Tag: siddu budget

  • ಹೊಸದಾಗಿ ರಸ್ತೆಗಿಳಿಯಲಿವೆ 6450 ಬಸ್ – ಬೆಂಗ್ಳೂರು, ಮೈಸೂರಿಗೆ ಬರುತ್ತೆ ಎಲೆಕ್ಟ್ರಿಕ್ ಬಸ್!

    ಹೊಸದಾಗಿ ರಸ್ತೆಗಿಳಿಯಲಿವೆ 6450 ಬಸ್ – ಬೆಂಗ್ಳೂರು, ಮೈಸೂರಿಗೆ ಬರುತ್ತೆ ಎಲೆಕ್ಟ್ರಿಕ್ ಬಸ್!

    ಬೆಂಗಳೂರು: ರಾಜ್ಯದ ಬಸ್ ಪ್ರಯಾಣಿಕರ ಸುಗಮ ಸಂಚಾರಕ್ಕೆ ಮತ್ತಷ್ಟು ಬಸ್‍ಗಳು ಈ ವರ್ಷ ರಸ್ತೆಗಿಳಿಯಲಿವೆ. ಒಟ್ಟಾರೆ 6,450 ಬಸ್‍ಗಳು ರಾಜ್ಯದಲ್ಲಿ ಸಂಚಾರ ಆರಂಭಿಸಲಿದೆ. ಸಾರಿಗೆ ಇಲಾಖೆಗೆ ಒಟ್ಟಾರೆಯಾಗಿ 2,354 ಕೋಟಿ ರೂ.ಗಳನ್ನು ರಾಜ್ಯ ಬಜೆಟ್‍ನಲ್ಲಿ ಸಿಎಂ ಸಿದ್ದರಾಮಯ್ಯ ಮೀಸಲಿರಿಸಿದ್ದಾರೆ.

    ಬಿಎಂಟಿಸಿ: ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆ ಕಲ್ಪಿಸಲು ಬಿ.ಎಂ.ಟಿ.ಸಿ.ಗೆ ಬಸ್‍ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 3000 ಹೊಸ ಬಸ್‍ಗಳನ್ನು ಸೇರ್ಪಡೆ ಮಾಡಿಕೊಳ್ಳಲಿದೆ. ಇದರಲ್ಲಿ 1500 ಹೊಸ ಬಸ್ ಖರೀದಿ ಮೂಲಕ ಮತ್ತು ಉಳಿದ 1500 ಬಸ್‍ಗಳನ್ನು ಗುತ್ತಿಗೆ ಮೂಲಕ ಪಡೆಯಲಾಗುವುದು. ಬಿಎಂಟಿಸಿಯು ಬಸ್‍ಗಳನ್ನು ಖರೀದಿಸಲು ಪಡೆಯುವ ಸಾಲ ಹಾಗೂ ಬಡ್ಡಿಯ ಮರುಪಾವತಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಸರ್ಕಾರವು ಬಸ್ ಖರೀದಿ ಪ್ರಕ್ರಿಯೆಯನ್ನು ಬೆಂಬಲಿಸಲಿದೆ.

    ಸಾರಿಗೆ ನಿಗಮ: 2017-18ನೇ ಸಾಲಿನಲ್ಲಿ ಸಾರಿಗೆ ನಿಗಮಗಳಿಗೆ ಒಟ್ಟು 3,250 ಹೊಸ ಬಸ್‍ಗಳನ್ನು ಖರೀದಿಸಲಾಗುವುದು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು 1050 ಬಸ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು 700 ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 1,500 ಬಸ್‍ಗಳನ್ನು ಖರೀದಿಸಲಿವೆ.

    ರಾಜ್ಯಕ್ಕೆ ಬರಲಿವೆ ಎಲೆಕ್ಟ್ರಿಕ್ ಬಸ್: ಕೇಂದ್ರ ಅನುದಾನಗಳೊಂದಿಗೆ ಬೆಂಗಳೂರು ನಗರದಲ್ಲಿ 150 ಎಲೆಕ್ಟ್ರಿಕ್ ಬಸ್‍ಗಳು ಮತ್ತು ಮೈಸೂರು ನಗರದಲ್ಲಿ 50 ಎಲೆಕ್ಟ್ರಿಕ್ ಬಸ್‍ಗಳನ್ನು ಸಂಚಾರಕ್ಕೆ ಬಿಡಲು ಉದ್ದೇಶಿಸಲಾಗಿದೆ. ಕಾರ್ಯದಕ್ಷತೆಯನ್ನು ಸುಧಾರಿಸಲು ಶಿವಮೊಗ್ಗದಲ್ಲಿ ಹೊಸ ವಿಭಾಗವನ್ನು ಆರಂಭಿಸಲಾಗುವುದು. ಎಲ್ಲ ಸಾರಿಗೆ ನಿಗಮಗಳ ಮೂಲಕ 44 ಹೊಸ ಬಸ್ ನಿಲ್ದಾಣಗಳನ್ನು, 14 ಹೊಸ ಬಸ್ ಡಿಪೋಗಳನ್ನು ಮತ್ತು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

    ರಾಜ್ಯದ ಗೋವಾ ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಬಸ್ ಪಾಸ್, ಅರ್ಜುನ ಮತ್ತು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಉಚಿತ ಬಸ್ ಪಾಸ್‍ಗಳನ್ನು ನೀಡಲಾಗುವುದು.

    ಮಹಿಳಾ ಸುರಕ್ಷತೆಗೆ ಒತ್ತು: ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ಸಲುವಾಗಿ ಬಿ.ಎಂ.ಟಿ.ಸಿ. ಮೊಬೈಲ್ ಅಪ್ಲಿಕೇಷನ್‍ನಲ್ಲಿ ಹೊಸದಾಗಿ ಎಸ್‍ಒಎಸ್ ಬಟನ್ ಮತ್ತು ಟ್ರಾಕಿಂಗ್ ಸೌಲಭ್ಯವನ್ನು ಅಳವಡಿಸಲಾಗುವುದು. ಉಚಿತ ಹಾಗೂ ರಿಯಾಯಿತಿ ದರದ ಪಾಸ್‍ಗಳನ್ನು ಹೊಂದಿರುವ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್‍ಗಳನ್ನು ನೀಡಲಾಗುವುದು. ಚಾಲಕರು ಮತ್ತು ಮೆಕ್ಯಾನಿಕ್‍ಗಳಿಗೆ ಸಾಮರ್ಥ್ಯವೃದ್ಧಿಗಾಗಿ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಜೊತೆಗೆ ಈಗಿರುವ ಕೇಂದ್ರಗಳನ್ನು ಸಹ ಪ್ರತಿ ವರ್ಷ 25,000 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅನುವಾಗುವಂತೆ ಮೇಲ್ದರ್ಜೆಗೇರಿಸಲಾಗುವುದು.

    ರೈತ ಸಾರಥಿ: ಈ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಟ್ರ್ಯಾಕ್ಟರ್ ಮತ್ತು ಟ್ರೈಲರ್‍ಗಳ ಚಾಲಕರ ಅನುಕೂಲಕ್ಕಾಗಿ ರೈತರಿಗೆ ತರಬೇತಿ ಮತ್ತು ಕಲಿಕಾ ಲೈಸೆನ್ಸ್ ನೀಡಲಾಗುವುದು. ಜೊತೆಗೆ ದ್ವಿಚಕ್ರ ವಾಹನ ಲೈಸೆನ್ಸ್ ನೀಡಿಕೆ ಹಾಗೂ ರಸ್ತೆ ಸುರಕ್ಷಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ತರಬೇತಿಗಾಗಿ 2 ಕೋಟಿ ರೂ.ಗಳನ್ನು ನೀಡಿದ್ದಾರೆ. ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಮತ್ತು ರಸ್ತೆ ಸುರಕ್ಷತೆಯನ್ನು ಸುಧಾರಿಸಲು, ರಾಜ್ಯ ರಸ್ತೆ ಸುರಕ್ಷತೆ ಪ್ರಾಧಿಕಾರವನ್ನು ರಚಿಸಲಾಗುವುದು. ಇದಕ್ಕಾಗಿ 5 ಕೋಟಿ ರೂ.ಗಳನ್ನು ಒದಗಿಸಲಾಗುವುದು.

    ಬೆಂಗಳೂರಿನಲ್ಲಿ ವಾಯು ಮತ್ತು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು 2018ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ 2 ಸ್ಟ್ರೋಕ್ ಆಟೋ ರಿಕ್ಷಾಗಳನ್ನು ರದ್ದುಗೊಳಿಸಿ ಅದರ ಬದಲು 4 ಸ್ಟ್ರೋಕ್ ಎಲ್‍ಪಿಜಿಯ 10,000 ಆಟೋ ರಿಕ್ಷಾಗಳಿಗೆ ಪ್ರತಿ ಆಟೋ ರಿಕ್ಷಾಗೆ 30,000 ರೂ.ಗಳ ಸಹಾಯಧನಕ್ಕಾಗಿ 30 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಸಿದ್ದರಾಮಯ್ಯ ನೀಡಿದ್ದಾರೆ. ಅಲ್ಲದೇ ಚಿಂತಾಮಣಿ, ರಾಣೆಬೆನ್ನೂರು ಮತ್ತು ಬಂಟ್ವಾಳದಲ್ಲಿ 3 ಹೊಸ ಆರ್‍ಟಿಒ ಕಚೇರಿಗಳು ಪ್ರಾರಂಭವಾಗಲಿವೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

  • ಸಿದ್ದರಾಮಯ್ಯ `ರಾಮರಾಜ್ಯ ನಿರ್ಮಾಣ’ ಅಸಾಧ್ಯ ಎಂದಿದ್ದು ಯಾರಿಗೆ?

    ಸಿದ್ದರಾಮಯ್ಯ `ರಾಮರಾಜ್ಯ ನಿರ್ಮಾಣ’ ಅಸಾಧ್ಯ ಎಂದಿದ್ದು ಯಾರಿಗೆ?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 12 ನೇ ಬಜೆಟ್‍ನಲ್ಲಿ ಇಂದು ರಾಮರಾಜ್ಯದ ಪ್ರಸ್ತಾಪವೂ ಆಯಿತು. ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿರೋಧಿಸುವವರು ರಾಮರಾಜ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ ಅಂತಾ ರಾಮಮಂದಿರ ಜಪ ಮಾಡುತ್ತಿರುವ ಬಿಜೆಪಿಗೆ ಸಿಎಂ ಸಿದ್ದು ಪರೋಕ್ಷ ಟಾಂಗ್ ನೀಡಿದ್ರು.

    ಬಜೆಟ್‍ನಲ್ಲಿ ‘ರಾಮ ರಾಜ್ಯ’ದ ಬಗ್ಗೆ ಏನಿದೆ?: ‘ರಾಮರಾಜ್ಯವೆನ್ನುವುದು ಹಸಿವು ಮುಕ್ತ, ಶೋಷಣೆ ಮುಕ್ತ, ಗಾಢ ಸಾಮರಸ್ಯದ, ಸರ್ವಾಂಗೀಣ ಪ್ರಗತಿಯನ್ನು ಪ್ರತಿನಿಧಿಸುವ ಒಂದು ಪರಿಕಲ್ಪನೆ.

    ಅಂಬೇಡ್ಕರ್ ರಚಿಸಿದ ಸಂವಿಧಾನದ ಹಿಂದಿನ ಪ್ರೇರಣೆಯಾಗಲಿ, ನನ್ನ ಬದುಕೇ ನನ್ನ ಸಂದೇಶವೆಂದ ಗಾಂಧೀಜಿಯ ಜೀವನವಾಗಲಿ, ಅಣ್ಣ ಬಸವಣ್ಣನ ಆದರ್ಶವಾಗಲಿ ಇವೆಲ್ಲವೂ ಧ್ವನಿಸುವುದು ಇದನ್ನೇ. ಹಾಗಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವಿರೋಧಿಸುವವರು ರಾಮರಾಜ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ’ ಎಂದು ಸಿಎಂ ಸಿದ್ದರಾಮಯ್ಯ ರಾಮಜಪ ಮಾಡುತ್ತಿರುವ ಕೇಸರಿ ಪಡೆಗೆ ಟಾಂಗ್ ನೀಡಿದ್ದಾರೆ.

  • 49 ಹೊಸ ತಾಲೂಕು ರಚನೆ: ಪೂರ್ಣ ಪಟ್ಟಿ ಇಲ್ಲಿದೆ

    49 ಹೊಸ ತಾಲೂಕು ರಚನೆ: ಪೂರ್ಣ ಪಟ್ಟಿ ಇಲ್ಲಿದೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳನ್ನು ಪ್ರಕಟಿಸಿದ್ದಾರೆ. ಹೊಸ ತಾಲೂಕುಗಳ ವಿವರವನ್ನು ಇಲ್ಲಿ ನೀಡಲಾಗಿದೆ.

    ಬಾಗಲಕೋಟೆ – ಗುಳೇದ ಗುಡ್ಡ, ರಬಕವಿ, ಬನಹಟ್ಟಿ, ಇಳಕಲ್
    ಬೆಳಗಾವಿ – ನಿಪ್ಪಾಣಿ, ಮೂಡಲಗಿ, ಕಾಗವಾಡ
    ಚಾಮರಾಜನಗರ – ಹನೂರು
    ದಾವಣಗೆರೆ – ನ್ಯಾಮತಿ

    ಬೀದರ್ – ಚಿಟಗುಪ್ಪ, ಹುಲಸೂರು, ಕಮಲಾನಗರ
    ಬಳ್ಳಾರಿ – ಕುರುಗೋಡು, ಕೊಟ್ಟೂರು, ಕಂಪ್ಲಿ
    ಧಾರವಾಡ – ಅಣ್ಣಿಗೇರಿ, ಅಳ್ನಾವರ, ಹುಬ್ಬಳ್ಳಿ ನಗರ
    ಗದಗ – ಗಜೇಂದ್ರಗಡ, ಲಕ್ಷ್ಮೇಶ್ವರ

    ಕಲಬುರಗಿ – ಕಾಳಗಿ, ಕಮಲಾಪುರ, ಯಡ್ರಾವಿ, ಶಹಾಭಾಗ್
    ಯಾದಗಿರಿ – ಹುಣಸಗಿ, ವಡಗೆರ, ಗುರುಮಿಟ್ಕಲ್
    ಕೊಪ್ಪಳ – ಕುಕನೂರು, ಕನಕಗಿರಿ, ಕಾರಟಗಿ
    ರಾಯಚೂರು – ಮಸ್ಕಿ, ಸಿರಾವರ

    ಉಡುಪಿ – ಬ್ರಹ್ಮಾವರ, ಕಾಪು, ಬೈಂದೂರು
    ದಕ್ಷಿಣ ಕನ್ನಡ – ಮೂಡಬಿದರೆ, ಕಡಬ
    ಬೆಂಗಳೂರು ನಗರ – ಯಲಹಂಕ
    ವಿಜಯಪುರ – ಬಬಲೇಶ್ವರ, ನಿಡಗುಂದಿ, ತಿಕೋಟ, ದೇವರಹಿಪ್ಪರಗಿ, ತಾಳಿಕೋಟೆ, ಚಡಚಣ, ಕೋಲ್ಹಾರ
    ಹಾವೇರಿ – ರಟ್ಟಿಹಳ್ಳಿ

    ಮೈಸೂರು – ಸರಗೂರು
    ಚಿಕ್ಕಮಗಳೂರು – ಅಜ್ಜಂಪುರ
    ಉತ್ತರ ಕನ್ನಡ – ದಾಂಡೇಲಿ
    ಕೋಲಾರ – ಕೆಜಿಎಫ್

  • ಕರ್ನಾಟಕ ಬಜೆಟ್ 2017 ಮುಖ್ಯಾಂಶಗಳು

    ಕರ್ನಾಟಕ ಬಜೆಟ್ 2017 ಮುಖ್ಯಾಂಶಗಳು

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡುತ್ತಿದ್ದು, ಬಜೆಟ್‍ನ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗುತ್ತಿದೆ.

    – ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷದ ವರೆಗಿನ ಅಲ್ಪಾವಧಿ ಕೃಷಿ ಸಾಲ ಮುಂದುವರಿಕೆ
    – 3 ಲಕ್ಷದಿಂದ 10 ಲಕ್ಷ ವರೆಗಿನ ಮಧ್ಯಮಾವಧಿ, ದೀರ್ಫಾವಧಿ ಸಾಲ 3 ರೂ ಬಡ್ಡಿದರದಲ್ಲಿ ಮುಂದುವರಿಕೆ
    – 25 ಲಕ್ಷ ರೈತರಿಗೆ 13,500 ಕೋಟಿ ಕೃಷಿ ಸಾಲ ವಿತರಣೆ ಗುರಿ
    – ಪ್ರತಿಯೊಂದು ಗ್ರಾಮ ಪಂಚಾಯ್ತಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರಿ ಸಂಘ
    – ಮಹಿಳಾ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ

    – ಗದಗದಲ್ಲಿ ಈರುಳ್ಳಿ ಗೋದಾಮು ಸ್ಥಾಪನೆಗೆ 5 ಕೋಟಿ
    – ಜಾನುವಾರುಗಳ ಮಾರುಕಟ್ಟೆಗಳ ಸೌಲಭ್ಯಗಳ ಆಧುನೀಕರಣ
    – ರೈತ ಸಾರಥಿ ಯೋಜನೆಯಡಿ ಟ್ರ್ಯಾಕ್ಟರ್, ಟ್ರೈಲರ್‍ಗಳ ಚಾಲನಾ ತರಬೇತಿಗೆ 2 ಕೋಟಿ
    —————-
    ತೆರಿಗೆ
    – ಭತ್ತ, ಅಕ್ಕಿ, ಗೋಧಿ, ಬೇಳೆಕಾಳು, ರಾಗಿ ರೈಸ್ ಮೇಲಿನ ತೆರಿಗೆ ವಿನಾಯ್ತಿ
    – ಸಿರಿಧಾನ್ಯ ಅರಕ, ನವಣೆ, ಸಾಮೆಗಳ ಹಿಟ್ಟಿಗೆ ತೆರಿಗೆ ವಿನಾಯ್ತಿ
    – ದ್ವಿದಳ ಧಾನ್ಯಗಳಿಗೆ ತೆರಿಗೆ ವಿನಾಯ್ತಿ
    – ಸ್ಪೀರಿಟ್ ಮೇಲಿನ ಆಮದು, ರಫ್ತು ಶುಲ್ಕ ವಾಪಸ್
    – ಅಬಕಾರಿ ಸುಂಕ ಹೆಚ್ಚಳ – 5 ಮತ್ತು 11 ಸ್ಲಾಬ್‍ಗಳ ಮೇಲೆ ಶೇಕಡ 6ರಷ್ಟು ಅಬಕಾರಿ ಸುಂಕ ಹೆಚ್ಚಳ
    – ಉಳಿದ 15 ಸ್ಲಾಬ್ ಶೇಕಡ 10ರಿಂದ 16ರವರೆಗೆ ಅಬಕಾರಿ ಸುಂಕ ಹೆಚ್ಚಳ
    – 1 ಲಕ್ಷಕ್ಕಿಂತ ಮೇಲ್ಪಟ್ಟ ದ್ವಿಚಕ್ರ ವಾಹನ ತೆರಿಗೆ – ಶೇಕಡ 12 ರಿಂದ 18ಕ್ಕೆ ಹೆಚ್ಚಳ

    – ಕಾವೇರಿ ಕೊಳ್ಳದಲ್ಲಿ 374 ಕಿಮೀ ನಾಲೆ ಅಭಿವೃದ್ಧಿ – 509 ಕೋಟಿ ರೂ.
    – ಹಾರಂಗಿ ಎಡದಂಡೆ ಅಭಿವೃದ್ಧಿಗೆ 149 ಕಿಮೀ
    – ಕೆರೆಗಳ ಹೂಳೆತ್ತಲು ಕೆರೆ ಸಂಜೀವಿನಿ ಯೋಜನೆ – 100 ಕೋಟಿ ರೂ.
    – ಪಶ್ಚಿಮ ವಾಹಿನಿಗೆ ಅಣೆಕಟ್ಟು ಕಟ್ಟಲು 100 ಕೋಟಿ ರೂ.

    – ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ
    – ನೀಲಗಿರಿ ಬದಲು ಕೋಲಾರ, ಚಿಕ್ಕಬಳ್ಳಾಪುರದಲ್ಲಿ 6 ಲಕ್ಷ ಶ್ರೀಗಂಧ ಸಸಿ ನೆಡಲು ಯೋಜನೆ
    – 700 ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧ ನೆಡಬೇಕು
    – 6 ಕೋಟಿ ಸಸಿ ನೆಟ್ಟು ವನಮಹೋತ್ಸವ

    ಬೆಂಗಳೂರು
    – ತಡೆರಹಿತ ವಾಹನ ಸಂಚಾರಕ್ಕೆ – 9 ಗ್ರೇಟ್ ಸಪೆರೇಟರ್ – 420 ಕೋಟಿ ಅನುದಾನ
    – ರೈಲ್ವೇ ಮೇಲು ಸೇತುವೆಗೆ ಹಾಗೂ ಕೆಳಸೇತುವೆಗಾಗಿ – 150 ಕೋಟಿ ರೂ.
    – ಬೃಹತ್ ಮಳೆ ನೀರು ಚರಂಡಿ ಅಭಿವೃದ್ಧಿಗೆ 300 ಕೋಟಿ ರೂ.
    – ಸಂಚಾರಿ ಇಂಜಿನಿಯರಿಂಗ್ ಕಾಮಗಾರಿಗಳಿಗೆ -200 ಕೋಟಿ ರೂ.
    – ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್ ನಿರ್ಮಾಣ – 80 ಕೋಟಿ ರೂ.
    – 1000 ಸಾರ್ವಜನಿಕ ಶೌಚಾಲಯ -50 ಕೋಟಿ ರೂ.
    – ಅಮ್ಮ ಕ್ಯಾಂಟಿನ್ 100 ಕೋಟಿ ರೂ.

    ಆರೋಗ್ಯ
    – ಆಶಾ ಕಾರ್ಯಕರ್ತರು ಈಗಾಗಲೇ ಪಡೆಯುತ್ತಿರುವ ಪ್ರೋತ್ಸಾಹ ಧನದ ಜೊತೆ 1000 ರೂ ಗೌರವಧನ
    – ತಲಾ 25 ಕೋಟಿ ವೆಚ್ಚದಲ್ಲಿ 5 ಸೂಪರ್ ಸ್ಪೆಷಾಲಿಸಿ ಆಸ್ಪತ್ರೆ – ದಾವಣಗೆರೆ, ರಾಮನಗರ, ತುಮಕೂರು, ವಿಜಯಪುರ ಮತ್ತು ಕೋಲಾರದಲ್ಲಿ ಸ್ಥಾಪನೆ
    – ಮಂಗಳೂರು ವೆನ್ಲಾಕ್ ಆಸ್ಪತ್ರೆ 10 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ

    ಪ್ರಾಥಮಿಕ
    – 1-8ನೇ ತರಗತಿವರೆಗೆ ಕಲಿಕಾ ಮೌಲ್ಯಮಾಪನ
    – ಬೇಸಿಗೆ, ರಜಾ ದಿನಗಳಿಗಾಗಿ ವಿಶ್ವಾಸ ಕಿರಣ ಯೋಜನೆ
    – 1ನೇ ತರಗತಿಯಿಂದ ಆಂಗ್ಲಭಾಷೆಯಲ್ಲಿ ಶಿಕ್ಷಣ
    – 9ರಿಂದ 12ನೇ ತರಗತಿವರೆಗೆ ಎನ್‍ಸಿಇಆರ್‍ಟಿ ಪಠ್ಯ ಪುಸ್ತಕ ಅಳವಡಿಕೆ
    – ಗ್ರಾಮಪಂಚಾಯ್ತಿ ಕೇಂದ್ರಗಳಲ್ಲಿ 176 ಸಂಯೋಜಿತ ಶಾಲೆಗಳು
    – ಹೆಚ್ಚುವರಿ 1000 ಪ್ರೌಢ ಶಾಲೆಗಳು

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
    – ಕೆಂಪೇಗೌಡ ಬಡವಾಣೆಯಲ್ಲಿ 5 ಸಾವಿರ ನಿವೇಶನ ಹಂಚಿಕೆ, 3 ಸಾವಿರ ಫ್ಲಾಟ್
    – 166 ಎಕರೆ ಪ್ರದೇಶದಲ್ಲಿ ಬಿಡಿಎನಿಂದ ಟೌನ್‍ಶಿಪ್ ಅಭಿವೃದ್ಧಿ ಪಡಿಸಲು ಉದ್ದೇಶ
    – ಕೆಂಪೇಗೌಡ ಬಡವಾಣೆಯಿಂದ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿ,ಮೀ ಅರ್ಟೀರಿಯಲ್ ರಸ್ತೆ ನಿರ್ಮಾಣ- 350 ಕೋಟಿ ಅನುದಾನ
    – 42 ಕೋಟಿ ವೆಚ್ಚದಲ್ಲಿ 10 ಕೆರೆ ಸಮಗ್ರ ಅಭಿವೃದ್ಧಿ, ಬೆಳ್ಳಂದೂರು, ವರ್ತೂರು ಕೆರೆಗಳ ಸಮಗ್ರ ಅಭಿವೃದ್ಧಿ
    – ಹೆಬ್ಬಾಳ ಜಂಕ್ಷನ್ ನಲ್ಲಿ ಕೆಳಸೇತುವ ನಿರ್ಮಾಣ- 88 ಕೋಟಿ ವೆಚ್ಚ
    – ಬೆಂಗಳೂರು ಸಂಚಾರ ಅನುಕೂಲಕ್ಕಾಗಿ ಸಿಲ್ಕ್ ಬೋಡ್ ಜಂಕ್ಷನ್ ಹಾಗೂ ಕೆಆರ್ ಪುರಂ ಜಂಕ್ಷನ್‍ನನ್ನ ಬಿಎಂಆರ್‍ಸಿಎಲ್ ಸಹಯೋಗದೊಂದಿಗೆ ಅಭಿವೃದ್ಧಿ

     

    ಉನ್ನತ ಶಿಕ್ಷಣ
    – ರಾಯಚೂರು ವಿವಿ ಸ್ಥಾಪನೆ
    – ಧಾರವಾಡ ಕರ್ನಾಟಕ ಕಾಲೇಜಿಗೆ 5 ಕೋಟಿ
    – ಪಾಲಿಟೆಕ್ನಿಕ್ ಕಾಲೇಜುಗಳಿಗೆ 23 ಮಹಿಳಾ ಹಾಸ್ಟೆಲ್ – 2 ಕೋಟಿ ವೆಚ್ಚ
    – 10 ಮಾದರಿಯ ಎಸ್‍ಸಿ ಎಸ್‍ಟಿ ಪ್ರಥಮ ದರ್ಜೆ ಕಾಲೇಜು
    – ಧಾರವಾಡ ಕರ್ನಾಟಕ ಕಾಲೇಜಿಗೆ 5 ಕೋಟಿ
    – ಹಂಪಿ ವಿವಿಯ ಬೆಳ್ಳಿ ಹಬ್ಬಕ್ಕೆ 25 ಕೋಟಿ ರೂ.