Tag: Siddhartha

  • ನಿಶ್ಚಿತಾರ್ಥ ಸುದ್ದಿ ಬಹಿರಂಗವಾಗಲು ಅಮ್ಮ ಕಾರಣ ಎಂದ ನಟಿ ಅದಿತಿ

    ನಿಶ್ಚಿತಾರ್ಥ ಸುದ್ದಿ ಬಹಿರಂಗವಾಗಲು ಅಮ್ಮ ಕಾರಣ ಎಂದ ನಟಿ ಅದಿತಿ

    ತ್ತೀಚೆಗಷ್ಟೇ ನಟಿ ಅದಿತಿ ರಾವ್ ಹೈದರ್ ಮತ್ತು ತೆಲುಗು ನಟ ಸಿದ್ಧಾರ್ಥ ಎಂಗೇಜ್ ಆದ ವಿಷಯ ಬಹಿರಂಗವಾಗಿತ್ತು. ಆಪ್ತರಿಗೂ ಈ ವಿಷಯ ತಿಳಿಸದೇ ಕೇವಲ ಕುಟುಂಬಸ್ಥರು ಸೇರಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು  ಮುಗಿಸಿದ್ದರು. ಇದು ಗಾಸಿಪ್ ರೀತಿಯಲ್ಲಿ ಹರಡಿತ್ತಾದರೂ, ಯಾರೂ ವಿಷಯವನ್ನು ಖಚಿತ ಪಡಿಸಿರಲಿಲ್ಲ. ನಂತರ ಅದಿತಿ ಅವರೇ ಈ ವಿಷಯ ಹಂಚಿದ್ದರು.

    ಹೌದು, ನಿಶ್ಚಿತಾರ್ಥದ ವಿಷಯವು ಬಹಿರಂಗವಾಗಲು ತಮ್ಮ ತಾಯಿಯೇ ಕಾರಣ ಎಂದಿದ್ದಾರೆ ನಟಿ. ನಾನು ಎಂಗೇಜ್ ಮೆಂಟ್ ಮಾಡಿಕೊಂಡ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಆದರೂ, ಗೊತ್ತಾಗಿತ್ತು. ಅಮ್ಮನಿಗೆ ಪದೇ ಪದೇ ಕಾಲ್ ಮಾಡಿ ಕೇಳುತ್ತಿದ್ದರು. ಹಾಗಾಗಿ ಅವರೇ ಈ ವಿಷಯವನ್ನು ತಿಳಿಸಿ ಬಿಡು ಅಂದಿದ್ದರು ಎಂದಿದ್ದಾರೆ ಅದಿತಿ.

    ಆಗಿದ್ದು ನಿಶ್ಚಿತಾರ್ಥವಾದರೂ, ಸೋಷಿಯಲ್ ಮೀಡಿಯಾದಲ್ಲಿ ಅದಿತಿ ರಾವ್ ಹೈದರಿ(Aditi Rao Hydari) ಸಿದ್ಧಾರ್ಥ್  (Siddarth) ಸದ್ದಿಲ್ಲದೇ ಮದುವೆಯಾ ಆಗಿದ್ದಾರೆ ಎಂದು ಸುದ್ದಿ ಆಗಿತ್ತು. ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿರುವ ಶ್ರೀರಂಗಪುರಂನಲ್ಲಿರುವ ಶ್ರೀ ರಂಗನಾಯಕ ಸ್ವಾಮಿ ದೇವಸ್ಥಾನದಲ್ಲಿ ಸಿಂಪಲ್ ಆಗಿ ಈ ಜೋಡಿ ಮದುವೆಯಾಗಿದೆ ಎಂದು ಸುದ್ದಿ ಹಬ್ಬಿಸಿದ್ದರು.

    ಇರಾ ಖಾನ್ ಮದುವೆಯಲ್ಲಿ ಕಾಣಿಸಿಕೊಂಡಿದ್ದ ಅದಿತಿ ಮತ್ತು ಸಿದ್ಧಾರ್ಥ ಅವರ ಫೋಟೋವನ್ನೇ ಮದುವೆ ಫೋಟೋ ಎಂದು ವೈರಲ್ ಮಾಡಲಾಗಿತ್ತು. ಶೂಟಿಂಗ್ ಎಂದು ಸುಳ್ಳು ಹೇಳಿ ಇಬ್ಬರೂ ಮದುವೆ ಆಗಿದ್ದಾರೆ ಎಂದು ಆರೋಪಿಸಲಾಗಿತ್ತು. ನಂತರ ಎಲ್ಲದಕ್ಕೂ ಅದಿತಿ ಉತ್ತರ ನೀಡಿದ್ದರು. ಹಿ ಸೇಡ್ ಎಸ್.. ಎಂಗೇಜ್ಡ್’ (Engaged) ಎಂದು ಸಿದ್ಧಾರ್ಥನ ಜೊತೆಗಿರುವ ಫೋಟೋ ಹಂಚಿಕೊಂಡಿದ್ದರು.

    ಈ  ಜೋಡಿ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿತ್ತು. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ಸಿದ್ಧಾರ್ಥ್ ಜೊತೆಗಿನ ಖಾಸಗಿ ಫೋಟೋ ಹಂಚಿಕೊಂಡು ಹೊಸ ವರ್ಷದಂದು ಮದುವೆ (Wedding) ಬಗ್ಗೆ ಸುಳಿವು ನೀಡಿದ್ದರು ಅದಿತಿ ರಾವ್.

     

    ನ್ಯೂ ಇಯರ್ ಸಂಭ್ರಮವನ್ನು ನಟಿ ಅದಿತಿ- ಸಿದ್ಧಾರ್ಥ್ ಜೋಡಿ ವಿದೇಶದಲ್ಲಿ ಸೆಲೆಬ್ರೇಟ್ ಮಾಡಿದ್ದರು. ಈ ಕುರಿತ ಇಬ್ಬರೂ ಕೂಡ ಚೆಂದದ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಶುಭಕೋರಿದ್ದರು. ಈ ಮೂಲಕ ಎಂಗೇಜ್ ಆಗಿರೋದು ಖಚಿತವಾಗಿತ್ತು. ಫೋಟೋ ಶೇರ್ ಮಾಡ್ತಿದ್ದಂತೆ ಮದುವೆ ಯಾವಾಗ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದರು.

  • ಶಿವರಾಜ್ ಕುಮಾರ್ ಕ್ಷಮೆಯನ್ನು ನಾನು ಸ್ವೀಕರಿಸಲಾರೆ : ನಟ ಸಿದ್ದಾರ್ಥ

    ಶಿವರಾಜ್ ಕುಮಾರ್ ಕ್ಷಮೆಯನ್ನು ನಾನು ಸ್ವೀಕರಿಸಲಾರೆ : ನಟ ಸಿದ್ದಾರ್ಥ

    ಮಿಳಿನ ಪ್ರತಿಭಾವಂತ ನಟ ಸಿದ್ದಾರ್ಥ ತಮ್ಮ ಸಿನಿಮಾದ ಪತ್ರಿಕಾಗೋಷ್ಠಿಗಾಗಿ ಬೆಂಗಳೂರಿಗೆ ಬಂದಾಗ ಕನ್ನಡಪರ ಕೆಲ ಹೋರಾಟಗಾರರು ಅವರನ್ನು ತಡೆದಿದ್ದರು. ಕಾವೇರಿ (Cauvery) ಹೋರಾಟ ನಡೆಯುತ್ತಿರುವಾಗ ತಮಿಳು ಚಿತ್ರವೊಂದರ ಪತ್ರಿಕಾಗೋಷ್ಠಿಯನ್ನು ನಡೆಸಬಾರದು ಎಂದು ಮನವಿ ಮಾಡಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಪರ ಮತ್ತುವಿರೋಧದ ಚರ್ಚೆಗೂ ಕಾರಣವಾಗಿತ್ತು.

    ಈ ಘಟನೆಗೆ ಸಂಬಂಧಿಸಿದಂತೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಪ್ರಕಾಶ್ ರಾಜ್ ಇಬ್ಬರೂ ಸಿದ್ದಾರ್ಥಗೆ ಕ್ಷಮೆ ಕೇಳಿದ್ದರು. ಈ ಘಟನೆ ಆಗಬಾರದಿತ್ತು ಎಂದು ಪ್ರತಿಕ್ರಿಯಿಸಿದರು. ಈ ಕುರಿತಂತೆ ಇದೇ ಮೊದಲ ಬಾರಿಗೆ ಸಿದ್ದಾರ್ಥ (Siddhartha) ಮಾತನಾಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ಪ್ರಕಾಶ್ ರಾಜ್ ಅವರ ಕ್ಷಮೆಯನ್ನು ನಾನು ಸ್ವೀಕಾರ ಮಾಡಲಾರೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಹಿರಿಯ ನಟರಿಗೆ ಗೌರವ ನೀಡಿದ್ದಾರೆ.ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಹೋಗುತ್ತಿಲ್ಲ: ನಟಿ ರಂಜನಿ ರಾಘವನ್ ಸ್ಪಷ್ಟನೆ

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸಿದ್ದಾರ್ಥ, ‘ಶಿವರಾಜ್ ಕುಮಾರ್ (Shivraj Kumar) ಮತ್ತು ಪ್ರಕಾಶ್ ರಾಜ್  (Prakash Raj)ಹಿರಿಯ ಕಲಾವಿದರು. ಅವರಿಗೂ ಮತ್ತು ನಡೆದ ಘಟನೆಗೂ ಸಂಬಂಧವೇ ಇರಲಿಲ್ಲ. ಆದರೂ, ಕಲಾವಿದರ ಮೇಲಿನ ಗೌರವಕ್ಕಾಗಿ ಅವರು ನನಗೆ ಕ್ಷಮೆ ಕೇಳಿದ್ದಾರೆ. ಅವರು ಮಾಡದೇ ಇರುವ ತಪ್ಪಿಗೆ ಕ್ಷಮೆ ಕೇಳಬಾರದಿತ್ತು. ಹಾಗಾಗಿ ನಾನು ಅವರ ಕ್ಷಮೆಯನ್ನು ಸ್ವೀಕರಿಸುವುದಿಲ್ಲ. ಆ ಇಬ್ಬರ ಕಲಾವಿದರ ಮೇಲೆ ನನಗೆ ಇನ್ನೂ ಗೌರವ ಹೆಚ್ಚಾಯಿತು’ ಎಂದಿದ್ದಾರೆ.

     

    ಕಾವೇರಿ ನದಿ ನೀರಿನ ಹಂಚಿಕೆಯ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ್ದಾರೆ. ನಾನು ಒಬ್ಬ ನಟನಾಗಿ ನನ್ನ ಸಿನಿಮಾ ಬಗ್ಗೆ ಮಾತನಾಡುತ್ತೇನೆ. ಇದು ರಾಜಕೀಯದಲ್ಲಿ ನನ್ನನ್ನು ಎಳೆತರಬೇಡಿ. ಕಾವೇರಿ ವಿಚಾರದಲ್ಲಿ ನಾನು ಏನೂ ಸದ್ಯ ಮಾತನಾಡಲಾರೆ. ನನ್ನ ಸಿನಿಮಾ ಬಗ್ಗೆ ಪ್ರಚಾರ ಮಾಡಲು ನಾನು ಬಂದಿದ್ದೇನೆ ಎಂದಿದ್ದಾರೆ ಸಿದ್ದಾರ್ಥ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ನಾಟಕ ನೆಲದಲ್ಲಿ ಹೀಗೆ ಆಗಬಾರದಿತ್ತು: ನಟ ಸಿದ್ದಾರ್ಥ

    ಕರ್ನಾಟಕ ನೆಲದಲ್ಲಿ ಹೀಗೆ ಆಗಬಾರದಿತ್ತು: ನಟ ಸಿದ್ದಾರ್ಥ

    ಕಾವೇರಿ (Cauvery) ಗಲಾಟೆಯ ಸಂದರ್ಭದಲ್ಲಿ ತಮಿಳು ನಟ ಸಿದ್ಧಾರ್ಥ (Siddharth), ತಮ್ಮ ಚಿಕ್ಕು ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಕೆಲ ಕಾರ್ಯಕರ್ತರು ಸಿದ್ದಾರ್ಥ ನಡೆಸುತ್ತಿದ್ದ ಪತ್ರಿಕಾಗೋಷ್ಠಿಗೆ ಆಗಮಿಸಿ, ತಡೆದಿದ್ದರು. ಈ ಕುರಿತು ಕರ್ನಾಟಕದಲ್ಲೇ ಪರ ವಿರೋಧದ ಮಾತುಗಳೂ ಕೇಳಿ ಬಂದಿದ್ದವು.

    ಈ ಘಟನೆಗೆ ಸಂಬಂಧಿಸಿದಂತೆ ನಟ ಸಿದ್ಧಾರ್ಥ ಇದೀಗ ಪ್ರತಿಕ್ರಿಯೆಯನ್ನು (Response) ಕೊಟ್ಟಿದ್ದಾರೆ. ‘ನಾನು ನಟ. ಒಳ್ಳೆಯ ಸಿನಿಮಾ ಮಾಡಿದ್ದೇನೆ. ಸಾವಿರಾರು ಮಕ್ಕಳಿಗೆ ಈ ಸಿನಿಮಾವನ್ನು ಉಚಿತವಾಗಿ ತೋರಿಸುವ ಉದ್ದೇಶ ಹೊಂದಿದ್ದೇನೆ. ಕರ್ನಾಟಕದಲ್ಲೂ ಸಿನಿಮಾವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ, ನನಗೆ ಆ ನೆಲದಲ್ಲಿ ಹಾಗೆ ಆಗಬಾರದಿತ್ತು. ಕಾವೇರಿ ಹೋರಾಟಕ್ಕೂ ಸಿನಿಮಾಗೂ ಸಂಬಂಧ ಕಲ್ಪಿಸಬಾರದು’ ಎಂದಿದ್ದಾರೆ. ಇದನ್ನೂ ಓದಿ:ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಹನಿಮೂನ್ ಪ್ಲ್ಯಾನ್ ಕ್ಯಾನ್ಸಲ್ ಆಗಿದ್ದೇಕೆ?

    ಸಿದ್ಧಾರ್ಥ ಅವರ ಸುದ್ದಿಗೋಷ್ಠಿಗೆ ಕನ್ನಡಪರ ಹೋರಾಟಗಾರರು ಮುತ್ತಿಗೆ ಹಾಕಿರೋದ್ದಕ್ಕೆ ನಟ ಶಿವಣ್ಣ (Shivarajkumar) ಈ ಹಿಂದೆಯೇ ಪ್ರತಿಕ್ರಿಯೆ ನೀಡಿದ್ದರು. ನಮ್ಮ ಇಂಡಸ್ಟ್ರಿ ಪರವಾಗಿ ಸಿದ್ಧಾರ್ಥಗೆ ಕ್ಷಮೆ ಕೇಳುತ್ತೇನೆ. ಇನ್ಮುಂದೆ ಈ ರೀತಿ ಆಗಲ್ಲ ಎಂದು ಶಿವಣ್ಣ ಹೇಳಿದ್ದರು. ಶಿವಣ್ಣ ಆಡಿದ ಈ ಮಾತಿಗೂ ಪರ ವಿರೋಧದ ಚರ್ಚೆ ಶುರುವಾಗಿದೆ.

     

    ನಾವು ಏನೇ ಮಾಡಿದರೂ ಬೇರೆಯವರಿಗೆ ಹರ್ಟ್ ಆಗಬಾರದು. ಆಗಿರುವ ಘಟನೆ ತಪ್ಪು. ಹೀಗೆಲ್ಲ ಮಾಡಬಾರದು ಎಂದು ಮಾತನಾಡಿದ್ದಾರೆ. ಕನ್ನಡಿಗರೆಂದರೆ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುವವರು. ಪ್ರತಿಯೊಬ್ಬರನ್ನು ಸ್ವಾಗತಿಸುವವರು ಎಂಬ ಭಾವನೆ ಇದೆ. ಅದಕ್ಕೆ ನಾವು ಚ್ಯುತಿ ತರಬಾರದು. ಸಿದ್ಧಾರ್ಥ್‌ಗೆ ಈ ಮೂಲಕ ನಾನು ಕ್ಷಮೆ ಕೇಳುತ್ತೇನೆ ಎಂದು ಶಿವಣ್ಣ ಮಾತನಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿ ವಿಚಾರದಲ್ಲಿ ಕಲಾವಿದರನ್ನು ಹಿಂಸಿಸುವುದು ತಪ್ಪು : ಪ್ರಕಾಶ್ ರಾಜ್

    ಕಾವೇರಿ ವಿಚಾರದಲ್ಲಿ ಕಲಾವಿದರನ್ನು ಹಿಂಸಿಸುವುದು ತಪ್ಪು : ಪ್ರಕಾಶ್ ರಾಜ್

    ನಿನ್ನೆಯಷ್ಟೇ ಬೆಂಗಳೂರಿನಲ್ಲಿ ತಮ್ಮ ಸಿನಿಮಾ ಪ್ರಚಾರಕ್ಕಾಗಿ ತಮಿಳು (Tamil) ನಟ ಸಿದ್ಧಾರ್ಥ (Siddhartha) ಬೆಂಗಳೂರಿಗೆ ಆಗಮಿಸಿದ್ದರು. ಇಂದು ಬಿಡುಗಡೆ ಆಗಲಿರುವ ಅವರ ಚಿತ್ರಕ್ಕೆ ಅವರು ಪ್ರಚಾರದಲ್ಲಿ ತೊಡಗಿದ್ದರು. ಈ ಮಾಹಿತಿಯನ್ನು ಪಡೆದಿದ್ದ ಕನ್ನಡಪರ ಕೆಲ ಕಾರ್ಯಕರ್ತರು ಪತ್ರಿಕಾಗೋಷ್ಠಿಗೆ ಆಗಮಿಸಿ, ಸಿನಿಮಾ ಪ್ರಚಾರ ಮಾಡದಂತೆ ತಡೆದರು. ಇಂತಹ ಸಂದರ್ಭದಲ್ಲಿ ಅನ್ಯ ಭಾಷಾ ಚಿತ್ರಗಳು ರಿಲೀಸ್ ಆಗುವುದನ್ನು ವಿರೋಧಿಸಿದರು.

    ಮಾಧ್ಯಮಗೋಷ್ಠಿಯ ಮಧ್ಯ ಆಗಮಿಸಿದ ಚಳವಳಿಗಾರರು ಸಿದ್ಧಾರ್ಥ ಅವರನ್ನು ಮಾತನಾಡದಂತೆ ತಡೆದರು. ಕೊನೆಗೆ ಧನ್ಯವಾದಗಳನ್ನು ತಿಳಿಸಿ, ಮಾಧ್ಯಮಗೋಷ್ಠಿಯಿಂದ ಹೊರ ನಡೆದರು ಸಿದ್ಧಾರ್ಥ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಈ ಘಟನೆಗೆ ಪರ ವಿರೋಧ ಕೂಡ ವ್ಯಕ್ತವಾಯಿತು. ಇದನ್ನೂ ಓದಿ:ಟಾಲಿವುಡ್‌ನಲ್ಲಿ ರುಕ್ಮಿಣಿ ವಸಂತ್‌ಗೆ ಭರ್ಜರಿ ಡಿಮ್ಯಾಂಡ್

    ಈ ಘಟನೆಗೆ ಸಂಬಂಧಿಸಿದಂತೆ ಪ್ರಕಾಶ್ ರೈ (Prakash Raj)ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದು, ‘ಕಾವೇರಿ ನಮ್ಮದು.  ಹೌದು.. ನಮ್ಮದೇ. ಆದರೆ, ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನ,  ನಾಯಕರನ್ನು ಪ್ರಶ್ನಿಸದೆ,  ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ, ಹೀಗೆ ಅಸಹಾಯಕ ಜನಸಾಮಾನ್ಯರನ್ನು, ಕಲಾವಿದರನ್ನು ಹಿಂಸಿಸುವುದು ತಪ್ಪು. ಒಬ್ಬ ಕನ್ನಡಿಗನಾಗಿ ಸಹೃದಯ ಕನ್ನಡಿಗರ ಪರವಾಗಿ ಕ್ಷಮಿಸಿ’ ಎಂದು ಬರೆದುಕೊಂಡಿದ್ದಾರೆ.

     

    ಕನ್ನಡ ಸಿನಿಮಾಗಳು ಇಂದು ಬೇರೆ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಆಗುತ್ತಿವೆ. ಕೆಜಿಎಫ್, ಕಾಂತಾರ ರೀತಿಯ ಚಿತ್ರಗಳನ್ನು ಬೇರೆ ಭಾಷಿಕರೂ ಗೆಲ್ಲಿಸಿದ್ದಾರೆ. ನಾಳೆ ಇದೇ ರೀತಿ ಬೇರೆ ರಾಜ್ಯಗಳಲ್ಲಿ ನಮ್ಮ ಕಲಾವಿದರಿಗೆ ತೊಂದರೆಯಾದರೆ ಯಾರು ಹೊಣೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದಿ ದಬ್ಬಾಳಿಕೆ ವಿರುದ್ಧ ನಟ ಸಿದ್ದಾರ್ಥ ಆಕ್ರೋಶ

    ಹಿಂದಿ ದಬ್ಬಾಳಿಕೆ ವಿರುದ್ಧ ನಟ ಸಿದ್ದಾರ್ಥ ಆಕ್ರೋಶ

    ಕ್ಷಿಣ ಭಾರತದ ಹೆಸರಾಂತ ನಟ ಸಿದ್ದಾರ್ಥ ಹಿಂದಿ ಹೇರಿಕೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ವಿಮಾನ ನಿಲ್ದಾಣದಲ್ಲಿ ತಮ್ಮೊಂದಿಗೆ ಇಂಗ್ಲಿಷ್ ಮಾತನಾಡದೇ, ಭದ್ರತಾ ಸಿಬ್ಬಂದಿ ಸಾಕಷ್ಟು ಕಿರುಕುಳ ನೀಡಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮಧುರೈ ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಗೆ ತನ್ನ ವಯಸ್ಸಾದ ಪಾಲಕರು ಕೂಡ ಕಿರಿಕಿರಿ ಅನುಭವಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

    ಮಧುರೈ ವಿಮಾನ ನಿಲ್ದಾಣದಲ್ಲಿ ಸಿ.ಆರ್.ಪಿ.ಎಫ್ ಅಧಿಕಾರಿಗಳು ಸಿದ್ದಾರ್ಥ ಅವರ ತಾಯಿಯ ಬ್ಯಾಗ್‍ನಲ್ಲಿದ್ದ ನಾಣ್ಯಗಳನ್ನು ತಗೆಯುವಂತೆ ಹೇಳಿದ್ದಾರೆ. ಹಿಂದಿ ಬರುವುದಿಲ್ಲ ಇಂಗ್ಲಿಷಿನಲ್ಲಿ ಮಾತನಾಡಿ ಎಂದು ಪದೇ ಪದೇ ಸಿದ್ದಾರ್ಥ ಕೇಳಿಕೊಂಡರೂ, ಅವರು ಹಿಂದಿಯಲ್ಲೇ ಮಾತನಾಡುತ್ತಿದ್ದರಂತೆ. ಇಪ್ಪತ್ತು ನಿಮಿಷಗಳ ಕಾಲ ನಟ ಮತ್ತು ಆತನ ತಂದೆ ತಾಯಿಗೆ ಮಾನಸಿಕ ಹಿಂಸೆ ನೀಡುವಂತೆ ಅಧಿಕಾರಿಗಳು ಮಾತನಾಡಿದರು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ದಿವ್ಯಾಳ ಆಸೆಯಂತೆ ದೊಡ್ಮನೆಗೆ ಎಂಟ್ರಿ ಕೊಟ್ಟ ಅರವಿಂದ್ ಕೆ.ಪಿ

    ಸಿದ್ದಾರ್ಥ ಆಗಾಗ್ಗೆ ನರೇಂದ್ರ ಮೋದಿ ಸರಕಾರದ ವಿರುದ್ಧ ಮಾತನಾಡುತ್ತಲೇ ಇರುತ್ತಾರೆ. ಆಳುವ ಸರಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಅನೇಕ ಜನಪರ ಕೆಲಸಗಳಲ್ಲೂ ಅವರು ಭಾಗಿಯಾಗಿದ್ದಾರೆ. ಅದರಲ್ಲೂ ಹಿಂದಿ ಹೇರಿಕೆಯ ವಿರುದ್ಧ ಸಾಕಷ್ಟು ಮಾತನಾಡಿದ್ದಾರೆ. ತಮಗೇ ಆಗಿರುವ ಈ ಕಹಿ ನೋವನ್ನು ಹಂಚಿಕೊಂಡು, ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾವಾಗಲಿದೆ ಕಾಫಿ ಡೇ ಸಂಸ್ಥಾಪಕ, ಕಾಫಿ ಕಿಂಗ್ ಸಿದ್ಧಾರ್ಥ್ ಬಯೋಪಿಕ್

    ಸಿನಿಮಾವಾಗಲಿದೆ ಕಾಫಿ ಡೇ ಸಂಸ್ಥಾಪಕ, ಕಾಫಿ ಕಿಂಗ್ ಸಿದ್ಧಾರ್ಥ್ ಬಯೋಪಿಕ್

    ಕಾಫಿ ಉದ್ಯಮದಿಂದಲೇ ಹೆಚ್ಚು ಫೇಮಸ್ ಆಗಿದ್ದ, ಪ್ರತಿ ವರ್ಷವೂ 160 ಕೋಟಿ ಕಪ್ ಕಾಫಿ ಮಾರುತ್ತಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ, ಕಾಫಿ ಕಿಂಗ್ ಎಂದೇ ಫೇಮಸ್ ಆಗಿದ್ದ ವಿ.ಜಿ ಸಿದ್ಧಾರ್ಥ್ ಅವರ ಬಯೋಪಿಕ್ ಸದ್ಯದಲ್ಲೇ ಸೆಟ್ಟೇರಲಿದೆ. ಕಾಫಿ ಉದ್ಯಮಕ್ಕೆ ಒಂದು ಘನತೆ ತಂದುಕೊಟ್ಟು, ರಾಷ್ಟ್ರೀಯ ಹೆದ್ದಾರಿ 66ನೇ ಮಂಗಳೂರು ನಗರದಿಂದ ಉಳ್ಳಾಲ ಕಡೆಗೆ ಹೋಗುವ ಮಾರ್ಗದಲ್ಲಿನ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿ, ಆನಂತರ ಶವವಾಗಿ ಸಿಕ್ಕ ಸಿದ್ಧಾರ್ಥ ಅವರ ಬದುಕು ಮತ್ತು ಸಾವಿನ ನಿಗೂಢತೆ ಹೀಗೆ ಎಲ್ಲ ವಿಷಯವನ್ನು ಇದು ಒಳಗೊಂಡಿರಲಿದೆ.

    ಸಿದ್ದಾರ್ಥ ಅವರ ಜೀವನವೇ ರೋಚಕ. ತಮ್ಮ 24ನೇ ವಯಸ್ಸಿನಲ್ಲೇ ಮುಂಬೈನಲ್ಲಿ ಪೋರ್ಟ್ಪೊಲಿಯೋ ಮ್ಯಾನೇಜ್ ಮೆಂಟ್ ತರಬೇತಿ ಪಡೆದರು. ನಂತರ ತಂದೆಯ ಸಹಾಯ ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಿದರು. ಟ್ರೆಡಿಂಗ್, ಮ್ಯೂಚುಯಲ್ ಫಂಡ್ಸ್, ರಿಯಲ್ ಎಸ್ಟೇಟ್, ಸ್ಟಾರ್ಟ್ ಅಪ್ ಕಂಪೆನಿ, ಹೀಗೆ ಒಂದೊಂದೆ ಉದ್ಯಮ ಆರಂಭಿಸಿದರು. ಎಲ್ಲದರಲ್ಲೂ ಗೆಲುವು ಕಂಡರು.

    1993ರಲ್ಲಿ ಕಾಫಿ ಉದ್ಯಮಕ್ಕೆ ಕಾಲಿಟ್ಟ ಸಿದ್ಧಾರ್ಥ ಅವರು, ಮೊದ ಮೊದಲು ಕಾಫಿ ಬೀಜಗಳ ವ್ಯಾಪಾರ ಮತ್ತು ರಫ್ತು ಆರಂಭಿಸಿದರು. ಕಾಫಿ ಕ್ಯೂರಿಂಗ್ ಘಟಕವನ್ನೂ ಶುರು ಮಾಡಿದರು. 1948ರಲ್ಲಿ ಹ್ಯಾಮ್ ಬರ್ಗ್ ನ ಚಿಬೊದಲ್ಲಿ ಚಿಕ್ಕದೊಂದು ಮಳಿಗೆಯಲ್ಲಿ ಕಾಫಿ ಉದ್ಯಮ ಪ್ರಾರಂಭ ಮಾಡಿ, 1996ರಲ್ಲಿ ಕಾಫಿ ಡೇ ಶುರು ಮಾಡಿದರು. ಕೇವಲ ಐದೇ ಐದು ವರ್ಷಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಕೆಫೆ ಕಾಡಿ ಡೇ ಸ್ಥಾಪಿಸಿ ಕಾಫಿ ಕಿಂಗ್ ಆದರು. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ನಂತರ ಹಲವು ಹಗರಣಗಳಲ್ಲಿ ಇವರ ಹೆಸರು ಕೇಳಿ ಬಂತು, ಅವುಗಳೇ ಇವರನ್ನು ಹೈರಾಣು ಮಾಡಿದವು. ಇವೆಲ್ಲವನ್ನೂ ಒಳಗೊಂಡಂತೆ ರುಕ್ಮಿನಿ ರಾವ್ ಮತ್ತು ದತ್ತ ಎನ್ನುವವರು ಜಂಟಿಯಾಗಿ ಸಿದ್ಧಾರ್ಥ ಕುರಿತು ಪುಸ್ತಕವೊಂದನ್ನು ಬರೆದಿದ್ದಾರೆ. ಆ ಪುಸ್ತಕವನ್ನು ಆಧರಿಸಿ ಟಿ ಸೀರಿಸ್ ಫಿಲ್ಮ್ಸ್ ಮತ್ತು ಕರ್ಮ ಮೀಡಿಯಾ ಎಂಟರ್ ಟ್ಮೇನೆಂಟ್ ಜಂಟಿಯಾಗಿ ಇವರ ಬಯೋಪಿಕ್ ಅನ್ನು ತೆರೆಗೆ ತರಲು ಹೊರಟಿದ್ದಾರೆ. ಸದ್ಯ ಸಿನಿಮಾ ಮಾಡಲು ಹಕ್ಕುಗಳನ್ನು ಪಡೆದಿದ್ದಾರೆ. ಸಿದ್ಧಾರ್ಥ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    Live Tv

  • ಬಾಲಿವುಡ್ ಕೆಟ್ಟ ಮನಸ್ಥಿತಿ ಬಯಲು ಮಾಡಿದ ಖ್ಯಾತ ನಟ ಸಿದ್ದಾರ್ಥ

    ಬಾಲಿವುಡ್ ಕೆಟ್ಟ ಮನಸ್ಥಿತಿ ಬಯಲು ಮಾಡಿದ ಖ್ಯಾತ ನಟ ಸಿದ್ದಾರ್ಥ

    ಕ್ಷಿಣದ ಸಿನಿಮಾಗಳು ಹಿಂದಿ ಚಿತ್ರರಂಗಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲುತ್ತಿವೆ. ಹೀಗಾಗಿ ಬಾಲಿವುಡ್ ಮಂದಿಗೆ ನಡುಕ ಶುರುವಾಗಿದೆ. ಕೇವಲ ಸಿನಿಮಾಗಳು ಮಾತ್ರವಲ್ಲ, ದಕ್ಷಿಣದ ಸ್ಟಾರ್ ಗಳು ಕೂಡ ಬಾಲಿವುಡ್ ಮಂದಿಯ ಮನಸ್ಥಿತಿಯನ್ನು ಒಬ್ಬೊಬ್ಬರಿ ಬಿಚ್ಚಿಡುತ್ತಿದ್ದಾರೆ. ಹೀಗಾಗಿ ಬಾಲಿವುಡ್ ಮಂದಿಯ ಬಣ್ಣ ಬಯಲಾಗುತ್ತಿದೆ. ಇದನ್ನೂ ಓದಿ : ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ : ಶ್ರೀಮುರುಳಿ ನಾಯಕ

    ಹಿಂದಿ ಸಿನಿಮಾ ರಂಗದ ಕುರಿತು ಸ್ವತಃ ಕಂಗನಾ ರಣಾವತ್ ಅವರೇ ಆರೋಪದ ಮಾತುಗಳನ್ನು ಆಡಿದ್ದರು. ಬಾಲಿವುಡ್ ಕೆಲವರ ಕೈಯಲ್ಲಿ ಮಾತ್ರ ಇದೆ ಎಂದು ಹೇಳಿದ್ದರು. ಸ್ಟಾರ್ ನಟರ ಮಕ್ಕಳ  ಬಗ್ಗೆಯೂ ಮಾತನಾಡಿದ್ದರು. ಇದೀ ತೆಲುಗಿನ ಖ್ಯಾತ ನಟ ಸಿದ್ಧಾರ್ಥ ಕೂಡ ಬಾಲಿವುಡ್ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣದವರನ್ನು ಅವರು ಕೀಳು ಮಟ್ಟದಲ್ಲಿ ತೋರಿಸುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ : ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್ ನಲ್ಲಿ ಯಾರಿಗೂ ಇಲ್ಲ : ಕಂಗನಾ ರಣಾವತ್

    ಸದ್ಯ ಸಿದ್ಧಾರ್ಥ ನಟನೆಯ ಎಸ್ಕೇಪ್ ಪ್ಲಾನ್ ವೆಬ್ ಸೀರಿಸ್ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ಬಾಲಿವುಡ್ ಸಿನಿಮಾಗಳಲ್ಲಿ ದಕ್ಷಿಣದವರ ಪಾತ್ರವನ್ನು ಕೀಳಾಗಿ ಬಿಂಬಿಸಲಾಗುತ್ತಿತ್ತು. ದಕ್ಷಿಣದ ಪಾತ್ರಗಳು ಇದ್ದರೆ, ಅವುಗಳ ಡೈಲಾಗ್ ಕೂಡ ಅಷ್ಟೇ ಕೆಟ್ಟದ್ದಾಗಿ ಇರುತ್ತಿದ್ದವು ಎಂದು ಹಲವು ಉದಾಹರಣೆಗಳ ಸಮೇತ ಅವರು ವಿವರಿಸಿದ್ದಾರೆ. ಇದನ್ನೂ ಓದಿ : ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ದಕ್ಷಿಣದ ಹಲವು ಚಿತ್ರಗಳ ಬಗ್ಗೆಯೂ ಮಾತನಾಡಿರುವ ಅವರು, ಹೆಮ್ಮೆಯಿಂದ ಹೊಸ ರೀತಿಯ ಚಿತ್ರಗಳನ್ನು ದಕ್ಷಿಣ ಭಾರತದ ನಿರ್ದೇಶಕರು ಮಾಡುತ್ತಿದ್ದಾರೆ. ಈ ಮೂಲಕ ಅವಮಾನದ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದೂ ಸಿದ್ಧಾರ್ಥ ಮಾತನಾಡಿದ್ದಾರೆ.

  • ಸಿದ್ಧಾರ್ಥ್ ಆತ್ಮಹತ್ಯೆ ಮಾಡ್ಕೊಂಡಿದ್ದ ನೇತ್ರಾವತಿ ಸೇತುವೆಗೆ ಕೊನೆಗೂ ತಡೆಬೇಲಿ

    ಸಿದ್ಧಾರ್ಥ್ ಆತ್ಮಹತ್ಯೆ ಮಾಡ್ಕೊಂಡಿದ್ದ ನೇತ್ರಾವತಿ ಸೇತುವೆಗೆ ಕೊನೆಗೂ ತಡೆಬೇಲಿ

    – ಕಾಫಿ ಡೇ ಸಂಸ್ಥಾಪಕನ ಬಳಿಕ 14 ಮಂದಿ ಸೂಸೈಡ್
    – 55 ಲಕ್ಷ ರೂ. ವೆಚ್ಚದಲ್ಲಿ ಸೇತುವೆಯುದ್ದಕ್ಕೂ ರಕ್ಷಣಾ ಬೇಲಿ

    ಮಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ, ಕೋಟಿ ಒಡೆಯ ವಿ.ಜಿ. ಸಿದ್ಧಾರ್ಥ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂದ್ದ ನೇತ್ರಾವತಿ ಸೇತುವೆಗೆ ಕೊನೆಗೂ ತಡೆಬೇಲಿ ಭಾಗ್ಯ ಕರುಣಿಸಲಾಗಿದೆ.

    ಹೌದು. ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಒಂದು ವರ್ಷವೇ ಕಳೆದು ಹೋಗಿದೆ. ಮಂಗಳೂರಿನ ಜಪ್ಪಿನಮೊಗರು ಬಳಿಯ ನೇತ್ರಾವತಿ ಸೇತುವೆಯಿಂದ ಹಾರಿ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ದಿನದಿಂದಲೇ ಈ ಸೇತುವೆಗೆ ತಡೆಬೇಲಿ ನಿರ್ಮಿಸಬೇಕೆಂದು ಸಾಕಷ್ಟು ಒತ್ತಾಯ ಕೇಳಿ ಬಂದಿದ್ದು, ರಾಜಕಾರಣಿಗಳು ಕೂಡ ಒಪ್ಪಿಕೊಂಡಿದ್ರು. ಇದನ್ನೂ ಓದಿ: ನೇತ್ರಾವತಿ ನದಿಗೆ ಮತ್ತೊಂದು ಜೀವ ಆಹುತಿ

    ಅಂದಿನಿಂದ ಇಂದಿನವರೆಗೆ ಈ ಸೇತುವೆಯಿಂದ ನದಿಗೆ ಹಾರಿ ಬರೋಬ್ಬರಿ 14 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಜಾಗವೊಂದು ಸೂಸೈಡ್ ಪಾಯಿಂಟ್ ಆಗಿತ್ತು. ಇದೀಗ ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಸೇತುವೆಗೆ ಕೊನೆಗೂ ತಡೆಬೇಲಿ ಭಾಗ್ಯ ಒದಗಿ ಬಂದಿದೆ. ಇದನ್ನೂ ಓದಿ: ಸಿದ್ಧಾರ್ಥ್ ಕಾಣೆಯಾಗಿದ್ದ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ

    ಸೇತುವೆಯುದ್ದಕ್ಕೂ ರಕ್ಷಣಾ ಬೇಲಿ ಅಳವಡಿಸುವ ಕಾರ್ಯ ಆರಂಭಗೊಂಡಿದೆ. ಸಿದ್ದಾರ್ಥ್ ಆತ್ಮಹತ್ಯೆಯ ಬಳಿಕ ಈ ಸೇತುವೆ ಬಳಿ ಬಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಅನಾಹುತ ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 55 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆಯುದ್ದಕ್ಕೂ ರಕ್ಷಣಾ ಬೇಲಿ ಅಳವಡಿಸುವ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಸೇತುವೆಯ 8ನೇ ಕಂಬದಿಂದ ವ್ಯಕ್ತಿ ನೀರಿಗೆ ಹಾರಿದ್ದನ್ನು ಕಣ್ಣಾರೆ ಕಂಡ ಮೀನುಗಾರ

    ಸೇತುವೆ 800 ಮೀ.ಉದ್ದವಿದೆ. ಸೇತುವೆಯ ತಡೆಗೋಡೆಯ ಮೇಲೆ ರಕ್ಷಣಾ ಬೇಲಿಯು 5 ಅಡಿ ಎತ್ತರವಿದ್ದು, ಬೇಲಿಯ ಮೇಲ್ಗಡೆಯೂ ಹತ್ತಲು ಸಾಧ್ಯವಾಗದಂತೆ ಮೇಲ್ಭಾಗಕ್ಕೂ ನಾಲ್ಕು ಸಾಲು ಮುಳ್ಳು ತಂತಿಯನ್ನು ರಸ್ತೆಯ ಭಾಗಕ್ಕೆ ಬಗ್ಗಿಸಿ ಜೋಡಣೆ ಮಾಡಲಾಗುತ್ತಿದೆ.

  • ಎಸ್‍ಎಂಕೆ ಅಳಿಯ ಸಿದ್ಧಾರ್ಥ್ ಸಾವಿನ ರಹಸ್ಯ ಇಂದು ಬಹಿರಂಗ?

    ಎಸ್‍ಎಂಕೆ ಅಳಿಯ ಸಿದ್ಧಾರ್ಥ್ ಸಾವಿನ ರಹಸ್ಯ ಇಂದು ಬಹಿರಂಗ?

    ಬೆಂಗಳೂರು/ಮಂಗಳೂರು: ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್ ಸಾವಿನ ಕುರಿತು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಇಂದು ಸಲ್ಲಿಕೆಯಾಗುವ ಸಾಧ್ಯತೆಗಳಿವೆ.

    ಪೋಸ್ಟ್ ಮಾರ್ಟಂ ವರದಿ ಆಧರಿಸಿ ತನಿಖೆ ಮುಂದುವರಿಸಲಾಗುತ್ತಿದ್ದು, ಸಿದ್ಧಾರ್ಥ್ ಅವರ ಮೃತದೇಹದ ಕತ್ತು, ಮುಖದ ಭಾಗದಲ್ಲಿ ಗಾಯಗಳಾಗಿವೆಯಾ ಇಲ್ಲವೋ, ದೇಹದ ಮೇಲೆ ಯಾವುದೇ ಗಾಯದ ಗುರುತು ಇದೆಯಾ ಇಲ್ವಾ ಹಾಗೂ ಸಿದ್ದಾರ್ಥ್ ಧರಿಸಿದ್ದ ಟೀಶರ್ಟ್ ಏನಾಯ್ತು ಅಲ್ಲದೆ ಸಿದ್ದಾರ್ಥ್ ಸಾವು ಸಹಜವೋ? ಅಸಹಜವೋ? ಎಂಬ ಪ್ರಶ್ನೆಗಳಿಗೆ ಇಂದು ಉತ್ತರ ಸಿಗುವ ನಿರೀಕ್ಷೆಯಿದೆ.

    ಸಿದ್ಧಾರ್ಥ್ ತಮ್ಮ ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರಿಗೆ ಬರೆದಿರುವ ಪತ್ರದ ಖಚಿತತೆಯನ್ನು ದೃಢಪಡಿಸಿಕೊಳ್ಳುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ತನಿಖೆಗಾಗಿ ಬೆಂಗಳೂರಿಗೆ ತೆರಳಿರುವ ಒಂದು ತಂಡ, ಈಗಾಗಲೇ ಕೆಫೆ ಕಾಫಿ ಡೇ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಸಂಸ್ಥೆಯ ಕೆಲವು ಅಧಿಕಾರಿಗಳು ವಿದೇಶಕ್ಕೆ ತೆರಳಿದ್ದು, ಅವರ ಹೇಳಿಕೆಗಳನ್ನು ಪಡೆದ ಬಳಿಕವೇ ಪತ್ರದ ಖಚಿತತೆಯ ಕುರಿತು ಸ್ಪಷ್ಟತೆ ಸಿಗುವ ಸಾಧ್ಯತೆಗಳಿವೆ.

    ನಗರ ಪೊಲೀಸರು, ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಮಾನ್ಯವಾಗಿ ಅಸಹಜ ಸಾವಿನ ಪ್ರಕರಣಗಳನ್ನು ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ಈ ಪ್ರಕರಣದಲ್ಲಿ ಎಸಿಪಿ ದರ್ಜೆಯ ಅಧಿಕಾರಿಗೆ ತನಿಖೆಯ ಹೊಣೆ ವಹಿಸಲಾಗಿದೆ. ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಟಿ. ಕೋದಂಡರಾಮ್ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದ್ದು, ವಿಶೇಷ ತಂಡಗಳು ಅವರಿಗೆ ವರದಿ ಸಲ್ಲಿಸಲಿವೆ.

    https://www.youtube.com/watch?v=numNLY1ATRs