ಬಾಗಲಕೋಟೆ: ವಿಜಯಪುರ, ಯಾದಗಿರಿಯ ಬೆನ್ನಲ್ಲೇ ತೇರದಾಳ (Terdal) ತಾಲೂಕು ವ್ಯಾಪ್ತಿಯಲ್ಲೂ ರೈತರಿಗೆ (Farmers) ವಕ್ಫ್ ಬೋರ್ಡ್‌ನಿಂದ (Waqf Board) ನೋಟಿಸ್ ಬಂದಿದೆ.
2017, 2018, 2024 ರಲ್ಲಿ ಬೆಂಗಳೂರಿನ ವಕ್ಫ್ ಬೋರ್ಡ್‌ನಿಂದ ನೋಟಿಸ್ ಬಂದಿದ್ದು, ತೇರದಾಳ ತಾಲೂಕಿನ ವಿವಿಧ ಹಳ್ಳಿಯ 420 ಎಕ್ರೆಗೆ ಸಂಬಂಧಿಸಿದಂತೆ 111 ಮಂದಿ ರೈತರಿಗೆ ನೋಟಿಸ್ ನೀಡಲಾಗಿದೆ.
ತೇರದಾಳ ಜಾಮಿಯಾ ಮಸೀದಿ ಈದ್ಗಾ ಮಸೀದಿ ವ್ಯಾಪ್ತಿಯ ವಕ್ಪ್ ಆಸ್ತಿ ಒತ್ತುವರಿ ಮಾಡಿಕೊಂಡಿದ್ದೀರಿ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಬೆಂಗಳೂರು ವಕ್ಪ್ ಕೋರ್ಟ್‌ಗೆ ಹಾಜರಾಗಿ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ನೋಟಿಸ್‌ನಿಂದಾಗಿ ಈ ಭಾಗದ ರೈತರು 2018 ರಿಂದ ನಿರಂತರವಾಗಿ ವಕ್ಪ್ ಕೋರ್ಟ್ ವಿಚಾರಣೆಗೆ ಅಲೆದಾಡುತ್ತಿದ್ದಾರೆ.
ಈ ವಿಷಯ ತಿಳಿದು ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ (Siddu Savadi) ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ಸಚಿವರು, ಸರ್ಕಾರದ ಅಧಿಕಾರಿಗಳು ನೋಟಿಸ್ ನೀಡಿಲ್ಲ ಎನ್ನುತ್ತಾರೆ. ಆದರೆ ನಮ್ಮಲ್ಲಿ ಇಷ್ಟು ಜನರಿಗೆ ನೋಟಿಸ್ ಬಂದಿದೆ. ಈ ಕಾಂಗ್ರೆಸ್ ಪಕ್ಷ ಉಗ್ರಗಾಮಿಗಳನ್ನು ತಯಾರು ಮಾಡುವ ಫ್ಯಾಕ್ಟರಿಯಾಗಿದೆ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ.
ಈ ಕಾಂಗ್ರೆಸ್ ಸರ್ಕಾರ (Congress Government) ರೈತರ ಬಾಳಿನಲ್ಲಿ ಚೆಲ್ಲಾಟವಾಡುತ್ತಿದೆ. ನಾವು ರೈತರಿಗೆ ನೋಟಿಸ್ ಕೊಟ್ಟಿಲ್ಲ ಎಂದು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇಲ್ಲಿ ನೋಡಿದರೆ ನಮ್ಮಲ್ಲಿ ನೂರಾರು ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ತಿಂಗಳಿಗೊಮ್ಮೆ ನೂರಾರು ರೈತರು ಕೋರ್ಟಿಗೆ ಹೋಗುತ್ತಿದ್ದಾರೆ ಇದು ಕಾಂಗ್ರೆಸ್ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.
ನಮ್ಮ ರೈತರ ಜಮೀನನ್ನು ವಕ್ಫ್ ಬೋರ್ಡ್ ಕಸಿದುಕೊಂಡಿದೆ. ಕೂಡಲೇ ಆ ಜಮೀನು ನಮ್ಮ ರೈತರಿಗೆ ಹಸ್ತಾಂತರ ಮಾಡಬೇಕು. ಇಲ್ಲದೇ ಇದ್ದರೆ ಇಡೀ ದೇಶದ ಆಸ್ತಿಯನ್ನು ವಕ್ಫ್ ಮಂಡಳಿಗೆ ಸೇರಿಸಲು ಕಾಂಗ್ರೆಸ್ ಸರ್ಕಾರ ಹಿಂಜರಿಯುವುದಿಲ್ಲ. ವಕ್ಫ್ ಬೋರ್ಡ್ ಕಾಯ್ದೆಯನ್ನು ರದ್ದುಪಡಿಸಿದರೆ ಮಾತ್ರ ಈ ದೇಶಕ್ಕೆ ನ್ಯಾಯ ಸಿಕ್ಕಂತಾಗುತ್ತೆ ಎಂದು ಹೇಳಿದರು.
ತೇರದಾಳ ಮತ್ತು ಜಮಖಂಡಿ ಕ್ಷೇತ್ರದಲ್ಲಿ ನೂರಾರು ಎಕರೆ ಜಮೀನನ್ನು ವಕ್ಫ್ ಬೋರ್ಡ್ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಕೇವಲ ಒಂದು ಜನಾಂಗದ ವ್ಯಕ್ತಿಗಳಿಗೆ ಸಹಕಾರ ನೀಡುತ್ತಿರುವುದು ಇದು ಸರಿಯಲ್ಲ. ನಾವು ಎಲ್ಲರೂ ಸಮಾನರು ಎಂದು ಮನೋಭಾವನೆಯನ್ನು ಕಾಂಗ್ರೆಸ್ ಸರ್ಕಾರ ಮೊದಲು ಇಟ್ಟುಕೊಳ್ಳಬೇಕಿದೆ ಎಂದರು.
ಇನ್ನು ಭಯಾನಕ ಘಟನೆ ಭವಿಷ್ಯದಲ್ಲಿ ಕಾಣುವ ಆತಂಕ ಇದೆ. ಈ ಕೃತ್ಯದ ಹಿಂದೆ ಹಿಂದೆ ಐಸಿಸ್ ಉಗ್ರರ ಚಿತಾವಣೆ ಇದೆ. ಆದರೆ ಸರ್ಕಾರದ ನಡೆ ಸಂಶಯಾಸ್ಪದವಾಗಿದೆ. ಸರ್ವ ಸಂಗತ್ಯಾಗ ಮಾಡಿದ ಮುನಿಗಳ ಹತ್ಯೆಯ ಹಿಂದೆ ಪಿತೂರಿ ಇದೆ. ಜೈನ ಮುನಿಗಳ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದರು.
ಭಕ್ತರು ಆರ್ಥಿಕ ವ್ಯವಹಾರ ಮಾಡಿರಬಹುದು. ಸಂಸ್ಕಾರ ಕೊಡುವ ಮುನಿಗಳು ಆರ್ಥಿಕ ವ್ಯವಹಾರ ಮಾಡಲು ಸಾಧ್ಯವಿಲ್ಲ. ಈ ಪ್ರಕರಣವನ್ನು ಸರ್ಕಾರ ಮುಚ್ಚಿಡುವ ಯತ್ನ ಮಾಡುತ್ತಿದೆ ಎಂದು ದೂರಿದರು.
ಬಾಗಲಕೋಟೆ: ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿವೆ. ಸದ್ಯಕ್ಕೆ ಬಾದಾಮಿ (Badami) ಹೈವೋಲ್ಟೇಜ್ ಕ್ಷೇತ್ರವಾಗಿದ್ದರೂ, ತೇರದಾಳ ಕೂಡ ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗುತ್ತಿದೆ. ತೇರದಾಳ ಕ್ಷೇತ್ರಕ್ಕೆ ಬಹಳ ಹಳೆಯ ರಾಜಕೀಯ ಇತಿಹಾಸವಿಲ್ಲ. ಈ ಕ್ಷೇತ್ರ ಉಗಮವಾಗಿದ್ದೇ 2008ರಲ್ಲಿ.
ತೇರದಾಳ ಕ್ಷೇತ್ರದ ಜನರಿಗೆ ಮೊದಲ ಬಾರಿ ಚುನಾವಣೆ (Election) ಆಗಿದ್ದರಿಂದ ಬಾರಿ ಕುತೂಹಲವನ್ನು ಕೆರಳಿಸಿತ್ತು. ಇನ್ನು 2008ರ ಚುನಾವಣೆಯಲ್ಲಿ ಈ ಕ್ಷೇತ್ರ ಇಷ್ಟು ಕುತೂಹಲಕಾರಿ ಹಾಗೂ ಹೈವೋಲ್ಟೇಜ್ ಕ್ಷೇತ್ರ ಆಗಲೂ ಪ್ರಮುಖ ಕಾರಣ ಚಿತ್ರನಟಿ ಹಿರಿಯ ಕಲಾವಿದೆ ಉಮಾಶ್ರಿಯವರ ಸ್ಪರ್ಧೆ.
ಚಿತ್ರನಟಿಯಾಗಿ ತನ್ನದೇ ಗುರುತು ಮೂಡಿಸಿದ್ದ ಉಮಾಶ್ರಿ ನೇಕಾರ ಸಮುದಾಯದವರೇ ಆಗಿದ್ದರು. ಈ ಕ್ಷೇತ್ರದಲ್ಲಿ ನೇಕಾರರ 40 ಸಾವಿರ ಮತಗಳಿವೆ. ನೇಕಾರರ ಪ್ರಭಾವ ಹೆಚ್ಚಾಗಿರುವ ತೇರದಾಳ (Terdal) ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಅವರು ಮುಂದಾಗಿದ್ದರು.
ಇನ್ನೂ ಮಹಿಳೆ ಎಂಬ ಅನುಕಂಪದೊಂದಿದೆ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಟಿಕೆಟ್ ಪಡೆದು ಅಖಾಡಕ್ಕೆ ಇಳಿದಿದ್ದರು. ಮೊದಲ ಬಾರಿ ಇಷ್ಟೆಲ್ಲ ಪ್ರಭಾವ ಬಿಜೆಪಿ (BJP) ವಿರೋಧಿ ಅಲೆ ಇದ್ದರೂ ಸಹ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸಿದ್ದು ಸವದಿ ವಿರುದ್ಧ ಸೋತಿದ್ದರು. ಭಾರತೀಯ ಸೇನೆಯಲ್ಲಿ ಕೆಲ ವರ್ಷ ಸೇವೆ ಸಲ್ಲಿಸಿ ಬಂದು ರಾಜಕೀಯ ಅಖಾಡಕ್ಕೆ ಇಳಿದು ನೆಲೆ ಕಂಡುಕೊಂಡಿರುವ ಸಿದ್ದು ಸವದಿ. 2008ರ ಮೊದಲು ಜಮಖಂಡಿ ಶಾಸಕರಾಗಿದ್ದರು. ತೇರದಾಳ ಜಮಖಂಡಿ ಕ್ಷೇತ್ರದ ವ್ಯಾಪ್ತಿಯಲ್ಲೇ ಇದ್ದಿದ್ದರಿಂದ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು.
ಉಮಾಶ್ರಿ (Umashree) ಅವರಿಗೆ ಕಲೆ, ಮಹಿಳಾ ಅನುಕಂಪ, ಕಾಂಗ್ರೆಸ್ ಕೃಪಾಶೀರ್ವಾದ ವರ್ಚಸ್ಸು ಇದ್ದಾಗಲೂ ಸಿದ್ದು ಸವದಿ (Siddu Savadi) 62,595 ಮತ ಪಡೆದರೆ, ಉಮಾಶ್ರಿ 50,351 ಮತ ಪಡೆದಿದ್ದರು. ಉಮಾಶ್ರಿ ವಿರುದ್ಧ 12,244 ಮತಗಳ ಅಂತರದಿಂದ ಸಿದ್ದು ಸವದಿ ಗೆದ್ದು ಬೀಗಿದ್ದರು.
ಇನ್ನು 2013ರ ಚುನಾವಣೆಯಲ್ಲಿ ಪುನಃ ಸಿದ್ದು ಸವದಿ ಹಾಗೂ ಉಮಾಶ್ರಿ ಮಧ್ಯೆ ನೇರ ಹಣಾಹಣಿ ನಡೆದಿತ್ತು. ಆಗ ಬಿಜೆಪಿ ಸರ್ಕಾರದಲ್ಲಿ ನಡೆದ ಏರುಪೇರುಗಳು, ಬಿ.ಎಸ್.ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದ್ದು, ಶ್ರೀರಾಮುಲು ಬಿಎಸ್‍ಆರ್ ಪಕ್ಷದ ಪರಿಣಾಮದಿಂದ ಉಮಾಶ್ರಿ, ಸಿದ್ದು ಸವದಿ ವಿರುದ್ಧ ಜಯ ಸಾಧಿಸಿದ್ದರು.
ಉಮಾಶ್ರಿ 70,189 ಮತ ಪಡೆದರೆ ಸಿದ್ದು ಸವದಿ 67,590 ಮತ ಪಡೆದಿದ್ದರು. ಕೇವಲ 2599 ಮತಗಳ ಅಂತರದಿಂದ ಉಮಾಶ್ರಿ ಜಯ ಸಾಧಿಸಿದ್ದರು. ನಂತರ 2018ರಲ್ಲಿ ಪ್ರಧಾನಿ ಮೋದಿ ಹವಾ, ಯಡಿಯೂರಪ್ಪ ಪುನಃ ಬಿಜೆಪಿಗೆ ಬಂದಿದ್ದು, ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಕಾರಣದಿಂದ 2018ರಲ್ಲಿ ತೇರದಾಳ ಕ್ಷೇತ್ರದಲ್ಲಿ ಮತ್ತೆ ಎದುರಾಳಿಯಾಗಿದ್ದ ಉಮಾಶ್ರಿ ಸಿದ್ದು ಸವದಿ ಮಧ್ಯೆ ನೇರ ಹಣಾಹಣಿ ನಡೆದಿತ್ತು. ಆಗ ಸಿದ್ದು ಸವದಿ 87,583 ಮತ ಪಡೆದರೆ, ಉಮಾಶ್ರಿ 66,470 ಮತ ಪಡೆದಿದ್ದರು. 21,113 ಮತಗಳ ಅಂತರದಿಂದ ಸಿದ್ದು ಸವದಿ ಜಯ ಗಳಿಸಿದ್ದರು.
ತೇರದಾಳ ಕ್ಷೇತ್ರದಲ್ಲಿ ನೇಕಾರರು, ಲಿಂಗಾಯತ ಮತದಾರರು ಹೆಚ್ಚಾಗಿದ್ದು ನೇಕಾರರೇ ಇಲ್ಲಿ ಪ್ರಮುಖ ನಿರ್ಣಾಯಕರಾಗಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ನೇಕಾರ ಹಾಗೂ ಲಿಂಗಾಯತರ ಸಮುದಾಯದವರೇ ಶಾಸಕರಾಗಿದ್ದಾರೆ. ಎರಡು ಬಾರಿ ಲಿಂಗಾಯತ ಪಂಚಮಾಲಿ ಸಮುದಾಯದ ಸಿದ್ದು ಸವದಿ ಶಾಸಕರಾದರೆ. ಒಂದು ಬಾರಿ ನೇಕಾರ ಸಮಾಜದ ಉಮಾಶ್ರಿ ಶಾಸಕಿಯಾಗಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಉಮಾಶ್ರಿ ಸಚಿವೆಯಾಗಿ ಕೂಡ ಕೆಲಸ ಮಾಡಿದ್ದಾರೆ. ಇಂತಹ ಕ್ಷೇತ್ರದಲ್ಲಿ 2023ರ ಚುನಾವಣೆ ಬಾರಿ ಕುತೂಹಲ ಕೆರಳಿಸಿದೆ.
ಉಮಾಶ್ರಿ ವಿರುದ್ಧ ಪರಕೀಯರು ಎಂಬ ವಿರೋಧಿ ಅಲೆ
ಈ ಬಾರಿ ತೇರದಾಳ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ಎರಡು ಪಕ್ಷದಲ್ಲಿ ಹೆಚ್ಚಾಗಿದೆ. ಉಮಾಶ್ರಿ ಈ ಭಾಗದವರಾಗದ ಕಾರಣ ಈ ಬಾರಿ ಕಾಂಗ್ರೆಸ್‍ನಲ್ಲಿ ಎಲ್ಲಾ ಮುಖಂಡರು ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. 16 ಜನರು ತೇರದಾಳ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳಾಗಿದ್ದು, ಟಿಕೆಟ್‍ಗಾಗಿ ಇನ್ನಿಲ್ಲದ ಪ್ರಯತ್ನ ಶುರು ಮಾಡಿದ್ದಾರೆ. ಉಮಾಶ್ರಿ ಬಿಟ್ಟು ಸ್ಥಳೀಯರಿಗೆ ಟಿಕೆಟ್ ಕೊಟ್ಟರೆ ಮಾತ್ರ ಕಾಂಗ್ರೆಸ್ ಬೆಂಬಲಿಸೋದಾಗಿ ಕಾರ್ಯಕರ್ತರು ನಿಂತಿದ್ದಾರೆ. ಕಾಂಗ್ರೆಸ್ ನಲ್ಲಿ ಪ್ರಮುಖವಾಗಿ ವೈದ್ಯರೇ ಆಕಾಂಕ್ಷಿಗಳಾಗಿದ್ದಾರೆ. ಕಣ್ಣಿನ ವೈದ್ಯ ಡಾ.ಪದ್ಮಜಿತ್ ನಾಡಗೌಡ, ಜೈನ ಸಮುದಾಯಕ್ಕೆ ಸೇರಿದವರು. ಪಂಚಮಸಾಲಿ ಸಮುದಾಯಕ್ಕೆ ಸೇರಿದ ಡಾ.ಎ.ಆರ್ ಬೆಳಗಲಿ, ನೇಕಾರ ಸಮುದಾಯಕ್ಕೆ ಸೇರಿರುವ ಎಮ್.ಎಸ್ ದಡ್ಡೆನವರ ಸೇರಿದಂತೆ 16 ಜನರು ಆಕಾಂಕ್ಷಿಗಳಿದ್ದಾರೆ. ಆದರೆ ಮುಖ್ಯ ರೇಸ್ ನಲ್ಲಿ ಉಮಾಶ್ರಿ, ಪದ್ಮಜಿತ್ ನಾಡಗೌಡ. ಡಾ.ಎ.ಆರ್ ಬೆಳಗಲಿ ಇದ್ದಾರೆ.
ಬಿಜೆಪಿಯಲ್ಲೂ ಕೂಡ ಟಿಕೆಟ್ ಅಸಮಾಧಾನ
ಬಿಜೆಪಿಯಿಂದ 6-7 ಜನರು ಆಕಾಂಕ್ಷಿಗಳಿದ್ದು ಈ ಬಾರಿ ಟಿಕೆಟ್ ಸಿದ್ದು ಸವದಿಗೆ ನೀಡಬಾರದು ಎಂಬ ಕೂಗು ಕೇಳಿ ಬಂದಿದೆ. ಜೊತೆಗೆ ನೇಕಾರ ಸಮುದಾಯಕ್ಕೆ ಬಿಜೆಪಿ ಪಕ್ಷದಿಂದ ಟಿಕೆಟ್ ನೀಡುವಂತೆ ಒತ್ತಡ ಬರುತ್ತಿದೆ. ಆದರೆ ಯಡಿಯೂರಪ್ಪ ಬನಹಟ್ಟಿ ವಿಜಯಸಂಕಲ್ಪ ಯಾತ್ರೆಗೆ ಬಂದಾಗ ಸಿದ್ದು ಸವದಿಯನ್ನು ಆರಿಸಿ ಕಳಿಸಿ ಎಂದಿದ್ದರು. ಮರುದಿನ ಬಾಯಿ ತಪ್ಪಿ ಹೇಳಿದ್ದೇನೆ ಎಂದು ಸಮರ್ಥನೆ ಮಾಡಿಕೊಂಡಿದ್ದರು.
ಕ್ಷೇತ್ರದಲ್ಲಿ ನೇಕಾರರು ಹೆಚ್ಚಿನ ಪ್ರಭಾವ ಹೊಂದಿದ ಕಾರಣ ನೇಕಾರರಿಗೆ ಸಾಲ ಸೌಲಭ್ಯ, ನೇಕಾರರ ಅಭಿವೃದ್ಧಿ, ನೇಕಾರರ ಸಾಲ ಮನ್ನಾ, ಮಗ್ಗಗಳಿಗೆ ವಿದ್ಯುತ್ ಎಲ್ಲವೂ ಚುನಾವಣೆಯ ಪ್ರಮುಖ ಅಸ್ತ್ರಗಳಾಗಿರುತ್ತವೆ. ನೇಕಾರ ಕ್ಷೇತ್ರದಲ್ಲಿ ಈ ಬಾರಿ ಆಕಾಂಕ್ಷಿಗಳ ಪಟ್ಟಿ ಎರಡು ಪಕ್ಷದಲ್ಲಿ ಹೆಚ್ಚಾಗಿದೆ. ಇದು ಚುನಾವಣೆಯ ಕುತೂಹಲದ ಕಾವನ್ನು ಹೆಚ್ಚಿಸಿದೆ. ಇದನ್ನೂ ಓದಿ: ಈ ಬಾರಿ 20ಕ್ಕೂ ಹೆಚ್ಚು ಹಾಲಿ ಬಿಜೆಪಿ ಶಾಸಕರಿಗೆ ಕೊಕ್?
ಬಾಗಲಕೋಟೆ: ಕಾಂಗ್ರೆಸ್ ಉಗ್ರಗಾಮಿಗಳ ಸಂತಾನ ಎಂದು ತೇರದಾಳ ಶಾಸಕ ಸಿದ್ದು ಸವದಿ ಆರೋಪಿಸಿದರು.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಆರ್‌ಎಸ್‍ಎಸ್ ಚಡ್ಡಿ ಟೀಕೆ ಕುರಿತು ಮಾತನಾಡಿದ ಅವರು, ಆನೆ ಹೋಗುತ್ತಿರುತ್ತದೆ, ಶ್ವಾನಗಳು ಬೊಗಳುತ್ತಿರುತ್ತವೆ. ಆನೆ ಯಾವಾಗಲೂ ಉತ್ತರ ಕೊಡುವುದಿಲ್ಲ. ಶ್ವಾನಗಳು ಬೊಗಳುತ್ತಿರುತ್ತವೆ. ಆರ್‌ಎಸ್‍ಎಸ್ ಸಹ ಅದೇ ರೀತಿ ಯಾರಿಗೂ ಉತ್ತರ ಕೊಡೋದಕ್ಕೆ ಹೋಗೋದಿಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಜೆಡಿಎಸ್‍ಗೆ ಕೇಡುಗಾಲ ಬಂದಿತ್ತು: ಕುಮಾರಸ್ವಾಮಿಗೆ ಆಮೆ-ಮೊಲದ ಕಥೆ ಹೇಳಿದ ವಿಜಯೇಂದ್ರ
ರಾಷ್ಟ್ರಾಭಿಮಾನಿಗಳ ಸಂಘ ಆರ್‌ಎಸ್‍ಎಸ್. ಸಂಘದ ಸಂಸ್ಕಾರ ಪಡೆದುಕೊಂಡವರು ಎಲ್ಲ ಕ್ಷೇತ್ರದಲ್ಲಿ ಇದ್ದಾರೆ. ಅದಕ್ಕಾಗಿ ದೇಶ ಇಂದು ಸುಭದ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪನಂತಹ ನಾಯಕರು ಆರ್‌ಎಸ್‍ಎಸ್ ಸಂಸ್ಕಾರ ಪಡೆದುಕೊಂಡವರು ಎಂದು ವಿವರಿಸಿದರು.
ಮೊದಲು ಪೊಲೀಸರು, ಮಿಲಿಟರಿ ಒಳಗೂ ಚಡ್ಡಿಗಳಿವೆ. ಈಗ ನೀವು ಅವರೆಲ್ಲರಿಗೂ ನೀವು ಅವಮಾನ ಮಾಡಿದ ರೀತಿ ಆಯ್ತು. ನೀವು ದೇಶದ ಸಂಸ್ಕೃತಿ ಅವಮಾನ ಮಾಡೋದಕ್ಕೆ ಮಾತ್ರ ಬಾಯಿ ತೆರೆಯುತ್ತೀರಿ. ಭಯೋತ್ಪಾದಕರು, ಉಗ್ರಗಾಮಿಗಳ ಬಗ್ಗೆ ಮಾತಾಡೋದಕ್ಕೆ ನಿಮಗೆ ಧೈರ್ಯ ಆಗೋದಿಲ್ಲ. ಅದಕ್ಕೆ ಕಾಂಗ್ರೆಸ್‍ನವರನ್ನು ನಾನು ಭಯೋತ್ಪಾದಕರ, ಉಗ್ರಗಾಮಿಗಳ ಸಂತಾನ ಅಂತ ಹೇಳಿದ್ದೇನೆ ಎಂದ ಆಕ್ರೋಶ ಹೊರಹಾಕಿದರು.
ಸಂಘ ಇದೆ ಅಂತ ಅವರು ಸುಭದ್ರವಾಗಿ ದೇಶದಲ್ಲಿದ್ದಾರೆ. ಸಂಘ ಇರದಿದ್ರೆ ಇವರು ಎಲ್ಲಿ ಇರುತ್ತಿದ್ರೊ ಗೊತ್ತಿಲ್ಲ. ಸಂಘದ ಬಗ್ಗೆ ತಿಳಿದುಕೊಂಡು ಮಾತಾಡಿದ್ರೆ ಒಳ್ಳೆಯದು. ಚಡ್ಡಿಯನ್ನು ಕೇವಲ ಸಂಘದವರು ಮಾತ್ರ ಹಾಕಿಕೊಳ್ಳುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ಬೆಂಗಳೂರು: ಭಾರತೀಯ ಜನತಾ ಪಾರ್ಟಿಯಿಂದ ಉಚ್ಛಾಟನೆ ಮಾಡಿದರೂ ನಾವು ಬಿಜೆಪಿಗೇ ವೋಟ್ ಹಾಕುವುದು ಎಂದು ಶಾಸಕ ಸಿದ್ದು ಸವದಿ ಹೇಳಿದ್ದಾರೆ.
ಬೊಮ್ಮಾಯಿ ಸರ್ಕಾರದ ಸಚಿವರ ಪಟ್ಟಿ ರಿಲೀಸ್ ಆಗಿದ್ದು, ಸದ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಿದ್ದು, ಕೊನೆಯ ಬಾರಿ ಕೈ ತಪ್ಪುವುದು ಅಲ್ಲ ಅವರು ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ. ನಮ್ಮಂತವರು ಲೆಕ್ಕಕ್ಕೇ ಬರಂಗಿಲ್ಲ. ಬೇರೆ ಬೇರೆ ರೀತಿಯಿಂದ ಯಾಕೆ ಅವರನ್ನು ಮಂತ್ರಿ ಮಾಡುತ್ತಾರೋ ಗೊತ್ತಿಲ್ಲ. ನಮಗಿಂತ ಜ್ಯೂನಿಯರ್ ಗಳನ್ನು, ನಾವೇ ಪಕ್ಷಕ್ಕೆ ಕರೆತಂದವರನ್ನು ಇಂದು ಮಿನಿಸ್ಟರ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮನ್ನು ಮಂತ್ರಿಗಳಾಗಿ ಮಾಡುತ್ತಿಲ್ಲ. ತಾಳಿದವನೇ ಬಾಳಿಯಾನು ಅಂತಾರಲ್ವ ಹಂಗೆ ಸಹಿಸಿಕೊಳ್ಳುದಷ್ಟೇ. ಮಂತ್ರಿಯಾಗಲು ನನಗೇನು ಕೊರತೆ ಇದೆ ಅಂತ ಹೈಕಮಾಂಡ್ ಅವರನ್ನೇ ಕೇಳಬೇಕು. ಮೌನವಾಗಿರುವವರಿಗೆ, ನಿಯತ್ತಾಗಿರುವವರಿಗೆ, ಪಕ್ಷಕ್ಕೆ ಬದ್ಧರಾಗಿರುವವರಿಗೆ ಕೊಡುತ್ತಿಲ್ಲ. ಇವರು ಎಲ್ಲೂ ಹೋಗಂಗಿಲ್ಲ, ಏನೂ ಮಾಡಂಗಿಲ್ಲ ಅನ್ನೋ ವಿಶ್ವಾಸ ಇರಬೇಕು. ಹಾಗಾಗಿ ನಮಗೆ ಸಚಿವ ಸ್ಥಾನ ಕೊಡದೇ ಇರಬಹುದು ಎಂದು ಹೇಳಿದರು.
ಡಬಲ್ ಗೇಮ್ ಆಡೋರನ್ನು, ಪಕ್ಷಕ್ಕೆ ಚೂರಿ ಹಾಕುವವರನ್ನು ಮಂತ್ರಿ ಮಾಡುತ್ತಾರೆ. ಒಳ್ಳೆಯ ಕಾಲ ಬಂದೇ ಬರುತ್ತದೆ. ನಮ್ಮ ಹಣೆಬರಹ ಚೆನ್ನಾಗಿಲ್ಲ ಅದಿಕೆ ಮಂತ್ರಿ ಆಗಿಲ್ಲ. ನಾವು ಲಾಬಿ ಮಾಡಲ್ಲ, ನೇರವಾದಿಗಳು. ಮುಂದೆ ಒಳ್ಳೆಯ ಕಾಲ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಂಪುಟದಲ್ಲಿ ವಲಸಿಗರಿಗೆ ಮಣೆ – ರಾಮದಾಸ್ ಟಾಂಗ್
ಬಿಜೆಪಿ ಪಕ್ಷ ದೇಶಕ್ಕೆ ಅನಿವಾರ್ಯ. ಜೀವನದ ಕೊನೆ ಉಸಿರುವವರೆಗೂ ಬಿಜೆಪಿ ಪಕ್ಷಕ್ಕೆ ದುಡಿಯುತ್ತೇವೆ. ಪಾರ್ಟಿಯಿಂದ ಉಚ್ಛಾಟನೆ ಮಾಡಿದರೂ ಬಿಜೆಪಿಗೇ ವೋಟ್ ಹಾಕುವುದಾಗಿ ಸಿದ್ದು ಸವದಿ ಸ್ಪಷ್ಟಪಡಿಸಿದರು.
ಬಾಗಲಕೋಟೆ: ಕೊರೊನಾದಿಂದ ಸಹೋದರನನ್ನು ಕಳೆದುಕೊಂಡ ವ್ಯಕ್ತಿ ಶಾಸಕರಿಗೆ ಕರೆ ಮಾಡಿ ಆಕ್ಸಿಜನ್ ವ್ಯವಸ್ಥೆ ಮಾಡಬೇಕು, ಸರ್ಕಾರಿ ಆಸ್ಪತ್ರೆಯ ಮುಂದೆ ಕೂರಬೇಕು ಹೇಳಿದ್ದಕ್ಕೆ ನಾಲಾಯಕ್ ಇಡು ಫೋನ್ ಎಂದು ತೆರದಾಳ ಶಾಸಕ ಸಿದ್ದು ಸವದಿ ಉದ್ದಟತನದ ಮಾತುಗಳನ್ನಾಡಿದ್ದಾರೆ.
ಸಂಜಯ್ ದೊಂಡಿಬಾಗ ಗಾಯಕವಾಡ(41) ಕೊರೊನಾ ದಿಂದ ಶನಿವಾರ ಸಾವನ್ನಪ್ಪಿದ್ದಾರೆ. ಇವರು ರಬಕವಿಬನಹಟ್ಟಿ ತಾಲ್ಲೂಕಿನ ಆಸಂಗಿ ಗ್ರಾಮದ ನಿವಾಸಿಯಾಗಿದ್ದಾರೆ. ಆಕ್ಸಿಜನ್ ಸಿಗದೇ ಸಂಜಯ್ ಸಾವನ್ನಪಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಂಜಯ್ ಅವರನ್ನು ಉಳಿಸಿಕೊಳ್ಳಲು ಕುಟುಂಬದವರು ಬಾಗಲಕೋಟೆ ಜಮಖಂಡಿ ವಿಜಯಪುರಕ್ಕೆ ಅಲೆದಾಡಿದ್ದಾರೆ. ಕೊನೆಗೂ ಆಕ್ಸಿಜನ್ ಸಿಗದೆ ವಿಜಯಪುರದಲ್ಲಿ ಸಂಜಯ್ ಮೃತಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಸವದಿಯವರಿಗೆ ಕರೆ ಮಾಡಿದ ಮೃತನ ಸಹೋದರ ಅಶೋಕ್ ಮನೆಯಲ್ಲಿ ಕೂರಲು ನಿಮ್ಮನ್ನು ಆರಿಸಿ ಕಳುಹಿಸಿಲ್ಲ. ಆಕ್ಸಿಜನ್ ವ್ಯವಸ್ಥೆ ಮಾಡಬೇಕು. ಸರ್ಕಾರಿ ದವಾಖಾನೆ ಮುಂದೆ ಕುಳಿತುಕೊಳ್ಳಬೇಕು ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸವದಿ ನಾಲಾಯಕ್ ಇಡು ಫೋನ್ ದೊಡ್ಡ ಕಿಸಾಮತಿ ಮಾಡ್ತಿ… ಶಾಣ್ಯಾ ಅದಿ ಇಡು ಫೋನ್ ಎಂದು ಗರಂ ಆಗಿದ್ದಾರೆ.
ಸಹೋದರನನ್ನು ಕಳೆದುಕೊಂಡ ವ್ಯಕ್ತಿಗೆ ಸಮಾಧಾನದ ಮಾತುಗಳನ್ನಡುವುದು ಬಿಟ್ಟು ಉದ್ಧಟತನದ ಮಾತುಗಳನ್ನಾಡಿದ್ದಾರೆ ಎದಮು ಸವದಿ ವಿರುದ್ಧ ಆಕ್ರೋಶ ಹೋರಹಾಕಿದ್ದಾರೆ.
ಬಾಗಲಕೋಟೆ: ಮಹಲಿಂಗಪುರ ಪುರಸಭೆ ಸದಸ್ಯೆಯರ ತಳ್ಳಾಟ ನೂಕಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸದಸ್ಯೆಗೆ ಗರ್ಭಪಾತವಾಗಿದೆ.
ಚಾಂದಿನಿ ನಾಯಕ್ ಗರ್ಭಪಾತವಾದ ಪುರಸಭೆ ಸದಸ್ಯೆ. ಈಕೆಗೆ ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಮಹಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಬಾರ್ಷನ್ ಆಗಿದೆ. ನವೆಂಬರ್ 9 ರಂದು ನಡೆದಿದ್ದ ಶಾಸಕರು ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ತಳ್ಳಾಟ ನೂಕಾಟದಿಂದ ಕೆಳಕ್ಕೆ ಬಿದ್ದಿದ್ದ ಚಾಂದಿನಿ ನಾಯಕ್ ಅವರ ಹೊಟ್ಟೆಗೆ ಏಟು ಬಿದ್ದಿತ್ತು. ಆಗ ಚಾಂದಿನಿ ಅವರು ಮೂರು ತಿಂಗಳು ಗರ್ಭಿಣಿಯಾಗಿದ್ದರು. ಇದೀಗ ಅವರಿಗೆ ಗರ್ಭಪಾತವಾಗಿದೆ. ಇದನ್ನೂ ಓದಿ: ಪುರಸಭೆಯ ಮಹಿಳಾ ಸದಸ್ಯೆಯನ್ನು ಎಳೆದಾಡಿ ಬಿಜೆಪಿ ಶಾಸಕ, ಬೆಂಬಲಿಗರ ಅಸಭ್ಯ ವರ್ತನೆ
ನಡೆದಿದ್ದೇನು?:
ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಸಂದರ್ಭದಲ್ಲಿ ಮಹಿಳೆಯೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಚುನಾವಣೆಯಲ್ಲಿ ಮತ ಚಲಾಯಿಸಲು ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರು ತೆರಳುತ್ತಿದ್ದರು. ಈ ವೇಳೆ ಸವಿತಾ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ತೆರಳುತ್ತಿದ್ದಾರೆ ಎಂಬ ಮಾಹಿತಿ ಪಡೆದ ಶಾಸಕರು, ಸದಸ್ಯೆಯನ್ನು ಎಳೆದಾಡಿ ಗೂಂಡಾ ವರ್ತನೆ ತೋರಿದ್ದರು. ಶಾಸಕರು ದೌರ್ಜನ್ಯ ನಡೆಸಿರುವ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯನ್ನು ಎಳೆದಾಡಿ ಮೈ, ಕೈ ಮುಟ್ಟಿ ಅಮಾನವೀವಾಗಿ ವರ್ತನೆ ಮಾಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿತ್ತು. ಪೊಲೀಸರ ಸಮ್ಮುಖದಲ್ಲಿಯೇ ಇಂತಹ ಅಮಾನವೀಯ ಘಟನೆ ನಡೆದಿದ್ದು, ಬಿಜೆಪಿ ಸದಸ್ಯರ ಸಂಖ್ಯಾಬಲ ಹೆಚ್ಚಿಸಲು ಮಹಿಳಾ ಪುರಸಭೆ ಸದಸ್ಯೆಯೊಂದಿಗೆ ಅಮಾನವೀಯತೆಯಿಂದ ವರ್ತನೆ ಮಾಡಲಾಗಿತ್ತು. ಶಾಸಕರ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ನಾನು ಮಹಿಳೆಯ ರಕ್ಷಣೆಗೆ ಮುಂದಾಗಿದ್ದೆ- ಅಸಭ್ಯ ವರ್ತನೆಗೆ ಸಿದ್ದು ಸವದಿ ಸಮರ್ಥನೆ
ಘಟನೆ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಚಾಂದಿನಿ ನಾಯ್ಕ್, ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ತೆರಳಿದ್ದೆವು. ಈ ವೇಳೆ ನಮಗೆ ಮತ ಚಲಾಯಿಸಲು ಅವಕಾಶ ನೀಡದೆ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಘಟನೆ ನಡೆಯುವ ಮುನ್ನವೇ ನಮಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೆವು. ಆದರೆ ಅವರು ಯಾವುದೇ ರಕ್ಷಣೆ ನೀಡಲು ಮುಂದಾಗಲಿಲ್ಲ. ಶಾಸಕರು ಹಾಗೂ ಅವರ ಬೆಂಬಲಿಗರು ನಮ್ಮನ್ನು ಹಿಡಿದು ಎಳೆದಾಡಿ, ಮೆಟ್ಟಿಲು ಮೇಲಿನಿಂದ ತಳ್ಳಿ ತುಳಿದಾಡಿದ್ದರು. ಘಟನೆಯಿಂದ ಮಾಸಿಕವಾಗಿ, ದೈಹಿಕವಾಗಿ ನೋವಾಗಿದ್ದು, ನಮ್ಮ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನ್ಯಾಯ ಬೇಕಿದೆ ಎಂದು ಅಲವತ್ತುಕೊಂಡಿದ್ದರು. ಇದನ್ನೂ ಓದಿ: ಹಿಡಿದು, ಎಳೆದಾಡಿ, ಮೆಟ್ಟಿಲಿನಿಂದ ತಳ್ಳಿದ್ರು- ಪುರಸಭೆ ಸದಸ್ಯೆ ಕಣ್ಣೀರು
– ಮೋದಿ ಭೇಟಿ ಬಚಾವೋ ಅಂತಾರೇ, ಶಾಸಕರ ವರ್ತನೆ ಸರಿನಾ?
– ದಲಿತ ಹೆಣ್ಣು ಮಗಳಿಗೆ ಹೀಗಾದ್ರೆ ಮುಂದೆ ಗತಿ ಏನು?
ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರ ಪುರಸಭೆ ಸದಸ್ಯೆರನ್ನು ಎಳೆದಾಡಿ, ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ಸದಸ್ಯೆ ಚಾಂದಿನಿ ನಾಯ್ಕ್ ಕಣ್ಣೀರಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ ಘಟನೆ ಕುರಿತು ಮಾಹಿತಿ ನೀಡಿದ ಸದಸ್ಯೆ ಚಾಂದಿನಿ ನಾಯ್ಕ್, ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ತೆರಳಿದ್ದೆವು. ಈ ವೇಳೆ ನಮಗೆ ಮತ ಚಲಾಯಿಸಲು ಅವಕಾಶ ನೀಡದೆ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಘಟನೆ ನಡೆಯುವ ಮುನ್ನವೇ ನಮಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೆವು. ಆದರೆ ಅವರು ಯಾವುದೇ ರಕ್ಷಣೆ ನೀಡಲು ಮುಂದಾಗಲಿಲ್ಲ. ಶಾಸಕರು ಹಾಗೂ ಅವರ ಬೆಂಬಲಿಗರು ನಮ್ಮನ್ನು ಹಿಡಿದು ಎಳೆದಾಡಿ, ಮೆಟ್ಟಿಲು ಮೇಲಿನಿಂದ ತಳ್ಳಿ ತುಳಿದಾಡಿದ್ದರು. ಘಟನೆಯಿಂದ ಮಾಸಿಕವಾಗಿ, ದೈಹಿಕವಾಗಿ ನೋವಾಗಿದ್ದು, ನಮ್ಮ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನ್ಯಾಯ ಬೇಕಿದೆ ಎಂದರು.
ಪ್ರಧಾನಿ ಮೋದಿ ಅವರು ಮೋದಿ ಭೇಟಿ ಬಚಾವೋ ಎಂದು ಹೇಳುತ್ತಾರೆ. ಆದರೆ ಈ ರೀತಿ ಶಾಸಕರು ನಡೆದುಕೊಳ್ಳುತ್ತಾರಾ? ಚುನಾವಣೆಯ ಸಂದರ್ಭದಲ್ಲಿ ನಮ್ಮನ್ನು ಯಾರು ಕಿಡ್ನಾಪ್ ಮಾಡಿಲ್ಲ. ದಲಿತ ಸದಸ್ಯೆಯಾಗಿ ನನಗೆ ಅನ್ಯಾಯವಾಗಿತ್ತು. ಆದ್ದರಿಂದಲೇ ನಾನು ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರಿಗೆ ಬೆಂಬಲ ನೀಡಲು ಮುಂದಾಗಿದ್ದೆ. ಆದರೆ ನಮಗೆ ಮತ ಚಲಾಯಿಸಲು ಅವಕಾಶ ನೀಡದೆ ಚುನಾವಣೆ ನಡೆಸಿದ್ದಾರೆ. ಜನರು ನಮ್ಮನ್ನು ಆಯ್ಕೆ ಮಾಡಿದ್ದರು ನಮಗೆ ಯಾವುದೇ ಅವಕಾಶ ಲಭಿಸಿಲ್ಲ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ನಾನು ಮಹಿಳೆಯ ರಕ್ಷಣೆಗೆ ಮುಂದಾಗಿದ್ದೆ- ಅಸಭ್ಯ ವರ್ತನೆಗೆ ಸಿದ್ದು ಸವದಿ ಸಮರ್ಥನೆ
ಸವದಿ ಅವರೇ ನಮ್ಮ ಮೇಲೆ ಜನರನ್ನು ನುಗ್ಗಿಸಿದ್ದರು. ಇದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಯಾರು ದೌರ್ಜನ್ಯ ನಡೆಸಿದ್ದಾರೆ ಎಂಬುವುದು ಸ್ಪಷ್ಟವಾಗಿ ಕಾಣಿಸುತ್ತದೆ. ನಮ್ಮ ಮೇಲೆ ಇಷ್ಟು ನಡೆದರು ಪೊಲೀಸರು ರಕ್ಷಣೆ ನೀಡಲು ಮುಂದಾಗದೇ ಕೈಕಟ್ಟಿ ನಿಂತಿದ್ದರು. ಈಗ ನಮ್ಮ ಮೇಲಿನ ದೌರ್ಜನ್ಯ ನಡೆಸಿದವರ ವಿರುದ್ಧ ಪೊಲೀಸ್ ದೂರು ದಾಖಲಿಸುತ್ತೇವೆ. ಅಲ್ಲದೇ ಮರು ಚುನಾವಣೆ ಮಾಡಲು ಒತ್ತಾಯ ಮಾಡುತ್ತೇವೆ. ಪುರಸಭೆಯ ಮಹಿಳಾ ಸದಸ್ಯಯೇ ಮೇಲೆಯೇ ಈ ರೀತಿ ನಡೆದರೆ ಸಾಮಾನ್ಯ ಮಹಿಳೆಯ ಸ್ಥಿತಿ ಏನು ಎಂದು ಪ್ರಶ್ನೆ ಮಾಡಿದರು.
ನಡೆದಿದ್ದೇನು?
ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಸಂದರ್ಭದಲ್ಲಿ ಮಹಿಳೆಯೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಚುನಾವಣೆಯಲ್ಲಿ ಮತ ಚಲಾಯಿಸಲು ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ, ಚಾಂದಿನಿ ನಾಯ್ಕ್ ಸೇರಿದಂತೆ ಮೂವರು ಮಹಿಳಾ ಸದಸ್ಯೆಯರು ತೆರಳುತ್ತಿದ್ದರು. ಈ ವೇಳೆ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ತೆರಳುತ್ತಿದ್ದಾರೆ ಎಂಬ ಮಾಹಿತಿ ಪಡೆದ ಶಾಸಕರು, ಸದಸ್ಯೆಯನ್ನು ಎಳೆದಾಡಿ ಗೂಂಡಾ ವರ್ತನೆ ತೋರಿದ್ದರು. ಶಾಸಕರು ದೌರ್ಜನ್ಯ ನಡೆಸಿರುವ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯನ್ನು ಎಳೆದಾಡಿ ಮೈ, ಕೈ ಮುಟ್ಟಿ ಅಮಾನವೀವಾಗಿ ವರ್ತನೆ ಮಾಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿತ್ತು. ಪೊಲೀಸರ ಸಮ್ಮುಖದಲ್ಲಿಯೇ ಇಂತಹ ಅಮಾನವೀಯ ಘಟನೆ ನಡೆದಿದ್ದು, ಬಿಜೆಪಿ ಸದಸ್ಯರ ಸಂಖ್ಯಾಬಲ ಹೆಚ್ಚಿಸಲು ಮಹಿಳಾ ಪುರಸಭೆ ಸದಸ್ಯೆಯೊಂದಿಗೆ ಅಮಾನವೀಯತೆಯಿಂದ ವರ್ತನೆ ಮಾಡಲಾಗಿತ್ತು. ಶಾಸಕರ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
– ಕಾಂಗ್ರೆಸ್‍ನವರು ನಮ್ಮ ಸದಸ್ಯೆಯನ್ನ ಕಿಡ್ನಾಪ್ ಮಾಡಿದ್ದರು
ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂದರ್ಭದಲ್ಲಿ ಪುರಸಭೆ ಸದಸ್ಯೆಯನ್ನು ಕೈ ಹಿಡಿದು ಎಳೆದಾಡಿ, ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಅವರು ತಮ್ಮ ಮೇಲಿನ ಆರೋಪವನ್ನು ಅಲ್ಲಗೆಳೆದಿದ್ದಾರೆ. ಅಲ್ಲದೇ ಮಹಿಳಾ ಸದಸ್ಯೆಯ ರಕ್ಷಣೆಗೆ ನಾನು ಮುಂದಾಗಿದ್ದೆ ಎಂದು ತಿಳಿಸಿದ್ದಾರೆ.
ಘಟನೆ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾಹಿತಿ ನೀಡಿದ ಮಾತನಾಡಿದ ಶಾಸಕ ಸಿದ್ದು ಸವದಿ, ನಮ್ಮ ಮಹಿಳಾ ಸಮಸ್ಯೆಯನ್ನು ಕಾಂಗ್ರೆಸ್ ನಾಯಕರು ಕಿಡ್ನಾಪ್ ಮಾಡಿದ್ದರು. ಈ ವೇಳೆ ಅವರು ಚುನಾವಣೆಯಲ್ಲಿ ಮತ ಚಲಾಯಿಸಲು ಆಗಮಿಸಿದ್ದರು. ಈ ಹಂತದಲ್ಲಿ ಸದಸ್ಯೆ ಸವಿತಾ ಅವರನ್ನು ಕೆಲವರು ಹಿಡಿದು ಎಳೆದುಕೊಂಡು ಬರುತ್ತಿದ್ದರು. ನಾನು ಅವರ ಅಲ್ಲೇ ನಿಂತಿದ್ದರ ಕಾರಣ ಅವರ ರಕ್ಷಣೆಗೆ ಮುಂದಾಗಿದ್ದೆ. ಆದರೆ ಅಲ್ಲಿ ಕೆಲವರು ನನ್ನ ಮೇಲೆ ಬಿದ್ದು ಗದ್ದಲ ಮಾಡಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ಅಸಭ್ಯ ವರ್ತನೆ ಮಾಡಿಲ್ಲ. ಇದನ್ನು ನಾನು ಕಾಂಗ್ರೆಸ್ ಅವರು ಕ್ರಿಯೇಟ್ ಮಾಡಿದ್ದಾರೆ. ನಮ್ಮ ನಾಲ್ವರು ಸದಸ್ಯರು ಮತ ಚಲಾಯಿಸಲು ಬರುತ್ತಿದ್ದರು. ಪುರಸಭೆ ಮಹಿಳಾ ಸದಸ್ಯೆ ಸವಿತಾ ಹುರಕಡ್ಲಿ ಅವರನ್ನು ಎಳೆದಾಡುತ್ತಿದ್ದರು. ಆಗ ನಾನು ಅವರನ್ನ ರಕ್ಷಣೆ ಮಾಡಲು ಮುಂದಾದೆ. ಸದಸ್ಯೆಯನ್ನು ಹಿಡಿದು ಎಳೆದಾಡುತ್ತಿದ್ದ ಜನರ ಕೈಯಿಂದ ಅವರನ್ನು ಬಿಡಿಸಲು ನಾನು ಮುಂದಾದೆ. ಮೆಟ್ಟಿಲುಗಳ ಮೇಲಿಂದ ಅವರು ಜಾರಿ ಬಿದ್ದರು. ನಾನು ನಮ್ಮ ಪಕ್ಷದ ಸದಸ್ಯೆಯನ್ನು 3 ಗಂಟೆಗೆ ಕಾಂಗ್ರೆಸ್ ಅವರು ಕಿಡ್ನಾಪ್ ಮಾಡಿದ್ದರು. ಆಕೆಯ ಪತಿ ನಮ್ಮೊಂದಿಗೆ ಇದ್ದರು. ಈ ಹಿಂದೆಯೂ ಮೂರು ಬಾರಿ ಕಾಂಗ್ರೆಸ್ ಅವರು ಇದೇ ರೀತಿ ಮಾಡಿದ್ದಾರೆ. ನಮ್ಮ ಪಕ್ಷಕ್ಕೆ ಮಾತ ನೀಡಿ ಎಂಬುವುದು ತಪ್ಪಾ ಎಂದು ಪ್ರಶ್ನಿಸಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.
ನಡೆದಿದ್ದೇನು?
ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಸಂದರ್ಭದಲ್ಲಿ ಮಹಿಳೆಯೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಚುನಾವಣೆಯಲ್ಲಿ ಮತ ಚಲಾಯಿಸಲು ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರು ತೆರಳುತ್ತಿದ್ದರು. ಈ ವೇಳೆ ಸವಿತಾ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ತೆರಳುತ್ತಿದ್ದಾರೆ ಎಂಬ ಮಾಹಿತಿ ಪಡೆದ ಶಾಸಕರು, ಸದಸ್ಯೆಯನ್ನು ಎಳೆದಾಡಿ ಗೂಂಡಾ ವರ್ತನೆ ತೋರಿದ್ದರು. ಶಾಸಕರು ದೌರ್ಜನ್ಯ ನಡೆಸಿರುವ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯನ್ನು ಎಳೆದಾಡಿ ಮೈ, ಕೈ ಮುಟ್ಟಿ ಅಮಾನವೀವಾಗಿ ವರ್ತನೆ ಮಾಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿತ್ತು. ಪೊಲೀಸರ ಸಮ್ಮುಖದಲ್ಲಿಯೇ ಇಂತಹ ಅಮಾನವೀಯ ಘಟನೆ ನಡೆದಿದ್ದು, ಬಿಜೆಪಿ ಸದಸ್ಯರ ಸಂಖ್ಯಾಬಲ ಹೆಚ್ಚಿಸಲು ಮಹಿಳಾ ಪುರಸಭೆ ಸದಸ್ಯೆಯೊಂದಿಗೆ ಅಮಾನವೀಯತೆಯಿಂದ ವರ್ತನೆ ಮಾಡಲಾಗಿತ್ತು. ಶಾಸಕರ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.