Tag: Siddharoodha

  • ಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದೇನೆ ಎಂದ ಸಿದ್ಧಾರೂಡನಿಗೆ ಸಂಕಷ್ಟ?

    ಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದೇನೆ ಎಂದ ಸಿದ್ಧಾರೂಡನಿಗೆ ಸಂಕಷ್ಟ?

    ನ್ನಡತೆಯ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಆಗಿದ್ದ ಸಿದ್ಧಾರೂಢಗೆ (Siddharoodha) ಸಂಕಷ್ಟವೊಂದು ಎದುರಾಗಿದೆ. ಜೈಲಿನಲ್ಲಿ ದರ್ಶನ್‌ರನ್ನು (Darshan) ಭೇಟಿಯಾಗಿದ್ದೇನೆ ಎಂದು ಸಿದ್ಧಾರೂಡ ಸುಳ್ಳು ಕಥೆ ಕಟ್ಟಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ:‘ಮೆಜೆಸ್ಟಿಕ್ 2’ ಚಿತ್ರಕ್ಕಾಗಿ ಐಟಂ ಸಾಂಗ್ ಶೂಟಿಂಗ್

    ಹಲವು ಮಾಧ್ಯಮಗಳಲ್ಲಿ ದರ್ಶನ್ ಕುರಿತು ಸಿದ್ಧಾರೂಢ ನೀಡಿರುವ ಹೇಳಿಕೆ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಪರಿಶೀಲಿಸಿ, ಜೈಲಿನಲ್ಲಿ ದರ್ಶನ್ ಮತ್ತು ಸಿದ್ಧಾರೂಢ ಭೇಟಿ ಮಾಡಿಯೇ ಇಲ್ಲ. ನಟ ಭದ್ರತಾ ಸೆಲ್‌ನಲ್ಲಿದ್ದು, ಭೇಟಿಗೆ ಯಾರಿಗೂ ಅವಕಾಶ ಕೊಡಲಿಲ್ಲ ಎಂದು ಜಿಲ್ಲಾಧಿಕಾರಿಗಳು ಕಾರಾಗೃಹ ಇಲಾಖೆಗೆ ರಿಪೋರ್ಟ್ ಕೊಟ್ಟಿದ್ದಾರೆ.

    ಅಂದಹಾಗೆ, ಜುಲೈ 8ರಂದು ಸಿದ್ಧಾರೂಢ ಬಳ್ಳಾರಿ ಜೈಲಿನಿಂದ ಸೆಂಟ್ರಲ್ ಜೈಲಿಗೆ ಬಂದಿದ್ದರು. 18 ಗಂಟೆಗಳ ಕಾಲ ಜೈಲಿನಲ್ಲಿ  ಸಿದ್ಧರೂಢ ಇದ್ದಿದ್ದಾಗಿ ವರದಿಯಾಗಿದೆ. ಜು.9ರಂದು ಸನ್ನಡತೆಯ ಆಧಾರದ ಮೇಲೆ ರಿಲೀಸ್ ಆದರು. ಈ ಕುರಿತು ಎರಡು ಕಡೆಯ ಜೈಲಾಧಿಕಾರಿಗಳಿಗೆ ಕಾರಾಗೃಹ ಇಲಾಖೆ ನೋಟಿಸ್ ನೀಡಿತ್ತು.

    ಇತ್ತೀಚೆಗೆ ಜೈಲಿನಲ್ಲಿ ದರ್ಶನ್‌ರನ್ನು ಭೇಟಿಯಾಗಿರೋದಾಗಿ ಮಾಧ್ಯಮಕ್ಕೆ ಸಿದ್ಧಾರೂಢ ಹೇಳಿದ್ದರು. ಜೈಲಿನಲ್ಲಿ ನರಕ ಅನುಭವಿಸುತ್ತಿದ್ದಾರೆ. ದರ್ಶನ್‌ರನ್ನು ಅಲ್ಲಿ ನೋಡಿ ಬೇಜಾರಾಯಿತು ಎಂದು ಮಾತನಾಡಿದ್ದರು. ಜುಲೈ 8ರಂದು ಅಧಿಕಾರಿಗಳ ಅನುಮತಿ ಪಡೆದು ದರ್ಶನ್‌ರನ್ನು ಭೇಟಿಯಾದೆ. ನಿಮ್ಮ ಅಭಿಮಾನಿ ಅಂತ ಭೇಟಿಯಾದಾಗ ತಬ್ಬಿಕೊಂಡರು. ಆ ಜಾಗದಲ್ಲಿ ದರ್ಶನ್‌ರನ್ನು ನೋಡಿ ಬೇಜಾರಾಯಿತು. ಬಳಿಕ ಅವರಿಗೆ ನಾನು ಪಿರಮಿಡ್ ಧ್ಯಾನ ಹೇಳಿಕೊಟ್ಟೆ. 10 ನಿಮಿಷ ಮಾಡಿದ ನಂತರ ಇದು ಒಂದು ಥರ ಚೆನ್ನಾಗಿದೆ ಕಂಟಿನ್ಯೂ ಮಾಡಬಹುದು ಎಂದು ದರ್ಶನ್ ಹೇಳಿದ್ರು ಎಂದು ಸಿದ್ಧಾರೂಢ ಮಾತನಾಡಿದ್ದರು.

    ಆಧ್ಯಾತ್ಮಿಕದ ಪುಸ್ತಕಗಳನ್ನೇ ಜಾಸ್ತಿ ಓದಿದ್ದಾರೆ ಅಲ್ಲಿ. ಕಾರಾಗೃಹದಲ್ಲಿ ಅವರನ್ನು ನೋಡೋದು ಬೇಜಾರಾಗುತ್ತದೆ. ದರ್ಶನ್ ಸರ್ ಮಾಡಿದ್ದು ತಪ್ಪೋ ಸರಿಯೋ ಅದನ್ನು ನಿರ್ಧಾರ ಮಾಡೋಕೆ ನ್ಯಾಯಾಲಯ ಇದೆ. ಕೊನೆಯವರೆಗೂ ನಮ್ಮ ಜೊತೆಗೆ ಇರೋದು ಹೆಂಡತಿ, ಮಕ್ಕಳು ಮಾತ್ರ. ದರ್ಶನ್ ಸರ್‌ಗೆ ಆದಷ್ಟು ಬೇಗ ಒಳ್ಳೆಯದಾಗಲಿ. ಅವರು ಆದಷ್ಟು ಬೇಗ ಹೊರಗೆ ಬರುತ್ತಾರೆ ಅನ್ನೋ ಭರವಸೆ ನನ್ನದು ಎಂದು ಸಿದ್ಧಾರೂಢ ಮಾತನಾಡಿದ್ದರು. ನನಗೆ ನಾನು ಜೈಲಿಗೆ ಹೋಗಿದ್ದು ಅಷ್ಟು ಬೇಜಾರು ಆಗಲಿಲ್ಲ. ಆದರೆ ದರ್ಶನ್ ಸರ್ ಜೈಲಿಗೆ ಬಂದಿದ್ದು ಬಹಳ ಬೇಸರ ಆಯ್ತು. ನಾನು ಯಾಕೆ ಜೈಲಿಗೆ ಬಂದೆ ಎಂದು ವಿಚಾರಿಸಿದರು. ಬಳಿಕ ಹೊಸ ಜೀವನ ಸಿಕ್ಕಿದೆ. ಒಳ್ಳೆಯದಾಗಲಿ ಎಂದು ಮಾತನಾಡಿದ್ದರು. ನೀನು ನನ್ನ ಸೆಲೆಬ್ರಿಟಿ. ಹಾಗೆಯೇ ನಾನು ನಿನ್ನ ಸೆಲೆಬ್ರಿಟಿ ಎಂದು ಹೇಳಿದ್ರು ಎಂದು ಸಿದ್ಧಾರೂಢ ಹೇಳಿದ್ದರು.

    ನಾನು ಕಳೆದ 21 ವರ್ಷಗಳಿಂದ ಜೈಲಿನಲ್ಲಿ ಇದ್ದೇನೆ. ನನಗೆ ಗೊತ್ತು. ದರ್ಶನ್ ಸರ್ ನಿಜವಾಗಲೂ ನರಕ ಅನುಭವಿಸುತ್ತಿದ್ದಾರೆ. ನಾನು ಭೇಟಿಯಾದ ಅವರು ಡಲ್ ಆಗಿದ್ರೂ. ‘ಕಾಟೇರ’ (Kaatera) ಸಿನಿಮಾದಲ್ಲಿ ಇದ್ದ ಬಾಡಿಗೂ ಈಗ ಇರುವ ಬಾಡಿಗೂ ಬದಲಾವಣೆ ಆಗಿದೆ. ಅವರಿಗೆ ವಿಐಪಿ ಟ್ರೀಟ್ಮೆಂಟ್‌ ನಿಜವಾಗಲೂ ಕೊಟ್ಟೇ ಇಲ್ಲ. ಎಲ್ಲರ ಹಾಗೇ ಅವರನ್ನು ನೋಡ್ತಿಕೊಳ್ತಿದ್ದಾರೆ. ಅವರು ನೆಲದ ಮೇಲೆ ಮಲ್ಕೋತ್ತಾರೆ. ಸೊಳ್ಳೆ ಪರದೆ ಇದೆ. ಕುಡಿಯೋಕೆ ವಾಟರ್ ಕ್ಯಾನ್‌ನಲ್ಲಿ ನೀರಿದೆ ಅಷ್ಟೇ. ವಿಶೇಷ ಸೌಲಭ್ಯ ಅಂತೇನು ಎಂದು ಹೇಳಿದ್ದರು.

  • ಧಾರವಾಡ ಜಿಲ್ಲಾಡಳಿತದಿಂದ ಪ್ರಧಾನಿ ಮೋದಿಗೆ ತೊಟ್ಟಿಲು ಗಿಫ್ಟ್

    ಧಾರವಾಡ ಜಿಲ್ಲಾಡಳಿತದಿಂದ ಪ್ರಧಾನಿ ಮೋದಿಗೆ ತೊಟ್ಟಿಲು ಗಿಫ್ಟ್

    ಧಾರವಾಡ: ಪ್ರಧಾನಿ ಮೋದಿ (Narendra Modi) ಪ್ರತಿ ಬಾರಿ ರಾಜ್ಯಕ್ಕೆ ಬಂದಾಗ ಹೊಸದೊಂದು ಉಡುಗೊರೆ ತಯಾರಾಗಿರುತ್ತದೆ. ಈ ಬಾರಿ ಧಾರವಾಡಕ್ಕೆ ಐಐಟಿ (IIT) ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಮಕ್ಕಳನ್ನು ಆಡಿಸುವ ತೊಟ್ಟಿಲನ್ನು ಉಡುಗೊರೆಯಾಗಿ ನೀಡಲು ಧಾರವಾಡ (Dharwad) ಜಿಲ್ಲಾಡಳಿತ ಸಿದ್ಧವಾಗಿದೆ.

    ಜಿಲ್ಲೆಯ ಕಲಘಟಗಿ ತೊಟ್ಟಿಲು (Kalaghatgi cradle) ಎಂದರೆ ಬಹಳ ಫೇಮಸ್. ತೊಟ್ಟಿಲಿನ ಮೇಲೆ ಹಚ್ಚಿದ ಬಣ್ಣ ಕೂಡಾ ಅಳಿಸುವುದಿಲ್ಲ. ಸಾಗುವಾನಿ ಕಟ್ಟಿಗೆಯಿಂದ ತಯಾರಾಗಿರುವ ಈ ಚಿಕ್ಕ ತೊಟ್ಟಿಲಿನ ಮೇಲೆ ದಶಾವತಾರ (Ten Incarnations) ಚಿತ್ರ ಬಿಡಿಸಲಾಗಿದೆ. ಇದರೊಂದಿಗೆ ಸಿದ್ಧಾರೂಢರ (Siddharoodha) ಚಿಕ್ಕ ಮೂರ್ತಿಯನ್ನೂ ಸಹ ಕೊಡಲಾಗುತ್ತಿದೆ. ಇದನ್ನೂ ಓದಿ: ಕುಂಕುಮ ಎಂದರೆ ಬೆಚ್ಚಿ ಬೀಳುತ್ತಿದ್ದ ಸಿದ್ದರಾಮಯ್ಯ ಇಂದು ದೇವಸ್ಥಾನ ಬಿಟ್ಟು ಬದುಕುತ್ತಿಲ್ಲ: ಈಶ್ವರಪ್ಪ

    ತೊಟ್ಟಿಲು ತಯಾರಿಸಲು ಸುಮಾರು 15 ದಿನಗಳಾದರೂ ಬೇಕು. ಆದರೆ ಪ್ರಧಾನಿ ಮೋದಿಗೆ ಗಿಫ್ಟ್ ಕೊಡುತ್ತಿರುವ ಹಿನ್ನೆಲೆಯಲ್ಲಿ ಕಲಘಟಗಿಯ ಶ್ರೀಧನ ಸಾಹುಕಾರ ಎನ್ನುವ ಕಲಾವಿದ 8 ದಿನಗಳಲ್ಲಿ ಈ ಉಡುಗೊರೆ ತಯಾರಿಸಿದ್ದಾರೆ.

    ಏಲಕ್ಕಿ ಹಾರ ಹಾಗೂ ಪೇಟ ಹಾಕಿ ಪ್ರಧಾನಿಗೆ ಜಿಲ್ಲಾಡಳಿತ ಸನ್ಮಾನಿಸಿ ಉಡುಗೊರೆಯನ್ನು ನೀಡಿ ಗೌರವಿಸಲಿದೆ. ಇದನ್ನೂ ಓದಿ: ಯಾರಿಗೋ ಹುಟ್ಟಿದ ಮಗುವನ್ನು ಜೆಡಿಎಸ್-ಕಾಂಗ್ರೆಸ್‍ನವರು ತಮ್ಮದೆನ್ನುತ್ತಾರೆ: ಈಶ್ವರಪ್ಪ ವಾಗ್ದಾಳಿ