Tag: siddeshwar swamiji

  • ಸಿದ್ದೇಶ್ವರ ಶ್ರೀಗಳ 2ನೇ ಪುಣ್ಯಸ್ಮರಣೆ – ನಡೆದಾಡುವ ದೇವರ ನೆನಪಲ್ಲಿ ಗುರುನಮನ

    ಸಿದ್ದೇಶ್ವರ ಶ್ರೀಗಳ 2ನೇ ಪುಣ್ಯಸ್ಮರಣೆ – ನಡೆದಾಡುವ ದೇವರ ನೆನಪಲ್ಲಿ ಗುರುನಮನ

    ವಿಜಯಪುರ: ನಡೆದಾಡುವ ದೇವರು ಎಂದೇ ಕರೆಯಿಸಿಕೊಳ್ಳುತ್ತಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ (Siddeshwar Swamiji) 2ನೇ ಪುಣ್ಯಸ್ಮರಣೆ ಹಿನ್ನೆಲೆ ಗುರುನಮನ ಹಮ್ಮಿಕೊಳ್ಳಲಾಗಿತ್ತು.

    ಇಂದಿಗೆ (ಜ.02) ನಮ್ಮನ್ನೆಲ್ಲ ಅಗಲಿ ಎರಡು ವರ್ಷಗಳು ಕಳೆದಿವೆ. ಈ ಹಿನ್ನೆಲೆ ವಿಜಯಪುರದ (Vijayapura) ಜ್ಞಾನಯೋಗಾಶ್ರಮದಲ್ಲಿ ಗುರುನಮನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಇದನ್ನೂ ಓದಿ: ವಿಜಯಪುರ-ಮಂಗಳೂರು ರೈಲು ಯಲಿವಿಗಿಯಲ್ಲಿ ನಿಲುಗಡೆ – ರೈಲ್ವೆಗೆ ಬೊಮ್ಮಾಯಿ ಥ್ಯಾಂಕ್ಸ್

    ಕಾರ್ಯಕ್ರಮದಲ್ಲಿ ಮೇಘಾಲಯ ರಾಜ್ಯಪಾಲ ವಿಜಯಶಂಕರ್, ಸಚಿವ ಶಿವಾನಂದ ಪಾಟೀಲ, ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಹಾಗೂ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿಗಳು ಭಾಗಿಯಾಗಿದ್ದರು. ಶ್ರೀಗಳಿಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಮಾತನಾಡಿದ ಹಲವರು ಸಿದ್ದೇಶ್ವರ ಸ್ವಾಮೀಜಿಗಳನ್ನು ನೆನೆದು, ನಾವೆಲ್ಲರು ಅವರ ಮಾರ್ಗದರ್ಶನದಂತೆ ನಾವೆಲ್ಲರೂ ನಡೆಯಬೇಕಾಗಿರುವುದು ನಮ್ಮ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗಿಯಾಗಿದ್ದರು.ಇದನ್ನೂ ಓದಿ: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕ

  • ಪಂಚಭೂತಗಳಲ್ಲಿ ಸರಳತೆಯ ಶತಮಾನದ ಸಂತ ಸಿದ್ದೇಶ್ವರ ಶ್ರೀ ಲೀನ

    ಪಂಚಭೂತಗಳಲ್ಲಿ ಸರಳತೆಯ ಶತಮಾನದ ಸಂತ ಸಿದ್ದೇಶ್ವರ ಶ್ರೀ ಲೀನ

    ವಿಜಯಪುರ: ಶತಮಾನದ ಸರಳ ಸಂತ, ನಡೆದಾಡುವ ದೇವರು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ (Siddeshwar Swamiji) ಅಂತ್ಯಕ್ರಿಯೆ (Funeral) ಸಕಲ ಸರ್ಕಾರಿ ಗೌರವಗಳೊಂದಿಗೆ ಜ್ಞಾನಯೋಗಾಶ್ರಮದ ಆವರಣದಲ್ಲಿ ನೆರವೇರಿಸಲಾಯಿತು.

    ಜ್ಞಾನಯೋಗಾಶ್ರಮದ ಆವರಣದಲ್ಲಿ ಕಟ್ಟೆಯನ್ನು ಕಟ್ಟಿ, ಅದರ ಮೇಲೆ 6 ಅಡಿ ಅಗಲ ಹಾಗೂ 9 ಅಡಿ ಉದ್ದ ಹಾಗೂ ಒಂದುವರೆ ಎತ್ತರದ ಗದ್ದುಗೆಯನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಲದೇ ಶ್ರೀಗಳು ತಮ್ಮ ಇಚ್ಛೆಯಂತೆಯೇ ಅಂತ್ಯಕ್ರಿಯೆ ಆಗಬೇಕು ಎಂದಿರುವ ಹಿನ್ನೆಲೆಯಲ್ಲಿ ಗದ್ದುಗೆ ಮೇಲೆ ಶ್ರೀಗಳಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಸುತ್ತೂರು ಶ್ರೀಗಳು, ಕನ್ನೇರಿ ಶ್ರೀಗಳು ಮತ್ತು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿಗಳು ಸಿದ್ದೇಶ್ವರರ ಅಂತಿಮ ಸಂಕಲ್ಪವನ್ನು ಪೂರೈಸಿದರು. ಈ ಮೊದಲು ಪಾರ್ಥಿವ ಶರೀರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಚಿವರಾದ ಮುರುಗೇಶ್ ನಿರಾಣಿ, ಶ್ರೀರಾಮುಲು, ಶಶಿಕಲಾ ಜೊಲ್ಲೆ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಈ ಮೊದಲು ಸರ್ಕಾರದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್ ಸೆಟ್ ಮೂಲಕ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಲಾಯಿತು. ಆ ಬಳಿಕ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಿಸಿದರು. ಇದನ್ನೂ ಓದಿ: ಸ್ವಾಮೀಜಿ ದರ್ಶನ ಮಾಡೋ ಪುಣ್ಯ ನಾನು ಪಡೆದುಕೊಂಡಿಲ್ಲ ಅನ್ನೋ ನೋವಾಗ್ತಿದೆ: ಜಮೀರ್

    ಸೈನಿಕ ಶಾಲೆ ಆವರಣದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಗೌರವ ವಂದನೆ ಬಳಿಕ ಪಾರ್ಥಿವ ಶರೀರವನ್ನು ಯೋಗಾಶ್ರಮದ ಅಂಗಲದವರೆಗೆ ಸುಮಾರು 5 ಕಿ.ಮೀ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ವೇಳೆ ಭಕ್ತವೃಂದ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಅಂತಿಮ ದರ್ಶನ ಪಡೆದುಕೊಂಡರು. ಯೋಗಾಶ್ರಮದ ಸುತ್ತ ಜನ ಸೇರಿದ್ದರು. ಭಕ್ತರಿಗೆ LED ಮೂಲಕ ಅಂತ್ಯಸಂಸ್ಕಾರ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

    ಬದುಕಿನುದ್ದಕ್ಕೂ ಸರಳವಾಗಿ ಜೀವನ ಸಾಗಿಸಿ, ಸಾರ್ಥಕತೆಯ ಬದುಕು ನಡೆಸಿ ಲಕ್ಷಾಂತರ ಜನರಿಗೆ ಆದರ್ಶವಾಗಿದ್ದ ಶ್ರೀಗಳ ಪಾರ್ಥಿವ ಶರೀರವನ್ನು ವಿಜಯಪುರ ನಗರದ ಸೈನಿಕ ಶಾಲೆಯ ಆವರಣದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಬೆಳಗ್ಗೆಯಿಂದಲೇ ಅವಕಾಶ ಮಾಡಿಕೊಡಲಾಗಿತ್ತು. ಆದ್ರೂ ಕ್ಷಣ ಕ್ಷಣಕ್ಕೂ ಭಕ್ತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿತ್ತು. ಹೀಗಾಗಿ ಸಂಜೆ 5 ಗಂಟೆವರೆಗೆ ಅಂತಿಮ ದರ್ಶನಕ್ಕೆ ವಿಜಯಪುರ ಜಿಲ್ಲಾಡಳಿತ ಸಮಯ ವಿಸ್ತರಿಸಿತ್ತು. ನಡೆದಾಡುವ ದೇವರನ್ನು ನೆನೆದು ಭಕ್ತರ ಕಣ್ಣೀರು, ಗೋಳಾಟ ಮುಗಿಲುಮುಟ್ಟಿತ್ತು. ನಮ್ಮ ದೇವರಿಗೆ ಸಾವಿಲ್ಲ… ಮತ್ತೆ ಹುಟ್ಟಿ ಬನ್ನಿ ಸಿದ್ದಪ್ಪಾಜಿ ಅನ್ನೋ ಘೋಷಣೆಗಳು ಮೊಳಗಿದವು. 20 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಪಡೆದರು. ಬಳಿಕ ಶ್ರೀಗಳ ಇಚ್ಛೆಯಂತೆ ಅವರು ಮಾಡಿದ ವಿಲ್ ಪ್ರಕಾರ ಅಗ್ನಿ ಸ್ಪರ್ಶ ಮಾಡಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದನ್ನೂ ಓದಿ: ಮಣ್ಣಿನಲ್ಲಿ ಮೂಡಿದ ಸರಳತೆಯ ಸಾಕಾರ ಮೂರ್ತಿ

    ಅಂತ್ಯಸಂಸ್ಕಾರದಲ್ಲಿ ಕೇವಲ ಕುಟುಂಬಸ್ಥರು, ಗಣ್ಯರು, ಸ್ವಾಮೀಜಿಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ, ಚಿತ್ರನಟ ಡಾಲಿ ಧನಂಜಯ್, ಸೇರಿದಂತೆ ಅನೇಕ ಮಂದಿ ಅಂತಿಮ ದರ್ಶನ ಪಡೆದರು. ಬಳಿಕ ನಡೆದ ಅಂತ್ಯಸಂಸ್ಕಾರದಲ್ಲಿ ಸಿ.ಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿ.ಎಂ ಯಡಿಯೂರಪ್ಪ,  ಸಚಿವರಾದ ಶ್ರೀರಾಮುಲು, ಮುರುಗೇಶ್‌ ನಿರಾಣಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದರು.

    ಪ್ರವಚನ ಚೇತನರಾಗಿ, ಭಕ್ತರ ಸಿದ್ದಾಪಾಜಿಯಾಗಿ ವಿಜಯಪುರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಪ್ರಸಿದ್ದಿಯಾಗಿದ್ರು. ಇಂತಹ ಸಂತನ ಅಗಲಿಕೆಗೆ ನಾಡಿನ ಜನ ಕಂಬನಿ ಮಿಡಿದಿದ್ದಾರೆ. ಅಂತಿಮ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ಪ್ರವಚನಗಳಿಂದಲೇ ಕೋಟ್ಯಂತರ ಭಕ್ತರ ಬಾಳು ಬೆಳಗಿದ್ದ ಸಿದ್ದಪ್ಪಾಜಿಯ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ಪ್ರವಾಹೋಪಾದಿಯಲ್ಲಿ ಜನ ಬಂದಿದ್ದರು. ಕಣ್ಣು ಹಾಯಿಸಿದ್ದು ಕಿಲೋ ಮೀಟರ್‌ಗಟ್ಟಲೇ ಜನರ ದಂಡೇ ಕಾಣಿಸುತ್ತಿತ್ತು. ಶ್ರೀಗಳ ಪಾರ್ಥಿವ ಶರೀರದ ದರ್ಶನಕ್ಕೆ ಬ್ಯಾರಿಕೇಡ್‍ಗಳನ್ನೇ ಮುರಿದು ಭಕ್ತರು ಒಳನುಗ್ಗಲು ಯತ್ನಿಸಿದ್ರು. ಕೆಲಕಾಲ ತಳ್ಳಾಟ ನೂಕಾಟವೇ ಆಯ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

    ಸಿದ್ದೇಶ್ವರರು ಹೊಂದಿದ್ದ ಜನಪ್ರಿಯತೆಯನ್ನು ಹಿಂದೂ-ಮುಸ್ಲಿಮ್-ಕ್ರಿಶ್ಚಿಯನ್ ಎನ್ನದೇ ಎಲ್ಲಾ ವರ್ಗದ ಜನ ಹೆಣ್ಣು-ಗಂಡೆಂಬ ಬೇಧವಿಲ್ಲದೇ, ವಯಸ್ಸಿನ ಅಂತರವಿಲ್ಲದೇ ಭಕ್ತಜನ ಸ್ವಾಮೀಜಿ ಅಂತಿಮ ದರ್ಶನಕ್ಕೆ ಬಂದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸ್ವಾಮೀಜಿ ದರ್ಶನ ಮಾಡೋ ಪುಣ್ಯ ನಾನು ಪಡೆದುಕೊಂಡಿಲ್ಲ ಅನ್ನೋ ನೋವಾಗ್ತಿದೆ: ಜಮೀರ್

    ಸ್ವಾಮೀಜಿ ದರ್ಶನ ಮಾಡೋ ಪುಣ್ಯ ನಾನು ಪಡೆದುಕೊಂಡಿಲ್ಲ ಅನ್ನೋ ನೋವಾಗ್ತಿದೆ: ಜಮೀರ್

    ಗದಗ: ವಿಜಯಪುರ (Vijayapura) ದ ಸಿದ್ದೇಶ್ವರ ಶ್ರೀಗಳ ದರ್ಶನ ಮಾಡುವ ಪುಣ್ಯ ನಾನು ಪಡೆದುಕೊಂಡಿಲ್ಲ ಅನ್ನುವ ನೋವಾಗುತ್ತಿದೆ ಎಂದು ಶಾಸಕ ಜಮೀರ್ ಅಹ್ಮದ್ (Zameer Ahmed Khan) ಸಂತಾಪ ಸೂಚಿಸಿದ್ದಾರೆ.

    ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆ ಸುದ್ದಿಗಾರರೊಂದಿಗೆ ಮಾತನಾಡಿ, ಗದಗನಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಸ್ವಾಮೀಜಿಗಳನ್ನ ನೋಡಲು ಹರಿದುಬರುತ್ತಿರುವ ಅಷ್ಟು ಜನ ಸಾಗರವನ್ನ ನಾನು ಯಾವತ್ತೂ ನೋಡೇ ಇಲ್ಲ. ನನಗೆ ಸ್ವಾಮೀಜಿಗಳ ಬಗ್ಗೆ ಗೌರವ, ಅಭಿಮಾನವಿದೆ ಎಂದರು.

    ನಾನು ಕೂಡಾ ಸ್ವಾಮೀಜಿ ನೋಡೋಕೆ ಮೊನ್ನೆ ಸಿದ್ದರಾಮಯ್ಯ (Siddaramaiah) ಅವರೊಂದಿಗೆ ಹೋಗಬೇಕಿತ್ತು. ಆದರೆ ಕಾರಣಾಂತರದಿಂದ ಹೋಗೋಕೆ ಆಗಲಿಲ್ಲ. ಅವರ ದರ್ಶನ ಮಾಡೋಕೂ ಪುಣ್ಯ ಮಾಡಿರಬೇಕು. ಆ ಪುಣ್ಯ ನಾನು ಪಡೆದುಕೊಂಡಿಲ್ಲ ಅನ್ನೋ ನೋವು ಆಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಭರದ ಸಿದ್ಧತೆ- ಸಂಜೆ 5 ಗಂಟೆ ವೇಳೆಗೆ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ

    ಮನೆಯಲ್ಲಿ ಯಾರೋ ತೀರಿಕೊಂಡಿರುವ ಹಾಗೆ ಜನ ಕಣ್ಣೀರು ಹಾಕುತ್ತಿದ್ದಾರೆ. ಅವರ ಅನುಯಾಯಿಗಳಿಗೆ ಭಗವಂತ ಸಹಿಸಿಕೊಳ್ಳೋ ಶಕ್ತಿ ಕೊಡಲಿ. ಹಗರಿ ಬೊಮ್ಮನಹಳ್ಳಿಯಲ್ಲೂ ಕಾರ್ಯಕ್ರಮ ಇದೆ. ಸ್ವಾಮೀಜಿಗಳ ಅಂತ್ಯಕ್ರಿಯೆಗೆ ಹೋಗೋ ಪ್ರಯತ್ನ ಮಾಡ್ತೇನೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಮಣ್ಣಿನಲ್ಲಿ ಮೂಡಿದ ಸರಳತೆಯ ಸಾಕಾರ ಮೂರ್ತಿ

    ಮಣ್ಣಿನಲ್ಲಿ ಮೂಡಿದ ಸರಳತೆಯ ಸಾಕಾರ ಮೂರ್ತಿ

    ಧಾರವಾಡ: ಸರಳತೆಯ ಸಾಕಾರ ಮೂರ್ತಿ, ನಡೆದಾಡುವ ದೇವರು, ನಿತ್ಯ ಸಂತ ಎಂದೆಲ್ಲ ಖ್ಯಾತರಾಗಿ ನಾಡಿನ ಜನತೆಗೆ ತಮ್ಮ ಪ್ರವಚನದ ಮೂಲಕವೇ ಹತ್ತಿರವಾಗಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು (Siddeshwar Swamiji) ಪರಮಾತ್ಮನಲ್ಲಿ ಲೀನರಾಗಿದ್ದಾರೆ. ಶ್ರೀಗಳಿಗೆ ಕಲಾವಿದ ಮಂಜುನಾಥ್ ಹಿರೇಮಠ ಅವರು ಕಲಾನಮನ ಸಲ್ಲಿಸಿದ್ದಾರೆ.

    ಸಿದ್ದೇಶ್ವರ ಶ್ರೀಗಳ ನೆನಪಿನಲ್ಲಿ ಧಾರವಾಡದ (Dharawada) ಪರಿಸರ ಸ್ನೇಹಿ ಕಲಾವಿದ ಮಂಜುನಾಥ್ ಹಿರೇಮಠ, 11 ಕೆಜಿ ಜೇಡಿ ಮಣ್ಣಿನಲ್ಲಿ ಎರಡು ಅಡಿ ಎತ್ತರದ ಸಿದ್ದೇಶ್ವರ ಶ್ರೀಗಳ ಕಲಾಕೃತಿಯನ್ನು (Clay) ರಚಿಸಿ ಶ್ರೀಗಳಿಗೆ ಕಲಾನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಭರದ ಸಿದ್ಧತೆ- ಸಂಜೆ 5 ಗಂಟೆ ವೇಳೆಗೆ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ

    ಸೋಮವಾರ ಸಂಜೆ ಶ್ರೀಗಳ ನಿಧನ ಸುದ್ದಿ ತಿಳಿದ ನಂತರ ಕಲಾವಿದ ಮಂಜುನಾಥ್ ಹಿರೇಮಠ ಮಣ್ಣಿನಲ್ಲಿ ಈ ಕಲಾಕೃತಿ ರಚಿಸುವ ಮೂಲಕ ಸರಳತೆಯ ಸಾಕಾರ ಮೂರ್ತಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಥೇಟ್ ಸಿದ್ದೇಶ್ವರ ಶ್ರೀಗಳಂತೆಯೇ ಈ ಮಣ್ಣಿನ ಮೂರ್ತಿಯನ್ನು ಕಲಾವಿದ ಮಂಜುನಾಥ್ ಸಿದ್ಧಪಡಿಸಿದ್ದು ಎಲ್ಲರ ಗಮನಸೆಳೆಯುತ್ತಿದೆ. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ತಂದ ವ್ಯಕ್ತಿ!

    Live Tv
    [brid partner=56869869 player=32851 video=960834 autoplay=true]

  • ಸಿದ್ದೇಶ್ವರ ಸ್ವಾಮಿಗಳ ಅಗಲಿಕೆಗೆ ಸ್ಯಾಂಡಲ್ ವುಡ್ ನಿಂದ ಕಂಬನಿ

    ಸಿದ್ದೇಶ್ವರ ಸ್ವಾಮಿಗಳ ಅಗಲಿಕೆಗೆ ಸ್ಯಾಂಡಲ್ ವುಡ್ ನಿಂದ ಕಂಬನಿ

    ಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ, ವಿಜಯಪುರದ ಜ್ಞಾನಯೋಗಾಶ್ರಮದ ಗುರುಗಳಾದ ಸಿದ್ದೇಶ್ವರ ಸ್ವಾಮಿಗಳ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ಸಾಕಷ್ಟು ಕಲಾವಿದರು, ನಿರ್ದೇಶಕರು ಮತ್ತು ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ. ಅಗಲಿದ ಚೇತನನ ಗುಣಗಾನ ಮಾಡಿದ್ದಾರೆ. ನಾಡಿನ ಏಳಿಗೆಗಾಗಿ ಮಹಾತ್ಮ ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿದ್ದಾರೆ.

    ಸಿದ್ದೇಶ್ವರ ಸ್ವಾಮಿ ಅಗಲಿಕೆಯ ಕುರಿತು ಟ್ವಿಟ್ ಮಾಡಿರುವ ನಟ ಧನಂಜಯ್, ‘ಶತಮಾನದ ಸಂತ, ನಾಡು ಕಂಡ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿರುವುದು ತುಂಬಾ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಜ್ಞಾನದ ಬೆಳಕು ನಮ್ಮನ್ನು ಸದಾ ಕಾಯುತ್ತಿರಲಿ’ ಎಂದು ಬರೆದಿದ್ದಾರೆ.

    ಹಿರಿಯ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಕೂಡ ಕಂಬನಿ ಮಿಡಿದಿದ್ದು, ‘ನಡೆದಾಡುವ ದೇವರು ಎಂದೇ ಭಕ್ತರ ಹೃದಯದಲ್ಲಿ ಉಳಿದಿರುವ, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ ಅಪಾರ ನೋವು ತಂದಿದೆ. ನಿಮ್ಮ ಸಾಮಾಜಿಕ ಸೇವೆ ಯಾವಾಗಲೂ ಹೃದಯದಲ್ಲಿ ಇರತ್ತೆ. ನಿಮಗೆ ಅನಂತ ನೋವಿನ ಅಶ್ರುತರ್ಪಣೆ’ ಎಂದು ಟ್ವಿಟ್ ಮಾಡಿದ್ದಾರೆ.

    ನಿರ್ದೇಶಕ, ನಟ ರಿಷಬ್ ಶೆಟ್ಟಿ ಕೂಡ ಅಗಲಿದ ಸ್ವಾಮೀಜಿಗಳನ್ನು ನೆನಪಿಸಿಕೊಂಡಿದ್ದು, ‘ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ನಿಮ್ಮ ಅಗಲಿಕೆ ಸಹಿಸಲಸಾಧ್ಯ. ನಮಗಾಗಿ ಇನ್ನಷ್ಟು ವರ್ಷ ಬದುಕಬೇಕಿತ್ತು ನೀವು. ನಿಮ್ಮ ಬದುಕೇ ನಮಗೊಂದು ಆದರ್ಶ. ಹೋಗ್ಬನ್ನಿ ಗುರುವರ್ಯರೆ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ನಿರ್ದೇಶಕ ಗುರು ದೇಶಪಾಂಡೆ ಗುರುಗಳ ಲಿಂಗೈಕ್ಯಕ್ಕೆ ಅಂತಿಮ ನಮಗಳನ್ನು ಸಲ್ಲಿಸಿದ್ದು, ‘ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ, ಕಾಯಕಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದುಕೊಂಡಿದ್ದಾರೆ. ಇವರುಗಳ ಜೊತೆಗೆ ಇನ್ನೂ ಅನೇಕ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಸೇರಿದಂತೆ ಅನೇಕರು ಕಂಬಿನಿ ಮಿಡಿದು, ಅಗಲಿದ ದೇವರಿಗೆ ನಮನ ಸಲ್ಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಚೇತರಿಕೆಗಾಗಿ ಹುಕ್ಕೇರಿ ಹಿರೇಮಠದಿಂದ ಮಹಾಮೃತ್ಯುಂಜಯ ಹೋಮ

    ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಚೇತರಿಕೆಗಾಗಿ ಹುಕ್ಕೇರಿ ಹಿರೇಮಠದಿಂದ ಮಹಾಮೃತ್ಯುಂಜಯ ಹೋಮ

    ಚಿಕ್ಕೋಡಿ: ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (Siddeshwar Swamiji) ಅನಾರೋಗ್ಯ ಹಿನ್ನೆಲೆಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ (Health) ಚೇತರಿಕೆಗಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದಲ್ಲಿ (Hukkeri Hiremath) ಮಹಾಮೃತ್ಯುಂಜಯ ಹೋಮ ನಡೆಸಲಾಯಿತು.

    ಹಿರೇಮಠದ ಚಂದ್ರಶೇಖರ್‌ ಶಿವಾಚಾರ್ಯ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಮಹಾಮೃತ್ಯಂಜಯ ಹೋಮದಲ್ಲಿ 20ಕ್ಕೂ ಹೆಚ್ಚು ವೇದು ವಟುಗಳು ಭಾಗಿಯಾಗಿದ್ದರು. ಸಿದ್ದೇಶ್ವರ ಸ್ವಾಮೀಜಿ ಗುಣಮುಖರಾಗಲಿ ಎಂದು ಮಹಾಮೃತ್ಯುಂಜಯ ಜಪ ಪಠಿಸಿ ಹೋಮ ಮಾಡಿ ಪ್ರಾರ್ಥನೆ ಮಡಲಾಯಿತು. ಇದನ್ನೂ ಓದಿ: ಸಿದ್ದೇಶ್ವರ ಸ್ವಾಮೀಜಿ ನನ್ನನ್ನು ಗುರುತು ಹಿಡಿದರು : ಬೊಮ್ಮಾಯಿ

    ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ್‌ ಶಿವಾಚಾರ್ಯ ಮಹಾಸ್ವಾಮೀಜಿ, ಸಿದ್ದೇಶ್ವರ ಶ್ರೀಗಳು ಹುಕ್ಕೇರಿ ಹಿರೇಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ‌ಶ್ರೀಗಳ ಆರೋಗ್ಯ ಚೇತರಿಕೆಯಾಗುತ್ತಿದ್ದು, ಯಾರು ಭಯ ಪಡುವ ಆತಂಕವಿಲ್ಲ. ಸುಳ್ಳು ಸುದ್ದಿಗಳಿಗೆ ಭಕ್ತರು ಕಿವಿಗೊಡೋದು ಬೇಡ. ಶ್ರೀಗಳು ಗುಣಮುಖರಾಗಲಿ. ಎಲ್ಲರೂ ಮನೆಗಳಲ್ಲಿ ಪ್ರಾರ್ಥನೆ ಪೂಜೆ ಮಾಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ- ಭಕ್ತರಿಗೆ ದರ್ಶನ

    Live Tv
    [brid partner=56869869 player=32851 video=960834 autoplay=true]

  • ಸಿದ್ದೇಶ್ವರ ಸ್ವಾಮೀಜಿ ನನ್ನನ್ನು ಗುರುತು ಹಿಡಿದರು : ಬೊಮ್ಮಾಯಿ

    ಸಿದ್ದೇಶ್ವರ ಸ್ವಾಮೀಜಿ ನನ್ನನ್ನು ಗುರುತು ಹಿಡಿದರು : ಬೊಮ್ಮಾಯಿ

    ಬೆಂಗಳೂರು: ಸಿದ್ದೇಶ್ವರ ಸ್ವಾಮೀಜಿಗಳನ್ನು (Siddeshwar Swamiji) ನಿನ್ನೆಯೇ ಅವರನ್ನು ಭೇಟಿ ಮಾಡಿದ್ದೆ, ಅವರು ನನ್ನನ್ನು ಗುರುತು ಹಿಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

    ಸುದ್ದಿಗಾರರೊದಿಗೆ ಮಾತನಾಡಿದ ಅವರು, ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು. ಅವರನ್ನು ನಿನ್ನೆ ಭೇಟಿ ಮಾಡಿದ್ದೇನೆ. ಯಾವುದೇ ಆತಂಕ ಬೇಡ. ಸ್ವಾಮೀಜಿಗಳು ತಮ್ಮ ಅಂತರ್ ಗತ ಶಕ್ತಿಯಿಂದ ಆರೋಗ್ಯ ಸುಧಾರಿಸಿ ಬರಲಿದ್ದಾರೆ ಎಂದು ತಿಳಿಸಿದರು.

    ವೈಕುಂಠ ಏಕಾದಶಿ ನಿಮಿತ್ತ ಟಿಟಿಡಿ ವೆಂಕಟೇಶ್ವರ ದರ್ಶನ ಪಡೆದಿದ್ದು, ಪುನೀತ ಭಾವನೆ ಬಂದಿದೆ. ರಾಜ್ಯದ ಸಮಸ್ತ ಜನತೆಗೆ ಒಳಿತಾಗಲೀ ಎಂದು ಬೇಡಿಕೆ ಇಟ್ಟಿರುವೆ. ರಾಜ್ಯ ಅಭಿವೃದ್ಧಿ ಸಮೃದ್ಧಿ ಕಾಣಲಿ ಎಂದು ಬೇಡಿಕೆ ಇಟ್ಟಿದ್ದೇನೆ. ಚುನಾವಣೆಯ ಬಗ್ಗೆ ನಾನು ದೇವರ ಹತ್ತಿರ ಈ ಥರ ಎಲ್ಲಾ ಬೇಡಿಕೊಳ್ಳುವುದಿಲ್ಲ. ದೇವರಿಗೆ ಗೊತ್ತಿದೆ, ಮತದಾರರೇ ದೇವರು. ನನಗೆ ವಿಶ್ವಾಸ ಇದೆ, ಮತ್ತೊಮ್ಮೆ ಬಿಜೆಪಿ (BJP) ಸರ್ಕಾರ ಬರುತ್ತೆ ಎಂದು ಹೇಳಿದರು. ಇದನ್ನೂ ಓದಿ: ಇಸ್ಕಾನ್‍ನಲ್ಲಿ ಅದ್ಧೂರಿಯ ವೈಕುಂಠ ಏಕಾದಶಿ ಆಚರಣೆ

    ಅರವಿಂದ್ ಲಿಂಬಾವಳಿ ಹೆಸರಿಟ್ಟು ಉದ್ಯಮಿ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಲಿಂಬಾವಳಿ ಹೆಸರು ಬಂದಿಟ್ಟು ಆತ್ಮಹತ್ಯೆ ಮಾಡಿಕೊಂಡ ವಿಚಾರ ಇನ್ನೂ ನನಗೆ ಗೊತ್ತಿಲ್ಲ, ಮಾಹಿತಿ ಪಡೆಯುವೆ. ಕಾನೂನಾತ್ಮಕವಾಗಿ ಏನೆಲ್ಲಾ ನಡೆಯಬೇಕೋ ನಡೆಯಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ ಹಾಜರಾದ 32 ಸಾವಿರ ಜನ – ಪೆನ್ನು, ಪೇಪರ್ ಹಿಡಿದು ಸ್ಟೇಡಿಯಂನಲ್ಲೆ ಕುಳಿತ್ರು

    Live Tv
    [brid partner=56869869 player=32851 video=960834 autoplay=true]