Tag: Siddhivinayak Temple

  • ಬಾಕ್ಸಾಫೀಸ್‌ನಲ್ಲಿ ಕಾಂತಾರ ಚಾಪ್ಟರ್‌ 1 ಮಿಂಚಿನ ಓಟ – ಸಿದ್ಧಿವಿನಾಯಕನ ದರ್ಶನ ಪಡೆದ ರಿಷಬ್‌

    ಬಾಕ್ಸಾಫೀಸ್‌ನಲ್ಲಿ ಕಾಂತಾರ ಚಾಪ್ಟರ್‌ 1 ಮಿಂಚಿನ ಓಟ – ಸಿದ್ಧಿವಿನಾಯಕನ ದರ್ಶನ ಪಡೆದ ರಿಷಬ್‌

    ಕಾಂತಾರ ಅಧ್ಯಾಯ 1 ರ (Kantara Chapter 1) ಯಶಸ್ಸಿನಲ್ಲಿ ರಿಷಬ್ ಶೆಟ್ಟಿ ಮಿಂಚುತ್ತಿದ್ದಾರೆ. ಈ ಚಿತ್ರವು ದೇಶ-ವಿದೇಶಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿಯುತ್ತಲೇ ಇದೆ. ಈಗಾಗಲೇ ಸಿನಿಮಾ 500 ಕೋಟಿ ರೂ. ಕ್ಲಬ್‌ ಸೇರಿದೆ. ಈ ಬೆನ್ನಲ್ಲೇ ನಟ ರಿಷಬ್‌ ಮತ್ತು ನಿರ್ಮಾಪಕರು, ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ರಿಷಬ್‌ ಶೆಟ್ಟಿ ಬಿಳಿ (Rishab Shetty) ಶರ್ಟ್ ಮತ್ತು ಬಿಳಿ ಮುಂಡು ಧರಿಸಿ ದೇವಾಲಯದಲ್ಲಿ ಕಾಣಿಸಿಕೊಂಡರು. ಅನೇಕ ಅಭಿಮಾನಿಗಳು ಅವರತ್ತ ಕೈ ಬೀಸಿದರು. ಆಗ ನಟ ನಗುತ್ತಲೇ ಅಭಿಮಾನಿಗಳತ್ತ ಕೈ ಬೀಸಿದರು. ಜೊತೆಗೆ ಫ್ಯಾನ್ಸ್‌ ಜೊತೆ ಫೋಟೋಗಳಿಗೆ ಪೋಸ್ ನೀಡಿ, ಬಳಿಕ ಕಾರು ಹತ್ತಿ ಹೊರಟರು. ಇದನ್ನೂ ಓದಿ: ಕಾಂತಾರ ಬ್ಲಾಕ್‌ಬಸ್ಟರ್ ಹಿಟ್ – 1 ವಾರಕ್ಕೆ 509 ಕೋಟಿ ಕಲೆಕ್ಷನ್

    ಕಾಂತಾರ ಅಧ್ಯಾಯ 1 ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲೇ ವಿಶ್ವಾದ್ಯಂತ 500 ಕೋಟಿ ಗಳಿಸಿದೆ ಎಂದು ಹೊಂಬಾಳೆ ಫಿಲಂಸ್ ಅಧಿಕೃತವಾಗಿ ತಿಳಿಸಿದೆ. ‘ಗಲ್ಲಾಪೆಟ್ಟಿಗೆಯಲ್ಲಿ ದೈವಿಕ ಸಿನಿಮೀಯ ಚಂಡಮಾರುತವು ಇನ್ನೂ ಹೆಚ್ಚಿನ ಗಳಿಕೆಯನ್ನು ಮಾಡುತ್ತಿದೆ. ಕಾಂತಾರ ಅಧ್ಯಾಯ 1 ಮೊದಲ ವಾರದಲ್ಲಿ ವಿಶ್ವಾದ್ಯಂತ 509.25 ಕೋಟಿ+ ಜಿಬಿಒಸಿಯನ್ನು ದಾಟಿದೆ! ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬ್ಲಾಕ್ಬಸ್ಟರ್ ಕಾಂತಾರ’ ಎಂದು ಪೋಸ್ಟ್‌ ಹಂಚಿಕೊಂಡಿದೆ.

    ಅ.2 ರಂದು ಕಾಂತಾರ ಚಿತ್ರ ವಿಶ್ವದಾದ್ಯಂತ 7 ಭಾಷೆಗಳಲ್ಲಿ ತೆರೆಕಂಡಿತ್ತು. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಕಾಂತಾರಕ್ಕೆ ಅತ್ಯದ್ಭುತ ರೆಸ್ಪಾನ್ಸ್ ಸಿಗುತ್ತಿದ್ದು, ವಿದೇಶದಲ್ಲೂ ಕಾಂತಾರ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪರಿಣಾಮ ಮೊದಲ ವಾರ 509 ಕೋಟಿ ಕಲೆಕ್ಷನ್ ಮಾಡಿದೆ. ಇದನ್ನೂ ಓದಿ: ದೈವಸ್ಥಾನದ ಮೆಟ್ಟಿಲೇರಿದ ಕಾಂತಾರ ಚಿತ್ರ – ದೈವಾರಾಧನೆ ಬಳಕೆ ವಿರುದ್ಧ ಸಿಡಿದೆದ್ದ ದೈವಾರಾಧಕರು

    ಕಾಂತಾರ ಚಾಪ್ಟರ್‌ 1 ಸಿನಿಮಾ, ಕಾಂತಾರ ಜನರಿಗೆ ಸ್ವಾಯತ್ತತೆಗಾಗಿ ಶ್ರಮಿಸುವ ಬೆರ್ಮೆ (ರಿಷಬ್ ಶೆಟ್ಟಿ) ಎಂಬ ಬುಡಕಟ್ಟು ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಸಿನಿಮಾದಲ್ಲಿ ನಟಿ ರುಕ್ಮಿಣಿ ವಸಂತ್‌, ಗುಲ್ಶನ್‌ ದೇವಯ್ಯ, ಅಚ್ಚುತ್‌ ರಾವ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಉಡುಪಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ 21 ದಿನದಿಂದ ಕರೆಂಟ್ ಇಲ್ಲ- ಮೆಸ್ಕಾಂ ವಿರುದ್ಧ ಭಕ್ತರ ಅಸಮಾಧಾನ

    ಉಡುಪಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ 21 ದಿನದಿಂದ ಕರೆಂಟ್ ಇಲ್ಲ- ಮೆಸ್ಕಾಂ ವಿರುದ್ಧ ಭಕ್ತರ ಅಸಮಾಧಾನ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಚಂಡಮಾರುತ ಮತ್ತು ಪೂರ್ವ ಮುಂಗಾರು ಮಳೆ ದಾಖಲೆ ಸೃಷ್ಟಿಸಿತ್ತು. ಜಿಲ್ಲೆಯಾದ್ಯಂತ ಸಾಕಷ್ಟು ಅನಾಹುತಗಳು ಕೂಡ ಆಗಿದ್ದವು. ಉಡುಪಿ ಸಿದ್ದಿವಿನಾಯಕ ದೇವಸ್ಥಾನಕ್ಕೆ 21 ದಿನದಿಂದ ಕರೆಂಟ್‌ ಇಲ್ಲದ ಕಾರಣ ಮೆಸ್ಕಾಂ ವಿರುದ್ಧ ಭಕ್ತರು ಅಸಮಾಧಾನ ಹೊರಹಾಕಿದ್ದಾರೆ.

    ಮಣಿಪಾಲ ಭಾಗದಲ್ಲಿ ಬಿದ್ದ ಗಾಳಿ ಮಳೆ ಸೃಷ್ಟಿಸಿದ ಅವಾಂತರದ ಪರಿಣಾಮ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. 22 ದಿನ ಕಳೆದರೂ ಮಣಿಪಾಲ ಸಮೀಪದ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಇನ್ನೂ ಕರೆಂಟ್ ಬಂದಿಲ್ಲ. ದೇಗುಲಕ್ಕೆ ಬರುವ ಭಕ್ತರಿಗೆ, ಪ್ರತಿದಿನ ಅರ್ಚನೆ-ಪೂಜೆ ಅಭಿಷೇಕ ಮಾಡುವ ಅರ್ಚಕರಿಗೆ ವಿದ್ಯುತ್ ಸಮಸ್ಯೆ ತಲೆದೋರಿದೆ.

    ಮಣಿಪಾಲ ಸಂಸ್ಥೆಗೆ ಸಂಬಂಧಿಸಿದ ರೆಸಾರ್ಟ್ ಕತ್ತಲಲ್ಲಿದೆ. ರಸ್ತೆಗೆ ಬಿದ್ದ ವಿದ್ಯುತ್ ಕಂಬ ತಂತಿಗಳು ಇನ್ನು ತೆರವಾಗಿಲ್ಲ. ಮುರಿದುಬಿದ್ದ ವಿದ್ಯುತ್ ಕಂಬ ತಂತಿಗಳ ನಡುವೆ ದೇವಸ್ಥಾನಕ್ಕೆ ಭಕ್ತರು ಓಡಾಡುತ್ತಿದ್ದಾರೆ. ಗುಡ್ಡ ಕುಸಿತದ ಸಾಧ್ಯತೆಗಳಿದ್ದು, ಈವರೆಗೆ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ.

    ಮಣಿಪಾಲ ನಗರದಿಂದ ಕೂಗಳತೆ ದೂರದಲ್ಲಿರುವ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಸುತ್ತಮುತ್ತ ವಿದ್ಯುತ್ ಸಮಸ್ಯೆ ಆಗಿದೆ. ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಕಳೆದ 20ಕ್ಕೂ ಹೆಚ್ಚು ದಿನದಿಂದ ಕರೆಂಟ್ ಇಲ್ಲ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮತ್ತು ಪ್ರತಿದಿನ ಪೂಜೆ ಮಾಡುವ ಅರ್ಚಕರಿಗೆ ಇದರಿಂದ ಸಮಸ್ಯೆಯಾಗಿದೆ. ತಂತಿಗಳು ರಸ್ತೆಯಲ್ಲಿ ಬಿದ್ದಿದೆ. ವಿದ್ಯುತ್ ಕಂಬಗಳನ್ನು ತೆರವು ಮಾಡಿಲ್ಲ ಎಂದು ಕ್ಷೇತ್ರದ ಭಕ್ತ ವಾಸುದೇವ ಪರಂಪಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ.