Tag: Siddhartha Malhotra

  • ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ನ್ನಡದ ನಟಿ ರಶ್ಮಿಕಾ ಮಂದಣ್ಣ ತಮಿಳು, ತೆಲುಗಿನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟು, ಬಾಲಿವುಡ್ ಗೂ ಹಾರಿದ್ದರು. ಇವರ ನಟನೆಯ ಮೊದಲನೇ ಬಾಲಿವುಡ್ ಸಿನಿಮಾ ಇದೀಗ ರಿಲೀಸ್ ಆಗುತ್ತಿದ್ದು, ಮೊದಲ ಚಿತ್ರವನ್ನು ಬಾಲಿವುಡ್ ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬುದನ್ನು ಕಾದು ನೋಡಬೇಕು. ಇದನ್ನೂ ಓದಿ : ಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’

    ಈಗಾಗಲೇ ಬಾಲಿವುಡ್ ನಲ್ಲಿ ರಶ್ಮಿಕಾ ಎರಡು ಚಿತ್ರಗಳಲ್ಲಿ ನಟಿಸಿದ್ದರೂ, ಮೊದಲು ಬಿಡುಗಡೆ ಆಗುತ್ತಿರುವುದು ಸಿದ್ಧಾರ್ಥ ಮಲ್ಹೋತ್ರ ನಾಯಕನಾಗಿ ನಟಿಸಿರುವ ‘ಮಿಷನ್ ಮಜ್ನು’ ಸಿನಿಮಾ. ಇದು ಬಾಲಿವುಡ್ ನ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿದ್ದು, ರಶ್ಮಿಕಾಗೆ ಬಾಲಿವುಡ್ ನಲ್ಲೂ ಅದೃಷ್ಟ ತಂದುಕೊಡುತ್ತಾ ಕಾಯಬೇಕು. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಮೇ 13 ರಂದು ದೇಶಾದ್ಯಂತ ಬಿಡುಗಡೆ ಆಗಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಜೂನ್ 10ಕ್ಕೆ ರಿಲೀಸ್ ಆಗಲಿದೆಯಂತೆ. ಸ್ವತಃ ಈ ಮಾಹಿತಿಯನ್ನು ರಶ್ಮಿಕಾ ಮಂದಣ್ಣ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್

    “ಇತಿಹಾಸ ಪುಟಗಳ ಅನುಭವ ಪಡೆಯಲು ನೀವು ರೆಡಿಯಾಗಿ. ಇದು ಅಂತಿಂಥ ಮಿಷನ್ ಅಲ್ಲ” ಎಂದೂ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಹರೀಶ್ ವಯಸ್ಸು 36 ಹಾಸ್ಯ ಸಿನಿಮಾಗಾಗಿ ಟೈಟಲ್ ಸಾಂಗ್ ಹಾಡಿದ ಪುನೀತ್

    ಇದೊಂದು ನೈಜ ಘಟನೆಯನ್ನು ಆಧರಿಸಿದ ಚಿತ್ರ. 2020ರಲ್ಲೇ ಈ ಸಿನಿಮಾವನ್ನು ನಿರ್ದೇಶಕ ಶಾಂತನು ಬಗ್ಚಿ ಅನೌನ್ಸ್ ಮಾಡಿದ್ದರು. ಕೋವಿಡ್ ಕಾರಣದಿಂದಾಗಿ ಚಿತ್ರೀಕರಣ ವಿಳಂಬವಾಯಿತು. ಇದೀಗ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಬಾಲಿವುಡ್ ನ ಮೊದಲ ಸಿನಿಮಾವನ್ನು ಅಭಿಮಾನಿಗಳಿಗೆ ತೋರಿಸಲು ರಶ್ಮಿಕಾ ತುದಿಗಾಲಲ್ಲಿ ನಿಂತಿದ್ದಾರೆ.

  • ಆಲ್ ದಿ ಬೆಸ್ಟ್.. ನಾನು ಇಲ್ಲದೆ ಸಂತೋಷದಿಂದ ಇರಿ: ರಶ್ಮಿಕಾ ಮಂದಣ್ಣ

    ಆಲ್ ದಿ ಬೆಸ್ಟ್.. ನಾನು ಇಲ್ಲದೆ ಸಂತೋಷದಿಂದ ಇರಿ: ರಶ್ಮಿಕಾ ಮಂದಣ್ಣ

    ಬೆಂಗಳೂರು: ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣ ಫೆಬ್ರವರಿ 6 ರಿಂದ ಲಕ್ನೋದಲ್ಲಿ ಪ್ರಾರಂಭವಾಗಿದೆ. ಆದರೆ ಸಿನಿಮಾದ ಪ್ರಮುಖ ನಾಯಕಿ ರಶ್ಮಿಕಾ ಮಂದಣ್ಣ ಚಿತ್ರೀಕರಣದಲ್ಲಿ ಸದ್ಯ ಪಾಲ್ಗೊಂಡಿಲ್ಲ. ಬದಲಾಗಿ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರಕ್ಕೆ ಆಲ್ ದಿ ಬೆಸ್ಟ್ ಎಂದು ವಿಶ್ ಮಾಡಿದ್ದಾರೆ.

    ಸಿನಿಮಾ ನಿರ್ಮಾಣ ಮಾಡುತ್ತಿರುವ ಆರ್‍ಎಸ್‍ವಿಪಿ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕ ಮಿಷನ್ ಮಜ್ನು ಕ್ಲಾಪ್ ಬೋರ್ಡ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಭಾರತದ ಮಾರಕ ರಹಸ್ಯ ಕಾರ್ಯಚರಣೆಯ ಮೊದಲ ಅಧ್ಯಾಯವು ಇಂದು ಆರಂಭವಾಗಿದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದೆ.

    ಜೊತೆಗೆ ಮಿಷನ್ ಮಜ್ನು ಸಿನಿಮಾದ ಚಿತ್ರೀಕರಣವನ್ನು ಲಕ್ನೋನಲ್ಲಿ ಇಂದಿನಿಂದ ಆರಂಭಿಸಲಾಗಿದ್ದು, ಮುಂದಿನ ಒಂದೆರಡು ದಿನಗಳ ಕಾಲ ಕೇವಲ ಸಿದ್ಧಾರ್ಥ್ ಮಲ್ಹೋತ್ರಾ ದೃಶ್ಯಗಳನ್ನು ಮಾತ್ರ ಚಿತ್ರೀಕರಿಸಲಾಗುತ್ತದೆ. ನಂತರದ ದಿನಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    ಸಿನಿಮಾ ಕುರಿತಂತೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಹಾಹಾಹಾ… ನಮ್ಮ ಹುಡುಗರು ಇಂದು ರೋಲಿಂಗ್ ಆರಂಭಿಸಿದ್ದಾರೆ. ಆಲ್ ದಿ ಬೆಸ್ಟ್ ಆಲ್. ನಾನು ಇಲ್ಲದೆ ಸಂತೋಷದಿಂದ ಇರಿ ಎಂದು ಬೇಸರದ ಸಿಂಬಲ್ ಹಾಕಿ ವಿಶ್ ಮಾಡಿದ್ದಾರೆ. ಇನ್ನೂ ಈ ಪೋಸ್ಟ್‍ನನ್ನು ಆರ್‍ಎಸ್‍ವಿಪಿ ಚಲನಚಿತ್ರ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

    ಮಿಷನ್ ಮಜ್ನು ಸಿನಿಮಾದ ಲೀಡ್ ರೋಲ್‍ನಲ್ಲಿ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೇ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‍ನನ್ನು ಶೇರ್ ಮಾಡಿಕೊಂಡಿದ್ದರು. ಜೊತೆಗೆ ನಮ್ಮ ಗುಪ್ತಚರ ಸಂಸ್ಥೆ ಶತ್ರುಗಳ ಕುರಿತಂತೆ ನಡೆಸಿದ ಅತ್ಯಂತ ಮಾರಕ ರಹಸ್ಯ ಕಾರ್ಯಾಚರಣೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದರು.

     

    View this post on Instagram

     

    A post shared by Sidharth Malhotra (@sidmalhotra)

    ಮಿಷನ್ ಮಜ್ನು 1870ರ ನೈಜ ಘಟನೆಗಳಿಂದ ಪ್ರೇರಿತವಾಗಿರುವ ಒಂದು ಪತ್ತೆದಾರಿ ಥ್ರಿಲ್ಲರ್ ಚಿತ್ರವಾಗಿದ್ದು, ಈ ಸಿನಿಮಾವು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನು ಶಾಶ್ವತವಾಗಿ ಬದಲಿಸಿದ ಕಥೆಯನ್ನು ಒಳಗೊಂಡಿದೆ ಎಂದು ಸಿನಿಮಾತಂಡ ತಿಳಿಸಿದೆ.