Tag: Siddhant Chaturvedi

  • ಸಿದ್ಧಾಂತ್ ಚತುರ್ವೇದಿ ಜೊತೆ ತೃಪ್ತಿ ದಿಮ್ರಿ ರೊಮ್ಯಾನ್ಸ್

    ಸಿದ್ಧಾಂತ್ ಚತುರ್ವೇದಿ ಜೊತೆ ತೃಪ್ತಿ ದಿಮ್ರಿ ರೊಮ್ಯಾನ್ಸ್

    ‘ಅನಿಮಲ್’ (Animal) ಸಿನಿಮಾದ ಹಾಟ್ ಬೆಡಗಿ ತೃಪ್ತಿ ದಿಮ್ರಿ ‘ಪುಷ್ಪ 2’ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕ್ತಾರೆ ಎಂಬ ಸುದ್ದಿ ವೈರಲ್ ಆದ ಬೆನ್ನಲ್ಲೇ ಇದೀಗ ಬಿಟೌನ್‌ನಲ್ಲಿ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಸಿದ್ಧಾಂತ್ ಚತುರ್ವೇದಿ (Siddhant Chaturvedi) ಜೊತೆ ಡ್ಯುಯೇಟ್ ಹಾಡೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ತಮಿಳು ನಟ ಸಿಂಬುಗೆ ಜಾನ್ವಿ ಕಪೂರ್ ನಾಯಕಿ

    ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಕರಣ್ ಜೋಹರ್ ‘ಧಡಕ್ 2’ (Dhadak 2) ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿದ್ಧಾಂತ್ ಮತ್ತು ತೃಪ್ತಿ ಈ ಹೊಸ ಜೋಡಿಯನ್ನು ಜೊತೆಯಾಗಿಸಿ ವಿಭಿನ್ನ ಪ್ರೇಮ ಕಥೆಯನ್ನು ತೋರಿಸಲು ಹೊರಟಿದ್ದಾರೆ. ತಂಡದ ಕಡೆಯಿಂದ ಅಫಿಷಿಯಲ್ ಅನೌನ್ಸ್‌ಮೆಂಟ್ ಕೂಡ ಆಗಿದೆ.

    ‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡ ಮೇಲೆ ತೃಪ್ತಿಗೆ ಅದೃಷ್ಟ ಖುಲಾಯಿಸಿದೆ. ಧಡಕ್ 2ಗೆ ಚಾನ್ಸ್ ಸಿಕ್ಕಿದೆ. ಸಿದ್ಧಾಂತ್ ಕಾಣಿಸಿಕೊಳ್ತಿರುವ ತೃಪ್ತಿಗೆ ಉತ್ತಮ ಪಾತ್ರವೇ ಸಿಕ್ಕಿದೆ. ನಾಯಕಿ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ಜನರಿಗೂ ಈ ಸಿನಿಮಾ ಕನೆಕ್ಟ್ ಆಗಲಿದೆಯಂತೆ.

    2018ರಲ್ಲಿ ‘ಧಡಕ್’ ಸಿನಿಮಾದಲ್ಲಿ ಇಶಾನ್‌ಗೆ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸಿದ್ದರು. ಜಾನ್ವಿ ಚೊಚ್ಚಲ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು.

  • ಸಿದ್ಧಾಂತ್ ಚತುರ್ವೇದಿ ಜೊತೆ ‘ಸೀತಾರಾಮಂ’ ನಟಿ ಡೇಟಿಂಗ್

    ಸಿದ್ಧಾಂತ್ ಚತುರ್ವೇದಿ ಜೊತೆ ‘ಸೀತಾರಾಮಂ’ ನಟಿ ಡೇಟಿಂಗ್

    ಸೀತಾರಾಮಂ (Seetharamam), ಫ್ಯಾಮಿಲಿ ಸ್ಟಾರ್ ಸಿನಿಮಾಗಳ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದ ನಟಿ ಮೃಣಾಲ್ ಠಾಕೂರ್ (Mrunal Thakur) ಇದೀಗ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಹೀರೋ ಸಿದ್ಧಾಂತ್ ಚತುರ್ವೇದಿ (Siddhant Chaturvedi) ಜೊತೆ ಮೃಣಾಲ್ ಲವ್ವಿ ಡವ್ವಿ ಶುರುವಾಗಿದೆ ಎಂದು ಗುಸು ಗುಸು ಶುರುವಾಗಿದೆ. ಇದನ್ನೂ ಓದಿ:ಅವಕಾಶ ಸಿಕ್ಕರೆ ಕನ್ನಡದಲ್ಲಿ ನಟಿಸ್ತೇನೆ : ನಟಿ ಚಾಂದನಿ

    ಬಿಟೌನ್ ಅಂಗಳದ ನಯಾ ಜೋಡಿ ಅಂದರೆ ಸಿದ್ಧಾಂತ್ ಮತ್ತು ಮೃಣಾಲ್. ಇತ್ತೀಚೆಗೆ ರೆಸ್ಟೋರೆಂಟ್‌ವೊಂದರಲ್ಲಿ ಡಿನ್ನರ್ ಡೇಟ್ ಮುಗಿಸಿ ಜೊತೆಯಾಗಿ ಕೈ ಕೈ ಹಿಡಿದು ಇಬ್ಬರೂ ಕಾಣಿಸಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದೀಗ ಇಬ್ಬರೂ ಎಂಗೇಜ್ ಆಗಿದ್ದಾರೆ ಎಂದು ಚರ್ಚೆ ಶುರುವಾಗಿದೆ. ಈ ಸುದ್ದಿ ನಿಜನಾ? ಎಂಬುದನ್ನು ಈ ಜೋಡಿ ಖಚಿತಪಡಿಸಬೇಕಿದೆ.

    ಬಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಮೃಣಾಲ್‌ಗೆ ಭಾರೀ ಬೇಡಿಕೆ ಇದೆ. ಹಿಂದಿ ಸಿನಿಮಾಗಳಿಗಿಂತ ತೆಲುಗಿನಲ್ಲಿ ನಟಿ ಸಕ್ಸಸ್ ಕಂಡಿದ್ದಾರೆ. ಅದರಲ್ಲೂ ‘ಸೀತಾರಾಮಂ’ ಸಿನಿಮಾದಲ್ಲಿ ಸೀತಾ ಆಗಿ ಎಲ್ಲರ ಗಮನ ಸೆಳೆದಿದ್ದರು.

    ಸದ್ಯ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಅವರ ಹೊಸ ಸಿನಿಮಾದಲ್ಲಿ ಮೃಣಾಲ್ ನಾಯಕಿಯಾಗಿದ್ದಾರೆ. ತೆಲುಗಿನಲ್ಲಿ ಕೆಲವು ಸಿನಿಮಾಗಳ ಮಾತುಕತೆ ನಡೆಯುತ್ತಿವೆ.

  • ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿ

    ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿ

    ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್‌ಗೆ (Mrunal Thakur) ಇದೀಗ ಭಾರೀ ಬೇಡಿಕೆಯಿದೆ. ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನಿಮಾ ಕೊಟ್ಮೇಲೆ ‘ಸೀತಾರಾಮಂ’ ನಟಿಯ ಅದೃಷ್ಟ ಖುಲಾಯಿಸಿದೆ. ಬಿಟೌನ್ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಿನಿಮಾದಲ್ಲಿ ಹೀರೋಯಿನ್ ಆಗಿ ಮೃಣಾಲ್ ಸೆಲೆಕ್ಟ್ ಆಗಿದ್ದಾರೆ.

    ಬಾಲಿವುಡ್‌ನ ಹಾಟ್ ಹೀರೋ ಸಿದ್ಧಾಂತ್ ಚತುರ್ವೇದಿಗೆ (Siddhant Chaturvedi) ಮೃಣಾಲ್ ನಾಯಕಿಯಾಗಿದ್ದಾರೆ. ಮುಂದಿನ ವಾರದಿಂದ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಸದ್ಯ ಸಿನಿಮಾ ವರ್ಕ್ಶಾಪ್‌ನಲ್ಲಿ ನಟಿ ಭಾಗಿಯಾಗುತ್ತಿದ್ದಾರೆ. ಪಾತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ ಮೃಣಾಲ್. ಇದನ್ನೂ ಓದಿ:ಇಡಿ ದಾಳಿ ಬಳಿಕ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ದಂಪತಿ ಪ್ರತಿಕ್ರಿಯೆ

    ಇತ್ತೀಚೆಗೆ ಮೃಣಾಲ್‌ರನ್ನು ಆಫೀಸ್‌ಗೆ ಕರೆಸಿ ಕಥೆ ಬಗ್ಗೆ ಚರ್ಚೆಸಿದ್ದರು ಬನ್ಸಾಲಿ ಟೀಮ್. ಅಷ್ಟು ಸುಲಭವಾಗಿ ಯಾರಿಗೂ ಮಣೆ ಹಾಕದ ನಿರ್ದೇಶಕ ಸಂಜಯ್ ಈಗ ಮೃಣಾಲ್ ನಟನೆಯನ್ನು ಮೆಚ್ಚಿ ಮುಂದಿನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ಉತ್ತಮ ಪಾತ್ರವನ್ನೇ ಮೃಣಾಲ್‌ಗೆ ನೀಡಿದ್ದಾರೆ.

    ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಗರಡಿಯಲ್ಲಿ ಮೃಣಾಲ್ ಪಳಗುತ್ತಾರೆ ಎಂದರೆ ಸಕ್ಸಸ್ ಕಟ್ಟಿಟ್ಟ ಬುತ್ತಿ ಎಂದರ್ಥ. ಸೀತಾರಾಮಂ, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಚಿತ್ರದ ಸಕ್ಸಸ್ ನಂತರ ಮೃಣಾಲ್ ಮತ್ತೆ ಹೇಗೆ ಹವಾ ಕ್ರಿಯೇಟ್ ಮಾಡುತ್ತಾರೆ ಎಂದು ಕಾದುನೋಡಬೇಕಿದೆ.