರುವ ಸುದ್ದಿ ಸುಳ್ಳೆಂದು ಹೇಳಿಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಕೆಲವು ದಿನಗಳ ಹಿಂದೆಯಷ್ಟೇ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬ ವರದಿಗಳು ಹರಡಿದ್ದವು. ಈ ವದಂತಿಗಳ ನಡುವೆಯೇ ಕಿಯಾರಾ ಅವರು ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ಮೂಡಿಬಂದ ‘ಶೇರ್ಷಾ’ ಚಿತ್ರದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಒಟ್ಟಿಗೆ ನಟಿಸಿದ್ದರು. 2021ರಲ್ಲಿ ಬಿಡುಗಡೆ ಆಗಿದ್ದ ಈ ಚಿತ್ರಕ್ಕೆ ಒಟಿಟಿ ಪ್ರಶಸ್ತಿ ಕೂಡಾ ಲಭಿಸಿತ್ತು. ಇಬ್ಬರಿಗೂ ಸಹ ಅತ್ಯುತ್ತಮ ನಟ, ನಟಿ ಪ್ರಶಸ್ತಿ ದೊರೆಕಿತ್ತು. ಪ್ರಶಸ್ತಿ ಪಡೆದ ಪೋಸ್ಟರ್ ಅನ್ನೇ ಪೋಸ್ಟ್ ಮಾಡಿರುವ ಅವರು ಹಾರ್ಟ್ ಮತ್ತು ನಮಸ್ತೆ ಎಮೋಜಿಗಳನ್ನು ಹಾಕಿ ಹಂಚಿಕೊಂಡಿದ್ದಾರೆ.

    ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರೂ ತಮ್ಮ ಪ್ರೀತಿಯ ವಿಚಾರವನ್ನು ಯಾವತ್ತೂ ಬಹಿರಂಗವಾಗಿ ಹೇಳಿಕೊಂಡವರಲ್ಲ. ಹಾಗಂತ ನಿರಾಕರಿಸಿಯೂ ಇಲ್ಲ. ಶೇರ್ಷಾ ಸಿನಿಮಾ ಬಿಡುಗಡೆ ಬಳಿಕ ಈ ಜೋಡಿ ಮತ್ತಷ್ಟು ಫೇಮಸ್ ಆಗಿತ್ತು. ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಇದೀಗ ಒಬ್ಬರಿಗೊಬ್ಬರು ಭೇಟಿ ಮಾಡುವುದನ್ನೆ ಬಿಟ್ಟಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.

    ಇಬ್ಬರೂ ತಮ್ಮ ರಿಲೇಶನ್ ಶಿಪ್ ಕೊನೆಗೊಳಿಸಿದ್ದರಿಂದ, ಒಬ್ಬರಿಗೊಬ್ಬರು ಭೇಟಿ ಮಾಡುವುದನ್ನೇ ನಿಲ್ಲಿಸಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಅಸಲಿ ಕಾರಣ ಬೇರೆಯೇ ಇದೆ. ಇಬ್ಬರೂ ಬೇರೆ ಆಗಿರುವುದು ನಿಜವೇ ಆಗಿದ್ದರೂ, ತಮ್ಮ ತಮ್ಮ ಬ್ಯುಸಿ ಕೆಲಸಗಳಿಂದ ಸೇರಲು ಆಗಿಲ್ಲ ಎನ್ನಲಾಗುತ್ತಿದೆ.