Tag: Siddunyama Gowda

  • ಬಾಗಲಕೋಟೆಯಲ್ಲಿ ಬಂದ್ ಹಿಂಪಡೆದ ಬಿಜೆಪಿ

    ಬಾಗಲಕೋಟೆಯಲ್ಲಿ ಬಂದ್ ಹಿಂಪಡೆದ ಬಿಜೆಪಿ

    ಬಾಗಲಕೋಟೆ: ಇಂದು ನಸುಕಿನ ಜಾವ ಜಮಖಂಡಿ ಶಾಸಕ, ಹಿರಿಯ ರಾಜಕಾರಣಿ ಸಿದ್ದು ನ್ಯಾಮಗೌಡ ನಿಧನ ಹಿನ್ನೆಲೆಯಲ್ಲಿ ಇಂದು ಕರೆ ನೀಡಲಾಗಿದ್ದ ಬಂದ್‍ನ್ನು ಬಿಜೆಪಿ ಹಿಂಪಡೆದಿದೆ.

    ಹಿರಿಯ ರಾಜಕಾರಣಿಗಳು, ಅಪಾರ ಬೆಂಬಲಿಗರನ್ನು ಹೊಂದಿರುವ ಶಾಸಕರು ಇಂದು ಸಾವನ್ನಪ್ಪಿದ್ದು, ಕ್ಷೇತ್ರದ ಜನರು ತಮ್ಮ ನೆಚ್ಚಿನ ಜನನಾಯಕರ ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪಕ್ಷ ಕರೆ ನೀಡಿದ್ದ ಬಂದ್ ನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ತೇರದಾಳ ಕ್ಷೇತ್ರದ ಶಾಸಕ, ಬಿಜೆಪಿ ಮುಖಂಡ ಸಿದ್ದು ಸವದಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಇನ್ನಿಲ್ಲ

    ಈ ಬಾರಿ ಬಾಗಲಕೋಟೆ ಜಿಲ್ಲೆಯಲ್ಲಿ ಕೇವಲ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರ ಗೆಲುವ ಸಾಧಿಸಿದ್ರು. ಬದಾಮಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಗೆಲುವು ಸಾಧಿಸಿದ್ರೆ, ಇತ್ತ ಜಮಖಂಡಿಯಲ್ಲಿ ಸಿದ್ದು ನ್ಯಾಮಗೌಡ ಗೆಲುವನ್ನು ಕಂಡಿದ್ರು. ಈ ಹಿನ್ನೆಲೆಯಲ್ಲಿ ತಮಗೆ ಸಚಿವ ಸ್ಥಾನ ನೀಡಬೇಕೆಂದು ದೆಹಲಿಗೆ ತೆರಳಿ ಹೈಕಮಾಂಡ್‍ಗೆ ಮನವಿ ಸಲ್ಲಿಸಿ ಹಿಂದಿರುವ ವೇಳೆ ಅಪಘಾತ ಸಂಭವಿಸಿದೆ.